21 C
Bangalore, IN
Monday, May 27, 2019
Home ಸಿನಿಮಾ ನ್ಯೂಸ್ ಟಿವಿ ನ್ಯೂಸ್

ಟಿವಿ ನ್ಯೂಸ್

Get Latest Kannada TV News, News On Kannada TV Serials

ಬಿಗ್ ಬಾಸ್ ಭುವನ್ ಗೆ ಗಾಯ..!

 ಹೆಸರು ಘಟ್ಟದ ಬಳಿ ನಡೆಯುತ್ತಿದ್ದ ರಾಂಧವ ಚಿತ್ರ ಶೂಟಿಂಗ್ ವೇಳೆ ಚಿತ್ರದ ನಾಯಕ ಭುವನ್ ಪೊನ್ನಪ್ಪಗೆ ಗಾಯವಾಗಿರುವ ಘಟನೆ ನಡೆದಿದೆ. ರೋಪ್ ಹಾಕದೆ ಸ್ಟಂಟ್ ಮಾಡಿದ ಕಾರಣಕ್ಕೆ ಈ ಅವಘಡ ನಡೆದಿದೆ ಎಂದಿರುವ ಚಿತ್ರತಂಡ ಆಸ್ಪತ್ರೆಗೆ ದಾಖಲಿಸಿದೆ. ಭುವನ್ ಮೂಗು ಹಾಗು ಸೊಂಟಕ್ಕೆ ಗಂಭೀರ ಗಾಯವಾಗಿದ್ದು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ನಾಳೆ ವೈದ್ಯರು ಇನ್ನಷ್ಟು ಪರೀಕ್ಷೆಗಳನ್ನು ಮಾಡಿ ಮತ್ತಷ್ಟು ಮಾಹಿತಿ ನೀಡುವ ಸಾಧ್ಯತೆ ಇದೆ.

ಬಿಗ್‍ಬಾಸ್ ಮನೆಗೆ ಬಿತ್ತು ಬೆಂಕಿ..!

ಬೆಂಗಳೂರಿನ ಬಿಡದಿ ಬಳಿಯ ಇನ್ನೋವೇಟಿವ್​ ಫಿಲ್ಮ್​ ಸಿಟಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು,  ಬಿಗ್​ಬಾಸ್​ ಮನೆಗೆ ಆಕಸ್ಮಿಕ ಬೆಂಕಿ ಬಿದ್ದಿದೆ. ಮೊದಲು ಬಿಗ್​ಬಾಸ್​ ಮನೆ ಬೆಂಕಿಗೆ ಆಹುತಿಯಾಗಿದೆ‌. ಬಿಗ್‍ಬಾಸ್ ಮನೆಗೆ ಹೊಂದಿಕೊಂಡಂತೆ ಅಲಂಕಾರಿಕವಾಗಿ ಮಾಡಿದ್ದ ಮೇಣದ ಮ್ಯೂಸಿಯಂಗೆ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಬೆಳಗ್ಗಿನ ಜಾವ ಮೂರು ಗಂಟೆಗೆ ಬೆಂಕಿ ಬಿದ್ದಿದ್ದು ಆ ಬಳಿಕ ಬಿಗ್  ಬಾಸ್​ ಮನೆಗೂ ಬೆಂಕಿ ವ್ಯಾಪಿಸಿ ಹೊತ್ತಿ ಉರಿದಿದೆ.
ಮೇಣದಿಂದ ಮಾಡಿದ್ದ ಮ್ಯೂಸಿಯಂ ಆದ ಕಾರಣ ಬೆಂಕಿ ಜ್ವಾಲೆ ಶೀಘ್ರವಾಗಿ ವ್ಯಾಪಿಸಿದ್ದು, ಬೆಂಕಿ ನಂದಿಸಲು ಅಗ್ನಿ ಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.. ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಮ್ಯೂಸಿಯಂಗೆ ಬೆಂಕಿ ಬಿದ್ದಿದೆ ಎನ್ನಲಾಗಿದೆ. ಪೊಲೀಸರ ತನಿಖೆ ಬಳಿಕ ನಿಖರ ಕಾರಣ ತಿಳಿಯಲಿದೆ . ಸದ್ಯ ಮ್ಯೂಸಿಯಂನಲ್ಲಿ ವಸ್ತುಗಳು ಬೆಂಕಿಗಾಹುತಿ ಆಗಿವೆ ಅಂತಾ ಇನ್ನೋವೇಟಿವ್ ಫಿಲ್ಮ್ ಸಿಟಿ ಮೂಲಗಳಿಂದ ತಿಳಿದುಬಂದಿದೆ.
ದೇವರ ದಯೆ, ತಪ್ಪಿದ ಭಾರೀ ದುರಂತ..!
ಕನ್ನಡದ ಖಾಸಗಿ ವಾಹಿನಿಯ ಬಿಗ್​ಬಾಸ್​ ಕಾರ್ಯಕ್ರಮ ಮುಕ್ತಾಯವಾಗಿ ತಿಂಗಳಾಗುತ್ತಿರುವಾಗ ಈ ಅಗ್ನಿ ಅವಘಡ ಸಂಭವಿಸಿದ್ದು, ಸ್ಪರ್ಧಿಗಳು ಮನೆಯ ಒಳಗೆ ಇದ್ದಾಗ ಈ ಘಟನೆ ಸಂಭವಿಸಿದ್ರೆ‌ಅನ್ನೋ ಆತಂಕ ಕಾಡ್ತಿದೆ. ಅದೂ ಕೂಡ ಒಳ್ಳೆ ನಿದ್ರಾ ಸಮಯವಾದ ಬೆಳಗ್ಗೆ 3 ಗಂಟೆಗೆ ಬೆಂಕಿ ಬಿದ್ದು, ಎಲ್ಲಾ ಸ್ಪರ್ಧಿಗಳು ಗಾಢ ನಿದ್ರೆಯಲ್ಲಿ ಮಲಗಿದ್ದಾಗ ಅಗ್ನಿ ಅವಘಡ  ಸಂಭವಿಸಿದ್ರೆ ಹೆಚ್ಚಿನ ಹಾನಿಯಾಗ್ತಿತ್ತು ಅನ್ನೋದು ನಿಶ್ಚಿತ..

ಚಂದನ್ ಶೆಟ್ಟಿ ಬಿಗ್ ಬಾಸ್ ವಿನ್ನರ್!

ಬಿಗ್ ಬಾಸ್ ಕನ್ನಡ ಸೀಸನ್ ಐದರ ವಿಜೇತರಾಗಿ ಕನ್ನಡ ರಾಪರ್ ಚಂದನ್ ಶೆಟ್ಟಿ ಹೊರಹೊಮ್ಮಿದ್ದಾರೆ. ಮಾರುಕಟ್ಟೆಯ ತಂತ್ರಗಾರಿಕೆಯನ್ನು ಪಕ್ಕಕ್ಕಿಟ್ಟು ಈ ಬಾರಿ ಜನರ ನಿರೀಕ್ಷೆಯಂತೆ ವಿನ್ನರ್ ಘೋಷಣೆಯಾಗಿರೋದು ಪ್ರೇಕ್ಷಕರಿಗೆ ಸಂತಸದ ವಿಚಾರ. ಬಿಗ್ ಬಾಸ್ ಎಂದರೆ ಜನರ ನಿರೀಕ್ಷೆಗೆ ವಿರುದ್ಧವಾಗಿ ವಿನ್ನರ್ ಆಯ್ಕೆ ಮಾಡಿ ನೆಗೆಟಿವ್ ಪಬ್ಲಿಸಿಟಿ ಪಡೆಯುವ ಕಾರ್ಯಕ್ರಮ ಎಂಬ ಮಾತನ್ನು ಈ ಬಾರಿ ಸುಳ್ಳು ಮಾಡಲಾಗಿದೆ.

ಮೊದಲ ಆವೃತ್ತಿ ಹೊರತಾಗಿ ನಂತರದ ಮೂರು ಆವೃತ್ತಿಗಳ ವಿಜೇತರ ಬಗ್ಗೆ ಈಗಲೂ ಜನ ಅಸಮಧಾನ ವ್ಯಕ್ತಪಡಿಸಿದರೂ ಮಾತನಾಡುತ್ತಲೇ ಇದ್ದಾರೆ. ಅದೇ ನೆಗೆಟಿವ್ ಪಬ್ಲಿಸಿಟಿಯ ಶಕ್ತಿ. ಕಳೆದ ಮೂರು ಆವೃತ್ತಿಗಳಲ್ಲಿನ ಈ ತಂತ್ರಗಾರಿಕೆಯನ್ನು ಬದಿಗಿಟ್ಟು ಈ ಬಾರಿ ಜನರ ಅಪೇಕ್ಷೆಯಂತೆ ಚಂದನ್ ಶೆಟ್ಟಿ ಅವರನ್ನು ಗೆಲ್ಲಿಸಿರೋದು ನಿಜಕ್ಕೂ ಪ್ರೇಕ್ಷಕರಿಗೆ ನೆಮ್ಮದಿ ತಂದಿದೆ. ಚಂದನ್ ಶೆಟ್ಟಿ ಗೆಲುವಿನ ಹಿಂದೆ ಆತನ ಪರಿಶ್ರಮ ಹಾಗೂ ಆತ ಜನರಿಗೆ ನೀಡಿದ ಮನರಂಜನೆಯ ಫಲವಿರುವುದರಲ್ಲಿ ಎರಡು ಮಾತಿಲ್ಲ. ಆದರೆ ಈ ಬಾರಿ ಆತನನ್ನು ಹೊರತಾಗಿ ಉಳಿದರನ್ನು ಆಯ್ಕೆ ಮಾಡಲು ಸಮರ್ಥ ಕಾರಣಗಳೇ ಇರಲಿಲ್ಲ.

ಕಳೆದ ಮೂರು ಆವೃತ್ತಿಗಳಲ್ಲಿ ಪ್ರೇಕ್ಷಕರ ನಿರಾಸೆ, ಬಿಗ್ ಬಾಸ್ ಕಾರ್ಯಕ್ರಮದ ಪ್ರಸಾರ ವಾಹಿನಿ ಬದಲಾಗಿರುವುದು, ಬೇರೆ ವಾಹಿನಿಗಳ ಧಾರವಾಹಿ ಹಾಗೂ ರಿಯಾಲಿಟಿ ಶೋಗಳ ಜನಪ್ರಿಯತೆ ನಡುವೆ ಈ ಬಾರಿಯ ಬಿಗ್ ಬಾಸ್ ಆವೃತ್ತಿ ಕಳೆದ ಆವೃತ್ತಿಗಳಿಗಿಂತ ಕೊಂಚ ಹಿಂದುಳಿದಿದ್ದನ್ನು ಒಪ್ಪಿಕೊಳ್ಳಲೇಬೇಕು. ಈ ಎಲ್ಲ ಕಾರಣಗಳ ಮಧ್ಯೆ ಈ ಬಾರಿಯ ಬಿಗ್ ಬಾಸ್ ಪ್ರೇಕ್ಷಕರ ಬಾಯಲ್ಲಿ ಹೆಚ್ಚು ಚರ್ಚೆಯಾಗಲು ಕಾರಣ, ಚಂದನ್ ಶೆಟ್ಟಿ. ಆತನ ಸಂಗೀತದ ಮೇಲಿನ ಪ್ರೇಮ ಹಾಗೂ ಪ್ರತಿಭೆಯನ್ನು ಕನ್ನಡಿಗರು ಮನಪೂರ್ವಕವಾಗಿ ಒಪ್ಪಿಕೊಂಡರು. ಒಂದು ವೇಳೆ ಈ ಬಾರಿಯ ಬಿಗ್ ಬಾಸ್ ಅನ್ನು ಚಂದನ್ ಶೆಟ್ಟಿ ಹೊರತಾಗಿ ನೋಡಲು ಪ್ರೇಕ್ಷಕರಿಗೆ ನಿಜಕ್ಕೂ ಅಸಾಧ್ಯ.

ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟ ಅಥಿತಿಗಳಾಗಲಿ, ಸ್ಪರ್ಧಿಗಳ ಕುಟುಂಬಸ್ಥರಾಗಲಿ, ಹೊರಗಿರುವ ಪ್ರೇಕ್ಷಕರಾಗಲಿ ಅಂತಿಮ ಸುತ್ತಿಗೆ ಆಯ್ಕೆ ಮಾಡಲು ತೆಗೆದುಕೊಳ್ಳುತ್ತಿದ್ದ ಮೊದಲ ಹೆಸರೇ ಚಂದನ್ ಶೆಟ್ಟಿ. ವಾರದ ದಿನಗಳಲ್ಲಿ ಚಂದನ್ ಶೆಟ್ಟಿಗಾಗಿ ಹಾಗೂ ವಾರಾಂತ್ಯದಲ್ಲಿ ಸುದೀಪ್ ಅವರನ್ನು ನೋಡಲು ಹೆಚ್ಚಿನ ಪ್ರೇಕ್ಷಕ ವರ್ಗ ಬಿಗ್ ಬಾಸ್ ಕಾರ್ಯಕ್ರಮವನ್ನು ಆಯ್ಕೆ ಮಾಡಿಕೊಂಡಿತ್ತು. ಆ ಮಟ್ಟಿಗೆ ಚಂದನ್ ಜನರನ್ನು ರಂಜಿಸಿದ್ದ. ತನ್ನ ತಾಳ್ಮೆ, ಸಮಯ ಪ್ರಜ್ಞೆ, ಟಾಸ್ಕ್ ಮಾಡುತ್ತಿದ್ದ ರೀತಿಗೆ ಬೇರೆ ಸ್ಪರ್ಧಿಗಳು ಸಮರ್ಥ ಪೈಪೋಟಿ ನೀಡುತ್ತಿರಲಿಲ್ಲ. ಜಗಳದಿಂದ ಸದ್ದು ಮಾಡುವ ಬದಲು ತನ್ನ ಪ್ರತಿಭೆಯಿಂದಲೇ ಜನರನ್ನು ರಂಜಿಸಿದರು. ಈ ಎಲ್ಲ ಕಾರಣದಿಂದ ಚಂದನ್ ಶೆಟ್ಟಿ ಗೆದ್ದಿದ್ದು, ಈತನ ಗೆಲುವಿನಿಂದ ಪ್ರೇಕ್ಷಕರ ಸಮೂಹ ಸಂತೋಷಗೊಂಡಿರುವುದು ಫೇಸ್ ಬುಕ್ ವಾಲ್ ಗಳಲ್ಲಿ ವಾಟ್ಸಪ್ ಸ್ಟೇಟಸ್ ಗಳಲ್ಲಿ ಗೊತ್ತಾಗುತ್ತಿವೆ.

ಚಂದನ್ ಜತೆಗೆ ಸಾಮಾನ್ಯ ವ್ಯಕ್ತಿ ವಿಭಾಗದಿಂದ ಪ್ರವೇಶ ಪಡೆದಿದ್ದ ದಿವಾಕರ್ ರನ್ನರ್ ಅಪ್ ಆದರೆ, ಜಯರಾಂ ಕಾರ್ತಿಕ್ ಮೂರನೇ ಸ್ಥಾನ ಪಡೆದಿದ್ದಾರೆ.

ಬಿಗ್ ಬಾಸ್ ವಿನ್ನರ್ ಯಾರು..?

ಈಗಾಗಲೇ ಶತಕ ಪೂರೈಸಿ, ಅಂತಿಮ ವಾರದಲ್ಲಿ ಹಣಾಹಣಿ ನಡೆಸುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಗೆಲ್ಲೋದು ಯಾರು ಅನ್ನೊ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಜನಸಾಮಾನ್ಯರಾಗಿ ಎಂಟ್ರಿಕೊಟ್ರು ಒಳ್ಳೆಯ ಹಾಸ್ಯ ಪ್ರಜ್ಞೆ ಮೂಲಕ ಜನ ಮನ ಗೆದ್ದಿರುವ ದಿವಾಕರ್ ಗೆಲ್ಲಬೇಕು ಅಂತ ಕೆಲವರು ವಾದಿಸಿದ್ರೆ, ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದನೆ ಮಾಡಿರುವ ನಟ ಜಯರಾಮ್ ಕಾರ್ತಿಕ್ ಗೆಲ್ಲಬೇಕು ಅನ್ನೋದು ಅವರ ಅಭಿಮಾನಿಗಳ ಒಲವು. ಇನ್ನು ಕನ್ನಡ ರ‌್ಯಾಪರ್ ಚಂದನ್ ಶೆಟ್ಟಿ ಗೆಲ್ಲಲೇ ಬೇಕಾದ ಸ್ಪರ್ಧಿ ಅನ್ನೋದು ಬಹುತೇಕ ಬಿಗ್ ಬಾಸ್ ವೀಕ್ಷಕರ ಕನಸಾಗಿದೆ.

ಸಮೀರ್ ಆಚಾರ್ಯ ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಬಳಿಕ ಉಳಿದ ಐದು ಸ್ಪರ್ಧಿಗಳಿಗೆ ಒಂದು ಟಾಸ್ಕ್ ಕೊಡಲಾಗಿತ್ತು. ಟಾಪ್ ಫೈವ್ ಸ್ಪರ್ಧಿಗಳ ಅಂತಿಮ ಸ್ಥಾನಗಳನ್ನು ಸ್ಪರ್ಧಿಗಳೇ ನಿರ್ಧರಿಸಲು ಬಿಗ್ ಬಾಸ್ ಅವಕಾಶ ಕಲ್ಪಿಸಿದ್ರು. ಈ ಟಾಸ್ಕ್ ನಲ್ಲಿ ಮೊದಲಿಗರಾಗಿ ಬಂದ ನಟ ಜೆಕೆ, ಚಂದನ್ ಶೆಟ್ಟಿಗೆ ವಿನ್ನರ್ ಪಟ್ಟ ಕೊಟ್ರೆ ಎರಡನೇ ಸ್ಥಾನವನ್ನುವನ್ನು ತನಗೆ ಕಾಯ್ದುಕೊಂಡು ಮೂರನೇ ಸ್ಥಾನ ದಿವಾಕರ್ ನಾಲ್ಕು ಸೃತಿ ಕೊನೆ ಸ್ಥಾನ ನಿವೇದಿತಾ ಗೌಡ ಅವರಿಗೆ ನೀಡಿದ್ರು. ದಿವಾಕರ್ ಕೂಡ ಮೊದಲ ಸ್ಥಾನ ಚಂದನ್ ಶೆಟ್ಟಿಗೆ ಕೊಟ್ಟು, ನಂತ್ರ ಜೆಕೆ, ಶೃತಿ, ನಿವೇದಿತಾಗೆ ಕೊಟ್ಟು ಕೊನೆ ಸ್ಥಾನಕ್ಕೆ ತಾವೇ ನಿಂತ್ರು. ಬಳಿಕ ಶೃತಿ ಮೊದಲ ಸ್ಥಾನ ಜೆಕೆ, ನಂತರ ಚಂದನ್ ಗೆ ಕೊಟ್ರು. ಬಳಿಕ ನಿವೇದಿತಾ ಚಂದನ್ ಗೆ ಫಸ್ಟ್ ಪ್ಲೇಸ್ ಕೊಟ್ಟು ಜೆಕೆಗೆ ಸೆಕೆಂಡ್ ಪ್ಲೇಸ್ ಕೊಟ್ರು. ಮೂರನೇ ಸ್ಥಾನ ತಾವೇ ಇಟ್ಕೊಂಡ್ರು. ಹೀಗೆ ಮೂವರು ಚಂದನ್ ಶೆಟ್ಟಿಗೆ ಮೊದಲ ಸ್ಥಾನ ಕೊಟ್ರೆ ಇಬ್ಬರು ಜೆಕೆ ವಿನ್ನರ್ ಅಂದ್ರು.

ಚಂದನ್ ಮೊದಲ ಸ್ಥಾನ ಕೊಡ್ತಿದ್ದ ಹಾಗೆ ಜೆಕೆ ಆ ಸ್ಥಾನ ಒಪ್ಪಿಕೊಳ್ಳಲು ನಿರಾಕರಿಸಿ ನಾನು ನಿನಗಿಂತ ಹೆಚ್ಚು ಅರ್ಹನಲ್ಲ, ನೀನೇ ಮೊದಲ ಸ್ಥಾನಕ್ಕೆ ಅರ್ಹ, ನಾನು ಎರಡನೇ ಸ್ಥಾನಕ್ಕೆ ಸೂಕ್ತ ಅಂತ ವಾದಿಸಿದ್ರು. ಅಂದ್ರೆ ನೂರು ದಿನಗಳನ್ನು ಪೂರೈಸಿದ ಬಳಿಕ ಬಿಗ್ ಬಾಸ್ ಟೈಟಲ್ ಗೆಲ್ಲಬೇಕಾದವರು ಯಾರು ಅನ್ನೊದನ್ನ ಸ್ಪರ್ಧಿಗಳು ನಿರ್ಧರಿಸಿದ್ದಾರೆ. ಹೊರಗಡೆ ನೋಡ್ತಿರೋ ಕನ್ನಡಿಗ ಪ್ರೇಕ್ಣಕರಿಗೂ ಕೂಡ ಕನ್ನಡ ರ‌್ಯಾಪರ್ ಚಂದನ್ ಶೆಟ್ಟಿಯೇ ವಿನ್ನರ್ ಆಗಬೇಕು ಎಂದುಕೊಂಡು ಕಾರ್ಯಕ್ರಮ ನೋಡ್ತಿದ್ದಾರೆ. ಆದ್ರೆ ಬಿಗ್ ಬಾಸ್ ನಲ್ಲಿ ಜನರ ಅಪೇಕ್ಷೆ ಒಂದಾದ್ರೆ ಕೊನೆಯಲ್ಲಿ ಬರುವ ಫಲಿತಾಂಶವೇ ಬೇರೆ ಇರುತ್ತೆ. ಜನರೇ ಅಯ್ಕೆ ಮಾಡಿರೋದು ಅಂತ ಹೇಳುವುದರಿಂದ ಒಲ್ಲದ ಮನಸ್ಸಿಂದಲೇ ಒಪ್ಪಿಕೊಳ್ಳಬೇಕಾಗುತ್ತೆ. ಈ ಬಾರಿ ಹಾಗೇನಾದ್ರು ಆದ್ರೆ ಚಂದನ್ ಗೆ ಪಟ್ಟ ಸಿಗದೆ ಹೋಗುತ್ತದೆ. ಎರಡು ಪ್ರೇಮ ಜೋಡಿಗಳನ್ನು ಬಿಟ್ಟು ದಿವಾಕರ್ ಗೆ ಪಟ್ಟ ಕೊಟ್ಟರೂ ಕೊಡುವ ಸಾಧ್ಯತೆ ಇದೆ.

ಜ್ಯೋತಿ ಗೌಡ, ನಾಗಮಂಗಲ

ಬಿಗ್ ಬಾಸ್ ನಿಂದ ಹೊರ ಬಿದ್ದ ಶೃತಿ ಪ್ರಕಾಶ್!

ಈ ಬಾರಿಯ ಕಡೇಯ ಎಲಿಮಿನೇಷನ್ ನಲ್ಲಿ ಶೃತಿ ಪ್ರಕಾಶ್ ಹೊರ ಬಿದ್ದಿದ್ದಾರೆ. ಅದರೊಂದಿಗೆ ಫಿನಾಲೆಯ ಒಂದು ಹೆಜ್ಜೆ ಬಾಕಿ ಇರುವಾಗ ತಮ್ಮ ಆಟ ಮುಗಿಸಿದ್ದಾರೆ.

ನಿನ್ನೆಯಷ್ಟೇ ಅನುಪಮಾ ಗೌಡ  ಅವರು ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿದ್ದರು. ಈಗ ಶೃತಿ ಪ್ರಕಾಶ್ ಹೊರ ಬೀಳುವ ಮೂಲಕ ಅಂತಿಮ ಐದು ಸ್ಪರ್ಧಿಗಳು ಯಾರು ಎಂಬುದು ಖಚಿತವಾಗಿದೆ. ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್, ಸಮೀರ್ ಆಚಾರ್ಯ, ದಿವಾಕರ್, ನಿವೇದಿತಾ ಗೌಡ ಅವರು ಅಂತಿಮ ಐದರಲ್ಲಿ ಸ್ಥಾನ ಪಡೆದಿದ್ದಾರೆ.

ಆರಂಭದ ದಿನಗಳ ಟಾಸ್ಕ್ ಗಳಲ್ಲಿ ಪುರುಷ ಸದಸ್ಯರಿಗೆ ತೊಡೆ ತಟ್ಟುವಂತಹ ಪೈಪೋಟಿ ನೀಡುತ್ತಿದ್ದ ಶೃತಿ ಪ್ರಕಾಶ್, ಕ್ರಮೇಣ ಎಲ್ಲೋ ಕಳೆದು ಹೋದವರಂತೆ ಕಂಡರು. ಟಾಸ್ಕ್ ನಲ್ಲಿನ ಪ್ರದರ್ಶನಕ್ಕಿಂತ ಜೆಕೆ ಹಾಗೂ ಚಂದನ್ ನಡುವಣ ವದಂತಿಗಳಿಗೆ ಹೆಚ್ಚು ಚರ್ಚೆಯಾದರು. ಶೃತಿ ಅಂತಿಮ ಹಂತಕ್ಕೆ ಹೋಗುವ ಸ್ಪರ್ಧಿಯಾಗಿದ್ದರು, ತಮ್ಮ ಪ್ರದರ್ಶನದಲ್ಲಿ ಸ್ಥಿರತೆ ಕೊರತೆಯಿಂದ ಈಗ ಅಂತಿಮ ಹೆಜ್ಜೆಯಲ್ಲಿ ಮುಗ್ಗರಿಸಿದ್ದಾರೆ ಅಂತಲೇ ಹೇಳಬಹುದು.

ಇನ್ನು ತನ್ನ ಆಸೆಯಂತೆ ನಿವೇದಿತಾ ಅಂತಿಮ ಐಐವರಲ್ಲಿ ಸ್ಥಾನ ಪಡೆದಿದ್ದು, ಘಟಾನುಘಟಿ ಸ್ಪರ್ಧಿಗಳನ್ನೇ ಮಣಿಸಿ ಅಂತಿಮ ಹಂತದವರೆಗೆ ಬಂದಿದ್ದಾರೆ. ಆರಂಭದಲ್ಲಿ ತನ್ನ ಕನ್ನಡ ಉಚ್ಛಾರಣೆಯಿಂದ ಹಾಸ್ಯಕ್ಕೊಳಗಾಗಿದ್ದ ನಿವೇದಿತಾ ನಂತರ ಗೊಂಬೆ ಎಂದೇ ಹೆಸರು ಪಡೆದರು. ಕಿರಿಯ ವಯಸ್ಸಿನಲ್ಲೇ ಇತರ ಸದಸ್ಯರಿಗಿಂತ ಪ್ರಬುದ್ಧತೆ ತೋರಿದ್ದು ಈಕೆಯ ಪ್ಲಸ್ ಪಾಯಿಂಟ್ ಅಂತಿಮ ಮೂವರಲ್ಲಿ ಕಾಣಿಸಿಕೊಂಡರೂ ಅಚ್ಚರಿ ಪಡಬೇಕಿಲ್ಲ.

ಬಿಗ್ ಬಾಸ್ ನಿಂದ ಹೊರಬಿದ್ದ ಅನುಪಮಾ?

ಅಕ್ಕ ಖ್ಯಾತಿಯ ಕಿರುತೆರೆ ನಟಿ ಅನುಪಮಾ ಗೌಡ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ ಎಂಬ ಮಾಹಿತಿ ಮೂಲಗಳಿಂದ  ಬಂದಿವೆ.

ಬಿಗ್ ಬಾಸ್ ಫಿನಾಲೆಗೆ ಬೆರಳೆಣಿಕೆ ದಿನಗಳು ಬಾಕಿ ಇರುವಾಗ ಎಲಿಮಿನೇಟ್ ಆಗಿರುವುದು ಅನುಪಮಾಗೆ ದೊಡ್ಡ ನಿರಾಸೆಯಾಗಿದೆ. ಇದರೊಂದಿಗೆ ಅಂತಿಮ ಘಟ್ಟದಲ್ಲಿ ಅನುಪಮಾ ಮುಗ್ಗರಿಸಿದ್ದಾರೆ. ಕಾರ್ಯಕ್ರಮದ ಆರಂಭದಲ್ಲಿ ಜಗನ್ ಜತಗಿನ ಮನಸ್ತಾಪ, ಮುನಿಸು, ಅಳುವಿನಿಂದ ಹೆಚ್ಚು ಕಾಣಿಸಿಕೊಂಡಿದ್ದ ಅನುಪಮಾ ಕ್ರಮೇಣ ಟಾಸ್ಕ್ ಗಳಲ್ಲಿ ಉತ್ತಮವಾಗಿಪ್ರದರ್ಶನ ನೀಡುತ್ತಾ, ನಗುತ್ತಾ, ಜಾಲಿಯಾಗಿದ್ದರು.

ಈ ಬಾರಿಯ ಬಿಗ್ ಬಾಸ್ ಅವತರಣಿಕೆಯಲ್ಲಿ ಮೊದಲ ಹಾಗೂ ಕೊನೆಯ ಕ್ಯಾಪ್ಟನ್ ಆಗಿದ್ದು ಅನುಪಮಾ ಎಂಬುದು ವಿಶೇಷ. ಇನ್ನು ಕಾರ್ಯಕ್ರಮದಲ್ಲಿ ಜಯರಾಂ ಕಾರ್ತಿಕ್, ಚಂದನ್ ಶೆಟ್ಟಿ, ನಿವೇದಿತಾ, ಶೃತಿ, ಸಮೀರ್ ಆಚಾರ್ಯ, ದಿವಾಕರ್ ಉಳಿದುಕೊಂಡಿದ್ದು, ಒಬ್ಬೊಬ್ಬರು ತಮ್ಮದೇ ಆದ ವಿಶೇಷತೆಗಳಿಂದ ಇಷ್ಟು ದೂರ ಸಾಗಿ ಬಂದಿದ್ದಾರೆ. ಇವರಲ್ಲಿ ಅಂತಿಮ ಅಂತಿಮ ಐದರಲ್ಲಿಸ್ಥಾನ ಪಡೆಯುವರಾರು? ಮೊದಲ ರನ್ನರ್ ಅಪ್ ಹಾಗೂ ದ್ವಿತೀಯ ರನ್ನರ್ ಅಪ್ ಆಗಿ ಸ್ಥಾನಕ್ಕೆತೃಪ್ತಿಯಾಗುವವರಾರು? ಟ್ರೋಫಿ ಗೆಲ್ಲುವರಾರು ಎಂಬುದಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಕಾಯಬೇಕಿದೆ.

ಬಿಗ್ ಬಾಸ್ ನಿಂದ ರಿಯಾಜ್ ಔಟ್

ತನ್ನ ಪ್ರೀತಿಯ ಮಡದಿಗೆ ಒಂದು ಮನೆ ಕಟ್ಟಿಕೊಡುವ ಆಸೆಯೊಂದಿಗೆ ಈ ಬಾರಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ನಿರೂಪಕ ರಿಯಾಜ್ ಬಾಷಾ ಈ ವಾರ ಎಲಿಮಿನೇಟ್ ಆಗಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

ಬಿಗ್ ಬಾಸ್ ಮನೆಯಲ್ಲಿ ರೂಲ್ಸ್ ರಿಯಾಜ್ ಎಂದೇ ಹೆಸರು ಪಡೆದಿರೋ ರಿಯಾಜ್, ಪ್ರಶಸ್ತಿ ಗೆದ್ದೇ ಗೆಲ್ಲಬೇಕು ಎಂದು ಪಣ ತೊಟ್ಟಿದ್ದರು.  ತಮ್ಮ ಈ ಆಸೆಯನ್ನು ಈ ಹಿಂದೆ ಅನೇಕ ಬಾರಿ ಸಹ ಸ್ಪರ್ಧಿಗಳೊಂದಿಗೆ ಹಂಚಿಕೊಂಡಿದ್ದಾರೆ. ಮನೆಯಲ್ಲಿ ಬಹುತೇಕ ಎಲ್ಲರಿಂದಲೂ ನಕಾರಾತ್ಮಕ ಅಭಿಪ್ರಾಯ ಪಡೆದಿದ್ದ ರಿಯಾಜ್ ಈಗ ಮನೆಯಿಂದ ಹೊರಬಿದ್ದಿದ್ದಾರೆ.

ಬಿಗ್ ಬಸ್ ಮನೆಯಲ್ಲಿ ಜೋಡಿ ವಿವಾಹ

 ಕಳೆದ ರಾತ್ರಿ ಪ್ರಸಾರವಾದ ಬಿಗ್ ಬಾಸ್ ಎಪಿಸೋಡ್ ನಲ್ಲಿ ಜೋಡಿ ವಿವಾಹ ಕಾರ್ಯಕ್ರಮ ನಡೀತು. ಒಂದು ಹಳೇ ಜೋಡಿಗೆ ಮರುವಿವಾಹ ಆದ್ರೆ, ಮತ್ತೊಂದು ಕನಸುಗಳನ್ನು ಕಾಣುತ್ತಿರುವ ನವ ಜೋಡಿಯ ವಿವಾಹ. ಒಂದು ಮದುವೆ ಪೂರ್ವ ನಿಯೋಜಿತವಾಗಿದ್ದು, ಮತ್ತೊಂದು ವಿವಾಹ ಊಹೆಗೂ ನಿಲುಕುದಂತೆ ನಡೆದು ಹೋಯ್ತು. ಮದುವೆ ಕಾರ್ಯಕ್ರಮ ಸಾಗುತ್ತಿದ್ದ ರೀತಿ ನೋಡಿ ಬಿಗ್ ಬಾಸ್ ಕೂಡ ಕ್ಷಣ ಮಾತ್ರ ಚಕಿತರಾದ್ರು. ಮಧ್ಯೆ  ಮಧ್ಯೆ  ಕಾಮೆಂಟ್ ಮಾಡ್ತಿದ್ದ ಬಿಗ್ ಬಾಸ್ ಮದುವೆ ಮುಗಿಯೋ ತನಕ ಸೊಲ್ಲೆತ್ತಲಿಲ್ಲ. ಅದರಲ್ಲೂ ಬಿಗ್ ಬಾಸ್ ಮನೆಯಲ್ಲೇ ಕಲೆತಿದ್ದ ಎರಡು ಹೃದಯಗಳು ಬಿಗ್ ಬಾಸ್ ಮನೆಯಲ್ಲೇ ಒಂದಾಗಿದ್ದು ವಿಶೇಷ..
ಜಯರಾಮ್ ಕಾರ್ತಿಕ್ ಹಾಗೂ ಸಿಂಗರ್ ಶೃತಿ ಬಿಗ್ ಬಾಸ್ ಮನೆಯ ಪ್ರೇಮ ಪಕ್ಷಿಗಳು. ನೇರವಾಗಿ ಎಲ್ಲರ ಮುಂದೆ ಹೇಳಿಕೊಳ್ಳದಿದ್ದರು, ಒಂದಾದ ಹೃದಯಗಳು ಟಿವಿ ಪರದೆ ಮೇಲೆ ಜನರಿಗೆ ಕಾಣಿಸುತ್ತಿದೆ. ಒಬ್ಬರಿಗೊಬ್ಬರ ಸಹಕಾರ, ಮಮಕಾರ, ಪ್ರೀತಿ ವಾತ್ಸಲ್ಯ ತುಂಬಿರುತ್ತೆ. ನಿನ್ನೆ ಸ್ಟ್ಯಾಚ್ಯೂ ಪ್ಲೇ ಗೇಮ್ ನಡೆಯುವಾಗ ಶೃತಿ ಹಾಗೂ ಜೆಕೆ ಒಮ್ಮೆ ಎದುರು ಬದುರಾದರು. ಇಬ್ಬರನ್ನು ಬಿಗ್ ಬಾಸ್ ಸ್ಟ್ಯಾಚ್ಯೂ ಮಾಡಿದ್ರು. ಈ ವೇಳೆ ರ‌್ಯಾಪರ್ಸ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ, ದಿವಾಕರ್ ಎಲ್ಲರೂ ಸೇರಿಕೊಂಡು ಆಚಾರ್ಯರನ್ನು ಪುರೋಹಿತರನ್ನಾಗಿ ಮಾಡಿಕೊಂಡು ಮದುವೆ ಶಾಸ್ತ್ರ ಮುಗಿಸಿದ್ರು.
ಇನ್ನೊಂದೆಡೆ ನಿನ್ನೆ ಬಿಗ್ ಬಾಸ್ ಮನೆಯೊಳಕ್ಕೆ ಹೋಗಿದ್ದ ಸಮೀರ್ ಆಚಾರ್ಯ ಪತ್ನಿ ಹೂಮಾಲೆ ಹಿಡಿದುಕೊಂಡೇ  ಹೋಗಿದ್ರು. ನಮ್ಮ ಮದುವೆಗೆ ನಿಮ್ಮನ್ನು ಕರೆಯಲಾಗಲಿಲ್ಲ. ಹಾಗಾಗಿ ಮತ್ತೆ ಬಿಗ್ ಬಾಸ್ ಮನೆಯೊಳಗೆ ಮದುವೆ ಮಾಡಿಕೊಳ್ತೀವಿ ಅಂತ ತಿಳಿಸಿ, ದೇವರಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿ ಹಾರ ಬದಲಾವಣೆ ಮಾಡಿಕೊಂಡು ಮದುವೆಯಾದ್ರು. ಒಟ್ಟಾರೆ ಬಿಗ್ ಬಾಸ್ ಮನೆಯೊಳಗೆ ಎರಡು ಜೋಡಿ ಮದುವೆಯಾದ ಬಳಿಕ ಸಮೀರ್ ಪತ್ನಿ ಮನೆಯಿಂದ ಹೊರ ಬಂದಿದ್ದಾರೆ. ಇನ್ನೊಂದು ಜೋಡಿ ಮನೆಯೊಳಗೇ ಇದ್ದು, ಮುಂದಿನ ಶಾಸ್ತ್ರ ಗಳು ನಡೆಯುತ್ತಾ ಅನ್ನೋದು ಗೊತ್ತಿಲ್ಲ..
ಜ್ಯೋತಿ ಗೌಡ, ನಾಗಮಂಗಲ

JK ಡೋಂಟ್ ಕೇರ್ ವ್ಯಕ್ತಿತ್ವಕ್ಕೆ ಕಾರಣ ಇದು..!!

ಸ್ಯಾಂಡಲ್ ವುಡ್ ಹಾಗೂ ಸೀರಿಯಲ್ ನಲ್ಲೂ  ತನ್ನದೇ ಆದ ಮ್ಯಾನರಿಸಂನಿಂದ ಹೆಸರುವಾಸಿಯಾಗಿರುವ ಜೆಕೆ ಅಲಿಯಾಸ್ ಜಯರಾಮ್ ಕಾರ್ತಿಕ್ ಧಿಮಾಕಿನ ಮನುಷ್ಯ ಅನ್ನೋದು ಕೆಲವರ ಮಾತು. ಬಿಗ್ ಬಾಸ್ ಮನೆಯಲ್ಲೂ ಕೂಡ ಕೆಲವರಿಗೆ ಜೆಕೆ ವರ್ತನೆ ಕಿರಿಕಿರಿ ಉಂಟು ಮಾಡಿರೋದು ಸುಳ್ಳಲ್ಲ. ಯಾರ  ಜೊತೆಯಲ್ಲೂ  ಜಯರಾಮ್ ಕಾರ್ತಿಕ್ ಅಷ್ಟು ಸುಲಭವಾಗಿ ಬೆರಯೋದಿಲ್ಲ. ಮನೆ ಸಮಸ್ಯೆ ಬಗ್ಗೆ ಚರ್ಚೆಯನ್ನೂ ಮಾಡಲ್ಲ. ಕೇಳಿದ ಮಾತಿಗಷ್ಟೇ ಉತ್ತರ ಕೊಟ್ಟು ಸುಮ್ಮನಾಗ್ತಾರೆ.
ಜಯರಾಮ್ ಕಾರ್ತಿಕ್ ಯಾಕೆ ಹೀಗೆ ಅನ್ನೋದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ.  ಕಾರ್ತಿಕ್ ಹೆಸರಿನ ಹಿಂದಿರುವ ಜಯರಾಮ್, ಜೆಕೆ ಅವರ ತಂದೆಯ ಹೆಸರು .ಕಾರ್ತಿಕ್ ಅನ್ನೋದು ಜೆಕೆ ಹೆಸರು. ತನ್ನ ತಂದೆ ಹೆಸರನ್ನು ಸೇರಿಸಿಕೊಂಡಿರುವ ಜಯರಾಮ್ ಕಾರ್ತಿಕ್, ತಮ್ಮ ತಂದೆ ಹೆಸರಿನ ಜೊತೆಗೆ ತಂದೆಯ ಗುಣವನ್ನು ಹಾಗೇ ಉಳಿಸಿಕೊಂಡಿದ್ದಾರೆ. ಅದನ್ನೇ ಪಾಲಿಸುತ್ತಿದ್ದಾರೆ.
JK ಅವರ ತಂದೆ ಜಯರಾಮ್ ಎಲ್ಲರ ಜೊತೆ ಬೆರೆಯುವ ಗುಣ ಹೊಂದಿಲ್ವಾ ಅನ್ನೋದು ನಿಮ್ಮ ಪ್ರಶ್ನೆ   ಆಗಿದ್ರೆ, ನಮ್ಮ ಉತ್ತರ ಎಲ್ಲರ ಜೊತೆ ಮಿಂಗಲ್ ಆಗುವ ಗುಣ ಜಯರಾಮ್ ಅವರದ್ದು. ಯಾಕಂದ್ರೆ, ಜಯರಾಮ್ ಅವರು ಬಿಗ್ ಬಾಸ್ ಮನೆಯೊಳಕ್ಕೆ ಎಂಟ್ರಿ ಕೊಡ್ತಿದ್ದ ಹಾಗೆ ಯಾವುದೇ ಬಿಗುಮಾನ ಇಲ್ಲದೆ ಎಲ್ಲರನ್ನು ಮಾತನಾಡಿಸಿಕೊಂಡು ಬಂದ್ರು. ಅದೂ ಅಲ್ಲದೇ ಎಲ್ಲರೂ ಸ್ಟ್ಯಾಚ್ಯೂ ಸ್ಥಿತಿಯಲ್ಲಿ ಇದ್ದರೂ ಕೂಡ ತಾವೇ ಎಲ್ಲರನ್ನು ಮಾತನಾಡಿಸಿದ್ರು. ಹಾಗಾದ್ರೆ ಜೆಕೆಯಲ್ಲಿ ಇರುವ ಡೋಂಟ್ ಕೇರ್ ಮಾಸ್ಟರ್ ಗುಣ ಯಾರದ್ದು ಅಂದ್ರೆ ಅದೂ ಕೂಡ ಜಯರಾಮ್ ಅವರದ್ದೇ.. ಯಾಕಂದ್ರೆ, ಜಯರಾಮ್ ಅವರಿಗೆ ಬಿಗ್ ಬಾಸ್ ಮನೆಯಿಂದ ಹೊರಗೆ ಬರಲು ತಿಳಿಸಿದ ಮೇಲೂ ಅವರು ಮಾತನಾಡುತ್ತಾ ನಿಂತಿದ್ರು. ಆಗ ಮನೆಯಿಂದ ಹೋಗಬೇಕು ಎಂದು ಜ್ಞಾಪಿಸಿದ್ರೆ, ಹೇ.. ಬಿಡೋ ಅವರೇನು ಕರೆಯುತ್ತಾರೆ ಅಂತ ನೇರವಾಗಿಯೇ ತಿರಸ್ಕರಿಸಿದರು.. ಇದೇ ಅಲ್ವಾ ಅಪ್ಪನಂತೆ ಮಗ ಅಂದ್ರೆ..

ಎಂಥಾ ಕೆಲಸ ಮಾಡಿಬಿಟ್ರು ಸುದೀಪ್..?!

ನಟ ಸುದೀಪ್ ಭಾನುವಾರ ಪತ್ನಿ ಪ್ರಿಯಾ ಅವರ ಬರ್ತ್ ಡೇ ಗೆ ವಿಶೇಷವಾಗಿ ವಿಶ್ ಮಾಡಿ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದ್ರು.. ಇದೀಗ ಮತ್ತೊಂದು ವಿಚಾರ ಅಲ್ಲ, ಅದೇ ವಿಚಾರಕ್ಕೆ ಸುದ್ದಿ ಆಗಿದ್ದಾರೆ. ಸುದೀಪ್ ತನ್ನ ಪತ್ನಿ ಬರ್ತ್ ಡೇ ದಿನವನ್ನು ವಿಭಿನ್ನವಾಗಿ ಆಚರಣೆ ಮಾಡಿದ್ದು, ಗೆರಿಲ್ಲಾ ಯುದ್ಧ ತಂತ್ರದ ರೀತಿ ಯಾರಿಗೂ ಗೊತ್ತಾಗದ ಹಾಗೆ ಒಂದು ವಿಶೇಷ ಕೆಲಸ ಒಂದನ್ನು ಮಾಡಿದ್ದಾರೆ. ಅದು ಮಾಡಬಾರದ ಕೆಲಸ ಅಂತ ಹೇಳಲು ಸಾಧ್ಯವಿಲ್ಲ. ಆದ್ರೆ ಅವರ ನೆಚ್ಚಿನ ಕೆಲಸ ಅಂತಾನೇ ಹೇಳಬಹುದು.
ಬಿಗ್ ಬಾಸ್ ಮನೆಯಲ್ಲಿ ಅಡುಗೆ ಮಾಡಿದ ಕಿಚ್ಚ
ಅದರಲ್ಲೇನು ವಿಶೇಷ ಅಂತ ನೀವು ಕೇಳಬಹುದು. ಯಾಕಂದ್ರೆ ಬಿಗ್ ಬಾಸ್ ಮನೆಯಲ್ಲಿ ವಾರಕ್ಕೊಮ್ಮೆ ಸುದೀಪ್ ಅಡುಗೆ ಮಾಡೋದನ್ನ ಇಡೀ ದೇಶವೇ ನೋಡುತ್ತಿದೆ ಅನ್ಕೊಂಡ್ರಾ..? ಇಲ್ಲೇ ಇರೋದು ಟ್ವಿಸ್ಟ್. ಯಾಕಂದ್ರೆ ಅಡುಗೆ ಮಾಡೋದನ್ನು ಹ್ಯಾಬಿಟ್ ಮಾಡಿಕೊಂಡಿರುವ ಸುದೀಪ್, ಪತ್ನಿ ಪ್ರಿಯಾ ಬರ್ತ್ ಡೇ ದಿನ ಬಿಗ್ ಬಾಸ್ ಸ್ಪರ್ಧಿಗಳಿಗೆ ಅಡುಗೆ ಮಾಡಿ ಬಡಿಸಿ ಸಂಭ್ರಮಿಸಿದ್ದಾರೆ. ಆದ್ರೆ ಬಿಗ್ ಬಾಸ್ ನ ಯಾವ ಸ್ಪರ್ಧಿಗಳಿಗೂ ಕಿಚ್ಚನನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಮುಖಕ್ಕೆ ಮಾಸ್ಕ್ ಹಾಕಿಕೊಂಡು ಮನೆಯೊಳಕ್ಕೆ ಎಂಟ್ರಿ ಕೊಟ್ಟಿದ್ದ ಮೂರ್ನಾಲ್ಕು ಜನ ಸ್ಪಾಟ್ ನಲ್ಲೇ ಅಡುಗೆ ಮಾಡಿ ಕೊಡ್ತಿದ್ರು.. ಬಿಗ್ ಬಾಸ್ ಮನೆಯೊಳಗೆ ವಿಶೇಷ ಕಾರ್ಯಕ್ರಮ ಒಂದನ್ನು ನೀಡುವಂತೆ ತಿಳಿಸಿ, ಪಬ್ ರೀತಿ ಪರಿವರ್ತನೆ ಮಾಡಿದ್ರು..
ಗಿಲ್ಟಿ ಫೀಲ್ ಮಾಡ್ತಿದ್ದಾರೆ ಸ್ಪರ್ಧಿಗಳು..!
ಸುದೀಪ್ ಬಂದಿದ್ದರು ಅನ್ನೋ ವಿಚಾರ ಗೊತ್ತಾದ ಬಳಿಕ ಸ್ಪರ್ಧಿಗಳು ಬೇಸರ ಮಾಡ್ಕೊಂಡ್ರು. ನಮಗೆ ಸುದೀಪ್ ಅನ್ನೋದು ಗೊತ್ತಾಗಿದ್ರೆ ಮಾಸ್ಕ್ ತೆಗೆದು ಮಾತಾಡಿಸಬಹುದಿತ್ತು. ಆದ್ರೆ ನಾವು ಪೆದ್ದುಗಳು ಸುದೀಪ್ ಅವರನ್ನು ಪತ್ತೆ ಮಾಡಲು ಆಗಲಿಲ್ಲ ಅಂತ ಸ್ಪರ್ಧಿ ಚಂದನ್ ಹಾಗೂ ದಿವಾಕರ್ ಪೆಚ್ಚು ಮೋರೆ ಹಾಕಿಕೊಂಡರು.
ಜ್ಯೋತಿ ಗೌಡ, ನಾಗಮಂಗಲ

Like Us, Follow Us !

120,177FansLike
1,826FollowersFollow
1,573FollowersFollow
4,884SubscribersSubscribe

Trending This Week