23 C
Bangalore, IN
Sunday, May 26, 2019
Home ಸಿನಿಮಾ ನ್ಯೂಸ್

ಸಿನಿಮಾ ನ್ಯೂಸ್

CiniAdda.com -  Kannada New Movies

  • Get latest Kannada New Movies & Films Releases from CiniAdda.com.
  • Trailers & Teasers.
  • Reviews & Ratings

ಪುಟ್ಟಣ್ಣನ ಫಾಲೋ ಮಾಡ್ತಿದ್ದಾರಾ  ರಿಷಬ್ ಶೆಟ್ಟಿ ?!

ಕಥಾ ಸಂಗಮ! ಅಂದಾಕ್ಷಣ ನೆನಪಾಗೋದೆ ಪುಟ್ಟಣ್ಣ ಕಣಗಾಲ್ . ಅವರ ಸಿನಿಮಾ ಸೂತ್ರವೇ ಹಂಗೆ .ಕಾದಂಬರಿ ಆಧಾರಿತ ಚಿತ್ರಮಾಡಿ ಬಾಲಿವುಡ್ ಜನ ತಿರುಗಿ ನೋಡೋ ಹಾಗೆ ಮಾಡಿಕೊಂಡಿದ್ರು . ಕಥೆ ಹೆಣೆಯೋ ರೀತಿ ನಿಜಕ್ಕೂ ಅಚ್ಚರಿ ..ಅಂದಿನ ಕಾಲಕ್ಕೆ ಅವರು ಒಂದೇ ಚಿತ್ರದಲ್ಲಿ 3(ಹಂಗು ,ಅತಿಥಿ ,ಮುನಿತಾಯಿ ) ಕಥೆಗಳನ್ನ ಅಳವಡಿಸಿಕೊಂಡು ಕಥಾ ಸಂಗಮ ಎಂಬ ವಿಭಿನ್ನ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ರು ..

ಕಲ್ಯಾಣ್ ಕುಮಾರ್ ,ಬಿ ಸರೋಜಾದೇವಿ, ಆರತಿ , ರಜನಿಕಾಂತ್ ರಂಥ ಘಟಾನುಘಟಿಗಳ  ತಾರಾ ಬಳಗವನ್ನ ಒಳಗೊಂಡಿದ್ದ ಆ ಕಾಲದ ಕಥಾ ಸಂಗಮ ಈಗ ಮತ್ತೊಮ್ಮೆ ನೆನಪಿನ ಸುರುಳಿ ಬಿಚ್ಚಲಿಕ್ಕೆ  ಬರ್ತಿದೆ.
ಇದರ  ಸೂತ್ರದಾರ ರಿಷಬ್ ಶೆಟ್ಟಿ .

ಹಳೆ ಸಿನಿಮಾ ಇಟ್ಕೊಂಡು ಇವಾಗೇನ್ ಮಾಡ್ತಾರೆ ಅನ್ನೋ ಪ್ರಶ್ನೆ ಸಹಜ! ಆದ್ರೆ ಹಳೇ  ಟೈಟಲ್ ಹಿಡ್ಕೊಂಡು ಬರ್ತಿರೋ ರಿಷಬ್ ಕಂಪ್ಲೀಟ್ ಕಣಗಾಲ್ ಅವರನ್ನೇ ಫಾಲೋ ಮಾಡಿ ಅವರ ಪ್ರಯೋಗವನ್ನ ಮರುಪ್ರಯೋಗ ಮಾಡೋಕೆ  ಹೊರಟಿದ್ದಾರೆ..

ಮತ್ತೊಂದು ವಿಶೇಷ ಅಂದ್ರೆ ರಿಷಬ್ ಪಕ್ಕಾ  ಕಣಗಾಲ್ ಅವರ ಅಭಿಮಾನಿ ಅಂತೆ. ಹಾಗಾಗಿ ಈ ಸಿನಿಮಾ ಪುಟ್ಟಣ್ಣ ಅವರಿಗೆ ಡೆಡಿಕೇಟ್ ಅಂತಾರೆ ರಿಷಬ್ ಶೆಟ್ಟಿ

ಇಲ್ಲೇನಿದೆ ಅಂಥಾ ವಿಶೇಷ ?

 ಪುಟ್ಟಣ್ಣ ಅವರ ಕಥಾ ಸಂಗಮದಲ್ಲಿ 3 ಕಥೆಗಳಿದ್ವು ಆದ್ರೆ ರಿಷಬ್ ಅವರ ಸಂಗಮದಲ್ಲಿ 7 ಕಥೆ ಇರಲಿವೆ. ಅಷ್ಟೆ ಅಲ್ಲ ಒಂದೊಂದು ಕಥೆಗೂ ಒಬ್ಬೊಬ್ಬ ನಿರ್ದೇಶಕ ಅಂದ್ರೆ 7 ನಿರ್ದೇಶಕರು ಸಂಗಮವಾಗಲಿದ್ದಾರೆ..

ವಿಶೇಷ ಅಂದ್ರೆ ಆ 7 ನಿರ್ದೇಶಕರನ್ನ ರಿಷಬ್ ಸೋಷಿಯಲ್ ಮಿಡೀಯಾ ಮೂಲಕ ಆಯ್ಕೆ ಮಾಡ್ತಾರಂತೆ ..ಉತ್ತಮವೆನಿಸಿದ 7 ಕಥೆಗಳನ್ನ ಆರಿಸಿ ಅವರಿಂದಲೇ ಆ್ಯಕ್ಷನ್ ಕಟ್ ಹೇಳ್ಸೋಕು  ನಿರ್ಧರಿಸಿದ್ದಾರೆ..

ಆದ್ರೆ 7 ನಿರ್ದೇಶಕರನ್ನೊಳಗೊಂಡ ಚಿತ್ರಕ್ಕೆ ಹಣ ಹೂಡೋದು ಯಾರು? ಎಂಬ ಪ್ರಶ್ನೆಗೆ ಸದ್ಯದಲ್ಲೆ ಉತ್ತರಿಸ್ತಾರೆ ರಿಷಬ್ ಶೆಟ್ಟಿ.

-ಪಲ್ಲವಿ ಗೌಡ

ಚಕ್ರವರ್ತಿ ವಿಶೇಷ ದಾಖಲೆಗಳ ಬಗ್ಗೆ ” ಡಿ ಕಂಪನಿ ” ಹೇಳೋದೇನು ಗೊತ್ತಾ..?

ಚಕ್ರವರ್ತಿ ಸಿನಿಮಾ ತೆರೆ ಕಂಡಿದೆ. ದರ್ಶನ್ ಸಿನಿಮಾ ನೋಡುವ ಮಂದಿ ನಿನ್ನೆ ಮಧ್ಯರಾತ್ರಿಯಿಂದಲೇ ಥಿಯೇಟರ್ ಮುಂದೆ ಜಮಾಯಿಸಿದ್ರು.. ಇನ್ನೂ ಬೆಳ್ ಬೆಳಗ್ಗೆ ತಿಂಡಿಯನ್ನೂ ತಿನ್ನದೆ ಸಿನಿಮಾ ನೋಡಲು ಹೋದವರು ಅದೆಷ್ಟು ಮಂದಿಯೋ ಲೆಕ್ಕವಿಲ್ಲ..

ಇದು  ಸಿನಿಮಾ ಹೇಗಿದೆ ಅನ್ನೋ ವರದಿಯಲ್ಲ . ಸಿನಿಮಾ ಮಾಡಿರುವ ದಾಖಲೆಗಳು ಏನು ಅನ್ನೋದನ್ನು ಡಿ ಕಂಪನಿ ತನ್ನ ಫೇಸ್ಬುಕ್ ವಾಲ್ ನಲ್ಲಿ ಕೊಟ್ಟಿರೋ ಮಾಹಿತಿಯನ್ನ  ನಿಮ್ಮ ಮುಂದೆ ಇಡುತ್ತಿದ್ದೇವೆ.

ಚಕ್ರವರ್ತಿ ಲಿರಿಕಲ್ ಟೈಟಲ್ ಹಾಡನ್ನು ಕೇವಲ 24 ಗಂಟೆಗಳಲ್ಲಿ 3 ಲಕ್ಷ ನೋಡಿ ಮೆಚ್ಚಿಕೊಂಡ ಕನ್ನಡದ ಮೊದಲ ಚಿತ್ರ ಅನ್ನೋ ಖ್ಯಾತಿ ಗಳಿಸಿದೆ.. ಇನ್ನೂ ಕೇವಲ 25 ಗಂಟೆಗಳಲ್ಲಿ ಯಾವುದೇ ಡೈಲಾಗ್ ಇಲ್ಲದೆ 1 ಮಿಲಿಯನ್ ವೀಕ್ಷಕರನ್ನು ತಲುಪಿದ ಕನ್ನಡದ ಮೊದಲ ಟ್ರೈಲರ್ ಆಗಿದ್ದು, ಚಿತ್ರವೊಂದರ ಎಲ್ಲಾ ಲಿರಿಕಲ್ ಹಾಡುಗಳು ಮತ್ತು ಟ್ರೈಲರ್ ರಿಲೀಸ್‍ಗಿಂತ ಮೊದಲೇ 1 ಮಿಲಿಯನ್ ಜನರಿಂದ ನೋಡಲ್ಪಟ್ಟ ಸಿನಿಮಾ .

ಸಾಮಾನ್ಯವಾಗಿ ಕನ್ನಡ ಸಿನಿಮಾಗಳು ಕರ್ನಾಟಕದಲ್ಲಿ ಮಾತ್ರ ಪ್ರದರ್ಶನಗೊಳ್ಳುತ್ತವೆ.. ಅದರಲ್ಲೂ ಮಂಗಳೂರು ಭಾಗದಲ್ಲಿ ಕನ್ನಡ ಸಿನಿಮಾಗಳಿಗೆ ಮಾರ್ಕೆಟ್ ಇಲ್ಲ ಅನ್ನೋ ಮಾತುಗಳೂ ಇವೆ.. ಅಂತಹದ್ದರಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ದೇಶದ 15 ರಾಜ್ಯಗಳಲ್ಲಿ ತೆರೆಕಾಣುತ್ತಿದೆ.. ಜೊತೆಗೆ ಇದೇ ಮೊದಲ ಬಾರಿಗೆ ಮಲ್ಟಿಫ್ಲೆಕ್ಸ್ ಹಾಗೂ ಬೆಂಗಳೂರಿನ ಥಿಯೇಟರ್‍ನಲ್ಲಿ ಮಧ್ಯರಾತ್ರಿ 12 ಗಂಟೆಯಿಂದಲೇ ಚಿತ್ರ ಪ್ರದರ್ಶನ ಆಗಿದೆ.. ರಾಜ್ಯದ 12 ಜಿಲ್ಲೆಗಳಲ್ಲಿ ಬೆಳಗಿನ ಜಾವಾ ಚಿತ್ರ ಪ್ರದರ್ಶನಗೊಂಡಿದೆ ಅನ್ನೋದು ಕೂಡ ಮತ್ತೊಂದು ದಾಖಲೆ..

ಬೆಂಗಳೂರಿನ ಒಂದೇ ಮಲ್ಟಿಫ್ಲೆಕ್ಸ್ ನಲ್ಲಿ 18 ಶೋ, ಮೈಸೂರಿನ ಮಲ್ಟಿಫ್ಲೆಕ್ಸ್‍ಗಳಲ್ಲಿ 27 ಪ್ರದರ್ಶನ ಆಗ್ತಿರೋದು ಕೂಡ ಇದೇ ಮೊದಲು, ದೆಹಲಿ ಹಾಗೂ ಗುಜರಾತ್ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ರಿಲೀಸ್ ಆಗುವ ಮೂಲಕ ಇತಿಹಾಸ ಸೃಷ್ಟಿಸಿದೆ.. ಇನ್ನೂ ಸತತ 5 ದಿನಗಳ ಕಾಲ ಯೂಟ್ಯೂಬ್‍ನಲ್ಲಿ ನಂಬರ್ 1 ಟ್ರೆಂಡಿಂಗ್ ಉಳಿಸಿಕೊಂಡ ವಿಶ್ವದ ಮೊದಲ ಚಿತ್ರ ಚಕ್ರವರ್ತಿ. ಇಷ್ಟೇ  ಅಲ್ಲದೆ ಕನ್ನಡದಲ್ಲಿ ಒಬ್ಬ ನಟನ ಚಿತ್ರಕ್ಕೆ ಬರೋಬ್ಬರಿ 150 ಕಟೌಟ್ ನಿರ್ಮಾಣ ಆಗಿದ್ದು ಕೂಡ ದೊಡ್ಡ ದಾಖಲೆಯಾಗಿದೆ..

ಕನ್ನಡ ಚಿತ್ರವೊಂದು ದೇಶದ 500 ಚಿತ್ರ ಮಂದಿರಗಳಲ್ಲಿ ತೆರೆ ಕಾಣುತ್ತಿರುವುದು ಇದೇ ಮೊದಲಾಗಿದ್ದು, ಮುಂಬೈನಲ್ಲಿ ಅತೀ ಹೆಚ್ಚು ಚಿತ್ರ ಮಂದಿರಗಳಲ್ಲಿ ರಿಲೀಸ್ ಆದ ಕನ್ನಡದ ಮೊದಲ ಚಿತ್ರವಾಗಿದೆ.. ಜೊತೆಗೆ ಚಿತ್ರದ ಸ್ಯಾಟಲೈಟ್ ಹಕ್ಕನ್ನು ಅತ್ಯಧಿಕ ಬೆಲೆಯಾದ 7 ಕೋಟಿಗೆ ಉದಯ ಟಿವಿ ಕೊಂಡುಕೊಂಡಿರುವುದು ಕೂಡ ಒಂದು ದಾಖಲೆಯಾಗಿದೆ..

ಇನ್ನುಳಿದಂತೆ ಫೇಸ್ಬುಕ್ ಅಲ್ಲಿ 24 ಗಂಟೆಗಳಲ್ಲಿ 3 ಮಿಲಿಯನ್ ಜನ ನೋಡಿ ದಾಖಲೆ ನಿರ್ಮಾಣ ಮಾಡಿದ್ರೆ, ಬುಕ್ ಮೈ ಷೋ ವೆಬ್‍ಸೈಟ್‍ನಲ್ಲಿ ಬರೋಬ್ಬರಿ 35,000 ಟಿಕೆಟ್ ಮಾರಾಟ ಆಗುವ ಮೂಲಕ ಕಿರಿಕ್ ಪಾರ್ಟಿ ದಾಖಲೆಯನ್ನು ಮುರಿದಿದೆ.. ಈ ಹಿಂದೆ ಕಿರಿಕ್ ಪಾರ್ಟಿಯ 27,000 ಹಾಗೂ ಯಶ್ ಅಭಿನಯದ ಮಾಸ್ಟರ್ ಪೀಸ್ ಸಿನಿಮಾದ 14,000 ಟಿಕೆಟ್ ಮಾರಾಟವಾಗಿದ್ದು ದಾಖಲೆಯಾಗಿತ್ತು..

 

 

ಜೋಮ, ಮಂಡ್ಯ

ಕಿಚ್ಚ ಬಿಟ್ಟ ಕೆಂಪೇಗೌಡ -2 ಕಾಮಿಡಿ ಕಿಂಗ್ ಪಾಲಾಯ್ತು.

ಖಡಕ್ ಡೈಲಾಗ್ಸ್ ಮೂಲಕ ಹಿಟ್ ಸಿನಿಮಾ ಕೊಟ್ಟ ಕೆಂಪೇಗೌಡ ಅರ್ಥಾತ್ ಕಿಚ್ಚ ಸುದೀಪ್ ಮತ್ತೆ ಕೆಂಪೇಗೌಡ-2 ಮಾಡ್ತಾರೆ ಅಂತ ಸುದ್ದಿ ಹಬ್ಬಿತ್ತು. ಆದರೆ  ಕೆಂಪೇಗೌಡ-2 ಸಿನಿಮಾದ ಟ್ರೇಲರ್ ಈಗಾಗಲೇ ರಿಲೀಸ್ ಆಗಿದೆ. ಹಾಗಾದ್ರೆ ಕಿಚ್ಚ ಎಲ್ಲಿ? ಅನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ

ಕೆಂಪೇಗೌಡ-2 ಸಿನಿಮಾ ಬರ್ತಿರೋದಂತು. ನಿಜ ಆದ್ರೆ ಇದರಲ್ಲಿ ಕಿಚ್ಚನ ಬದಲು ಕಾಮಿಡಿ ಕಿಂಗ್ ಕೋಮಲ್ ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಕೆಂಪೇಗೌಡ – 2 ಸಿನಿಮಾದ ಹೀರೋ ಬೇರೆ ಯಾರೂ ಅಲ್ಲ .  ನಟ ಕೋಮಲ್ ಟ್ರೇಲರ್ ನಲ್ಲಿ ಪೊಲೀಸ್ ಲುಕ್ ನಿಂದ ಗುನ್ನ ಕೊಡ್ತಿರೋ ದೃಶ್ಯಗಳಿವೆ.  ಕೋಮಲ್ ಇದಕ್ಕಂತಲೇ ತೂಕ ಇಳಿಸಿಕೊಂಡು ಖದರ್ ಆಗಿಯೇ ಕಾಣಿಸ್ತಿದ್ದಾರೆ.

ಸುದೀಪ್ ಅಭಿಮಾನಿಗಳಿಗಂತೂ  ಇದು ಶಾಕಿಂಗ್ ನ್ಯೂಸ್ !  ಇಷ್ಟು ದಿನ ಕಿಚ್ಚ ಮಾಡಲ್ಲ ಅಂತಿದ್ದ ಸುದ್ದಿ ನಿಜವಾಗಿದೆ.  ಸಿನಿರಸಿಕರಿಗೆ ಸರ್ಪ್ರೈಸ್ ಎಂಬಂತೆ ‘ಕೆಂಪೇಗೌಡ-2’ ಚಿತ್ರಕ್ಕೆ ಕೋಮಲ್ ನಾಯಕನಾಗಿ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಸ್ಯಾಂಡಲ್ ವುಡ್ ಬೆಳ್ಳಿತೆರೆ ಮೇಲೆ ‘ಕೆಂಪೇಗೌಡ’ನಾಗಿ ಕೋಮಲ್ ಅಬ್ಬರಿಸಿಲಿದ್ದಾರೆ.

ಮೀಸೆ ಬಿಟ್ಟಿರೋರೆಲ್ಲ ಗಂಡಸರಲ್ಲ, ಮೀಸೆ ತಿರುಗಿಸೋರೆಲ್ಲ ಕೆಂಪೇಗೌಡ ಅಲ್ಲ” ಎಂಬ ಖಡಕ್ ಡೈಲಾಗ್ ನಿಂದ ಕೋಮಲ್ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ತಮಿಳಿನ ಬ್ಲಾಕ್ ಬಾಸ್ಟರ್ ಮೂವಿ ಸಿಂಗಂ-2 ನ ರೀಮೇಕ್ ಕೆಂಪೇಗೌಡ-2 ಅಂತಿದ್ದಾರೆ ಸಿನಿಮಂದಿ. ಕೆಂಪೇಗೌಡ ನಿರ್ದೇಶಕ ಶಂಕರೇಗೌಡ ಅವರೇ ಇದಕ್ಕೂ ಆಕ್ಷನ್ ಕಟ್ ಹೇಳ್ತಿದ್ದಾರೆ.

ಹೆಬ್ಬುಲಿ – 2 ಮಾಡೋಲ್ವಾ ? ಎಲ್ಲರಂತೆ ಆಗೋಲ್ವಾ ಕಿಚ್ಚ ಸುದೀಪ್?

ಕಿಚ್ಚ ಸುದೀಪ್

ಎರಡು ಮೂರು ದಿನಗಳಿಂದ ಸುದೀಪ್ ಬಗ್ಗೆ ನಾನಾ ಸುದ್ದಿಗಳು ಹರಿದಾಡುತ್ತಿದ್ದವು.

ಕೆಂಪೇಂಗೌಡ ಭಾಗ 2 ಸಿನಿಮಾ ಬರತ್ತಂತೆ, ಅದನ್ನು ಸುದೀಪ್ ನಿರ್ದೇಶನ ಮಾಡುತ್ತಿದ್ದಾರೆ ಅನ್ನೋದು ಒಂದು ಸುದ್ದಿ. ಆ ಸುದ್ದಿ ಸಿಂಗಂ 2 ಸಿನಿಮಾ ಬಂದಾಗಲೂ ಹರಿದಾಡುತ್ತಿತ್ತು. ಸಿಂಗಂ 1 ಇಲ್ಲಿ ಕೆಂಪೇಗೌಡ ಆಗಿತ್ತು. ಅದೇ ಥರ ಸಿಂಗಂ 2 ಸಿನಿಮಾ ಬಂದಾಗ ಕೆಂಪೇಗೌಡ 2 ಸಿನಿಮಾ ಬರುತ್ತದೆ ಅನ್ನೋ ಕುತೂಹಲ ಸಹಜವಾಗಿತ್ತು. ಆದರೆ ಈಗ ಆ ಸುದ್ದಿ ಹರಿದಾಡಿದ್ದರ ಔಚಿತ್ಯ ಏನು ಅಂತ ಗೊತ್ತಾಗಿರಲಿಲ್ಲ.
ಅದೆಲ್ಲಾ ಆದ ತಕ್ಷಣವೇ ಕೆಂಪೇಗೌಡ ಭಾಗ 2 ಅಲ್ಲ, ಅದಕ್ಕೆ ಬದಲಾಗಿ ಕಿಚ್ಚ ಹೆಬ್ಬುಲಿ ಭಾಗ2 ಸಿನಿಮಾ ನಿರ್ದೇಶಿಸುತ್ತಾರೆ ಅನ್ನುವ ಸುದ್ದಿ ಹರಿದಾಡತೊಡಗಿತು.

ಆ ಸುದ್ದಿ ದಟ್ಟವಾಗಿ ಹಬ್ಬಿದಾಗ ಒಂದಷ್ಟು ಮಂದಿ ಇದೇನಿದು ಅಂತ ಮೂಗಿನ ಮೇಲೆ ಬೆರಳಿಟ್ಟಿದ್ದರು. ಹೇಳಿಕೇಳಿ ಹೆಬ್ಬುಲಿ ಸಿನಿಮಾದ ನಿರ್ದೇಶಕ ಕೃಷ್ಣ. ಆದರೆ ಹೆಬ್ಬುಲಿ ಭಾಗ2 ಸುದೀಪ್ ನಿರ್ದೇಶಿಸುವುದು ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಕುತೂಹಲಕ್ಕೆ ಎಡೆ ಮಾಡಿತ್ತು. ಅಲ್ಲದೇ ಸುದೀಪ್ ಗೆಲುವಿನ ಮಾಯೆಗೆ ಸಿಲುಕಿಕೊಂಡರೆ ಅನ್ನೋ ಅನುಮಾನ ಕೆಲವರಲ್ಲಿ ಹುಟ್ಟಿದ್ದು ಸುಳ್ಳಲ್ಲ.
ಆದರೆ ಸುದೀಪ್ ಅವನ್ನೆಲ್ಲಾ ಪಕ್ಕಕ್ಕೆ ಸರಿಸಿ ತಾವೊಬ್ಬ ವಿಭಿನ್ನ ವ್ಯಕ್ತಿ ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಅವರು ಇವತ್ತು ತಾನು ಹೆಬ್ಬುಲಿ ಭಾಗ2 ಸಿನಿಮಾ ನಿರ್ದೇಶಿಸುತ್ತೇನೆ ಅನ್ನೋ ಸುದ್ದಿ ಹಬ್ಬಿತ್ತು. ಅದು ಸುಳ್ಳು. ಹೆಬ್ಬುಲಿ ಕೃಷ್ಣ ಅವರ ಮಗು. ಎಂದು ಟ್ವೀಟ್ ಮಾಡಿದ್ದರು. ಆ ಮೂಲಕ ತಾನು ಹೆಬ್ಬುಲಿ ಭಾಗ2 ಸಿನಿಮಾ ನಿರ್ದೇಶಿಸುತ್ತಿಲ್ಲರ ಅನ್ನುವುದನ್ನು ಸ್ಪಷ್ಟಪಡಿಸಿದ್ದರು.

ಅಂದಹಾಗೆ ಸುದೀಪ್ ಹೆಬ್ಬುಲಿ ಸಿನಿಮಾದ ನಿರ್ಮಾಪಕ ಉಮಾಪತಿಯವರಿಗೆ ಇನ್ನೊಂದು ಸಿನಿಮಾ ನಿರ್ದೇಶಿಸಿ ಕೊಡಲಿದ್ದಾರಂತೆ.

ಚಕ್ರವರ್ತಿ ಹವಾ ಜೋರು ..ಜೋರು ..

10 ರಾಜ್ಯಗಳು – 450 ಪ್ಲಸ್ ಥಿಯೇಟರ್ ಗಳು- ಚಕ್ರವರ್ತಿ ಬರುತ್ತಿದ್ದಾನೆ. ದರ್ಶನ್  ಅಭಿಮಾನಿಗಳು  ಹುಚ್ಛೆದ್ದು  ಕಾಯ್ತಿರೋ ಸಿನಿಮಾವಿದು.
ಚಕ್ರವರ್ತಿ ಧಮಾಕ ! ಎಲ್ಲೆಲ್ಲಿ ?
– ಇಂದು ರಾತ್ರಿ 12 ಗಂಟೆಯಿಂದಲೇ ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರ ಪ್ರದರ್ಶನ
– ಸಂತೋಷ್ ಥಿಯೇಟರ್ ಮುಂದೆ ತೂಗುದೀಪ ಶ್ರೀನಿವಾಸ್ ಕಟೌಟು
ಪುಣೆ, ಮಹಾರಾಷ್ಟ್ರ, ಗೋವಾ, ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು, ದೆಹಲಿ, ಉತ್ತರ ಪ್ರದೇಶ, ಕೇರಳ ಹೀಗೆ ಒಟ್ಟು ಹತ್ತು ರಾಜ್ಯಗಳಲ್ಲಿ ಏಕಕಾಲಕ್ಕೆ ಚಕ್ರವರ್ತಿ ಸಿನಿಮಾ ಬಿಡುಗಡೆಯಾಗಲಿದೆ. ಬಹುಶಃ ಹೀಗೆ ಗ್ರಾಂಡಾಗಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲಿರಬೇಕು.
ಅಷ್ಟೇ ಅಲ್ಲ ಸುಮಾರು 450ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಚಕ್ರವರ್ತಿ ಸಿನಿಮಾ ಬಿಡುಗಡೆಯಾಗಲಿದೆ. ಇದೂ ಕೂಡ ಒಂದು ದಾಖಲೆಯೇ. ಅದಕ್ಕೆ ಕಾರಣ ಬೇರೇನೂ ಅಲ್ಲ. ದರ್ಶನ್ ಎಬ್ಬಿಸಿರುವ ಹವಾ. ಟ್ರೇಲರ್ ನಲ್ಲಿ ಸೈಲೆಂಟಾಗೇ ಬಾಂಬ್ ಹಾಕಿರುವ ದರ್ಶನ್ ತನ್ನ ವಿಭಿನ್ನ ಗೆಟಪ್ ನಿಂದಲೂ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಸಿದ್ದಾರೆ. ಹಾಗಾಗಿ ಇಷ್ಟೊಂದು ಗ್ರಾಂಡಾಗಿ ಸಿನಿಮಾ ಬಿಡುಗಡೆಯಾಗುತ್ತಿದೆ.
ಅಭಿಮಾನಿಗಳಲ್ಲಿ ಎಷ್ಟೊಂದು ಕ್ರೇಜ್ ಇದೆ ಎಂದರೆ ಇಂದು ರಾತ್ರಿ 12 ಗಂಟೆಯಿಂದಲೇ ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರ ಪ್ರದರ್ಶನ ಆರಂಭವಾಗುವ ಸಾಧ್ಯತೆ ಇದೆ.
ಇನ್ನೊಂದು ವಿಶೇಷವೆಂದರೆ ಸಂತೋಷ್ ಥಿಯೇಟರ್ ನಲ್ಲಿ ವಿಭಿನ್ನ ಕಟೌಟು ಹಾಕಲಾಗಿದೆ. ಅದರಲ್ಲಿ ಆಚೀಚೆ ದರ್ಶನ್ ಮತ್ತು ದಿನಕರ್. ಮಧ್ಯದಲ್ಲಿ ತೂಗುದೀಪ ಶ್ರೀನಿವಾಸ್. ಅದನ್ನು ನೋಡಿದರಂತೂ ದರ್ಶನ್ ಅಭಿಮಾನಿಗಳು ಮಂತ್ರಮುಗ್ಧರಾಗುವುದು ಖಂಡಿತಾ.

“ಕಿರಿಕ್” ಸಾನ್ವಿ ಈಗ ಟಾಲಿವುಡ್ ಬೆಡಗಿ

ಕಿರಿಕ್ ಪಾರ್ಟಿ ಸಾನ್ವಿ ಮುಖದ ತಣ್ಣನೆಯ ಚೆಲುವಿಗೆ ಮಾರುಹೋಗದವರಿಲ್ಲ. ಸಾನ್ವಿ  ಅಂದ್ರೆ ರಶ್ಮಿಕಾ ಮಂದಣ್ಣ ಸ್ಯಾಂಡಲ್ ವುಡ್ ನಲ್ಲಿ ಆಹಾ ಸುಂದರಿ ..ಅನ್ನಿಸಿಕೊಂಡು  ಈಗ ಟಾಲಿವುಡ್ ಬೆಡಗಿಯಾಗಲು ಹೊರಟಿದ್ದಾರೆ.

ಕಿರಿಕ್ ಪಾರ್ಟಿ ನಂತರ  ತೆಲುಗಿನಲ್ಲಿ ಆಫರ್ ಗಳ ಮಳೆಯೇ ಹರಿಯುತ್ತಿದೆಯಂತೆ . ಆದ್ರೆ ಇದುವರೆಗೂ ಎಲ್ಲೂ ಗುಟ್ಟು ಬಿಟ್ಟುಕೊಡದ ರಶ್ಮಿಕಾ ಸೈಲೆಂಟ್ ಗೇ ಟಾಲಿವುಡ್ ಅಂಗಳಕ್ಕೆ ಜಿಗಿದಿದ್ದಾರೆ. ನಾಗಶೌರ್ಯ ಜೊತೆ ಸ್ಕ್ರೀನ್  ಶೇರ್ ಮಾಡ್ತಿರುವ ರಶ್ಮಿಕಾ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಈ ಚಿತ್ರದ ಮುಹೂರ್ತ ಕೂಡ ಅದ್ಧೂರಿಯಾಗೆ ನೆರವೇರಿದೆ.

ಈ ಚಿತ್ರಕ್ಕೆ ವೆಂಕಿ ಕುಡುಮುಲ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ಇವರು ನಿರ್ದೇಶಕ ತ್ರಿವಿಕ್ರಮ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ರಂತೆ. ಇನ್ನೂ  ಹೆಸರಿಡದೆ ಇರೋ ಸಿನಿಮಾದಲ್ಲಿ ಕನ್ನಡದ ಹುಡುಗಿ ರಶ್ಮಿಕಾ ನಾಯಕಿ. ಎಲ್ಲವೂ ಅಂದುಕೊಂಡಂತೆ ಆದ್ರೆ ಈ ತಿಂಗಳ ಕೊನೆಯಲ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ.

ಇನ್ನೊಂದ್ ಸ್ಪೆಷಲ್ ಸುದ್ದಿ ಏನಪ್ಪಾ ಅಂದ್ರೆ   ಅಲ್ಲು ಅರ್ಜುನ್ ಅವರ ಚಿತ್ರದಲ್ಲು ನಾಯಕಿ ಪಾತ್ರಕ್ಕೆ ರಶ್ಮಿಕಾ ಅವರಿಗೆ ಬುಲಾವ್ ಬಂದಿದ್ಯಂತೆ. ಸದ್ದಿಲ್ಲದೆ ಸುದ್ದಿಯಲ್ಲಿರೋ ರಶ್ಮಿಕಾ ಅವರ ಸಿನಿ ಜರ್ನಿ ಜಬರ್ದಸ್ತಾಗಿ ನಡೆಯಲಿ.

_ಪಲ್ಲವಿ

ಚಾಕೊಲೇಟ್ ಗರ್ಲ್ ನೇಹ ಡ್ಯಾನ್ಸ್ ಗೆ 9 ಲಕ್ಷ ಜನ ಫಿದಾ!

ಮುಂಗಾರುಮಳೆ ಮೂಲಕ ಬಿಗ್ ಸ್ಕ್ರೀನ್ ಗೆ ಎಂಟ್ರಿ ಕೊಟ್ಟಿದ್ದ ನೇಹಾ ಶೆಟ್ಟಿ. ವೇಗವಾಗಿ ಜನರಿಗೆ ಹತ್ತಿರವಾಗಿಬಿಟ್ರು. ಆದ್ರೆ ಈಗ ಭಾರಿ ಜನಪ್ರಿಯತೆ ಜೊತೆಗೆ ತನ್ನದೆ ರ್ಯಾಪೋ  ಕ್ರಿಯೇಟ್ ಮಾಡಿರುವ ಚಂದನ್ ಶೆಟ್ಟಿ ಅವರ ಮತ್ತೊಂದು ಆ್ಯಲ್ಬಂ ಸಾಂಗ್ ಗೆ ಹೆಜ್ಜೆ ಹಾಕಿರೋದೊ ಇದೇ ನೇಹ ಶೆಟ್ಟಿ.

3 ಪೆಗ್ ನಿಂದ   ಸೈ ಎನಿಸಿಕೊಂಡಿದ್ದ ಚಂದನ್ ಚಾಕೊಲೇಟ್ ಗರ್ಲ್ ಹಾಡನ್ನ ಸಿದ್ಧಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್ ಗಳ ಸುರಿಮಳೆ ಪಡೀತಿದ್ದಾರೆ.

ಸತತ 48 ಗಂಟೆಗಳ ಕಾಲ ಈ ಸಾಂಗ್ ಯುಟ್ಯೂಬ್ ಟ್ರೆಂಡಿಂಗ್ ನಲ್ಲಿ ನಂ. 1  ಸ್ಥಾನ ಪಡೆದುಕೊಂಡಿದೆ. ಮತ್ತೊಂದು ವಿಶೇಷ ಅಂದ್ರೆ ಈ ಹಾಡಿಗೆ ಕನ್ನಡ ಗೊತ್ತಿಲ್ಲದವರೂ ಫಿದಾ ಆಗ್ತಿದ್ದಾರಂತೆ.

ಮುಂಗಾರುಮಳೆ ಆದ ನಂತರ ಒಂದಷ್ಟು  ಬ್ಯುಸಿ ಆಗಿದ್ದ ನೇಹ ಶೆಟ್ಟಿ ಚಂದನ್ ಅವರ  ರ್ಯಾಪ್ ಸಾಂಗ್ ಗೆ ಹೆಜ್ಜೆ ಹಾಕಲು ಒಪ್ಪಿದ್ರಂತೆ. ಈ ವಿಡಿಯೋ ಅಪ್ ಲೋಡ್ ಆಗ್ತಿದ್ದಂತೆ 9 ಲಕ್ಷ ಜನ ಫಿದಾ ಆಗಿ ನಂ 1 ಪಟ್ಟ ಕೊಟ್ಟಿರೋದಂತು ಸುಳ್ಳಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಆಶೀರ್ವಾದ ಪಡೆದ ಪುನೀತ್ ರಾಜ್ ಕುಮಾರ್ !

 ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಸಿನಿಮಾ ಭಾವನಾತ್ಮಕವಾಗಿ ಜನಪ್ರೀತಿ ಗಳಿಸಿಕೊಂಡಿದ್ದು ಎಲ್ಲರಿಗೂ ಗೊತ್ತಿದೆ. ಸೋಷಿಯಲ್ ಮೀಡಿಯಾಗಳಲ್ಲಿ, ಗೆಳೆಯರ ಗುಂಪಲ್ಲಿ ಎಲ್ಲಿ ನೋಡಿದರೂ ರಾಜಕುಮಾರ ಸಿನಿಮಾದ್ದೇ ಸುದ್ದಿ.
ಈಗ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ರಾಜಕುಮಾರನನ್ನು ನೋಡಿ ಮೆಚ್ಚಿದ್ದಾರೆ. ನಿನ್ನೆ ರಾಜಕುಮಾರ ಸಿನಿಮಾ ನೋಡಿದ ಮೇಲೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ” ಪುನೀತ್ ಅಭಿನಯದ “ರಾಜಕುಮಾರ”ಚಿತ್ರ ಡಾ.ರಾಜ್ ಚಿತ್ರಗಳ ನೆನಪನ್ನು ಮರುಕಳಿಸಿತು. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಇಂಥ ಚಿತ್ರಗಳು ಇನ್ನಷ್ಟು ಬರಲಿ ಎಂದಿದ್ದಾರೆ.
ಅಷ್ಟೇ ಅಲ್ಲದೆ  ಸಿದ್ದರಾಮಯ್ಯ ಇಂದು  ಚಿತ್ರತಂಡವನ್ನು ಅಭಿನಂದಿಸಿದ್ದಾರೆ. ಪುನೀತ್ ರಾಜ್ ಕುಮಾರ್, ಸಂತೋಷ್ ಆನಂದರಾಮ್, ನಿರ್ಮಾಪಕ ವಿಜಯ್ ಕಿರಗಂದೂರು ಇಂದು ಸಿದ್ದರಾಮಯ್ಯ ಅವರ ನಿವಾಸಕ್ಕೆ ಹೋಗಿದ್ದರು. ಪುನೀತ್ ಮತ್ತು ಸಂತೋಷ್ ಮುಖ್ಯಮಂತ್ರಿಯವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ತಂಡದ ಪ್ರಯತ್ನಕ್ಕೆ ಶ್ಲಾಘಿಸಿದ್ದಾರ

ಪ್ರಥಮ್ – ಸಂಜನಾ ಜೊತೆಯಲ್ಲಿ ರಾತ್ರಿ ಕಳೆದ್ರಾ..?

ಪ್ರಥಮ್ -ಸಂಜನಾ ಬಗ್ಗೆ ಹರಿದಾಡಿದ ಸುದ್ದಿ ,ಅದಕ್ಕೆ ಮಾಧ್ಯಮ (ನಮ್ಮನ್ನೂ  ಸೇರಿಸಿ )ಪ್ರತಿಕ್ರಿಯಿಸಿದ ರೀತಿಯ ಬಗ್ಗೆ ciniaada.com ನ ಓದುಗರು ಕಳುಹಿಸಿದ ಪತ್ರವನ್ನ ಯಥಾವತ್ತು ಇಲ್ಲಿ ಪ್ರಕಟಿಸುತ್ತಿದ್ದೇವೆ. ನಾವು ಹೇಳಿದ್ದೆಲ್ಲವನ್ನು  ಜನ  ಯಾವ ವಿಶ್ಲೇಷಣೆ ಇಲ್ಲದೆ ನಂಬಿಬಿಡುತ್ತಾರೆ ಎಂಬ ಯಾವ ನಂಬಿಕೆಯೂ ನಮಗಿಲ್ಲ . ನಮ್ಮ ತಪ್ಪುಗಳನ್ನು ಎತ್ತಿ ತೋರಿಸುವ ನೈತಿಕ ಹಕ್ಕು ಜನರಿಗೆ ಇದೆ . ಅವರ ಮಾತುಗಳನ್ನು ,ಭಾವನೆಗಳನ್ನು ಕೇಳಿಸಿಕೊಳ್ಳೋಣ ಎಂಬ ದೃಷ್ಟಿಯಿಂದ  ಇಲ್ಲಿ ಪ್ರಕಟಿಸುತ್ತಿದ್ದೇವೆ ಹೊರತು ಯಾರನ್ನೂ  ಹಂಗಿಸುವ ಉದ್ದೇಶ ಇಲ್ಲಿಲ್ಲ .
ಪ್ರಥಮ್ -ಸಂಜನಾ ಜೊತೆ ರಾತ್ರಿ ಕಳೆದ್ರಾ ?
ಇದು ಇವತ್ತು ಮಾಧ್ಯಮಗಳಲ್ಲಿ ಚರ್ಚೆ ವಿಷಯ. ನಾನು ಸಂಜನಾ ಸ್ಥಾನದಲ್ಲಿ ನಿಂತಾಗ ನನ್ನನ್ನು ಕೇಳಿದ್ರೆ ಹೌದು ಏನಿವಾಗ..? ಅನ್ನೋ ಪ್ರಶ್ನೆ ಕೇಳ್ತೀನಿ. ಅದೇ ಓರ್ವ ಪತ್ರಕರ್ತೆ ಸ್ಥಾನದಲ್ಲಿ ನಿಂತಾಗ ಕೇಳಿದ್ರೆ ನಮಗೆ ಯಾಕೆ ಬೇಕು ಅವರು ಯಾರ ಜೊತೆ ಇದ್ದರೆ ಏನಂತೆ ಬಿಟ್ಟುಬಿಡಿ. ವಂಚನೆ  ಮಾಡಿದರೆ ಮಾತ್ರ ನೀವು ಎಂಟ್ರಿಯಾಗಿ ಅನ್ನೋ ಉತ್ತರ ಕೊಡ್ತೀನಿ.
ಅದೇನೇ ಇರಲಿ ಪ್ರಥಮ್ ಹಾಗೂ ಸಂಜನಾ ಬಿಗ್ ಬಾಸ್ ನಲ್ಲಿ ಒಟ್ಟಿಗೆ ಸ್ಪರ್ಧಿಗಳಾಗಿದ್ದವರು. ಹೊರಗಡೆ ಬಂದ ಬಳಿಕವೂ ಹಲವಾರು ಪ್ರೊಜೆಕ್ಟ್ ಗಳಲ್ಲಿ ಒಟ್ಟಾಗಿ ಕೆಲಸ ಮಾಡ್ತಿದ್ದಾರೆ. ಒಂದು ಕೆಲಸವನ್ನು ಒಟ್ಟಿಗೆ ಮಾಡುವಾಗ ಒಮ್ಮೊಮ್ಮೆ ಒಟ್ಟಿಗೆ ಹೋಗುವುದು, ಹೋಟೆಲ್ ನಲ್ಲಿ ಊಟಕ್ಕೆ ಹೋಗುವುದು ಸಹಜ. ಅಷ್ಟಿದ್ದ ಮಾತ್ರಕ್ಕೆ ನೀವು ಯಾರೊಂದಿಗೋ ಸಂಬಂದ ಕಲ್ಪಿಸಿಬಿಟ್ಟರೇ..? ಇದೇನಾ ಸಮಾಜದಲ್ಲಿ ನಾಲ್ಕನೆ ಅಂಗವಾಗಿ ಕೆಲಸ ಮಾಡುವ ಪರಿ..? ಯಾರೋ ಕೊಟ್ಟ ಸುದ್ದಿಯ ಸತ್ಯಾಸತ್ಯತೆ ತಿಳಿಯದೆ   ಮಾಧ್ಯಮಗಳು  ಅಷ್ಟೊಂದು ಬೊಬ್ಬಿರಿದು ಚರ್ಚೆ ಮಾಡುವ ಅಗತ್ಯವಿತ್ತೇ ಅನ್ನೋದನ್ನ ತಮ್ಮ ಹೃದಯ ಮುಟ್ಟಿ ಕೇಳಿಕೊಳ್ಳಿ.
ನಾನು ಊಟಕ್ಕೆ ಹೋಗುವಾಗ ನನ್ನ ಸಹೋದ್ಯೋಗಿಗಳ ಜೊತೆ ಹೋಗ್ತೀನಿ. ಹಾಗಾಗ ಫೋಟೋಗಳನ್ನು ಕ್ಲಿಕ್ಕಿಸುತ್ತೀನಿ.. ಅವರಿಗೂ ನನಗೂ ಸಂಬಂಧ ಕಲ್ಪಿಸಿದ್ರೆ ಮೆಟ್ಟಲ್ಲಿ ಹೊಡಿತೀನಿ. ಅದೇ ರೀತಿ ನಿಮಗ್ಯಾಕೆ ರೀ ಅವರ ವೈಯಕ್ತಿಕ ವಿಚಾರ.? ಅವರು ಸೆಲೆಬ್ರಿಟಿಗಳು ಅನ್ನೋ ಕಾರಣಕ್ಕೆ ಯಾರ ಜೊತೆಯೂ ಹೊರಗೆ ಹೋಗಲೇ ಬಾರದೆ.? ನಿಮ್ಮ ಕ್ಷೇತ್ರದಲ್ಲಿ ಎಷ್ಟು ಜನ ಕಾಮುಕರಿಲ್ಲ ? ಅವರ ಬಗ್ಗೆ ಮಾತ್ರ ಗ್ಯಾಪ್ ಚುಪ್ ಅಂತೀರಿ. ಹೋಗ್ಲಿ  ಪ್ರಥಮ್ -ಸಂಜನಾ  ಅವರೇನಾದರೂ ಸಮಾಜಕ್ಕೆ ಮಾರಕವಾಗುವಂತ ತಪ್ಪನ್ನು ಮಾಡಿದರೆ ಖಂಡಿತ ಕೇಳಿ, ಕೆಲವೊಂದಿಷ್ಟು ಜನ ನಿಮ್ಮನ್ನು ಫಾಲೋ ಮಾಡ್ತಾರೆ, ನೀವೇ ಹೀಗೆ ಮಾಡಿದರೆ ಹೇಗೆ.? ಅಂತಾ. ಅದನ್ನು ಬಿಟ್ಟು ಅವಳು ಅವನ ಜೊತೆ ಹೋದಳಂತೆ, ಇವನಿಗೆ ಹುಡುಗಿಯರ ಚೂಲಿದೆಯಂತೆ ಅಂತೆಲ್ಲಾ ವಿವಾದ ಮಾಡ್ತೀರಲ್ಲ ನಾಚಿಕೆ ಆಗ್ಬೇಕು ನಿಮಗೆ.
ಸಂಜನಾ ಸ್ಥಾನದಲ್ಲಿ ನಿಮ್ಮ ಮಗಳನ್ನೋ ಅಕ್ಕ,ತಂಗಿಯನ್ನೋ ಒಮ್ಮೆ ಕಲ್ಪಿಸಿಕೊಳ್ಳಿ, ಒಂದು ವೇಳೆ ನಿಮ್ಮ ಮಗಳೋ ಅಕ್ಕ ತಂಗಿಯೋ ಅವರ ಸ್ನೇಹಿತರ ಜೊತೆ ಊಟಕ್ಕೋ ಕಾಫಿಗೋ ತಮ್ನ ಸ್ನೇಹಿತರ ಜೊತೆ ಹೋದಾಗ ಮೂರನೇ ವ್ಯಕ್ತಿ ನಿಮ್ಮವರ ಬಗ್ಗೆ ಇದೇ ರೀತಿ ಮಾತನಾಡಿದರೆ ನೀವು ಏನು ಮಾಡುತ್ತೀರಿ ಎಂಬ ಅರಿವು ಇದೆಯೇ.?
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೆಣ್ಣು, ಗಂಡು ಪ್ರಾಯ ವ್ಯವಸ್ಥೆಗೆ ಬಂದ ಬಳಿಕ ತಂದೆ ತಾಯಂದಿರೇ ಅವರ ಸ್ವಂತ ವಿಚಾರಕ್ಕೆ ತಲೆ ಹಾಕುವುದಿಲ್ಲ. ಆದರೆ ಆಕೆ ತನ್ನ ತಾಯಿ ಜೊತೆ ಒಂದು ಕಾರ್ಯಕ್ರಮಕ್ಕೆ ಹೋಗಿ ಬಂದರೆ ಸಂಬಂಧವನ್ನೇ ಕಲ್ಪಿಸಿ ಬಿಟ್ಟಿರಲ್ಲ ಶಹಬ್ಬಾಸ್. ನಿಮ್ಮ ಸಮಾಜ ಮುಖಿ ಚಿಂತನೆಗೆ ನಿಮಗೆ ನೀವೇ ಬೆನ್ನು ತಟ್ಟಿಕೊಳ್ಳಬೇಕು.
ನಿಜಾ ಸ್ವಾಮಿ ಜನರಿಗೆ ನಕಾರಾತ್ಮಕ ವಿಚಾರಗಳನ್ನು ಹೇಳುತ್ತಾ ಸಾಗಿದರೆ ಆಕರ್ಷಣೆ  ಮಾಡೋದು ಸುಲಭ. ಹಾಗಂದ ಮಾತ್ರಕ್ಕೆ ನೀವು ಕೇವಲ ನಕಾರಾತ್ಮಕ ವಿಚಾರಗಳ ಹಿಂದೆ ಬಿದ್ದು ಸಮಾಜವನ್ನು ಯಾವ ದಿಕ್ಕಿಗೆ ಕೊಂಡೊಯ್ಯುತ್ತಿದ್ದೀರಿ ಅನ್ನೋ ಬಗ್ಗೆ ಕ್ಷಣ ಮಾತ್ರ ಯೋಚಿಸಿ. ಸಾಧ್ಯ ಆದರೆ ಮುಂದಾದರೂ ಒಳ್ಳೆಯ ವಿಚಾರಗಳನ್ನು ಹೇಳಿ ಸಮಾಜದ ಹಿತ ಕಾಪಾಡುವ   4ನೇ ಅಂಗ ಅನ್ನೋದನ್ನ ಸಾಬೀತು ಮಾಡಿ.
ಒಂದು ಹೆಣ್ಣು ಹುಡುಗಿಯ ಭವಿಷ್ಯದ ಪ್ರಶ್ನೆ ಅನ್ನೋದನ್ನು ಯೋಚಿಸದೇ ತಮ್ಮ ಬೇಳೆ ಬೇಯಿಸಿಕೊಂಡ ನಿಮ್ಮ ದೊಡ್ಡತನಕ್ಕೆ ಸಲಾಮು. ಆ ಸುದ್ದಿ ನಿಜವಾದರೂ ಅಪರಾಧ ಅಲ್ಲ ಅನ್ನೋ ಕನಿಷ್ಠ ಜ್ಞಾನ ಇಲ್ಲದಾಗಿದ್ದು ಮಾತ್ರ ದುರಂತ. ಸತ್ಯವೋ ಮಿಥ್ಯವೋ ಸಂಜನಾ ಪ್ರತಿಕ್ರಿಯೆ ಕೊಡಬಾರದಿತ್ತು. ಕೋರ್ಟ್‌ ಮೂಲಕ ಕಾನೂನು ಕ್ರಮ ಕೈಗೊಂಡು ನನ್ನ ಮೇಲೆ ವೃಥಾ  ಆರೋಪ ಮಾಡಿರುವ ಇಷ್ಟು ಸಂಸ್ಥೆಗಳು ಸಾಕ್ಷಿಯನ್ನು ಹಾಜರುಪಡಿಸಲಿ, ಇಲ್ಲದಿದ್ದರೆ ನನಗೆ ಆಗಿರುವ ಮಾನಹಾನಿಗೆ ನಷ್ಟ ಕಟ್ಟಿಕೊಡಲಿ ಅಂತಾ ದೂರು ನೀಡಿದ್ದರೆ ಚೆನ್ನಾಗಿರುತ್ತಿತ್ತು.
ದಿವ್ಯಾ ಕೊಡಗು

ಮೇರುಪರ್ವತದ ಜೊತೆಗೆ ಹುಲುಮಾನವನ ಅದ್ಬುತ ಕ್ಷಣಗಳು

ಅವತ್ತು ಏಪ್ರಿಲ್ 1 2006, ಇವತ್ತಿಗೆ ಸರಿಯಾಗಿ ಹನ್ನೊಂದು ವರ್ಷದ ಕೆಳಗೆ, ಅಂದ್ರೆ ಅಣ್ಣಾವ್ರು ತೀರಿಕೊಳ್ಳೊಕೆ ಕೇವಲ 12 ದಿನ ಮೊದಲು, ನಾವು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಮ್ಮ ‘ತಿಮ್ಮ’ ಸಿನಿಮಾದ ಡಬ್ಬಿಂಗ್ ಮಾಡ್ತಾ ಇದ್ವಿ, ಮೇಲ್ಗಡೆ ಫ್ಲೂರ್ ನಲ್ಲಿ ‘ಅರಸು’ ಸಿನಿಮಾದ ಡಬ್ಬಿಂಗ್ ನಡೀತಾ ಇತ್ತು , ಅಲ್ಲಿ ಸಿಗ್ತಿದ್ದ ದಿನಗಳಲ್ಲಿ ಅಪ್ಪು ಸಾರ್ ಹಾಯ್ ಊಟ ಆಯ್ತಾ, ಕಾಫಿ ಆಯ್ತಾ ಅಂತ ಕೇಳ್ತಾ ಸ್ಮೈಲ್ ಮಾಡ್ಕೊಂಡ್ ಹೊಗೊರು.

ಅವತ್ತು ಬಂದು ತುಂಬಾ ರಿಕ್ವೆಸ್ಟಿಂಗ್ ಟೋನ್ ಅಲ್ಲಿ ನಮ್ ಡೈರೆಕ್ಟರ್ ಸಾಯಿಸಾಗರ್ ಅವ್ರ ಹತ್ರ ಬಂದು

” ಅಪ್ಪಾಜಿ ಅರಸು ಸಾಂಗ್ಸ್ ನೋಡೋಕೆ ಬರ್ತಾ ಇದಾರೆ ಅವ್ರಿಗೆ ಮೇಲ್ಗಡೆ ಫ್ಲೂರ್ ಗೆ ಹತ್ತಿಕೊಂಡ್ ಹೋಗೋಕೆ ಆಗಲ್ಲ ಹಾಗಾಗಿ ಪ್ಲೀಸ್ ನಿಮ್ ಫ್ಲೂರ್ ನ ಒಂದ್ ಅರ್ಧ ಗಂಟೆ ಮಟ್ಟಿಗೆ ಬಿಟ್ ಕೊಡೋಕೆ ಆಗತ್ತಾ “ಅಂದ್ರು .

ಐಯ್ಯೊ ಇದು ನಮ್ ಸೌಭಾಗ್ಯ, ಖಂಡಿತ ಬನ್ನಿ ಅಂದ್ರು,

ಅದಾದ ಅರ್ಧ ಗಂಟೆಲಿ ಅಣ್ಣಾವ್ರು, ಪರ್ವಾತಮ್ಮ, ಶಿವಣ್ಣ ಎಲ್ಲರೂ ಬಂದ್ರು, ಅಣ್ಣಾವ್ರು ಸ್ಟುಡಿಯೋ ಒಳಗಡೆ ಬರ್ತಿದ್ದ ಹಾಗೆ ನಮ್ಮೆಲ್ಲರ ಮೈಯ್ಯಲ್ಲಿ ಮಿಂಚಿನ ಸಂಚಾರ.

ಬಂದವರೇ ಅಲ್ಲಿ ನಿಂತಿದ್ದ ನಮಗೆ ನಮಸ್ಕರಿಸಿ ಎಲ್ಲಾ ಅರಾಮಿದಿರಾ ಅಂದ್ರು.

ನಮಗ್ಯಾರಿಗೂ ಮಾತೆ ಬರ್ಲಿಲ್ಲ, ಇಡೀ ಸ್ಟುಡಿಯೋ ನ ಸುತ್ತಾಡಿ ತುಂಬಾ ಬದ್ಲಾಯಿಸಿದಿರಲ್ಲ ಅಂತ ಸ್ಟುಡಿಯೋ ಮ್ಯಾನೇಜರ್ ಹತ್ರ ಕೇಳಿದ್ರು, ಒಂದು ಟಾಯಿಲೆಟ್ ಹತ್ರ ಹೋಗಿ ಅಪ್ಪು ನೀನು ಚಿಕ್ಕನ್ನಿರೋವಾಗ ತುಂಬಾ ಸಾರಿ ಇಲ್ಲೇ ನಿನ್ನ ತೊಟ್ಟಿಲು ಕಟ್ಟಿ ಮಾಲ್ಗಸ್ತಿದ್ವಿ ಅಂತ ನೆನಪಿಸಿಕೊಂಡರು.

ಈ ಹೊತ್ತಲ್ಲಿ ಅಕ್ಕ ಪಕ್ಕ ಶಿವಣ್ಣ, ಪರ್ವಾತಮ್ಮ ಅವರನ್ನ ಹಿಡ್ಕೊಂಡಿದ್ರು.. ಆ ಟೈಮ್ ಅಲ್ಲಿ ಶಿವಣ್ಣ ಫೋನ್ ಅಟನ್ಡ್ ಮಾಡೋಕೆ ಅಂತ ಸ್ವಲ್ಪ ದೂರ ಹೋದ್ರು. ಅಲ್ಲೇ ಇದ್ದ ನಾನು ಅಣ್ಣಾವ್ರ ಕೈ ಹಿಡ್ಕೊಂಡು ನೆಡ್ಸ್ಕೊಂಡ್ ಬಂದ್ವಿ, ಇದೊಂದು ಅಪೂರ್ವ ಗಳಿಗೆ ನನಗೆ…ಎವೆರೆಸ್ಟ್ ಪರ್ವತಕ್ಕೆ ನನ್ನಂತ ಹುಳುಮಾನವ ಹೆಗಲು ಕೊಡೋದಾ?, ಇವತ್ತಿಗೂ ಕನಸು ಅನ್ನಿಸ್ತಿದೆ.

ಹಾಗೆ ಸೀದಾ ಒಳಗಡೆ ಹೋಗಿ ಅರಸು ಚಿತ್ರದ ಹಾಡುಗಳನ್ನ ನೋಡಿ ಮುಗಿಸಿ ಹೊರಬಂದ್ರು,ಅಸ್ಟ್ರಲ್ಲಿ ನಮ್ ಸಿನಿಮಾ ಹಾಡುಗಳನ್ನೂ ಒಮ್ಮೆ ನೋಡಿ ಅಂತ ಕೇಳಿದ್ರು ನಮ್ ಡೈರೆಕ್ಟರು, ಇಲ್ಲ ಸುಸ್ತಾಗಿದೆ ಅಪ್ಪಾಜಿಗೆ ಮನೆಗೆ ಹೂಗಿಬಿಡ್ತಿವಿ ಅಂದ್ರು ಶಿವಣ್ಣ , ಇಲ್ಲಪ್ಪ ಅವ್ರು ಅಷ್ಟು ಹೇಳ್ತಾ ಇದಾರೆ ನೋಡೋಣ ನಡೀರಿ ಅಂತ ಮತ್ತೆ ಒಳಗಡೆ ಬಂದ್ರು , ಕೆಲವೇ ಕುರ್ಚಿಗಳಿದ್ದ ಅಲ್ಲಿ ಎಲ್ಲರೂ ಕೂತಾಗಿತ್ತು… ಒಂದ್ ಕುರ್ಚಿ ಮಾತ್ರ ಕಾಲಿ ಇತ್ತು, ಅದು ಅಣ್ಣಾವ್ರು ಕೂತಿದ್ದ ಪಕ್ಕದ ಕುರ್ಚಿ… ಸರಿ ನಾನ್ ನಿಂತೇ ಇದ್ದೆ.. ಶಿವಣ್ಣ ನನ್ ನೋಡಿ ಕುತ್ಕೊಅಪ್ಪ ಅಂದ್ರು ನಾನ್ ಪರ್ವಾಗಿಲ್ಲ ಸಾರ್ ಅಂತ ನಿಂತೇ ಇದ್ದೆ ಅಸ್ಟ್ರಲ್ಲಿ ಅಣ್ಣಾವ್ರು ನನ್ ಕೈ ಹಿಡಿದು ಕೂತ್ಕೋ ಮರಿ ಅಂತ ಅವ್ರ ಪಕ್ಕದಲ್ಲಿ ಕೂರಿಸ್ಕೊಂಡ್ರು.

ಸುಮಾರು ಅರ್ಧ ಗಂಟೆ ನಾನು ಟ್ರಾನ್ಸ್ ಗೆ ಹೂಗಿಬಿಟ್ಟಿದ್ದೆ !!!!!

ಹಾಡು ನೋಡುವ ಮದ್ಯೆ ಮದ್ಯೆ ನಮ್ ಸಿನಿಮಾ ಬಗ್ಗೆ ಕೇಳೋರು… ನಾನ್ ಅದೇನ್ ಉತ್ರ ಹೆಳಿದನೂ ದೇವ್ರೇ ಬಲ್ಲ… !!!

ಆ ಅರ್ಧ ಗಂಟೆ ನನ್ ಜೀವನದ ಅತ್ಯಮೂಲ್ಯ ಕ್ಷಣಗಳು !!! ಅಬ್ಬಾ ನನಗೆ ಇಂತ ಅದೃಷ್ಟ, ಒಂತರ ಕನಸಿನ ತರ ಅನ್ನಿಸ್ತಿದೆ ಇವತ್ತಿಗೂ.

ಮುಗಿಸಿ ಹೊರಗೆ ಬಂದವರೇ ನಮ್ ಡೈರೆಕ್ಟರ್ ಹತ್ರ ಇದ್ದ nokia n 70 ಲಿ ಒಂದ್ ಫೋಟೋ ತೆಗೆದುಕೊಂಡ್ವಿ….

 

 

 

 

 

 

 

ಅಂದ ಹಾಗೆ ಈ ಫೋಟೋ ತೆಗೆದವ್ರು ಪವರ್ ಸ್ಟಾರ್ ಪುನೀತ್ ರಾಜಕುಮಾರ😊

ಲೇಖಕರು – ವಿನಯ್ ಕಾಸ್ವೇ

ವಿನಯ್ ಕಾಸ್ವೇ (Vinay Kaswe)

Like Us, Follow Us !

120,180FansLike
1,826FollowersFollow
1,573FollowersFollow
4,884SubscribersSubscribe

Trending This Week