ಮುಗ್ದತೆಯ ರಸದೌತಣಕ್ಕೆ ಸಜ್ಜಾಗಿದೆ ಬಿಗ್ ಬಾಸ್ !

ಅಕ್ಟೋಬರ್ 15ರಿಂದ ಕನ್ನಡದ ಬಿಗ್‌ ಬಾಸ್‌ 5ನೇ ಆವೃತ್ತಿ ಪ್ರಾರಂಭವಾಗಿದ್ದು, ಈ ಬಾರಿ 11 ಸೆಲೆಬ್ರಿಟಿಗಳು ಹಾಗೂ 6 ಮಂದಿ ಜನಸಾಮಾನ್ಯರು ಸೇರಿ ಒಟ್ಟು 17 ಜನರು ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಪಡೆದಿದ್ದಾರೆ. ಈ ಬಾರಿ ಸೆಲೆಬ್ರೆಟಿಗಳಿಗಿಂದ ಶ್ರೀ ಸಾಮಾನ್ಯರು ಹೆಚ್ಚು ಗಮನಸೆಳೆಯುವ ಲಕ್ಷಣಗಳು ಕಾಣಿಸುತ್ತಿವೆ.
ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಪಡೆದವರು ಯಾರ‌್ಯಾರು ಅಂತಾ ನೋಡೋದಾದ್ರೆ, ಸಂಖ್ಯಾ ಶಾಸ್ತ್ರಜ್ಞ ಜಯ ಶ್ರೀನಿವಾಸನ್‌, ಕಾಮನ್ ಪೀಪಲ್ ಮೇಘಾ, ನಿರ್ದೇಶಕ ದಯಾಳ್ ಪದ್ಮನಾಭ, ಹಿರಿಯ ನಟ ಸಿಹಿ ಕಹಿ ಚಂದ್ರು , ಕಾಮನ್ ಪೀಪಲ್ ಶ್ರುತಿ, ನಟಿ ಅನುಪಮಾ ಗೌಡ, ಕಾಮನ್ ಪೀಪಲ್ ರಿಯಾಜ್‌ ಭಾಷಾ, ಕಾಮನ್ ಪೀಪಲ್ ನಿವೇದಿತಾ ಗೌಡ, ಜ್ಯೋತಿಷಿ ಸಮೀರ್ ಆಚಾರ್ಯ, ನಟ ಕಾರ್ತಿಕ್ ಜಯರಾಮ್‌, ಕಾಮನ್ ಪೀಪಲ್ ಆಶಿತಾ ಚಂದ್ರಪ್ಪ, ಸೆಲ್ಸ್‌ಮನ್‌
ದಿವಾಕರ್, ನಟಿ ತೇಜಸ್ವಿನಿ ಪ್ರಕಾಶ್‌, ಸಿಂಗರ್ ಚಂದನ್‌ ಶೆಟ್ಟಿ,  ಮ್ಯಾಜಿಸಿಯನ್‌  ಸುಮಾ, ನಟ
 ಜಗನ್‌ ಗೃಹ ಪ್ರವೇಶ ಮಾಡಿ ಆಗಿದೆ.. ಬಿಗ್ ಬಾಸ್ ಹೋಸ್ಟರ್ ಕಿಚ್ಚ ಸುದೀಪ್‌ ಎಲ್ಲ ಸ್ಪರ್ಧಿಗಳಿಗೆ ಶುಭ ಕೋರಿ ಬೀಳ್ಕೊಟ್ಟಿದ್ದಾರೆ.
ಕಲರ್ಸ್‌ ಸೂಪರ್‌ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 8 ಗಂಟೆಗೆ ಬಿಗ್‌ ಬಾಸ್‌ ಕಾರ್ಯಕ್ರಮ ಪ್ರಸಾರವಾಗಲಿದೆ. ಒಂದು ದಿನದಲ್ಲಿ ಬಿಗ್ ಬಾಸ್ ಮನೆಯಲ್ಲಿ ನಡೆ ಅತಿ ರಂಜಿತ ಸಂದರ್ಭಗಳನ್ನು ಸೆರೆ ಹಿಡಿದು ಒಂದು ಗಂಟೆಯಲ್ಲಿ ತೋರಿಸಲಾಗುತ್ತೆ. ಆದ್ರೆ ಕಳೆದ ನಾಲ್ಕು ಸೀಸನ್ ಗೆ ಹೋಲಿಸಿ ನೋಡಿದ್ರೆ ಈಗಾಗಲೇ ತುಂಬಾ ಖ್ಯಾತಿ ಪಡೆದಿರುವ ಸ್ಟಾರ್ ಗಳ ಸಂಖ್ಯೆ ಕಡಿಮೆ ಇದೆ. ಅದಕ್ಕೆ ಕಾರಣ ಲಾಸ್ಟ್ ಸೀಸನ್ ಟಿ ಆರ್ ಪಿ, ಹಾಗೂ ಜನಮನ್ನಣೆ.
ಕಳೆದ ಸೀಸನ್ ಬಿಗ್ ಬಾಸ್ ಪ್ರೋಗ್ರಾಂ ಎಫೆಕ್ಟ್ !!
ಕಳೆದ ಸೀಸನ್ ಬಿಗ್ ಬಾಸ್ ನಲ್ಲಿ ಸಾಕಷ್ಟು ಸ್ಟಾರ್ ಕಾಸ್ಟ್ ಇತ್ತು. ಆದ್ರೆ ಜನಮನ್ನಣೆ ಗಳಿಸಿದ್ದು ಓರ್ವ ಅನ್ ನೋನ್  ಪರ್ಸನ್ ಪ್ರಥಮ್, ಬಿಗ್ ಬಾಸ್ ಗೆ ಬರುವ ಮುಂಚೆ ಇದೇ ಪ್ರಥಮ್ ಬೀದಿಯಲ್ಲಿ ಸಿಕ್ಕರೆ ಯಾರೂ   ಪತ್ತೆ   ಮಾಡುತ್ತಿರಲಿಲ್ಲ.ಆದ್ರೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪ್ರಥಮ್ ಇಲ್ಲದಿದ್ರೆ ಊಹಿಸಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಆತ ಜನಪ್ರಿಯತೆ ಸಂಪಾದಿಸಿದ. ಅವನಲ್ಲಿ ಜನರು ಇಷ್ಟಪಟ್ಟಿದ್ದು ನೇರನುಡಿ, ನಿಷ್ಟೂರತೆ, ಮುಗ್ದತೆ.
ಮುಗ್ದತೆಯೇ ಈ ಸೀಸನ್ ನ ಬಂಡವಾಳ..!
ಹೌದು, ಈ ಮಾತನ್ನು ಎಲ್ಲರೂ ಒಪ್ಪಲೇ ಬೇಕು. ಯಾಕಂದ್ರೆ ಕಳೆದ ಬಾರಿ ಓರ್ವ ಅನಾಮಿಕ ಪ್ರಥಮ್ ಜನಮೆಚ್ಚುಗೆ ಗಳಿಸಿದ ಬಳಿಕ, ಸಾಕಷ್ಟು ಅಳೆದು ತೂಗಿ ಕಾಮನ್ ಪೀಪಲ್ ಆಯ್ಕೆ ಮಾಡಿದ್ದಾರೆ. ಸಿನಿಮಾ ಮಂದಿಗಳಿಗೆ ಡ್ರಾಮಾ ಮಾಡಿ ಗೊತ್ತಿರುತ್ತೆ, ಆದ್ರೆ ಸಾಮಾನ್ಯ ಜನರು ಅನ್ನಿಸಿದನ್ನು ನೇರವಾಗಿ  ಕಡ್ಡಿ ಮುರಿದ ಹಾಗೆ ಹೇಳ್ತಾರೆ, ಆ ಮಾತುಗಳು ಜನರನ್ನು ಭಾವನಾತ್ಮಕವಾಗಿ ಸೆಳೆಯುತ್ತದೆ ಅನ್ನೋದು ಸೂಪರ್ ಕಲರ್ಸ್ ಲೆಕ್ಕಾಚಾರ. ಅದು ಸತ್ಯ ಕೂಡ ಹೌದು. ಜನ ಯಾವಾಗಲು ಸಿನಿಮಾ ಸ್ಟಾರ್ ಗಳನ್ನು ಇಷ್ಟ ಪಡೋದಿಲ್ಲ. ರಿಯಾಲಿಟಿ ಶೋ ನಲ್ಲಿ ರಿಯಾಲಿಟಿಯನ್ನೇ ಬಯಸ್ತಾರೆ. ಈ ಬಾರಿ ಕಳೆದ ಬಾರಿಗಿಂತ ಹೆಚ್ಚು ಮನರಂಜನೆ ಸಿಗೋದು ಪಕ್ಕಾ..
-ಜ್ಯೋತಿ ಗೌಡ, ನಾಗಮಂಗಲ
-Ad-

Leave Your Comments