ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಹುಡುಗಿ ಹಲ್ಲೆ..!

ಬಿಗ್ ಬಾಸ್ ಮನೆಯಲ್ಲಿ ಒಂದು ರೂಲ್ಸ್ ಇದೆ. ಯಾವುದೇ ಕಾರಣಕ್ಕೂ ಸಹಸ್ಪರ್ಧಿ ಮೇಲೆ ದೈಹಿಕವಾಗಿ ಹಲ್ಲೆ ಮಾಡುವಂತಿಲ್ಲ. ಆದ್ರೆ ಈ ಬಾರಿ ಕಿರಿಕ್ ಪಾರ್ಟಿ ಹೆಣ್ಣು ಸಂಯುಕ್ತ ಹೆಗ್ಡೆ, ಜ್ಯೋತಿಷಿ ಸಮೀರ್ ಆಚಾರ್ಯ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ಬಳಿಕ ಬಿಗ್ ಬಾಸ್ ಕೂಡ ಕ್ರಮ ಕೈಗೊಳ್ಳಲು ಗೊಂದಲಕ್ಕೆ ಈಡಾಗಿದ್ದು ತಾಳ್ಮೆಯಿಂದ ಇಬ್ಬರನ್ನೂ ಕರೆದು ಮಾತನಾಡಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಿದ್ರು..ಆದರೆ ಸಮಸ್ಯೆಯ ತೀವ್ರತೆ ಅರಿತು ಕ್ರಮಕ್ಕೆ ಮುಂದಾಗಬೇಕಾಯ್ತು.

ಇದೇ ಮೊದಲ ಬಿಗ್ ಬಾಸ್ ನಲ್ಲಿ ಹಲ್ಲೆ ಆಗಿದ್ದು..?

ಇದೇ ಮೊದಲೇನಲ್ಲ. ಕನ್ನಡ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹುಚ್ಚ ವೆಂಕಟ್ ಗಾಯಕ ರವಿ ಮುರೂರು ಮೇಲೆ ಹಲ್ಲೆ ಮಾಡಿದ್ರು, ಅದೇ ಕಾರಣಕ್ಕೆ ಬಿಗ್ ಬಾಸ್ ಮನೆಯಿಂದ ಹೊರದಬ್ಬಲ್ಪಟ್ಟಿದ್ರು. ಇದೀಗ ಮತ್ತೊಂದು ಘಟನೆ ನಡೆದಿದ್ದು, ಕಿರಿಕ್ ರಾಣಿ ಸಂಯುಕ್ತ ಹೆಗ್ಡೆ ಸಮೀರ್ ಆಚಾರ್ಯ ಅವರ ಮೇಲೆ ಹಲ್ಲೆ ಮಾಡುವ ಮೂಲಕ ತಾವು ಏನು ಅನ್ನೋದನ್ನು ತೋರಿಸಿದ್ದಾರೆ. ಟಾಸ್ಕ್ ನಲ್ಲಿ ಆಟವಾಡುವಾಗ ಯಾರೋ ಕಚಗುಳಿ ಕೊಟ್ರು ಅನ್ನೋ ಕಾರಣಕ್ಕೆ ಕೆಂಡಾಮಂಡಲರಾದ ನಟಿಮಣಿ, ಸಮೀರ್ ಮೇಲೆ ಮನಸೋಇಚ್ಛೆ ಬಾರಿಸಿದ್ರು. ಮುಗ್ದನಂತೆ ಆಟವಾಡುವ ಸಮೀರ್ ಆಚಾರ್ಯ, ಇಂಗು ತಿಂದ ಮಂಗನಂತೆ ಏಟು ತಿಂದು ಕಣ್ಣು ಕೆಂಪೇರಿಸಿಕೊಂಡು ನಿಂತಿದ್ರು.

ಕಾಲೇಜು ಕುಮಾರನಿಗೂ ಕಿರಿಕ್ ರಾಣಿ ಕಿರಿಕಿರಿ.. ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾದ ಕಾಲೇಜು ಕುಮಾರ ಚಿತ್ರದಲ್ಲಿ ಇದೇ ಸಂಯುಕ್ತ ಹೆಗ್ಡೆ ಆಕ್ಟ್ ಮಾಡಿದರು. ಆದರೆ ಚಿತ್ರ ಬಿಡುಗಡೆ ವೇಳೆ ನಿರ್ಮಾಪಕರು ಕರೆದಾಗ ಪ್ರಚಾರಕ್ಕೆ ಬಾರದೆ ಕಿರಿಕಿರಿ ಮಾಡಿದ್ದರು. ಅದೇ ವಿಚಾರವನ್ನು ನಿರ್ಮಾಪಕ ಸುದ್ದಿಗೋಷ್ಟಿ ಕರೆದು ಕಿರಿಕ್ ಹುಡುಗಿಯ ರಂಪಾಟದ ಬಗ್ಗೆ ಹೇಳಿಕೊಂಡಿದ್ರು. ಇದೀಗ ಮತ್ತೊಮ್ಮೆ ರಂಪಾಟ ಮಾಡಿರುವ ಕಿರಿಕ್ ಹುಡುಗಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿರದೆ ಅತಿಥಿಯಾಗಿ ಮನೆಯೊಳಕ್ಕೆ ಹೋಗಿದ್ದ ಸಂಯುಕ್ತ ಹೆಗ್ಡೆ, ಕೋಪದ ಕೈಗೆ ಬುದ್ಧಿ ಕೊಟ್ಟು ಮೂರ್ಖಳಾಗಿದ್ದಾಳೆ. ಇನ್ನಾದರೂ ಜೀವನದಲ್ಲಿ ಇದನ್ನು ಪಾಠ ಎಂದುಕೊಂಡು ತಾಳ್ಮೆಯನ್ನು ಮೈಗೂಡಿಸಿಕೊಂಡು ಬದುಕಬೇಕಿದೆ. ಮುಂದಿನವಾರ ಸುದೀಪ್ ಏನ್ಮಾಡ್ತಾರೆ ಅನ್ನೋದು ಕುತೂಹಲಕಾರಿ ಆಗಿದೆ.

ಜ್ಯೋತಿ ಗೌಡ, ನಾಗಮಂಗಲ

-Ad-

Leave Your Comments