ನಾಳೆ ಬಾಂಬ್ ಹಾಕ್ತಾರಂತೆ ಬುಲೆಟ್ ಪ್ರಕಾಶ್ !!

ಕನ್ನಡ ಚಿತ್ರರಂಗದ ಮನಸ್ತಾಪ, ಗುಂಪುಗಾರಿಕೆ, ಭಿನ್ನಾಭಿಪ್ರಾಯಕ್ಕೆ ಯಾರು ಕಾರಣ ಎನ್ನುವುದನ್ನು ನಾನು ಬುಧವಾರ ತಿಳಿಸುತ್ತೇನೆ ಎಂದಿದ್ದಾರೆ  ನಟ ಬುಲೆಟ್ ಪ್ರಕಾಶ್.

ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ  ನೀಡಿರುವ ಬುಲೆಟ್  “ಡಾ ರಾಜ್ ಕಟ್ಟಿದ್ದ ಕನ್ನಡ ಚಿತ್ರರಂಗ ಚೆನ್ನಾಗಿತ್ತು. ಆದರೆ ಆ ವ್ಯಕ್ತಿಯ ಸ್ವಾರ್ಥದಿಂದಾಗಿ ಕನ್ನಡ ಚಿತ್ರರಂಗ ಈಗ ಹಾಳಾಗಿದೆ. ಹೀಗಾಗಿ ಆ ವ್ಯಕ್ತಿಯ ವಿರುದ್ಧ ನಾನು ಬೆಳಗ್ಗೆ ಸಂಪೂರ್ಣವಾಗಿ ತಿಳಿಸುತ್ತೇನೆ .

ನಾನು ಸತ್ಯವನ್ನೇ ಹೇಳುತ್ತೇನೆ. ಎಲ್ಲರೂ ಮೆಚ್ಚಿಕೊಳ್ಳುವಂತಹ ನಟನ ಬಗ್ಗೆ ನಾನು ನಾಳೆ ಹೇಳುತ್ತೇನೆ. ಆ ವ್ಯಕ್ತಿ ದರ್ಶನ್ ಅವರನ್ನು ಹಾಳು ಮಾಡಿದ್ದಾನೆ. ಚೆನ್ನಾಗಿ ಇದ್ದ ಚಿತ್ರರಂಗದಲ್ಲಿ ಸುಂಟರಗಾಳಿ ಏಳಲು ಆ ವ್ಯಕ್ತಿಯೇ ಕಾರಣ. ಆ ವ್ಯಕ್ತಿಯಿಂದಲೇ ಗುಂಪುಗಾರಿಕೆ ಆರಂಭವಾಗಿದೆ”

ಇದಕ್ಕೂ ಮುನ್ನ ಟ್ವಿಟ್ಟರ್‍ನಲ್ಲಿ ದೊಡ್ಡ ನಟನ ಸಣ್ಣತನ ನಿಮಗೆ ಪರಿಚಯ ಮಾಡಿಸುತ್ತೇನೆ. ದೀಪ ಇರುವ ಮೊದಲು ಜೋರಾಗಿ ಉರಿಯುತ್ತದೆ ಅಂತ ಬುಲೆಟ್ ಪ್ರಕಾಶ್   ಟ್ವೀಟ್ ಮಾಡಿದ್ದಾರೆ.

ನಾಳೆ ತಲೆಯಲ್ಲಿ ಎಕೆ -47 ಇಟ್ಕೊಂಡು ಬಾಯಲ್ಲಿ ಬುಲೆಟ್ ಹಾರಿಸ್ತಾರೋ ಅಥವಾ ಏಕ್ದಂ ಬಾಂಬ್ ಹಾಕ್ತಾರೋ ನೋಡ್ಬೇಕು.

 

-Ad-

Leave Your Comments