18 C
Bangalore, IN
Monday, December 18, 2017
Home ಸಿನಿಮಾ ನ್ಯೂಸ್ ಟಿವಿ ನ್ಯೂಸ್

ಟಿವಿ ನ್ಯೂಸ್

Get Latest Kannada TV News, News On Kannada TV Serials

ಸಿಹಿಕಹಿ ಚಂದ್ರು ಮಾತೃ ಭಾಷೆ ಯಾವುದು..? ಕನ್ನಡ ಅಲ್ವಾ..?

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿರುವ ಸಿಹಿಕಹಿ ಚಂದ್ರು ಹಲವಾರು ಕನ್ನಡ ಸಿನಿಮಾಗಳಲ್ಲಿ ವಿಭಿನ್ನ ಪಾತ್ರ ಮಾಡುವ ಮೂಲಕ ಕನ್ನಡ ಸಿನಿಪ್ರೇಕ್ಷರ ಮನಗೆದ್ದಿದ್ದಾರೆ.. ಆದ್ರೆ ಅವರ ಮಾತೃ ಭಾಷೆ ಬಗ್ಗೆ ಕನ್ನಡಿಗರು ಯಾವತ್ತೂ ಪ್ರಶ್ನೆ ಮಾಡಿರಲಿಲ್ಲ, ಕೇಳಿರಲೂ ಇಲ್ಲ. ಇವತ್ತು ಬಿಗ್ ಬಾಸ್ ನಲ್ಲಿ ಒಂದು ಟಾಸ್ಕ್ ಇತ್ತು. ಅದರಲ್ಲಿ ಒಬ್ಬೊಬ್ಬ ಸ್ಪರ್ಧಿಗೂ ಪ್ರಿಯವಾದ ವಸ್ತುಗಳನ್ನು ಅವರ ಮನೆಯಿಂದಲೇ ತರಿಸಿದ್ದ ಬಿಗ್ ಬಾಸ್ ತಂಡ, ಸ್ಪರ್ಧಿಗಳನ್ನು ಭಾವನಾತ್ಮಕವಾಗಿ ಕಟ್ಟಿಡುವ ಪ್ರಯತ್ನ ಮಾಡಿದ್ರು. ತಮ್ಮ ಉದ್ದೇಶ ಏನು ಹೊಂದಿದ್ದರು ಅದರಲ್ಲಿ ಬಿಗ್ ಬಾಸ್ ಸಂಪೂರ್ಣವಾಗಿ ಯಶಸ್ಸು ಕೂಡ ಸಾಧಿಸಿದ್ರು. ಆ ವೇಳೆ ಸಿಹಿಕಹಿ ಚಂದ್ರು ಯಾವ ಭಾಷೆಯವರು, ಕನ್ನಡ ಅಲ್ವಾ ಅನ್ನೋ ಪ್ರಶ್ನೆ ವೀಕ್ಷಕರಿಗೆ ಎದುರಾಯ್ತು..

ಯಾವ ಸ್ಪರ್ಧಿಗೆ ಏನು ಇಷ್ಟ ಗೊತ್ತಾ..?

ಇಷ್ಟದ ವಸ್ತುಗಳನ್ನು ಮಾತ್ರನೇ ಬಿಗ್ ಬಾಸ್ ತಂಡ ತರಿಸಿರಲಿಲ್ಲ.. ಆದ್ರೆ ಯಾವ ವಸ್ತುವನ್ನ ನೋಡಿದ್ರೆ ಯಾರು ಭಾವನಾತ್ಮಕವಾಗಿ ಸಿಕ್ಕಿ ಬೀಳ್ತಾರೆ ಅನ್ನುಸುತ್ತೋ ಅಂತ ವಸ್ತುಗಳನ್ನು ತರಿಸಿದ್ರು.. ಅದರಲ್ಲಿ ದಿವಾಕರ್ ಸೇಲ್ಸ್ ಹೋಗಬೇಕಾದ್ರೆ ಕಾಯಂ ಆಗಿ ತೆಗೆದುಕೊಂಡು ಹೋಗುವ ಬ್ಯಾಗ್, ತಮ್ಮ ಶಾಲೆಯಲ್ಲಿ ನಡೆದಿದ್ದ ಕಾಂಪಿಟೇಷನ್ ನಲ್ಲಿ ಅಮ್ಮ ಡಿಸೈನ್ ಮಾಡಿದ್ದ ಡ್ರೆಸ್ ನಿಂದ ಗಳಿಸಿದ್ದ ಪ್ರಶಸ್ತಿ ನೋಡಿ ನಿವೇದಿತ ಗೌಡ ಖುಷಿಯಾದ್ರು.ಕೃಷಿ ತನ್ನ ಪಾರ್ಟ್ನರ್ ಟೆಡ್ಡಿಬೇರ್ ನೋಡಿ ಭಾವುಕರಾದ್ರು, ಆಶಿತಾ ಬಾಲಿಯಿಂದ ತನ್ನ ತಂಗಿಗಾಗಿ ತಂದಿದ್ದ ಗಿಫ್ಟ್ ನೋಡಿ ಕಣ್ಣೀರಿಟ್ರು.. ಇನ್ನೂ ನಟ ಜೆಕೆ ಕ್ರಿಕೆಟ್‌ ಟೂರ್ನಿಮೆಂಟ್ ನಲ್ಲಿ ಗೆದ್ದಿದ್ದ ಶೀಲ್ಡ್ ನೋಡಿ ಖುಷಿಯಾದ್ರು..ರಿಯಾಜ್ ತಮ್ಮ ಪತ್ನಿಗಾಗಿ ಕೊಡಿಸಿದ್ದ ವಸ್ತು ನೋಡಿ ಕಣ್ಣೀರಾದ್ರು.ಇನ್ನೂ ಈಗಾಗಲೇ ತಮ್ಮ ತಂದೆಯ ನೆನಪಿಗಾಗಿ ಪಾಲೀಶ್ ಬ್ರಷ್ ಇಟ್ಟುಕೊಂಡಿದ್ದೇನೆ ಎಂದಿದ್ದ ಜಯಶ್ರೀನಿವಾಸನ್ ಅಪ್ಪನ ನೆನಪಿನಲ್ಲಿ ಕಣ್ಣೀರಿಟ್ರು.ಜಗನ್ ಅಮ್ಮನಿಗೆ ಮಾಡಿಸಿಕೊಟ್ಟ ಓಲೆ, ಉಂಗುರ ನೋಡಿ ನೆನಪಾದ್ರು. ಚಂದನ್ ಬಾಲ್ಯದ ಫ್ಯಾನ್ಸಿ ಡ್ರೆಸ್ ಕಾಂಪಿಟೇಷನ್ ನಲ್ಲಿ ಸ್ವಾಮಿ ವಿವೇಕಾನಂದ ಆಗಿದ್ದನ್ನು ನೆನಪು ಮಾಡ್ಕೊಂಡ್ರು.ಅನು ತನ್ನ ಭಾವನೆಗಳನ್ನು ಹೇಳಿಕೊಳ್ಳಲು ಇರುವ ವಸ್ತು ನೋಡಿ ಕಣ್ಣೀರು ಸುರಿಸಿದ್ರು..ಆ ವೇಳೆ ಚಂದ್ರು ಭಾಷೆ ಬಗ್ಗೆ ಅನುಮಾನ ಮೂಡುವ ಘಟನೆ ನಡೀತು.

ಕನ್ನಡ ಮಾತನಾಡುವ ಜನರು ಯಾವುದಾದರೂ ಪ್ರೀತಿಯಿಂದ ಹೇಳುವಾಗ ತಮ್ಮ ಮಾತೃಭಾಷೆಯಲ್ಲಿ ಹೇಳ್ತಾರೆ. ಯಾಕಂದ್ರೆ ನಮ್ಮ ಮಾತೃಭಾಷೆಯಲ್ಲಿ ಅನಿಸಿಕೆ ವ್ಯಕ್ತಪಡಿಸಿದಾಗ ತುಂಬಾ ಪರಿಣಾಮಕಾರಿ ಇರುತ್ತದೆ ಅನ್ನೋದು ಜನಜನಿತ ಸತ್ಯ ಕೂಡ ಹೌದು. ಹಾಗಾಗಿಯೇ ಯಾರಾದರೂ ಕಷ್ಟದಲ್ಲಿದ್ದಾಗ ಅವರು ತಮ್ಮ ಮಾತೃಭಾಷೆಯಲ್ಲೇ ನೋವನ್ನು ವ್ಯಕ್ತಪಡಿಸ್ತಾರೆ ಅನ್ನೊದು. ಆದ್ರೆ ಸಿಹಿಕಹಿ ಚಂದ್ರು ಗೀತಾಗೆ ಬರೆದಿದ್ದ ಪ್ರೇಮ ಕವನ ಬಿಗ್ ಬಾಸ್ ಮ್ಯೂಸಿಯಂ ಗೆ ಬಂದಿತ್ತು. ಅದರ ಬಗ್ಗೆ ಮಾತನಾಡ್ತಿರುವಾಗ ಚಂದ್ರು, ನಾನು ಗೀತಾಗೆ ತುಂಬಾ ಪ್ರೀತಿಯಿಂದ ಬರೆದ ಪ್ರೇಮ ಪತ್ರ, ಹಿಂದಿ ಭಾಷೆಯಲ್ಲಿ ಇದೆ. ಅದನ್ನು ಆಗಿನಿಂದಲೂ ರಕ್ಷಣೆ ಮಾಡಿ ಇಡಲಾಗಿದೆ ಅಂದ್ರು. ಹಾಗಿದ್ರೆ ಚಂದ್ರು ಭಾಷೆ ಯಾವುದು..? ತುಂಬಾ ಚೆನ್ನಾಗಿ ಹಿಂದಿ ಭಾಷೆ ಬಲ್ಲವರಾಗಿ ಹಿಂದಿಯಲ್ಲೇ ಪ್ರೇಮ ಕವನ ಬರೆದ್ರಾ ಅನ್ನೋ ಅನುಮಾನಗಳಿಗೆ ಅವರೇ ಉತ್ತರ ಕೊಡಬೇಕಿದೆ. ಅಥವಾ ಶನಿವಾರ ಈ ಬಗ್ಗೆ ಕಿಚ್ಚ ಸುದೀಪ್ ಪ್ರಸ್ತಾಪ ಮಾಡಿ ಉತ್ತರ ಪಡೆದ್ರೆ ಗೊಂದಲಕ್ಕೆ ತೆರೆ ಬೀಳುತ್ತದೆ.

ಜ್ಯೋತಿ ಗೌಡ, ನಾಗಮಂಗಲ

ಬಿಗ್ ಬಾಸ್ ನಲ್ಲಿ ಈ ವಾರ ಯಾರ ಆಟಕ್ಕೆ ಬ್ರೇಕ್ ?

ತಂದೆಯ ಅನಾರೋಗ್ಯದಿಂದ ಬಿಗ್ ಮನೆಯಿಂದ ಹೊರ ಹೋಗಿದ್ದ ತೇಜಸ್ವಿನಿ ಮರಳಿ ಬಂದಿದ್ದಂತೂ ಆಗಿದೆ. ಹೋಗುವಾಗಲೇ ಮತ್ತೆ ಮನೆ ಸೇರಿ ಆಟ ಮುಂದುವರೆಸುವ ಇರಾದೆ ವ್ಯಕ್ತಪಡಿಸಿದ್ದ ತೇಜಸ್ವಿನಿ ಈ ವಾರ ನಾಮಿನೇಟ್ ಆಗಿದ್ದಾರೆ.

ಈ ವಾರ ನಾಮಿನೇಟ್ ಆಗಿರುವವರು ಸಮೀರ್ ಆಚಾರ್ಯ, ಜಯ ಶ್ರೀನಿವಾಸನ್,ನಿವೇದಿತಾ, ಜಗನ್ ,ಕಾರ್ತಿಕ್, ಅನುಪಮಾ, ಸಿಹಿಕಹಿ ಚಂದ್ರು ,ತೇಜಸ್ವಿನಿ .

ಸಿಹಿಕಹಿ ರುಚಿ ಚೆನ್ನಾಗೆ ಇರೋದ್ರಿಂದ ಔಟ್ ಆಗೋ ಸಾಧ್ಯತೆ ಇಲ್ಲವೇ ಇಲ್ಲ ಅನ್ನಬಹುದು. ಜಗನ್ -ಆಶಿತಾ ಮಧ್ಯೆ ಇರೋ ಕೆಮಿಸ್ಟ್ರಿ ಜಗನ್ ನ ಮನೆಯಲ್ಲಿ ಉಳಿಸೋ ಸಾಧ್ಯತೆ ಹೆಚ್ಚು. ನಿವೇದಿತಾ ಡಾಲ್ ಇಷ್ಟು ಬೇಗ ಛೆ ..ಛೆ..

ತೇಜಸ್ವಿನಿ ತಂದೆಗೆ ಹುಶಾರಿಲ್ಲ ಅಯ್ಯೋ ಪಾಪ ಅಂತ ಮನೆಯವರೆಲ್ಲ ಸಮಾಧಾನ ಮಾಡಿದ್ರೂ ಕೂಡ ಮೊದಲಿಂದಲೂ ಆಟದಲ್ಲಿ ಉತ್ಸಾಹ ತೋರಿರೋದು ಅಷ್ಟಕಷ್ಟೇ.

ಸಮೀರ್ ಈ ವಾರ ಉಗ್ರಾವತಾರ ತೋರಿದ್ದಾರೆ . ಜಯ ಮಾಮುಲಿನಂತೆ ಇದ್ದಾರೆ . ತೇಜು ,ಜಯ ,ಸಮೀರ್ ಇವರಲ್ಲಿ ಮನೆಯಿಂದ ಹೊರಹೋಗಲು ಪೈಪೋಟಿ ಅನ್ನಬಹುದು .

ಬಿಗ್ ಬಾಸ್ ಮನೆಯಿಂದ ತೇಜಸ್ವಿನಿ ಔಟ್

ಸೀರಿಯಲ್ ಸ್ಟಾರ್ ತೇಜು ಬಿಗ್ ಬಾಸ್ ಮನೆಯ ಪ್ರಯಾಣ ಮುಗಿಸಿದ್ದಾರೆ. ವಾರದ ಮಧ್ಯದಲ್ಲೇ ಬಿಗ್ ಬಾಸ್ ಮನೆ ತೊರೆದು ಮನೆಯತ್ತ ಹೊರಟಿದ್ದಾರೆ. ಇದಕ್ಕೆ ಕಾರಣ ಬಿಗ್ ಬಾಸ್ ಕೊಟ್ಟ ಶಾಕಿಂಗ್ ನ್ಯೂಸ್.. ಅಸಲಿಗೆ ಹೊರ ಪ್ರಪಂಚದಲ್ಲಿ ನಡೆಯುವ ಯಾವುದೇ ವಿಚಾರಗಳನ್ನು ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ತಿಳಿಸಲಾಗುವುದಿಲ್ಲ. ಆದ್ರೆ ಈ ಬಾರಿ ಆ ನಿಯಮ ಮುರಿದ ಬಿಗ್ ಬಾಸ್ ತೇಜಸ್ವಿನಿ ಮನೆಯಿಂದ ಹೊರ ಹೋಗುವಂತೆ ಮಾಡಿದ್ದಾರೆ.
ತೇಜಸ್ವಿನಿ ಮನೆಯಿಂದ ಹೊರಬಂದಿದ್ದು ಯಾಕೆ..?
ನಟಿ ತೇಜಸ್ವಿನಿ ತಂದೆ  ಆರೋಗ್ಯವಾಗಿಯೇ ಇದ್ರು, ಆದ್ರೆ ಇದ್ದಕ್ಕಿದ್ದಂತೆ ಕಿಡ್ನಿ ಸಮಸ್ಯೆ ಕಾಣಿಸಿಕೊಂಡಿದ್ರಿಂದ ಆದ್ಪತ್ರೆಗೆ ದಾಖಲಾಗಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಆಪರೇಷನ್ ಮಾಡಿದ್ದು ಚೇತರಿಸಿಕೊಳ್ತಿದ್ದಾರೆ ಅಂತ ವೈದ್ಯರು ತಿಳಿಸಿದ್ದಾರೆ. ಆ ವಿಚಾರವನ್ನು ಬಿಗ್ ಬಾಸ್ ನಟಿ ತೇಜಸ್ವಿನಿ ಅವರಿಗೆ ತಿಳಿಸಿದ್ರು, ಜೊತೆಗೆ ಮನೆಯಲ್ಲಿ ಇರುವ ಅಥವಾ ಮನೆಯಿಂದ ಹೊರಹೋಗುವ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರ ನೀಡಿದ್ರು. ಆದ್ರೆ ತೇಜಸ್ವಿನಿ ಮನೆಯಿಂದ ಹೊರಹೋಗುವ ನಿರ್ಧಾರ ಆಯ್ಕೆ ಮಾಡಿಕೊಂಡಿದ್ದಾರೆ.
ತೇಜಸ್ವಿನಿ ನಿರ್ಧಾರಕ್ಕೆ ಕಾರಣ ಇದು..?
ಬಿಗ್ ಬಾಸ್ ಮೊದಲಿಗೆ ಆಯ್ಕೆ ಮಾಡುವ ಸ್ವತಂತ್ರ ನೀಡಿದಾಗ, ಜಾಣ್ಮೆಯ ನಡೆಯಿಟ್ಟ ತೇಜು, ಮನಯವರ ಜೊತೆ ಒಮ್ಮೆ ಮಾತನಾಡುವ ಅವಕಾಶಕ್ಕೆ ಬೇಡಿಕೆ ಇಟ್ಟರು. ಆ ಬೇಡಿಕೆ ಮನ್ನಿಸಿದ ಬಿಗ್ ಬಾಸ್ ತೇಜಸ್ವಿನಿಗೆ ತಾಯಿ ಜೊತೆ ಮಾತನಾಡಲು ಅವಕಾಶ ಮಾಡಿಕೊಟ್ರು, ಆದ್ರೆ ತೇಜಸ್ವಿನಿ ತಾಯಿ ಧೃತಿಗೆಟ್ಟಂತೆ ಮಾತನಾಡಿದರು, ಜೊತೆಗೆ ನಿಮ್ಮ ತಂದೆ ನಿನ್ನನ್ನು ನೋಡಬೇಕು ಅನ್ನುತ್ತಿದ್ದಾರೆ ಅಂತ ಭಾವನಾತ್ಮಕ ಮಾತುಗಳನ್ನಾಡಿದರು. ಇದರಿಂದ ಮನಸ್ಸು ಗಟ್ಟಿ ಮಾಡಿಕೊಳ್ಳಲು ಮಾತನಾಡಿದ ತೇಜು, ಅಮ್ಮನನ್ನು ಸಂತೈಸಿ ಮನೆಯಿಂದ ಹೊರಬರುವುದಾಗಿ ಘೋಷಣೆ ಮಾಡಿದ್ದಾರೆ. ಈ ವಾರ ಎಲಿಮಿನೇಷನ್ ಲಿಸ್ಟ್ ನಲ್ಲಿದ್ದ ತೇಜಸ್ವಿನಿ ವಾರದ ಮಧ್ಯದಲ್ಲಿ ಮನೆಯಿಂದ ಹೊರಬಿದ್ದಿದ್ದಾರೆ.
ಜ್ಯೋತಿ ಗೌಡ, ನಾಗಮಂಗಲ

ಬಿಗ್‌ಬಾಸ್- 5 ನಿವೇದಿತಾ ಗೌಡ ಅಲಿಯಾಸ್ ಲಿನಿ ಬಗ್ಗೆ ನಿಮಗೆ ಗೊತ್ತಿರದ 18 ಸತ್ಯಗಳು

ನಿವೇಡಿಟಾ ಗೋಡ

ಹೀಗಂದರೆ ಸಾಕು ತಕ್ಷಣ ಬಿಗ್‌ಬಾಸ್ ಸ್ಪರ್ಧಿ ನಿವೇದಿತಾ ಗೌಡ ನೆನಪಾಗಲೇಬೇಕು. ಅಷ್ಟರ ಮಟ್ಟಿಗೆ ಈ ಹುಡುಗಿ ಫೇಮಸ್ಸು. ನೋಡಲು ಬಾರ್ಬಿ ಗೊಂಬೆಯಂತಿರುವ, ಇಂಗ್ಲಿಷ್ ಆಕ್ಸೆಂಟಿನಲ್ಲಿ ಕನ್ನಡ ಮಾತನಾಡುವ ನಿವೇದಿತಾ ಎಂದರೆ ಬಿಗ್‌ಬಾಸ್ ಸ್ಪರ್ಧಿಗಳಿಗಷ್ಟೇ ಅಲ್ಲ, ಬಿಗ್‌ಬಾಸ್ ವೀಕ್ಷಕರಿಗೂ ಖುಷಿಯೋ ಖುಷಿ. ಆಕೆ ಮಾತಾಡಿದರೆ ನಗುವಿನ ಹೊಳೆ ಹರಿಯುತ್ತದೆ. ಆಕೆ ನೋಡುಗರಿಗೆ ಎಷ್ಟು ಇಷ್ಟವಾಗಿದ್ದಾಳೆ ಎಂದರೆ ಪುಟ್ಟ ಮಕ್ಕಳು ಕೂಡ ಅಪ್ಪ, ಅಮ್ಮನಿಗೆ ಅವಳಿಗೆ ವೋಟ್ ಮಾಡಿ ಅಂತ ಹಠ ಮಾಡುತ್ತಿವೆ.

ಹೀಗಿರುವಾಗ ಈ ನಿವೇದಿತಾ ಯಾರು, ಅವಳು ಏನು ಮಾಡುತ್ತಿದ್ದಳು, ಆಕೆಯ ಸ್ವಭಾವ ಹೇಗೆ ಎಂಬಿತ್ಯಾದಿ ಪ್ರಶ್ನೆಗಳಿಗೆ ನಿವೇದಿತಾ ಗೌಡ ಅವರ ತಾಯಿ ಹೇಮಾ ರಮೇಶ್  ಉತ್ತರಿಸಿದ್ದಾರೆ.

ನಿಮಗೆ ಗೊತ್ತಿರದ ನಿವೇದಿತಾ ಗೌಡ ಬಗೆಗಿನ ಸತ್ಯಗಳು !

 

 1. ಪೂರ್ತಿ ಹೆಸರು ನಿವೇದಿತಾ ಗೌಡ. ತಂದೆ ಹೆಸರು ರಮೇಶ್. ತಾಯಿ ಹೆಸರು ಹೇಮಾ. ಈಕೆಯ ವಯಸ್ಸು18,ತೂಕ 38 ಕೆಜಿ. ಈಕೆಗೊಬ್ಬ ಪುಟ್ಟ ತಮ್ಮನಿದ್ದಾನೆ. ಮೈಸೂರಿನ ಕನಕದಾಸನಗರದಲ್ಲಿ ವಾಸ.
 2.  ಮೈಸೂರಿನ ಮಹಾಜನ ಕಾಲೇಜಿನಲ್ಲಿ ಬಿಸಿಎ ಓದುತ್ತಿರುವ ಈ ಹುಡುಗಿ ಕಾಲೇಜಿಗೇ  ಫೇಮಸ್ಸು. ಅದಕ್ಕೆ ಒಂದು ಕಾರಣ ಸೌಂದರ್ಯ. ಇನ್ನೊಂದು ಪ್ರತಿಭೆ.
 3.  ಕಾಲೇಜಿನಲ್ಲಿ ಈಕೆ ಸೂಪರ್ ಮಾಡೆಲ್. ಎಲ್ಲೇ ಫ್ಯಾಷನ್ ಶೋ ನಡೆದರೂ ಈಕೆ ಹೋಗಲೇಬೇಕು. ಅಲ್ಲದೇ ಕೆಲವು ಜಾಹೀರಾತಿನಲ್ಲೂ ಭಾಗವಹಿಸಿದ್ದಾಳೆ.
 4. ಈಕೆಯ ಮೇಲೆ ಸಿಟ್ಟಿರುವವರು ಗಮನಿಸಿ. ಈ ಹುಡುಗಿ ನೋಡೋಕೆ ಮಾತ್ರ ಮಲ್ಲಿಗೆ ಥರ ಅಲ್ಲ. ಈಕೆಯ ಮನಸ್ಸೂ ಮಲ್ಲಿಗೆ. ಈಕೆ ಮನೆಯ ಪಕ್ಕದಲ್ಲಿರುವ ಕನ್ನಡ ಶಾಲೆಯೊಂದರಲ್ಲಿ ಒಂದರಿಂದ  ನಾಲ್ಕನೇ ತರಗತಿಯ ಮಕ್ಕಳಿಗೆ ಇಂಗ್ಲಿಷ್ ಹೇಳಿಕೊಡುತ್ತಾಳೆ. ಆ ಮೂಲಕ ಆ ಮಕ್ಕಳಿಗೆ ಟೀಚರ್ ಆಗಿದ್ದಾಳೆ.
 5. ನಿವೇದಿತಾಳಿಗೆ ಬಾರ್ಬಿ ಗೊಂಬೆಗಳು ಅಂದರೆ ಬಹಳ ಇಷ್ಟ. ಅದೂ ಅಲ್ಲದೇ ಅವಳ ಮನೆಯಲ್ಲಿ ರಾಶಿ ಬೊಂಬೆಗಳಿವೆ. ಅದೇ ಥರ ಅವಳ ವೇಷ ಭೂಷಣಗಳೂ ಇರುತ್ತವೆ.
 6.  ಮನೆ ಬಿಟ್ಟರೆ ಕಾಲೇಜು ಅಂತ ಇರುವ ಹುಡುಗಿ ಅವಳು. ಕಾಲೇಜು ಬಿಟ್ಟರೆ ನೇರ ಮನೆಗೆ ಬರುತ್ತಾಳೆ. ಮನೆಯಲ್ಲಿ ಅವಳದೇ ಪ್ರಪಂಚ. ಸ್ವಲ್ಪ ಪುರ್ಸೊತ್ತು ಸಿಕ್ಕಿದರೂ ಸಾಕು ಡಬ್‌ಸ್ಮ್ಯಾಷ್ ಮಾಡುತ್ತಾಳೆ. ಈ ಡಬ್‌ಸ್ಮ್ಯಾಷ್ ಅವಳ ಜೀವನವೇ ಆಗಿಹೋಗಿದೆ.
 7.  ಕಾಲೇಜಿಂದ ನಿವೇದಿತಾ ಹೊರಟರೆ ಸಾಕು ಗೆಳತಿಯರೆಲ್ಲಾ ಏನು ಡಬ್‌ಸ್ಮ್ಯಾಷ್ ಮಾಡುವುದಕ್ಕೆ ಹೊರಟಿದ್ದೋ ಅಂತ ರೇಗಿಸುತ್ತಾರೆ.
 8. ಡಬ್‌ಸ್ಮ್ಯಾಶ್ ಈಕೆಗೆ ಸ್ಟ್ರೆಸ್ ಬಸ್ಟರ್ ಕೂಡ ಹೌದು. ಅವಳಿಗೆ ಎಕ್ಸಾಮ್ ಇದ್ದರೆ ಒಂದೆರಡು ಡಬ್‌ಸ್ಮ್ಯಾಷ್ ಮಾಡಿ ಮೈಂಡ್ ಫ್ರೆಶ್ ಮಾಡಿಕೊಂಡು ಓದಲು ಕೂರುತ್ತಾಳೆ ಅನ್ನುತ್ತಾರೆ ಮನೆಯವರು.
 9.  ಕಳೆದ ವರ್ಷ ಕಾಲೇಜು ಏರ್ಪಡಿಸಿದ್ದ ಮಿಸ್ ಮಹಾಜನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಈಕೆ ಆಗಲೇ ಎಲ್ಲರ ಗಮನ ಸೆಳೆದಿದ್ದು. ಬಹಳಷ್ಟು ಮಂದಿ ಇವಳೇ ಈ ವರ್ಷದ “ಮಿಸ್ ಮಹಾಜನ” ಎಂದುಕೊಂಡಿದ್ದರು. ಆದರೆ ಅವಳು ಕೇವಲ ವೆಲ್‌ಡ್ರೆಸ್ ಆಗಿ ಹೊರ ಹೊಮ್ಮಿದ್ದಳು.
 10.  ಮೊದಲಿನಿಂದಲೂ ಈಕೆ ಬಿಗ್‌ಬಾಸ್ ಅಭಿಮಾನಿ. ಫಸ್ಟ್ ಸೀಸನ್ ನೋಡಿದಾಗಲೇ ನಿವೇದಿತಾ ಅಮ್ಮನ ಬಳಿ,ಅಮ್ಮ ಮುಂದೊಂದು ದಿನ ನಾನೂ ಕೂಡ ಬಿಗ್‌ಬಾಸ್‌ಗೆ ಹೋಗುತ್ತೇನೆ. ನೋಡುತ್ತಿರು ಬೇಕಿದ್ದರೆ,ಬಿಗ್‌ಬಾಸ್ ಸೀಸನ್ 10ಗೆ ನಾನೂ ಸ್ಪರ್ಧಿಯಾಗಿ ಹೋಗುತ್ತೇನೆ ಎಂದಿದ್ದಳಂತೆ. ಆದರೆ ಅವಳ ಕನಸು ಸೀಸನ್ 5ಗೆ ನನಸಾಗಿದೆ.
 11.  ಮನೆಯಲ್ಲಿ ಜಾಸ್ತಿ ಮುದ್ದು. ಕೋಪ ಮಾಡಿಕೊಳ್ಳುವುದು ಬಹಳ ಕಡಿಮೆ. ಹಾಗೊಂದು ವೇಳೆ ಕೋಪ ಬಂದರೆ ಅಮ್ಮ 5 ನಿಮಿಷ ನನ್ನನ್ನು ಮಾತನಾಡಿಸಬೇಡ ಎಂದು ಹೇಳಿ ಡಬ್‌ಸ್ಮ್ಯಾಶ್ ಮಾಡಲು ಹೋಗುತ್ತಾಳೆ. ಮನೆಯಲ್ಲಿ ಜಾಸ್ತಿ ಗಲಾಟೆ ಮಾಡುವುದು ತಮ್ಮನೊಂದಿಗೆ ಮಾತ್ರ.
 12.  ನಿವೇದಿತಾ ಮನೆಯವರೊಂದಿಗೆ ಕನ್ನಡದಲ್ಲಿಯೇ ಮಾತನಾಡುತ್ತಾಳೆ.
 13.  ಟಿವಿ ನೋಡುವ ಅಭ್ಯಾಸ ಈಕೆಗೆ ತುಂಬಾ ಕಡಿಮೆ. ಡಬ್‌ಸ್ಮ್ಯಾಷ್ ಅಷ್ಟೇ ಇವಳ ಮನರಂಜನೆ,ಜ್ಞಾನಾರ್ಜನೆ ಎಲ್ಲಾ.
 14.  ನಿವೇದಿತಾ ಗೌಡ ಹೆಸರಲ್ಲಿ ಈಗಾಗಲೇ ೮ ನ್ ಪೇಜ್ ಸಿದ್ಧವಾಗಿದೆ. ಒಂದೇ ದಿನದಲ್ಲಿ ಆಕೆಗೆ ೫೦೦೦ಕ್ಕೂ ಹೆಚ್ಚು ಜನ ಫಾಲೋವರ್ಸ್ ಸಿಕ್ಕಿದ್ದಾರೆ.
 15.  ಅವಳಿಗೆ ಮಸಾಲೆ ಪುರಿ ಅಂದ್ರೆ ಇಷ್ಟ. ಸಿಹಿಯಲ್ಲಿ ಮೈಸೂರು ಪಾಕು.
 16.  ನಿವೇದಿತಾಳ ಪೆಟ್ ನೇಮ್ ಲಿನಿ.
 17.  ನಿವೇದಿತಾಳ ಇನ್ನೊಂದು ಒಳ್ಳೆಯ ಹವ್ಯಾಸ ಓದುವುದು. ಆಕೆ ಇಂಗ್ಲಿಷ್,ಕನ್ನಡ ಎರಡೂ ಭಾಷೆಯ ಪುಸ್ತಕ ಓದುತ್ತಾಳೆ.
 18. ಕಲರ್ಸ್ ಚಾನೆಲ್‌ನಿಂದ ಕರೆ ಬಂದ ದಿನ ಕುಣಿದು ಕುಪ್ಪಳಿಸಿದ್ದಾಳೆ. ಒಂದು ದಿನವಾದರೂ ಇದ್ದು ಬರುತ್ತೇನೆ ಎಂದು ಅಪ್ಪ ಅಮ್ಮನನ್ನು ಒಪ್ಪಿಸಿ ಹೋಗಿದ್ದಾಳೆ.

 

ಅಮ್ಮ ಹೇಳಿದ ಕತೆ..

ಅವಳು ಚಿಕ್ಕಂದಿನಿಂದಲೂ ಮಾತನಾಡುವುದೇ ಹಾಗೆ. ಪುಟ್ಟ ಹುಡುಗಿ ಇದ್ದಾಗ ಅವಳು ಆ ಥರ ಮಾತನಾಡಿದಾಗ ಖುಷಿಯಾಗುತ್ತಿತ್ತು. ಹಾಗಾಗಿ ತಿದ್ದುವುದಕ್ಕೆ ಹೋಗಲಿಲ್ಲ. ನಿವೇದಿತಾಗೆ ಅದೇ ಥರ ಮಾತನಾಡುವುದು ಅಭ್ಯಾಸವಾಯಿತು. ಅದರಲ್ಲಿ ಅವಳ ತಪ್ಪೇನಿಲ್ಲ. ನಾನು ನಾಟಕ ಮಾಡುವುದಿಲ್ಲ, ನಂಗೆ ನಿಮ್ಮ ಥರ ಮಾತಾಡಕ್ಕಾಗಲ್ಲ ಮಮ್ಮಿ ಅಂತ ಅವಳೇ ಹೇಳುತ್ತಾಳೆ. ಹೀಗಿರುವಾಗ ಬಹಳಷ್ಟು ಮಂದಿ ಅವಳ ಮೇಲೆ ಟ್ರೋಲ್ ಮಾಡುತ್ತಿದ್ದಾರೆ. ಅದು ತಪ್ಪಲ್ವಾ? ಪುಟ್ಟ ಹುಡುಗಿ ಅವಳು. ಬಿಗ್‌ಬಾಸ್‌ಗೆ ಹೋಗಿರುವುದೇ ಒಂದು ಸಾಧನೆ ಅಲ್ವಾ? ನಮಗಂತೂ ಖುಷಿಯಾಗಿದೆ. ನೀವೂ ಖುಷಿ ಪಡಿ ಪ್ಲೀಸ್

– ಹೇಮಾ ರಮೇಶ್, ನಿವೇದಿತಾ ತಾಯಿ

 

ಬಿಗ್ ಬಾಸ್ ನಿಂದ ಮೇಘ ಮನೆಕಡೆಗೆ

ವಾರದ  ಕೊನೆ ಬಂತು ಅಂದ್ರೆ ಬಿಗ್ ಬಾಸ್ ಮನೆಯಲ್ಲಿ ಕೆಲವರಿಗೆ ನಡುಕ ಶುರುವಾಗುತ್ತೆ.  ಸರಿಯಾಗಿ ಆಟ ಆಡದಿರುವುದು ಸೇರಿದಂತೆ ಮನೆಯಲ್ಲಿ ಹೊಂದಿಕೊಳ್ಳದೇ ,ಜನರಿಗೆ ಇಷ್ಟವಾಗದೇ ಇದ್ದವರ ಕಥೆ ಖತಂ . ಈ ವಾರದಲ್ಲಿ ಪಕ್ಕ ಹಳ್ಳಿ ಭಾಷೆಯಲ್ಲಿ ಮಾತಾಡ್ತಾ ಅಕ್ಕಾ ಅಣ್ಣಾ ಅಂದ್ಕೊಂಡಿದ್ದ ಮೇಘಾ ಬಿಗ್ ಮನೆಯಿಂದ ಹೊರಬಂದು ತಮ್ಮ ಮನೆಕಡೆ ನಡೆದಿದ್ದಾರೆ.

ಹೊರಡುವಾಗ ಸಿಹಿಕಹಿ ಚಂದ್ರು , ಆಚಾರ್ಯ ರಿಗೆ ಕಾಲಿಗೆ ಬಿದ್ದು ನಮಸ್ಕಾರ ಮಾಡಿ ಮೇಘಾ ಆಶೀರ್ವಾದ ಪಡೆದು ಹೊರನಡೆದರು. ಸಿಕ್ಕ ಸೂಪರ್ ಪವರ್ ನ ದಿವಾಕರ್ ಗೆ ಕೊಟ್ಟು ಎಲ್ಲರಿಗೂ ನಗ್ತಾ ಬಾಯ್ ಹೇಳಿದ್ರು ಮುಖದಲ್ಲಿ ಮಾತ್ತ್ರ ನೋವಿನ ಎಳೆ ತುಂಬಿಕೊಂಡು ಬಂದಿದ್ದು ನಿಚ್ಚಳವಾಗಿತ್ತು .

ಬಿಗ್ ಬಾಸ್ ಮನೆಯಿಂದ ಇವರು ಔಟ್ ?

ಬಿಗ್ ಬಾಸ್ ಸೀಸನ್ 5  ಮೊದಲ ವಾರದ ಟಿ ಆರ್ ಪಿ ಬಳಿಕ ಜನಮನ ಗೆಲ್ಲಲಿಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಆದ್ರೆ ಎರಡನೇ ವಾರವೂ ಮುಕ್ತಾಯವಾಗಿದ್ದು, ಮತ್ತೊಬ್ಬರು ಮನೆಯಿಂದ ಹೊರಬರುವ ಸಮಯ ಸನಿಹವಾಗಿದೆ. ಕಿಚ್ಚ ಸುದೀಪ್ ಈ ಬಾರಿ ಸ್ಪರ್ಧಿಗಳಿಗೆ ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ. ಯಾಕಂದ್ರೆ ಮೊದಲ ವಾರ ಕಳೆದ ಬಳಿಕ ಕಾಮನ್ ಮೆನ್ ಹಾಗೂ ಸೆಲೆಬ್ರಿಟಿಗಳು ಅನ್ನೋ ಗುಂಪುಗಾರಿಕೆ ಶುರುವಾಗಿದೆ.
ಆದ್ರೆ ಈ ವಾರ ಸಿಕ್ಕಾಪಟ್ಟೆ ಜನರು ನಾಮಿನೇಷನ್ ಆಗಿಲ್ಲ. ಸ್ಟಾರ್ ಗಳು ಭಾರೀ ಗೇಮ್ ಪ್ಲಾನ್ ಆಡ್ತಿದ್ದಾರೆ. ಆದ್ರೆ ಜನರಿಗೆ ಲೋಕಲ್ ಪೀಪಲ್ ಮುಗ್ದತೆಯೇ ಇಷ್ಟವಾಗ್ತಿದ್ದು, ದಿವಾಕರ್ ಹಾಗೂ ರಿಯಾಜ್ ನೇರನುಡಿಗೆ ಹೆಸರುವಾಸಿ.. ಮುಂದೊಂದು ದಿನ ಈ ಹುಡುಗರೇ ಜನಮೆಚ್ಚುಗೆಗೆ ಪಾತ್ರವಾಗುವ ಸಾಧ್ಯತೆ ಇದೆ. ಇನ್ನು ಮೇಘ ಕೂಡ ಯಾರೆಳಿದ್ದನ್ನು ನಾನು ಯಾಕೆ ಕೇಳ್ಬೇಕು ಅನ್ನೋ ವರಸೆ ಶುರು ಮಾಡಿದ್ದು, ಹಳ್ಳಿ ಹುಡುಗಿ ಒಮ್ಮೆ ಸಿಡಿಯೋ ಲಕ್ಷಣ ಕಾಣ್ತಿದೆ.ಇನ್ನು ಮನೆಯಿಂದ ಹೊರಬರುವುದಾದರೆ ಜ್ಯೋತಿಷಿ ಸಮೀರ್ ಆಚಾರ್ಯ. ಆದ್ರೆ ನಿನ್ನೆ ದಿವಾಕರ್ ಮೇಲೆ ನಡೆಯುತ್ತಿದ್ದ ದಾಳಿ ಖಂಡಿಸಿದ್ದು ನೋಡಿದ್ರೆ ಅವರು ಸೇಫಾಗ್ತಾರಾ ಅನ್ನೋ ಅನುಮಾನ ಮೂಡಿಸ್ತಿದೆ.
ಇನ್ನು ಬಿಗ್ ಬಾಸ್ ನಲ್ಲಿ ಸಪ್ಪೆ ಆಗಿ ಇರೋದು ಸೀರಿಯಲ್ ಆಕ್ಟರ್ ಆಶಿತಾ, ಕ್ರಿಷಿ, ತೇಜು ಹಾಗೂ ನಿವೇದಿತ ಗೌಡ ಈ ವಾರ ಈ ನಾಲ್ವರು ಅದೇನು ಮಾಡಿದ್ರು ಅನ್ನೋದೇ ಕಾಣಿಸಲಿಲ್ಲ.  ಆದ್ರೆ ಈ ವಾರ ಮನೆಯಿಂದ ಹೋಗುತ್ತಾರಾ ಅಂದ್ರೆ ಸ್ವಲ್ಪ ಅನುಮಾನ, ಯಾಕಂದ್ರೆ ಶೋ ನಲ್ಲಿ ಗ್ಲಾಮರ್ ಮಿಸ್ಸಾಗುತ್ತೆ ಅನ್ನೋದಷ್ಟೇ ಕಾರಣ. ಜ್ಯೋತಿಷ್ಯ ಹೇಳುವ ಇಬ್ಬರಲ್ಲಿ ಒಬ್ಬರು ಮನೆಯಿಂದ ಹೊರ ಬರುವ ಸಾಧ್ಯತೆ ಹೆಚ್ಚಾಗಿದ್ದು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿde.
ಜ್ಯೋತಿ ಗೌಡ, ನಾಗಮಂಗಲ

ಬಿಗ್ ಬಾಸ್ ಮನೆಯಲ್ಲಿ ಬಜಾರ್ ಶುರು..!

ಕಲರ್ಸ್ ಸೂಪರ್ ನಲ್ಲಿ ಮೂಡಿಬರುತ್ತಿರುವ ಬಿಗ್ ಬಾಸ್ ಸೀಸನ್ 5 , ಯಶಸ್ವಿಯಾಗಿ ಒಂದು ವಾರ ಪೂರೈಸಿ, ಎರಡನೇ ವಾರಕ್ಕೆ ಕಾಲಿಟ್ಟಿದೆ. ವಿಶೇಷ ಅಂದ್ರೆ ಮೊದಲ ವಾರ ಸೌಮ್ಯವಾಗಿದ್ದ ಮನೆಯಲ್ಲಿ ಗಲಾಟೆ ಶುರುವಾಗಿದೆ. ಫಿಷ್ ಬಜಾರ್ ನಲ್ಲಿ ವ್ಯವಹಾರ ಶುರು ಮಾಡಿದ್ದಾರೆ. ಯಾರು ಎಷ್ಟು ವ್ಯವಹಾರ ಮಾಡಿ ಗಂಟು ಮಾಡಿಕೊಂಡ್ರು ಅನ್ನೋದಷ್ಟೇ ಬಿಗ್ ಬಾಸ್ ಮನೆಯಲ್ಲಿ ಮುಖ್ಯ ಆಗಿರೋದ್ರಿಂದ ಕಳೆದ ವಾರ ಸುಮ್ಮನಿದ್ದ ಸ್ಪರ್ಧಿಗಳು ತಮ್ಮ ರೀಲ್ ಬಣ್ಣ ಕಳಚುತ್ತಿದ್ದಾರೆ.
ಹಣ್ಣಿಗಾಗಿ ಹೆಣ್ಣುಗಳ ನಡುವೆ ಕಿತ್ತಾಟ.. ಪರದಾಟ
ವಾರದ ಮೊದಲ ದಿನ ಬಿಗ್ ಬಾಸ್ ಮನೆಗೆ ಹಣ್ಣಿನ ಬುಟ್ಟಿ ಬರಲಿದ್ದು, ಶ್ರೀ ಸಾಮಾನ್ಯರು ನಯ ನಾಜೂಕು ಪ್ರದರ್ಶನ ಮಾಡದೆ ನೇರವಾಗಿ ಹಣ್ಣಿಗೆ ಬಾಯಿ ಹಾಕಲು ಮುಂದಾದ್ರು. ಈ ವೇಳೆ ಜಯ ಶ್ರೀನಿವಾಸ್ ತನ್ನ ಪಾಲಿನ ಹಣ್ಣನ್ನು ತೆಗೆದುಕೊಂಡು ಹೋಗಲು ಮುಂದಾಗಿದ್ದಕ್ಕೆ ಭಾರೀ ಗದ್ದಲವೇ ನಡೀತು. ಏಕಾಏಕಿ ವಾಪಸ್ ತೆರಳಿದ ಸಂಖ್ಯಾಶಾಸ್ತ್ರಜ್ಞ ವಾಪಸ್ ಬುಟ್ಟಿಯಲ್ಲೇ ಹಣ್ಣನ್ನು ಹಾಕಿದ್ರು. ಇಷ್ಟೊರೊಳಗೆ ಮಡಿಕೇರಿಯ ಮೇಘಾ ಸೇಬಿಗೆ ಬಾಯಾಕಿ ರುಚಿ ನೋಡಿ ಆಗಿತ್ತು. ಸಿಟ್ಟಿಗೆದ್ದ ತೇಜಸ್ವಿನಿ, ಬಾಯಿಗೆ ಬಂದ ಹಾಗೆ ಅರಚಾಡಿದ್ರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಲೋಕಲ್ ಬಾಯ್ ದಿವಾಕರ್ ಮೇಘಾ ಪರ ವಕಾಲತ್ತು ವಹಿಸಿದ್ರು. ಈ ವೇಳೆ ತೇಜಸ್ವಿನಿ ಹಾಗೂ ದಿವಾಕರ್ ನಡುವೆ ಮಾತಿನ ಸಮರವೇ ನಡೀತು.
ಶ್ರೀಸಾಮಾನ್ಯರನ್ನ ಒಪ್ಪಿಕೊಳ್ಳದ ಸೆಲೆಬ್ರಿಟಿಗಳು
ಬಿಗ್ ಬಾಸ್ ಕಾರ್ಯಕ್ರಮವನ್ನು ಹೆಚ್ಚು ಜನಸ್ನೇಹಿ ಆಗುವಂತೆ ಮಾಡಲು ಈ ಬಾರಿ ಶ್ರೀ ಸಾಮಾನ್ಯರಿಗೆ ಅವಕಾಶ ಕಲ್ಪಿಸಲಾಗಿದೆ.‌ ಆದರೆ ಶ್ರೀಸಾಮಾನ್ಯರ ಜೊತೆ ಹೊಂದಿಕೊಳ್ಳಲಾಗದೆ ಒದ್ದಾಡುತ್ತಿರುವ ಸೆಲೆಬ್ರಿಟಿಗಳು ಅವರಿಂದ ಅಂತರ ಕಾಯ್ದು ಕೊಳ್ತಿದ್ದಾರೆ. ಆದ್ರೆ ಕೊನೆ ಕೊನೆಗೆ ಶ್ರೀ ಸಾಮಾನ್ಯರೇ ಜನರಿಗೆ ಇಷ್ಟವಾಗೋದು ಅನ್ನೋ ಕಾರಣಕ್ಕೆ ಬಿಗ್ ಬಾಸ್ ನಲ್ಲಿ ಸಾಮಾನ್ಯರಿಗೆ ಮಹತ್ವ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಲೋಕಲ್ ಪೀಪಲ್ ಯಾವ ರೀತಿ ತಿರುಗೇಟು ಕೊಡ್ತಾರೆ ಅನ್ನೋ ಕೌತುಕ ಹುಟ್ಟಿಸಿದೆ.
ಜ್ಯೋತಿ ಗೌಡ, ನಾಗಮಂಗಲ

ಮತ್ತೆ ಕಿರುತೆರೆಯಲ್ಲಿ ರಚಿತಾ ರಾಮ್ -ಸೃಜನ್ ಹವಾ !?

ರಚಿತಾ ರಾಮ್ “ಭರ್ಜರಿ” ಯಶಸ್ಸಿನಲ್ಲಿ ತೇಲುತ್ತಿರುವಾಗಲೇ ಅವಕಾಶಗಳು ಅರಸಿ ಬರುತ್ತಿವೆ .  ಉಪ್ಪಿ ಜೊತೆ ಉಪ್ಪಿರುಪ್ಪಿಯಲ್ಲಿ ಡುಯೆಟ್ , ಜಾನಿ ಜಾನಿ ಎಸ್ ಪಾಪ ಅಂತ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಜೊತೆಗೆ ಕಲರ್ಸ್ ಕನ್ನಡದಲ್ಲಿ ಮುಂದಿನ ನವೆಂಬರ್ 4ರಿಂದ ಬರಲಿರುವ ಕಾಮಿಡಿ ಟಾಕೀಸ್ ನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ .

ರಚಿತಾ ಜೊತೆಯಲ್ಲಿ ಮಜಾ ಟಾಕೀಸ್ ಮೂಲಕ ಮಾತಿನ ಪಟಾಕಿ ಸಿಡಿಸಿದ, ಟೈಮಿಂಗ್ ಅಂದ್ರೆ ಸೃಜನ್ ಅನ್ನಿಸಿಕೊಂಡ ಸೃಜನ್ ಲೋಕೇಶ್ ತೀರ್ಪು ಕೊಡಲಿದ್ದಾರೆ.

ಇದಾಗಲೇ ಕೆಲವು ಸಂಚಿಕೆಗಳ ಚಿತ್ರೀಕರಣ ಮುಕ್ತಾಯವಾಗಿವೆ. ಅಗ್ನಿಸಾಕ್ಷಿ  ಖ್ಯಾತಿಯ ವಿಜಯ್ ಸೂರ್ಯ ಕಾಮಿಡಿ ಟಾಕೀಸ್ ನ ನಿರೂಪಕ.

ಕಾಮಿಡಿ ಷೋನಲ್ಲಿ ರಚಿತ ರಂಗು ಹೇಗಿರಲಿದೆ ? ಸೃಜನ್ ಹೊಸ ಅವತಾರ ಪ್ರೇಕ್ಷರನ್ನ ರಂಜಿಸುತ್ತಾ ? ಸೂರ್ಯ ಬೆಳಗುತ್ತಾರಾ? ಎಲ್ಲ ಗೊತ್ತಾಗಬೇಕಾದ್ರೆ ನವೆಂಬರ್ ನಾಲ್ಕರವರೆಗೂ ಕಾಯಲೇಬೇಕು.

ಕಿಚ್ಚ ಸುದೀಪ್ ಹೊಸ ಅವತಾರ ಏನು ಗೊತ್ತಾ ..?

ಬಿಗ್ ಬಾಸ್ ಅಂದ್ರೆ ನೆನಪಿಗೆ ಬರೋದು ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್. ಬಿಗ್ ಬಾಸ್ ನಲ್ಲಿ ಸುದೀಪನ ನಿರೂಪಣೆಯೇ ಬಲು ಮನೋಹರ. ಪ್ರತಿ ಶುಕ್ರವಾರ ಸ್ಪರ್ಧಿಗಳ ಜೊತೆ ನ್ಯಾಯ ಪಂಚಾಯ್ತಿ ಮಾಡುವ ಕಿಚ್ಚ, ಭಾನುವಾರ ಮನೆಯಿಂದ ಹೊರಬಂದ ಸ್ಪರ್ಧಿ ಜೊತೆ ಮಾತನಾಡ್ತಿದ್ರು. ಈ ಬಾರಿ ಸ್ವಲ್ಪ ಬದಲಾವಣೆ ಮಾಡಿಕೊಂಡಿರುವ ಸುದೀಪ್ ಭಾನುವಾರ ವಿಭಿನ್ನವಾಗಿ ಕಾಣಿಸಿಕೊಳ್ತಿದ್ದಾರೆ.
ಅಡುಗೆ ಭಟ್ಟನಾಗಿ ಕಿಚ್ಚನ ಕೈ ರುಚಿ..!
ಪ್ರತಿ ಭಾನುವಾರ ಕಿಚ್ಚ ಸುದೀಪ್ ಅತಿಥಿಗಳ ಜೊತೆ ಅಡುಗೆ ಮಾಡ್ತಾರೆ. ಅದಕ್ಕಾಗಿಯೇ ಬಿಡದಿ ಬಳಿಯ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಅಡುಗೆ ಮನೆ ನಿರ್ಮಾಣ ಮಾಡಿಸಿದ್ದಾರೆ. ವಾರಕ್ಕೊಮ್ಮೆ ಕನ್ನಡ ಸಿನಿಮಾಗಳ ಪ್ರಮೋಷನ್ ಜೊತೆಗೆ ಬಿಗ್ ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿಗಳ ಜೊತೆ ಮಾತು ಹರಟೆ ನಡೆಯುತ್ತೆ. ಅದಕ್ಕೂ ಮೊದಲು ಸಿನಿಮಾ ಪ್ರಮೋಷನ್ ಪಡೆದುಕೊಳ್ಳುವ ತಂಡದ ಒಬ್ಬ ಸದಸ್ಯರ ಜೊತೆ ಅಡುಗೆ ಮಾಡಲಿದ್ದಾರೆ.
ಕೋಳಿ ಕಟ್ ಮಾಡಿದ ನಟಿ ಸಂಯುಕ್ತ ಹೆಗಡೆ..! 
ನಟಿ ಸಂಯುಕ್ತ ಹೆಗಡೆ ಯಾರಿಗೆ ತಾನೆ ಗೊತ್ತಿಲ್ಲ. ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಉಂಡಾಡಿ ಗುಂಡನ ಹಾಗೆ ಆಡ್ತಿದ್ದ ಸಂಯುಕ್ತ ಹೆಗಡೆ ಭಾನುವಾರ ಕಿಚ್ಚನ ಅಡುಗೆ ಮನೆಗೆ ಬಂದಿದ್ರು. ಅಂದಹಾಗೆ ನವೆಂಬರ್ ತಿಂಗಳಲ್ಲಿ ರಿಲೀಸ್ ಗೆ ರೆಡಿಯಾಗಿರೋ ಕಾಲೇಜು ಕುಮಾರ ಚಿತ್ರದ ಪ್ರಮೋಷನ್ ಗಾಗಿ. ಬಿಗ್ ಬಾಸ್ ಮೊದಲ ವಾರದ ಸಂಡೆ ವಿತ್ ಸುದೀಪ ಕಾರ್ಯಕ್ರಮದಲ್ಲಿ ಮೊದಲಿಗೆ ಕಿಚ್ಚನ ಚಿಕನ್ ರೆಸೆಪಿ ಮಾಡಿದ್ರು. ಕಿಚ್ಚ ಅಡುಗೆಯ ಕಲೆ ಹೇಳಿಕೊಡ್ತಿದ್ರೆ, ಸಂಯುಕ್ತ ಹೆಗಡೆ ಅವರನ್ನೇ ಪಾಲಿಸಿಕೊಂಡು ಹೋದ್ರು. ಕೊನೆಗೆ ಇಬ್ಬರೂ ಅತ್ಯುತ್ತಮ ಚಿಕನ್ ಅಡುಗೆ ಸವಿದು ಬಾಯಿ ಚಪ್ಪರಿಸಿದ್ರು.. ಭಾನುವಾರ ಆಗಿದ್ರಿಂದ ಜನರೂ ಮನೆಯಲ್ಲಿ ಬಾಯಿ ನೀರು ಸುರಿಸುತ್ತ ಭಾನುವಾರದ ಬಾಡೂಟ ಸವಿದ್ರು.. ಒಂದು ಅತ್ಯುತ್ತಮ ಕಲೆ ಕಿಚ್ಷನಿಗೆ ಒಲಿದಿದ್ದು, ಗುಡ್ ಶೆಫ್ ಅನ್ನೋದನ್ನ ತೋರಿಸಿದ್ರು..
ಜ್ಯೋತಿ ಗೌಡ, ನಾಗಮಂಗಲ

Like Us, Follow Us !

121,079FansLike
1,815FollowersFollow
1,346FollowersFollow
1,650SubscribersSubscribe

Trending This Week