30.2 C
Bangalore, IN
Wednesday, April 24, 2019

ಮತ್ತೆ ರಾಧಿಕಾ ಪಂಡಿತ್ ನಂಬರ್ 1 ….?

ಸ್ಯಾಂಡಲ್‍ವುಡ್‍ನ ರಾಣಿ ರಮ್ಯಾ ಮಂಡ್ಯಾಕ್ಕೆ ಬಸ್ಸು ಹತ್ತಿದ ನಂತರ ಇಲ್ಲಿ ನಂವರ್ 1 ನಟಿ ಯಾರು ಅಂದ್ರೆ ಎಲ್ಲರು ನೇರವಾಗಿ ಹೇಳ್ತಿದ್ದು ರಾಧಿಕಾ ಪಂಡಿತ್. ಆದ್ರೆ ಯಾವಾಗ ರಾಧಿಕಾ ಸ್ಕ್ರಿಪ್ಟ್ ಆಯ್ಕೆಯಲ್ಲಿ ಚ್ಯೂಸಿಯಾಗಿ, ವರ್ಷಕ್ಕೆ ಒಂದೇ ಸಿನಿಮಾ ಮಾಡೊದಕ್ಕೆ ಶುರುಮಾಡಿದ್ರೋ, ಆ ಗ್ಯಾಪ್‍ನಲ್ಲಿ ಒಂದಷ್ಟು ನಟಿಯರು ಪೈಪೋಟಿ ಕೊಟ್ಟಿದ್ದಂತು ಸುಳ್ಳಲ್ಲ. ಆದ್ರೀಗ ಮತ್ತೆ ರಾಧಿಕಾ ಕರೀಯರ್ ಜೋರಾಗಿದ್ದು, ಬ್ಯಾಕ್ ಟು ಬ್ಯಾಕ್ ಬಹು ನಿರೀಕ್ಷಿತ ಸಿನಿಮಾಗಳು ರಿಲೀಸ್‍ಗೆ ರೆಡಿಯಾಗಿವೆ..ಹಾಗಾದ್ರೆ ಈ ಚಿತ್ರಗಳು ಆಕೆಯನ್ನ ಮತ್ತೆ ನಂಬರ್ ಒನ್ ಮಾಡುತ್ತಾ..?

ರಾಧಿಕಾ ಪಂಡಿತ್ ಸ್ಯಾಂಡಲ್‍ವುಡ್‍ನ ಪ್ರತಿಭಾನ್ವಿತ ನಟಿ.. ಬೆಳೆಯುವ ಸಿರಿ ಮೊಳಕೆಯಲ್ಲಿ ಅಂತಾರಲ್ಲಾ ಹಾಗೆ ಆಕೆಯ ಮೊದಲ ಸಿನಿಮಾ ಮೊಗ್ಗಿನ ಮನಸ್ಸು, ಆಕೆಯ ಅಭಿನಯ ಚಾತುರ್ಯವನ್ನ ತೆರೆದಿಟ್ಟಿತ್ತು.. ಅಂದೇ ಕನ್ನಡ ಚಿತ್ರರಂಗಕ್ಕೊಬ್ರು ಅದ್ಭುತ ನಟಿ ಸಿಕ್ಕಿದ್ರು ಅಂತಾ ಗಾಂಧಿನಗರ ಮಾತಾಡಿಕೊಂಡಿತ್ತು.. ಆಕೆಯ ಚಲುವೆಗೆ, ಮನೋಜ್ಞ ನಟಿನಗೆ ಮಾರು ಹೋಗಿತ್ತು.

SandalwoodA

ಮೊಗ್ಗಿನ ಮನಸ್ಸಿನ ನಂತರ ಒಂದರ ಹಿಂದೆ ಒಂದರಂತೆ ಬಂದ ಹಿಟ್ ಚಿತ್ರಗಳು ರಾಧಿಕಾ ಕೆರಿಯರ್‍ನ್ನ ಮತ್ತಷ್ಟು ಉತ್ತುಂಗಕ್ಕೇರಿಸಿದ್ವು.. ಹಾಗಂತಾ ಅಂದು ರಾಧಿಕಾಗ್ಯಾರು ಪೈಪೋಟಿ ಕೊಡುವವರ್ಯಾರು ಇರ್ಲಿಲ್ವಾ ಅಂತಾ ಕೇಳ್ಬಹುದು.. ಯಾಕೆಂದ್ರೆ ರಾಧಿಕಾ ಜೊತೆ ಒಂದಷ್ಟು ನಟಿಯರು ಎಂಟ್ರಿಕೊಟ್ರೆ, ಅದಾಗಲೇ ರಮ್ಯಾ ನಂಬರ್ ನಟಿಯಾಗಿ ಮಿಂಚ್ತಿದ್ರು.. ಜೊತೆಗೆ ಪರಭಾಷಾ ನಟಿಯರ ಹಾವಳಿ ಕೂಡ ಜಾಸ್ತಿನೆ ಇತ್ತು..

ಈ ನಡುವೆ ರಮ್ಯಾ ಕನ್ನಡದ ಟಾಪ್ ಒನ್ ನಟಿಯಾಗಿದ್ದಾಗಲೆ ರಾಜಕೀಯಕ್ಕೆ ಥಟ್ಟನೆ ಎಂಟ್ರಿಕೊಟ್ಟಿದ್ದು, ಎಲ್ಲರಲ್ಲೂ ಆಶ್ಚರ್ಯ ತಂದಿದ್ರೆ, ಇತ್ತ ರಮ್ಯಾನ ಸ್ಥಾನವನ್ನ ತುಂಬೋರು ಯಾರು ಅನ್ನೋ ಪ್ರಶ್ನೆ ಹುಟ್ಟಿದ್ದಂತು ಸುಳ್ಳಲ್ಲಾ.. ಹಾಗ ಎಲ್ಲರ ಪ್ರಶ್ನೆಗೆ ಉತ್ತರವಾಗಿ ಸಿಕ್ಕಿದ್ದು ಇದೇ ಮೊಗ್ಗಿನ ಮನಸ್ಸಿನ ಹುಡುಗಿ ರಾಧಿಕಾ ಪಂಡಿತ್..

ರಾಧಿಕಾ ಸ್ಕ್ರಿಪ್ಟ್‍ನಲ್ಲಿ ಅದೆಷ್ಟು ಚ್ಯೂಸಿಯಾಗಿದ್ರು ಅಂದ್ರೆ, ವರ್ಷಕ್ಕೆ ಒಂದೇ ಸಿನಿಮಾ ಅನ್ನುವಂತಾಗಿತ್ತು.. ಅಲ್ಲದೆ ಅವರ ಡೆಡಿಕೇಷನ್ ಹೇಗಿತ್ತು ಅಂದ್ರೆ, ಒಂದು ಸಿನಿಮಾ ಮುಗಿಯುವವರೆಗೂ ಮತ್ತೊಂದು ಸಿನಿಮಾವನ್ನ ಒಪ್ಪಿಕೊಳ್ತಿರ್ಲಿಲ್ಲಾ.. ಆ ಗ್ಯಾಪ್‍ನಲ್ಲಿ ರಾಧಿಕಾ ನಂತ್ರ ಬಣ್ಣದ ಲೋಕಕ್ಕೆ ಬಂದ ನಟಿಯರೆಲ್ಲಾ, ನಂಬರ್ ಒನ್ ಸ್ಟಾನಕ್ಕೆ ಪೈಪೋಟಿ ಕೊಡುವುದಿಕ್ಕೆ ಶುರುಮಾಡಿದ್ರು.. ಆದ್ರೆ ಅದೆಲ್ಲವನ್ನ ಸಮಾಧಾನವಾಗಿ ನೋಡಿಕೊಂಡು ಬಂದ ರಾಧಿಕಾ, ಈಗ ನಿಜವಾದ ಸವಾಲಾಕ್ತಿದ್ದಾರೆ..

ಸದ್ಯ ಜೂಮ್ ಸಕ್ಸಸ್‍ನಲ್ಲಿರೊ ಈ ಚೆಲುವೆ ದೊಡ್ಮನೆ ಹುಡುಗನ ಜೊತೆ ಬೆಳ್ಳಿತೆರೆ ಏರಲು ರೆಡಿಯಾಗಿದ್ದಾರೆ.. ಪವರ್‍ಸ್ಟಾರ್ ಪುನೀತ್- ದುನಿಯಾ ಸೂರಿ ಕಾಂಬಿನೇಷನ್‍ನ ಹ್ಯಾಟ್ರಿಕ್ ಚಿತ್ರ ಇದಾಗಿದ್ದು, ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ..ರೆಬೆಲ್‍ಸ್ಟಾರ್ ಅಂಬರೀಷ್, ಸುಮಲತಾ ಅಂಬರೀಷ್, ಡಾ.ಭಾರತಿ ವಿಷ್ಣುವರ್ಧನ್ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಇಲ್ಲಿದ್ದು ಚಿತ್ರ ಸಖತ್ ನಿರೀಕ್ಷೆ ಹುಟ್ಟುಹಾಕಿದೆ..ಈ ಚಿತ್ರ ರಾಧಿಕಾ ಕರಿಯರ್‍ನಲ್ಲಿ ದೊಡ್ಡ ಹಿಟ್ ಆಗೇ ಆಗುತ್ತೆ ಅನ್ನೋ ಲೆಕ್ಕಾಚಾರ ಗಾಂಧಿನಗ್ರ ಪಂಡಿತರದ್ದು..

ssfr

ದೊಡ್ಮನೆ ಹುಡುಗ ಸಿನಿಮಾ ಹಿಂದಿನೆ ಬರ್ತಿರೊ ಮತ್ತೊಂದು ಮೋಸ್ಟ್ ಎಕ್ಸ್ಪೆಕ್ಟೆಡ್ ಚಿತ್ರ ಸಂತು ಸ್ಟ್ರೈಟ್ ಫಾವರ್ಡ್..ನಾಲ್ಕನೆ ಬಾರಿ ರಾಕಿಂಗ್ ಜೋಡಿ ಯಶ್ ಅಂಡ್ ರಾದಿಕಾ ಚಿತ್ರದಲ್ಲಿ ಒಂದಾಗಿದ್ದು, ಇಲ್ಲಿಯೂ ಗೆಲುವು ನಿಶ್ಚಿತ ಅಂತಾ ಹೇಳಲಾಗ್ತಿದೆ..ಯಾಕೆಂದ್ರೆ ಈ ಜೋಡಿ ಮಾಡಿರುವ ಯಾವ ಸಿನಿಮಾ ಕೂಡ ಇಲ್ಲಿವರೆಗೂ ಸೋತಿಲ್ಲಾ.. ಹಾಗಾಗಿ ಈ ಬಾರಿ ಖಂಡಿತಾ ರಾಧಿಕಾ ಹ್ಯಾಟ್ರಿಕ್ ಬಾರಿಸ್ತಾರೆ ಜೊತೆಗೆ ನಂಬರ್ ಒನ್ ಸ್ಥಾನದಲ್ಲಿ ನಿಲ್ತಾರೆ ಅನ್ನೋದು ಅವ್ರ ಅಭಿಮಾನಿಗಳ ನಂಬಿಕೆ..

Team Ciniadda.com

ಕ್ರೇಜಿಸ್ಟಾರ್ ಮಗ ಈಗ Unemployed …

 

ಕರುನಾಡ ಕನಸುಗಾರನ ಮಗನೇ ಈಗ ಕೆಲಸವಿಲ್ಲದವ .. ಅಂತೇ.

ಹೌದು ಸ್ಯಾಂಡಲ್ ವುಡ್’ನ ಪ್ರೇಮಲೋಕದ ಸೃಷ್ಟಿಕರ್ತ, ಕರುನಾಡ ಕನಸುಗಾರ ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಚಿತ್ರರಂಗದ ಎಂಟ್ರಿಗೆ ಸಜ್ಜಾಗಿ ವರ್ಷಗಳು ಉರುಳುತ್ತಿದೆ. ಪ್ರೀತಿಯ ಅಪ್ಪಾಜಿ ನಿರ್ದೇಶನದಲ್ಲಿ ‘ರಣಧೀರ’ನಾಗಿ ಪ್ರೇಮಲೋಕದಲ್ಲಿ ಮೆರೆದಾಡಬೇಕಿದ್ದ ಮನೋರಂಜನ್’ರ ಮೊದಲ ಸಿನೆಮಾ ಕಾರಣಾಂತರಗಳಿಂದ ಸೈಡಾಯಿತು. ಇದರ ಹಿಂದೆ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ ಮನು ಸ್ಯಾಂಡಲ್ ವುಡ್ ‘ಸಾಹೇಬ’ನಾಗಿ ಎಂಟ್ರಿ ಕೊಡಲು ರೆಡಿಯಾಗ್ತಿದ್ದಾರೆ. ಈ ಚಿತ್ರದ ನಡುವಲ್ಲೇ ಕ್ರೇಜಿಸ್ಟಾರ್ ಪುತ್ರನಿಗೆ ಕೆಲಸವಿಲ್ಲ ಎಂಬ ಸುದ್ದಿ ಹೊರಬಿದ್ದಿದೆ.

 

ಕನಸುಗಾರನ ಪುತ್ರನಿಗೆ ಕೆಲಸವಿಲ್ವಾ ಎಂದು ಯೋಚಿಸುತ್ತಿದ್ದೀರಾ….?
ಎಸ್… ಯುವ ನಟ ಮನೋರಂಜನ್ ಶೀಘ್ರದಲ್ಲೇ ನಿರುದ್ಯೋಗಿ ಆಗಲಿದ್ದಾರೆ. ಅದು ತಮ್ಮ ಹೊಸ ಸಿನೆಮಾಕ್ಕಾಗಿ ಅಷ್ಟೇ. 2014ರಲ್ಲಿ ಬಾಕ್ಸ್ ಆಫೀಸ್ ಹಾಗು ಅವಾರರ್ಡ್ಸ್ ಎರಡರಲ್ಲೂ ಕೊಳ್ಳೆ ಹೊಡೆದು ತಮಿಳಿನಲ್ಲಿ ಸೂಪರ್ ಹಿಟ್ ಆಗಿದ್ದ ‘ವೇಲೆ ಇಲ್ಲಾದ ಪಟ್ಟದಾರಿ'(ವಿಐಪಿ) ಚಿತ್ರವು ಕನ್ನಡಕ್ಕೆ ರಿಮೇಕ್ ಆಗಲಿದೆ ಎಂಬ ಸುದ್ದಿ ಹಿಂದೆಯೇ ಹರಿದಾಡಿತ್ತು. ಕಾಲಿವುಡ್’ನಲ್ಲಿ ಧನುಷ್ ನಿರ್ವಹಿಸಿದ ನಿರುದ್ಯೋಗಿ ಇಂಜಿನಿಯರ್ ಪಾತ್ರವು ನಮ್ಮಲ್ಲಿ ಜೂ.ಕ್ರೇಜಿಸ್ಟಾರ್ ಮನೋರಂಜನ್ ಮಾಡಲಿದ್ದಾರೆ ಎಂಬ ಸುದ್ದಿಯೊಂದಿದೆ.

 

2_138_585_amala paul stills in nayak (3)ಈ ತಮಿಳು ಚಿತ್ರದ ರಿಮೇಕ್ ರೈಟ್ಸ್ ಖ್ಯಾತ ಬಹುಭಾಷಾ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಬಳಿಯಿದ್ದು, ಚಿತ್ರದ ನಾಯಕನ ಪಾತ್ರಕ್ಕೆ ಮನೋರಂಜನ್’ರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಈ ಚಿತ್ರವನ್ನು ಅಧ್ಯಕ್ಷ, ರನ್ನ ಚಿತ್ರ ಖ್ಯಾತಿಯ ನಂದಕಿಶೋರ್ ನಿರ್ದೇಶಿಸಲಿದ್ದಾರೆ. ಹಾಗೆಯೇ ವಿಐಪಿ ಚಿತ್ರದಲ್ಲಿ ನಾಯಕಿಯಾಗಿ ಖ್ಯಾತ ಸೌತ್ ನಟಿ ಅಮಲಾ ಪೌಲ್ ಕಾಣಿಸಲಿದ್ದಾರೆ ಎನ್ನುವ ಸುದ್ದಿಯು ಬಂದಿದೆ. ಮೂಲ ಚಿತ್ರದಲ್ಲೂ ಧನುಷ್’ಗೆ ನಾಯಕಿಯಾಗಿ ಅಮಲಾ ಕೂಡ ಬಣ್ಣ ಹಚ್ಚಿದ್ದರು.

 

ಸದ್ಯ ಕಿಚ್ಚ ಸುದೀಪ್’ರ ಹೆಬ್ಬುಲಿ ಚಿತ್ರದೊಂದಿಗೆ ಕನ್ನಡಕ್ಕೆ ಪದಾರ್ಪಣೆಗೈಯ್ಯಲಿರುವ ನಟಿ ಅಮಲಾರನ್ನು ರಾಕ್ ಲೈನ್ ಕೆಲಸವಿಲ್ಲದ ಮನೋರಂಜನ್ ಹೀರೊಯಿನ್ ಮಾಡಲಿದ್ದಾರಾ ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.

 

★ಕಪ್ಪು ಮೂಗುತ್ತಿ

ZEE ದಶಕದ ಸಂಭ್ರಮ

ಮಿರಿ ಮಿರಿ ಮಿಂಚುವ ಬಲ್ಪುಗಳಡಿಯಲ್ಲಿ, Pink Carpetನ ಮೇಲೆ, ಒಬ್ಬೊಬ್ಬರೇ ದಿಗ್ಗಜರನ್ನು ಬರಮಾಡಿಕೊಂಡು ಅವರೊಂದಿಗೆ ಹೆಜ್ಜೆಯಾಕುತ್ತಿದ್ದರೆ ಆಹ್! ಏನೋ ಸಂತೋಷ. ಈ function ಯಾವುದು ಅಂತೀರಾ? ಅದೇ “Zee ದಶಕದ ಸಂಭ್ರಮ”.

ಕಳೆದ ದಶಕದಲ್ಲಿ ಪ್ರತೀ ಕ್ಷೇತ್ರದಲ್ಲೂ ಗಮನಾರ್ಹ ಸಾಧನೆ ಮಾಡಿದ 20 ಜನ ಸಾಧಕರನ್ನು ಗುರುತಿಸಿ ಅವರಿಗೆ ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಅಷ್ಟು ವೈಭವದಿಂದ ಕೂಡಿದ್ದ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ವೇದಿಕೆಯನ್ನೇರಿದ ದಿಗ್ಗಜರು ಕಾರ್ಯಕ್ರಮವನ್ನು ಮತ್ತಷ್ಟೂ ಶ್ರೀಮಂತಗೊಳಿಸಿದರು. ಕಳೆದ ದಶಕದಲ್ಲಿ ಕರ್ನಾಟಕದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ನೆಡೆದ ಏರುಪೇರುಗಳನ್ನೆಲ್ಲಾ ಒಟ್ಟುಮಾಡಿ ರಮೇಶ್ ಅರವಿಂದ್ ಅವರು ನೆಡೆಸಿಕೊಟ್ಟ ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂತು. ವಿಜಯ್ ಪ್ರಕಾಶ್ ಅವರ ಹಾಡು, ವಿಜಯ್ ರಾಘವೇಂದ್ರ, ಗಣೇಶ್, ಶುಭ್ರಾ ಅಯ್ಯಪ್ಪ, ಹರಿಪ್ರಿಯಾ ಅವರ ಕುಣಿತ, ಅನು ಶ್ರೀ, ಆನಂದ್ ಅವರ ನಿರೂಪಣೆ, ಡ್ರಾಮಾ ಜ್ಯುನಿಯರ್ಸ್  ಮಕ್ಕಳ ಡ್ರಾಮ ಕಾರ್ಯಕ್ರಮಕ್ಕೆ ಬಣ್ಣ ತುಂಬಿದವು.

13987552_1044344772339674_8160019826373725033_oಅಂಬರಿಶ್ ಅವರ ಮಾತುಗಳು ಹಾಗು ಅದರ ನಂತರ ಬಂದು  “ತನ್ನೊಂದಿಗೆ ಚಿತ್ರರಂಗಕ್ಕೆ ಕಾಲಿಟ್ಟು ಸಾಲು ಸಾಲು ಹಿಟ್ಟ್ ಚಿತ್ರಗಳನ್ನು ನೀಡಿದ ಪುನೀತ್ ರಾಜಕುಮಾರ್ , ದರ್ಶನ್ ಅವರ ಪರವಾಗಿ ನಾನು ಈ ಪ್ರಶಸ್ತಿ ಸ್ವಿಕರಿಸುತ್ತಿದ್ದೇನೆ ನಾನು ಬಂದು ಪ್ರಶಸ್ತಿ ಸ್ವೀಕರಿಸುತ್ತಿರುವ ಮೊದಲ ಮತ್ತು ಕೊನೆಯ ಕಾರ್ಯಕ್ರಮ ಇದು” ಎಂದು ಹೇಳಿದ ಸುದಿಪ್ ಅಭಿಮಾನಿಗಳ ಮನಗೆದ್ದರು. ರಾಧಿಕಾ ಪಂಡಿತ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದ ರವಿಚಂದ್ರನ್ ಅವರು “ಇಂಡಸ್ಟ್ರೀಗೆ ಬಂದಾಗ್ಲಿಂದನೂ ಈ ಹುಡ್ಗಿ ಒಂದೂ controversy ಮಾಡ್ಕೊಂಡೊಲ್ಲ, ಯಾರೊಂದಿಗೂ ಜಗಳ ಮಾಡ್ಕೊಂಡಿಲ್ಲ, ಲವ್ವು-ಗಿವ್ವು ಮೊದಲೇ ಇಲ್ಲ ಇದ್ರು ಒಂದೇ ಹುಡ್ಗನೊಂದಿಗೆ ಇವಳ ಹೆಸರು ತಳುಕುಹಾಕಿಕೊಂಡಿರೊದು!, ಎಲ್ಲವುದಕ್ಕೂ ಮೊದಲು ನನ್ನೊಂದಿಗೆ ನಟಿಸಿಯೇ ಇಲ್ಲ ಅದ್ಹೇಗೆ ದಶಕದ ನಾಯಕಿ ಆದಲಳಿವಳು” ಎಂದು ಪ್ರೇಕ್ಷಕರನ್ನು ನಗೆಗಡಲಲ್ಲಿ ಮುಳುಗಿಸಿದರು.

470eee2b-0b9a-4284-85ed-c53def328718

ತನ್ನ ಹುಟ್ಟಿನಿಂದಲೂ “ಬದುಕು ಜಟಕಾ ಬಂಡಿ” ಯಂತಹ ಸಮಾಜಮುಖಿ ಕಾರ್ಯಕ್ರಮಗಳನ್ನಲ್ಲದೆ ಆಡು ಆಟ ಆಡು, ಚೋಟಾ ಚಾಂಪಿಯನ್, ಡ್ಯಾಡಿ ನಮಂಬರ್ 1, ಕುಣಿಯೋಣು ಬಾರ, Comedy ಖಿಲಾಡಿಗಳು, Home minister, ಲೈಫು ಇಷ್ಟೇನೆಯಂತಹ ವಿಭಿನ್ನ ಕಾರ್ಯಕ್ರಮಗಳನ್ನು ನೀಡಿ, ಈಗ ಸ ರಿ ಗ ಮ ಪ, ಡ್ರಾಮ ಜ್ಯುನಿಯರ್ಸ್, ಡಾನ್ಸ್ ಕರ್ನಾಟಕ ಡಾನ್ಸ್ ನಂತಹ ಕಾರ್ಯಮುಗಳಿಂದ ಎಷ್ಟೊ ಪ್ರತಿಭೆಗಳನ್ನು ಹೊರತರುತ್ತಿರುವ, ವೀಕೆಂಡ್ ವಿಥ್ ರಮೇಶ್ ನಂಥಹ ಕಾರ್ಯಕ್ರಮದಿಂದ ನಾಡಿನ ದಿಗ್ಗಜರ ಬಗ್ಗೆ ತಿಳಿಸುತ್ತಿರುವುದಲ್ಲದೆ ನಮ್ಮಮ್ಮ ಶಾರದೆ, ಜೊಗುಳ, ರಾಧಾ ಕಲ್ಯಾಣ, ಚಿ.ಸೌ. ಸಾವಿತ್ರಿ, ರಾಜಕುಮಾರಿ, ಅತಿಮಧುರ ಅನುರಾಗ, ಶ್ರೀರಸ್ತು ಶುಭಮಸ್ತು, ದೇವಿ, ಪುನರ್ವಿವಾಹ, ಮಹಾದೇವಿ, ಗೃಹಲಕ್ಷ್ಮಿ, ನಾಗಿಣಿ, ಶ್ರೀ ಮಾನ್ ಶ್ರೀಮತಿ, ಮಹಾನದಿ ಯಂತಹ ಯಶಸ್ವಿ ಧಾರವಾಹಿಗಳನ್ನು ನೀಡಿ ಕರ್ನಾಟಕ ಜನತೆಯ ಗಮನ ಸೆಳೆಯುತ್ತಿರುವ Zee ವಾಹಿನಿ ತನ್ನ 10 ವರ್ಷದ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿಕೊಳ್ಳುತ್ತಿದೆ.

This slideshow requires JavaScript.

ಇದೇ ಶನಿವಾರ ಮತ್ತು ಭಾನುವಾರ 27, 28 ರಂದು ಸಂಜೆ 6:30ತ್ತಕ್ಕೆ ಪ್ರಸಾರವಾಗಲಿರುವ “Zee ದಶಕದ ಸಂಭ್ರಮ”ದ ಅದ್ಧೂರಿ ಕಾರ್ಯಕ್ರಮವನ್ನು ವೀಕ್ಷಿಸಿ ಸಂಭ್ರಮದಲ್ಲಿ ಭಾಗಿಯಾಗಿ.

*ಗಗನಚುಕ್ಕಿ

ದೊಡ್ಮನೆ ಹುಡ್ಗ ಟ್ರೈಲರ್ ಲಾಂಚ್

‘ಹೀರೋ ಪವರ್‌ಫುಲ್ ಆಗಿದ್ರೇನೆ ವಿಲನ್‌ಗೂ ಒಂದು ಮರ್ಯಾದೆ’  ಇಂತಹ ಪವರ್‌ಫುಲ್ ಡೈಲಾಗ್‌ಗಳೇ ತುಂಬಿರುವ ದೊಡ್ಮನೆ ಹುಡುಗ ಸಿನಿಮಾದ ಟ್ರೈಲರ್ ಲಾಂಚ್ ಆಗಿದೆ. ಟ್ರೈಲರ್‌ನ್ನು ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಬಿಡುಗಡೆಗೊಳಿಸಿದ್ದಾರೆ. ಟ್ರೈಲರ್‌ನ್ನು ಯೂಟ್ಯೂಬ್‌ಗೆ ಹಾಕಿ ಕೆಲವೆ ಗಂಟೆಗಳಲ್ಲಿ ನಾಲ್ಕು ಸಾವಿರಕ್ಕು ಹೆಚ್ಚು ಜನ ಟ್ರೈಲರ್ ವಿಕ್ಷೀಸಿದ್ದಾರೆ. ಸೆಪ್ಟಂಬರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುವ ಪ್ಲಾನ್ ಮಾಡಿಕೊಂಡಿರುವ ಸೂರಿ ಮತ್ತವರ ತಂಡ ಸಿನಿಮಾದ ಹಾಡುಗಳನ್ನು ಒಬ್ಬೊಬ್ಬರ ಕೈಲಿ ಬಿಡುಗಡೆ ಮಾಡಿಸಿ ಒಂದು ರೀತಿಯಲ್ಲಿ ಸಂಚಲನ ಮೂಡಿಸಿದ್ದರು. ಈಗ ಟ್ರೈಲರ್ ಲಾಂಚ್ ಆಗಿದ್ದು, ಟ್ರೈಲರ್ ವಿಕ್ಷೀಸಿರುವ ಅಭಿಮಾನಿಗಳು ಸಿನಿಮಾ ನೋಡಲು ಕಾತರರಾಗಿದ್ದಾರೆ.

Maja Talkies : Kannada Reality Comedy Show House , Gets a Make Over

It has always been very challenging to get a Reality Show on Kannada successfully. Srujan Lokesh seems to have proven the fact that it can be done with his reality show Maja Talkies. Maja Talkies was produced under his own home run banner Lokesh Productions.

One of the notable features of this show is, some of the most serious actors like Kannada Actor and Stage Anchor Aparna, Music Director Manohar, Indrajith Lankesh who were never known for comedy, have been featured in comedy roles for the first time. Shwetha , Mimikri Dayanand, Pvan, Vandana, and Remo (Rekha Mohan) have also become a great entertainers through this show.

Recent Introduction of comedians like, Kuri Prathap and Naveen Padil has also boosted the popularity of the show.

This serial experienced mixed reviews from various segments of audience and critics, later on went on to become the Number One Kannada Comedy Reality Show. Some of the Lead actors in Kannada Film Industry who never attempted any comedy items in Kannada Television, have come and entertained the audience through this show.

Kichha Sudeep featured in 25th Episode
Challenging Start Darshan was featured in 50th Episode.
Arjun Sarja in the 75th Episode
Century Star Shivaraj Kumar in the Century Episode

All these episodes established a record TRP for Maja Talkies show.

Srujan, who is known for his impromptu comedy entertainment, Indrajith Lankesh with his larger than life laughter all the time ( reminding Sixer Sidhu, in Hindi Shows) have become best entertaining pair in Kannada Television Industry.

This show is has become a popular show for the Kannada audience who do not reside in Karnataka. A notable trend off late is, when the Kannada NRI’s visit their hometowns , they make it a point to attend Maja Talkies Liveshows in Bangalore.

Having successfully delivered about 150 episodes so far, Maja Takies is now being shifted to a New House. The New House of Maja Talkies has been set up by the same time who had worked on sets of “Comedy Nights With Kapil”.

The first Episode in the new house is featuring, Yogaraj Bhat leading director in Kannada Film Industry, Shubha Poonja, Indu Bindu Nagaraj and others.

The show is expected to continue to entertain the audience for for next half a year in Colors Kannada Channel. The show scheduled at 8.00 PM on Saturday and Sunday as prime time shows.

Yogaraj Bhat’s “1/4 KG Prithi” Nearing Completion

1/4 KG Prithi a New Kannada Movie presented by renowned director Yogaraj bhat is nearing completion

Movie has been produced under the banner of “Long Drive Films”.

This is the first movie directed by Sathya Shourya Sagar. Lyrics for the movie are written by Yogaraja Bhat and Jayanth Kaikini. Chethan Sosca, famous Kannada singer is now working as a music director for the first time. Dance choreography by Harsha and Muarli.

The Movie plotted based on Romantic Journey in the Western Ghats, shot in some of the major national highways.

Vihan appears in a lead role, Hitha Chandrashekar (daughter of veteran Kannada actor Sihi Kahi Chandru) acted in lead female role.

Arjun (Kittu) debuts into editing of Kannada movies. The team is hoping to release trailer of the movie shortly.

“ಟಗರು” ಬೈಕ್‍ನ ಅಸಲಿ ಕಹಾನಿ

ಸ್ಯಾಂಡಲ್‍ವುಡ್‍ನ ಟಾಕ್ ಆಫ್ ದ ಟೌನ್ ಆಗಿರೋದು ಮತ್ತೊಮ್ಮೆ ದುನಿಯಾ ಸೂರಿ ಹಾಗು ಶಿವಣ್ಣ ಒಂದಾಗಿರೋದು.. ದುನಿಯಾ ಸೂರಿ ಟಗರು ಅಂತಾ ಟೈಟಲ್‍ ಇಟ್ಟು, ಮೈಯೆಲ್ಲಾ ಪೊಗರು ಅಂತಾ ಹೇಳಿದನ್ನ ಕಂಡು ಅವ್ರ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ.. ಆದ್ರೆ ಎಲ್ಲದಕ್ಕಿಂತ ಹೆಚ್ಚಾಗಿ ಕಳೆದೆರಡು ದಿನಗಳಿಂದ ಸೋಷಿಯಲ್ ನೆಟ್‍ವರ್ಕ್‍ನಲ್ಲಿ ಓಡಾಡ್ತಿರೊ ಟಗರು ಬೈಕ್ ನೋಡಿ ಮತ್ತಷ್ಟು ಖುಷ್ ಆಗಿದ್ದಾರೆ.. ಆದ್ರೆ ಆ ಬೈಕ್ ಬಗ್ಗೆ ಚಿತ್ರತಂಡ ಹೇಳ್ತಿರೋದೆ ಬೇರೆ.. ಹಾಗಾದ್ರೆ ಈ ಬೈಕ್ ಹಿಂದಿರೊ ಅಸಲಿ ಕಹಾನಿಯಾದ್ರು ಏನು..? ಅಂತೀರಾ..

7ce49102c2caea88dbab91df1e971039
ಸ್ಯಾಂಡಲ್‍ವುಡ್‍ನಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡ್ತಿರೊ ಸಿನಿಮಾ ಟಗರು. ಕಾರಣ ದುನಿಯಾ ಸೂರಿ ಮತ್ತು ಸೆಂಚುರಿಸ್ಟಾರ್ ಶಿವಣ್ಣ ಮತ್ತೊಮ್ಮೆ ಜೊತೆಯಾಗಿರೋದು ಒಂದಾದ್ರೆ, ಮತ್ತೊಂದು ಅವರಿಬ್ಬರ ಫ್ಯಾನ್ಸ್‍ಗೂ ಕಿಕ್ ಏರಿಸ್ತಿರೊ ಟಗರು ಅನ್ನೋ ಟೈಟಲ್. ಹೌದು ಚಿತ್ರಕ್ಕೆ ಅದ್ಯಾವಾಗ ಟಗರು ಅಂತಾ ಹೆಸ್ರನ್ನ ಫಿಕ್ಸ್ ಮಾಡಿದ್ರೊ ನೋಡಿ, ಅದಿಂನಿಂದಲೇ ಸಿನಿಮಾ ಮೇಲೆ ಏನೋ ಒಂಥರ ಕ್ರೇಜ್. ಹಾಗಾಗಿನೆ ಶಿವಣ್ಣನ ಬರ್ತ್‍ಡೆಗೆ ಅವ್ರ ಅಭಿಮಾನಿಗಳು ಟಗರನ್ನೆ ಗಿಫ್ಟ್ ಮಾಡಿ ಖುಷಿ ಪಟ್ಟಿದ್ರು.

a8e5406b-f8be-43ce-9bb0-0d3c86700a68 (1)
ಆದ್ರೆ ಇದೆಲ್ಲದಕ್ಕಿಂತ ಗಾಂಧಿನಗರದಲ್ಲಿ ಸೆನ್ಸೇಷನಲ್ ಹುಟ್ಟುಹಾಕಿದ್ದು ಟಗರುನಂತಿರೊ ಬೈಕು..
ಹೌದು ಈ ಬೈಕ್ ಅಂತೂ ಸೋಷಿಯಲ್ ನೆಟ್‍ವರ್ಕ್‍ನಲ್ಲಿ ಸಿಕ್ಕಾಪಟ್ಟೆ ಸುದ್ದಿ ಆಯ್ತು.. ಈ ಬೈಕನ್ನು ಟಗರು ಚಿತ್ರಕ್ಕಾಗಿ ಸ್ಪೇಷಲ್ ಆಗಿ ರೆಡಿ ಮಾಡಿಸಿದ್ದಾರೆ. ಶಿವಣ್ಣ ಸಿನಿಮಾದಲ್ಲಿ ಈ ಬೈಕ್‍ನಲ್ಲಿಯೇ ರೌಂಡ್ ಹಾಕೋದು ಅಂತೆಲ್ಲಾ ಮಾತಾಡಿಕೊಂಡ್ರು. ಯಾಕೆಂದ್ರೆ ಜಾಕಿ ಸಿನಿಮಾದಲ್ಲಿ ಅಪ್ಪುಗಾಗಿ ಸ್ಪೆಷಲ್ ಬೈಕ್ ರೆಡಿ ಮಾಡಿಸಿದ್ದ ದುನಿಯಾ ಸೂರಿ ಇಲ್ಲೂ ಅಂತಾ ಬೈಕ್ ಮಾಡಿಸಿರಬಹುದು ಅನ್ನೊ ಯೋಚನೆ ಗಾಂಧಿನಗರ ಮಂದಿಯದ್ದಾಗಿತ್ತು.

ಅಸಲಿಗೆ ದುನಿಯಾ ಸೂರಿ ಮತ್ತೆ ಈ ಬೈಕ್‍ನ ಹಿಂದೆ ಬಿದ್ದಿರೋದು ಯಾಕೆ, ಅನ್ನೋ ಮಾಹಿತಿಯನ್ನ ಕಲೆಹಾಕಲು ಹೋದಾಗ, ಸಿಕ್ಕ ಮ್ಯಾಟ್ರೇ ಬೇರೆ.. ಹೌದು ಚಿತ್ರಕ್ಕೂ ಈ ಬೈಕ್‍ಗೂ ಯಾವುದೇ ಸಂಬಂದವಿಲ್ಲ.. ಜಸ್ಟ್ ಅಭಿಮಾನಿಗಳು ಇದನ್ನ ಮಾಡಿಕೊಂಡಿರ್ಬೇಕು, ಅದು ಇಷ್ಟೊಂದು ಸುದ್ದಿಯಾಗ್ತಿದೆ ಅನ್ನೊದನ್ನ ಸ್ಪಷ್ಟಪಡಿಸಿದ್ರು. ಇವೆಲ್ಲಾ ಏನೇ ಇದ್ರೂ, ಟಗರು ಚಿತ್ರದ ಬಗ್ಗೆ ಸಿನಿ ಅಭಿಮಾನಿಗಳಲ್ಲಿ ಎಷ್ಟೋಂದು ಕ್ರೇಜ್  ಇದೆ ಅನ್ನೋದಿಕ್ಕೆ ಇದೊಂದು ಸ್ಮಾಲ್ ಎಕ್ಸಾಂಪಲ್..

ಕಾಲಿವುಡ್’ನಲ್ಲಿ ಕ್ರೇಜ್ ಹುಟ್ಟುಹಾಕಿದ ಜೂನಿಯರ್.ಕಟ್ಟಪ್ಪ !!!

ಬಾಹುಬಲಿ ಚಿತ್ರದ ಬಹುಬಲಾ ಪರಾಕ್ರಮಿ ಬಾಹುಬಲಿ ಕೊಂದು ಜನರಲ್ಲಿ ಯಕ್ಷ ಪ್ರಶ್ನೆಗೆ ಕಾರಣನಾಗಿದ್ದ ಕಟ್ಟಪ್ಪ ಪಾತ್ರದ ಲುಕ್ ಮತ್ತೊಮ್ಮೆ ಸಖತ್ತಾಗೆ ಸುದ್ದಿಯಾಗಿದೆ.

ಹೌದು, ಆದರೆ ಈ ಬಾರಿ ಅದು ತಮಿಳು ಚಿತ್ರರಂಗದಲ್ಲಿ ಎಂಬುದು ವಿಶೇಷ. ಕಾಲಿವುಡ್’ನಲ್ಲಿ ಬಹುನಿರೀಕ್ಷೆ ಮೂಡಿಸಿರುವ ‘ಕಾಷ್ಮೊರ’ ಚಿತ್ರದ ಫಸ್ಟ್ ಲುಕ್ ನಾಯಕ ನಟ ಕಾರ್ತಿ ಬಿಡುಗಡೆ ಮಾಡಿದ್ದಾರೆ. ಮೊದಲ ನೋಟದಲ್ಲೇ ನಟ ಕಾರ್ತಿಯ ಲುಕ್ ಕಟ್ಟಪ್ಪನನ್ನು ನೆನಪಿಸುವಂತಿದೆ. ಅಲ್ಲದೇ ಕಾಲಿವುಡ್’ನಲ್ಲಿ ಕಾಷ್ಮೊರದ ಈ ನ್ಯೂ ಅವತಾರವು ಜೂ.ಕಟ್ಟಪ್ಪನೆಂದು ಪ್ರಸಿದ್ಧಿ ಪಡೆದಿದೆ. ಫಸ್ಟ್ ಲುಕ್’ನಲ್ಲೇ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಬೋಳುತಲೆಯ ಗಡ್ಡದಾರಿ ಕಾರ್ತಿಯ ಹೊಸ ಅವತಾರವು ಸಿನಿಪ್ರಿಯರ ಮೆಚ್ಚುಗೆ ಗಳಿಸಿದೆ. ಪರತಿವೀರನ್ ಎಂಬ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರದ ಬಳಿಕ ಪಯ್ಯ ಚಿತ್ರ ಖ್ಯಾತಿಯ ಕಾರ್ತಿ ಮತ್ತೊಮ್ಮೆ ವಿಭಿನ್ನ ಪಾತ್ರದ ಮೂಲಕ ಕಾಷ್ಮೋರದೊಂದಿಗೆ ಅಕ್ಟೋಬರ್’ನಲ್ಲಿ ತೆರೆಗೆ ಬರಲಿದ್ದಾರೆ.

ಚಿತ್ರದ ಪಾತ್ರವು ಬಾಹುಬಲಿಯ ಕಟ್ಟಪ್ಪನನ್ನು ಹೋಲುತ್ತಿರುವ ಬಗ್ಗೆ ಮಾತನಾಡಿರುವ ನಟ ಕಾರ್ತಿ- ಕಾಷ್ಮೊರ ಚಿತ್ರವು ಸೆಟ್ಟೇರಿ ಮೂರು ವರ್ಷಗಳಾಗಿದೆ. ಚಿತ್ರದ ಪಾತ್ರವನ್ನು ಎಲ್ಲೂ ಹೊರಬೀಳದಂತೆ ಚಿತ್ರತಂಡ ಗೌಪ್ಯವಾಗಿರಿಸಿತ್ತು. ಆದರೆ ಬಾಹುಬಲಿ ಚಿತ್ರವು ಬಿಡುಗಡೆಯಾದಾಗ ಕಟ್ಟಪ್ಪ ಮತ್ತು ಕಾಷ್ಮೊರದ ನನ್ನ ಗೆಟಪ್ ಹೋಲಿಕೆ ಇದೆ ಅನಿಸಿತ್ತು. ಹೀಗಾಗಿ ಕೆಲ ಮಾರ್ಪಾಡುಗಳನ್ನು ಮಾಡಿ, ಕೊನೆಗೂ ಕಾಷ್ಮೊರದ ರಾಜನಾಯಕ ಪಾತ್ರಕ್ಕೆ ಇದೇ ಸೂಕ್ತವೆಂದು ಅದೇ ಲುಕನ್ನು ಇರಿಸಲಾಗಿದೆ ಅಂದಿದ್ದಾರೆ. ಅಲ್ಲದೇ ಕಟ್ಟಪ್ಪ ಪಾತ್ರಧಾರಿ ಹಿರಿಯ ನಟ ಸತ್ಯರಾಜ್ ನಮ್ಮ ಕುಟುಂಬಕ್ಕೆ ಆಪ್ತರು. ಈಗ ಅವರ ಸ್ಥಾನದಲ್ಲಿ ನನ್ನನ್ನು ಜೂನಿಯರ್ ಕಟ್ಟಪ್ಪ ಅಂತ ಸಂಭೋಧಿಸುತ್ತಿರುವುದು ಖುಷಿ ಕೊಡುತ್ತಿದೆ ಎಂದು ಕಾರ್ತಿ ಹರ್ಷ ವ್ಯಕ್ತಪಡಿಸಿದ್ದಾರೆ. ರೌದಿರಂ ಚಿತ್ರ ಖ್ಯಾತಿಯ ಗೋಕುಲ್ ನಿರ್ದೇಶಿಸುತ್ತಿರುವ ಕಾಷ್ಮೊರ ಚಿತ್ರವು ಡಾರ್ಕ್ ಫ್ಯಾಂಟಸಿ ಕಥಾಹಂದರ ಹೊಂದಿರುವ ಚಿತ್ರ ಎನ್ನಲಾಗಿದೆ.

೬೦ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರೊ ಕಾಷ್ಮೊರದಲ್ಲಿ ಕಾರ್ತಿಗೆ ನಾಯಕಿಯರಾಗಿ ಕಾಲಿವುಡ್ ಕ್ವೀನ್ ನಯನತಾರ ಮತ್ತು ನಟಿ ಶ್ರೀದಿವ್ಯ ಕಾಣಿಸಿಕೊಂಡಿದ್ದಾರೆ. ಈ ಬಿಗ್ ಬಜೆಟ್ ಚಿತ್ರದ ಮೂಲಕ ಮತ್ತೊಮ್ಮೆ ಕಬಾಲಿ ಖ್ಯಾತಿಯ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣ್ ಸಂಗೀತದ ಹೊನಲರಿಸಲಿದ್ದಾರೆಂಬ ಮಾತುಗಳು ಕಾಲಿವುಡ್ ಕಡಲತೀರದಿಂದ ಕೇಳಿ ಬರುತ್ತಿದೆ.

ಈ ಸೌತ್ ಚಿತ್ರದ ಮತ್ತೊಂದು ವಿಷೇಶತೆ ಅಂದರೆ ಚಿತ್ರದ ಕೊನೆಯ ೧೫ ನಿಮಿಷಕ್ಕೆ ೩ಡಿ ಫೇಸ್ ಸ್ಕ್ಯಾನ್ ತಂತ್ರಜ್ಞಾನ ಬಳಸಲಾಗಿದೆ. ಈ ತಂತ್ರಜ್ಞಾನವನ್ನು ಬಳಸಿದ ಮೊದಲ ದಕ್ಷಿಣ ಭಾರತದ ಚಿತ್ರವೆಂಬ ಖ್ಯಾತಿ ಕಾಷ್ಮೊರದ ಪಾಲಾಗಿದೆ. ಅಂದಹಾಗೆ ಕಾಷ್ಮೊರ ಚಿತ್ರದ ಫಸ್ಟ್ ಲುಕ್ ತಮಿಳು,ತೆಲುಗು,ಮಳಯಾಳಂ ಮತ್ತು ಕನ್ನಡದಲ್ಲೂ ಬಿಡುಗಡೆಯಾಗಿದೆ. ಹೀಗಾಗಿ ಈ ಚಿತ್ರವು ಕನ್ನಡದಲ್ಲಿ ಡಬ್ ಆಗಲಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿರುವುದಂತೂ ಸುಳ್ಳಲ್ಲ.

★ಕಪ್ಪು ಮೂಗುತ್ತಿ

ದಟ್ಸ್ ದ ಪವರ್ ಆಫ್ ಕಿಚ್ಚ ಸುದೀಪ್!

ಸ್ಯಾಂಡಲ್‌ವುಡ್‌ನಲ್ಲಿ ಈಗಂತೂ ನಂದೆ ಹವಾ ಅನ್ನೋರೆ ಜಾಸ್ತಿ.. ಈಗಷ್ಟೇ ಕಾಲಿಡ್ತಿರೊ ನಟರಿಂದ ಹಿಡಿದು ಸ್ಟಾರ್ ನಟರೆಲ್ಲಾ ಇದೇ ಡೈಲಾಗ್ ಹಿಂದೆ ಬಿದ್ದಿದ್ದಾರೆ.. ಆದ್ರೆ ಬಾಕ್ಸ್ ಆಫೀಸ್‌ನಲ್ಲಿ ನಿಜವಾದ ಹವಾ ಹುಟ್ಟುಹಾಕ್ತಿರೋದ ಮಾತ್ರ ಒನ್ ಅಂಡ್ ಓನ್ಲೀ ಕಿಚ್ಚಾ ಸುದೀಪ್. ಅಭಿನಯ ಚಕ್ರವರ್ತಿ ಕಿಚ್ಚನ ಕಿಚ್ಚು ಕರ್ನಾಟದಲ್ಲಿ ಮಾತ್ರ ಇಲ್ಲಾ, ತಮಿಳುನಾಡಿನಲ್ಲೂ ಅಬ್ಬರ ಸಿಕ್ಕಾಪಟ್ಟೆ ಜೋರಾಗಿದೆ.

ಹೌದು ರೀ, ನೀವು ಈ ಮಾತನ್ನ ನಂಬ್ಲೇಬೇಕು. ಯಾಕಂದ್ರೆ ಕನ್ನಡದ ಕೋಟಿಗೊಬ್ಬ ತಮಿಳಿನಲ್ಲಿ ಮುಡಿಂಜ ಇವನ ಪುಡಿಯಾಗಿ  ಕಾಲಿವುಡ್ ಬಾಕ್ಸ್ ಆಫೀಸ್‌ನಲ್ಲೂ ಕೊಳ್ಳೆ ಹೊಡೆಯುತ್ತಿದ್ದಾನೆ. ಅದರ ಜೊತೆ ಅಲ್ಲಿನ ಕೋಟಿ ಕೋಟಿ ಅಭಿಮಾನಿಗಳ ಹೃದಯ ಗೆದ್ದಿದ್ದಾನೆ. ಕಿಚ್ಚನ ಸ್ಟೈಲ್‌ಗೆ, ನಟನೆಗೆ,ಹೀರೋಯಿಸಂಗೆ ಅಲ್ಲಿ ಮಂದಿ ಫುಲ್ ಫಿದಾ ಆಗ್ಬಿಟ್ಟಿದ್ದಾರೆ..  ಹಾಗಾಗಿ ಅಲ್ಲಿ ಹೊಡೆಯುತ್ತಿರುವ ಶಿಳ್ಳೆ-ಚಪ್ಪಾಳೆ ಸೌಂಡ್ ಕರುನಾಡಿನವರೆಗೂ ಕೇಳಿಬರ್ತಿದೆ.

ಹಾಗಾಗಿ ತಮಿಳು ಅಭಿಮಾನಿಗಳ ಸುದೀಪ್ ಮೇಲಿನ ಕ್ರೇಜ಼್ ನೋಡಿನೇ ಥಿಯೇಟರ್ ಸಂಖ್ಯೆ ಕೂಡ ಹೆಚ್ಚಾಗಿದೆ.. ಅಂದಹಾಗೆ ಕಳೆದ ವಾರ ತಮಿಳುನಾಡಿನಾದ್ಯಂತ ಕೇವಲ ೧೬೦ (160) ಥಿಯೇಟರ್‌ನಲ್ಲಷ್ಟೇ ರಿಲೀಸ್ ಆಗಿದ್ದ ಈ ಸಿನಿಮಾ, ಈ ವಾರದಿಂದ ಸುಮಾರು ೧೦೮ (108) ಥಿಯೇಟರ್ ಹೆಚ್ಚಿಸಿಕೊಳ್ಳೊ ಮೂಲಕ ಟೋಟಲ್ ೨೬೮ (268) ಚಿತ್ರಮಂದಿಗಳಲ್ಲಿ ಕೋಟಿಗೊಬ್ಬ ಆರ್ಭಟಿಸ್ತಿದ್ದಾನೆ.

ದಿನದಂದ ದಿನಕ್ಕೆ ಕೋಟಿಗೊಬ್ಬನ ಕಲೆಕ್ಷನ್ ಕೂಡ ಹೆಚ್ಚಾಗ್ತಿದ್ದು, ಅಲ್ಲಿನ ವಿತರಕರು ಫುಲ್ ಖುಷ್ ಆಗಿ,  ಎಷ್ಟು ದಿನ ಎಲ್ಲಿದ್ದನಪ್ಪಾ ಕಿಚ್ಚಿರೊ ಹೀರೋ ಅಂತಿದ್ರೆ ,ಇತ್ತ ಕಾಲಿವುಡ್ ನಿರ್ಮಾಪಕರು ತಮ್ಮಲ್ಲಿ ತಾವೇ ಬೇರೆ ಬೇರೆ ಸ್ಕೆಚ್ಗಳನ್ನು  ಹಾಕ್ತಿದ್ದಾರಂತೆ.

ಅದಕ್ಕೆ ನಾವ್ ಹೇಳಿದ್ದು ದಟ್ಸ್ ದ ಪವರ್ ಆಪ್ ಕಿಚ್ಚಾ ಸುದೀಪ್ 🙂 !

ಅಂದ ಹಾಗೆ ತಮಿಳಿನಲ್ಲಿ ಈ ಚಿತ್ರದ ಹೆಸರು – ಮುಡಿಂಜಾ ಇವನ ಪುಡಿ ! 

ಕನ್ನಡದಲ್ಲಿ ಇದರ ಅರ್ಥ , “ಸಾಧ್ಯ ಆದರೆ ಇವನ್ನ ಹಿಡಿ” ! 

ಹೆಸರಿಗೆ ತಕ್ಕಂತೆ ಇನ್ನು ಕಿಚ್ಚ ಸುದೀಪ್ ನ ಹಿಡಿಯೋದು ಕಷ್ಟನೇ 🙂

 

ಹೊಸ ಪ್ರಯೋಗದತ್ತ ಬರ್ಫೀ ಬಾಯ್ ರಣಬೀರ್ ಕಪೂರ್..

ಮತ್ತೊಂದು ಪ್ರಯೋಗದತ್ತ ಬರ್ಫೀ ಹುಡುಗ ರಣಬೀರ್ ಕಪೂರ್..

ಇಂಡಸ್ಟ್ರಿಗೆ ಎಂಟ್ರಿಕೊಟ್ಟ ಹೊಸ್ತಿಲಲ್ಲಿ ರಣಬೀರ್ ಕಪೂರ್ ತನ್ನ ಅಜ್ಜನನ್ನ ಮೀರಿಸ್ತಾನೆ ಅಂತ್ಲೇ ಬಲವಾಗಿ ನಂಬಲಾಗಿತ್ತು. ಬಿಟೌನ್‍ನಲ್ಲಿ ರಣಬೀರ್ ಮೂಡಿಸಿದ ಭರವಸೆ ಹಾಗಿತ್ತು.. ಆದ್ರೆ ಇತ್ತೀಚೆಗ್ಯಾಕೋ ಈ ನಟನ ಸಿನಿಮಾಗಳು ಬಾಕ್ಸ್ ಆಫೀಸ್‍ನಲ್ಲಿ ಮೋಡಿ ಮಾಡೋದನ್ನೇ ನಿಲ್ಲಿಸಿವೆ. ಮೊನ್ನೆ ತಾನೆ ತೆರೆಕಂಡ ಇಮ್ತಿಯಾಸ್ ಅಲಿ ನಿರ್ದೇಶಿಸಿದ ತಮಾಷ ಕೂಡ ಗಲ್ಲಿ ಪೆಟ್ಟಿಗೆ ಮಗುಚಿಕೊಳ್ತು. ಅಲ್ಲಿಂದ ಈ ನಟನ ವರಸೆ ಬದ್ಲಾಗಿದೆ ಅಂತ್ಲೇ ಮಾತು.

ಹಾಗ್ನೋಡೋಕೆ ಹೋದ್ರೆ, ಬಿಟೌನ್‍ನಲ್ಲಿ ಪಾತ್ರಗಳಲ್ಲೂ ಮತ್ತು ಸ್ಟೋರಿಯಲ್ಲೂ ಎಕ್ಸ್‍ಪೆರಿಮೆಂಟ್ ಮಾಡ್ತಿರೋ ನಾಯಕರಲ್ಲಿ ಮುಂದಿರೋದು ರಣಬೀರ್ ಕಪೂರ್. ತಮಾಷಗೂ ಮುನ್ನ ತೆರೆಕಂಡ ರಾಯ್ ಕೂಡ ಇವ್ರ ಕೆರಿಯರ್‍ನಲ್ಲಿ ಪ್ರಯೋಗವಾದ ಸಿನಿಮಾವೇ. ಆದ್ರೆ ಜನ ಯಾಕೋ ಈ ಚಿತ್ರವನ್ನ ಇಷ್ಟ ಪಡದೆ ಪಕ್ಕಕ್ಕೆ ತಳ್ಳಿ ಬಿಟ್ರು. ಹೀಗಾಗಿ ರಣ್ಬೀರ್ ತನ್ನ ಲವ್ ಸ್ಟೋರಿ, ಬ್ರೇಕ್ ಸುದ್ದಿಗಳಿಗೆ ತಿಲಾಂಜಲಿ ಹೇಳಿ ಹೊಸ ಆಲೋಚನೆಯಲ್ಲಿ ತೊಡಗಿದ್ದಾರಂತೆ. ಅದ್ರ ಮೊದಲ ಹೆಜ್ಜೆಯೇ. ಫೀಕು ನಿರ್ದೇಶಕ ಶೂಜಿತ್ ಸಿರ್ಕಾರ್ ಸಿನಿಮಾಗೆ ಸಹಿ ಹಾಕಿರೋದು.

ರಣಬೀರ್ ಕೇವಲ ಸಿನಿಮಾದಲ್ಲಷ್ಟೇ ಅಲ್ಲ. ಆಟ ಆಡೋದ್ರಲ್ಲೂ ಫೇಮಸ್ಸು ಅಂತ ಈಗಾಗ್ಲೇ ನಿಮ್ಗೂ ಗೊತ್ತಾಗಿದೆ. ಇವ್ರ ಈ ವಿಶಿಷ್ಟ ಕಲೆಯನ್ನೇ ಮುಂದಿಟ್ಟುಕೊಂಡು ಕಥೆ ಹೆಣೆದಿದ್ದಾರೆ ಶೂಜಿತ್ ಸಿರ್ಕಾರ್. ಇನ್ನು ರಣ್ಬೀರ್ ಯಾವ ಆಟ ಆಡ್ತಾರೆ ಅನ್ನೋದನ್ನ ಹೊಸದಾಗಿ ಹೇಳ್ಬೇಕಿಲ್ಲ. ಮೈದಾನಕ್ಕಿಳಿದರೆ ಆಯಾಸ ಮಾಡಿಕೊಳ್ಳದೆ ಲವಲವಿಕೆಯೊಂದಿರೋ ಛಲಗಾರ. ಹೌದು ನಾವು ಹೇಳ್ತಿರೋದು ರಣಬೀರ್ ಫುಟ್‍ಬಾಲ್ ಆಟದ ಬಗ್ಗೆ. ನಮ್ಮ ಸೀನಿಯರ್ ಕ್ರಿಕೆಟರ್ ತಂಡದೊಂದಿಗೆ ಕಾಲ್ಚೆಂಡಿನ ಕಾದಟಕ್ಕೆ ಇಳಿದಿದ್ದ ಈ ನಟ ಅಲ್ಲೂ ಹಂಡ್ರೆಡ್ ಪರ್ಸೆಂಟ್ ಪ್ರೇಕ್ಷಕರ ಮನಗೆದ್ದಿದ್ರು. ಅದೇ ಈಗ ಶೂಜಿತ್ ಸಿರ್ಕಾರ್ ಅವ್ರ ಸಿನಿಮಾದ ಕಾನ್ಸೆಪ್ಟ್.

ಬಿಟೌನ್ ಮಾಹಿತಿಯ ಪ್ರಕಾರ ಇನ್ನೂ ಹೆಸರಿಡದ ಈ ಸಿನಿಮಾದಲ್ಲಿ ಅತಿ ಉತ್ಸಾಹಿ ಫುಟ್‍ಬಾಲ್ ಪ್ಲೇಯರ್ ಆಗಿ ರಣ್ಬೀರ್ ಕಾಣಿಸಿಕೊಳ್ಳಲಿದ್ದಾರಂತೆ. ಅದಕ್ಕಾಗಿ ನಿರ್ದೇಶಕ ಶೂಜಿತ್ ಸಿರ್ಕಾರ್ ಕೂಡ ಈ ನಟನಿಗೆ ಫಿಟ್ನೆಸ್ ಹೆಚ್ಚಿಸಿಕೊಳ್ಳಲು ಸಲಹೆ ನೀಡಲಾಗಿದ್ಯಂತೆ. ಈ ಮೂಲಕನಾದ್ರೂ ರಣಬೀರ್ ಗೆ ಬ್ರೇಕ್ ಸಿಗ್ಬಹುದಾ? ಅನ್ನೊ ಪ್ರಶ್ನೆ ಎಲ್ಲರಲ್ಲೂ ಇದೆ.

Like Us, Follow Us !

120,187FansLike
1,826FollowersFollow
1,573FollowersFollow
4,672SubscribersSubscribe

Trending This Week