ಸಿಎಂ ಮೇಲೆ ಬುಲೆಟ್ ಬಾಣ !?

ಬುಲೆಟ್ ಪ್ರಕಾಶ್ ಸ್ಲಿಮ್ ಆದ್ಮೇಲೆ ಗರಂ ಆಗಿದ್ದಾರೆ‌. ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟರಾಗಿರುವ ಬುಲೆಟ್ಟು, ಸಿಎಂ ಸಿದ್ದರಾಮಯ್ಯ ಮಾಂಸಹಾರ ಸೇವಿಸಿ ಧರ್ಮಸ್ಥಳಕ್ಕೆ ಹೋಗಿದ್ದಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮುಂದಿನ ಚುನಾವಣೆಯಲ್ಲಿ ಕಳ್ಳರ ಸಂತೆ ಕಾಂಗ್ರೆಸ್ ಸೋತು, ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬರಲಿದೆ ಅಂತ ಆಶಾವಾದ ವ್ಯಕ್ತಪಡಿಸಿದ್ದಾರೆ.
ಸಿಎಂ ಸಮರ್ಥನೆಗೆ ಬುಲೆಟ್ ಗುಂಡು
ಧರ್ಮಸ್ಥಳಕ್ಕೆ ಮೀನೂಟ ಮಾಡಿದ ಬಳಿಕ ಹೋಗಿದ್ದ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಂಡಿದ್ದರು. ಪುರಾಣದಲ್ಲಿ  ಬೇಡರ ಕಣ್ಣಪ್ಪ ಜಿಂಕೆ ಮಾಂಸವನ್ನು ನೈವೇದ್ಯಕ್ಕೆ ಇಟ್ಟಿರಲಿಲ್ಲವೇ ಅಂತ ಪ್ರಶ್ನೆ ಮಾಡಿದ್ರು.. ಅದಕ್ಕೆ ಟಾಂಗ್ ಕೊಟ್ಟಿರೋ ಬುಲೆಟ್ ಪ್ರಕಾಶ್ ಬೇಡರ ಕಣ್ಣಪ್ಪ  ಕಣ್ಣನ್ನು ಕಿತ್ತು ಶಿವನಿಗೆ ಕೊಟ್ಟಿದ್ದ, ನೀವು ಕಣ್ಣನ್ನು ಕೊಡಿ ಒಪ್ಪಿಕೊಳ್ತೇನೆ ಅಂತ ಕಿಚಾಯಿಸಿದ್ದಾರೆ.
ಏನೇಳಿದ್ದಾರೆ ಈ ವೀಡಿಯೋ ನೋಡಿ..
-Ad-

Leave Your Comments