‘ಬಿಗ್‍ಬಾಸ್‍”ನಲ್ಲಿ ಕಿರಿಕ್ ಕೀರ್ತಿಗೆ ವಂಚನೆ…?

ಬಿಗ್ ಬಾಸ್ ಮನೆಯಲ್ಲಿ ಕೀರ್ತಿಗೆ ಮೋಸ? ಈ ಪ್ರಶ್ನೆ ಕರ್ನಾಟಕದ ಲಕ್ಷಾಂತರ ಜನರ ಪ್ರಶ್ನೆಯಾಗಿದೆ.. ನಿನ್ನೆಯಷ್ಟೇ ಮುಕ್ತಾಯವಾದ ಬಿಗ್‍ಬಾಸ್ ಸೀಸನ್ 4ನೇ ಆವೃತ್ತಿಯ ಕಾರ್ಯಕ್ರಮದ ಅಂತಿಮ ಹಣಾಹಣಿಯಲ್ಲಿ  ಪ್ರಥಮ್ ಬಿಗ್‍ಬಾಸ್ ಕೃಪೆಗೆ ಒಳಗಾಗಿದ್ದಾನೆ.. ಆದ್ರೆ ಆತನ ನಡಾವಳಿಗಳು ಮನೆಯ ಉಳಿದ ಸ್ಪರ್ಧಿಗಳಿಗೆ ನುಂಗಲಾರದ ತುತ್ತಾಗಿತ್ತು.. ಎಲ್ಲರೂ ಆತನ ವರ್ತನೆಯ ವಿರುದ್ಧ ಕಿಡಿಕಾರಿದ್ರು.. ಮೋಹನ್, ಮಾಳವಿಕಾ, ರೇಖಾ, ಕೀರ್ತಿಕುಮಾರ್,  ಪ್ರಥಮ್ ಅಂತಿಮ ಘಟ್ಟ ತಲುಪಿದ್ರು..

pratham keerti 1

ಅಂತಿಮ ಹಣಾಹಣಿಯಲ್ಲಿ ನಟ ಮೋಹನ್ ಹಾಗೂ ಮಾಳವಿಕಾ ಮೊದಲಿಗರಾಗಿ ಮನೆಯಿಂದ ಹೊರಬಂದ ಬಳಿಕ ಉಳಿದ ಮೂವರು ಘಟಾನುಘಟಿಯಲ್ಲಿ ಕೀರ್ತಿ ಕುಮಾರ್ ಸೇಫಾಗಿದ್ದಾರೆ ಅಂತಾ ನಟ ಸುದೀಪ್ ಘೋಷಣೆ ಮಾಡಿದ್ರು.. ಬಳಿಕ ಉಳಿದ ಇಬ್ಬರು ಪ್ರಥಮ್ ಹಾಗೂ ರೇಖಾ.. ಈ ಇಬ್ಬರಲ್ಲಿ ನಟಿ ರೇಖಾ ಕೂಡ ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದ್ರು.. ಉಳಿದ ಇಬ್ಬರಲ್ಲಿ ಪ್ರಥಮ್ ಗೆಲುವು ಸಾಧಿಸಿದ್ರೆ, ಕೀರ್ತಿ ಕುಮಾರ್ ರನ್ನರ್ ಅಪ್ ಆದ್ರು..

ಆದ್ರೆ ಬಿಗ್‍ಬಾಸ್‍ನ ಎಲ್ಲಾ ಸ್ಪರ್ಧಿಗಳು ಕೀರ್ತಿಕುಮಾರ್ ಗೆಲ್ಲಲು ಅರ್ಹರು ಅಂತಾ ಹೇಳಿದ್ರು.. ಆದ್ರೆ ಮನೆಯಿಂದ ಹೊರಗಡೆ ಕರೆದುಕೊಂಡು ಬಂದ ಸುದೀಪ್, ಪ್ರಥಮ್ ವಿನ್ನರ್ ಅಂತಾ ಘೋಷಣೆ ಮಾಡಿದ್ರು.. ಎಲ್ಲರ ಮುಖಗಳು ಬಾಡಿದ್ರೆ, ಗೆಲುವಿನ ಮಂದಹಾಸ ಬೀರಿದ ಪ್ರಥಮ್ ಬಟ್ಟೆ ಬಿಚ್ಚಿ ಕುಣಿದು ಕುಪ್ಪಳಿಸುವ ಮೂಲಕ ವೇದಿಕೆ ಮೇಲೂ ತನ್ನ ಹುಚ್ಚಾಟ ಪ್ರದರ್ಶನ ಮಾಡಿದ್ದನ್ನು ನೋಡಿದ ಸುದೀಪ್, ಹೇ.. ಹೇ.. ಅಂತಾ ಕೂಗಿದ್ರು.. ಬಟ್ಟೆ ಬಿಚ್ಚಿ ಎಸೆದ ಪ್ರಥಮ್, ಕೊನೆಗೆ ಬೆಳಕಿನಲ್ಲಿ ಬಟ್ಟೆ ಸಿಗದೆ ಹುಡುಕಾಟ ನಡೆಸಿದ್ದು ಹಾಸ್ಯಕ್ಕೆ ಒಳಗಾಯ್ತು..

big boss finale 1

ಆದ್ರೆ ಬಿಗ್‍ಬಾಸ್ ವಿನ್ನರ್ ಆಗಿ ಪ್ರಥಮ್ ಆಯ್ಕೆಯಾಗಿದ್ದು ಸರಿಯಾಗಿಲ್ಲ ಅನ್ನೋದು ಸುದೀಪ್ ಅವರ ಮಾತಲ್ಲೇ ಸ್ಪಷ್ಟವಾಗಿತ್ತು.. ಯಾಕಂದ್ರೆ ನಿಮಗೆ ಗೆಲುವು ಸಿಗಬೇಕಿತ್ತು.. ಆದ್ರೆ ನೀವೂ ಕೂಡ ಗೆದ್ದಿದ್ದೀರಿ.. ನಿಮಗೆ ಹಣ ಸಿಗದೆ ಇರಬಹುದು ಆದ್ರೆ ನಾನು ನನ್ನ ಸ್ವಂತ ಹಣದಿಂದ ನಿಮಗೆ 10 ಲಕ್ಷ ರೂಪಾಯಿಯನ್ನು ಕೊಡುತ್ತೇನೆ ಅಂತಾ ಘೋಷಣೆ ಮಾಡಿದ್ರು.. ಸುದೀಪ್ ಅವರ ನಿರ್ಧಾರ ಮೆಚ್ಚುಗೆಗೆ ಪಾತ್ರವಾಯ್ತು..

ಆದ್ರೆ ಬಿಗ್‍ಬಾಸ್ ಗೆಲುವಿಗೆ ಅರ್ಹ ವ್ಯಕ್ತಿತ್ವ ಹೊಂದಿದ್ದ ಕೀರ್ತಿ ಕುಮಾರ್‍ಗೆ ವಂಚಿಸಿ, ಪ್ರಥಮ್‍ರನ್ನ ಆಯ್ಕೆ ಮಾಡಿದ್ದಾರೆ ಅನ್ನೋ ಕೂಗು ಕೇಳಿ ಬಂದಿದೆ.. ಇದಕ್ಕೆ ಕಾರಣ ಅಂದ್ರೆ ಹಣ.. ಮೂಲಗಳ ಪ್ರಕಾರ ಬಿಗ್‍ಬಾಸ್‍ನ ಎಲ್ಲಾ ಸ್ಪರ್ಧಿಗಳಿಗೂ ವಾರಕ್ಕೆ ಇಂತಿಷ್ಟು ಹಣ ಎಂದು ವಂತಿಗೆ ನಿಗದಿ ಮಾಡಲಾಗಿತ್ತು.. ಆದ್ರೆ ಪ್ರಥಮ್‍ಗೆ ಮಾತ್ರ ಯಾವುದೇ ಹಣ ನಿಗದಿ ಮಾಡಿರಲಿಲ್ಲ.. ನನ್ನನ್ನು ಬಿಗ್‍ಬಾಸ್ ಮನೆಯೊಳಗೆ ಕಳುಹಿಸಿ ಯಾವುದೇ ಹಣ ಬೇಕಿಲ್ಲ ಅಂತಾ ಪ್ರಥಮ್ ಪಟ್ಟು ಹಿಡಿದಿದ್ರಂತೆ.. ಹೀಗಾಗಿ ಯಾವುದೇ ಹಣ ನೀಡುವ ಬಗ್ಗೆ ಒಪ್ಪಂದ ಮಾಡಿಕೊಂಡಿರಲಿಲ್ಲ..

pratham lordಪ್ರಥಮ್‍ನ ತರಲೇ ಆಟಗಳ ಯಾವಾಗ ಜನರನ್ನು ಹುಚ್ಚೆಬ್ಬಿಲು ಶುರುವಾಯ್ತೋ ಆಗ ಕೊನೆಯವರೆಗೂ ಟಿಆರ್‍ಪಿಗಾಗಿ ಪ್ರಥಮ್‍ನನ್ನು ಉಳಿಸಿಕೊಳ್ಳಲಾಗ್ತಿತ್ತು.. ಹೀಗಾಗಿ ಕೊನೆಯವರೆಗೂ ಉಳಿಸಿಕೊಂಡ ಕಾರಣಕ್ಕಾದರೂ ಇಂತಿಷ್ಟು ಹಣವನ್ನು ಪ್ರಥಮ್‍ಗೆ ನೀಡುವ ಅನಿವಾರ್ಯತೆ ಉಂಟಾಯ್ತು.. ಪ್ರಥಮ್‍ನನ್ನು ರನ್ನರ್ ಅಪ್ ಮಾಡಿ ಕೀರ್ತಿಕುಮಾರ್‍ಗೆ ಗೆಲುವು ನೀಡಿದ್ರೆ, ಕೀರ್ತಿಕುಮಾರ್‍ಗೆ 50 ಲಕ್ಷ ಬಹುಮಾನದ ಹಣದ ಜೊತೆಗೆ ನಿಗದಿಯಾಗಿದ್ದ ಗೌರವ ಧನ ಕೊಡಬೇಕಾಗಿತ್ತು.. ಜೊತೆಗೆ ಪ್ರಥಮ್‍ಗೂ ಇಂತಿಷ್ಟು ಹಣ ಎಂದಾದರೂ ಪೇಮೆಂಟ್ ಮಾಡಬೇಕಿತ್ತು.. ಇದು ಕಂಪನಿ ಮೇಲೆ ಹೆಚ್ಚುವರಿ ಒತ್ತಡ ತರುವ ಹಿನ್ನೆಲೆಯಲ್ಲಿ ಕೀರ್ತಿಯನ್ನು ಸೋಲಿಸಿ, ಪ್ರಥಮ್‍ನನ್ನು ಗೆಲ್ಲಿಸಿದ್ರು ಅನ್ನೋ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ..

ಅದೇನೇ ಇರಲಿ, ವಾರದಲ್ಲಿ ಒಂದೆರಡು ಬಾರಿ ಪ್ರಥಮ್‍ನ ತರಲೇ ಮಾತು, ಅಹಂಕಾರದ ವರ್ತನೆಯನ್ನು ನೋಡಿ ಮಜಾ ತೆಗೆದುಕೊಂಡ ಫೇಸ್‍ಬುಕ್ ನ  ಬಹುತೇಕ ಮಂದಿ ಪ್ರಥಮ್‍ನನ್ನು ಬೆಂಬಲಿಸಿದ್ದು ನಿಜ.. ಆದ್ರೆ ಗ್ರಾಮೀಣ ಭಾಗದಲ್ಲಿ ಅದರಲ್ಲೂ ಹಳ್ಳಿಯ ಗಲ್ಲಿ ಗಲ್ಲಿಗಳಲ್ಲಿ ಜನ ಕೀರ್ತಿ ಅಥವಾ ರೇಖಾ ಗೆಲ್ಲಬೇಕಿತ್ತು ಅನ್ನೋ ಮಾತು ಕೇಳಿ ಬರುತ್ತಿದೆ.. ಅದು ನಿಜಾ ಕೂಡ..

ಸರ್ವಸಮರ್ಥ, ನಾಗಮಂಗಲ

-Ad-

Leave Your Comments