18 C
Bangalore, IN
Tuesday, December 19, 2017

ಬಾಗಿನ ಅರ್ಪಿಸಿದ ಆಧುನಿಕ ಭಗೀರಥ ಯಶ್ !!

ಬತ್ತಿದ ಕೆರೆಗೆ ಭಗೀರಥನಾದ ಯಶ್ ,ಪತ್ನಿ ರಾಧಿಕಾ ಜೊತೆಗೂಡಿ ತಲ್ಲೂರು ಕೆರೆಗೆ ಬಾಗಿನ ಅರ್ಪಿಸಿದ್ದಾರೆ . ಹೂಳು ತುಂಬಿ ನೀರು ಕಾಣದಂತಾಗಿ ತಲ್ಲಣಿಸುತ್ತಿದ್ದ ತಲ್ಲೂರು ಕೆರೆಯೀಗ ಮೈದುಂಬಿ ನಳನಳಿಸುತ್ತಿದೆ

ಕಳೆದ ನಾಲ್ಕು ವರುಷಗಳಿಂದ ಮೈಯೆಲ್ಲಾ ಬರಿದೇ ಹೂಳು ತುಂಬಿಕೊಂಡು ಇನ್ನೇನು ಈ ಕೆರೆಯ ಕಥೆ ಮುಗಿಯಿತು ಎಂಬಂತಾಗಿತ್ತು ತಲ್ಲೂರು ಕೆರೆ. ನೀರಿನ ಅದರಲ್ಲೂ ಕುಡಿಯುವ ನೀರಿನ ಮಹತ್ವ ಅರಿತಿರುವ ಜನಮುಖಿ ನಟ ಯಶ್  ಕೆರೆಗೆ ಕಾಯಕಲ್ಪ ನೀಡಲು ಸಂಕಲ್ಪ ಮಾಡಿದರು . ಅದರಂತೆ ಯಶ್ -ರಾಧಿಕಾ  ಜೊತೆಯಾಗಿಯೇ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದರು.

ಯಶೋಮಾರ್ಗದ ಮೂಲಕ ಕೆರೆಗೆ ನೀರು ಹರಿಯಲೆಂಬ  ಕಾಯಕಕ್ಕಾಗಿ ನಾಲ್ಕು ಕೋಟಿ ವೆಚ್ಚದಲ್ಲಿ ಹೂಳೆತ್ತುವ ಕಾರ್ಯ ಶುರುವಾದ ಸ್ವಲ್ಪ ದಿನದಲ್ಲೇ ಕೆರೆಯಲ್ಲಿ ನೀರುಕ್ಕಿತ್ತು. ಅದೇ ವೇಳೆಗೆ ವರುಣನ ಕೃಪೆಯು ಸೇರಿ ಮಳೆ ನೀರಿನಿಂದ ಕೆರೆಯೂ ತುಂಬಿ ಸಮೃದ್ಧಿಯ ಸಂಕೇತವಾಗಿದೆ. ಸುತ್ತಲಿನ ಹತ್ತೂರಿನ ಜನ ತಲ್ಲೂರ ಕೆರೆಯ ಉಪಯೋಗ ಪಡೆಯುತ್ತಿದ್ದಾರೆ .

ಅಂದು ಯಶ್ ಇಟ್ಟ ಹೆಜ್ಜೆಗೆ ಜೊತೆಯಾದ ಸುತ್ತ ಮುತ್ತಲ ಊರಿನ ಜನ ಇಂದು ಯಶ್ ರನ್ನ ಸ್ಮರಿಸಿ ಹರಸುತ್ತಿದ್ದಾರೆ . ಅದೇ ಕೃತಜ್ಞತೆಯ ಕಣ್ಣುಗಳಿಂದಲೇ ತುಂಬಿ ತುಳುಕುತ್ತಿರುವ ಕೆರೆಗೆ ಬಾಗಿನ ಅರ್ಪಿಸಲು ತಮ್ಮ ನೀರಿನ ಬವಣೆ ನೀಗಿಸಿದ ಯಶ್ ದಂಪತಿಯನ್ನು ಆಹ್ವಾನಿಸಿದ್ದರು.ಕಷ್ಟಪಟ್ಟು ಸಂಪಾದನೆ ಮಾಡಿದ ಹಣವನ್ನು ಅನ್ನದಾತರ ಕಷ್ಟಕ್ಕೆ ಬಳಸಿದ ಸಂತೃಪ್ತ ಭಾವನೆ ಯಶ್   ದಂಪತಿ ಮುಖದಲ್ಲಿ ಎದ್ದು ಕಾಣುತ್ತಿತ್ತು .

ವೈಮಾನಿಕಾ ವೀಕ್ಷಣೆ ಮಾಡಿದ ಯಶ್ ದಂಪತಿ!
ಬಾಗಿನ ಅರ್ಪಿಸುವುದಕ್ಕೂ ಮೊದಲು ಯಶ್ ದಂಪತಿ ಹೆಲಿಕಾಪ್ಟರ್ ಮೂಲಕ ತುಂಬಿದ ಕೆರೆ ವೀಕ್ಷಣೆ ಮಾಡಿದರು. ಅಭಿಮಾನಿಗಳತ್ತ ಕೈ ಬೀಸಿ ಸಂಭ್ರಮಿಸಿದ್ರು.  ಬಾಗಿನ ಅರ್ಪಿಸಿದ ಬಳಿಕ  ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ರಾಧಿಕಾ ಪಂಡಿತ್, ಕೆರೆ ಹೂಳೆತ್ತುವ ಕೆಲಸ ಕೈಗೆತ್ತಿಕೊಂಡಾಗ ಇಲ್ಲಿನ ವಾತಾವರಣವೇ ಬೇರೆ ಇತ್ತು. ಈಗ ಕೆರೆಯಲ್ಲಿ ನೀರು ತುಂಬಿ ತುಳುಕುತ್ತಿದೆ. ಯಶೋಮಾರ್ಗದ ಕನಸು ನನಸಾಗಿದೆ ಅಂದ್ರು.  ಇದೀಗ ಈ ಪ್ರದೇಶ ಅತ್ಯಂತ ಸುಂದರವಾಗಿದ್ದು, ಸ್ಥಳೀಯರು ಕೆರೆಯನ್ನು ರಕ್ಷಣೆ ಮಾಡಿಕೊಂಡು ಹೋಗಬೇಕು  ಎಂದು ಕರೆ ನೀಡಿದರು.
ಒಳ್ಳೆ ಕೆಲಸವನ್ನು ಎಲ್ಲರೂ ಮಾಡಬೇಕು.
ತೃಪ್ತ ಭಾವದಿಂದ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್, ಏನಾದರೂ ಮಾಡಬೇಕು ಎಂದು ನನಗೆ ಸಣ್ಣ ಆಸೆ ಇತ್ತು. ಕೆರೆಯನ್ನು ಹೂಳೆತ್ತುವಾಗ ಒಂದು ಸಣ್ಣ ಭರವಸೆಯೂ ಇರಲಿಲ್ಲ. ಆದರೆ ರೈತರಿಗೆ ನನ್ನ ಕಡೆಯಿಂದ ಏನಾದರೂ ಮಾಡಬೇಕು ಅನ್ನೋ ಆಸೆ ಮಾತ್ರ ದೃಢವಾಗಿತ್ತು. ಈ ಕೆಲಸದಿಂದ ನನಗೆ ಏನು ಉಪಯೋಗವಿಲ್ಲ. ಜನರಿಗೆ ಸಹಾಯ ಮಾಡಿದ ನೆಮ್ಮದಿಯಿದೆ.  ಆದರೆ, ಇಂತಹ ಮನಸ್ಥಿತಿ ಎಲ್ಲರಲ್ಲಿ ಬರಬೇಕು ಎಂಬುದು ನನ್ನ ಆಸೆ. ಭೂತಾಯಿಗೆ ಒಂದು ಹಿಡಿ ಬಿತ್ತನೆ ಮಾಡಿದರೆ ರಾಶಿ ರಾಶಿ ಕೊಡುತ್ತಾಳೆ. ಒಳ್ಳೆಯ ಮನಸಿನಿಂದ ಏನಾದರೂ ಮಾಡಿದರೆ ಅದು ಒಳ್ಳೆಯದಾಗುತ್ತದೆ ಎನ್ನುವುದಕ್ಕೆ ಈ ಕೆಲಸವೇ ಸಾಕ್ಷಿ ಅಂದ್ರು.. ಫೆಬ್ರವರಿ 28 ರಂದು ಹೂಳೆತ್ತಲು ಶುರು ಮಾಡಿದೆವು, ಶೀಘ್ರದಲ್ಲೇ ಫಲಿತಾಂಶ ಸಿಕ್ಕಿದ್ದು ಖುಷಿ ಕೊಟ್ಟಿದ್ದೆ, ನಾನು ರಾಜಕೀಯಕ್ಕೆ ಬರುವ ಮಾತೇ ಇಲ್ಲ. ಯಶ್ ರಾಜಕೀಯಕ್ಕೆ ಬರಲು ಇಷ್ಟೊಂದು ಕೆಲಸ ಮಾಡ್ತಿದ್ದಾನೆ ಅನ್ನೋ ಮಾತುಗಳು ಕೇಳಿ ಬಂದಿವೆ. ಆದ್ರೆ ನಾನು ರಾಜಕೀಯಕ್ಕೆ ಬರುವುದಾದರೆ ನಮ್ಮ‌ ಊರಿನ ಕಡೆ ಹೋಗ್ತಾ ಇದ್ದೆ . ಕೊಪ್ಪಳಕ್ಕೆ ಯಾಕೆ ಬರ್ತಿದ್ದೆ ಅಂತ ಪ್ರಶ್ನಿಸಿದ್ರು.. ಒಟ್ಟಾರೆ ಯಶ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ .

ಯಶೋಮಾರ್ಗದ ಮೂಲಕ ಯಶ್ ನಡೆದ ಮೊದಲ ಹೆಜ್ಜೆಗೆ ದೊಡ್ಡ ಯಶವೇ ದಕ್ಕಿದೆ . ಮುಂದೆಯೂ ಜಶವೇ ಕೈಹಿಡಿದು ನಡೆಸಲಿ .

“ರಾಜಕುಮಾರ” ಸೂತ್ರದಾರನಿಗೆ ಕೂಡಿಬಂದ ಕಂಕಣ..

 ಮಿಸ್ಟರ್ ಮಿಸೆಸ್ ರಾಮಾಚಾರಿಗೆ ಆಕ್ಷನ್ ಕಟ್ ಹೇಳಿ ಸೂಪರ್ ಡೂಪರ್ ಸಿನಿಮಾ ತೆಗೆದ  ಯುವ ನಿರ್ದೇಶಕ ಸಂತೋಷ್ ಆನಂದ್ ರಾಮ್ . ರಾಜಕುಮಾರ ನಂಥ ಸಕ್ಕತ್ ಸಕ್ಸಸ್ ಫುಲ್ ಸಿನಿಮಾ ಕೊಟ್ಟ  ಸಂತೋಷ್ ಆನಂದರಾಮ್ ಈಗ ಮದುವೆಯ ಹೊಸ್ತಿಲಲ್ಲಿ ನಿಂತಿದ್ದಾರೆ .  ಬಳ್ಳಾರಿಯಲ್ಲಿ ತಮ್ಮ ವಿವಾಹದ ಮುನ್ಸೂಚನೆಯಾಗಿ  ನಿಶ್ಚಿತಾರ್ಥ ಮುಗಿಸಿಕೊಂಡಿದ್ದಾರೆ.
ರಾಜಕುಮಾರನಿಗೆ ರಾಜಕುಮಾರನ ಸಾಥ್..
ಯಂಗ್ ಡೈರೆಕ್ಟರ್ ಸಂತೋಷ್ ಆನಂದರಾಮ್ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಗೆಲುವಿನ ಬಳಿಕ ಕೈ ಹಾಕಿದ್ದು ರಾಜಕುಮಾರನ ಬುಟ್ಟಿಗೆ. ಆ ಬುಟ್ಟಿಯಲ್ಲೂ ಸಂತೋಷ್ ಗೆ ಕೈತುಂಬಾ ಸಂಪಾದನೆ ಆಯ್ತು. ಹೀಗಾಗಿ ರಾಜಕುಮಾರ ಚಿತ್ರದ ಹೀರೋ ಪುನೀತ್ ಕೂಡ ಎಂಗೇಜ್ ಮೆಂಟ್ ಗೆ ಆಗಮಿಸಿ ಶುಭ ಕೋರಿದ್ರು. ನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಕೂಡ ಸಂತೋಷ್ ಆನಂದರಾಮ್ ಗೆ ಶುಭಕೋರಿದ್ದಾರೆ .. ಈ ವೇಳೆ ಸ್ಟಾರ್ ನಟರು ಹಾಗು ಸ್ಟಾರ್ ನಟಿಯನ್ನು ನೋಡಲು ಗಣಿನಾಡ ಅಭಿಮಾನಿಗಳು ಮುಗಿಬಿದ್ರು.
ಹಿಟ್ ಡೈರೆಕ್ಟರ್ ಸಂತೋಷ್ ಹೋಟೆಲ್ ಉದ್ಯಮಿ ಶ್ರೀನಿವಾಸ್ ಮಗಳು ಸುರಭಿ ಜೊತೆ ಉಂಗುರ ಬದಲಾಯಿಸಿಕೊಂಡ್ರು..ಬಳ್ಳಾರಿಯ ಅಲ್ಲಂ ಭವನದಲ್ಲಿ ಜರುಗಿದ ಎಂಗೇಜ್ ಮೆಂಟ್ ಕಾರ್ಯದಲ್ಲಿ ನಸುಗೆಂಪು ಕಾಫಿ ಕಲರ್ ಓಪನ್ ಸೂಟ್ ನಲ್ಲಿ ನಿರ್ದೇಶಕ ಸಂತೋಷ್ ಮಿಂಚಿದ್ರೆ, ಕೇಸರಿ ಬಣ್ಣದ ಸೀರೆ ತೊಟ್ಟು ಸುರಭಿ ಮಿಂಚಿದ್ರು. ಮುಂದಿನ ವರ್ಷ ಫೆಬ್ರವರಿ 21ರಂದು ಈ ಜೋಡಿ ಹೊಸ ಜೀವನಕ್ಕೆ ಕಾಲಿಡಲಿದೆ.
ಜ್ಯೋತಿ ಗೌಡ, ನಾಗಮಂಗಲ

ರಾಯರ ಮುಂದೆ ತಲೈವಾ ಶರಣು..! 

ತಮಿಳು ಸೂಪರ್ ಸ್ಟಾರ್ ತಲೈವಾ ಆಧ್ಯಾತ್ಮಿಕ ವಿಚಾರಗಳು ಅಂದ್ರೆ ಎತ್ತಿದ ಕೈ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ ಗುರು ರಾಯರ ಮಠ ಅಂದ್ರೆ ರಜಿನಿಕಾಂತ್ ಗೆ ಅಚ್ಚುಮೆಚ್ಚು. ಮಂಗಳವಾರ ಸೂಪರ್ ಸ್ಟಾರ್ ರಜಿನಿಕಾಂತ್ ಮಂತ್ರಾಲಯಕ್ಕೆ ಭೇಟಿ ನೀಡಿ, ಗುರು ರಾಘವೇಂದ್ರನ ದರ್ಶನ ಪಡೆದ್ರು. ಈ ವೇಳೆ ತಲೈವಾನನ್ನು ನೋಡಲು ಅಭಿಮಾನಿಗಳು ಮುಗಿಬಿದ್ರು.
 ವರ್ಷಕ್ಕೆ 2 ಬಾರಿ ರಾಯರ ದರ್ಶನ ಕಡ್ಡಾಯ..!
ನಟ ರಜಿನಿಕಾಂತ್ ತಮಿಳು ಚಿತ್ರರಂಗದಲ್ಲಿ ಒಂದೊಂದೆ ಮೆಟ್ಟಿಲು ಹತ್ತಿ ಸೂಪರ್ ಸ್ಟಾರ್ ಆಗ್ತಿದ್ದ ಹಾಗೆ ಆಧ್ಯಾತ್ಮದತ್ತಲೂ ಒಲವು ಹೆಚ್ಚಿಸಿಕೊಳ್ಳುತ್ತಾ ಸಾಗಿದ್ರು. ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ತಮಿಳುನಾಡಿನ ಸೂಪರ್ ಸ್ಟಾರ್ ರಜಿನಿಕಾಂತ್ ಒಂದು ವರ್ಷಕ್ಕೆ ಎರಡು ಬಾರಿ ಬಂದೇ ಬರುತ್ತಾರೆ. ಮಂಗಳವಾರ  ಬೆಳ್ಳಂಬೆಳಗ್ಗೆ 7.30ಕ್ಕೆ ಆಗಮಿಸಿ  ಗುರು ರಾಘವೇಂದ್ರರ ದರ್ಶನ ಪಡೆದ ತಲೈವಾ, ಬಳಿಕ ರಾಯರ ಮಠದ ಪೀಠಾಧ್ಯಕ್ಷರಾದ ಶ್ರೀ ಸುಭುದೇಂದ್ರ ಶ್ರೀಗಳ ಆಶೀರ್ವಾದ ಪಡೆದ್ರು. ನಂತರ ಬೃಂದಾವನಕ್ಕೆ ತೆರಳಿ ದರ್ಶನ ಪಡೆದ್ರು.  ಪೀಠಾಧ್ಯಕ್ಷರೊಂದಿಗೆ ಕೆಲ ಕಾಲ ಉಭಯ ಕುಷಲೋಪರಿ ವಿಚಾರಿಸಿದ್ರು. ಈ ವೇಳೆ ಮಠದಿಂದ ರಜಿನಿಕಾಂತ್ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯ್ತು.
 ಮಂತ್ರಾಲಯಕ್ಕೂ ಮುನ್ನ ಬೆಂಗಳೂರಿನಲ್ಲಿ ರಜಿನಿ
ಪ್ರತಿಬಾರಿ ಮಂತ್ರಾಲಯಕ್ಕೆ ತೆರಳುವಾಗಲು ಸೂಪರ್ ಸ್ಟಾರ್ ರಜಿನಿಕಾಂತ್‌, ಬೆಂಗಳೂರಿಗೆ ಬರ‌್ತಾರೆ. ಅದೇ ರೀತಿ ರಜಿನಿಕಾಂತ್ ಈ ಬಾರಿ ಕೂಡ ಬೆಂಗಳೂರಿಗೆ ಬಂದಿದ್ರು. ಸಂಬಂಧಿಕರ ಮನೆಯ ಕಾರ್ಯಕ್ರಮ ಇದ್ದಿದ್ರಿಂದ ರಜಿನಿಕಾಂತ್ ಸೋಮವಾರವೇ ಬೆಂಗಳೂರಿಗೆ ಆಗಮಿಸಿದ್ರು. ಸಂಬಂಧಿಕರ ಮನೆಯ ಕಾರ್ಯಕ್ರಮ ಮುಗಿಸಿದ ಬಳಿಕ ಬೆಂಗಳೂರಿನಲ್ಲೆ ತಂಗಿದ್ದ ರಜಿನಿಕಾಂತ್, ಇಲ್ಲಿಂದ ನೇರವಾಗಿ ರಾಯರ ಮಠಕ್ಕೆ ತೆರಳಿದ್ರು. ರಾಯರ ಸನ್ನಿಧಿಯಲ್ಲಿ ಅರ್ಧಗಂಟೆ ಕಾಲ ಧ್ಯಾನ ಪೂಜೆ ಮುಗಿಸಿ ಅಲ್ಲಿಂದ ನೇರವಾಗಿ ಚೆನ್ನೈನತ್ತ ಪ್ರಯಾಣ ಬೆಳೆಸಿದ್ರು.
ಜ್ಯೋತಿ ಗೌಡ, ನಾಗಮಂಗಲ

ದರ್ಶನ್ ಗದಾಯುದ್ಧ; ವಿಷ್ಯ ಗೊತ್ತಾ?

ಮಹಾಭಾರತದಲ್ಲಿ ಅತಿ ಮುಖ್ಯವಾದ ಘಟ್ಟ ಗದಾಯುದ್ಧ. ಅತ್ತ ದುರ್ಯೋಧನ, ಇತ್ತ ಭೀಮ ಇಬ್ಬರೂ ಗದೆ ಹಿಡಿದುಕೊಂಡು ನಿಂತಿರುವುದನ್ನು ನೋಡುವುದಕ್ಕೂ ಧೈರ್ಯ ಬೇಕು. ಸದ್ಯ ದರ್ಶನ್ ರ 50ನೇ ಚಿತ್ರ ಮುನಿರತ್ನ  ಅವರ ಕುರುಕ್ಷೇತ್ರ ಅದೇ ಹಂತಕ್ಕೆ ಬಂದು ನಿಂತಿದೆ. ಇದೇ ನವೆಂಬರ್ 24ರಿಂದ ಮುನಿರತ್ನ ಕುರುಕ್ಷೇತ್ರ ಚಿತ್ರದ ಕ್ಲೈಮ್ಯಾಕ್ಸ್ ಗದಾಯುದ್ಧದ ಶೂಟಿಂಗ್ ಶುರುವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಇಂಟರೆಸ್ಟಿಂಗ್ ಅಂದ್ರೆ ಇಲ್ಲಿ ದುರ್ಯೋಧನ ದರ್ಶನ್. ಭೀಮ ಸೈಫಿ ಅಖ್ತರ್ ಅಲಿ. 2ಡಿ ಮತ್ತು3ಡಿಯಲ್ಲಿ ನಿರ್ಮಾಣನಾಗುತ್ತಿರುವ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. 2018ಫೆಬ್ರವರಿಯಲ್ಲಿ ಚಿತ್ರೀಕರಣ ಮುಗಿಸಲು ಶ್ರಮಿಸುತ್ತಿದೆ. ಹಾಗಾಗಿ ಇದೇ ವಾರಾಂತ್ಯ ಕ್ಲೈಮ್ಯಾಕ್ಸ್ ಚಿತ್ರೀಕರಣ. ಭೀಮ ದುರ್ಯೋಧನನ ಊರು ಭಂಗ ಮಾಡಿದರೆ ಅಂತ್ಯ.

ಹೈದರಾಬಾದ್ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ದರ್ಶನ್ ಸೇರಿದಂತೆ ಎಲ್ಲರೂ ಉತ್ಸುಕರಾಗಿ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ನೂರಾರು ಮಂದಿ ವಿಎಫ್ ಎಕ್ಸ್ ಕೆಲಸದಲ್ಲಿ ನಿರತರಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಮುಗಿದರೆ ಫೆಬ್ರವರಿಯಲ್ಲಿ ದರ್ಶನ್ ಅಪರಾವತಾರ ನೋಡಿ ಅಭಿಮಾನಿಗಳು ಪುಳಕಿತರಾಗುವುದು ನಿಶ್ಚಿತ.

 

ಬೆಂಗಳೂರಲ್ಲಿ ಕುಣೀತಾಳೆ ಸನ್ನಿ..ಎಲ್ಲಿ.? ಯಾಕೆ..? 

ಸಿಲಿಕಾನ್ ಸಿಟಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರೋ ನಗರ. ಇಲ್ಲಿ ಕನ್ನಡಿಗರ ಜೊತೆ ದೇಶ, ವಿದೇಶದ ಜನರೂ ವಾಸ ಮಾಡ್ತಿದ್ದಾರೆ. ಹಾಗಾಗಿ ನ್ಯೂ ಇಯರ್ ವೆಲ್ ಕಮ್ ಮಾಡೋದು ಕೂಡ ದೊಡ್ಡ ಮ್ಯಾಟರ್ ಆಗುತ್ತೆ. ಹಾಗಾಗಿ ಪ್ರತಿವರ್ಷ ಇಲ್ಲಿ ಬಾಲಿವುಡ್ ನ ಹಾಟ್ ಹಾಟ್ ಬೆಡಗಿಯರು ಬಿಂದಾಸ್ ಸ್ಟೆಪ್ಸ್ ಹಾಕಿ ಸಂಭ್ರಮಕ್ಕೆ ಕಿಚ್ಚು ಹೊತ್ತಿಸಲಿದ್ದಾರೆ. ಈ ಬಾರಿ ಬಾಲಿವುಡ್ ಬೇಬೋ ಸನ್ನಿ ಲಿಯೋನ್ ಬರ‌್ತಿದ್ದು ಡಿಸೆಂಬರ್ 31st ಬರುವಿಕೆಗಾಗಿ ಸನ್ನಿ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.
ಇಂಗ್ಲಿಷ್‌ ಜೊತೆ ಕನ್ನಡ ರ‌್ಯಾಪರ್ಸ್ ಗೂ ಚಾನ್ಸ್..!
ಸಾಮಾನ್ಯವಾಗಿ ಈ ರೀತಿಯ ಶೋಗಳು ಅಂದ್ರೆ ಇಂಗ್ಲಿಷ್‌ ಡಿಜೆ ಹೆಚ್ಚಾಗಿರುತ್ತೆ. ಆದ್ರೆ ಈ ಬಾರಿ ಸಂಭ್ರಮದಲ್ಲಿ ಇಂಗ್ಲಿಷ್‌ ಡಿಜೆ ಜೊತೆ ಕನ್ನಡ ರ‌್ಯಾಪರ್ಸ್ ಕೂಡ ಪ್ಲೇ ಮಾಡಲಿದ್ದಾರೆ ಅನ್ನೋದು ಕನ್ನಡಿಗರ ಸಂಭ್ರಮವನ್ನು ಇಮ್ಮಡಿಗೊಳ್ಳುವಂತೆ ಮಾಡಿದೆ. ಮಾನ್ಯತಾ ಟೆಲ್ ಪಾರ್ಕ್ ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈಗಾಗಲೇ ಟಿಕೆಟ್‌ಗಳು ಎಲ್ಲಿ ಸಿಗುತ್ತವೆ ಅಂತ ಅಭಿಮಾನಿಗಳು ಹುಡುಕಾಡಲು ಶುರು ಮಾಡಿದ್ದಾರೆ. ಪಡ್ಡೆ ಹೈಕಳ ಹಾಟ್ ಫೇವರಿಟ್ ಸ್ಟಾರ್ ಸನ್ನಿ ಲಿಯೋನ್ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಫರ್ಫಾಮೆನ್ಸ್ ಕೊಡ್ತಿದ್ದು, ಸನ್ನಿಯನ್ನು ಒಪ್ಪಿಕೊಂಡು ಟೈಮ್ ಕ್ರಿಯೇಷನ್ ಕಾರ್ಯಕ್ರಮ ಮಾಡುತ್ತಿದೆ.
ಡಿಸೆಂಬರ್ 1 ರಿಂದ ಆನ್ ಲೈನ್ ನಲ್ಲಿ ಟಿಕೆಟ್..!
ಹಲವು ಪ್ರಥಮಗಳ ಜೊತೆ ಸನ್ನಿ ಲಿಯೋನ್ ಬೆಂಗಳೂರಿಗೆ ಬರ‌್ತಿದ್ದು, ಡಿಸೆಂಬರ್ ಒಂದರಿಂದ ಆನ್ ಲೈನ್ ನಲ್ಲಿ ಟಿಕೆಟ್ ಮಾರಾಟ ಶುರುವಾಗಲಿದೆ. ಆನ್ ಲೈನ್ ಟಿಕೆಟ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಬುಕ್ ಮೈ ಶೋ ಇದರ ಹೊಣೆ ಹೊತ್ತುಕೊಂಡಿದೆ. ನೀವು ಕೂಡ ಸನ್ನಿ ಜೊತೆ ಸಂಭ್ರಮಿಸಬೇಕು ಅಂದ್ರೆ ಟಿಕೆಟ್ ಬುಕ್ ಮಾಡಲು ಇನ್ನು 10ದಿನ ಕಾಯಲೇ ಬೇಕು. ಫಸ್ಟ್ ಟೈಮ್ ಇಂಗ್ಲಿಷ್ ಡಿಜೆ ಜೊತೆಗೆ ಕನ್ನಡದ ರ‌್ಯಾಪರ್ಸ್ ಇರೋದ್ರಿಂದ ಕಾರ್ಯಕ್ರಮ ರಂಗೇರೊದ್ರಲ್ಲಿ ಅನುಮಾನವೆ ಇಲ್ಲ. ಬೆಂಗಳೂರಿನಲ್ಲಿ ಸನ್ನಿ ಮೊದಲ ಬಾರಿಗೆ ಕುಣಿದು ಕುಣಿಸಲಿದ್ದು ಅಂದು ಸಂಜೆ 7 ಗಂಟೆಗೆ ಸ್ಟಾರ್ಟ್ ಆಗಲಿದೆ ಸನ್ನಿ ಕಣ್ತುಂಬಿಕೊಳ್ಳಲು ನೀವು ಬನ್ನಿ ಎನ್ನುತ್ತಿದೆ ಟೈಮ್ಸ್ ಕ್ರಿಯೇಷನ್.
ಜ್ಯೋತಿಗೌಡ, ನಾಗಮಂಗಲ

ಕೆಜಿಫ್ ನಲ್ಲಿ ಯಶ್ ಪೊಲೀಸ್ ಆಫಿಸರೋ? ಸೈನಿಕನೋ? ಹೋರಾಟಗಾರನೋ?

ಅನುಮಾನವೇ ಬೇಡ. ಕೆಜಿಎಫ್ ಸಿನಿಮಾ ಯಶ್ ಲೈಫಲ್ಲಿ ಸದ್ಯಕ್ಕೆ ಮ್ಯಾಗ್ನಂ ಓಪಸ್. ದೊಡ್ಡ ಬಜೆಟ್, ದೊಡ್ಡ ತಂಡ, ಸುದೀರ್ಘ ಚಿತ್ರೀಕರಣ, ಸೂಪರ್ ಸೆಟ್, ಐದು ಭಾಷೆಯಲ್ಲಿ ನಿರ್ಮಾಣ ಎಲ್ಲವೂ ಸೇರಿ ಕೆಜಿಎಫ್ ಗೆ ಬೇರೆಯದೇ ಆದ ತೂಕ ಒದಗಿ ಬಂದಿದೆ. ಹಾಗಾಗಿ ಕೆಜಿಎಫ್ ಸಿನಿಮಾ ಎಂದರೆ ಸಾಕು ಕನ್ನಡ ಸಿನಿಮಾ ಅಭಿಮಾನಿಗಳ ಕಣ್ಣು ಚುರುಕಾಗುತ್ತದೆ. ಕಿವಿ ನೆಟ್ಟಗಾಗುತ್ತದೆ. ಇದೇ ಸಂದರ್ಭದಲ್ಲಿ ಕೆಜಿಎಫ್ ಚಿತ್ರದ ಕೆಲವು ಶೂಟಿಂಗ್ ಚಿತ್ರಗಳು ಬಿಡುಗಡೆಯಾಗಿವೆ.

ಒಂದರಲ್ಲಿ ಗಡ್ಡಧಾರಿ ಯಶ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡರೆ ಇನ್ನೊಂದು ಫೋಟೋದಲ್ಲಿ ಅಚ್ಚ ಬಿಳಿ ವಸ್ತ್ರಧರಿಸಿ ತಲೆಗೊಂದು ಬಿಳಿ ಟೋಪಿ ಇಟ್ಟುಕೊಂಡಿದ್ದಾರೆ. ಆ ಟೋಪಿಯನ್ನು ನಿರ್ದೇಶಕ ಪ್ರಶಾಂತ್ ನೀಲ್ ಸರಿ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಬಿಳಿ ವಸ್ತ್ರ ಒಂದೋ ಟ್ರಾಫಿಕ್ ಪೋಲೀಸರ್ ಧರಿಸುತ್ತಾರೆ ಅಥವಾ ಭಾರತೀಯ ನೌಕಾದಳದ ಸೈನಿಕರು ಧರಿಸುತ್ತಾರೆ. ಹೀಗಾಗಿ ಕೆಜಿಎಫ್ ಸಿನಿಮಾದಲ್ಲಿ ಯಶ್ ಗೆ ಎರಡು ಶೇಡ್ ಪಾತ್ರಗಳಿರುವ ಸಾಧ್ಯತೆ ಇದೆ.

ಇದು ಎಂಭತ್ತರ ದಶಕದ ಕತೆಯಾದ್ದರಿಂದ ಅಲ್ಲದೇ ಕೆಜಿಎಫ್ ನಲ್ಲಿ ನಡೆಯುವ ಕತೆಯಾದ್ದರಿಂದ ಯಶ್ ಒಂದೆಡೆ ಗಣಿಯಲ್ಲಿ ಕೆಲಸ ಮಾಡುತ್ತಾ ಇನ್ನೊಂದೆಡೆ ನೌಕಾದಳದ ಆಫೀಸರ್ ಆಗಿರುವ ಸಾಧ್ಯತೆಯೂ ಇರಬಹುದು. ಅಥವಾ ಖಳನಾಯಕರ ಕಣ್ಣಿಗೆ ಮಣ್ಣೆರಚಲು ನೌಕಾದಳದ ದಿರಿಸು ಧರಿಸಿ ಬಂದಿರಬಹುದು. ಹೀಗೆ ಕೆಜಿಫ್ ಕುರಿತು ನಾನಾ ಲೆಕ್ಕಾಚಾರಗಳು ಶುರುವಾಗಿವೆ.

“ಕೆಂಪಿರ್ವೆ” ದತ್ತಣ್ಣ ಕನ್ನಡಿಗರಲ್ಲಿ ಕೇಳುತ್ತಿರುವುದೇನು ?

ಇಲ್ಲಿ ಜನಸಾಮಾನ್ಯರೇ “ಕೆಂಪಿರ್ವೆ “

ಕೆಂಪಿರ್ವೆ ನಾಳೆ ತೆರೆಗೆ ಬರುತ್ತಿದೆ. ಇದಕ್ಕ್ಕೂ ಮುನ್ನ ಪತ್ರಕರ್ತರಿಗಾಗಿ ಏರ್ಪಡಿಸಿದ್ದ ಷೋ ನಂತರ  ಅಹಮಿಕೆಯಿಲ್ಲದ ಆತ್ಮವಿಶ್ವಾಸದಿಂದ ಮಾತನಾಡಿದ ನಿರ್ದೇಶಕ ವೆಂಕಟ್ ಭಾರಧ್ವಾಜ್ ಕೆಂಪಿರ್ವೆ ಒಂದು ವಿಭಿನ್ನ ಚಿತ್ರವೆಂದಿದ್ದಾರೆ.

ಇಲ್ಲಿ ಸಾಮಾನ್ಯರನ್ನ ಕೆಣಕಿದ್ರೆ ಭ್ರಷ್ಟರು ಇಂದಲ್ಲ ನಾಳೆ ಮಣ್ಣು ಮುಕ್ಕಲೇ ಬೇಕಾಗುತ್ತದೆ. ದತ್ತಣ್ಣನಂತಹ ಹಿರಿಯ ನಟ ಅದ್ಭುತವಾಗಿ ಅಭಿನಯಿಸಿದ್ದಾರೆ. ದತ್ತಣ್ಣನೆಂದರೆ ಕನ್ನಡಿಗರಿಗೆ ವಿಶೇಷ ಪ್ರೀತಿ ಇದೆ. ಅವರನ್ನ ಕೆಂಪಿರ್ವೆ ಯಾಗಿ ನೋಡಿದಾಗ ಜನ ಮತ್ತಷ್ಟು ಮೆಚ್ಚಿಕೊಳ್ಳುತ್ತಾರೆ . ಕೆಂಪಿರ್ವೆಯಲ್ಲಿ ಉತ್ಪ್ರೇಕ್ಷೆ ಇಲ್ಲದ ಸಹಜತೆ ಇದೆ . ಇದು ಪ್ರೇಕ್ಷಕ ತನ್ನನ್ನು ತಾನು ಕೆಂಪಿರ್ವೆ ಯಾಗಿ ಕಾಣಲಿಕ್ಕೆ ಸಹಕಾರಿ. ಇದುವರೆಗೆ ಸಿನಿಮಾಗಳಲ್ಲಿ ಸಿಓಡಿ,ಸಿಬಿಐ ಇಂಥದನ್ನೆಲ್ಲ ಕೇಳಿದ್ದಾರೆ . ಕೆಂಪಿರ್ವೆ ಸಮಾಜಘಾತುಕರನ್ನು ಬಲಿಹಾಕುವ ಮತ್ತೊಂದು ಸಂಸ್ಥೆಯನ್ನು ಪರಿಚಯಿಸಿದೆ. ಅಂದ ಹಾಗೆ ಕೆಂಪಿರ್ವೆ ನಾಳೆ ವೀರೇಶ್ ,ಉಮಾ,ಕಾಮಾಕ್ಯ , ಓರಾಯಿನ್ ಮಾಲ್, ಫೋರಮ್ ಮಾಲ್, ಮುಂತಾದ ಕಡೆಗಳಲ್ಲಿ ತೆರೆಕಾಣಲಿದೆ.

ಅಮಾಯಕರನ್ನ ಕಾಡುವ ಖಳರನ್ನ ಕಚ್ಚುವ ದಾರಿಯನ್ನ ತೋರಲಿದೆ ಕೆಂಪಿರ್ವೆ ಅಂದಿದ್ದಾರೆ ವೆಂಕಟ್ ಭಾರಧ್ವಾಜ್ .

ದೀಪಿಕಾ ಪಡುಕೋಣೆಯನ್ನು ಸೂರ್ಪನಖಿ  ಮಾಡ್ತೇವೆ!

ಬಾಲಿವುಡ್​ನ ಮೋಸ್ಟ್​ ಎಕ್ಸ್​ಪೆಕ್ಟೆಡ್​ ಚಿತ್ರ ಪದ್ಮಾವತಿ ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಸಿನಿಮಾ ವಿರುದ್ಧ ಭಾರೀ ಆಕ್ರೋಶ ಭುಗಿಲೇಳುತ್ತಿದೆ.. ಸಂಜಯ್​ ಲೀಲಾ ಬನ್ಸಾಲಿ ನಿರ್ಮಾಣದ ಈ ಚಿತ್ರ ಬಿಡುಗಡೆ ಆಗಲು ಬಿಡುವುದಿಲ್ಲ ಅಂತಾ ಕರ್ಣಿಸೇನಾ ಸಂಘಟನೆ ಮುಖ್ಯಸ್ಥ ಲೋಕೇಂದ್ರ ಸಿಂಗ್​ ಕಾಲ್ವಿ ತಿಳಿಸಿದ್ದು,  ಒಂದು ವೇಳೆ ನಮ್ಮೆಲ್ಲರ ವಿರೋಧದ ನಡುವೆ ಪದ್ಮಾವತಿ ಚಿತ್ರ ಏನಾದ್ರೂ ರಿಲೀಸ್​ ಆದ್ರೆ, ಡಿಸೆಂಬರ್​ 1ರಂದು ಇಡೀ ಭಾರತ್ ಬಂದ್​ಗೆ ಕರೆ ನೀಡಲಾಗುವುದು ಅಂತಾ ಎಚ್ಚರಿಕೆ ನೀಡಿದ್ದಾರೆ.. ಈ ಚಿತ್ರದಲ್ಲಿ ಇತಿಹಾಸದ ಅಂಶಗಳನ್ನು ತಿರುಚಲಾಗಿದ್ದು, ಚಿತ್ರ ನಿರ್ಮಾಣಕ್ಕೆ ದುಬೈನಿಂದ ಹಣಕಾಸಿನ ನೆರವು ಬಂದಿದೆ ಎಂದು ಲೋಕೇಂದ್ರ ಸಿಂಗ್​​ ಕಾಲ್ವಿ ವಾಗ್ದಾಳಿ ಮಾಡಿದ್ದಾರೆ.
ದೀಪಿಕಾ ಪಡುಕೋಣೆಯನ್ನು ಸೂರ್ಪನಖಿ  ಮಾಡ್ತೇವೆ..!
ಬಾಲಿವುಡ್​ನ ಪದ್ಮಾವತಿ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಆಕ್ಟ್​ ಮಾಡಿದ್ದಾರೆ. ಒಂದು ವೇಳೆ ವಿರೋಧ ಲೆಕ್ಕಿಸದೆ ಚಿತ್ರ ಬಿಡುಗಡೆ ಮಾಡಿದರೆ, ಪುರಾಣ ಕಾಲದ ಸೂರ್ಪನಖಿಗೆ ಆದ ಘಟನೆ ನಟಿ ದೀಪಿಕಾ ಪಡುಕೋಣೆಗೆ ಮರುಕಳಿಸಲಿದೆ ಅಂತಾ ಎಚ್ಚರಿಸಿದ್ದಾರೆ. ಅಂದ್ರೆ ಸೂರ್ಪನಖಿ ರೀತಿ ದೀಪಿಕಾ ಪಡುಕೋಣೆಯ ಮೂಗನ್ನು ಕತ್ತರಿಸುತ್ತೇವೆ ಅಂತಾ ಎಚ್ಚರಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಕಷ್ಟ ಅಂದ್ರು ಯೋಗಿ ಆದಿತ್ಯನಾಥ..!
ಉತ್ತರ ಭಾರತದಲ್ಲಿ ಪದ್ಮಾವತಿ ಬಿಡುಗಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರ ಒಂದಡಿ ಮುಂದಿಟ್ಟಿದ್ದು, ಡಿಸೆಂಬರ್​ 1ನೇ ತಾರೀಕು ಸಿನಿಮಾ ಬಿಡುಗಡೆ ಆಗೋದ್ರಿಂದ ಕಾನೂನು ಸುವ್ಯವಸ್ಥೆ ನಿರ್ವಹಣೆ ಮಾಡೋದು ಕಷ್ಟ ಅಂತಾ ಹೇಳಿದ್ದು, ಸಿನಿಮಾ ಬಿಡುಗಡೆಗೆ ಮಾಡದಿರುವ ಬಗ್ಗೆ ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ಉತ್ತರ ಪ್ರದೇಶ ಪ್ರಿನ್ಸಿಪಾಲ್​ ಸೆಕ್ರೇಟ್ರಿ ಪತ್ರ ಬರೆದಿದ್ದಾರೆ..

ಆಮಿ ಜಾಕ್ಸನ್ ನಿಂದ “ದಿ ವಿಲನ್” ಗೆ ಬ್ರೇಕ್ !?

ಆಮಿ ಜಾಕ್ಸನ್ ಯಿಂದಾಗಿ ವಿಲನ್ ಚಿತ್ರೀಕರಣಕ್ಕೆ ತಡೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಸದ್ಯ ಮುಂಬೈನಲ್ಲಿ ಸುದೀಪ್ ಪರಿಚಯಿಸುವ ಹಾಡಿನ ಚಿತ್ರೀಕರಣ ಅದ್ದೂರಿಯಾಗಿ ನಡೀತಾ ಇದೆ. ಆದರೆ ಅಲ್ಲಿ ನಟಿಸಬೇಕಾಗಿದ್ದ ಅಮಿ ಆಬ್ಸೆಂಟ್ ಆಗಿದ್ದಾರೆ .ಕಾರಣ ವೀಸಾ ಸಮಸ್ಯೆ  . ಹೀಗಾಗಿ ನಿರ್ದೇಶಕ ಪ್ರೇಮ್ ಶೂಟಿಂಗ್ ಮುಂದೂಡುವ ಪರಿಸ್ಥಿತಿ ಎದುರಿಸಬೇಕಾಗಿದೆ.

ಆಮಿ ಪ್ರಕಾರ ಇದು ಅವರಿಂದ ಆದ ಸಮಸ್ಯೆ ಅಲ್ಲ . ಈಗ ಅಮೆರಿಕಾದಲ್ಲಿ ಇರುವುದರಿಂದ ವೀಸಾ ಸಿಗುವುದು ಕಷ್ಟವಾಗಿದೆ . ೨.೦ ಸಿನಿಮಾ ಚಿತ್ರೀಕರಣ ತಡವಾದ್ದರಿಂದ ವಿಲನ್ ಗೆ ಸಮಸ್ಯೆಯಾಗಿದೆ . ಇದು ಕೇವಲ ನನ್ನಿಂದ ಆಗಿರೋ ಸಮಸ್ಯೆಯಲ್ಲ ಅನ್ನುವುದು ಅಮಿ ಸಮರ್ಥನೆ. ವೀಸಾ ಸಿಕ್ಕ ತಕ್ಷಣ ಶೂಟಿಂಗ್ ಗೆ ಬರುತ್ತೇನೆ ಎಂಬ ಭರವಸೆಯನ್ನು ತಂಡಕ್ಕೆ ಕೊಟ್ಟಿದ್ದಾರೆ . ಆದರೆ ಅಮಿ ಇರುವ ದಿನಗಳಿಗೆ ಇತರ ಕಲಾವಿದರ ದಿನಗಳನ್ನು ಹೊಂದಿಸುವುದು ಕಷ್ಟ. ಪರಿಸ್ಥಿತಿ ಹೀಗಿರುವಾಗ ವಿಲನ್ ಶೂಟಿಂಗ್ ಮುಗಿಯುವುದು  ಕೊಂಚ ತಡವಾದರೂ ಆಗಬಹುದು  ಎನ್ನುವುದು ನಿರ್ದೇಶಕ ಪ್ರೇಮ್ ಅಂಬೋಣ.

 

 

Like Us, Follow Us !

121,086FansLike
1,817FollowersFollow
1,347FollowersFollow
1,653SubscribersSubscribe

Trending This Week