18 C
Bangalore, IN
Monday, December 18, 2017
Home ಸಿನಿಮಾ ನ್ಯೂಸ್

ಸಿನಿಮಾ ನ್ಯೂಸ್

CiniAdda.com -  Kannada New Movies

  • Get latest Kannada New Movies & Films Releases from CiniAdda.com.
  • Trailers & Teasers.
  • Reviews & Ratings

ಗೀತಾ ಶಿವರಾಜ್ ಕುಮಾರ್ ವಿಧಾನಸಭೆ ಚುನಾವಣೆ ಸ್ಪರ್ಧೆ, ಹ್ಯಾಟ್ರಿಕ್ ಹೀರೊ ನಿರ್ಧಾರವೇನು ?

ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಇಂದು ದೊಡ್ಡಬಳ್ಳಾಪುರ ನಗರಕ್ಕೆ ಆಗಮಿಸಿದ್ರು. ನಗರದ ಗ್ರೀನ್ ವ್ಯಾಲಿ ಲೇ ಔಟ್ ಉದ್ಘಾಟನೆ ಮಾಡಿದ್ರು . ಲೇ ಔಟ್ ನಲ್ಲಿ ಒಂದು ಸುತ್ತು ಸುತ್ತಾಡಿದ್ರು. ಈ ವೇಳೆ ಅಭಿಮಾನಿಗಳು ಶಿವಣ್ಣನನ್ನು ನೋಡಲು ಹಾಗೂ ಅವರೊಂದಿಗೆ ಪೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ರು. ಇದೇ ವೇಳೆ ಮಾತನಾಡಿದ ಹ್ಯಾಟ್ರಿಕ್ ಹೀರೊ, ದೊಡ್ಡಬಳ್ಳಾಪುರ ಕ್ಕೂ ನನಗೂ ತುಂಬಾ ನಂಟಿದೆ ಇಲ್ಲಿಗೆ ಬಂದಿರುವುದು ಖುಷಿಯಾಗಿದೆ  ಎಂದ್ರು.
ಚುನಾವಣೆ ಕಥೆ ?
 ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷದಲ್ಲೂ ನಾವು ಸ್ಪರ್ಧೆ ಮಾಡುವುದಿಲ್ಲ. ನಮಗೆ  ಎಲ್ಲಾ ಪಾರ್ಟಿಯಲ್ಲಿ ಅಭಿಮಾನಿಗಳಿದ್ದಾರೆ. ಉಪೇಂದ್ರರವರ ಕೆಪಿಜೆಪಿ ಪಕ್ಷಕ್ಕೆ  ನಮ್ಮ ಹಾರೈಕೆ ಇದೆ. ನಟ ಉಪೇಂದ್ರ ಸ್ನೇಹಿತ ಹಾಗೂ ಕಲಾವಿದರಾಗಿರುವ ಕಾರಣ ಅವರ ಪರವಾಗಿ ಬ್ಯಾಟ್ ಬೀಸುವುದಾಗಿ ತಿಳಿಸಿದ್ರು. ಜೊತೆಗೆ ಮಫ್ತಿ ಸಿನಿಮಾ ಒಂದು ವಿಭಿನ್ನ ಸಿನಿಮಾ . ಅದ್ಧೂರಿ ಪ್ರದರ್ಶನ ಕಾಣುತ್ತಿರುವುದು  ಸಂತಸ ತಂದಿದೆ ಅಂದ್ರು .

ವಿಷ್ಣುವಿಗಾಗಿ ಮುಖ್ಯಮಂತ್ರಿ ಬಳಿಸಾರಿದ ಸುದೀಪ್ !

ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದ್ದರಾಮಯ್ಯನವರನ್ನು ಭೇಟಿ ಮಾಡಿ  ಕಿಚ್ಚ ಸುದೀಪ್ ವಿಷುವರ್ಧನ್ ಸಮಾಧಿ ಸ್ಥಳದ ಬಗ್ಗೆ ಮಾತುಕತೆ ನಡೆಸಿದ್ದಾರೆ .
ಸುದೀಪ್ ಮಾಡಿದ ಮನವಿ 
ಸಾಹಸಿಂಹ ವಿಶ್ವವರ್ಧನ ಸಮಾಧಿ ಸ್ಥಳವನ್ನ ಪುಣ್ಯಭೂಮಿ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದೇನೆ.
ಸಮಾಧಿಯನ್ನ ಸ್ಥಳಾಂತರ ಮಾಡೋದು ಬೇಡ. ಸಮಾಧಿ ಜಾಗವನ್ನ ಪುಣ್ಯಭೂಮಿ ಅಂತ ಅಭಿವೃದ್ಧಿ ಮಾಡುವಂತೆ ಮನವಿ ಮಾಡಲಾಗಿದೆ. ಸ್ಮಾರಕ ಬೇಕಾದ್ರೆ ಮೈಸೂರಿನಲ್ಲಿ ಮಾಡಿಕೊಳ್ಳಲಿ .ವಿಷ್ಣು ಸಮಾಧಿಯ 100 ಎಕರೆ ಜಾಗವನ್ನ ನಾವೇ ಖರೀದಿ ಮಾಡ್ತೀವಿ. ಈ ಬಗ್ಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ.
ಪುಣ್ಯಭೂಮಿ ಮಾಡಿಕೊಡೋದಾಗಿ ಸಿಎಂ ಭರವಸೆ ನೀಡಿದ್ದಾರೆ.
ಹೀಗೆ ಮಾಧ್ಯಮಕ್ಕೆ ಹೇಳಿದ ನಟ ಸುದೀಪ್ ರಾಜಕೀಯದ ಬಗ್ಗೆ ಮಾತಾಡಿದ್ರಾ ಅಂದಿದ್ದಕ್ಕೆ ಕೈ ಮುಗಿದು ಹೊರಟೇ ಬಿಟ್ರು.
ವಿಷ್ಣು ವರ್ಧನ್ ವಿಧಿವಶರಾಗಿ ೮ ವರುಷ ಕಳೆಯುತ್ತಾ ಬಂದಿದ್ದರೂ ಸ್ಮಾರಕ, ಸಮಾಧಿ ಸ್ಥಳ ವಿಚಾರ ಇತ್ಯರ್ಥ ಆಗದಿರುವುದು ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ. ಈಗ ಸುದೀಪ್, ವೀರಕಪುತ್ರ ಶ್ರೀನಿವಾಸ್ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಲ್ಲಿಸಿರುವ ಮನವಿ ಫಲ ಕೊಡುತ್ತಾ ? ಕಾಲವೇ ನಿರ್ಧರಿಸಬೇಕು.

ಕದ್ದುಮುಚ್ಚಿ ಮದ್ವೆಯಾದ ಕ್ರಿಕೆಟಿಗ ಕೊಹ್ಲಿ-ನಟಿ ಅನುಷ್ಕಾ !

ಇಟಲಿಯ ಮಿಲಾನ್ ರೆಸಾರ್ಟ್ನಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮದುವೆ ಆಗಿದ್ದಾರೆ. ತೀರಾ ಖಾಸಗಿಯಾಗಿ ಮದುವೆ ಮಾಡಿಕೊಂಡಿರುವ ವಿರಾಟ್ ಕೊಹ್ಲಿ, ಮದುವೆ ಬಗ್ಗೆ ಕೇಳಿದಾಗಲೆಲ್ಲಾ ಯಾವುದೇ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಮದುವೆ ಕಾರ್ಯಕ್ರಮದಲ್ಲಿ ಶಾರುಖ್, ಅಮೀರ್ ಖಾನ್ ಸೇರಿದಂತೆ ಎರಡೂ ಕಡೆಯ ಕುಟುಂಬಸ್ಥರು ಹಾಗೂ ಪರಮಾಪ್ತರು ಮಾತ್ರ ಮದುವೆ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. ಸಚಿನ್, ಯುವರಾಜ್ ಕೂಡ ಶುಭಕೋರಿದ್ದಾರೆ.
ಪ್ರಕೃತಿಯ ಸೊಬಗು ಶ್ರೀಮಂತ ನಗರಗಳಲ್ಲಿ ಮಿಲಾನ್ ಸ್ಥಾನ ಗಳಿಸಿಕೊಂಡಿದೆ. ಈ ಸಮಯದಲ್ಲಿ ಸಾಕಷ್ಟು ಚಳಿ ಇರುವ ಕಾರಣದಿಂದ ಹೋಟೆಲ್, ರೆಸಾರ್ಟ್ ಗಳನ್ನು ಬಂದ್ ಮಾಡುವ ಸಂಪ್ರದಾಯ ಇತ್ತು. ಆದರೆ ತುಂಬಾ ಸರಳವಾಗಿ ಮದ್ವೆಯಾಗಲು ನಿಶ್ಚಯ ಮಾಡಿದ್ದ ಮಿಲ್ಕ್ ಬೇಬಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮಾಲೀಕರ ಬಳಿ ಮಾತನಾಡಿ ಅವಕಾಶ ಪಡೆದುಕೊಂಡರು. ಬಳಿಕ ಭಾರತೀಯ ಶೈಲಿಯ ಆಹಾರ ತಯಾರಿಸಲು ಇಲ್ಲಿಂದಲೇ ಅಡುಗೆ ಭಟ್ಟರನ್ನು ಕರೆದೊಯ್ಯಲಾಗಿತ್ತು.
ರೋಮ್ ಮಾದರಿಯಲ್ಲಿ ಮದುವೆ ಆಗಬೇಕೆಂದು ನಿಶ್ಚಯ ಮಾಡಿದ್ದ ಈ ಜೋಡಿ, ತಮ್ಮ ಆಸೆಯಂತೆ ನಡೆದುಕೊಂಡಿದೆ. ಆದರೆ ಇತ್ತೀಚಿಗೆ ಬಿಸಿಸಿಐ ಬಳಿ ರಜೆ ಕೇಳಿದಾಗ ನಿಖರವಾಗಿ ಕಾರಣ ತಿಳಿಸಿರಲಿಲ್ಲ, ಆಟಗಾರರು ತುಂಬ ಧಣಿಯುತ್ತಾರೆ ಅವರಿಗೆ ವಿಶ್ರಾಂತಿಯ ಅವಶ್ಯಕತೆ ಇರುತ್ತೆ ಅಂತ ಹೇಳಿಕೊಂಡು ರಜೆಗೆ ಅರ್ಜಿ  ಹಾಕಿದ್ರು. ಆಗಲೇ ಮದುವೆ ವಿಚಾರ ಇಣುಕಿ ನೋಡಿತ್ತು. ರಜೆ ಪಡೆದುಕೊಂಡ ಬಳಿಕವೂ ಮದುವೆ ಬಗ್ಗೆ ಪ್ರಸ್ತಾಪ ಆದಾಗಲೆಲ್ಲ, ಬೇರೆ ವಿಚಾರ ಪ್ರಸ್ತಾಪ ಮಾಡಿಕೊಂಡು ಎಸ್ಕೇಪ್ ಆಗಿದ್ರು. ಇದೀಗ ಮದುವೆ ಆಗಿದ್ದಾರೆ.   ಕದ್ದುಮುಚ್ಚಿ ಮದುವೆ ಆಗುವ ಸಂದರ್ಭ ಬಂದಿದ್ದಾದರು ಏಕೆ ಅನ್ನೋದು ಅಭಿಮಾನಿಗಳ ಪ್ರಶ್ನೆಯಾಗಿದೆ.
ಜ್ಯೋತಿ ಗೌಡ, ನಾಗಮಂಗಲ

ಅಂಬಿ ಬರೆದ ಪ್ರೀತಿಯ ಪತ್ರ !

ಅಣ್ಣಾವ್ರ ಮೇಲೆ ಹಲ್ಲೆ ನಡೆದದ್ದು ಎಲ್ಲಿ ? ಯಾವಾಗ ?

ನಟಿ ಹರ್ಷಿಕಾ ಪುಣಚ್ಚ ಉಗಿದಿದ್ದು ಯಾರಿಗೆ..? 

ನಟ, ನಟಿಯರೂ ಸೇರಿದಂತೆ ಎಲ್ಲರೂ ಡಬ್ ಸ್ಮಾಶ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕೋದು ಕಾಮನ್. ಅದೇ ರೀತಿ ನಟಿ ಹರ್ಷಿಕಾ ಪುಣಚ್ಚ ಕೂಡ ಒಂದು ಡಬ್ ಸ್ಮಾಶ್ ಮಾಡಿ ಟ್ವಿಟ್ಟರ್ ನಲ್ಲಿ ಹಾಕಿದ್ರು. ಜನರು ವಿಡಿಯೋ ನೋಡಿ ಸಾಕಷ್ಟು ಎಂಜಾಯ್ ಮಾಡಿದ್ರು. ಜೊತೆಗೆ ವಿಡಿಯೋಗೆ ಕಾಮೆಂಟ್ ಕೂಡ ಹಾಕಿದ್ರು.
ಆದ್ರೆ ವಿಡಿಯೋ ನೋಡಿದ ಅಭಿಮಾನಿಯೊಬ್ಬ, ಎಂಜಾಯ್ ಮಾಡೋದು ಬಿಟ್ಟು ಕೆಲಸ ಇಲ್ಲದೆ ಕುಳಿತಿದ್ದಾಗ ಈ ಕೆಲಸ ಮಾಡ್ತಿದ್ದೀರಾ..? ಯಾವುದೇ ಕೆಲಸ ಇಲ್ವಾ ಅಂತ ಪ್ರಶ್ನೆ ಮಾಡಿದ್ದಾರೆ. ಈ ಟ್ವಿಟರ್ ನೋಡ್ತಿದ್ದ ಹಾಗೆ ಕೆಂಡಾಮಂಡಲ ಆಗಿರುವ ಪುಣಚ್ಚ, ಥೂ ನಿನ್ನ ಜನ್ಮಕ್ಕೆ, ನಾನು ಮೂರು ಬಿಗ್ ಸಿನಿಮಾಗಳಲ್ಲಿ ಮಾಡ್ತಿದ್ದಿನೋ.. ನೀನು ಕೆಲಸ ಇಲ್ಲದೆ ವೇಸ್ಟ್ ಬಾಡಿ ಹಾಗೆ ಹೀಗೆ ಅಂತಾ ಸಖತ್ ಗರಂ ಆಗಿ ಉಗಿದು ಉಪ್ಪಾಕಿದ್ದಾರೆ.
ಯಾರಾದರೂ ಸರಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ ಅಂದ ಮಾತ್ರಕ್ಕೆ ಕೆಲಸ ಇಲ್ಲ ಅನ್ನೋದು ಮೂರ್ಖತನ. ಅಭಿಮಾನಿ ಆದವನು ವಿಡಿಯೋ ಗೆ ಕಾಮೆಂಟ್ ಮಾಡುವಾಗ ನೂರಲ್ಲ ಮೂರು ಬಾರಿಯಾದರೂ ಚಿಂತಿಸಬೇಕು. ಇಲ್ಲದಿದ್ರೆ ಈ ರೀತಿಯ ಎಡವಟ್ಟುಗಳು ಆಗೋದು ಮಾಮೂಲಿ. ಇನ್ನೂ ಯಾರೋ ಒಬ್ಬರು ಈ ರೀತಿ ಕಾಮೆಂಟ್ ಮಾಡಿದ್ರು ಅನ್ನೋ ಕಾರಣಕ್ಕೆ ನಟಿಯಾದವರೂ ಈ ರೀತಿ ಬೈಯ್ಯೋದು ಕೂಡ ಅಷ್ಟೇ ಸಮಂಜಸ ಅಲ್ಲ. ಒಬ್ಬ ಅಭಿಮಾನಿಗೆ ಕೋಪದಲ್ಲಿ ಬೈಯ್ದಾಗ ಇನ್ನಷ್ಟು ಅಭಿಮಾನಿಗಳಿಗೂ ಮುಜುಗರ ಆಗುತ್ತೆ ಅನ್ನೋದು ಸೆಲೆಬ್ರಿಟಿಗಳ ಮನದಲ್ಲಿ ಇದ್ದರೆ ಸಾಕು.
ಜ್ಯೋತಿ ಗೌಡ, ನಾಗಮಂಗಲ

“ನಾನು ಪಾರ್ವತಿ” ಬಂದಾಯಿತು

ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕಿ ಪಾರ್ವತಮ್ಮ‌ರಾಜ್ ಕುಮಾರ್ ಬಗ್ಗೆ ಬರೆದಿರುವ ನಾನು ಪಾರ್ವತಿ ಪುಸ್ತಕದ ಲೋಕಾರ್ಪಣೆ ಇಂದು ನೆರವೇರಿದೆ .
ಮಲ್ಲೇಶ್ವರಂ ನಲ್ಲಿರುವ ಎಸ್ ಆರ್ ವಿ ಥೀಯೆಟರ್ ನಲ್ಲಿ ಪುಸ್ತಕ ಲಾಂಚ್ ಆಗಿದೆ. ಕಾರ್ಯಕ್ರಮಕ್ಕೆ  ಕಿಚ್ಚ ಸುದೀಪ್ , ರಾಘವೇಂದ್ರ ರಾಜ್ ಕುಮಾರ್, ನಿರ್ದೇಶಕರಾದ ಭಗವಾನ್ , ನಟಿ ಜಯಮಾಲ . ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಸಾ.ರಾ.ಗೋವಿಂದ್, ನಿರ್ದೇಶಕ ಟಿ.ಎನ್ . ಸೀತಾರಾಮ್ ಆಗಮಿಸಿದ್ದರು.
ದೊಡ್ಮನೆ ಕುಟುಂಬದವರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಾನು ಪಾರ್ವತಿ ಪುಸ್ತಕವನ್ನು ನಿರೂಪಿಸಿರುವುದು ಹೆಸರಾಂತ ಲೇಖಕ, ಪತ್ರಕರ್ತ ಜೋಗಿ. ವೀರೇಶ್ ನೇತೃತ್ವದ ಚಿತ್ರಲೋಕ ಪಬ್ಲಿಕೇಷನ್ಸ್ ನಿಂದ ನಾನು ಪಾರ್ವತಿ ಹೊರಬಂದಿದೆ.

ಹನುಮನ ಭಕ್ತನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಜ್ಜೆ! ಸರ್ಜಾಗಳ ಜತೆ ಕುಣಿದ ಡಿ ಬಾಸ್

ಸರ್ಜಾ ಕುಟುಂಬದ ಖ್ಯಾತ ನಟರಾದ ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ ಜತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಡೊಂದಕ್ಕೆ ಹೆಜ್ಜೆ ಹಾಕಿದರೆ ಹೇಗಿರತ್ತೆ? ಈ ಪ್ರಶ್ನೆಗೆ ಉತ್ತರ ಪಡೆಯಲು ಹೆಚ್ಚು ದಿನ ಕಾಯಬೇಕಿಲ್ಲ. ಕಾರಣ, ಪ್ರೇಮ ಬರಹ ಚಿತ್ರದ ಹಾಡಿನಲ್ಲಿ ಈ ನಾಲ್ಕೂ ಜನ ನಟರು ಅತಿಥಿಗಳಾಗಿ ಆಗಮಿಸಲಿದ್ದು, ಹನುಮಂತನ ಭಕ್ತರಾಗಿ ಹೆಜ್ಜೆ ಹಾಕಲಿದ್ದಾರೆ.

ಪ್ರೇಮ ಬರಹ ಚಿತ್ರದಲ್ಲಿ ಚಂದನ್ ಹಾಗೂ ಅರ್ಜುನ್ ಸರ್ಜಾ ಪುತ್ರಿ ಅಶ್ವರ್ಯ ಸರ್ಜಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ನಿರ್ದೇಶನ ಹಾಗೂ ನಿರ್ಮಾಣದ ಜವಾಬ್ದಾರಿಯನ್ನು ಅರ್ಜುನ್ ಸರ್ಜಾ ಹೊತ್ತುಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಸರ್ಜಾ ಕುಟುಂಬದ ಮೂವರು ನಟರು ಒಂದೇ ಹಾಡಿಗೆ ನೃತ್ಯ ಮಾಡುತ್ತಿದ್ದು, ಇವರಿಗೆ ದರ್ಷನ್ ಸಾಥ್ ನೀಡಿರುವುದು ಅಬಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಹನುಮಂತನ ಕುರಿತಾದ ಈ ಹಾಡಿಗೆ ಜೆಸ್ಸಿಗಿಫ್ಟ್ ಸಂಗೀತ ನೀಡಿದ್ದು, ಎಸ್ ಪಿ ಬಾಲಸುಬ್ರಮಣ್ಯಂ ಹಾಡಿದ್ದಾರೆ. ನಿನ್ನೆಯಿಂದ ಈ ಹಾಡಿನ ಚಿತ್ರೀಕರಣ ಆರಂಭವಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಇದರ ಫೋಟೋಗಳು ವೈರಲ್ ಆಗಿವೆ. ಆ ಚಿತ್ರಗಳು ಹೀಗಿವೆ…

ತೆರೆ ಮೇಲೆ ಒಂದಾಗಲಿದೆ ಗಣಿ-ವಿಜಿ ಜೋಡಿ!

ಅದು 2006 ಹಾಗೂ 2007ರ ಸಮಯ ತೆರೆಕಂಡ ಕನ್ನಡ ಚಿತ್ರಗಳೆಲ್ಲಾ ಒಂದಾದ ಮೇಲೆ ಒಂದರಂತೆ ನೆಲಕಚ್ಚುತ್ತಿದ್ದವು. ಇಂತಹ ಸಂದರ್ಭದಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸ ಅಲೆ ತಂದುಕೊಟ್ಟಿದ್ದು ಮುಂಗಾರು ಮಳೆ ಹಾಗೂ ದುನಿಯಾ ಚಿತ್ರಗಲು ಈ ಎರಡು ಚಿತ್ರಗಳಲ್ಲೂ ಆಗಿನ ಕಾಲಕ್ಕೆ ಹೊಸ ಮುಖಗಳಾಗಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ವಿಜಯ್ ರನ್ನು ಪ್ರೇಕ್ಷಕ ಮೆಚ್ಚಿಕೊಂಡಿದ್ದ. ಕನ್ನಡ ಚಿತ್ರರಂಗದಲ್ಲಿ ಒಟ್ಟಿಗೆ ಯಶಸ್ಸಿನ ಶಿಖರ ಏರಿದ ಗಣೇಶ್ ಹಾಗೂ ದುನಿಯಾ ವಿಜಿ ಈಗ ಒಟ್ಟಿಗೆ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹೌದು ಕನ್ನಡ ಸಿನಿ ರಸಿಕರಿಗೆ ಇದೊಂದು ಹೊಸ ಸುದ್ದಿಯಾಗಿದ್ದು, ಗಮನ ಸೆಳೆದಿದೆ. ಈಗಾಗಲೇ ಈ ಇಬ್ಬರು ನಟರಿಗೆ ಆ್ಯಕ್ಷನ್ ಕಟ್ ಹೇಳಿರುವ ನಿರ್ದೇಶಕ ಪ್ರೀತಮ್ ಗುಬ್ಬಿ ಈ ಇಬ್ಬರನ್ನು ಒಟ್ಟಿಗೆ ತೆರೆ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ನಿಜ ಜೀವನದಲ್ಲಿ ಉತ್ತಮ ಸ್ನೇಹಿತರಾಗಿರುವ ಗಣಿ ಹಾಗೂ ವಿಜಿ ಖ್ಯಾತಿ ಗಳಿಸಿದ 10 ವರ್ಷಗಳ ನಂತರ ಒಂದೇ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.  ಈ ಚಿತ್ರದ ಚಿತ್ರೀಕರಣವನ್ನು ಮುಂದಿನ ವರ್ಷ ಜುಲೈನಿಂದ ಆರಂಭಿಸಲು ನಿರ್ಧರಿಸಲಾಗಿದೆ. ಇಬ್ಬರು ಸ್ಟಾರ್ ನಟರಿರುವ ಹಿನ್ನೆಲೆಯಲ್ಲಿ ಚಿತ್ರದ ಕಥೆಯಲ್ಲಿ ಇಬ್ಬರಿಗೂ ಉತ್ತಮ ಪ್ರಾಮುಖ್ಯತೆ ದೊರಕಿಸುವ ಜವಾಬ್ದಾರಿ ನಿರ್ದೇಶಕರ ಹೆಗಲ ಮೇಲಿದೆ.

ಕರಾಟೆಯಲ್ಲಿ ಚಿನ್ನ ಗೆದ್ದ ದರ್ಶನ್ ಪುತ್ರ ವಿನೀಶ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಸ್ ಸಿನಿಮಾಗಳ ಮೂಲಕ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸಿನಿಮಾ ರಂಗದಲ್ಲಿ ಈಗಾಗಲೇ ಅತ್ಯುತ್ತಮ ಸಾಧನೆ ಮಾಡಿ ಚಿತ್ರರಂಗದಲ್ಲಿ ದರ್ಶನ್ ತಮ್ಮದೇ ಆದ ಸ್ಥಾನ ಕಂಡುಕೊಂಡಿದ್ದಾರೆ. ಈಗ ಅವರ ಮಗ ವಿನೀಶ್ ಕೂಡ ಪುಟ್ಟವಯಸ್ಸಿನಲ್ಲೇ ಉತ್ತಮ ಸಾಧನೆ ಮಾಡಿ ಸುದ್ದಿಯಾಗುತ್ತಿದ್ದಾರೆ.

ಹೌದು, ವಿನೀಶ್ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಎಲ್ಲರ ಗಮನ ಸೆಳೆದಿದ್ದಾರೆ. ರಾಜರಾಜೇಶ್ವರಿ ನಗರದ ಹಿಲ್ ವ್ಯೂ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿನೀಶ್ ಕರಾಟೆ ಜತೆಗೆ ವ್ಯಾಸಂಗದಲ್ಲೂ ಮುಂದಿದ್ದಾರೆ. ಇತ್ತೀಚೆಗೆ ನಡೆದ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಅಗ್ರಸ್ಥಾನ ಪಡೆದಿದ್ದಾರೆ. ವಿನೀಶ್ ನ ಈ ಸಾಧನೆಯನ್ನು ಡಿ ಬಾಸ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಜತೆಗೆ ಶುಭ ಕೋರುತ್ತಿದ್ದಾರೆ.

Like Us, Follow Us !

121,079FansLike
1,815FollowersFollow
1,346FollowersFollow
1,650SubscribersSubscribe

Trending This Week