ಬುಲೆಟ್ ಪ್ರಕಾಶ್ ಬಿಟ್ಟ ಆಲೂಗೆಡ್ಡೆ ಬಾಂಬ್ !!

ಬುಲೆಟ್ ಪ್ರಕಾಶ್ ನಿನ್ನೆ ವೀರ ಅಭಿಮನ್ಯುವಿನ ಹಾಗೆ ಪೌರುಷದ ಮಾತಾಡಿ ಇವತ್ತು ಉತ್ತರ ಕುಮಾರನಂತಾಗಿದ್ದಾರೆ. ಚಿತ್ರರಂಗದಲ್ಲಿ ಕುಯುಕ್ತಿ ಮಾಡ್ತಿರೋ ಯಾರೋ  ದೊಡ್ಡ ನಟನ ಬಗ್ಗೆ ಹೇಳ್ತೀನಿ ಅಂತ ಸಾಮಾಜಿಕ ಜಾಲತಾಣದಲ್ಲಿ ಹೇಳಿದವರು ಬೆಳಿಗ್ಗೆ ಎದ್ದು ಆಡೋದೆಲ್ಲಾ ಆಡಿ ಅಯ್ಯೋ ಮನೆ ಮರ್ಯಾದೆ ಪ್ರಶ್ನೆನಪ್ಪ ಅಂತ ಸೆರಗು  ಹೊದ್ದುಕೊಳ್ಳೋ ಗರತಿಯ ಹಾಗೆ ಆಡಿದ್ದಾರೆ.ಇದೆಲ್ಲ ನೋಡಿದ ಮೇಲೆ  ಗಡದ್ದಾಗಿ ಆಲೂಗೆಡ್ಡೆ ತಿಂದು ಬೆಳಿಗ್ಗೆ ಬುಲೆಟ್ ಪ್ರಕಾಶ್  ಹೂಸ್ ಬಿಟ್ರೆ ಅದೇ ದೊಡ್ಡ ಬಾಂಬ್ ! ಎನ್ನುವಂತಾಗಿದೆ.

ನಾನ್ಯಾರಿಗೂ ಹೆದರೋಲ್ಲಪ್ಪ (ಕೇಳಿದವರು ಯಾರೀಗ ?)

“ಯಾರಿಗೂ ಹೆದರೋ ಅವಶ್ಯಕತೆ ಇಲ್ಲ. ಆದ್ರೆ ಚಿತ್ರರಂಗದ ಹಿರಿಯರ ಮಾತಿಗೆ ಬೆಲೆ ಕೊಟ್ಟು ಆ ವ್ಯಕ್ತಿಯ ಹೆಸರು ಹೇಳಲ್ಲ ನಿನ್ನೆ ರಾತ್ರಿ ಇಂದ ಚಿತ್ರರಂಗದ ಹಿರಿಯರಿಂದ ಬಹಳಷ್ಟು ಫೋನ್‌ಗಳು ಬರ್ತಿವೆ

ಹಾಗಾಗಿ ಯಾವ ವಿಚಾರವನ್ನು ಹೇಳಲಾರೆ.ನನಗೆ ಅಭಿಮಾನಿ ಬಳಗ ಜಾಸ್ತಿ ಇದೆ . ಹಾಗಾಗಿ ಆವಾಗಾವಾಗ ನನ್ನ ಬಗ್ಗೆ ಅಪಪ್ರಚಾರ ಮಾಡ್ತಾರೆ.ನನಗೆ ನೋವಾಗಿದೆ ಅದಕ್ಕೆ ಟ್ವೀಟ್ ಮಾಡಿದ್ದೆ. ನಿನ್ನೆ ರಾತ್ರಿಯಿಂದಲೂ ಹಲವು ಫೋನ್ ಕರೆಗಳು ಬರ್ತಾ ಇವೆ.
ನಾಲ್ಕು ಗೋಡೆಗಳ ಮಧ್ಯೆ ಕುಳಿತು ಎಲ್ಲವನ್ನು ಬಗೆಹರಿಸಿಕೊಳ್ಳೋಣ ಅಂತಾ ಹಿರಿಯರು ಹೇಳಿದ್ದಾರೆ. ಅದಕ್ಕೆ ವ್ಯಕ್ತಿಯ ಹೆಸರು ಹೇಳಲ್ಲ. ಹಿರಿಯರು ಏನು ಹೇಳಬೇಡ ಎಂದಿದ್ದಾರೆ. ಅದಕ್ಕೆ ಏನು ಹೇಳೋದಿಲ್ಲ.ನಾವೆಲ್ಲ ಒಂದೇ ನಾವ್ ನಾವೇ ಸರಿ ಮಾಡಿಕೊಳ್ಳುತ್ತೇವೆ”.

ಇದು ಬುಲೆಟ್ ನಿನ್ನೆ ಹಾಕಿದ ತನ್ನದೇ ಸ್ಟೇಟಸ್ ಬಗ್ಗೆ ಇಂದು ನೀಡಿದ ಪ್ರತಿಕ್ರಿಯೆ . ಇವರದೇ ಮಾತುಗಳನ್ನ ಯೋಚಿಸಿ ಅಲ್ಲಲ್ಲ ಕೇಳ್ತಿದ್ದ ಹಾಗೆ ಇವರೆಂಥ ಬೂರಿ ರಾಜ ಅಂತ ಗೊತ್ತಾಗುತ್ತೆ ನೋಡಿ .

ಯಾರಿಗೂ ಹೆದರೋ ಅವಶ್ಯಕತೆ ಇಲ್ಲದೆ ಇದ್ರೆ ಸತ್ಯ ಹೇಳೋ ತಾಕತ್ತು ತೋರಿಸಬೇಕಪ್ಪ. ಚಿತ್ರರಂಗಕ್ಕೆ ಒಳ್ಳೆಯದಾಗುತ್ತೆ ಅಂದ್ರೆ ಶಕುನಿ ಕೆಲಸ ಮಾಡ್ತಿರೋವ್ರ(ಮಾಡ್ತಿದ್ರೆ ) ಬಣ್ಣ ಬಯಲು ಮಾಡ್ಬೇಕು. ಅದು ಬಿಟ್ಟು ರಾತ್ರಿ ಬಿಟ್ಟಿ ಸಿಗತ್ತೆ ಅಂತ ಫೇಸ್ ಬುಕ್ಕು,ಟ್ವಿಟ್ಟರ್ ಗೋಡೆ ಮೇಲೆ ಬರ್ಕೊಳೋದು.ಜನರ ತಲೆಗೆ ಹುಳ ಬಿಡೋದು.ಮಾಧ್ಯಮದವರ ಗಮನ ಸೆಳೆಯೋದು . ಬೆಳಿಗ್ಗೆ ಎದ್ದು ನಾಲ್ಕು ಗೋಡೆ ಮಧ್ಯೆ  ನಾವೇ ಬಗೆ ಹರಿಸಿಕೊಳ್ತೀವಿ ಅನ್ನೋದು.

ಬುಲೆಟ್ ಗೆ ಬುರುಡೆ ಬಿಡೋದು ಅಭ್ಯಾಸವಾಗಿದೆ ಅಂತ ಕಾಣತ್ತೆ. ಅವರಿಗೆ ಅಭಿಮಾನಿ ಬಳಗ ಜಾಸ್ತಿ ಇದೆಯಂತೆ. ಲಕ್ಷಾಂತರ ಇರೋ ಹಾಗೆ ಪೋಸ್ ಅಷ್ಟೇ ಇದು .ಭೂತಗಾಜು ಇಡ್ಕೊಂಡು ತಡಕಾಡಿದ್ರು ಬುಲೆಟ್ ಗೆ ಅಷ್ಟೊಂದು ಅಭಿಮಾನಿಗಳು ಸಿಗೋದು ಕಷ್ಟ.ಹೋಗ್ಲಿ ಬುಲೆಟ್ ಏನು ನಟ ಭಯಂಕರನೇ ? ತನಗೆ ಭಾರೀ ಸಂಖ್ಯೆಯ ಅಭಿಮಾನಿಗಳು ಇದ್ದಾರೆ ಅನ್ನೋ ಭ್ರಮೆಯಲ್ಲಿ ತೇಲಾಡ್ತಿದ್ರೆ ಹೀಗೆ ಆಗೋದು. ಇವರ ಬಗ್ಗೆ ಅಪಪ್ರಚಾರ ಯಾರು ಮಾಡಿದ್ರು? ಮಾಡಿದ್ರೆ ತಾನೇ ಗೊತ್ತಾಗೋದು ? ಇದು ಬರೀ ಪಬ್ಲಿಸಿಟಿ ಸ್ಟಂಟ್ ಅಷ್ಟೇ.

ಕೆಲವರಿಗೆ ಪ್ರಚಾರದ ಗೀಳು ಹೇಗಿರತ್ತೆ ಅಂದ್ರೆ ತಮ್ಮನ್ನ ತಾವೇ ಕೆರ್ಕೊಂಡು ಯಾರೋ ಕೆರೆದ್ರು ಅಂತ ಕುಯ್ಯೋ.. ಮರ್ರೋ ಅಂದು ಜನರ ಗಮನ ಸೆಳೆಯೋದು . ಇದು ಅದಕ್ಕಿಂತ ಭಿನ್ನವೇನಲ್ಲ. ನಿಮಗೆ ನೆನಪಿರಬಹುದು ಹಿಂದೊಮ್ಮೆ ದರ್ಶನ್ ಗು ನಂಗು ತಂದಿಟ್ಟವರ ಬಗ್ಗೆ ಹೇಳ್ತೀನಿ ಅಂದುಬಿಟ್ಟು ಆಮೇಲೆ  ಬುಲೆಟ್ ಸ್ಟಾರ್ಟ್ ಆಗದೆ ಉಸ್ಸಾಪ್ಪೋ ಅಂತ ಠುಸ್ ಆಗಿತ್ತು.

ಒಳಗಡೆ ಒಂದೂ ಬುಲೆಟ್ ಇಲ್ಲದೆ ಸುಮ್ನೆ ಗನ್ ತೋರಿಸಿ ಆಡೋ ಆಟ ಜಾಸ್ತಿ ದಿನ ನಡೆಯೋಲ್ಲ ಅನ್ನೋದನ್ನ ಪ್ರಕಾಶ್ ಬೇಗ ಅರ್ಥ ಮಾಡಿಕೊಂಡ್ರೆ ಒಳ್ಳೆಯದು. ಇಲ್ಲದಿದ್ರೆ ಜನಾನೇ ನಿನ್ ಹೂಸಿನ ಬಾಂಬ್ ನಿನ್ ತಾವೇ ಇರ್ಲಿ ಅದ್ರ ವಾಸನೆ ಕೂಡ ನಮಗೆ ಬೇಡ ಅಂತ ಒಗೆದು ಬಿಟ್ಟಾಕ್ತಾರೆ. “ಬೂರಿ ಬುಲೆಟ್” ಅನ್ನೋ ಬಿರುದು ಕೊಟ್ರು ಕೊಟ್ಟಾರು.

 

-Ad-

Leave Your Comments