23 C
Bangalore, IN
Tuesday, March 26, 2019
Home ಸಿನಿಮಾ ನ್ಯೂಸ್ ಟಿವಿ ನ್ಯೂಸ್

ಟಿವಿ ನ್ಯೂಸ್

Get Latest Kannada TV News, News On Kannada TV Serials

ಪ್ರಥಮ್ – ಸಂಜನಾ ಜೊತೆಯಲ್ಲಿ ರಾತ್ರಿ ಕಳೆದ್ರಾ..?

ಪ್ರಥಮ್ -ಸಂಜನಾ ಬಗ್ಗೆ ಹರಿದಾಡಿದ ಸುದ್ದಿ ,ಅದಕ್ಕೆ ಮಾಧ್ಯಮ (ನಮ್ಮನ್ನೂ  ಸೇರಿಸಿ )ಪ್ರತಿಕ್ರಿಯಿಸಿದ ರೀತಿಯ ಬಗ್ಗೆ ciniaada.com ನ ಓದುಗರು ಕಳುಹಿಸಿದ ಪತ್ರವನ್ನ ಯಥಾವತ್ತು ಇಲ್ಲಿ ಪ್ರಕಟಿಸುತ್ತಿದ್ದೇವೆ. ನಾವು ಹೇಳಿದ್ದೆಲ್ಲವನ್ನು  ಜನ  ಯಾವ ವಿಶ್ಲೇಷಣೆ ಇಲ್ಲದೆ ನಂಬಿಬಿಡುತ್ತಾರೆ ಎಂಬ ಯಾವ ನಂಬಿಕೆಯೂ ನಮಗಿಲ್ಲ . ನಮ್ಮ ತಪ್ಪುಗಳನ್ನು ಎತ್ತಿ ತೋರಿಸುವ ನೈತಿಕ ಹಕ್ಕು ಜನರಿಗೆ ಇದೆ . ಅವರ ಮಾತುಗಳನ್ನು ,ಭಾವನೆಗಳನ್ನು ಕೇಳಿಸಿಕೊಳ್ಳೋಣ ಎಂಬ ದೃಷ್ಟಿಯಿಂದ  ಇಲ್ಲಿ ಪ್ರಕಟಿಸುತ್ತಿದ್ದೇವೆ ಹೊರತು ಯಾರನ್ನೂ  ಹಂಗಿಸುವ ಉದ್ದೇಶ ಇಲ್ಲಿಲ್ಲ .
ಪ್ರಥಮ್ -ಸಂಜನಾ ಜೊತೆ ರಾತ್ರಿ ಕಳೆದ್ರಾ ?
ಇದು ಇವತ್ತು ಮಾಧ್ಯಮಗಳಲ್ಲಿ ಚರ್ಚೆ ವಿಷಯ. ನಾನು ಸಂಜನಾ ಸ್ಥಾನದಲ್ಲಿ ನಿಂತಾಗ ನನ್ನನ್ನು ಕೇಳಿದ್ರೆ ಹೌದು ಏನಿವಾಗ..? ಅನ್ನೋ ಪ್ರಶ್ನೆ ಕೇಳ್ತೀನಿ. ಅದೇ ಓರ್ವ ಪತ್ರಕರ್ತೆ ಸ್ಥಾನದಲ್ಲಿ ನಿಂತಾಗ ಕೇಳಿದ್ರೆ ನಮಗೆ ಯಾಕೆ ಬೇಕು ಅವರು ಯಾರ ಜೊತೆ ಇದ್ದರೆ ಏನಂತೆ ಬಿಟ್ಟುಬಿಡಿ. ವಂಚನೆ  ಮಾಡಿದರೆ ಮಾತ್ರ ನೀವು ಎಂಟ್ರಿಯಾಗಿ ಅನ್ನೋ ಉತ್ತರ ಕೊಡ್ತೀನಿ.
ಅದೇನೇ ಇರಲಿ ಪ್ರಥಮ್ ಹಾಗೂ ಸಂಜನಾ ಬಿಗ್ ಬಾಸ್ ನಲ್ಲಿ ಒಟ್ಟಿಗೆ ಸ್ಪರ್ಧಿಗಳಾಗಿದ್ದವರು. ಹೊರಗಡೆ ಬಂದ ಬಳಿಕವೂ ಹಲವಾರು ಪ್ರೊಜೆಕ್ಟ್ ಗಳಲ್ಲಿ ಒಟ್ಟಾಗಿ ಕೆಲಸ ಮಾಡ್ತಿದ್ದಾರೆ. ಒಂದು ಕೆಲಸವನ್ನು ಒಟ್ಟಿಗೆ ಮಾಡುವಾಗ ಒಮ್ಮೊಮ್ಮೆ ಒಟ್ಟಿಗೆ ಹೋಗುವುದು, ಹೋಟೆಲ್ ನಲ್ಲಿ ಊಟಕ್ಕೆ ಹೋಗುವುದು ಸಹಜ. ಅಷ್ಟಿದ್ದ ಮಾತ್ರಕ್ಕೆ ನೀವು ಯಾರೊಂದಿಗೋ ಸಂಬಂದ ಕಲ್ಪಿಸಿಬಿಟ್ಟರೇ..? ಇದೇನಾ ಸಮಾಜದಲ್ಲಿ ನಾಲ್ಕನೆ ಅಂಗವಾಗಿ ಕೆಲಸ ಮಾಡುವ ಪರಿ..? ಯಾರೋ ಕೊಟ್ಟ ಸುದ್ದಿಯ ಸತ್ಯಾಸತ್ಯತೆ ತಿಳಿಯದೆ   ಮಾಧ್ಯಮಗಳು  ಅಷ್ಟೊಂದು ಬೊಬ್ಬಿರಿದು ಚರ್ಚೆ ಮಾಡುವ ಅಗತ್ಯವಿತ್ತೇ ಅನ್ನೋದನ್ನ ತಮ್ಮ ಹೃದಯ ಮುಟ್ಟಿ ಕೇಳಿಕೊಳ್ಳಿ.
ನಾನು ಊಟಕ್ಕೆ ಹೋಗುವಾಗ ನನ್ನ ಸಹೋದ್ಯೋಗಿಗಳ ಜೊತೆ ಹೋಗ್ತೀನಿ. ಹಾಗಾಗ ಫೋಟೋಗಳನ್ನು ಕ್ಲಿಕ್ಕಿಸುತ್ತೀನಿ.. ಅವರಿಗೂ ನನಗೂ ಸಂಬಂಧ ಕಲ್ಪಿಸಿದ್ರೆ ಮೆಟ್ಟಲ್ಲಿ ಹೊಡಿತೀನಿ. ಅದೇ ರೀತಿ ನಿಮಗ್ಯಾಕೆ ರೀ ಅವರ ವೈಯಕ್ತಿಕ ವಿಚಾರ.? ಅವರು ಸೆಲೆಬ್ರಿಟಿಗಳು ಅನ್ನೋ ಕಾರಣಕ್ಕೆ ಯಾರ ಜೊತೆಯೂ ಹೊರಗೆ ಹೋಗಲೇ ಬಾರದೆ.? ನಿಮ್ಮ ಕ್ಷೇತ್ರದಲ್ಲಿ ಎಷ್ಟು ಜನ ಕಾಮುಕರಿಲ್ಲ ? ಅವರ ಬಗ್ಗೆ ಮಾತ್ರ ಗ್ಯಾಪ್ ಚುಪ್ ಅಂತೀರಿ. ಹೋಗ್ಲಿ  ಪ್ರಥಮ್ -ಸಂಜನಾ  ಅವರೇನಾದರೂ ಸಮಾಜಕ್ಕೆ ಮಾರಕವಾಗುವಂತ ತಪ್ಪನ್ನು ಮಾಡಿದರೆ ಖಂಡಿತ ಕೇಳಿ, ಕೆಲವೊಂದಿಷ್ಟು ಜನ ನಿಮ್ಮನ್ನು ಫಾಲೋ ಮಾಡ್ತಾರೆ, ನೀವೇ ಹೀಗೆ ಮಾಡಿದರೆ ಹೇಗೆ.? ಅಂತಾ. ಅದನ್ನು ಬಿಟ್ಟು ಅವಳು ಅವನ ಜೊತೆ ಹೋದಳಂತೆ, ಇವನಿಗೆ ಹುಡುಗಿಯರ ಚೂಲಿದೆಯಂತೆ ಅಂತೆಲ್ಲಾ ವಿವಾದ ಮಾಡ್ತೀರಲ್ಲ ನಾಚಿಕೆ ಆಗ್ಬೇಕು ನಿಮಗೆ.
ಸಂಜನಾ ಸ್ಥಾನದಲ್ಲಿ ನಿಮ್ಮ ಮಗಳನ್ನೋ ಅಕ್ಕ,ತಂಗಿಯನ್ನೋ ಒಮ್ಮೆ ಕಲ್ಪಿಸಿಕೊಳ್ಳಿ, ಒಂದು ವೇಳೆ ನಿಮ್ಮ ಮಗಳೋ ಅಕ್ಕ ತಂಗಿಯೋ ಅವರ ಸ್ನೇಹಿತರ ಜೊತೆ ಊಟಕ್ಕೋ ಕಾಫಿಗೋ ತಮ್ನ ಸ್ನೇಹಿತರ ಜೊತೆ ಹೋದಾಗ ಮೂರನೇ ವ್ಯಕ್ತಿ ನಿಮ್ಮವರ ಬಗ್ಗೆ ಇದೇ ರೀತಿ ಮಾತನಾಡಿದರೆ ನೀವು ಏನು ಮಾಡುತ್ತೀರಿ ಎಂಬ ಅರಿವು ಇದೆಯೇ.?
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೆಣ್ಣು, ಗಂಡು ಪ್ರಾಯ ವ್ಯವಸ್ಥೆಗೆ ಬಂದ ಬಳಿಕ ತಂದೆ ತಾಯಂದಿರೇ ಅವರ ಸ್ವಂತ ವಿಚಾರಕ್ಕೆ ತಲೆ ಹಾಕುವುದಿಲ್ಲ. ಆದರೆ ಆಕೆ ತನ್ನ ತಾಯಿ ಜೊತೆ ಒಂದು ಕಾರ್ಯಕ್ರಮಕ್ಕೆ ಹೋಗಿ ಬಂದರೆ ಸಂಬಂಧವನ್ನೇ ಕಲ್ಪಿಸಿ ಬಿಟ್ಟಿರಲ್ಲ ಶಹಬ್ಬಾಸ್. ನಿಮ್ಮ ಸಮಾಜ ಮುಖಿ ಚಿಂತನೆಗೆ ನಿಮಗೆ ನೀವೇ ಬೆನ್ನು ತಟ್ಟಿಕೊಳ್ಳಬೇಕು.
ನಿಜಾ ಸ್ವಾಮಿ ಜನರಿಗೆ ನಕಾರಾತ್ಮಕ ವಿಚಾರಗಳನ್ನು ಹೇಳುತ್ತಾ ಸಾಗಿದರೆ ಆಕರ್ಷಣೆ  ಮಾಡೋದು ಸುಲಭ. ಹಾಗಂದ ಮಾತ್ರಕ್ಕೆ ನೀವು ಕೇವಲ ನಕಾರಾತ್ಮಕ ವಿಚಾರಗಳ ಹಿಂದೆ ಬಿದ್ದು ಸಮಾಜವನ್ನು ಯಾವ ದಿಕ್ಕಿಗೆ ಕೊಂಡೊಯ್ಯುತ್ತಿದ್ದೀರಿ ಅನ್ನೋ ಬಗ್ಗೆ ಕ್ಷಣ ಮಾತ್ರ ಯೋಚಿಸಿ. ಸಾಧ್ಯ ಆದರೆ ಮುಂದಾದರೂ ಒಳ್ಳೆಯ ವಿಚಾರಗಳನ್ನು ಹೇಳಿ ಸಮಾಜದ ಹಿತ ಕಾಪಾಡುವ   4ನೇ ಅಂಗ ಅನ್ನೋದನ್ನ ಸಾಬೀತು ಮಾಡಿ.
ಒಂದು ಹೆಣ್ಣು ಹುಡುಗಿಯ ಭವಿಷ್ಯದ ಪ್ರಶ್ನೆ ಅನ್ನೋದನ್ನು ಯೋಚಿಸದೇ ತಮ್ಮ ಬೇಳೆ ಬೇಯಿಸಿಕೊಂಡ ನಿಮ್ಮ ದೊಡ್ಡತನಕ್ಕೆ ಸಲಾಮು. ಆ ಸುದ್ದಿ ನಿಜವಾದರೂ ಅಪರಾಧ ಅಲ್ಲ ಅನ್ನೋ ಕನಿಷ್ಠ ಜ್ಞಾನ ಇಲ್ಲದಾಗಿದ್ದು ಮಾತ್ರ ದುರಂತ. ಸತ್ಯವೋ ಮಿಥ್ಯವೋ ಸಂಜನಾ ಪ್ರತಿಕ್ರಿಯೆ ಕೊಡಬಾರದಿತ್ತು. ಕೋರ್ಟ್‌ ಮೂಲಕ ಕಾನೂನು ಕ್ರಮ ಕೈಗೊಂಡು ನನ್ನ ಮೇಲೆ ವೃಥಾ  ಆರೋಪ ಮಾಡಿರುವ ಇಷ್ಟು ಸಂಸ್ಥೆಗಳು ಸಾಕ್ಷಿಯನ್ನು ಹಾಜರುಪಡಿಸಲಿ, ಇಲ್ಲದಿದ್ದರೆ ನನಗೆ ಆಗಿರುವ ಮಾನಹಾನಿಗೆ ನಷ್ಟ ಕಟ್ಟಿಕೊಡಲಿ ಅಂತಾ ದೂರು ನೀಡಿದ್ದರೆ ಚೆನ್ನಾಗಿರುತ್ತಿತ್ತು.
ದಿವ್ಯಾ ಕೊಡಗು

ಶಿವ ಮಂದಿರಕ್ಕೆ ಬಿತ್ತು ಬೆಂಕಿ..! ಎಲ್ಲಿ ಗೊತ್ತಾ..?

ಕನ್ನಡ ಜನರು ಮೆಚ್ಚಿಕೊಂಡು ಭಕ್ತಿಭಾವದಿಂದ ನೋಡುವ ಕನ್ನಡ ಧಾರವಾಹಿ ಹರ ಹರ ಮಹಾದೇವ ಭಸ್ಮದಿಂದ ಎದ್ದು ಬರುವ ದೃಶ್ಯವನ್ನು ನೀವೆಲ್ಲಾ ನೋಡಿದ್ದೀರಿ.. ಆದ್ರೆ ಇದೀಗ ಭಸ್ಮದಿಂದ ಎದ್ದು ಬರಬೇಕಿದ್ದ ಮಹಾದೇವನ ಕಥೆ ಉಲ್ಟಾ ಆಗಿದೆ.. ಮುಂಬೈನಲ್ಲಿ ಮ್ಯಾಗ್ನಮ್ ಸ್ಟೂಡಿಯೋದಲ್ಲಿ ಧಾರವಾಹಿ ಶೂಟಿಂಗ್ ನಡೆಯುತ್ತಿದ್ದು, ಇಡೀ ಸೆಟ್ ಬೆಂಕಿಯ ಕೆನ್ನಾಲಿಗೆ ಸಿಲುಕಿ ಭಸ್ಮವಾಗಿದೆ.

ಮುಂಬೈ ಪೂರ್ವ ನಯ್ಗಾನ್ ಬಳಿ ಇರುವ ಮ್ಯಾಗ್ನಮ್ ಸ್ಟೂಡಿಯೋದಲ್ಲಿ ಬೆಳಗ್ಗೆ ಶೂಟಿಂಗ್ ನಡೆಯಲು ಅಣಿಯಾಗ್ತಿದ್ದ ಹಾಗೆ ಸೆಟ್ ನಂಬರ್ 9 ರಲ್ಲಿ ಬೆಂಕಿ ಕಾಣಿಸಿಕೊಂಡಿದೆ.. ಭಜನ್‍ಲಾಲ್ ಎಸ್ಟೇಟ್, ಕಮಾನು ಎಲ್ಲವೂ ಸುಟ್ಟು ಹೋಗಿದ್ದು, ಧಾರಾವಾಹಿ ತಂಡಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ..

ಜೋಮ, ಮಂಡ್ಯ

ಮಜಾ ಟಾಕೀಸ್ .. ಈಗ ಹೊಸ ಟಾಕೀಸ್.

ಯಾವುದೇ ಸೂಪರ್ ಹಿಟ್ ರಿಯಾಲಿಟೀ ಶೋ ಅನ್ನು ಕನ್ನಡಕ್ಕೆ ತಂದು ಗೆಲ್ಲುವುದು ಸುಲಭದ ಮಾತಲ್ಲ. ಕಲರ್ಸ್ ಕನ್ನಡ ವಾಹಿನಿಯಲ್ಲಿ, ಲೋಕೇಶ್ ಪ್ರೋಡಕ್ಷನ್ಸ್ ಮೂಲಕ ಸೃಜನ್ ಲೋಕೇಶ್ “ಮಜಾ ಟಾಕೀಸ್” ಕಾರ್ಯಕ್ರಮವನ್ನು ನೀಡಿ ಗೆದ್ದು ತೋರಿಸಿದ್ದಾರೆ. ಅಪರ್ಣ, ಮನೋಹರ್ ಹಾಗೂ ಇಂದ್ರಜೀತ್ ಅಂತಹ ಗಂಭೀರ ವ್ಯಕ್ತಿಗಳನ್ನು ಹಾಸ್ಯಮಯ ಪಾತ್ರಗಳಲ್ಲಿ ಯಶಸ್ವಿಯಾಗಿ ಬಿಂಬಿಸಿದ್ದಾರೆ. ಶ್ವೇತಾ, ದಯಾನಂದ್, ಪವನ್, ವಂದನ  ಹಾಗೂ ರೇಮೋ ಅವರನ್ನೊಳಗೊಂಡ “ಮಜಾ ಟಾಕೀಸ್” ಒಂದು ಅಪರೂಪದ ತಂಡ. ಮಂಡ್ಯ ರಮೇಶ್ ಮತ್ತು ಕುರಿ ಪ್ರತಾಪ್ ಸೇರಿಕೊಂಡ ಮೇಲಂತೂ ಪ್ರೇಕ್ಷಕರಿಗೆ ಡಬ್ಬಲ್ ಬೋನಸ್. ಇತ್ತೀಚಿನ ಸೇರ್ಪಡೆ ನವೀನ್ ಪಡೀಲ್ ಕೂಡ ಅಸಾಮಾನ್ಯ ಪ್ರತಿಭೆ.

DSC_0486

ಮೊದಮೊದಲು ಮಿಶ್ರ ಪ್ರತಿಕ್ರಿಯೆಗಳನ್ನು ಎದುರಿಸಿದ ಮಜಾಟಾಕೀಸ್, ನಂತರದ ದಿನಗಳಲ್ಲಿ  ನಂಬರ್ ಒನ್ ರಿಯಾಲಿಟಿ ಶೋ ಆಗಿ ನಿಂತದ್ದು ಮಾತ್ರ ಪ್ರಶಂಸನೀಯ.

ಕಿರುತೆರೆಯಲ್ಲಿ ಎಂದಿಗೂ ಕಾಮಿಡಿ ಮಾಡದ ಚಿತ್ರರಂಗದ ಅತಿರಥ-ಮಹಾರಥರು ಮಜಾಟಾಕೀಸಿಗೆ ಬಂದು ಮಜಾ ಮಾಡಿ ಹೋಗಿದ್ದಾರೆ.

mt ciniadda

25ನೇ ಎಪಿಸೋಡಿನಲ್ಲಿ ಸುದೀಪ್, 50ನೇ ಎಪಿಸೋಡಿನಲ್ಲಿ ದರ್ಶನ್, 75ನೇ ಎಪಿಸೋಡಿನಲ್ಲಿ ಅರ್ಜುನ್ ಸರ್ಜಾ ಹಾಗೂ ಸೆಂಚುರಿ ಎಪಿಸೋಡಿನಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರನ್ನು ಕರೆತಂದು ಪ್ರೇಕ್ಷಕರಿಗೆ ಮನೋರಂಜನೆ ನೀಡಿದ ಹೆಗ್ಗಳಿಕೆ ಸೃಜನ್ ಅವರದು. ಅರಳು ಹುರಿದಂತೆ ಪಟಪಟನೆ ಮಾತನಾಡುವ ಲೋಕೇಶ್, ಎಣ್ಣೆ ಸಿಡಿದಂತೆ ಚಿಟಚಿಟನೆ ನಗುವ ಲಂಕೇಶ್ ಜೋಡಿ ಇಂದು ಕರ್ನಾಟಕದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಖ್ಯಾತಿ ಪಡೆದ ಜೋಡಿಯಾಗಿದೆ. ಪ್ರಪಂಚದ ನಾನಾ ದೇಶದಲ್ಲಿ ಬದುಕು ಕಂಡುಕೊಂಡಿರುವ ಕನ್ನಡಿಗರು ತಮ್ಮ ತವರಿಗೆ ಬಂದಾಗ ಮಜಾಟಾಕೀಸ್ ಕಾರ್ಯಕ್ರಮಕ್ಕೂ ಭೇಟಿ ಕೊಡುವುದು ಅವರ ಪ್ರಮುಖ ಆದ್ಯತೆ ಆಗಿರುತ್ತದೆ ಎನ್ನುವುದು ಕಲರ್ಸ್ ಕನ್ನಡ ವಾಹಿನಿಗೆ ಒಂದು ಹಿರಿಮೆಯೇ ಸರಿ.

Desktop19

ನೂರರ ನಂತರ ನೂರೈವತ್ತು ಎಪಿಸೋಡ್ ಗಳನ್ನು ಮಿಂಚಿಸಿ ಕಿರುತೆರೆಯಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿ ಮುನ್ನಡೆಯುತ್ತಿರುವ ಮಜಾಟಾಕೀಸ್ ಮನೆ ಈಗ ಸಂಪೂರ್ಣ ಹೊಸ ರೂಪ ಪಡೆದು ಹೊಸ ಮನೆಯಲ್ಲಿ ಕನ್ನಡದ ಪ್ರೇಕ್ಷಕರನ್ನು ರಂಜಿಸಲಿದೆ. ಹೊಸ ಮನೆಯ ಗೃಹಪ್ರವೇಶಕ್ಕೆ ಸೃಜನ್ ಲೋಕೇಶ್ ಅವರ ಆತ್ಮಿಯರಾದ ನಿರ್ದೇಶಕ ಯೋಗರಾಜ್ ಭಟ್ ಜೊತೆಯಲ್ಲಿ ನಭಾ ನಟೇಶ್, ಶುಭಾ ಪೂಂಜ, ಇಂದು-ಬಿಂದು ನಾಗರಾಜ್ ಮತ್ತು ಹಲವರು ಬರಲಿದ್ದಾರೆ.

ಎಂದಿನಂತೆ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರೇಕ್ಷಕರಿಗೆ ಅದ್ಧೂರಿಯಾಗಿ ಸೆಟ್ಟೇರಿರುವ ಹೊಸ ಮಜಾಟಾಕೀಸ್ ನ ದರ್ಶನವಾಗಲಿದೆ.

ಒಳ್ಳೆ ಹುಡುಗ ಪ್ರಥಮ್ ಹೊಸ ಅವತಾರದಲ್ಲಿ ?

ಬಿಗ್ ಬಾಸ್ ಪ್ರಥಮ್ ಈಗ ಮಿರ್ ..ಅಂತ ಮಿಂಚ್ ಕೊಂಡು ಹೊಸ ಅಂಗಿ ಹಾಕ್ಕೊಂಡು ಫೋಟೋ ಶೂಟ್ ಮುಗಿಸಿಕೊಂಡಿದ್ದಾರೆ . ಅದೇನ್ ಪಿಕ್ಚರ್ ಗಾ ? ಅಂದ್ರೆ ಇಲ್ಲ.. ಇಲ್ಲ.. ಯಾವ ವಾಹಿನಿಗೆ ಹೇಳಹೆಸರಿಲ್ಲದೆ ಬಂದು ಫುಲ್ ಫೇಮಸ್ ಆಗಿ ಹೊರಬಂದರೋ ಅದೇ ವಾಹಿನಿಯ ಹೊಚ್ಚಹೊಸ ಧಾರಾವಾಹಿಗೆ.

ಹೌದ್ರಪ್ಪ ಕಲರ್ಸ್ ಕನ್ನಡದ ಯಶಸ್ವಿ ಕ್ಯಾಪ್ಟನ್ ಪರಮೇಶ್ವರ್ ಗುಂಡ್ಕಲ್ ಸಂಜು ಮತ್ತು ನಾನು ಧಾರಾವಾಹಿ ತೆರೆಗೆ ತರುತ್ತಿರೋ ಸುದ್ದಿ ಕೊಟ್ಟಿದ್ದಾರೆ . ಇದೊಂದು ಪ್ರಯೋಗ ಅಂತಾನೂ ಹೇಳಿದ್ದಾರೆ .

ಯಾವತ್ತಂತೆ ?

ಇದು ದಿನಾ ಬರೋ ಧಾರಾವಾಹಿ ಅಲ್ಲ. ಶನಿವಾರ -ಭಾನುವಾರ ಒಂದು ಗಂಟೆ ಕಾಲ ಪ್ರಸಾರವಾಗುತ್ತೆ. 24 ಸಂಚಿಕೆಗಳು ಇರಲಿವೆ. ಪ್ರಥಮ್ ,ಸಂಜನಾ ,ಭುವನ್ ಮುಖ್ಯ ಪಾತ್ರಧಾರಿಗಳು . ಬಿಗ್ ಬಾಸ್ ಮನೆಯಲ್ಲಿ ನಾನಿರೋವರೆಗೂ ಭುವನ್ ಸಂಜನಾ ಲವ್ ಮಾಡೋದಿಕ್ಕೆ ಬಿಡಲ್ಲ ಅಂತ ಕೂಗಾಡಿ ,ಖಡಕ್ ಆಗಿ ಹೇಳಿದ್ದ ಪ್ರಥಮ್ ಇಲ್ಲೇನು ಮಾಡ್ತಾರೋ ನೋಡೋಣ. ಸಂಜು ಗೊತ್ತಾಯ್ತು .ಈ ನಾನು ಯಾರು ?? ಪ್ರಥಮ್ ? ಅಥವಾ ಭುವನ್ ? ಯಾರ್ ..ಯಾರ್.. ಯಾರಿರಬಹುದು ಅಂತ ಅಭಿಮಾನಿಗಳು ಕುತೂಹಲದಿಂದ ಕಾಯುವಂಥ ಹೆಸರಿಟ್ಟು ರಂಜಿಸೋಕೆ ಸಿದ್ಧವಾಗಿದ್ದಾರೆ ಕಲರ್ಸ್ ತಂಡದವರು.

ಬಿಗ್ ಬಾಸ್ ಗೆದ್ದ ಬಾಯಿ ಬುಡುಕ ಪ್ರಥಮ್ !?

ಬಿಗ್‍ಬಾಸ್, ಕನ್ನಡದ ಕಲರ್ಸ್ ವಾಹಿನಿಯಲ್ಲಿ ಕಿಚ್ಚ ಸುದೀಪ್ ನೇತೃತ್ವದಲ್ಲಿ ಮೂಡಿ ಬರುತ್ತಿರುವ ಬಿಗ್‍ಬಾಸ್ ಗ್ರಾಂಡ್ ಫಿನಾಲೆ ಇವತ್ತು.. ರಾತ್ರಿ 8 ಗಂಟೆಗೆ ಕಾರ್ಯಕ್ರಮ ಆರಂಭವಾಗ್ತಿದ್ದ ಹಾಗೆ ವಿನ್ನರ್ ಯಾರು ಅನ್ನೋ ಬಗ್ಗೆ ಸಾಕಷ್ಟು ಸಂದೇಶಗಳು ಹರಿದಾಡಿವೆ.. ನಿನ್ನೆಯಿಂದಲೂ ರೇಖಾ ಸುದೀಪ್ ಮೊದಲ ಸಿನಿಮಾದಲ್ಲಿ ಹೀರೋಯಿನ್ ಆಗಿದ್ದವರು ಹಾಗಾಗಿ ಅವರನ್ನೇ ಗೆಲ್ಲಿಸಲು ಮಾತುಕತೆ ನಡೆದಿದೆ ಅನ್ನೋ ಬಗ್ಗೆ ಮಾತುಗಳು ಕೇಳಿ ಬರ್ತಿತ್ತು.. ಆದ್ರೆ ಭಾನುವಾರ ರಾತ್ರಿ 8 ಗಂಟೆಗೆ ಕಾರ್ಯಕ್ರಮ ಆರಂಭವಾಗ್ತಿದ್ದ ಹಾಗೆ ರೇಖಾ ಮೂರನೇ ಸ್ಥಾನ, ಕೀರ್ತಿ ಕುಮಾರ್‍ಗೆ 2ನೇ ಸ್ಥಾನ, ಮನೆಯಲ್ಲಿ ಎಲ್ಲರನ್ನು ಹಿಯ್ಯಾಳಿಸಿ, ಎಲ್ಲರಿಂದಲೂ ಕಡೆಗಣನೆಗೆ ಒಳಗಾಗಿದ್ದ  ಪ್ರಥಮ್‍ಗೆ ಮೊದಲನೇ ಸ್ಥಾನ ಲಭಿಸಿದೆ..

pratham images

ಪ್ರಥಮ್ ಬುದ್ಧಿ ಶಕ್ತಿ, ಜ್ಞಾಪಕಶಕ್ತಿ ಬಗ್ಗೆ ಯಾವುದೇ ಮಾತಿಲ್ಲ.. ಆದ್ರೆ ಪ್ರಥಮ್‍ಗೆ ಯಾವುದನ್ನು ವಿರೋಧಿಸಬೇಕು, ಯಾವುದನ್ನು ಖಂಡಿಸಬೇಕು ಅನ್ನೋ ಬಗ್ಗೆ ಯಾವುದೇ ಸ್ಪಷ್ಟತೆ ಇರಲಿಲ್ಲ.. ಕಡೆಯ 2 ವಾರಗಳಲ್ಲಿ ಸ್ವಲ್ಪ ಸುಧಾರಣೆ ಕಂಡಿದೆ… ಈ ಮಾತನ್ನ  ಸ್ವತಃ ಬಿಗ್ ಬಾಸ್ ವಿನ್ನರ್ ಆಫ್ 2016 ಪ್ರಥಮ್ ಕೂಡ ಹೇಳಿದ್ದಾರೆ.. ಆದರೂ ಕರುನಾಡಿನ ಜನರು ಪ್ರಥಮ್ ಆಯ್ಕೆ ಮಾಡಿದ್ದಾರೆ ಅನ್ನೋ ಮೂಲಕ ಶಾಕ್ ನೀಡಲಾಗಿದೆ.. ಒಂದು ವೇಳೆ ಪ್ರಥಮ್ ಆಯ್ಕೆಯೇ ಅಂತಿಮ ಆಗಿದ್ದರೆ, ಜನ ನಕಾರಾತ್ಮಕ ವಿಚಾರಗಳನ್ನು ಮನರಂಜನೆಗಾಗಿ ಅಪ್ಪಿಕೊಳ್ಳುತ್ತಿದ್ದಾರೆ ಎಂದರ್ಥ..

pratham 2

ಟಿವಿಗಳಲ್ಲಿ ಗಂಡ ಹೆಂಡ್ತಿ ಜಗಳ, ಸೆಕ್ಸ್ ಸುದ್ದಿಗಳು, ಅತ್ಯಾಚಾರದ ವಿಚಾರಗಳು ಹೆಚ್ಚೆಚ್ಚು ಪ್ರಸಾರ ಆಗಲು ಇದೇ ಕಾರಣ.. ಜನರು ನಕಾರಾತ್ಮಕ ವಿಚಾರಗಳಿಗೆ ಕಿವಿ ಕೊಡುವಷ್ಟು ಉತ್ತಮ ಸಕಾರಾತ್ಮಕ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಅನ್ನೋದು ಬಿಗ್‍ಬಾಸ್ ಮೂಲಕವೂ ಮತ್ತೆ ಸಾಬೀತಾಯ್ತು. ಪ್ರಥಮ್ ಬಗ್ಗೆ ನಮಗೆ ಯಾವುದೇ ತಕರಾರು ಇಲ್ಲ.. ಆತನೇ ಹೇಳಿದಂತೆ ಬಿಗ್‍ಬಾಸ್ ಮನೆಯಿಂದ ಬರುವಾಗ ಯಾವುದೇ ಪ್ರತಿಭಟನೆ, ಖಂಡನೆ ಇರುವುದಿಲ್ಲ ಅಂತಾ ಸುದೀಪ್‍ಗೆ ವಾಗ್ದಾನ ಮಾಡಿರುವ ರೀತಿ ನಡೆದುಕೊಂಡರೆ.. (ನಮ್ಮ ವಿರುದ್ಧ ಪ್ರತಿಭಟಿಸಿದರೂ ಅಚ್ಚರಿಯಿಲ್ಲ)

ಬಿಗ್‍ಬಾಸ್ ಫೈನಲ್‍ನಲ್ಲಿ ಸುದೀಪ್ ಭಾವನಾತ್ಮಕ ದೃಶ್ಯಗಳ ಸಂಗ್ರಹ ತೋರಿಸಿ, ಆ ವೀಡಿಯೋ ಬಗ್ಗೆ ಎಲ್ಲಾ ಸ್ಪರ್ಧಿಗಳನ್ನು ಕೇಳುತ್ತಾರೆ.. ಆ ವೇಳೆ ನನಗೂ ಬಿಗ್‍ಬಾಸ್ ಮನೆ ಎಲ್ಲಾ ಭಾವನೆಗಳ ಬಗ್ಗೆ ತಿಳಿಸಿಕೊಟ್ಟಿದೆ ನಾನು ಇನ್ಮುಂದೆ ಹೀಗೆ ಇರಲ್ಲ ಎನ್ನುತ್ತಾರೆ.. ಆದರೆ ಜನ ಗೆಲ್ಲಿಸಿದ್ದು ಹೀಗೇ ಮುಂದುವರಿಯಲಿ ಅನ್ನೋದನ್ನು ಮರೆತುಬಿಟ್ಟರು.. ಏನೇ ಆಗಲಿ, ಜನ ನಕಾರಾತ್ಮಕವಾಗಿ ಇದ್ದಿದ್ದಕ್ಕೆ ವೋಟ್ ಮಾಡಿ ಗೆಲ್ಲಿಸಿದ್ದರೂ ಆತ ಮುಂದಿನ ಜೀವನದಲ್ಲಿ ಸಕಾರಾತ್ಮವಾಗಿ ಬದಲಾಗಲಿ.. ಕಲರ್ಸ್ ಕನ್ನಡದಲ್ಲಿ ವಿನ್ನರ್ ಘೋಷಣೆಯಾಗಲು ಇನ್ನೂ 3 ಗಂಟೆಗಳು ಬೇಕು.. ಆದರೆ ciniadda.com ತನ್ನ  ಸುದ್ದಿಮೂಲಗಳಿಂದ  ವಿನ್ನರ್ ಘೋಷಣೆಯನ್ನು ಪಕ್ಕಾ ಮಾಡಿಕೊಂಡಿದೆ..

-ಸರ್ವಸಮರ್ಥ, ನಾಗಮಂಗಲ

ಕಿರಿಕ್ ಪಾರ್ಟಿ ಆರ್ಯ ಅರ್ಥಾತ್ ಸಂಯುಕ್ತಾ ಹೆಗ್ಡೆ ರಿಯಾಲಿಟಿ ಶೋ ಜರ್ನಿ ಖತಂ?

ಆರ್ಯ !!
ಕಿರಿಕ್ ಪಾರ್ಟಿ ಸಿನಿಮಾ ನೋಡಿದವರಾರೂ ಈ ಹೆಸರನ್ನು ಮನೆತಿರಲ್ಲ. ಪ್ರತಿಯೊಂದು ಕಾಲೇಜಲ್ಲಿರಬಹುದಾದ ಟಾಮ್ ಬಾಯಿಶ್ ಹುಡ್ಗಿಯಾಗಿ ಮನಸ್ಸು ಕದ್ದವರು ಸಂಯುಕ್ತಾ ಹೆಗ್ಡೆ.
ಸಿನಿಮಾ ಹಿಟ್ ಆಗುತ್ತಿದ್ದಂತೆಯೇ ಆಫರ್’ಗಳ ಸುರಿಮಳೆಯಾಯಿತು. ಆದರೆ ಸಂಯುಕ್ತ ಸ್ವಲ್ಪ ಡಿಫರೆಂಟು.
ಮೂಲತಃ ಡಾನ್ಸರ್ ಆಗಿರುವ ಈಕೆಗೆ ಟ್ರಾವೆಲಿಂಗ್ ಅಂದ್ರೆ ಪ್ರಾಣ. ಈ ಮಧ್ಯೆ ಯಾವುದಾದರೊಂದು ಸಿನಿಮಾ ಒಪ್ಪಿಕೊಂಡು ಕನ್ನಡದ ಪ್ರೇಕ್ಷಕನನ್ನು ಖುಷಿಪಡಿಸುತ್ತಾರೆ ಅಂದುಕೊಂಡರೆ ಸಂಯುಕ್ತಾ ಮಾತ್ರ ಎಂಟಿವಿಯ ರೋಡೀಸ್ ರಿಯಾಲಿಟಿ ಶೋ ಕಡೆಗೆ ಮುಖ ಮಾಡಿದ್ದರು. ಅದು ಅವರ ಹತ್ತುವರುಷಗಳ ಕನಸಾಗಿತ್ತಂತೆ.
ಹಾ..? ಔಟಾ ?!
ರೋಡೀಸ್ ರಿಯಾಲಿಟಿ ಷೋನ ಇಂಡಿಯನ್ ಹೊಸ ವರ್ಷನ್  ಒಂದು ತಿಂಗಳು ಪೂರೈಸಿದೆ. ಇಂದು ಸಂಯುಕ್ತಾ ರೋಡೀಸ್ ನಿಂದ ಹೊರ ಬಂದಿದ್ದಾರೆ. ಹಾಗಂತ ಎಲಿಮಿನೇಟ್ ಆಗಿದ್ದಾರೆ ಅಂದುಕೊಳ್ಳಬೇಡಿ. ರೋಡೀಸ್ ಶೂಟಿಂಗ್ ಮುಗಿದಿದೆ. ಫೈನಲ್ ಶೂಟಿಂಗ್ ಕೂಡ ಮುಗಿದುಹೋಗಿದೆ. ಏನಾಯಿತು ಅಂತ ಕೇಳಿದರೆ ಏನಾಗಿದೆ  ಅಂತ ನಿಜ ಹೇಳಲು ಟಿವಿ ಕಾಂಟ್ರಾಕ್ಟ್ ಚಿನಕುರಳಿಯಂಥಾ ಸಂಯುಕ್ತಾ ಬಾಯಿಗೆ ಬೀಗ ಹಾಕಿದೆ. ಹಾಗಾಗಿ ಟಿವಿಯಲ್ಲಿ ಟೆಲಿಕಾಸ್ಟ್ ಆಗುವವರೆಗೂ ಸಂಯುಕ್ತಾ ರಿಸಲ್ಟ್ ಏನು ಅಂತ ಹೇಳಲ್ಲ.
ರಿಸಲ್ಟ್ ಏನೇ ಬರಲಿ ಅಮೇರಿಕ ಮೂಲದ ರಿಯಾಲಿಟಿ  ಶೋ  ರೋಡೀಸ್ ನಲ್ಲಿ ಕಡೆಯವರೆಗೆ ಇರುವುದೇ ಒಂದು ಸಾಹಸ-ಸಾಧನೆ. ಸಂಯುಕ್ತಾಗೆ ಒಂದು ಸೆಲ್ಯೂಟ್ !!

“ಮಜಾ ಟಾಕೀಸ್” ನಲ್ಲಿ ಭುವನ್ -ಸಂಜನಾ ಮದುವೆ?!

ಮಜಾ ಟಾಕೀಸ್ : ಕನ್ನಡದ ಮನರಂಜನಾ ವಾಹಿನಿ ಕಲರ್ಸ್ ಕನ್ನಡದಲ್ಲಿ ಪ್ರತಿ ಶನಿವಾರ -ಭಾನುವಾರ ಮೂಡಿ ಬರುತ್ತಿರುವ ಯಶಸ್ವಿ ಕಾರ್ಯಕ್ರಮ. ಡಬಲ್ ಸೆಂಚುರಿ ಬಾರಿಸಿ ಇದೀಗ ಮೂರನೇ ಸೆಂಚುರಿ ಕಡೆಗೆ ಮಜಮಜವಾಗಿ ದೌಡಾಯಿಸುತ್ತಿದೆ. ಪಟ್ ಪಟ್ ಅಂತ ಮಾತಿನಲ್ಲೇ ಸಿಡಿಮದ್ದು ಸಿಡಿಸುವ ಮಾತಿನ ಮಲ್ಲ, ಟೈಮಿಂಗ್ ಕಿಂಗ್ ಸೃಜನ್ ಲೋಕೇಶ್ ಈ ವಾರದ ಮಜಾಟಾಕೀಸ್ ನಲ್ಲಿ ಮದುವೆ ಮಜಾ ತೋರಿಸೋದಿಕ್ಕೆ ಹೊರಟಿದ್ದಾರೆ.

_T7A6639 (1)

ಯಾರದೀ ಮದುವೆ?

ಕಡೆಯ ಕಡೆಯ ಕಂತಿನಲ್ಲಿ ಸಕ್ಕತ್ ಟಿಆರ್ಪಿ ಬಾಚಿಕೊಂಡ ಬಿಗ್ ಬಾಸ್ ಮನೆಯ ಪ್ರಥಮ್ , ಕಿರಿಕ್ ಕೀರ್ತಿ, ಮೋಹನ್ ,ಓಂಪ್ರಕಾಶ್, ಕಾವ್ಯಶಾಸ್ತ್ರಿ, ಕಾರುಣ್ಯ ಎಲ್ಲಾ ಸೇರಿ ನಗ್ತಾ ನಗ್ತಾ ಮದುವೆಯಲ್ಲಿ ಭಾಗಿಗಳಾದರು . ಬಿಗ್ ಬಾಸ್ ಮನೆಯಲ್ಲಿ ಲವ್ ಬರ್ಡ್ಸ್ ಅನ್ನಿಸಿಕೊಂಡಿದ್ದ ಭುವನ್ ಸಂಜನಾ ಮದುವೆಯಾದ ಜೋಡಿಗಳು.

ಮದುವೆ ಮಾಡಿಸಿದ್ದು ಯಾರು ?

_T7A6550

ಸೃಜನ್  ಮಜಾ ಟಾಕೀಸ್ ನ ಪ್ರತಿ ಸಂಚಿಕೆಯಲ್ಲ್ಲೂ ಟಿವಿ ,ಸಿನಿಮಾ ತಂಡಗಳನ್ನ ಕರೆಸಿ ವಿಭಿನ್ನ ರೀತಿಯಲ್ಲಿ ಕಾಮಿಡಿ ಕಟ್ಟಿ ನೋಡೋ ಅಭಿಮಾನಿಗಳು ಕಿಲಕಿಲ …ಕುಲುಕುಲು..ಹಹಹ…ಅಂತ ನಗೆ ಉಕ್ಕಿಸೋದನ್ನ ನೋಡ್ತಾನೆ ಇದ್ದೀರಿ . ಈ ವಾರದ ಸಂಚಿಕೆಯಲ್ಲಿ  ಬಿಗ್ ಬಾಸ್ ಮನೆಯಲ್ಲಿ ತರಹೇವಾರಿ ಆಟ ಆಡಿದವರನ್ನೆಲ್ಲ ಕಲೆಹಾಕಿ ಮದುವೆಯ ಮಜಾ ಕೊಡೋದಿಕ್ಕೆ ತಂಡದ  ತಯಾರಿ ಜೋರಾಗಿದೆ. ಭುವನ್ -ಸಂಜನಾ ಮದುವೆ  ಸೀನ್ ಕ್ರಿಯೇಟ್ ಮಾಡಿ ಪ್ರಪೋಸ್ ಮಾಡೋದ್ರಿಂದ ಹಿಡಿದು ಮಾಂಗಲ್ಯ ಕಟ್ಟೋವರೆಗೂ ನಾ ಹೇಳಿದ ಹಾಗೆ ಕೇಳ್ಬೇಕ್ ಅಂತ ಪೌರೋಹಿತ್ಯ ವಹಿಸಿರೋದು ಓಂ ಪ್ರಕಾಶ್

ಸುದ್ದಿ ಮೂಲಗಳ ಪ್ರಕಾರ ಭುವನ್ ಸಂಜನಾಗೆ ತಾಳಿ ಕಟ್ಟಿದ್ದು ನಿಜಾನೇ . ಮಾಂಗಲ್ಯ ಅಂದ್ರೆ ಆಟದ ವಸ್ತು ಅಲ್ಲವಲ್ಲ . ಹಿಂದಿಯ ಕೆಲವು ಕಾರ್ಯಕ್ರಮಗಳಲ್ಲಿ ತೆರೆಯ ಮೇಲೆ ಪಾಪ್ಯುಲರ್ ಆಗಿರೋ ಲವರ್ಸ್ ನ ಅಲ್ಲೇ ಮದುವೆ ಮಾಡಿಸಿರೋದು ಉಂಟು. ಅಲ್ಲಿ ಆಗಿದ್ದು ಮದುವೆಯ ನಾಟಕ ಅಷ್ಟೇ ಅಂತಾರೋ ಅಥವಾ ಮಾಂಗಲ್ಯ ಕಟ್ಟಿ ಆದ ಮೇಲೆ ಮುಗೀತಲ್ಲ ನಾವು ದಂಪತಿಗಳು ಅಂತಾರೋ ಭುವನ್-ಸಂಜನಾ ಕಾದು  ನೋಡಬೇಕು.

_T7A6577

ಮಜಾ ಟಾಕೀಸ್ ಭುವನ್ – ಸಂಜನಾ ಮದುವೆಯ  ತುಣುಕನ್ನ ಬಿಟ್ಟು ಕುತೂಹಲ ಹುಟ್ಟಿಸಿರೋದು ನಿಜ. ಹೊಗೊಳೊವ್ರು  ತೆಗಳೊವ್ರು ಎಲ್ಲರು ಈ ವಾರದ ಸಂಚಿಕೆ ಮೇಲೆ ಕಣ್ಣು ನೆಡೋದಂತೂ ಗ್ಯಾರಂಟಿ .

ಕಲರ್ಸ್‍ ಕನ್ನಡದಲ್ಲಿ ಫೆಬ್ರವರಿ 6ಕ್ಕೆ “ಪದ್ಮಾವತಿ” ಪುರ ಪ್ರವೇಶ !!

ಮನರಂಜನೆಯ ವಿಷಯ ಬಂದರೆ ಕನ್ನಡದ ಅಪ್ರತಿಮ ಮನೋರಂಜನಾ ಚಾನೆಲ್ ಕಲರ್ಸ್‍ಕನ್ನಡ ವೀಕ್ಷಕರನ್ನು ಯಾವತ್ತೂ ನಿರಾಸೆ ಮಾಡಿಲ್ಲ. ಬಿಗ್‍ಬಾಸ್‍ನಂತಹ ಬೃಹತ್‍ ರಿಯಾಲಿಟಿ ಶೋ ಬೆನ್ನಲ್ಲೇ `ರಾಧಾರಮಣ’ ಆರಂಭವಾಯಿತು. ಇದರ ಸೊಬಗನ್ನು ವೀಕ್ಷಕರು ಸವಿಯುತ್ತಿರುವಾಗಲೇ ಕಲರ್ಸ್‍ ಕನ್ನಡ ಇದೀಗ `ಪದ್ಮಾವತಿ’ ಎಂಬ ಇನ್ನೊಂದು ಹೊಸ ಕತೆಯೊಂದಿಗೆ ವೀಕ್ಷಕರ ಮುಂದೆ ಬರಲು ಸಿದ್ಧವಾಗಿದೆ. ಈ ಹೊಸ ಧಾರಾವಾಹಿ ಫೆಬ್ರವರಿ 6ರಿಂದ ರಾತ್ರಿ9:30ಕ್ಕೆ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗಲಿದೆ.

`ಪದ್ಮಾವತಿ’ ಧಾರಾವಾಹಿಯು ತುಳಸಿ ಮತ್ತು ಸಾಮ್ರಾಟನ ಸುತ್ತ ಸಾಗುವ ಕತೆ. ಕಥಾನಾಯಕಿ ತುಳಸಿ ಹಳ್ಳಿಯಲ್ಲಿ ಬೆಳೆದ ಮುಗ್ದಮನಸ್ಸಿನ ಸ್ಪುರದ್ರೂಪಿ ಹುಡುಗಿ. ಇಷ್ಟದೇವತೆ ಪದ್ಮಾವತಿಯೊಡನೆ ಅವಿನಾಭಾವ ಸಂಬಂಧ ಹೊಂದಿದತರುಣಿ. ಕಥಾನಾಯಕ ಸಾಮ್ರಾಟ ಒಬ್ಬ ಸೂಪರ್ ಸ್ಟಾರ್, ಹೃದಯವಂತ. ತನ್ನಕುಟುಂಬವನ್ನು ಪ್ರೀತಿಸುವಜವಾಬ್ದಾರಿಯ ಹುಡುಗ. ಆದರೆ ನಾಸ್ತಿಕ. ಈ ಆಸ್ತಿಕ ಮತ್ತು ನಾಸ್ತಿಕರ ಮಧ್ಯೆ ಬೆಳೆಯುವ ಸಂಬಂಧದಕತೆ ಪದ್ಮಾವತಿ.

parameshwar gundkalಕಲರ್ಸ್‍ಕನ್ನಡ ಹಾಗೂ ಸೂಪರ್ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರಗುಂಡ್ಕಲ್ ಹೇಳುವಂತೆ, “ನಮ್ಮ ವಾಹಿನಿಯು ಸಾಕಷ್ಟು ಹೊಸ ಕತೆಗಳನ್ನು ವೀಕ್ಷಕರಿಗೆ ಮನ ಮುಟ್ಟುವಂತೆ ತಲುಪಿಸಿದೆ. ಜನ್ಮಜನ್ಮಾಂತರದ ಸಂಬಂಧಗಳಲ್ಲಿ ನಂಬಿಕೆ ಇಡುವ, ದೇವರೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಮುಗ್ದಮನಸ್ಸಿನ ತುಳಸಿಯ ಕತೆ `ಪದ್ಮಾವತಿ’. ನಾವು ಇಲ್ಲಿಯವರೆಗೂ ನೀಡದ ರೀತಿಯ ಫ್ರೆಶ್‍ಕತೆಇದು. ಬಿಗ್‍ಬಾಸ್ ನಂತರ ಪ್ರೈಮ್‍ಟೈಮ್‍ನಲ್ಲಿ ಪ್ರಸಾರ ಮಾಡುವ `ಪದ್ಮಾವತಿ’ ಧಾರಾವಾಹಿಯನ್ನು ನಮ್ಮ ವೀಕ್ಷಕರು ಸ್ವೀಕರಿಸುತ್ತಾರೆ ಎಂಬುದು ನಮ್ಮ ನಂಬಿಕೆ.”

ವಾಹಿನಿಯ ಫಿಕ್ಷನ್ ಹೆಡ್ ಹಾರೀಸ್‍ ಅಭಿಪ್ರಾಯದಂತೆ, “ಕೆಲವು ಕತೆಗಳು ಸಾರ್ವಕಾಲಿಕ. ಉದಾಹರಣೆಗೆ ದೇವರ ಮೇಲಿನ ಭಕ್ತಿ, ಮದುವೆ ಮುಂತಾದ ಕತೆಗಳನ್ನು ಎಷ್ಟು ನೋಡಿದರೂ ಸಾಕಾಗುವುದಿಲ್ಲ. `ಪದ್ಮಾವತಿ’ ಅಂತಹ ಒಂದು ಸಾರ್ವಕಾಲಿಕ ಕತೆ. ಈ ಕತೆ ಸಿದ್ಧಪಡಿಸುವಾಗ ಮತ್ತು ಕತೆಯನ್ನು ಧಾರಾವಾಹಿಯನ್ನಾಗಿ ಮಾಡುವಾಗ ಕಲರ್ಸ್‍ ಕನ್ನಡದ ನಮ್ಮತಂಡ ಬಹಳ ಖುಷಿಪಟ್ಟಿದೆ. ನೋಡುವಾಗ ವೀಕ್ಷಕರು ಕೂಡಾ ಅಷ್ಟೇ ಖುಷಿಪಡುತ್ತಾರೆ ಎಂಬ ವಿಶ್ವಾಸ ನಮ್ಮದು.”
ಧಾರಾವಾಹಿಯೊಳಗೆ ಏನೇನಿದೆ ?

padmavathi serialಪದ್ಮಾವತಿ ದೇವಿಯ ಪರಮ ಭಕ್ತೆಯಾದ ತುಳಸಿ ತನ್ನ ಜೀವನದ ಪ್ರತಿಯೊಂದು ಹೆಜ್ಜೆಗೂ ದೇವಿಯ ಒಪ್ಪಿಗೆ ಬೇಡುವವಳು. ಇದು ಅವಳ ಮದುವೆಯ ವಿಷಯಕ್ಕೂ ಹೊರತಾಗಿಲ್ಲ. ಅವಳನ್ನು ನೋಡಲು ಸಾಕಷ್ಟು ಹುಡುಗರು ಬಂದು ಹೋದರೂ ಅದಕ್ಕೆ ಪದ್ಮಾವತಿಯಿಂದ ಒಪ್ಪಿಗೆ ದೊರೆಯದ ಕಾರಣ ತುಳಸಿಯ ಮದುವೆ ಒಂದು ಸವಾಲಾಗುತ್ತದೆ. ದೇವರನ್ನೇ ನಂಬುವ ಸಂಪ್ರದಾಯಸ್ಥ ಮನೆತನದ ಹುಡುಗಿ ತುಳಸಿ ಮತ್ತು ಸೂಪರ್ ಸ್ಟಾರ್‍ ಆಗಿರುವ ನಾಸ್ತಿಕ ಸಾಮ್ರಾಟ್ ಭೇಟಿಯಾಗುತ್ತಾರಾ? ಈ ವೈರುಧ್ಯ ಮನಸುಗಳ ಮಧ್ಯೆ ಸಂಬಂಧ ಬೆಳೆಯುತ್ತದೆಯೇ? ತುಳಸಿ-ಸಾಮ್ರಾಟ್ ಸಂಬಂಧಕ್ಕೆ ಪದ್ಮಾವತಿದೇವಿಯ ಒಪ್ಪಿಗೆ ಇದೆಯೇ? ತುಳಸಿಯ ಜೀವನಕ್ಕೆ ಆರಾಧ್ಯದೇವತೆ ಪದ್ಮಾವತಿ ಹೇಗೆ ದಾರಿ ದೀಪವಾಗುತ್ತಾಳೆ ಎಂಬುದರ ಸುತ್ತ ಹೆಣೆದಿರುವಕತೆ ಪದ್ಮಾವತಿ.

ಕಲರ್ಸ್‍ ಕನ್ನಡ ವಾಹಿನಿಯ ಕುಲವಧು, ಪುಟ್ಟಗೌರಿ ಮದುವೆ, ಕಿನ್ನರಿ, ಅಗ್ನಿಸಾಕ್ಷಿ, ಅಕ್ಕ, ಲಕ್ಷ್ಮೀ ಬಾರಮ್ಮ, ರಾಧಾರಮಣ, ಗಾಂಧರಿ, ಮನೆದೇವ್ರು, ಮಜಾಟಾಕೀಸ್, ಬಿಗ್‍ಬಾಸ್, ಸೂಪರ್ ಮಿನಿಟ್, ಅಶ್ವಿನಿ ನಕ್ಷತ್ರ, ಚರಣದಾಸಿ, ಯಶೋಧೆ ಮೊದಲಾದ ಜನಪ್ರಿಯ ಕಾರ್ಯಕ್ರಮಗಳ ಸಾಲಿಗೆ ‘ಪದ್ಮಾವತಿ’ ಹೊಸದಾಗಿ ಸೇರ್ಪಡೆಯಾಗಲಿದೆ.

ಕಲಾವಿದರ ಬಳಗ:
ದೀಪ್ತಿ, ತ್ರಿವಿಕ್ರಮ, ಜಯಂತಿಅಮ್ಮ, ಚಿತ್ರ ಶೆಣೈ, ಅಶೋಕ್‍ಜಂಬೆ, ಅರುಣ್ ಬಾಲರಾಜ ಮೊದಲಾದವರು

ತಾಂತ್ರಿಕವರ್ಗ:-
ಕತೆ : ಕಲರ್ಸ್‍ಕನ್ನಡ ಫಿಕ್ಷನ್‍ತಂಡ;
ಲೇಖಕರು : ಮಂಜುನಾಥ್ ಭಟ್
ನಿರ್ಮಾಣ: ಸಾಯಿ ನಿರ್ಮಲಾ ಪ್ರೊಡಕ್ಷನ್
ನಿರ್ದೇಶಕರು: ನಿರ್ಮಲಾಚನ್ನಪ್ಪ ಮತ್ತುತಂಡ;
ಛಾಯಾಚಿತ್ರಗ್ರಾಹಕ: ಸತ್ಯ/ಸೃಜನ್/ನಟರಾಜ್ ಮದ್ದಲ/ವಿಷ್ಣು/ರವಿ ಕಿಶೋರ್
ಸಂಕಲನ: ರಾಕೆಶ್‍ಅರೂರ್/ಕೃಷ್ಣ
ಪ್ರೊಡಕ್ಷನ್ ಮ್ಯಾನೆಜರ್: ಅನಿಲ್
ಸಾಹಿತ್ಯ: ಜೋಗಿ/ ನಾಗೇಂದ್ರ  ಪ್ರಸಾದ್
ಸಂಗೀತ: ಪೂರ್ಣಚಂದ್ರ ತೇಜಸ್ವಿ/ ಎ.ಪಿ.ಅರ್ಜುನ್/ವೈಭವ್
ಹಾಡಿದವರು: ನವೀನ್

ಕಾರ್ಯಕ್ರಮ: ಪದ್ಮಾವತಿ
ಪ್ರಸಾರ ದಿನ: ಫೆಬ್ರವರಿ 6
ಪ್ರಸಾರ ಸಮಯ: ಸಂಜೆ 9:30 ಗಂಟೆಗೆ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ

‘ಬಿಗ್‍ಬಾಸ್‍”ನಲ್ಲಿ ಕಿರಿಕ್ ಕೀರ್ತಿಗೆ ವಂಚನೆ…?

ಬಿಗ್ ಬಾಸ್ ಮನೆಯಲ್ಲಿ ಕೀರ್ತಿಗೆ ಮೋಸ? ಈ ಪ್ರಶ್ನೆ ಕರ್ನಾಟಕದ ಲಕ್ಷಾಂತರ ಜನರ ಪ್ರಶ್ನೆಯಾಗಿದೆ.. ನಿನ್ನೆಯಷ್ಟೇ ಮುಕ್ತಾಯವಾದ ಬಿಗ್‍ಬಾಸ್ ಸೀಸನ್ 4ನೇ ಆವೃತ್ತಿಯ ಕಾರ್ಯಕ್ರಮದ ಅಂತಿಮ ಹಣಾಹಣಿಯಲ್ಲಿ  ಪ್ರಥಮ್ ಬಿಗ್‍ಬಾಸ್ ಕೃಪೆಗೆ ಒಳಗಾಗಿದ್ದಾನೆ.. ಆದ್ರೆ ಆತನ ನಡಾವಳಿಗಳು ಮನೆಯ ಉಳಿದ ಸ್ಪರ್ಧಿಗಳಿಗೆ ನುಂಗಲಾರದ ತುತ್ತಾಗಿತ್ತು.. ಎಲ್ಲರೂ ಆತನ ವರ್ತನೆಯ ವಿರುದ್ಧ ಕಿಡಿಕಾರಿದ್ರು.. ಮೋಹನ್, ಮಾಳವಿಕಾ, ರೇಖಾ, ಕೀರ್ತಿಕುಮಾರ್,  ಪ್ರಥಮ್ ಅಂತಿಮ ಘಟ್ಟ ತಲುಪಿದ್ರು..

pratham keerti 1

ಅಂತಿಮ ಹಣಾಹಣಿಯಲ್ಲಿ ನಟ ಮೋಹನ್ ಹಾಗೂ ಮಾಳವಿಕಾ ಮೊದಲಿಗರಾಗಿ ಮನೆಯಿಂದ ಹೊರಬಂದ ಬಳಿಕ ಉಳಿದ ಮೂವರು ಘಟಾನುಘಟಿಯಲ್ಲಿ ಕೀರ್ತಿ ಕುಮಾರ್ ಸೇಫಾಗಿದ್ದಾರೆ ಅಂತಾ ನಟ ಸುದೀಪ್ ಘೋಷಣೆ ಮಾಡಿದ್ರು.. ಬಳಿಕ ಉಳಿದ ಇಬ್ಬರು ಪ್ರಥಮ್ ಹಾಗೂ ರೇಖಾ.. ಈ ಇಬ್ಬರಲ್ಲಿ ನಟಿ ರೇಖಾ ಕೂಡ ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದ್ರು.. ಉಳಿದ ಇಬ್ಬರಲ್ಲಿ ಪ್ರಥಮ್ ಗೆಲುವು ಸಾಧಿಸಿದ್ರೆ, ಕೀರ್ತಿ ಕುಮಾರ್ ರನ್ನರ್ ಅಪ್ ಆದ್ರು..

ಆದ್ರೆ ಬಿಗ್‍ಬಾಸ್‍ನ ಎಲ್ಲಾ ಸ್ಪರ್ಧಿಗಳು ಕೀರ್ತಿಕುಮಾರ್ ಗೆಲ್ಲಲು ಅರ್ಹರು ಅಂತಾ ಹೇಳಿದ್ರು.. ಆದ್ರೆ ಮನೆಯಿಂದ ಹೊರಗಡೆ ಕರೆದುಕೊಂಡು ಬಂದ ಸುದೀಪ್, ಪ್ರಥಮ್ ವಿನ್ನರ್ ಅಂತಾ ಘೋಷಣೆ ಮಾಡಿದ್ರು.. ಎಲ್ಲರ ಮುಖಗಳು ಬಾಡಿದ್ರೆ, ಗೆಲುವಿನ ಮಂದಹಾಸ ಬೀರಿದ ಪ್ರಥಮ್ ಬಟ್ಟೆ ಬಿಚ್ಚಿ ಕುಣಿದು ಕುಪ್ಪಳಿಸುವ ಮೂಲಕ ವೇದಿಕೆ ಮೇಲೂ ತನ್ನ ಹುಚ್ಚಾಟ ಪ್ರದರ್ಶನ ಮಾಡಿದ್ದನ್ನು ನೋಡಿದ ಸುದೀಪ್, ಹೇ.. ಹೇ.. ಅಂತಾ ಕೂಗಿದ್ರು.. ಬಟ್ಟೆ ಬಿಚ್ಚಿ ಎಸೆದ ಪ್ರಥಮ್, ಕೊನೆಗೆ ಬೆಳಕಿನಲ್ಲಿ ಬಟ್ಟೆ ಸಿಗದೆ ಹುಡುಕಾಟ ನಡೆಸಿದ್ದು ಹಾಸ್ಯಕ್ಕೆ ಒಳಗಾಯ್ತು..

big boss finale 1

ಆದ್ರೆ ಬಿಗ್‍ಬಾಸ್ ವಿನ್ನರ್ ಆಗಿ ಪ್ರಥಮ್ ಆಯ್ಕೆಯಾಗಿದ್ದು ಸರಿಯಾಗಿಲ್ಲ ಅನ್ನೋದು ಸುದೀಪ್ ಅವರ ಮಾತಲ್ಲೇ ಸ್ಪಷ್ಟವಾಗಿತ್ತು.. ಯಾಕಂದ್ರೆ ನಿಮಗೆ ಗೆಲುವು ಸಿಗಬೇಕಿತ್ತು.. ಆದ್ರೆ ನೀವೂ ಕೂಡ ಗೆದ್ದಿದ್ದೀರಿ.. ನಿಮಗೆ ಹಣ ಸಿಗದೆ ಇರಬಹುದು ಆದ್ರೆ ನಾನು ನನ್ನ ಸ್ವಂತ ಹಣದಿಂದ ನಿಮಗೆ 10 ಲಕ್ಷ ರೂಪಾಯಿಯನ್ನು ಕೊಡುತ್ತೇನೆ ಅಂತಾ ಘೋಷಣೆ ಮಾಡಿದ್ರು.. ಸುದೀಪ್ ಅವರ ನಿರ್ಧಾರ ಮೆಚ್ಚುಗೆಗೆ ಪಾತ್ರವಾಯ್ತು..

ಆದ್ರೆ ಬಿಗ್‍ಬಾಸ್ ಗೆಲುವಿಗೆ ಅರ್ಹ ವ್ಯಕ್ತಿತ್ವ ಹೊಂದಿದ್ದ ಕೀರ್ತಿ ಕುಮಾರ್‍ಗೆ ವಂಚಿಸಿ, ಪ್ರಥಮ್‍ರನ್ನ ಆಯ್ಕೆ ಮಾಡಿದ್ದಾರೆ ಅನ್ನೋ ಕೂಗು ಕೇಳಿ ಬಂದಿದೆ.. ಇದಕ್ಕೆ ಕಾರಣ ಅಂದ್ರೆ ಹಣ.. ಮೂಲಗಳ ಪ್ರಕಾರ ಬಿಗ್‍ಬಾಸ್‍ನ ಎಲ್ಲಾ ಸ್ಪರ್ಧಿಗಳಿಗೂ ವಾರಕ್ಕೆ ಇಂತಿಷ್ಟು ಹಣ ಎಂದು ವಂತಿಗೆ ನಿಗದಿ ಮಾಡಲಾಗಿತ್ತು.. ಆದ್ರೆ ಪ್ರಥಮ್‍ಗೆ ಮಾತ್ರ ಯಾವುದೇ ಹಣ ನಿಗದಿ ಮಾಡಿರಲಿಲ್ಲ.. ನನ್ನನ್ನು ಬಿಗ್‍ಬಾಸ್ ಮನೆಯೊಳಗೆ ಕಳುಹಿಸಿ ಯಾವುದೇ ಹಣ ಬೇಕಿಲ್ಲ ಅಂತಾ ಪ್ರಥಮ್ ಪಟ್ಟು ಹಿಡಿದಿದ್ರಂತೆ.. ಹೀಗಾಗಿ ಯಾವುದೇ ಹಣ ನೀಡುವ ಬಗ್ಗೆ ಒಪ್ಪಂದ ಮಾಡಿಕೊಂಡಿರಲಿಲ್ಲ..

pratham lordಪ್ರಥಮ್‍ನ ತರಲೇ ಆಟಗಳ ಯಾವಾಗ ಜನರನ್ನು ಹುಚ್ಚೆಬ್ಬಿಲು ಶುರುವಾಯ್ತೋ ಆಗ ಕೊನೆಯವರೆಗೂ ಟಿಆರ್‍ಪಿಗಾಗಿ ಪ್ರಥಮ್‍ನನ್ನು ಉಳಿಸಿಕೊಳ್ಳಲಾಗ್ತಿತ್ತು.. ಹೀಗಾಗಿ ಕೊನೆಯವರೆಗೂ ಉಳಿಸಿಕೊಂಡ ಕಾರಣಕ್ಕಾದರೂ ಇಂತಿಷ್ಟು ಹಣವನ್ನು ಪ್ರಥಮ್‍ಗೆ ನೀಡುವ ಅನಿವಾರ್ಯತೆ ಉಂಟಾಯ್ತು.. ಪ್ರಥಮ್‍ನನ್ನು ರನ್ನರ್ ಅಪ್ ಮಾಡಿ ಕೀರ್ತಿಕುಮಾರ್‍ಗೆ ಗೆಲುವು ನೀಡಿದ್ರೆ, ಕೀರ್ತಿಕುಮಾರ್‍ಗೆ 50 ಲಕ್ಷ ಬಹುಮಾನದ ಹಣದ ಜೊತೆಗೆ ನಿಗದಿಯಾಗಿದ್ದ ಗೌರವ ಧನ ಕೊಡಬೇಕಾಗಿತ್ತು.. ಜೊತೆಗೆ ಪ್ರಥಮ್‍ಗೂ ಇಂತಿಷ್ಟು ಹಣ ಎಂದಾದರೂ ಪೇಮೆಂಟ್ ಮಾಡಬೇಕಿತ್ತು.. ಇದು ಕಂಪನಿ ಮೇಲೆ ಹೆಚ್ಚುವರಿ ಒತ್ತಡ ತರುವ ಹಿನ್ನೆಲೆಯಲ್ಲಿ ಕೀರ್ತಿಯನ್ನು ಸೋಲಿಸಿ, ಪ್ರಥಮ್‍ನನ್ನು ಗೆಲ್ಲಿಸಿದ್ರು ಅನ್ನೋ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ..

ಅದೇನೇ ಇರಲಿ, ವಾರದಲ್ಲಿ ಒಂದೆರಡು ಬಾರಿ ಪ್ರಥಮ್‍ನ ತರಲೇ ಮಾತು, ಅಹಂಕಾರದ ವರ್ತನೆಯನ್ನು ನೋಡಿ ಮಜಾ ತೆಗೆದುಕೊಂಡ ಫೇಸ್‍ಬುಕ್ ನ  ಬಹುತೇಕ ಮಂದಿ ಪ್ರಥಮ್‍ನನ್ನು ಬೆಂಬಲಿಸಿದ್ದು ನಿಜ.. ಆದ್ರೆ ಗ್ರಾಮೀಣ ಭಾಗದಲ್ಲಿ ಅದರಲ್ಲೂ ಹಳ್ಳಿಯ ಗಲ್ಲಿ ಗಲ್ಲಿಗಳಲ್ಲಿ ಜನ ಕೀರ್ತಿ ಅಥವಾ ರೇಖಾ ಗೆಲ್ಲಬೇಕಿತ್ತು ಅನ್ನೋ ಮಾತು ಕೇಳಿ ಬರುತ್ತಿದೆ.. ಅದು ನಿಜಾ ಕೂಡ..

ಸರ್ವಸಮರ್ಥ, ನಾಗಮಂಗಲ

“ವಾರಸ್ದಾರ”ನಾಗಿ ಫೆಬ್ರವರಿ 8ಕ್ಕೆ ಬರುತ್ತಿದ್ದಾಳೆ “ಸುದೀಪ್” ಮೆಚ್ಚಿನ ಮಣಿ “ಚಿತ್ರಾಲಿ”

ಕಾಮಿಡಿ ಕಿಲಾಡಿಗಳು, ‘ಸರಿಗಮಪ’ದಂಥ ಕಾರ್ಯಕ್ರಮಗಳು, ಧಾರಾವಾಹಿಗಳ ಮೂಲಕ ಅಪಾರ ವೀಕ್ಷಕರನ್ನು ತಲುಪಿದೆ  ZEE ಕನ್ನಡ ವಾಹಿನಿ. ಕಳೆದ ಡಿಸೆಂಬರ್ ತಿಂಗಳಿನಿಂದ ಪ್ರಾರಂಭವಾದ ಕಿಚ್ಚ ಸುದೀಪ್ ನಿರ್ಮಾಣದ “ವಾರಸ್ದಾರ” ಜನಪ್ರಿಯತೆಯನ್ನು ಬಾಚಿಕೊಳ್ಳುತ್ತಿದೆ. ಇದಕ್ಕೆ ಮತ್ತಷ್ಟು ಮೆರಗು ತುಂಬುವ ಪ್ರಮುಖ ಪಾತ್ರವೊಂದರ ಪ್ರವೇಶವಾಗಲಿದೆ  ಇದೇ ತಿಂಗಳ 8ಕ್ಕೆ.

0d7a0013

ಡ್ರಾಮಾ ಜೂನಿಯರ್ಸ್ ನಲ್ಲಿ ನೋಡುಗರ ಮನಸೆಳೆದಿದ್ದ ಮುದ್ದಿನ ಬೊಂಬೆ ಚಿತ್ರಾಲಿ ಫೆಬ್ರವರಿ ಎಂಟರಂದು “ವಾರಸ್ದಾರ” ಮೂಲಕ ಎಲ್ಲರ ಮನೆಗೆ ಬರುತ್ತಿದ್ದಾಳೆ.ಅಭಿನಯ ಚಕ್ರವರ್ತಿ ಸುದೀಪ್ ಮೆಚ್ಚಿಕೊಂಡ ಚಿನಕುರಳಿ ಐದು ವರ್ಷದ ಚಿತ್ರಾಲಿ ತನ್ನ ಅಭಿನಯದಿಂದ  ಇನ್ನೆಷ್ಟು ಮಂದಿಗೆ ಮೋಡಿಮಾಡಲಿದ್ದಾಳೋ ನೋಡಬೇಕು. 

05

ಅಂದಹಾಗೆ “ವಾರಸ್ದಾರ” ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 7.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. 

ಇದು ಕಿರುತೆರೆ ಧಾರಾವಾಹಿಯೇ ಆದರೂ ಬಹುತೇಕರು ಸಿನಿಮಾ ಕಲಾವಿದರು , ಹಾಗು ಸಿನಿಮಾ  ತಂತ್ರಜ್ಞರು ಸುದೀಪ್ ಮೇಲಿನ ಅಭಿಮಾನದಿಂದ  “ವಾರಸ್ದಾರ” ದಲ್ಲಿ ಭಾಗವಹಿಸಿದ್ದಾರೆ  ಒಂದು ಸಿನಿಮಾ ರೀತಿಯಲ್ಲೇ ನಿರ್ಮಾಣವಾಗುತ್ತಿರುವ “ವಾರಸ್ದಾರ” ಹಲವು ಪ್ರಥಮಗಳಿಗೆ ಕಾರಣವಾಗಿದೆ.

ನಟಿ ಯಜ್ಞಾ ಶೆಟ್ಟಿ ಮೊದಲ ಬಾರಿಗೆ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ನಟ ರವಿಚೇತನ್ , ವೀಣಾ ಪೊನ್ನಪ್ಪ, ರಮೇಶ್ ಪಂಡಿತ್, ವೀಣಾ ವೆಂಕಟೇಶ್, ರಾಮ್ ಸೇರಿದಂತೆ ಹಲವಾರು ಕಲಾವಿದರ ಸಂಗಮವೇ ಇಲ್ಲಿದೆ.

ಮಗಳನ್ನ ಮಗಳೆಂದು ಹೇಳದೆ ಮಗನೆಂದು ಹೇಳುತ್ತಾ ಗಂಡು ಮಗುವಿನಂತೆ ತೋರಿಸುತ್ತಾ ಬೆಳೆಸುವ ಭವಾನಿಯ ಪಾತ್ರದಲ್ಲಿ ಯಜ್ಞಾ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಮಗನಾಗಿ ಕಾಣಿಸಿಕೊಳ್ಳಲಿರುವ  ಚಿತ್ರಾಲಿಯನ್ನು ನೋಡಲಿಕ್ಕೆ ಅಭಿಮಾನಿಗಳು  “ವಾರಸ್ದಾರ”ನ ಕಡೆಗೆ ಕಣ್ಣು ನೆಟ್ಟಿರುವುದು  ಸುಳ್ಳಲ್ಲ.

Like Us, Follow Us !

120,431FansLike
1,826FollowersFollow
1,573FollowersFollow
4,315SubscribersSubscribe

Trending This Week