ಬಾಲಿವುಡ್ ನಟ ಇಂದರ್ ಕುಮಾರ್ ನಿಧನ, ಇಂದು ಸಂಜೆ ಅಂತ್ಯ ಸಂಸ್ಕಾರ

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಸೂಪರ್ ಹಿಟ್ ಚಿತ್ರ ವಾಂಟೆಡ್ ನಲ್ಲಿ ಅಭಿನಯಿಸಿದ್ದ ನಟ ಇಂದರ್ ಕುಮಾರ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

44 ವರ್ಷದ ಇಂದರ್ ಕುಮಾರ್ 20ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದರು. ನಟ ಸಲ್ಮಾನ್ ಖಾನ್ ಅವರ ಜತೆಯಲ್ಲೇ ತುಮ್ ಕೋ ನಾ ಭೂಲ್ ಪಾಯೆಂಗೇ, ವಾಂಟೆಡ್, ಕಹಿ ಪ್ಯಾರ್ ನ ಹೋ ಜಾಯೇ ಚಿತ್ರಗಳಲ್ಲಿ ನಟಿಸಿದ್ದರು. ಇನ್ನು ಫಟಿ ಪಡಿ ಹೈ ಯಾರ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದರು ಇಂದರ್ ಕುಮಾರ್. 1996ರಲ್ಲಿ ತೆರೆಕಂಡ ಮಾಸೂಮ್ ಚಿತ್ರದಿಂದ ಬಾಲಿವುಡ್ ಚಿತ್ರರಂಗಕ್ಕೆ ಪ್ರವೇಶಿಸಿದ ಇಂದರ್ ಕುಮಾರ್ ಅವರಿಗೆ 2017ರಲ್ಲಿ ತೆರೆಕಂಡ ಹೂ ಇಸ್ ದಿ ಫಸ್ಟ್ ವೈಫ್ ಆಫ್ ಮೈ ಫಾದರ್ ಕೊನೆಯ ಚಿತ್ರವಾಗಿ ಉಳಿಯಿತು. ಇವರ ಅಂತ್ಯಸಂಸ್ಕಾರ ಸಂಜೆ ನಾಲ್ಕು ಗಂಟೆಗೆ ನಡೆಯಲಿದೆ.

-Ad-

Leave Your Comments