18 C
Bangalore, IN
Monday, December 18, 2017

ರೋ ..ರೋಮಿಯೋಗೆ ಹೆಜ್ಜೆ ಹಾಕಿದ ಮಾಲಾಶ್ರೀ -ಅಂಬರೀಷ್ !

ರೋ ..ರೋಮಿಯೋ ಪುನೀತ್ ಹಾಡಿದ ಹಾಡು ಸಾಕಷ್ಟು ಮೆಚ್ಚುಗೆ ಗಳಿಸಿದೆ. ಇದೇ ಹಾಡಿಗೆ ಇಂದು ಅಂಬರೀಷ್ -ಮಾಲಾಶ್ರೀ ಕುಣಿದು ಕುಪ್ಪಳಿಸಿದ್ದಾರೆ. ಇದೇ ತಿಂಗಳ ಅಂತ್ಯದಲ್ಲಿ  ತೆರೆಗೆ ಬರುತ್ತಿರುವ ಉಪ್ಪು ಹುಳಿ ಖಾರ ಸಿನಿಮಾದ ಮಾಲಾಶ್ರೀ ಪರಿಚಯಿಸುವ ಟೀಸರ್ ಬಿಡುಗಡೆ ಮಾಡಿದ ರೆಬೆಲ್ ಸ್ಟಾರ್ ಅಂಬರೀಷ್ ರೋ ..ರೋಮಿಯೋ ಎಂದಿದ್ದಾರೆ.

ಗುಂಡಿಗೆ ಕಲ್ ಗಂಡೇ ನಾ ನಿನ್ ಥರ ನಾ ಒಂಥರಾ ಅಲ್ಲ ಅಂತ ಹದಿನಾರು ವರುಷದ ಹಿಂದೆ ಮಾಲಾಶ್ರೀ ಜೊತೆಯಲ್ಲಿ ಡಾನ್ಸ್ ಮಾಡಿದ್ದರು ಅಂಬಿ.  ಮತ್ತೆ ಅದೇ ಉತ್ಸಾಹದಲ್ಲಿ ಉಪ್ಪು ಹುಳಿ ಖಾರದ ಹಾಡಿಗೆ ನೃತ್ಯ ಮಾಡಿದ್ದಾರೆ. ಇಡೀ ತಂಡಕ್ಕೆ ಶುಭ ಕೂಡ ಕೋರಿ ಪ್ರಚಾರಕ್ಕೆ ಸಾಥ್ ಕೊಟ್ಟಿದ್ದಾರೆ. ಇದು ಅಭಿಮಾನಿಗಳಿಗಂತೂ ಭರ್ಜರಿ ಖುಷಿಕೊಟ್ಟಿದೆ. ಅಷ್ಟೇ ಅಲ್ಲ ರೋ ..ರೋಮಿಯೋ ಹಾಡು ಯಾರೇ ಕೇಳಿದ್ರು ಮೈ ಕೈ ತಂತಾನೇ ಕುಣಿತಕ್ಕೆ ಸಜ್ಜುಗೊಳ್ಳೋದು ದಿಟ .

ಇಮ್ರಾನ್ ಸರ್ದಾರಿಯಾ ನಿರ್ದೇಶನದ  ಉಪ್ಪು ಹುಳಿ ಖಾರ ಪ್ರೇಕ್ಷಕರಿಗೆ ರುಚಿ ನೀಡಲಿದೆ ಎನ್ನುವ ಭರವಸೆ ಚಿತ್ರ ತಂಡಕ್ಕಿದೆ. ಮಾಲಾಶ್ರೀ ,ಅನುಶ್ರೀ ,ಶರತ್ ,ಜಯಶ್ರೀ ಪ್ರಮುಖ ಪಾತ್ರದಲ್ಲಿದ್ದಾರೆ . ರಾಜ್ಯಾದ್ಯಂತ ಇದೇ 24ಕ್ಕೆ ಉಪ್ಪು ಹುಳಿ ಖಾರ ತೆರೆಕಾಣಲಿದೆ.

ಶಿಕ್ಷಣ ಪದ್ದತಿಯ ಬಗ್ಗೆ ಪುಟ್ಟ ಕಲಾವಿದೆ ಅನ್ವಿತಾಳ ಬಿರುನುಡಿ !

“ಪುಟಾಣಿ ಸಫಾರಿ”ಗೆ ನೂರರ ಸಂಭ್ರಮ !!

ಮಕ್ಕಳ ಸಿನಿಮಾ ಅಷ್ಟೇ ಅಲ್ಲ ದೊಡ್ಡವರು ನೋಡುವಂಥ ಸಿನಿಮಾ ಪುಟಾಣಿ ಸಫಾರಿ . ನೂರು ದಿನಗಳನ್ನು ಪೂರೈಸಿ ತನ್ನ ಓಟ ಮುಂದುವರೆಸಿದೆ . ಹಾರೋಹಳ್ಳಿ ವಿನಾಯಕ, ಶ್ರೀಮಂಜುನಾಥ ಚಿತ್ರಮಂದಿರ ಅರಕೆರೆ (ಶ್ರೀರಂಗಪಟ್ಟಣ )ಯಲ್ಲಿ  ನೂರು ದಿನಗಳ ಸಂಭ್ರಮ ಆಚರಿಸಿದೆ.

ಪುಟಾಣಿ ಸಫಾರಿ ತಂಡದ ಪುಟಾಣಿಗಳ ಮಾತಿನ ಝಳಝಳ … ಲಿಂಕ್ ನಲ್ಲಿದೆ  ನೋಡಿ part 2

ರವೀಂದ್ರ ವೆಂಶಿ ನಿರ್ದೇಶನದ ಪುಟಾಣಿ ಸಫಾರಿ ತೆರೆ ಕಂಡಾಗ ಸಿನಿಮಾ ಶತದಿನಗಳನ್ನು ಕಾಣಬಹುದು ಎಂಬ ನಿರೀಕ್ಷೆ ಇರಲಿಲ್ಲ . ಒಂದೆರಡು ವಾರ ಓಡಿದರೆ ಹೂಡಿದ ಹಣ ಮರಳಿ ಪಡೆಯಬಹುದಲ್ಲ ಎನ್ನುವ ಸಾಧಾರಣ ಹಂಬಲ ಇಟ್ಟುಕೊಂಡಿದ್ದ ತಂಡಕ್ಕೆ ಶತಕ ಬಾರಿಸಿದ್ದು ಮತ್ತಷ್ಟು ಚಿತ್ರಗಳನ್ನು ಮಾಡುವ ಕನಸಗಳಿಗೆ ಇಂಬು ಕೊಟ್ಟಿದೆ.

ಪುಟಾಣಿ ಸಫಾರಿ ನಾಸಿಕ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಅತ್ಯುತ್ತಮ ಮಕ್ಕಳ ಮನರಂಜನೆಯ ಚಿತ್ರ ಪ್ರಶಸ್ತಿ ಗೆದ್ದಿದೆ . ಕಲ್ಕತ್ತ ಕಲ್ಟ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್,  ಸಿಯೋಲ್ ಗುರೋ ಕಿಡ್ಸ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್, ಕಾರ್ಡಿಫ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್, ಇಪ್ಪತ್ತಮೂರನೆ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ , ಸಿನಿಸಿಟಿ  ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಗಳಿಗೆ ನಾಮನಿರ್ದೇಶನವಾಗಿದೆ.

 

ರಿಯಲ್ ಸ್ಟಾರ್ ಉಪೇಂದ್ರ ಮುಂದೆಯೇ ಕಟ್ಟಾಭಿಮಾನಿಯ ಖದರ್ ಹೆಂಗಿದೆ ನೋಡಿ !

ಕಾಲೇಜ್ ಕುಮಾರ ಪಾಸು !

ಚಿತ್ರ: ಕಾಲೇಜ್ ಕುಮಾರ್
ನಿರ್ದೇಶನ: ಹರಿ ಸಂತೋಷ್
ತಾರಾಗಣ: ವಿಕ್ಕಿ ವರುಣ್, ಸಂಯುಕ್ತ ಹೆಗಡೆ, ರವಿಶಂಕರ್, ಶ್ರುತಿ, ಪ್ರಕಾಶ್ ಬೆಳವಾಡಿ, ಅಚ್ಯುತ, ಸಾಧು ಕೋಕಿಲ, ರಾಕ್ ಲೈನ್ ಸುಧಾಕರ್, ಪ್ರಶಾಂತ್ ಸಿದ್ಧಿ, ಅಶ್ವಿನ್ ರಾವ್ ಪಲ್ಲಕ್ಕಿ ಮತ್ತಿತರರು.
ಧಾರಾಕಾರ ಮಳೆ ಸುರಿಯುವ ರಾತ್ರಿ ಒಂದು ಅವಮಾನದಿಂದ ಹುಟ್ಟುವ ಕತೆ ಇದು. ಅಲ್ಲೊಬ್ಬ ಬಾಸು, ಅವನ ಕೈಕೆಳಗೆ ಕೆಲಸ ಮಾಡುವ ಒಬ್ಬ ಮಧ್ಯಮ ವರ್ಗದ ಪ್ರಜೆ. ಆ ಬಾಸ್ ಮಾಡುವ ಅವಮಾನಕ್ಕೆ ಪ್ರತೀಕಾರ ತೀರಿಸಬೇಕು ಅನ್ನುವುದು ಅವನ ಆಸೆ. ಎಲ್ಲಾ ಮಧ್ಯಮ ವರ್ಗದ ತಂದೆಯರಂತೆ ತನ್ನ ಮಗ ತನ್ನ ಆಸೆಯನ್ನು ತೀರಿಸಬೇಕು ಅನ್ನುವುದು ಅವನಿಚ್ಛೆ.
ತನ್ನ ಮಗ ತನ್ನ ಕನಸನ್ನು ನನಸು ಮಾಡಬೇಕು ಅನ್ನುವ ಕಾರಣಕ್ಕೆ ಎಂಥಾ ಕಷ್ಟ ಬಂದರೂ ಎದುರಿಸುವೆ ಅನ್ನುವ ತ್ಯಾಗಮಯಿ ಮಿಡ್ಲ್ ಕ್ಲಾಸ್ ತಂದೆ ಅವನು. ಆದರೆ ಯಾವಾಗ ತನ್ನ ಕನಸು ನೆರವೇರದು ಎಂದು ಅರಿವಾಗಿ ಆರಡಿ ಪ್ರತಿಭೆ, ಮಾತಿನ ಮಲ್ಲ ಅಪ್ಪ ರವಿಶಂಕರ್ ಮಾತು ಸೋತು ಕುಸಿದು ಕೂರುತ್ತಾನೋ ಆಗ ನಿರ್ದೇಶಕ ಹರಿ ಸಂತೋಷ್ ಗೆಲ್ಲುತ್ತಾರೆ.
ಅಪ್ಪ ರವಿಶಂಕರ್ ಆತಂಕದಲ್ಲಿ, ಅಮ್ಮ ಶ್ರುತಿ ಕಳವಳದಲ್ಲಿ, ಮಗ ವಿಕ್ಕಿ ವರುಣ್ ಆಕ್ರೋಶದಲ್ಲಿ ಒಂದು ತಣ್ಣನೆಯ ಮೌನವಿದೆ. ವಿಷಾದವಿದೆ. ಅವೆಲ್ಲವೂ ಪ್ರೇಕ್ಷಕನಿಗೆ ನಾಟುತ್ತದೆ. ಅದು ನಿರ್ದೇಶಕರ ಶಕ್ತಿ.
ಇಲ್ಲಿ ಎರಡು ಜನರೇಷನ್ ಇದೆ. ಒಂದು ತಂದೆ ಒಬ್ಬ ಮಗ. ಅತ್ತ ಪೋಷಕರು ಇತ್ತ ಮಕ್ಕಳು. ಆಕಡೆ ಹಳೇ ಜನರೇಷನ್ ಈ ಕಡೆ ಹೊಸ ಜನರೇಷನ್. ಅವರ ತಳಮಳ, ಇವರ ಒತ್ತಡ, ಅವರ ಆಕಾಂಕ್ಷೆ, ಇವರ ಒದ್ದಾಟ, ಅವರ ಕನಸು, ಇವರ ಟೆನ್ಷನ್, ಅವರ ಶ್ರಮ, ಇವರ ಮೋಜು ಎಲ್ಲವೂ ಇಲ್ಲಿ ಬಂದು ಹೋಗುತ್ತದೆ. ಅವರು ತಪ್ಪಿದ್ದಾರೋ ಇವರು ತಪ್ಪಿದ್ದಾರೋ ಅನ್ನುವುದನ್ನು ನೇರವಾಗಿ ಹೇಳುವುದಿಲ್ಲ. ಒಂದೊಮ್ಮೆ ಪಾತ್ರ ಬದಲಾದಾಗ ಅವರಿಗೆ ಇವರಿಗೆ ಎಲ್ಲರಿಗೂ ಜ್ಞಾನೋದಯ ಮಾಡಿಸುತ್ತಾರೆ ನಿರ್ದೇಶಕರು. ಆದರೆ ಈ ಹಂತದಲ್ಲಿ ಸ್ವಲ್ಪ ಎಡವುತ್ತಾರೆ.
ಕೆಲವು ಕತೆಗಳನ್ನು ತಣ್ಣಗೆ ಹೇಳಿದರೆ ಸೊಗಸು. ಸಣ್ಣ ದನಿಯಲ್ಲಿ ಕಾಡುವಂತೆ ಹೇಳಬೇಕು. ಆದರೆ ಹರಿ ಸಂತೋಷ್ ಇಲ್ಲಿ ಸಣ್ಣ ದನಿಯಲ್ಲಿ ಮೆಲ್ಲಗೆ ಕತೆ ಹೇಳುವ ಹೊತ್ತಲ್ಲಿ ದೊಡ್ಡ ದನಿಯಲ್ಲಿ ಕತೆ ಹೇಳುತ್ತಾರೆ. ಅದು ಕತೆಗೆ ಒಳ್ಳೆಯದಲ್ಲ.
ಮಂದ್ರ ಸ್ಥಾಯಿಯಲ್ಲಿ ಸ್ವಲ್ಪ ಸೂಕ್ಷ್ಮವಾಗಿ ಕತೆ ಹೇಳಿದ್ದರೆ ಬೇರೆಯದೇ ಹಂತಕ್ಕೆ ಹೋಗಬಹುದಾಗಿದ್ದ ಕತೆಗೆ ಮೆಲೋಡ್ರಾಮಾಟಿಕ್ ಗುಣ ದಯಪಾಲಿಸಿ ಅಲ್ಲೇ ನಿಲ್ಲಿಸುತ್ತಾರೆ ಮತ್ತು ಮುಗಿಸುತ್ತಾರೆ. ಅದನ್ನು ಹೊರತು ಪಡಿಸಿದರೆ ನಿರ್ದೇಶಕರು ನಿಜಕ್ಕೂ ಮೆಚ್ಚುಗೆಗೆ ಪಾತ್ರರು.
ವಿಲನ್ ಗಳನ್ನು ಇಷ್ಟ ಪಡುವ ಸಂಯುಕ್ತ ಹೆಗಡೆ, ದುರಹಂಕಾರಿ ಆಡಿಟರ್ ಪ್ರಕಾಶ್ ಬೆಳವಾಡಿ, ಮಗಳನ್ನು ಸಿಕ್ಕಾಪಟ್ಟೆ ಇಷ್ಟಪಡುವ ಮತ್ತು ಅದನ್ನು ತೋರಿಸಿಕೊಳ್ಳದ ತಂದೆ ಅಚ್ಯುತ್, ಗಂಡನ ನೋವಿಗೆ ಹೆಗಲು ಕೊಟ್ಟು ನಗುತ್ತಲೇ ನಿಟ್ಟುಸಿರಾಗುವ ಪತ್ನಿ ಶ್ರುತಿ, ಗೆದ್ದು ಸೋಲುವ ಸೋತು ಗೆಲ್ಲುವ ವಿಕ್ಕಿ ವರುಣ್ ಇಷ್ಟವಾಗುತ್ತಾರೆ. ಅದರಲ್ಲೂ ರವಿಶಂಕರ್ ಎಲ್ಲವನ್ನೂ ಮೀರಿಸಿ ತಾನೇ ಆವರಿಸಿಕೊಳ್ಳುತ್ತಾರೆ. ಕನಸು ನುಚ್ಚುನೂರಾದಾಗ ಅವರ ಹಣೆಯಲ್ಲಿ ಮೂಡುವ ನೆರಿಗೆಗಳು ಸಾಕು ಅವರೊಬ್ಬ ಅದ್ಭುತ ನಟ ಎಂದು ಹೇಳಲು. ಅವರು ಡೈಲಾಗ್ ರಾಜನಷ್ಟೇ ಅಲ್ಲ, ಎಕ್ಸ್ ಪ್ರೆಷನ್ ಬಾದ್ ಷಹಾ ಕೂಡ ಹೌದು. 
ಇನ್ನಿಬ್ಬರನ್ನು ಇಲ್ಲಿ ನೆನೆಯಬೇಕು. ಅವರು ಛಾಯಾಗ್ರಾಹಕ ಅಝಗನ್ ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ. ಈ ಚಿತ್ರದ ಮಧ್ಯಂತರದ ದೃಶ್ಯದಲ್ಲಿ ರವಿಶಂಕರ್, ಶ್ರುತಿ, ವಿಕ್ಕಿಯಷ್ಟೇ ಕಾಡುವುದು ಅಝಗನ್ ಮತ್ತು ಅರ್ಜುನ್. ಆ ದೃಶ್ಯವನ್ನು ಅಝಗನ್ ಎಷ್ಟು ಪರಿಣಾಮಕಾರಿಯಾಗಿ ಚಿತ್ರೀಕರಿಸುತ್ತಾರೆ ಅಂದರೆ ಆ ದೃಶ್ಯದಲ್ಲಿ ಪಾತ್ರಧಾರಿ ತಲೆ ತಗ್ಗಿಸಿದಾಗ ನೋಡುಗ ನಿಟ್ಟುಸಿರು ಬಿಡುತ್ತಾನೆ.
ಹರಿ ಸಂತೋಷ್ ನಿರ್ದೇಶನದ ಈ ಕಾಲೇಜ್ ಕುಮಾರನ ಕತೆ ಕಾಲೇಜ್ ನಲ್ಲಿ ಕಳೆದ ದಿನಗಳಷ್ಟೇ ಖುಷಿ ಮತ್ತು ವಿಷಾದವನ್ನು ದಯಪಾಲಿಸುತ್ತದೆ. ಈ ಸಿನಿಮಾ ಸ್ವಲ್ಪ ನಿಧಾನವಾಗಿದ್ದರೂ ಬೋರ್ ಹೊಡೆಸುವುದಿಲ್ಲ.
– ರಿಚ್ಚೀ

ಜನರಿಗಾಗಿ ಶಿವಣ್ಣ ಮಾಡಿದ ಮನವಿಗೆ ಸ್ಪಂದಿಸಿದ ಸರ್ಕಾರ

ನಟ ಶಿವರಾಜ್ ಕುಮಾರ್ ಕರುನಾಡಲ್ಲಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ಜನಪ್ರಿಯ ನಟ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಅಣ್ಣಾವ್ರ ಹಾದಿಯಲ್ಲೇ ನಡೆಯುತ್ತಿರುವ ಹ್ಯಾಟ್ರಿಕ್ ಹೀರೋ ಸಮಾಜದ ಹಲವು ಸಮಸ್ಯೆಗಳ ಬಗ್ಗೆ ಆಗ್ಗಾಗ್ಗೆ ಗಮನ ಹರಿಸುತ್ತಿರುತ್ತಾರೆ . ನಿನ್ನೆಯಷ್ಟೇ ಜನರ ಸಮಸ್ಯೆ ನೀಗಿಸಲು ಪತ್ನಿ ಸಮೇತರಾಗಿ ಸರ್ಕಾರದ ಗಮನ ಸೆಳೆದಿದ್ದಾರೆ .
ಸಮಾಜದ ಸಮಸ್ಯೆ ಪರಿಹಾರಕ್ಕೆ ಶಿವಣ್ಣ ಯತ್ನ
ಮೊನ್ನೆ ಶಿವಣ್ಣ ನಮ್ಮ ವಿಧಾನಸೌದದ ಬಾಗಿಲು ಬಡಿದಿದ್ರು. ಈ ವೇಳೆಮಾನ್ಯಾತಾ ಟೆಕ್ ಪಾರ್ಕ್ ಬಳಿ ಆಗುತ್ತಿರುವ ಸಮಸ್ಯೆ ಬಗ್ಗೆ ಸಚಿವರ ಗಮನ ಸೆಳೆದಿದ್ರು. ‌‌ಅದನ್ನು ತುಂಬಾ ಸೀರಿಯಸ್ ಆಗಿ ತೆಗೆದುಕೊಂಡ ಸಚಿವರು ಇಂದು ನೇರವಾಗಿ ಶಿವಣ್ಣ ಅವರ ಮನೆ ಬಳಿಗೆ ತೆರಳಿದ್ರು. ಮೊದಲೇ ವಿಚಾರ ಗೊತ್ತಿದ್ರಿಂದ ಶಿವಣ್ಣ ಕೂಡ ಮನೆಯಲ್ಲೇ ಇದ್ರು. ಸಚಿವರು ಎಲ್ಲಾ ಸಮಸ್ಯೆಗಳ ಬಗ್ಗೆ ಸಾರ್ವಜನಿಕರ ಬಳಿ ಮುಕ್ತವಾಗಿ ಚರ್ಚಿಸಿ ಸೂಕ್ತ ಕ್ರಮದ ಭರವಸೆ ನೀಡಿದ್ರು..
ಶಿವಣ್ಣನನ್ನು ಗಮನ ಸೆಳೆದ ಸಮಸ್ಯೆ ಯಾವುದು..?
ಇಷ್ಟೆಲ್ಲಾ ಹೇಳಿದ ಮೇಲೆ ಶಿವಣ್ಣ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯುವ ವಿಚಾರ ಯಾವುದು ಅಂತ ನಿಮ್ಮಲ್ಲಿ ಪ್ರಶ್ನೆ ಮೂಡೋದು ಸಹಜ. ಮಾನ್ಯತಾ ಟೆಕ್ ಪಾರ್ಕ್ ಸಾಕಷ್ಟು ಐಶಾರಾಮಿ ಜನವಸತಿ ಪ್ರದೇಶವಾಗಿದ್ದು, ಐಟಿ ಬಿಟಿ ಉದ್ಯೋಗಿಗಳು ಸಹ ಇದೇ ಪ್ರದೇಶದಲ್ಲಿ ವಾಸವಾಗಿದ್ದಾರೆ. ಜೊತೆಗೆ ಮಾನ್ಯತಾ ದವರು ಪರ್ಮಿಷನ್ ತೆಗೆದುಕೊಂಡಿದ್ದಕ್ಕಿಂತ ಹೆಚ್ಚು ಉದ್ಯೋಗಿಗಳು ಟೆಕ್ ಪಾರ್ಕ್ ನಲ್ಲಿ ಕೆಲಸ ಮಾಡುತ್ತಿದ್ದಾರೆ . ಇದರಿಂದ ವೀಪರೀತ ಟ್ರಾಫಿಕ್ ಸಮಸ್ಯೆ ಎದುರಾಗಿದೆ .  ಮಾನ್ಯತಾ ಟೆಕ್ ಪಾರ್ಕ್ ಬಳಿ ಟ್ರಾಫಿಕ್ ಸಮಸ್ಯೆ ಯಾವ ಮಟ್ಟದಲ್ಲಿ ಇದೆ ಅಂದ್ರೆ ಒಮ್ಮೆ ರಸ್ತೆಗಿಳಿದ್ರೆ ಮನೆ ಅಥವಾ ಆಫೀಸ್ ತಲುಪೋದು ಎಷ್ಟು ಸಮಯ ಅನ್ನೋದನ್ನು ಊಹೆ ಕೂಡ ಮಾಡಲು ಸಾಧ್ಯವಿಲ್ಲ. ಹಾಗಾಗಿ ಜನರೆಲ್ಲಾ ರಸ್ತೆಯಲ್ಲೇ ಸಹಸ್ರ ಶಾಪ ಹಾಕ್ತಿದ್ರು. ತುಂಬಾ ದಿನಗಳಿಂದ ಸಮಸ್ಯೆ ಇರೋದನ್ನು ಮನಗಂಡ ಅಣ್ಣಾವ್ರ ಮಗ ಸರ್ಕಾರದ ಗಮನ ಸೆಳೆದಿದ್ರು. ಇಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಪೊಲೀಸ್ ಇಲಾಖೆ ಜೊತೆ ಚರ್ಚಿಸಿ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದ್ದಾರೆ. ಒಟ್ಟಾರೆ ಜನರ ಸಮಸ್ಯೆ ಶಿವಣ್ಣ ಸ್ಪಂದನೆ ಮಾತ್ರ ಸೂಪರ್ ಅಂತಾನೇ ಹೇಳಬಹುದು ಏನಂತೀರಾ.?
ಜ್ಯೋತಿ ಗೌಡ, ನಾಗಮಂಗಲ

ಹಣ ಗಳಿಸಲು ರಮೇಶ್ ಅರವಿಂದ್ ಕೊಟ್ಟ ಅದ್ಭುತ ಐಡಿಯಾ ಇಲ್ಲಿದೆ ನೋಡಿ .

ಶಿವಣ್ಣ-ರಕ್ಷಿತ್ ಶೆಟ್ಟಿ ಹುಲಿ ಕುಣಿತದ ಝಲಕ್ ಇಲ್ಲಿದೆ .

ಭಕ್ತ ಕನಕದಾಸ ಚಿತ್ರದ ಹುಟ್ಟಿನ ಕಥೆಯ ವಿಡಿಯೋ ಇಲ್ಲಿದೆ ನೋಡಿ .

Like Us, Follow Us !

121,079FansLike
1,815FollowersFollow
1,346FollowersFollow
1,650SubscribersSubscribe

Trending This Week