31 C
Bangalore, IN
Wednesday, March 21, 2018
Home ಸಿನಿಮಾ ನ್ಯೂಸ್ ಟಿವಿ ನ್ಯೂಸ್

ಟಿವಿ ನ್ಯೂಸ್

Get Latest Kannada TV News, News On Kannada TV Serials

JK ಡೋಂಟ್ ಕೇರ್ ವ್ಯಕ್ತಿತ್ವಕ್ಕೆ ಕಾರಣ ಇದು..!!

ಸ್ಯಾಂಡಲ್ ವುಡ್ ಹಾಗೂ ಸೀರಿಯಲ್ ನಲ್ಲೂ  ತನ್ನದೇ ಆದ ಮ್ಯಾನರಿಸಂನಿಂದ ಹೆಸರುವಾಸಿಯಾಗಿರುವ ಜೆಕೆ ಅಲಿಯಾಸ್ ಜಯರಾಮ್ ಕಾರ್ತಿಕ್ ಧಿಮಾಕಿನ ಮನುಷ್ಯ ಅನ್ನೋದು ಕೆಲವರ ಮಾತು. ಬಿಗ್ ಬಾಸ್ ಮನೆಯಲ್ಲೂ ಕೂಡ ಕೆಲವರಿಗೆ ಜೆಕೆ ವರ್ತನೆ ಕಿರಿಕಿರಿ ಉಂಟು ಮಾಡಿರೋದು ಸುಳ್ಳಲ್ಲ. ಯಾರ  ಜೊತೆಯಲ್ಲೂ  ಜಯರಾಮ್ ಕಾರ್ತಿಕ್ ಅಷ್ಟು ಸುಲಭವಾಗಿ ಬೆರಯೋದಿಲ್ಲ. ಮನೆ ಸಮಸ್ಯೆ ಬಗ್ಗೆ ಚರ್ಚೆಯನ್ನೂ ಮಾಡಲ್ಲ. ಕೇಳಿದ ಮಾತಿಗಷ್ಟೇ ಉತ್ತರ ಕೊಟ್ಟು ಸುಮ್ಮನಾಗ್ತಾರೆ.
ಜಯರಾಮ್ ಕಾರ್ತಿಕ್ ಯಾಕೆ ಹೀಗೆ ಅನ್ನೋದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ.  ಕಾರ್ತಿಕ್ ಹೆಸರಿನ ಹಿಂದಿರುವ ಜಯರಾಮ್, ಜೆಕೆ ಅವರ ತಂದೆಯ ಹೆಸರು .ಕಾರ್ತಿಕ್ ಅನ್ನೋದು ಜೆಕೆ ಹೆಸರು. ತನ್ನ ತಂದೆ ಹೆಸರನ್ನು ಸೇರಿಸಿಕೊಂಡಿರುವ ಜಯರಾಮ್ ಕಾರ್ತಿಕ್, ತಮ್ಮ ತಂದೆ ಹೆಸರಿನ ಜೊತೆಗೆ ತಂದೆಯ ಗುಣವನ್ನು ಹಾಗೇ ಉಳಿಸಿಕೊಂಡಿದ್ದಾರೆ. ಅದನ್ನೇ ಪಾಲಿಸುತ್ತಿದ್ದಾರೆ.
JK ಅವರ ತಂದೆ ಜಯರಾಮ್ ಎಲ್ಲರ ಜೊತೆ ಬೆರೆಯುವ ಗುಣ ಹೊಂದಿಲ್ವಾ ಅನ್ನೋದು ನಿಮ್ಮ ಪ್ರಶ್ನೆ   ಆಗಿದ್ರೆ, ನಮ್ಮ ಉತ್ತರ ಎಲ್ಲರ ಜೊತೆ ಮಿಂಗಲ್ ಆಗುವ ಗುಣ ಜಯರಾಮ್ ಅವರದ್ದು. ಯಾಕಂದ್ರೆ, ಜಯರಾಮ್ ಅವರು ಬಿಗ್ ಬಾಸ್ ಮನೆಯೊಳಕ್ಕೆ ಎಂಟ್ರಿ ಕೊಡ್ತಿದ್ದ ಹಾಗೆ ಯಾವುದೇ ಬಿಗುಮಾನ ಇಲ್ಲದೆ ಎಲ್ಲರನ್ನು ಮಾತನಾಡಿಸಿಕೊಂಡು ಬಂದ್ರು. ಅದೂ ಅಲ್ಲದೇ ಎಲ್ಲರೂ ಸ್ಟ್ಯಾಚ್ಯೂ ಸ್ಥಿತಿಯಲ್ಲಿ ಇದ್ದರೂ ಕೂಡ ತಾವೇ ಎಲ್ಲರನ್ನು ಮಾತನಾಡಿಸಿದ್ರು. ಹಾಗಾದ್ರೆ ಜೆಕೆಯಲ್ಲಿ ಇರುವ ಡೋಂಟ್ ಕೇರ್ ಮಾಸ್ಟರ್ ಗುಣ ಯಾರದ್ದು ಅಂದ್ರೆ ಅದೂ ಕೂಡ ಜಯರಾಮ್ ಅವರದ್ದೇ.. ಯಾಕಂದ್ರೆ, ಜಯರಾಮ್ ಅವರಿಗೆ ಬಿಗ್ ಬಾಸ್ ಮನೆಯಿಂದ ಹೊರಗೆ ಬರಲು ತಿಳಿಸಿದ ಮೇಲೂ ಅವರು ಮಾತನಾಡುತ್ತಾ ನಿಂತಿದ್ರು. ಆಗ ಮನೆಯಿಂದ ಹೋಗಬೇಕು ಎಂದು ಜ್ಞಾಪಿಸಿದ್ರೆ, ಹೇ.. ಬಿಡೋ ಅವರೇನು ಕರೆಯುತ್ತಾರೆ ಅಂತ ನೇರವಾಗಿಯೇ ತಿರಸ್ಕರಿಸಿದರು.. ಇದೇ ಅಲ್ವಾ ಅಪ್ಪನಂತೆ ಮಗ ಅಂದ್ರೆ..

ಪ್ರಥಮ್ ಗೆಲುವು ಹುಟ್ಟ್ಟಿಸಿದ ತಲ್ಲಣ

“ಬಿಗ್ ಬಾಸ್ “
Psychology ವಿದ್ಯಾರ್ಥಿಯಾಗಿ ನಾನು ಮಾನವ-ಭಾವನೆಗಳ, ನಡುವಳಿಕೆಗಳ ಸೂಕ್ಷ್ಮ ಅಧ್ಯಯನಕ್ಕಾಗಿ ಅತ್ಯಂತ ಕುತೂಹಲದಿಂದ ನೋಡಿದ, ನೋಡುವ ಕಾರ್ಯಕ್ರಮ. ಅಲ್ಲಿನ ಅನೇಕ housemateಗಳೇ ಹೇಳಿಕೊಳ್ಳುವಂತೆ ನನ್ನಮಟ್ಟಿಗೂ ಇದೊಂದು “ಬದುಕಿನೊಳಗೊಂದು ಬದುಕು”. ನಿತ್ಯಜೀವನದ ಒಡನಾಟದಲ್ಲಿ ಎದುರಾಗಬಹುದಾದ  ಎಲ್ಲ ಬಗೆಯ ಸಂದರ್ಭಗಳನ್ನು ಆ ಕ್ಷಣಕ್ಕೆ ಒದಗುವ ಅನುಕೂಲಗಳು ಮತ್ತು ಸವಲತ್ತುಗಳನ್ನು ಉಪಯೋಗಿಸಿಕೊಂಡು ಎಷ್ಟರಮಟ್ಟಿಗೆ ನಿಭಾಯಿಸಬಲ್ಲೆವು ಎಂಬುದನ್ನು ನಮಗೆ ನಾವೇ ಸಿಂಧುವಾಗಿಸಿಕೊಳ್ಳಬಲ್ಲ ಒಂದು opportunity!
ಕಾಲಕಾಲಕ್ಕೆ entry ಕೊಟ್ಟು exit ಆಗುವ ಕಾವ್ಯ, ವಾಣಿಶ್ರೀ, ಚೈತ್ರ, ದೊ.ಗಣೇಶನಂಥಾ ನಗಣ್ಯ characters..
ಜೊತೆಗೇ ಇದ್ದಂತಿದ್ದು ನಿಲುವು ತೆಗೆದುಕೊಳ್ಳಲರಿಯದೆ, ಬೆನ್ನಹಿಂದೆ losetalks ಮಾಡುವ ಮೋಹನ್ ಥರದ ಮನಸ್ಸುಗಳು..
ಕತ್ತೆ ಥರ ದುಡಿದೂ footage ತೊಗೋಳಕ್ಕೆ ಬರದ ಶಾಲಿನಿಯಂಥ ಅಪ್ಪಟ ಮನಸಿನ emotional foolಗಳು..
bigboss-shalinibigboss-malavika
ಜನರ ಸೇವೆಯೇ ಜನಾರ್ಧನ ಸೇವೆ, ನಾನಿರೋದೆ ಸಾರ್ವಜನಿಕರಿಗೆ ಜೀವ ಕೊಡೋದಕ್ಕೆ ಅನ್ನೋಥರ ಕೇವಲ pose ಮಾತ್ರ ಕೊಡೋ ಮಾಳವಿಕರಂಥ ಮಳ್ಳಿ ಮನಸುಗಳು..
ಇನ್ನೂ ಹುಚ್ಚುಮನಸಿನ ಹತ್ತಾರು ಗುಣವಿಶೇಷಣಗಳ ಜೊತೆ ನಾನೂ ನೀವೂ ನಿತ್ಯದ ಬದುಕಲ್ಲಿ ಏಗೋದು ಸತ್ಯ. ತಾನೇ??
ಈಗ ಈ ಬಿಗ್’ಬಾಸ್ ಅನ್ನೋ reality show ಕೊನೆಯ ಹಂತ ತಲುಪಿದ 3 characters ನೋಡಿ. ಮೇಲೆ ಹೇಳಿದ, ಹೇಳದ ಎಲ್ಲ ಬಗೆಯ ಅಷ್ಟವಕ್ರಗಳನ್ನು ಚಾಣಾಕ್ಷರಾಗಿ ಎದುರಿಸಬೇಕಾದರೆ, ಗೆದ್ದ ಮೂವರಲ್ಲಿ ಯಾರ ನೀತಿ ಅನುಸರಿಸಬೇಕು?
ಇದಮಿತ್ತಂ ಅಂತ ಎಲ್ಲರನ್ನ ಎಲ್ಲವನ್ನ ರೇಖ ಥರ ಶಾಂತವಾಗಿ ಎದುರಿಸ್ಬೇಕ? ಸೋಲು ಕಟ್ಟಿಟ್ಟ ಬುತ್ತಿ!
ಕರ್ಮಣ್ಯೇವಾಧಿಕಾರಸ್ತೆ….. ಅಂತ ನಿರೀಕ್ಷೆ ಬಿಟ್ಟು ಬಂದದ್ದೆಲ್ಲಾ ಬರಲಿ ಅಂತ ಕೀರ್ತಿ ಥರ ತೊಗೋಬೇಕ? ಅಸಮಾಧಾನ ನಿರಾಸೆ ನಿಮ್ಮದು ಸುಳ್ಳಲ್ಲ!
bigboss-pratham
ಅದೇನಾದ್ರೂ ಆಗ್ಲಿ, ಇನ್ನೊಬ್ಬ ನೋವಿನಿಂದ ಸತ್ಹೋಗ್ಲಿ, ನನಗೆ ಮಾತ್ರ ಕಂಡ ಮತ್ತು ನನಗೆ ಬೇಕಾದ ಸತ್ಯ ತಾನೇ ಹೇಳ್ತಿರೋದು, why should I care?! ಅಂತ ದಾಷ್ಟೀಕವಾಗಿ, hight of immaturity ಹಾವಭಾವಗಳನ್ನ ಪ್ರದರ್ಶಿಸ್ತಾ, ನಾನೇ right ಅಂತ ಬದುಕಿಬಿಡ್ಬೇಕ?
ಗೊತ್ತಿಲ್ಲ ಏನು ಹೇಳ್ಬೇಕಂತ!
ಇದು ಗೆಲುವಾ?! ಇದು ಬದುಕುವ ಪರಿಯಾ?!
ನಂಗ್ಯಾಕೋ ನಾನೇ ಸರಿಯಿಲ್ಲ ಅನ್ನಿಸೋಕೆ ಶುರುವಿಟ್ಟಿದೆ, ಬಹುಜನರ ಒಲವಿನ ದಿಕ್ಕು ನೋಡಿ!
ಯೋಚಿಸಿ…
ಅಯೋಗ್ಯ..
ನಿನ್ನ ಜನ್ಮಕ್ಕಿಷ್ಟ್ ಬೆಂಕಿಹಾಕ..
………..
ಇಂಥ ನಿಯಂತ್ರಣ ತಪ್ಪಿದ ಮಾತುಗಳು ಪದೇಪದೇ ಆಡುವಂಥ ಮನುಷ್ಯ, ತಪ್ ಮಾಡಿದೀನಿ ಕ್ಷಮಿಸಿಬಿಡಿ ಅಂದ್ರೆ ಎಷ್ಟು ಬಾರಿ ಕ್ಷಮಿಸಬಹುದು? ಹೆತ್ತವರನ್ನೇ ಗೌರವಿಸಲು ಗೊತ್ತಿಲ್ಲದವ ಪ್ರಪಂಚವನ್ನ ಗೌರವಿಸಲು ಸಾಧ್ಯವಾ?! ಆಟದ ಮಟ್ಟಿಗೆ ಸೋಲು ಗೆಲುವು ನಿಯಾಮಕವೂ ಹೌದು ನಿರ್ಣಾಯಕವೂ ಹೌದು. ಆದ್ದರ್ರೆ….
ಜೀವನವನ್ನ ಒಂದು ಪಾಠಶಾಲೆ, ನಾವೆಲ್ಲ ನಿತ್ಯ ಕಲಿವವರು ಅಂತ consider ಮಾಡೋದಾದ್ರೆ, ಜೀವನ second chance ಕೊಡೋದು ತುಂಬ ವಿರಳ. ಸಾಂಕೇತಿಕವಾಗಿ ಗೆದ್ದೋರು ಚೇತರಿಸಿಕೊಂಡು ತಿದ್ದಿಕೊಂಡ್ರೆ ಉತ್ತಮ.
ಇಂದಿನ ಬಹುಜನಾದೇಶ ಸಾಗುತ್ತಿರುವ ನಿಟ್ಟು ಮತ್ತು ಕೇವಲ ಮತ್ತು ಕೇವಲ TRPಗಾಗಿ ಮಾತ್ರ ಸಮಾಜವಿಮುಖೀ ಕೆಲಸಕ್ತೂ ಸೈ ಎನ್ನುತ್ತಿರುವ ಮಾಧ್ಯಮದ ನಡೆ ನನ್ನ ಮಟ್ಟಿಗಂತೂ ಆತಂಕಕಾರಿ!
ಏನಂತೀರ?
ನನಗಂತೂ ಇದು ಬದುಕಿನ  ಮತ್ತೊಂದು ಕಲಿಕೆ.
asha vishwanath 1
-ಆಶಾ ಆರ್.ವಿಶ್ವನಾಥ್

ಒಳ್ಳೆ ಹುಡುಗ ಪ್ರಥಮ್ ಹೊಸ ಅವತಾರದಲ್ಲಿ ?

ಬಿಗ್ ಬಾಸ್ ಪ್ರಥಮ್ ಈಗ ಮಿರ್ ..ಅಂತ ಮಿಂಚ್ ಕೊಂಡು ಹೊಸ ಅಂಗಿ ಹಾಕ್ಕೊಂಡು ಫೋಟೋ ಶೂಟ್ ಮುಗಿಸಿಕೊಂಡಿದ್ದಾರೆ . ಅದೇನ್ ಪಿಕ್ಚರ್ ಗಾ ? ಅಂದ್ರೆ ಇಲ್ಲ.. ಇಲ್ಲ.. ಯಾವ ವಾಹಿನಿಗೆ ಹೇಳಹೆಸರಿಲ್ಲದೆ ಬಂದು ಫುಲ್ ಫೇಮಸ್ ಆಗಿ ಹೊರಬಂದರೋ ಅದೇ ವಾಹಿನಿಯ ಹೊಚ್ಚಹೊಸ ಧಾರಾವಾಹಿಗೆ.

ಹೌದ್ರಪ್ಪ ಕಲರ್ಸ್ ಕನ್ನಡದ ಯಶಸ್ವಿ ಕ್ಯಾಪ್ಟನ್ ಪರಮೇಶ್ವರ್ ಗುಂಡ್ಕಲ್ ಸಂಜು ಮತ್ತು ನಾನು ಧಾರಾವಾಹಿ ತೆರೆಗೆ ತರುತ್ತಿರೋ ಸುದ್ದಿ ಕೊಟ್ಟಿದ್ದಾರೆ . ಇದೊಂದು ಪ್ರಯೋಗ ಅಂತಾನೂ ಹೇಳಿದ್ದಾರೆ .

ಯಾವತ್ತಂತೆ ?

ಇದು ದಿನಾ ಬರೋ ಧಾರಾವಾಹಿ ಅಲ್ಲ. ಶನಿವಾರ -ಭಾನುವಾರ ಒಂದು ಗಂಟೆ ಕಾಲ ಪ್ರಸಾರವಾಗುತ್ತೆ. 24 ಸಂಚಿಕೆಗಳು ಇರಲಿವೆ. ಪ್ರಥಮ್ ,ಸಂಜನಾ ,ಭುವನ್ ಮುಖ್ಯ ಪಾತ್ರಧಾರಿಗಳು . ಬಿಗ್ ಬಾಸ್ ಮನೆಯಲ್ಲಿ ನಾನಿರೋವರೆಗೂ ಭುವನ್ ಸಂಜನಾ ಲವ್ ಮಾಡೋದಿಕ್ಕೆ ಬಿಡಲ್ಲ ಅಂತ ಕೂಗಾಡಿ ,ಖಡಕ್ ಆಗಿ ಹೇಳಿದ್ದ ಪ್ರಥಮ್ ಇಲ್ಲೇನು ಮಾಡ್ತಾರೋ ನೋಡೋಣ. ಸಂಜು ಗೊತ್ತಾಯ್ತು .ಈ ನಾನು ಯಾರು ?? ಪ್ರಥಮ್ ? ಅಥವಾ ಭುವನ್ ? ಯಾರ್ ..ಯಾರ್.. ಯಾರಿರಬಹುದು ಅಂತ ಅಭಿಮಾನಿಗಳು ಕುತೂಹಲದಿಂದ ಕಾಯುವಂಥ ಹೆಸರಿಟ್ಟು ರಂಜಿಸೋಕೆ ಸಿದ್ಧವಾಗಿದ್ದಾರೆ ಕಲರ್ಸ್ ತಂಡದವರು.

ಬಿಗ್ ಬಾಸ್ ಮನೆಯಿಂದ ಇವರು ಔಟ್ ?

ಬಿಗ್ ಬಾಸ್ ಸೀಸನ್ 5  ಮೊದಲ ವಾರದ ಟಿ ಆರ್ ಪಿ ಬಳಿಕ ಜನಮನ ಗೆಲ್ಲಲಿಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಆದ್ರೆ ಎರಡನೇ ವಾರವೂ ಮುಕ್ತಾಯವಾಗಿದ್ದು, ಮತ್ತೊಬ್ಬರು ಮನೆಯಿಂದ ಹೊರಬರುವ ಸಮಯ ಸನಿಹವಾಗಿದೆ. ಕಿಚ್ಚ ಸುದೀಪ್ ಈ ಬಾರಿ ಸ್ಪರ್ಧಿಗಳಿಗೆ ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ. ಯಾಕಂದ್ರೆ ಮೊದಲ ವಾರ ಕಳೆದ ಬಳಿಕ ಕಾಮನ್ ಮೆನ್ ಹಾಗೂ ಸೆಲೆಬ್ರಿಟಿಗಳು ಅನ್ನೋ ಗುಂಪುಗಾರಿಕೆ ಶುರುವಾಗಿದೆ.
ಆದ್ರೆ ಈ ವಾರ ಸಿಕ್ಕಾಪಟ್ಟೆ ಜನರು ನಾಮಿನೇಷನ್ ಆಗಿಲ್ಲ. ಸ್ಟಾರ್ ಗಳು ಭಾರೀ ಗೇಮ್ ಪ್ಲಾನ್ ಆಡ್ತಿದ್ದಾರೆ. ಆದ್ರೆ ಜನರಿಗೆ ಲೋಕಲ್ ಪೀಪಲ್ ಮುಗ್ದತೆಯೇ ಇಷ್ಟವಾಗ್ತಿದ್ದು, ದಿವಾಕರ್ ಹಾಗೂ ರಿಯಾಜ್ ನೇರನುಡಿಗೆ ಹೆಸರುವಾಸಿ.. ಮುಂದೊಂದು ದಿನ ಈ ಹುಡುಗರೇ ಜನಮೆಚ್ಚುಗೆಗೆ ಪಾತ್ರವಾಗುವ ಸಾಧ್ಯತೆ ಇದೆ. ಇನ್ನು ಮೇಘ ಕೂಡ ಯಾರೆಳಿದ್ದನ್ನು ನಾನು ಯಾಕೆ ಕೇಳ್ಬೇಕು ಅನ್ನೋ ವರಸೆ ಶುರು ಮಾಡಿದ್ದು, ಹಳ್ಳಿ ಹುಡುಗಿ ಒಮ್ಮೆ ಸಿಡಿಯೋ ಲಕ್ಷಣ ಕಾಣ್ತಿದೆ.ಇನ್ನು ಮನೆಯಿಂದ ಹೊರಬರುವುದಾದರೆ ಜ್ಯೋತಿಷಿ ಸಮೀರ್ ಆಚಾರ್ಯ. ಆದ್ರೆ ನಿನ್ನೆ ದಿವಾಕರ್ ಮೇಲೆ ನಡೆಯುತ್ತಿದ್ದ ದಾಳಿ ಖಂಡಿಸಿದ್ದು ನೋಡಿದ್ರೆ ಅವರು ಸೇಫಾಗ್ತಾರಾ ಅನ್ನೋ ಅನುಮಾನ ಮೂಡಿಸ್ತಿದೆ.
ಇನ್ನು ಬಿಗ್ ಬಾಸ್ ನಲ್ಲಿ ಸಪ್ಪೆ ಆಗಿ ಇರೋದು ಸೀರಿಯಲ್ ಆಕ್ಟರ್ ಆಶಿತಾ, ಕ್ರಿಷಿ, ತೇಜು ಹಾಗೂ ನಿವೇದಿತ ಗೌಡ ಈ ವಾರ ಈ ನಾಲ್ವರು ಅದೇನು ಮಾಡಿದ್ರು ಅನ್ನೋದೇ ಕಾಣಿಸಲಿಲ್ಲ.  ಆದ್ರೆ ಈ ವಾರ ಮನೆಯಿಂದ ಹೋಗುತ್ತಾರಾ ಅಂದ್ರೆ ಸ್ವಲ್ಪ ಅನುಮಾನ, ಯಾಕಂದ್ರೆ ಶೋ ನಲ್ಲಿ ಗ್ಲಾಮರ್ ಮಿಸ್ಸಾಗುತ್ತೆ ಅನ್ನೋದಷ್ಟೇ ಕಾರಣ. ಜ್ಯೋತಿಷ್ಯ ಹೇಳುವ ಇಬ್ಬರಲ್ಲಿ ಒಬ್ಬರು ಮನೆಯಿಂದ ಹೊರ ಬರುವ ಸಾಧ್ಯತೆ ಹೆಚ್ಚಾಗಿದ್ದು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿde.
ಜ್ಯೋತಿ ಗೌಡ, ನಾಗಮಂಗಲ

ಬಿಗ್ ಬಾಸ್ ನಿಂದ ಮೇಘ ಮನೆಕಡೆಗೆ

ವಾರದ  ಕೊನೆ ಬಂತು ಅಂದ್ರೆ ಬಿಗ್ ಬಾಸ್ ಮನೆಯಲ್ಲಿ ಕೆಲವರಿಗೆ ನಡುಕ ಶುರುವಾಗುತ್ತೆ.  ಸರಿಯಾಗಿ ಆಟ ಆಡದಿರುವುದು ಸೇರಿದಂತೆ ಮನೆಯಲ್ಲಿ ಹೊಂದಿಕೊಳ್ಳದೇ ,ಜನರಿಗೆ ಇಷ್ಟವಾಗದೇ ಇದ್ದವರ ಕಥೆ ಖತಂ . ಈ ವಾರದಲ್ಲಿ ಪಕ್ಕ ಹಳ್ಳಿ ಭಾಷೆಯಲ್ಲಿ ಮಾತಾಡ್ತಾ ಅಕ್ಕಾ ಅಣ್ಣಾ ಅಂದ್ಕೊಂಡಿದ್ದ ಮೇಘಾ ಬಿಗ್ ಮನೆಯಿಂದ ಹೊರಬಂದು ತಮ್ಮ ಮನೆಕಡೆ ನಡೆದಿದ್ದಾರೆ.

ಹೊರಡುವಾಗ ಸಿಹಿಕಹಿ ಚಂದ್ರು , ಆಚಾರ್ಯ ರಿಗೆ ಕಾಲಿಗೆ ಬಿದ್ದು ನಮಸ್ಕಾರ ಮಾಡಿ ಮೇಘಾ ಆಶೀರ್ವಾದ ಪಡೆದು ಹೊರನಡೆದರು. ಸಿಕ್ಕ ಸೂಪರ್ ಪವರ್ ನ ದಿವಾಕರ್ ಗೆ ಕೊಟ್ಟು ಎಲ್ಲರಿಗೂ ನಗ್ತಾ ಬಾಯ್ ಹೇಳಿದ್ರು ಮುಖದಲ್ಲಿ ಮಾತ್ತ್ರ ನೋವಿನ ಎಳೆ ತುಂಬಿಕೊಂಡು ಬಂದಿದ್ದು ನಿಚ್ಚಳವಾಗಿತ್ತು .

ಪ್ರಥಮ್ ಮಾಳವಿಕಾ ‘ಸೀಕ್ರೆಟ್” ರೂಮ್ ಸೀಕ್ರೆಟ್ .

ಕಲರ್ಸ್ ವಾಹಿನಿಯ ಬಿಗ್ ಬಾಸ್ ನಲ್ಲಿ ಪ್ರಥಮ್ , ಮಾಳವಿಕಾ ಒಟ್ಟಿಗೆ ಎಲಿಮಿನೇಟ್ ಆಗಿದ್ದಾರಂತೆ ಅನ್ನುವ ಸುದ್ದಿ ಹರಿದಾಡುತ್ತಿದೆ. ಆದ್ರೆ ಆಗಿರುವುದು ಇಷ್ಟೇ.

ಮಾಳವಿಕಾ, ಪ್ರಥಮ್ ಇಬ್ಬರನ್ನೂ ಮನೆಯಿಂದ ಹೊರಗೆ ಅಂದ್ರೆ ಸೀಕ್ರೆಟ್ ರೂಮಿನಲ್ಲಿ ಇರಿಸಲಾಗಿದೆ. ತಾವಿಲ್ಲದ ಹೊತ್ತಲ್ಲಿ ಇಡೀ ಮನೆಯ ಜನ ಏನು ಮಾತಾಡಿಕೊಳ್ತಾರೆ ಅನ್ನುವಂಥದ್ದು ಇಬ್ಬರಿಗು ತಿಳಿಯಲಿದೆ. ಇತ್ತೀಚಿಗೆ ಮಾಳವಿಕಾ ಸ್ವಲ್ಪ ಬದಲಾದಂತೆ ಕಾಣುತ್ತಿದ್ದಾರೆ. ಅದೂ ಕೂಡ ಗೆಲ್ಲುವ ಗೇಮ್ ಪ್ಲಾನ್ ಅಷ್ಟೇ ಅನ್ನುವುದು ಬಲ್ಲವರ ಅನಾಲಿಸಿಸ್.

bigboss-pratham-malavika

“ಮಾಳವಿಕಾ ಗೆಲುವು ಈಗಾಗಲೇ ನಿರ್ಧಾರವಾಗಿದೆ. ಇದೆಲ್ಲ ಸುಮ್ಮನೆ ಗಿಮಿಕ್ ಅಷ್ಟೇ “ಅನ್ನುವುದು ಹೆಸರು ಹೇಳಲು  ಇಚ್ಚಿಸದ ಬಿಗ್ ಬಾಸ್ ಟೀಮ್  ಸದಸ್ಯರೊಬ್ಬರು ciniadda.com ಗೆ ನೀಡಿದ ಸುಳಿವು. ಇದರ ಸತ್ಯಾಸತ್ಯತೆ ಎಷ್ಟಿದೆಯೋ ಕಾದು ನೋಡಬೇಕು.

ಇನ್ನೇನು ಮುಗಿದೇ ಹೋಯ್ತು ಬಿಗ್ ಬಾಸ್ ಅಂದುಕೊಳ್ಳುವಷ್ಟರಲ್ಲೇ ಇಲ್ಲ ಇಲ್ಲ ಇದೇ ತಿಂಗಳು 29ರ ತನಕ ಮುಂದುವರೆಯಲಿದೆ ಅಂತ ಶೂಟಿಂಗ್ ವೇಳೆ  ಸುದೀಪ್ ಘೋಷಿಸಿದ್ದಾರಂತೆ.

ಒಂದಂತೂ ನಿಜ ಕಳೆದ ಸೀಸನ್ಗಳಿಗೆ ಹೋಲಿಸಿದರೆ  ಈ ಬಾರಿಯ ಬಿಗ್ ಬಾಸ್ ನೋಡುವವರ ಸಂಖ್ಯೆ ಕಡಿಮೆಯಾಗಿ ಟಿಆರ್ಪಿ ಕುಸಿದು ಬಿದ್ದಿರುವುದಂತೂ ಸತ್ಯ. ಕಡೆ ದಿನದವರೆಗೂ ಇನ್ನು ಏನೇನು ಗಿಮಿಕ್ ಗಳು ಸೃಷ್ಟಿಯಾಗುತ್ತವೋ ನೋಡಬೇಕು.

 

 

ಸಾಧಕರ ಸೀಟ್ ಗೆ ಬಂದ ಸಿ ಎಂ ಸಿದ್ದರಾಮಯ್ಯ ಜೊತೆ ಬರಲಿದ್ದಾರಾ ಪತ್ನಿ ?

ಜೀ  ಕನ್ನಡ  ವಾಹಿನಿಯ ಸೂಪರ್ ಹಿಟ್ ಕಾರ್ಯಕ್ರಮ ವೀಕ್ ಎಂಡ್ ವಿಥ್ ರಮೇಶ್ . ಕಳೆದ ವಾರವಷ್ಟೇ ಮಾಜಿ ಪ್ರಧಾನಿ ದೇವೇಗೌಡರು ಬಂದಿದ್ರು. ಇನ್ನು ಅವರ ಗರಡಿಯಲ್ಲೇ ಪಳಗಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುವುದೆಂದು ? ನಿಜಕ್ಕೂ ಒಬ್ಬ ಮುಖ್ಯಮಂತ್ರಿಯಾಗಿ ಅಷ್ಟೆಲ್ಲ ಕೆಲಸದ ನಡುವೆ ೫-೬ ಘಂಟೆ ಬಿಡುವು ಮಾಡಿಕೊಂಡು ಬರ್ತಾರಾ? ಸಾಧ್ಯನಾ ಸಿದ್ದರಾಮಯ್ಯನವರನ್ನು ವೀಕ್ ಎಂಡ್ ವಿಥ್ ರಮೇಶ್ ನಲ್ಲಿ ನೋಡುವುದು ಎಂಬೆಲ್ಲ ಕುತೂಹಲ ಭರಿತ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ .

ಕಳೆದ ಒಂದು ಘಂಟೆ ಇಂದ ಸಿದ್ದರಾಮಯ್ಯನವರು ವೀಕ್ ಎಂಡ್ ವಿಥ್ ರಮೇಶ್ ಕಾರ್ಯಕ್ರಮದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಚಿಕ್ಕಲಸಂದ್ರದಲ್ಲಿ ಇರುವ ಅಬ್ಬಯ್ಯನಾಯ್ಡು ಸ್ಟುಡಿಯೋದಲ್ಲಿ ಚಿತ್ರಿಕರಣ ಆರಂಭವಾಗಿದೆ. ಅವರ ಆಪ್ತರು,ಬಂಧುಗಳು ಬರಲಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ಸಿದ್ದರಾಮಯ್ಯನವರ ಪತ್ನಿ ಬರಲಿದ್ದಾರಾ ? ಪತಿಯ ಬಗ್ಗೆ ಅವರು ಹೇಳುವ ಮಾತುಗಳೇನು ಎನ್ನುವ ಕುತೂಹಲವಂತೂ ಇದ್ದೇ  ಇದೆ .

ಸಿದ್ದರಾಮಯ್ಯನವರು ವಿನೋದ ಪ್ರಜ್ಞೆಯಲ್ಲಿ ಎತ್ತಿದ ಕೈ. ಆಡುಭಾಷೆಯಲ್ಲಿ ಅವರ ಮಾತಿನ ವೈಖರಿ ಕೇಳುವುದೇ ಒಂಥರಾ ಸುಖ. ಬಂದವರನ್ನೆಲ್ಲ ಭಾವುಕ ಕ್ಷಣಗಳಿಗೆ ಕರೆದೊಯ್ಯುವ ರಮೇಶ್ ಅರವಿಂದ ಸಿದ್ದರಾಮಯ್ಯನವರ ಮನಸ್ಸಿನಾಳಕ್ಕೆ ಹೇಗೆ ಲಗ್ಗೆ ಇಡಲಿದ್ದಾರೆ ನೋಡಬೇಕಿದೆ.

ಅಂದ ಹಾಗೆ ಬರಲಿರುವ ಶನಿವಾರ ಭಾನುವಾರದಂದು ವೀಕೆಂಡ್ ವಿಥ್ ರಮೇಶ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರ್ಯಕ್ರಮ ಪ್ರಸಾರವಾಗಲಿದೆ.

ಬಿಗ್ ಬಾಸ್ ನಲ್ಲಿ ಈ ವಾರ ಯಾರ ಆಟಕ್ಕೆ ಬ್ರೇಕ್ ?

ತಂದೆಯ ಅನಾರೋಗ್ಯದಿಂದ ಬಿಗ್ ಮನೆಯಿಂದ ಹೊರ ಹೋಗಿದ್ದ ತೇಜಸ್ವಿನಿ ಮರಳಿ ಬಂದಿದ್ದಂತೂ ಆಗಿದೆ. ಹೋಗುವಾಗಲೇ ಮತ್ತೆ ಮನೆ ಸೇರಿ ಆಟ ಮುಂದುವರೆಸುವ ಇರಾದೆ ವ್ಯಕ್ತಪಡಿಸಿದ್ದ ತೇಜಸ್ವಿನಿ ಈ ವಾರ ನಾಮಿನೇಟ್ ಆಗಿದ್ದಾರೆ.

ಈ ವಾರ ನಾಮಿನೇಟ್ ಆಗಿರುವವರು ಸಮೀರ್ ಆಚಾರ್ಯ, ಜಯ ಶ್ರೀನಿವಾಸನ್,ನಿವೇದಿತಾ, ಜಗನ್ ,ಕಾರ್ತಿಕ್, ಅನುಪಮಾ, ಸಿಹಿಕಹಿ ಚಂದ್ರು ,ತೇಜಸ್ವಿನಿ .

ಸಿಹಿಕಹಿ ರುಚಿ ಚೆನ್ನಾಗೆ ಇರೋದ್ರಿಂದ ಔಟ್ ಆಗೋ ಸಾಧ್ಯತೆ ಇಲ್ಲವೇ ಇಲ್ಲ ಅನ್ನಬಹುದು. ಜಗನ್ -ಆಶಿತಾ ಮಧ್ಯೆ ಇರೋ ಕೆಮಿಸ್ಟ್ರಿ ಜಗನ್ ನ ಮನೆಯಲ್ಲಿ ಉಳಿಸೋ ಸಾಧ್ಯತೆ ಹೆಚ್ಚು. ನಿವೇದಿತಾ ಡಾಲ್ ಇಷ್ಟು ಬೇಗ ಛೆ ..ಛೆ..

ತೇಜಸ್ವಿನಿ ತಂದೆಗೆ ಹುಶಾರಿಲ್ಲ ಅಯ್ಯೋ ಪಾಪ ಅಂತ ಮನೆಯವರೆಲ್ಲ ಸಮಾಧಾನ ಮಾಡಿದ್ರೂ ಕೂಡ ಮೊದಲಿಂದಲೂ ಆಟದಲ್ಲಿ ಉತ್ಸಾಹ ತೋರಿರೋದು ಅಷ್ಟಕಷ್ಟೇ.

ಸಮೀರ್ ಈ ವಾರ ಉಗ್ರಾವತಾರ ತೋರಿದ್ದಾರೆ . ಜಯ ಮಾಮುಲಿನಂತೆ ಇದ್ದಾರೆ . ತೇಜು ,ಜಯ ,ಸಮೀರ್ ಇವರಲ್ಲಿ ಮನೆಯಿಂದ ಹೊರಹೋಗಲು ಪೈಪೋಟಿ ಅನ್ನಬಹುದು .

ಬಂಧನ ಭೀತಿಯಲ್ಲಿ ಓಡಿಹೋದ ಭುವನ್

ಮೊನ್ನೆಯಷ್ಟೇ ನಟ ಭುವನ್ ಪ್ರಥಮ್ ವಿರುದ್ಧ ಒಂದು ಆರೋಪ ಮಾಡಿದ್ರು ಶೂಟಿಂಗ್ ಸ್ಪಾಟ್ನಲ್ಲಿ ತನ್ನ ತೊಡೆ ಕಚ್ಚಿದ್ದಾನೆ ಅಂತ ರಂಪಾಟ ಮಾಡಿ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯನ್ನು ಮಾಡಿದ್ರು. ಆ ಬಳಿಕ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಥಮ್ ವಿರುದ್ಧ ದೂರು ದಾಖಲು ಮಾಡಿದ ಭುವನ್, ಕಾನೂನು ಕ್ರಮಕ್ಕೆ ಒತ್ತಾಯ ಮಾಡಿದರು. ಭುವನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದಂತೆ ಎಚ್ಚೆತ್ತ ಪ್ರಥಮ್ ಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ಪಡೆದರು.

ನಟ ಭುವನ್ ವಿರುದ್ಧ ಪ್ರಥಮ್ ದೂರು

ನಿನ್ನೆ ನಿರೀಕ್ಷಣಾ ಜಮೀನು ಪಡೆದ ಪ್ರಥಮ್ ಇಂದು ತಾಳಗುಪ್ಪ ಪೊಲೀಸ್ ಠಾಣೆಯಲ್ಲಿ ಹಾಜರಾಗಿದ್ದರು. ಏಕಾಏಕಿ ತನ್ನ ಮೇಲೆ ಹಲ್ಲೆ ಮಾಡಿದ ಭುವನ್ ತನ್ನ ಕುತ್ತಿಗೆ ಹಿಡಿದು ಕೊಲೆ ಮಾಡುವ ಬೆದರಿಕೆ ಹಾಕಿದ್ದರು. ಜತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿದ್ರು ಅಂತ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದರು. ಯಾವಾಗ ದೂರಿಗೆ ಪ್ರತಿದೂರು ದಾಖಲಾಯಿತು ಪೊಲೀಸರು ಎರಡು ಪ್ರಕರಣಗಳ ವಿಚಾರಣೆ ಆರಂಭಿಸಿದ್ದಾರೆ.

ರಾಜರಾಜೇಶ್ವರಿ ನಗರದ ಭುವನ್ ನಿವಾಸಕ್ಕೆ ಪೊಲೀಸರ ಭೇಟಿ- ಪರಾರಿಯಾದ ಭುವನ್

ಯಾವುದೇ ಒಂದು ದೂರು ದಾಖಲಾದರೂ ಪೊಲೀಸರು ಹೇಳಿಕೆ ಪಡೆಯೋದು ಕಾಮನ್ ಅದೇ ರೀತಿ ನಟ ಪ್ರಥಮ ನೀಡಿದ ದೂರನ್ನು ಅಧರಿಸಿ ನಟ ಭುವನ್ ಮನೆಗೆ ಪೊಲೀಸರು ಭೇಟಿ ಕೊಟ್ಟಿದ್ದರು. ಆದರೆ ಪೊಲೀಸರನ್ನು ನೋಡ್ತಿದ್ದ ಹಾಗೆ ಭುವನ್ ಹಿಂಬದಿ ಬಾಗಿಲಿನಿಂದ ಪರಾರಿಯಾಗಿದ್ದಾರೆ.

ಉಟ್ಟ ಬಟ್ಟೆಯಲ್ಲೇ ಭುವನ್ ಓಡಿಹೋಗಿದ್ದಾರೆ ಯಾಕೆ ..?

ಅಸಲಿಗೆ ಪ್ರಕರಣದಲ್ಲಿ ಭುವನ್ ಸಂತ್ರಸ್ತ ಪ್ರಥಮ ಭುವನ್ ತೊಡೆಯನ್ನು ಕಚ್ಚಿದರೆ ಅಂತ ಆರೋಪ ಮಾಡಿದ್ದಾರೆ ಹಾಗೆ ಕಂಪ್ಲೇಂಟ್ ಕೂಡ ದಾಖಲಾಗಿದೆ. ಆದ್ರೆ ಪ್ರಥಮ್ ಕೊಟ್ಟ ದೂರನ್ನು ಆಧರಿಸಿ ಪೊಲೀಸರು ವಿಚಾರಣೆ ನಡೆಸಲು ಬಂದಿದ್ದಾಗ ಬೆದರಿದ ಭುವನ್ ಉಟ್ಟ ಬಟ್ಟೆಯಲ್ಲಿ ಅಂದ್ರೆ ಬರ್ಮುಡಾ ಹಾಗೂ ಟಿ ಶರ್ಟ್ ನಲ್ಲಿ ಮನೆಯಿಂದ ಓಡಿ ಹೋಗಿದ್ದಾರೆ. ಪೊಲೀಸರು ಮನೆಯೊಳಗೆ ಕುಳಿತಿದ್ದಾಗ ಹಿಂಬದಿ ಬಾಗಿಲಿನಿಂದ ಓಡಿ ಹೋಗಿದ್ದಾರೆ. ಭುವನ್ ಈ ವರ್ತನೆ ನೋಡಿದರೆರ ಈ ಪ್ರಕರಣದಲ್ಲಿ ಭುವನ್ ಕೈವಾಡ ಇದೆಯಾ ಅನ್ನುವ ಶಂಕೆ ವ್ಯಕ್ತವಾಗುತ್ತಿದೆ. ತಮ್ಮ ಕಡೆಯಿಂದ ತಪ್ಪು ನಡೆದಿಲ್ಲ ಎಂದಾದ ಮೇಲೆ ಓಡಿ ಹೋಗುವ ಪ್ರಮೇಯವಾದರೂ ಏನಿತ್ತು ಅನ್ನೋದು ಸದ್ಯ ಉದ್ಭವಿಸಿರುವ ಪ್ರಶ್ನೆ.

ಇದಕ್ಕೂ ಮೊದಲು ಬೆಳಗ್ಗೆ ಸಿಟಿ ಸಿವಿಲ್ ಕೋರ್ಟ್ ಗೆ ಹಾಜರಾಗಿದ್ದ ನಟ ಭುವನ್ ನಿರೀಕ್ಷಣಾ ಜಾಮೀನು ನೀಡುವಂತೆ ನ್ಯಾಯಾಧೀಶರಲ್ಲಿ ಕೇಳಿಕೊಂಡಿದ್ದಾರೆ. ವಿಚಾರಣೆ ನಡೆಸಲು ಹೋಗುತ್ತಿದ್ದ ಹಾಗೆ ಪೊಲೀಸರನ್ನು ಕಂಡು ಓಡಿಹೋದ ಭುವನ್ ಮೇಲೆ ಪೊಲೀಸರಿಗೆ ಒಂದು ಕಡೆ ಅನುಮಾನ ಕೂಡ ಮೂಡಿದೆ. ಹೀಗಾಗಿ ನಾಳೆ ಭುವನ್ ನನ್ನು ವಿಚಾರಣೆ ನಡೆಸಲು ಪೊಲೀಸರು ಸಜ್ಜಾಗಿದ್ದಾರೆ. ಜೊತೆಗೆ ನಟಿ ಸಂಜನಾ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ಪ್ರಥಮ ಕಚ್ಚಿದ್ದಾನೆ ಎನ್ನಲಾದ ಗಾಯದ ಸ್ಯಾಂಪಲ್ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ . ಒಟ್ನಲ್ಲಿ ಇವರಿಬ್ಬರ ಕಚ್ಚಾಟದಿಂದ ಸ್ಯಾಂಡಲ್ ವುಡ್ ನಲ್ಲಿ ಕಚ್ಚೇಶ್ವರ ನೆಂಬ ಬಿರುದನ್ನು ಪ್ರಥಮ ಪಡೆದಂತಾಗಿದೆ. ಆದ್ರೆ ಈ ಪ್ರಕರಣದಲ್ಲಿ ಯಾರದು ತಪ್ಪು ಯಾರದು ಸರಿ ಅನ್ನುವ ಬಗ್ಗೆ ಪೊಲೀಸರ ತನಿಖೆಯಿಂದಷ್ಟೆ ಬಯಲಾಗಬೇಕಿದೆ.

ಜ್ಯೋತಿ ಎಂ ಗೌಡ

ಮಜಾ ಟಾಕೀಸ್ .. ಈಗ ಹೊಸ ಟಾಕೀಸ್.

ಯಾವುದೇ ಸೂಪರ್ ಹಿಟ್ ರಿಯಾಲಿಟೀ ಶೋ ಅನ್ನು ಕನ್ನಡಕ್ಕೆ ತಂದು ಗೆಲ್ಲುವುದು ಸುಲಭದ ಮಾತಲ್ಲ. ಕಲರ್ಸ್ ಕನ್ನಡ ವಾಹಿನಿಯಲ್ಲಿ, ಲೋಕೇಶ್ ಪ್ರೋಡಕ್ಷನ್ಸ್ ಮೂಲಕ ಸೃಜನ್ ಲೋಕೇಶ್ “ಮಜಾ ಟಾಕೀಸ್” ಕಾರ್ಯಕ್ರಮವನ್ನು ನೀಡಿ ಗೆದ್ದು ತೋರಿಸಿದ್ದಾರೆ. ಅಪರ್ಣ, ಮನೋಹರ್ ಹಾಗೂ ಇಂದ್ರಜೀತ್ ಅಂತಹ ಗಂಭೀರ ವ್ಯಕ್ತಿಗಳನ್ನು ಹಾಸ್ಯಮಯ ಪಾತ್ರಗಳಲ್ಲಿ ಯಶಸ್ವಿಯಾಗಿ ಬಿಂಬಿಸಿದ್ದಾರೆ. ಶ್ವೇತಾ, ದಯಾನಂದ್, ಪವನ್, ವಂದನ  ಹಾಗೂ ರೇಮೋ ಅವರನ್ನೊಳಗೊಂಡ “ಮಜಾ ಟಾಕೀಸ್” ಒಂದು ಅಪರೂಪದ ತಂಡ. ಮಂಡ್ಯ ರಮೇಶ್ ಮತ್ತು ಕುರಿ ಪ್ರತಾಪ್ ಸೇರಿಕೊಂಡ ಮೇಲಂತೂ ಪ್ರೇಕ್ಷಕರಿಗೆ ಡಬ್ಬಲ್ ಬೋನಸ್. ಇತ್ತೀಚಿನ ಸೇರ್ಪಡೆ ನವೀನ್ ಪಡೀಲ್ ಕೂಡ ಅಸಾಮಾನ್ಯ ಪ್ರತಿಭೆ.

DSC_0486

ಮೊದಮೊದಲು ಮಿಶ್ರ ಪ್ರತಿಕ್ರಿಯೆಗಳನ್ನು ಎದುರಿಸಿದ ಮಜಾಟಾಕೀಸ್, ನಂತರದ ದಿನಗಳಲ್ಲಿ  ನಂಬರ್ ಒನ್ ರಿಯಾಲಿಟಿ ಶೋ ಆಗಿ ನಿಂತದ್ದು ಮಾತ್ರ ಪ್ರಶಂಸನೀಯ.

ಕಿರುತೆರೆಯಲ್ಲಿ ಎಂದಿಗೂ ಕಾಮಿಡಿ ಮಾಡದ ಚಿತ್ರರಂಗದ ಅತಿರಥ-ಮಹಾರಥರು ಮಜಾಟಾಕೀಸಿಗೆ ಬಂದು ಮಜಾ ಮಾಡಿ ಹೋಗಿದ್ದಾರೆ.

mt ciniadda

25ನೇ ಎಪಿಸೋಡಿನಲ್ಲಿ ಸುದೀಪ್, 50ನೇ ಎಪಿಸೋಡಿನಲ್ಲಿ ದರ್ಶನ್, 75ನೇ ಎಪಿಸೋಡಿನಲ್ಲಿ ಅರ್ಜುನ್ ಸರ್ಜಾ ಹಾಗೂ ಸೆಂಚುರಿ ಎಪಿಸೋಡಿನಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರನ್ನು ಕರೆತಂದು ಪ್ರೇಕ್ಷಕರಿಗೆ ಮನೋರಂಜನೆ ನೀಡಿದ ಹೆಗ್ಗಳಿಕೆ ಸೃಜನ್ ಅವರದು. ಅರಳು ಹುರಿದಂತೆ ಪಟಪಟನೆ ಮಾತನಾಡುವ ಲೋಕೇಶ್, ಎಣ್ಣೆ ಸಿಡಿದಂತೆ ಚಿಟಚಿಟನೆ ನಗುವ ಲಂಕೇಶ್ ಜೋಡಿ ಇಂದು ಕರ್ನಾಟಕದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಖ್ಯಾತಿ ಪಡೆದ ಜೋಡಿಯಾಗಿದೆ. ಪ್ರಪಂಚದ ನಾನಾ ದೇಶದಲ್ಲಿ ಬದುಕು ಕಂಡುಕೊಂಡಿರುವ ಕನ್ನಡಿಗರು ತಮ್ಮ ತವರಿಗೆ ಬಂದಾಗ ಮಜಾಟಾಕೀಸ್ ಕಾರ್ಯಕ್ರಮಕ್ಕೂ ಭೇಟಿ ಕೊಡುವುದು ಅವರ ಪ್ರಮುಖ ಆದ್ಯತೆ ಆಗಿರುತ್ತದೆ ಎನ್ನುವುದು ಕಲರ್ಸ್ ಕನ್ನಡ ವಾಹಿನಿಗೆ ಒಂದು ಹಿರಿಮೆಯೇ ಸರಿ.

Desktop19

ನೂರರ ನಂತರ ನೂರೈವತ್ತು ಎಪಿಸೋಡ್ ಗಳನ್ನು ಮಿಂಚಿಸಿ ಕಿರುತೆರೆಯಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿ ಮುನ್ನಡೆಯುತ್ತಿರುವ ಮಜಾಟಾಕೀಸ್ ಮನೆ ಈಗ ಸಂಪೂರ್ಣ ಹೊಸ ರೂಪ ಪಡೆದು ಹೊಸ ಮನೆಯಲ್ಲಿ ಕನ್ನಡದ ಪ್ರೇಕ್ಷಕರನ್ನು ರಂಜಿಸಲಿದೆ. ಹೊಸ ಮನೆಯ ಗೃಹಪ್ರವೇಶಕ್ಕೆ ಸೃಜನ್ ಲೋಕೇಶ್ ಅವರ ಆತ್ಮಿಯರಾದ ನಿರ್ದೇಶಕ ಯೋಗರಾಜ್ ಭಟ್ ಜೊತೆಯಲ್ಲಿ ನಭಾ ನಟೇಶ್, ಶುಭಾ ಪೂಂಜ, ಇಂದು-ಬಿಂದು ನಾಗರಾಜ್ ಮತ್ತು ಹಲವರು ಬರಲಿದ್ದಾರೆ.

ಎಂದಿನಂತೆ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರೇಕ್ಷಕರಿಗೆ ಅದ್ಧೂರಿಯಾಗಿ ಸೆಟ್ಟೇರಿರುವ ಹೊಸ ಮಜಾಟಾಕೀಸ್ ನ ದರ್ಶನವಾಗಲಿದೆ.

Like Us, Follow Us !

122,699FansLike
1,826FollowersFollow
1,409FollowersFollow
2,513SubscribersSubscribe

Trending This Week