26.7 C
Bangalore, IN
Wednesday, April 24, 2019

ಉಪೇಂದ್ರ ಇಂದಿಗೂ ಹುಡುಕುತ್ತಿರುವ ಆ ಪ್ರತಿಭಾವಂತ ಗೆಳೆಯ ಯಾರು ?

“ಕುರುಕ್ಷೇತ್ರ”ದಿಂದ ದರ್ಶನ್ ಕಲಿತ ಪಾಠವೇನು ?

ಸುದೀಪ್ ಪತ್ನಿ ಮತ್ತು ಮಗಳು ಹೋಗಿದ್ದೆಲ್ಲಿಗೆ ?

ಹದ್ದು ಪರ್ವತದ ಸುತ್ತ ಹಾರಿದಂತೆ ಭಾಸವಾಗುತ್ತಿದೆ.
– ಇದು ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ರಾಧಾಕೃಷ್ಣನ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಸಾಲು. ಆ ಸಾಲಿನೊಂದಿಗೆ ಅವರು ನಾಲ್ಕೈದು ಫೋಟೋಗಳನ್ನು ಅಪ್ ಲೋಡ್ ಮಾಡಿದ್ದಾರೆ.
ಆ ಫೋಟೋಗಳಲ್ಲಿ ಮಂಜು ಕವಿದ ಪರ್ವತ ಶ್ರೇಣಿ, ಚಳಿಯನ್ನು ಹಾಸು ಹೊದ್ದಂತೆ ಕಾಣುತ್ತಿರುವ ನದಿ ಇದೆ. ಜೊತೆಗೆ ವಿಶೇಷವಾಗಿ ಪ್ರಿಯಾ, ಸುದೀಪ್ ಮಗಳು ಸಾನ್ವಿ ಮತ್ತು ಪ್ರಿಯಾ ಅವರ ಫ್ರೆಂಡ್ಸ್ ನಿಂತಿರುವ ಒಂದು ಫೋಟೋ ಇದೆ. ಸ್ವೆಟರ್ ಮತ್ತು ಮಂಕಿ ಕ್ಯಾಪ್ ಧರಿಸಿ ಬೆಚ್ಚಗೆ ನಿಂತು ನಗುತ್ತಿದ್ದಾರೆ ಅವರೆಲ್ಲರೂ.
 ಹೊಸ ವರ್ಷದಲ್ಲಿ ಪ್ರಿಯಾ ಮತ್ತು ಸಾನ್ವಿ ಪ್ರಪಂಚದ ಅತ್ಯಂತ ಎತ್ತರದ ಪರ್ವತ ಶ್ರೇಣಿ ಮೌಂಟ್ ಎವರೆಸ್ಟ್ ಅನ್ನು ದರ್ಶನ ಮಾಡಿದ್ದನ್ನು ಈ ಫೋಟೋಗಳು ಸಾರುತ್ತಿವೆ. ಆದರೆ ಸುದೀಪ್ ಇವರ ಜೊತೆ ಈ ಟೂರಲ್ಲಿ ಭಾಗವಹಿಸಿದಂತೆ ಇಲ್ಲ. ಯಾಕೆಂದರೆ ಕಿಚ್ಚ ಸುದೀಪ್ ಅವರು ದಿ ವಿಲನ್ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿರುವ ಸಾಧ್ಯತೆ ಇದೆ. ಒಟ್ಟಾರೆ ಈ ಫೋಟೋ ನೋಡುವುದೇ ಒಂದು ಖುಷಿ.

ಅಪ್ಪನನ್ನು ನೆನಪಿಸುವ ಅಭಿಮಾನಿಗೆ ಮನಸೋತ ದರ್ಶನ್ !

ತಮ್ಮ ಇಷ್ಟದ ನಟ -ನಟಿಯ  ಹಾಗೆ ತಲೆ ಬಾಚಿಕೊಳ್ಳುವುದು, ಅವರು ಸಿನಿಮಾದಲ್ಲಿ ಹಾಕಿದ ಬಟ್ಟೆ ಥರದ್ದೇ ಉಡುಗೆ ಹಾಕಿಕೊಳ್ಳುವುದು , ಅವರ ಸ್ಟೈಲ್ ನಲ್ಲಿ ನಡೆಯುವುದು-ಮಾತಾಡುವುದು ಇದೆಲ್ಲ ಅಭಿಮಾನಿಗಳು  ಹಿಂದಿನಿಂದಲೂ ಮಾಡ್ತಾನೆ ಬಂದಿದ್ದಾರೆ. ಇತ್ತೀಚಿಗೆ ಮೆಚ್ಚಿನ ಕಲಾವಿದನನ್ನ ತಮ್ಮ ಕೈ ಮೇಲೆ ಹಚ್ಚೆ ಹಾಕಿಸಿಕೊಂಡ ಅಭಿಮಾನಿಯೊಬ್ಬನ ಅಭಿಮಾನದ ಹಚ್ಚೆ ಟ್ರೆಂಡ್ ಆಗಿದೆ.

ಯಾರೀ ಅಭಿಮಾನಿ ? ಯಾರಿಗೆ ಈತ ಅಭಿಮಾನಿ ? 

ಮಧ್ಯ ವಯಸ್ಸಿನ ಶ್ಯಾಮ್ ಬೆಂಗಳೂರಿನವರು. ಚಿಕ್ಕಂದಿನಿಂದಲೂ ತೂಗುದೀಪ ಶ್ರೀನಿವಾಸ್ ಅವರ ಅಪ್ಪಟ ಅಭಿಮಾನಿ. ಅವರು ಗಹಗಹಿಸಿ ನಗುತ್ತಿದ್ದ ಪರಿ ಇಂದು ನೋಡಿದ್ರೂ ನಡುಗುವಂತಿದೆ. ಅಂಥಾ ಅಪರೂಪದ ಖಳನಾಯಕ ತೂಗುದೀಪ ಶ್ರೀನಿವಾಸ್ ಡಾ. ರಾಜ್ ಕುಮಾರ್ ಅವರಿಂದಲೂ ಪ್ರಶಂಸೆ ಗಳಿಸಿದ್ದರು. ಕಾಲ ಸರಿದು ಕಾಲನ ವಶವಾದರೂ ತೂಗುದೀಪ ಶ್ರೀನಿವಾಸ್ ಶ್ಯಾಮ್ ರಂತಹ ಅಭಿಮಾನಿಯನ್ನು ಪಡೆದಿದ್ದಾರೆ ಎಂದರೆ ಅವರೆಂಥಹ ಅದ್ಭುತ ಕಲಾಕಾರ ಅಲ್ಲವೇ !

ಶ್ಯಾಮ್  ತಮ್ಮ ತೋಳಿನ ಮೇಲೆ ತೂಗುದೀಪ್ ಶ್ರೀನಿವಾಸ್ ಅವರ ಸೊಗಸಾದ ಹಚ್ಛೆ ಹಾಕಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ತೂಗುದೀಪ್  ಪುತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಪ್ರೀತಿಯೊಂದು ಚಿತ್ರವನ್ನು ತಪ್ಪದೆ ನೋಡುತ್ತಾರೆ. ಅಷ್ಟು ಮಾತ್ರವಲ್ಲದೆ ಚಿತ್ರ ಬಿಡುಗಡೆಯ ದಿನ ಹಬ್ಬ ಆಚರಿಸಿ ಸಂಭ್ರಮಿಸುತ್ತಾರೆ.

ದರ್ಶನ್ ಅಂದ್ರೆ ಶ್ಯಾಮ್ ಗೆ ವೀಪರೀತ ಪ್ರೀತಿ. ತಮ್ಮ ಹೆಸರಿನ ಜೊತೆಗೆ ಗಜ ತೂಗುದೀಪ ಸೇರಿಸಿ ,ಶ್ಯಾಮ್ ಗಜ ತೂಗುದೀಪ ಆಗಿದ್ದಾರೆ. ಹಚ್ಚೆ ಹಾಕಿಸಿಕೊಂಡ ಮೇಲೆ ದರ್ಶನ್ ಭೇಟಿ ಮಾಡಿ ತಮ್ಮ ಅಭಿಮಾನ ತೆರೆದು ತೋರಿದ್ದಾರೆ. ದರ್ಶನ್ ಕೂಡ ಅಭಿಮಾನಿಯೇ ಪ್ರೀತಿಗೆ ಸೋತಿದ್ದಾರೆ ಎನ್ನಲಡ್ಡಿಯಿಲ್ಲ.
ಶ್ಯಾಮ್ ಹಾಕಿಸಿಕೊಂಡ ಹಚ್ಚೆ ಗೆ ಮರುಳಾಗಿರುವ ದರ್ಶನ್ ಅಭಿಮಾನಿ ಬಳಗ ತಾವು ಹಚ್ಚೆ ಹಾಕಿಸಿಕೊಳ್ಳುವ ಭರದಲ್ಲಿದ್ದಾರೆ.

ಹೊಸ ವರ್ಷದ ಮೊದಲ ದಿನ ಸ್ಟಾರ್ ಗಳು ಎಲ್ಲೆಲ್ಲಿದ್ದರು? 

ಹೊಸ ವರ್ಷದ ಹೊಸ ಬೆಳಗನ್ನು ಯಾರಾರು, ಎಲ್ಲೆಲ್ಲಿ, ಹೇಗ್ಹೇಗೆ ಕಳೆದರು ಅನ್ನುವುದು ಅವರವರ ಸ್ವಭಾವ ಮತ್ತು ವ್ಯಕ್ತಿತ್ವವನ್ನೂ ಸೂಚಿಸುತ್ತದೆ. ಹೀಗಾಗಿ ಯಾರಾರು ಎಲ್ಲೆಲ್ಲಿ ಹೊಸ ವರ್ಷವನ್ನು ಬರಮಾಡಿಕೊಂಡರು ಎಂದು ಕುತೂಹಲದಿಂದ ನೋಡಿದಾಗ ಸಿಕ್ಕ ಉತ್ತರಗಳು ಇಂಟರೆಸ್ಟಿಂಗ್. ಒಬ್ಬರಿಗೆ ದೇವರ ದರ್ಶನದಲ್ಲಿ ನೆಮ್ಮದಿ ಸಿಕ್ಕರೆ ಮತ್ತೊಬ್ಬರಿಗೆ ಪ್ರಕೃತಿ ಮಧ್ಯೆ ಸಮಯ ಕಳೆದಿದ್ದೇ ಖುಷಿ. ಹೀಗೆ ಸೆಲೆಬ್ರಿಟಿಗಳ ಅಂತರಂಗದ ಕತೆಗಳನ್ನು ಹೇಳುವ ಫೋಟೋಗಳಿವು.    
ಸುದೀಪ್ ಮನೆಯಲ್ಲೇ..
ಕುಟುಂಬದ ಜೊತೆಗೆ ಹೊಸ ವರ್ಷವನ್ನು ಎದುರುಗೊಂಡರು ಸುದೀಪ್. ಅದಕ್ಕೆ ಸಾಕ್ಷಿ ಪತ್ನಿ ಪ್ರಿಯಾ ಮತ್ತು ಮಗಳ ಜೊತೆ ತೆಗೆದ  ಸೆಲ್ಫೀ.
ಶ್ರೀಲಂಕಾದ ಸಮುದ್ರ ತೀರದಲ್ಲಿ ಸಂಯುಕ್ತಾ ಹೆಗ್ಡೆ!
ಕಿರಿಕ್ ಹುಡ್ಗಿ ಎಂದೇ ಖ್ಯಾತಳಾದ ಸಂಯುಕ್ತಾ ಹೆಗ್ಡೆ ಶ್ರೀಲಂಕಾದಲ್ಲಿದ್ದಾರೆ. ಅಲ್ಲಿನ ಸಮುದ್ರ ತೀರದಲ್ಲಿ ಅಡ್ಡಾಡುತ್ತಾ ಡಾನ್ಸ್ ಮಾಡುತ್ತಾ 2018ಕ್ಕೆ ಕಾಲಿಟ್ಟಿದ್ದಾರೆ
ಬೃಂದಾವನದಲ್ಲಿ ಜಗ್ಗೇಶ್
ಜಗ್ಗೇಶ್ ಹೇಳಿ ಹೇಳಿ ರಾಯರ ಪರಮ ಭಕ್ತ. ಹಾಗಾಗಿ ಅವರು 2018ರ ಮೊದಲ ದಿನ ಕಳೆದಿದ್ದು ರಾಯರ ಸನ್ನಿಧಿಯಲ್ಲಿ. ಬೃಂದಾವನದಲ್ಲಿ ಜಗ್ಗೇಶ್ ಮತ್ತು ಅವರ ಪತ್ನಿ ಪರಿಮಳ ಜಗ್ಗೇಶ್ ರಾಯರಿಗೆ ಪೂಜೆ ಸಲ್ಲಿಸಿದರು.
ಕೊಲ್ಲೂರಲ್ಲಿ ದೈವ ಭಕ್ತ ಪುಷ್ಕರ್
ಗೆಳೆಯರ ಜೊತೆ ಕೊಲ್ಲೂರು ಮೂಕಾಂಬಿಕೆ ದರ್ಶನ ಮಾಡಿ ಹೊಸ ವರ್ಷದ ಮೊದಲ ದಿನ ಕಳೆದಿದ್ದು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.
ಉಡುಪಿಯಲ್ಲಿ ಸುಕೃತಾ ವಾಗ್ಳೆ
ಕಿರಗೂರಿನ ಗಯ್ಯಾಳಿ ಖ್ಯಾತಿಯ ಸುಕೃತಾ ವಾಗ್ಳೆ ಉಡುಪಿಯಲ್ಲಿ ತಮ್ಮ ಕುಟುಂಬದ ಜೊತೆಗಿದ್ದು ಹೊಸ ವರ್ಷವನ್ನು ಸ್ವಾಗತಿಸಿದರು.
ಪ್ಯಾರಿಸ್‌ನಲ್ಲಿ ಹರ್ಷಿಕಾ ಪೂಣಚ್ಚ
ಹರ್ಷಿಕಾ ಪೂಣಚ್ಚ ಪ್ಯಾರಿಸ್‌ನಲ್ಲಿದ್ದಾರೆ. ಐಫೆಲ್ ಟವರ್ ಮುಂದೆ ನಿಂತು ಅವರು ಫೋಟೋ ತೆಗೆಸಿಕೊಂಡ ಫೋಟೋ ಇದೀಗ ವೈರಲ್ ಆಗಿದೆ.
 
ಪ್ಯಾರಿಸ್‌ನಲ್ಲಿ ಭುವನ್ ಪೊನ್ನಣ್ಣ
ಪ್ಯಾರಿಸಿನಲ್ಲಿ ಹೊಸ ವರ್ಷವನ್ನು ಎದುರುಗೊಂಡ ಮತ್ತೊಬ್ಬ ಸೆಲೆಬ್ರಿಟಿ ಭುವನ್ ಪೊನ್ನಣ್ಣ.
ಐರ್‌ಲ್ಯಾಂಡಿನಲ್ಲಿ ಕಾವ್ಯ ಶೆಟ್ಟಿ
ಇಂಗ್ಲೆಂಡ್ ಮೊದಲೇ ತಣ್ಣಗಿರುವ ದೇಶ. ಇನ್ನು ಚಳಿಗಾಲದಲ್ಲಂತೂ ಹೇಳಬೇಕೇ. ಆದರೂ ಕಾವ್ಯ ಶೆಟ್ಟಿ ಚಳಿಗಾಲದಲ್ಲೇ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಅವರು ಹೊಸ ವರ್ಷವನ್ನು ಬರಮಾಡಿಕೊಂಡಿದ್ದು ಐರ್‌ಲ್ಯಾಂಡಿನಲ್ಲಿ.
 ಕೇರಳದಲ್ಲಿ ಶ್ರದ್ಧಾ ಶ್ರೀನಾಥ್
ಶ್ರದ್ಧಾ ಶ್ರೀನಾಥ್ ಕೇರಳದ ಹಸಿರು, ಸಮುದ್ರ, ನದಿಗಳ ಜೊತೆ ಒಡನಾಡುತ್ತಾ ಕುಟುಂಬದೊಂದಿಗೆ ಹೊಸ ವರ್ಷಕ್ಕೆ ಕಾಲಿಟ್ಟಿದ್ದಾರೆ.

“ಚಮಕ್” ಚಿತ್ರ ವಿಮರ್ಶೆ ವೀಡಿಯೊ

ಟಗರು ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ನುಡಿದಿದ್ದೇನು ?

“ಅಂಜನಿಪುತ್ರ”ನಿಗೆ ದೊಡ್ಡ ಸಂಕಷ್ಟ !?

ಅಂಜನೀಪುತ್ರ ಚಿತ್ರಕ್ಕೆ ಮತ್ತೆ ಆತಂಕ ಎದುರಾಗಿದೆ. ಅಂಜನಿಪುತ್ರ ಚಿತ್ರ ಪ್ರದರ್ಶನ ನಿಲ್ಲಿಸಲು ಡಿಜಿಐಜಿಗೆ ನಿರ್ದೇಶನ ನೀಡಲಾಗಿದೆ. ಇಡೀ ರಾಜ್ಯಾದ್ಯಂತ ಚಿತ್ರ ಪ್ರದರ್ಶನ ‌ಸ್ಥಗಿತಗೊಳಿಸುವಂತೆ  ಸಿಟಿ ಸಿವಿಲ್ ಕೋರ್ಟ್ ನ್ಯಾ. ತಿಮ್ಮಣ್ಣಾಚಾರ ಅವರಿಂದ ಆದೇಶ ಹೊರಬಿದ್ದಿದೆ.
 ವಕೀಲರ ವಿರುದ್ಧ ಅವಹೇಳನಕಾರಿ ಡೈಲಾಗ್ ಹಿನ್ನಲೆ
ವಕೀಲರಾದ ನಾರಾಯಣ ಸ್ವಾಮಿ, ವಿಜಯ್ ಕುಮಾರ್ ಸೇರಿ ಐವರು ವಕೀಲರು ಅಂಜನೀಪುತ್ರ ಚಿತ್ರದಲ್ಲಿ ವಕೀಲರ ವಿರುದ್ಧ ಅವಹೇಳನಕಾರಿ ಡೈಲಾಗ್ ಇದ್ದು ,ಅದನ್ನು ತೆಗೆಯದ ಹೊರತು ಪ್ರದರ್ಶನಕ್ಕೆ ಅನುವು ಮಾಡಬಾರದೆಂದು ಅರ್ಜಿ ಸಲ್ಲಿಸಿದ್ದರು.ಚಿತ್ರ ಪ್ರದರ್ಶನಕ್ಕೆ ತಡೆ ನೀಡಿ ಕಳೆದ ಶನಿವಾರ ಕೋರ್ಟ್ ಆದೇಶ ನೀಡಿತ್ತು. ಆದರೂ ಚಿತ್ರ ತಂಡ ಪ್ರದರ್ಶನ ನಿಲ್ಲಿಸಿರಲಿಲ್ಲ. ಕೋರ್ಟ್ ಆದೇಶ ಪಾಲಿಸಿರಲಿಲ್ಲ. ನ್ಯಾಯಾಂಗ ನಿಂದನೆ‌ ಅಡಿಯಲ್ಲಿ‌ ಪ್ರಕರಣ ದಾಖಲು‌ ಮಾಡಿದ್ದ   ಅರ್ಜಿದಾರ ವಕೀಲರು ಪ್ರದರ್ಶನ ಸ್ಥಗಿತಗೊಳಿಸಲು ಡಿಜಿಪಿಗೆ ಸೂಚನೆ ನೀಡುವಂತೆ  ಮನವಿ ಮಾಡಿದ್ದರು.
ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮಧ್ಯಂತರ ತಡೆಯಾಜ್ಞೆ ಜಾರಿಗೊಳಿಸಲು ಡಿಜಿಪಿಗೆ ನಿರ್ದೇಶನ ನೀಡಿ ಆದೇಶ ಹೊರಡಿಸಿದೆ.

ಈ ಬಾರಿ ಜೋಡಿ ಕಿಲಾಡಿಗಳು..! 

ಜೀ ಕನ್ನಡ ವಾಹಿನಿಯಲ್ಲಿ ಜನಮನ ಗೆದ್ದ ಡ್ರಾಮ ಜ್ಯೂನಿಯರ್ಸ್ ಗ್ರಾಂಡ್ ಫಿನಾಲೆ ನಡೀತು. ಬಳ್ಳಾರಿಯ ಹೊಸಪೇಟೆಯಲ್ಲಿ ನಡೆದ ಗ್ರಾಂಡ್ ಫಿನಾಲೆಯಲ್ಲಿ ಜಮಾಯಿಸಿದ್ದ ಲಕ್ಷಾಂತರ ಜನರ ಎದುರು ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಗ್ರಾಂಡ್ ಫಿನಾಲೆ ನೆರವೇರಿತು. ಕಾರ್ಯಕ್ರಮದ ಸೂಪರ್ ಜಡ್ಜ್ ಗಳಾದ ಮುಖ್ಯಮಂತ್ರಿ ಚಂದ್ರು, ಜ್ಯೂಲಿ ಲಕ್ಷ್ಮೀ, ವಿಜಯ್ ರಾಘವೇಂದ್ರ 8 ಜನ ಸ್ಪರ್ಧಿಗಳ ಬಗ್ಗೆ ನಿರ್ಣಾಯಕ ನಿರ್ಧಾರ ಮಾಡಿದ್ರು.
ಮೊದಲು 8 ಜನ ಸ್ಪರ್ಧಿಗಳಲ್ಲಿ ಮೊದಲು ಜೋಡಿಗಳಾಗಿ ನಾಲ್ಕು ಕಾರ್ಯಕ್ರಮಗಳು ನಡೆದ್ವು. ಕೊನೆಗೆ ಎಂಟರಲ್ಲಿ ನಾಲ್ವರನ್ನು ಫೈನಲ್ ರೌಂಡ್ ಗೆ ಕಳುಹಿಸಲಾಯ್ತು. ಆ ಬಳಿಕ ಏಕ ವ್ಯಕ್ತಿ ಪ್ರದರ್ಶನ ನೀಡಿದ ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ಉತ್ತಮ ಪ್ರದರ್ಶನ ನೀಡಿದ್ರು.. ಎಲ್ಲಾ ಸ್ಪರ್ಧಿಗಳು ಉತ್ತಮ ಪ್ರದರ್ಶನ ನೀಡಿದ ಬಳಿಕ ಗೆಲುವಿನ ಲೆಕ್ಕಾಚಾರದ ಕಠಿಣವಾಯ್ತು. ಆ ಬಳಿಕ ಇಬ್ಬರು ಸ್ಪರ್ಧಿಗಳನ್ನು ರನ್ನರಪ್ ಎಂದು ಘೋಷಿಸಿ, ತಲಾ ಒಂದು ಲಕ್ಷ ಹಾಗೂ ಎರಡು ಲಕ್ಷ ರೂಪಾಯಿ ಬಹುಮಾನ ನೀಡಲಾಯ್ತು. ಕೊನೆಗೆ ಅಮಿತ್ ಹಾಗು ವಂಶಿ ಅವರನ್ನು ಜಂಟಿ ವಿನ್ನರ್ ಎಂದು ಘೋಷಣೆ ಮಾಡಿ, ಬರೋಬ್ಬರಿ ನಾಲ್ಕು ಲಕ್ಷ ರೂಪಾಯಿ ಬಹುಮಾನ ನೀಡಲಾಯ್ತು..
ಜ್ಯೋತಿ ಗೌಡ, ನಾಗಮಂಗಲ

ಕೆಪಿಜೆಪಿ ಮೊದಲ ಪ್ರಣಾಳಿಕೆಯ ಬಗ್ಗೆ ಉಪೇಂದ್ರ ಬಿಚ್ಚು ಮಾತು

Like Us, Follow Us !

120,188FansLike
1,826FollowersFollow
1,573FollowersFollow
4,668SubscribersSubscribe

Trending This Week