23 C
Bangalore, IN
Tuesday, March 26, 2019

ಯೋಗರಾಜ್ ಭಟ್ಟರು ಅರ್ಪಿಸುವ “¼ KG ಪ್ರೀತಿ”

ಕೊನೆಯ ಹಂತದಲ್ಲಿ ಯೋಗರಾಜ್ ಭಟ್ಟರ “¼ KG ಪ್ರೀತಿ”.

ಯೋಗರಾಜ್ ಭಟ್ ಅರ್ಪಿಸುವ ‘ಲಾಂಗ್ ಡ್ರೈವ್ ಫಿಲಮ್ಸ್’ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ‘¼KG ಪ್ರೀತಿ’ ಸಿನೆಮಾ ಕೊನೆಯ ಹಂತ ತಲುಪಿದೆ. ಸತ್ಯ ಶೌರ್ಯ ಸಾಗರ್ ರವರ ಮೊದಲ ಸಿನೆಮಾ ಇದಾಗಿದೆ .. ಯೋಗರಾಜ್ ಭಟ್ ಹಾಗೂ ಜಯಂತ್ ಕಾಯ್ಕಣಿ ಜೋಡಿ ಈ ಚಿತ್ರಕ್ಕೆ ಸಾಹಿತ್ಯ ಬರೆದಿದ್ದಾರೆ. ಇದುವರೆಗೂ ಗಾಯಕರಾಗಿ ಜನರ ಕಿವಿಗೆ ಇಂಪು ಕೊಟ್ಟಿದ್ದ ಚೇತನ್ ಸೋಸ್ಕ ಪ್ರಥಮ ಬಾರಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಹರ್ಷ ಹಾಗೂ ಮುರುಳಿ ನೃತ್ಯ ಸಂಯೋಜನೆ ಮಾಡಿದ್ದು, ‘ಬಾಂಬೆ ಮಿಠಾಯಿ’ಯ ಆರ್ ಕೆ ಶಿವಕುಮಾರ್ ಅವರ ಎರಡನೇ ಸಿನೆಮಾ ಇದಾಗಿದ್ದು, ಇಡೀ ಸಿನೆಮಾವನ್ನು ವರ್ಣಮಯವಾಗಿ ತೋರಿಸಿದ್ದಾರೆ.

ಇದೊಂದು ಜರ್ನಿ ಸಿನೆಮಾ ಆಗಿದ್ದು ಪಶ್ಚಿಮ ಘಟ್ಟ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆಕರ್ಷಕವಾಗಿ ಚಿತ್ರಿಸಿದ್ದಾರೆ . ನಾಯಕ ವಿಹಾನ್ ಹಾಗೂ ನಾಯಕಿ ಹಿತ ಚಂದ್ರಶೇಖರ್ ಅಭಿನಯ ಪೇಕ್ಷಕರನ್ನು ಸೆಳೆಯಲಿದೆ .. ಚಿತ್ರ ಈಗ ಸಂಕಲನದಲ್ಲಿದ್ದು, ಅರ್ಜುನ್ (ಕಿಟ್ಟು) ಮೊದಲ ಬಾರಿಗೆ ಸಂಕಲನ ಮಾಡುತ್ತಿದ್ದಾರೆ. ಮುಂದಿನ ವಾರದಲ್ಲಿ ಟ್ರೈಲರ್ ಬಿಡುಗಡೆ ಮಾಡುವ ಉತ್ಸಾಹದಲ್ಲಿ ಚಿತ್ರತಂಡವಿದೆ.

ಸಂತೆಯಲ್ಲಿ ನಿಂತ ಕಬೀರ ಟ್ರೈಲರ್

ಗಣೇಶ್ ಪಟಾಕಿ – ಟ್ರೈಲರ್ , ರಿಲೀಸ್ – ಜುಲೈ 29

ಮುಂಗಾರುಮಳೆ-2 ಆಡಿಯೋ ಲಾಂಚ್‌ಗೂ ಒಂದು ಟ್ರೈಲರ್ :) !

ಮುಂಗಾರುಮಳೆ-2 ಆಡಿಯೋ ಲಾಂಚ್‌ಗೂ ಒಂದು ಟ್ರೈಲರ್ 🙂 !

ಹೌದು, ಗೋಲ್ಡನ್‌ಸ್ಟಾರ್ ಗಣೇಶ್ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಮುಖ್ಯಭೂಮಿಕೆಯಲ್ಲಿರುವ ಮುಂಗಾರುಮಳೆ-2 ಸಿನಿಮಾ ತಂಡದಿಂದ, ವಿಭಿನ್ನ ಪ್ರಯತ್ನವೆಂಬಂತೆ ಆಡಿಯೊ ರೀಲಿಸ್‌ಗೂ ಮುನ್ನ ಆಡಿಯೋದ ಬಗ್ಗೆ ಒಂದು ಟ್ರೈಲರ್ ಮಾಡಿ ಹರಿಯ ಬಿಟ್ಟಿದೆ.

ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿ ಎರಡೇ ದಿನಕ್ಕೆ ಇದು ಲಕ್ಷಕ್ಕೂ ಹೆಚ್ಚು ಜನರನ್ನು ತನ್ನತ್ತ ಸೆಳೆದು ಟ್ರೆಂಡ್ ಸೆಟ್ ಮಾಡುತ್ತಿದೆ.

ಮುಂಗಾರು ಮಳೆ ಹೆಸರನ್ನು ಕೇಳದ ಕನ್ನಡದ ಯಾವುದೇ ಪ್ರೇಕ್ಷಕನಿಲ್ಲ! ಹಾಗು ಒಂದು ಕಾಲದಲ್ಲಿ ಸುಮಾರು ಆಯಾಮಗಳಲ್ಲಿ ಟ್ರೆಂಡ್ ಸೆಟ್ ಮಾಡಿದ ಸಿನಿಮಾ ಅದು.
ಪ್ರೇಮಿಗಳ ಮನಸ್ಸಿನಲ್ಲಿ ಬೆಚ್ಚಗೆ ಕೂತ ಸಿನಿಮಾ, ಕಾಮಿಡಿ ಟೈಮ್‌ನಂತಹ ಒಂದು ಶೋನಿಂದ ಬಣ್ಣದಲೋಕಕ್ಕೆ ಬಂದ ಗಣೇಶ್‌ಗೆ ಗೋಲ್ಡನ್ ಸ್ಟಾರ್ ಎಂದು ಬಿರುದು ನೀಡಿದ ಸಿನಿಮಾ ಅದು.

ಆ ಸಿನಿಮಾ ಹಾಡುಗಳು ಸಹ ಒಂದು ಟ್ರೆಂಡ್ ಸೆಟ್ ಮಾಡಿದ್ದವು. ಹಾಗಾಗಿ ಈಗಿನ ಸಿನಿಮಾ ಮುಂಗಾರುಮಳೆ-2 ಚಿತ್ರದ ಹಾಡುಗಳ ಮೇಲೂ ಅಷ್ಟೇ ನಿರೀಕ್ಷೆ ಇದೆ.

ನಾಯಕ ನಟ ಗಣೇಶ್ ಮತ್ತು ನಿರ್ಮಾಪಕ ಗಂಗಾಧರ್ ಹೊರತುಪಡಿಸಿ ಮುಂಗಾರುಮಳೆ ಚಿತ್ರದಲ್ಲಿ ತೊಡಿಗಿಸಿಕೊಂಡಿದ್ದ ಸಾಕಷ್ಟು ತಂತ್ರಜ್ಞರು ಭಾಗ 2 ರಲ್ಲಿ ಇಲ್ಲ.

ಈ ಚಿತ್ರವನ್ನು ಶಶಾಂಕ್ ನಿರ್ದೇಶಿಸಿದರೆ, ಸಂಗೀತ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರದ್ದು, ಸಾಹಿತ್ಯ ಜಯಂತ್‌ಕಾಯ್ಕಿಣಿ ಮತ್ತು ಶಶಾಂಕ್ ಅವರದ್ದು.

ಮೊದಲ ಚಿತ್ರದಂತೆ ಈ ಚಿತ್ರದ ಸಂಗೀತವೂ ಹಿಟ್ ಆದರೆ ಸಿನಿಮಾ ಗೆಲ್ಲಲು ಸಹಕಾರಿಯಾಗುತ್ತದೆ ಎಂಬ ಉದ್ದೇಶದಿಂದ ಮ್ಯೂಸಿಕ್ ಟ್ರೈಲರ್ ತಂತ್ರಕ್ಕೆ ಮೊರೆ ಹೋಗಿರುವಂತಿದೆ, ಶಶಾಂಕ್ ಮತ್ತವರ ತಂಡ.

ಟ್ರೈಲರ್‌ನಲ್ಲಿ ಸಿನಿಮಾಗಾಗಿ ಹಾಡಿರುವ ಎಲ್ಲ ಗಾಯಕರು ಮಾತನಾಡಿದ್ದಾರೆ. ಹಾಡನ್ನು ಚಿತ್ರೀಕರಿಸುವ ಜಾಗ ಮತ್ತು ಸನ್ನೀವೇಶಗಳು ಇವೆ. ಇನ್ನು ಸಾಹಿತ್ಯ ಒದಗಿಸಿರುವ ಜಯಂತ್‌ಕಾಯ್ಕಿಣಿ, ಶಶಾಂಕ್ ಅವರು ಸಹ ಟ್ರೈಲರ್‌ನಲ್ಲಿ ಮುಖ ತೋರಿಸಿದ್ದಾರೆ.

ಚಿತ್ರದ ಹೈಲೆಟ್ ಎಂದರೆ ರವಿಚಂದ್ರನ್ ಅವರಿಗೆ ಒಂದು ಹಾಡನ್ನು ವಿಶೇಷವಾಗಿ ರಚಿಸಲಾಗಿದೆ. ಒಟ್ಟಿನಲ್ಲಿ ಭಾಗ ಒಂದರಂತೆ ಇದು ಸಹ ಬ್ಲಾಕ್ ಬಸ್ಟರ್ ಹಿಟ್ ಆಗುವತ್ತ ತನ್ನ ಹೆಜ್ಜೆ ಇಟ್ಟಿದೆ ಎನ್ನಬಹುದು.

ಅಂದಹಾಗೆ , ಆ ಟ್ರೈಲರ್ ನಿಮಗಾಗಿ ಇಲ್ಲಿ ಸಾದರಪಡಿಸುತಿದ್ದೇವೆ ನೋಡಿ !

 

ಕಲ್ಪನಾ- ೨ ಮೂವೀ ಹೇಗಿದೆ?

ಕಲ್ಪನಾ- ೨ ಫೋಟೋ - ಕಲ್ಪನಾ- ೨ ಚಿತ್ರದಲ್ಲಿ ಉಪೇಂದ್ರ , ಪ್ರಿಯಾಮಣಿ
ಕಲ್ಪನಾ-೨ ಚಿತ್ರದಲ್ಲಿ ಉಪೇಂದ್ರ , ಪ್ರಿಯಾಮಣಿ

ಉಪೇಂದ್ರ ಅಭಿನಯದ ಕಲ್ಪನಾ-೨ ತೆರೆಗೆ ಬಂದಿದೆ.

ಕಲ್ಪನಾ-೨ ತಮಿಳಿನಲ್ಲಿ ಲಾರೆನ್ಸ್ ರಾಘವ ನಟಿಸಿದ್ದ ಕಾಂಚನಾ ಸಿನಿಮಾವನ್ನು ಈ ಹಿಂದೆ ‘ಕಲ್ಪನಾ’ ಹೆಸರಿನಲ್ಲಿ ರಿಮೇಕ್ ಮಾಡಿದ್ದರು. ಚಿತ್ರ ಯಶಸ್ವಿಯಾಗಿತ್ತು. ನಂತರ ಲಾರೆನ್ಸ್ ರಾಘವ ‘ಮುನಿ-೨ ಕಾಂಚನಾ’ ಎನ್ನುವ ಸಿನಿಮಾ ಮಾಡಿದ್ದರು. ಇಲ್ಲೂ ಅದನ್ನು ‘ಕಲ್ಪನಾ-೨’ ಹೆಸರಿನಲ್ಲಿ ತಯಾರು ಮಾಡಲಾಗಿದೆ.

ಈ ಚಿತ್ರವನ್ನು ರಿಮೇಕ್ ಸಿನಿಮಾಗೇ ಫೇಮಸ್ಸಾಗಿರುವ ಅನಂತರಾಜ ನಿರ್ದೇಶಿಸಿದ್ದಾರೆ.

ತಮಿಳಿನಲ್ಲಿ ಹಾಸ್ಯ ಸಿನಿಮಾ ಮಾಡಿದರೂ, ಕಾಮಿಡಿ ಚಿತ್ರ ತೆಗೆದರೂ ಅದರಲ್ಲೊಂದು ಸಾಮಾಜಿಕ ಸಂದೇಶವನ್ನು ಬೆರೆಸುವ ಸಂಪ್ರದಾಯವಿದೆ. ಹೀಗಾಗಿ ಚಿತ್ರ ಹಾರರ್ ಮತ್ತು ಕಾಮಿಡಿ ಬೆರೆತ ಚಿತ್ರವಾದರೂ ಅದರಲ್ಲೊಂದು ಮೆಸೇಜ್ ಇದೆ.

ಕಲ್ಪನಾ ಚಿತ್ರದಲ್ಲೂ ಮಂಗಳಮುಖಿಯರ ಸಮಸ್ಯೆಗಳನ್ನು ಹೇಳುತ್ತಲೇ, ಅವರಿಗಾದ ಅನ್ಯಾಯದ ವಿರುದ್ಧ ರಿವೇಂಜ್ ತೀರಿಸಿಕೊಳ್ಳುವ ಕಥೆ ಹೇಳಲಾಗಿತ್ತು.

ಕಲ್ಪನಾ-೨ ಕಥೆ – ನಿರ್ದೇಶನ

ಕಲ್ಪನಾ-೨ ರಲ್ಲಿ ಸಹಾ ಅಂಗವಿಕಲೆಯೊಬ್ಬಳನ್ನು ಮನೋವೇದನೆಯನ್ನು, ಅವರ ಸಂಕಟ, ಅಸಮಧಾನಗಳನ್ನು ತೆರೆದಿಡಲಾಗಿದೆ.

ತಾನೂ ಎಲ್ಲರಂತೆ ಮದುವೆಯಾಗಬೇಕು’ ಎಂದು ಬಯಸುವ ಕಲ್ಪನಾ ಪ್ರೀತಿಸಿದ ಹುಡುಗ ಜಡೆ ಶಿವ (ಉಪೇಂದ್ರ-೨) ಜೈಲು ಸೇರಿರುತ್ತಾನೆ.

ಅವಳಪ್ಪ ಮತ್ತೊಬ್ಬ ಹುಡುಗನೊಟ್ಟಿಗೆ ಮದುವೆ ಫಿಕ್ಸ್ ಮಾಡುತ್ತಾನೆ. ಕುತಂತ್ರಿಗಳಿಗೆ ಹೆದರಿದ ಹುಡುಗ ಹಸೆಮಣೆಯಿಂದ ಎದ್ದು ಮದುವೆಯನ್ನು ಧಿಕ್ಕರಿಸಿ ಹೊರಡುತ್ತಾನೆ.

ಕಲ್ಪನಾ-೨ ಚಿತ್ರದಲ್ಲಿ ಉಪೇಂದ್ರ ಹಾಗು ಪ್ರಿಯಾಮಣಿ
ಕಲ್ಪನಾ-೨ ಚಿತ್ರದಲ್ಲಿ ಉಪೇಂದ್ರ ಹಾಗು ಪ್ರಿಯಾಮಣಿ

ನಂತರ ಜೈಲಿನಿಂದ ಬಿಡುಗಡೆಯಾದ ಜಡೆ ಶಿವ ಇನ್ನೇನು ಆಕೆಯನ್ನು ಮದುವೆಯಾಗಬೇಕು ಎನ್ನುವಷ್ಟರಲ್ಲಿ ಕ್ರೂರಿಗಳ ಮೋಸಕ್ಕೆ ಬಲಿಯಾಗಿ ತನ್ನ ಹುಡುಗಿ ಸಮೇತ ಜೀವಬಿಡುತ್ತಾನೆ.

ಖಾಸಗಿ ವಾಹಿನಿಯಲ್ಲಿ ಕ್ಯಾಮೆರಾಮನ್ ಆಗಿ ಕಾರ್ಯನಿರ್ವಹಿಸುವ ರಾಘವ (ಉಪೇಂದ್ರ-೧) ಸ್ವಭಾವತಃ ಪರಮ ಪುಕ್ಕಲ, ಆದರೆ ಕಾರ್ಯಕ್ರಮವೊಂದರ ನಿರ್ದೇಶಕಿ ಅವಂತಿಕಾ ಶೆಟ್ಟಿ ಮೇಲಿನ ಪ್ರೀತಿಯ ಕಾರಣಕ್ಕೆ ಭೂತ ಬಂಗಲೆಯ ಕುರಿತ ಕಾರ್ಯಕ್ರಮ ಶೂಟ್ ಮಾಡಲು ತೆರಳುತ್ತಾನೆ.

ಅಲ್ಲಿ ಸತ್ತುಮಲಗಿದ ಕಲ್ಪನಾಳ ಪ್ರೇತ ಮತ್ತು ಜಡೆ ಶಿವನ ಆತ್ಮಗಳು ಒಟ್ಟು ಸೇರಿ ಈ ವಾಹಿನಿಯ ತಂಡದವರನ್ನು ಆಟಾಡಿಸಲು ಶುರು ಮಾಡುತ್ತವೆ.

ಈ ಪ್ರೇಮಿ ಪ್ರೇತಗಳಿಂದ ಎಲ್ಲರೂ ಹೇಗೆ ಪಾರಾಗುತ್ತಾರೆ ಅನ್ನೋದರ ನಡುವೆ ಭಯಂಕರ ಹಾರರ್ ಸನ್ನಿವೇಶಗಳೂ, ಕಾಮಿಡಿ ದೃಶ್ಯಗಳೂ, ಸೆಂಟಿಮೆಂಟೆಲ್ಲವೂ ಬಂದುಹೋಗುತ್ತವೆ.

ಕಲ್ಪನಾ-೨ ಪಾತ್ರವರ್ಗ ಹಾಗು ನಟನೆ

ಪ್ರಿಯಾಮಣಿ ಅಂಗವಿಕಲೆಯ ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿದ್ದಾರೆ.

ಎರಡೋ ಮೂರೋ ದೃಶ್ಯಗಳಲ್ಲಿ ಕಂಡರೂ ನಟ ಪೆಟ್ರೋಲ್ ಪ್ರಸನ್ನ ನಟನೆ ಫೆಂಟಾಸ್ಟಿಕ್. ಪ್ರಕಾಶ್ ಹೆಗ್ಗೋಡು, ಮುನಿ, ಕುರಿ ರಂಗ, ಕುರಿ ಪ್ರತಾಪ, ಶೋಭರಾಜ್ ಎಲ್ಲರೂ ಎಷ್ಟೋ ಅಷ್ಟು ನಟಿಸಿದ್ದಾರೆ.

ಅವಂತಿಕಾ ತಮ್ಮ ಅಭಿನಯದಿಂದ ಮನ ಸೆಳೆಯುತ್ತಾರೆ.

ಈ ಚಿತ್ರದ ಕಲಾನಿರ್ದೇಶನ ಮಾಡಿರುವ ಬಾಬು ಖಾನ್ ಅವರಿಗೆ ಒಂದು ಮಾರ್ಕು ಹೆಚ್ಚೇ ನೀಡಬಹುದು.

ಚಿತ್ರದ ಮೊದಲರ್ಧ ವೇಗವಾಗಿದೆ ಅನಿಸಿದರು, ಉಳಿದರ್ಧ ಭಾಗ ಸ್ವಲ್ಪ ಹದ ತಪ್ಪಿದೆ  ಹಾಗು ಜಾಳು ಎನಿಸುತ್ತದೆ.

ಕ್ಲೈಮ್ಯಾಕ್ಸ್ ಹಾಡಿನ ಸೆಟ್ ಅಂತೂ ಸಖತ್ತಾಗಿದೆ. ಎಂ.ಆರ್.ಸೀನು ಕ್ಯಾಮೆರಾ ಕೂಡಾ ಸುಂದರವಾಗಿದೆ.

ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಹಿನ್ನೆಲೆ ಸ್ವಲ್ಪ ಜಾಸ್ತಿ ಅನಿಸುತ್ತೆ. ನಿರ್ದೇಶಕರ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಹೆಚ್ಚೂ ಕಮ್ಮಿ ಫ್ರೇಮ್ ಟು ಫ್ರೇಮ್ ಮೂಲ ಸಿನಿಮಾವನ್ನೇ ಯಥಾವತ್ತಾಗಿ ಇಳಿಸಿದ್ದಾರೆ ಎನ್ನಬಹುದು .

ಒಟ್ಟಾರೆ ಪರಿಪೂರ್ಣ ಮನರಂಜನಾ ಸಿನಿಮಾ ಇದಾಗಿದೆ.

ನೀವು ಚಿತ್ರ ನೋಡಿದಿರಾ? ಹೌದಾದರೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ನಲ್ಲಿ ತಿಳಿಸಿ , ಧನ್ಯವಾದಗಳು.

ಸಿನಿಮಾ ಹಾಗು ಮನರಂಜನೆ ಸುದ್ದಿಗಳನ್ನು ಓದಲು ಸಿನಿಅಡ್ಡ.ಕಂ ಫಾಲೋ ಮಾಡಿ.

Like Us, Follow Us !

120,431FansLike
1,826FollowersFollow
1,573FollowersFollow
4,315SubscribersSubscribe

Trending This Week