30.7 C
Bangalore, IN
Tuesday, April 23, 2019
Home ಸಿನಿಮಾ ನ್ಯೂಸ್ ಟಿವಿ ನ್ಯೂಸ್

ಟಿವಿ ನ್ಯೂಸ್

Get Latest Kannada TV News, News On Kannada TV Serials

ಬಿಗ್ ಬಾಸ್ ಮನೆಯಿಂದ ಕೃಷಿ ಔಟ್ ?

ಕನ್ನಡದ ಕಲರ್ಸ್ ಸೂಪರ್ ನಲ್ಲಿ 12ನೇ ವಾರ ಯಶಸ್ವಿಯಾಗಿ ಪೂರೈಸಿ, ಫೈನಲ್ ಕಡೆಗೆ ಹೆಜ್ಜೆ ಹಾಕುತ್ತಿರುವ ಬಿಗ್ ಬಾಸ್ ಬಾಸ್ ಕಾರ್ಯಕ್ರಮದಲ್ಲಿ ಶನಿವಾರ ಎಲಿಮಿನೇಟ್ ಮಾಡಲಾಗುತ್ತೆ. ವಾರದ ಕಥೆ ಕಿಚ್ಚನ ಜೊತೆ ಎನ್ನುವ ನಟ ಸುದೀಪ್ ಕಾರ್ಯಕ್ರಮದ ಕೊನೆಯಲ್ಲಿ ಒಬ್ಬ ಸ್ಪರ್ಧಿಯನ್ನು ಮನೆಯಿಂದ ಹೊರಗೆ ಕಳಿಸೋದು ಸಾಮಾನ್ಯ. ಆದರೆ ಕಳೆದ ವಾರ ಡಬಲ್ ಎಲಿಮಿನೇಡ್ ಅಂತಾ ಸಂಖ್ಯಾ ಶಾಸ್ತ್ರಜ್ಣ ಜಯ ಶ್ರೀನಿವಾಸನ್ ಜೊತೆ ದಿವಾಕರ್ ಅವರನ್ನು ಹೊರಕ್ಕೆ ಕರೆತರಲಾಗಿತ್ತು. ಬಳಿಕ ಬಿಗ್ ಬಾಸ್ ಸೀಕ್ರೆಟ್ ರೂಮಿಗೆ ದಿವಾಕರ್ ಹೆಜ್ಜೆ ಹಾಕಿದ್ರು.
ಜಯ ಶ್ರೀನಿವಾಸನ್ ರೀತಿ ದಿವಾಕರ್ ಹೊರ ಬರ್ತಾರಾ..? 
ಹತ್ತನೇ ವಾರ ಕಳೆದ ಬಳಿಕ ಹನ್ನೊಂದನೇ ವಾರವನ್ನು ಸಮೀರ್ ಜೊತೆ ಸೀಕ್ರೆಟ್ ರೂಮು ಸೇರಿದ್ರು. ಆ ಬಳಿಕ ಸೀಕ್ರೆಟ್ ರೂಮಿನಿಂದ ನೇರವಾಗಿ ಮನೆ ಕಡೆಗೆ ಹೊರಟು ಬಿಟ್ರು. ಕಡೇ ಪಕ್ಷ ಬಿಗ್ ಬಾಸ್ ಸ್ಪರ್ಧಿಗಳಿಗೆ ಶುಭ ಕೋರುವ ಅವಕಾಶವನ್ನೂ ಕೊಡಲಿಲ್ಲ. ಈ ವಾರ ಕೂಡ ದಿವಾಕರ್ ಸೀಕ್ರೆಟ್ ರೂಮು ಸೇರಿದ್ದು, ಮನೆಯಿಂದ ಹೊರಕ್ಕೆ ಬಂದು ಬಿಡ್ತಾರಾ ಅನ್ನೋ ಆಂತಂಕ ಶುರುವಾಗಿದೆ. ಶನಿವಾರ ಮಧ್ಯಾಹ್ನದಿಂದಲೇ ದಿವಾಕರ್ ಅಭಿಮಾನಿಗಳು ಹೊರಕ್ಕೆ ಬಂದವರು ಯಾರು ಅನ್ನೋ ಪ್ರಶ್ನೆಗಳ ಸುರಿಮಳೆ ಸುರಿಸುತ್ತಿದ್ದಾರೆ.
ಕೃಷಿ ಮಾಡೋದು ಕಷ್ಟ ಎಂದಿದ್ದು ಯಾರು..? 
ಶನಿವಾರ ನಟ ಸುದೀಪ್ ಬಿಗ್ ಬಾಸ್ ಮನೆಯಲ್ಲಿ ಕೃಷಿ ಮಾಡೋದು ಇನ್ಮುಂದೆ ಕಷ್ಟ ಎಂದಿದ್ದಾರೆ. ಹಾಗಂದ್ರೆ ನಟಿ ಕೃಷಿ ಇನ್ಮುಂದೆ ಮನೆಯಲ್ಲಿ ಇರಲು ಸಾಧ್ಯವಿಲ್ಲ ಎಂದು ಬಿಟ್ಟಿದ್ದಾರೆ. ಹಾಗಾದ್ರೆ ಈ ವಾರ ಮನೆಯಿಂದ ಹೊರ ಬರುತ್ತಿರೋದು ನಟಿ ಕೃಷಿ ಅನ್ನೋದು ಕನ್ಫರ್ಮ್ ಆಯ್ತು. ಹಾಗಾದ್ರೆ ಸಾಮಾನ್ಯನಾಗಿ ಮನೆಯೊಳಕ್ಕೆ ಎಂಟ್ರಿ ಕೊಟ್ಟಿದ್ದ ದಿವಾಕರ್, ಮನೆಯೊಳಕ್ಕೆ ಪ್ರವೇಶ ಪಡೆದ ಬಳಿಕ ತಮ್ಮ ಮುಗ್ದತೆಯಿಂದಲೇ ಜನರ ಮನಸ್ಸು ಸೂರೆಗೊಂಡಿದ್ದರು. ಈ ವಾರ ಮನೆಯಿಂದ ಕೃಷಿ ಹೊರ ಬಂದಿದ್ದು, ದಿವಾಕರ್ ಮನೆಯೊಳಕ್ಕೆ ಮತ್ತೆ ಪ್ರವೇಶ ಆದಂತಾಗಿದೆ. ಸಾಮಾನ್ಯ ಕೋಟದಲ್ಲಿ ಮನೆಯೊಳಗೆ ಹೋಗಿದ್ದ ದಿವಾಕರ್ ಫೈನಲಿಸ್ಟ್ ಸ್ಪರ್ಧಿ ಅನ್ನೋದು ಅಭಿಮಾನಿಗಳ ಮಾತು.. ನೀವೇನಂತೀರಿ.. ಕಾಮೆಂಟ್ ಮಾಡಿ..
ಜ್ಯೋತಿಗೌಡ, ನಾಗಮಂಗಲ

ಬಿಗ್ ಬಾಸ್ ಮನೆಯಲ್ಲಿ ಪ್ರೇಮಪಯಣ ಶುರು

ಬಿಗ್ ಬಾಸ್ ನ ಎಲ್ಲಾ ಸೀಸನ್ ಗಳಲ್ಲೂ ಒಂದಲ್ಲ ಒಂದು ಜೋಡಿ ಪ್ರೇಮ ಪಾಶಕ್ಕೆ ಸಿಲುಕುತ್ತಿತ್ತು. ಆದ್ರೆ ಈ ಬಾರಿ ಎರಡು ಜೋಡಿಗಳು ಪ್ರೇಮ ಪ್ರಣಯ ಎನ್ನುತ್ತಿದ್ದು  ಮೇಲ್ನೋಟಕ್ಕೆ  ಅಂತರ ಕಾಯ್ದುಕೊಂಡಿದ್ದಾರೆ. ಅಂದರೆ ಮನಸ್ಸಿನ ತುಮುಲಗಳನ್ನು ಬದಿಗೊತ್ತಿ ಸಮಾಜದಲ್ಲಿ ತಮಗಿರುವ ಸ್ಥಾನಮಾನಗಳಿಗೆ ಪೆಟ್ಟು ಬಿದ್ದರೆ ನಷ್ಟ ಉಂಟಾಗಲಿದೆ ಅನ್ನೋ ಅರಿವಿನಿಂದ ಉಕ್ಕಿ ಬರುತ್ತಿರುವ ಪ್ರೀತಿಯನ್ನು ತಣಿಸಿಕೊಂಡು ಕಾಲ ಕಳೆಯುತ್ತಿದ್ದಾರೆ.
ಜೆಕೆ ವಿತ್ ಶೃತಿ, ಚಂದನ್ ವಿತ್ ನಿವೇದಿತಾ ಗೌಡ 
ಹೌದು, ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಆದ ಅಭಿಮಾನಿ ಬಳಗ ಸೃಷ್ಟಿಸಿಕೊಂಡು, ಹೆಸರು ಮಾಡಿರುವ ಜಯರಾಮ್ ಕಾರ್ತಿಕ್ ಗೆ ಮುಂಬೈ ಮೂಲದ ಬೆಡಗಿ, ಸಿಂಗರ್ ಶೃತಿ ಪ್ರಕಾಶ್ ಮೇಲೆ ಮನಸ್ಸಾಗಿದೆ. ಆದರೆ ಎಲ್ಲೂ ತೋರಿಸಿಕೊಳ್ಳದೆ ಎಲ್ಲರ ಜೊತೆ ಇರುವ ರೀತಿಯಲ್ಲೇ ಇದ್ದೇನೆ ಎಂದು ತೋರಿಸಿಕೊಳ್ಳುವ  ಪ್ರಯತ್ನ ನಡೆಸುತ್ತಿರುವುದು ಗೊತ್ತಾಗ್ತಿದೆ. ಅದೇ ರೀತಿ ರ‌್ಯಾಪ್ ಸ್ಟಾರ್  ಚಂದನ್ ಶೆಟ್ಟಿ ಗೆ ಫಿದಾ ಆಗಿರುವ ಮೈಸೂರಿನ ಬ್ಯೂಟಿ ನಿವೇದಿತಾ ಗೌಡಗೆ ಚಂದನ್ ಶೆಟ್ಟಿ ಕೂಡ ಮನಸೋತಿರೋದು ಮುಚ್ಚಿಟ್ಟಿರುವ ಅಸಲಿ ಕಹಾನಿ. ಯಾವಾಗ ಬಿಗ್ ಬಾಸ್ ಜೋಡಿ ಬಂಧನ ಟಾಸ್ಕ್ ಕೊಟ್ಟರೂ ಆಗಿನಿಂದಲೇ ಇಬ್ಬರ ನಡುವೆ ಆಪ್ತತೆ ಹೆಚ್ಚಾಗಿ ತುಂಬಾ ಸನಿಹದಲ್ಲಿ ಬಂದು ನಿಂತಿದ್ದಾರೆ. ಆದರೆ ಚಂದನ್ ಶೆಟ್ಟಿ ಬುದ್ಧಿವಂತ ಸ್ಪರ್ಧಿ ಆಗಿದ್ದು ಮುಂದಾಲೋಚನೆಯಿಂದ ಯಾವುದೇ ಭಾವನೆಯನ್ನೂ ವ್ಯಕ್ತಪಡಿಸುತ್ತಿಲ್ಲ.
ಈ ರೀತಿ ಪ್ರೇಮಪಾಶಕ್ಕೆ ಕಾರಣ ಏನು..? 
ವಯಸ್ಸಿಗೆ ಬಂದಿರುವ  ಹುಡುಗ- ಹುಡುಗಿ ಪ್ರೀತಿಸೋದು ಸಾಮಾನ್ಯ. ಆದರೆ ಬಿಗ್ ಬಾಸ್ ಮನೆಯಲ್ಲಿ ಆಗೋ ಪ್ರೇಮ ಹೊರಕ್ಕೆ ಬಂದ ಬಳಿಕ ಉಳಿಯುತ್ತಾ ಅನ್ನೋದೆ ಪ್ರಮುಖ ಪ್ರಶ್ನೆ. ಯಾಕಂದ್ರೆ ಹಿಂದಿನ ಹಲವು ಸೀಸನ್ ಗಳಲ್ಲಿ ಈ ಬಾರಿಗಿಂತಲೂ ಸಾಕಷ್ಟು ಪ್ರೇಮ ಕಥೆ ನಡೆದಿತ್ತು . ಆದರೆ ಮನೆಯಿಂದ ಹೊರಬಂದ ಬಳಿಕ ಎಲ್ಲವನ್ನೂ ಮರೆತು ವಿ  ಆರ್ ಜಸ್ಟ್ ಫ್ರೆಂಡ್ಸ್ ಅಂತಾ ತೇಪೆ ಹಾಕಿದ್ರು. ಇದಕ್ಕೆ ಪ್ರಮುಖ  ಕಾರಣ ಅಂದ್ರೆ ಒತ್ತಡ. ಹೊರಪ್ರಪಂಚದಲ್ಲಿ ಸಿಗುವ ಎಲ್ಲಾ ಸೌಲಭ್ಯಗಳು ಬಿಗ್ ಬಾಸ್ ಮನೆಯಲ್ಲಿ ಸಿಗುವುದಿಲ್ಲ. ಮನರಂಜನೆ, ಸುದ್ದಿ, ತರಲೆ  ಆಟಗಳು, ಪ್ರವಾಸ, ಪಾರ್ಟಿ ಅಂದುಕೊಂಡು ಜನ ಒತ್ತಡದ ಜೀವನದಿಂದ ಹೊರ ಬರುತ್ತಾರೆ. ಆದರೆ ಇದೆಲ್ಲವನ್ನೂ ಸಹಿಸಿಕೊಂಡು ಬಿಗ್ ಬಾಸ್ ಮನೆಗೆ ಕಾಲಿಡುವ ಸ್ಪರ್ಧಿಗಳು ಅನಿವಾರ್ಯ ಕಾರಣಕ್ಕಾಗಿ ಒಬ್ಬರ ಬಳಿ ತುಂಬಾ ಆತ್ಮೀಯವಾಗಿ  ವರ್ತಿಸುತ್ತಾರೆ. ಆದರೆ ಹೊರಪ್ರಪಂಚಕ್ಕೆ‌ ಬಂದ ಬಳಿಕ ಅವರಿಗೆ ವಾಸ್ತವದ ಬದುಕು ಅರ್ಥ ಆಗೋದ್ರಿಂದ ಬಿಗ್ ಬಾಸ್ ಮನೆಯ ಲವ್ ಕಹಾನಿ ಮರೆತು ಬಿಡ್ತಾರೆ. ಲವ್ ಮಾಡುವುದು ತಪ್ಪಲ್ಲ ಎಂದ ಮೇಲೆ ಮದ್ವೆ ಆದರೂ ತಪ್ಪಲ್ಲ. ಮೊದಲೇ ಮೂರು ತಿಂಗಳು ಜೊತೆಯಲ್ಲಿ ಜೀವನ ಮಾಡಿರೋದ್ರಿಂದ ಅರ್ಥ ಮಾಡಿಕೊಳ್ಳೋದು ಸುಲಭ ಆಗಿರುತ್ತದೆ.. ಯಾವ ಬಿಗ್ ಬಾಸ್ ಜೋಡಿ ಮದುವೆ ಆಗುತ್ತೆ ಅನ್ನೋದೆ ಎಲ್ಲರ ಕುತೂಹಲ..

ಕಾಮಿಡಿ ಕಿಲಾಡಿಗಳ ಝಲಕ್ ವಿಡಿಯೋ

ಬಿಗ್ ಬಾಸ್ ಮನೆಯಿಂದ ಜಯಶ್ರೀನಿವಾಸನ್ ಔಟ್ ?

ಕಳೆದವಾರ ಬಿಗ್ ಬಾಸ್ ವಾರದ ಮಧ್ಯೆ ಜಯ ಶ್ರೀನಿವಾಸನ್ ಹಾಗೂ ಸಮೀರ್ ಆಚಾರ್ಯ ಅವರನ್ನು ನಡುರಾತ್ರಿ ಎಬ್ಬಿಸಿ, ಸೀಕ್ರೆಟ್ ರೂಮ್ ಗೆ ಸಾಗ ಹಾಕಿದ್ರು. ಇವತ್ತು ಶನಿವಾರ ಆಗಿರೋದ್ರಿಂದ ಸೀಕ್ರೆಟ್ ರೂಮಿನಿಂದ ಇಬ್ಬರನ್ನು ಮನೆಯೊಳಗೆ ಕಳುಹಿಸಿ, ಅಷ್ಟೂ ಸ್ಪರ್ಧಿಗಳ ಪೈಕಿ ಓರ್ವ ಸ್ಪರ್ಧಿಯನ್ನು ಮನೆಯಿಂದ ಹೊರಕ್ಕೆ ಕಳುಸಬೇಕಿತ್ತು. ಆದರೆ ಸಿಕ್ಕಾಪಟ್ಟೆ ಡಿಫರೆಂಟ್ ಆಗಿ ಆಡಿಸುತ್ತಿರೋ ಬಿಗ್ ಬಾಸ್ ಈ ವಾರ ಮತ್ತೊಂದು ಟ್ವಿಸ್ಟ್ ಕೊಟ್ಟಿದ್ದಾರೆ..
ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ಅದೇನೇ ತೀರ್ಮಾನ ಆದರೂ ಅದು ಬಿಗ್ ಬಾಸ್ ರದ್ದು ಆಗಿರಲಿಲ್ಲ. ಸೀಕ್ರೆಟ್ ರೂಮಿನಲ್ಲಿದ್ದ ಜಯ ಶ್ರೀನಿವಾಸನ್ ಹಾಗೂ ಸಮೀರ್ ಆಚಾರ್ಯ ಅವರದ್ದಾಗಿತ್ತು. ಕೆಲವೊಂದು ಬಾರಿ ಅನ್ನೋದಕ್ಕಿಂತ ಬಹುತೇಕ ಬಾರಿ ಸಮೀರ್ ಆಚಾರ್ಯ ಅವರನ್ನು ಬಗ್ಗಿಸಿದ ಜಯ ಶ್ರೀನಿವಾಸನ್ ತನಗೆ ಬೇಕಾದ ನಿರ್ಣಯವನ್ನು ಇಬ್ಬರ ಸಮ್ಮತಿ ಮೇರೆಗೆ ಎಂದು ಚಲಾಯಿಸುವಲ್ಲಿ ಯಶಸ್ವಿಯಾಗಿದ್ರು.. ಆದ್ರೀಗ ಅದನ್ನೇ ಬಿಗ್ ಬಾಸ್ ಉಲ್ಟಾ ಮಾಡಿದ್ದಾರೆ.
ಬಿಗ್ ಬಾಸ್ ಮನೆಯಿಂದ ಲೆಕ್ಕಾಚಾರ ಔಟ್
ಬಾರಿ ಲೆಕ್ಕಾಚಾರ ಅಂಕಿ ಸಂಖ್ಯೆಗಳ ಭವಿಷ್ಯ ಹೇಳ್ಕೊಂಡು ಆಟವಾಡ್ತಿದ್ದ ಜಯ ಶ್ರೀನಿವಾಸನ್ ಮನೆಯಿಂದ ಔಟ್ ಆಗಿದ್ದು, ಹುಬ್ಬಳ್ಳಿಯ ಸಮೀರ್ ಆಚಾರ್ಯ ಮತ್ತೆ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಪಡೆದಿದ್ದು ಆಟ ರಂಗೇರಲಿದೆ. ಇನ್ನೊಂದು ಹೊಸ ಟ್ವಿಸ್ಟ್ ಅಂದ್ರೆ ಸಮೀರ್ ಆಚಾರ್ಯ ಮನೆ ಸೇರ್ತಿದ್ದ ಹಾಗೆ ಮತ್ತೊಬ್ಬ ಆಟಗಾರ ಸೀಕ್ರೆಟ್ ರೂಮು ಸೇರಿ ಆಗಿದೆ. ಸಾಮಾನ್ಯರಲ್ಲಿ ಸಾಮಾನ್ಯ ಅಂತ ನೇರ ನುಡಿಗಳಿಂದಲೇ ಜನಮನ ಗೆದ್ದಿದ್ದ ದಿವಾಕರ್ ನನ್ನು ಸೀಕ್ರೆಟ್ ರೂಮು ಸೇರಿಸಲಾಗಿದೆ ಅನ್ನೋದು ciniadda.com ಗೆ ಸದ್ಯಕ್ಕೆ ಸಿಕ್ಕಿರೋ ಮಾಹಿತಿ. ಇದು ಪಕ್ಕಾ ಆಗೋದಕ್ಕೆ ಕೆಲವೇ ಕ್ಷಗಳಷ್ಟೇ ಬಾಕಿ ಉಳಿದುಕೊಂಡಿವೆ..
ಜ್ಯೋತಿ ಗೌಡ, ನಾಗಮಂಗಲ

ಈ ಬಾರಿ ಜೋಡಿ ಕಿಲಾಡಿಗಳು..! 

ಜೀ ಕನ್ನಡ ವಾಹಿನಿಯಲ್ಲಿ ಜನಮನ ಗೆದ್ದ ಡ್ರಾಮ ಜ್ಯೂನಿಯರ್ಸ್ ಗ್ರಾಂಡ್ ಫಿನಾಲೆ ನಡೀತು. ಬಳ್ಳಾರಿಯ ಹೊಸಪೇಟೆಯಲ್ಲಿ ನಡೆದ ಗ್ರಾಂಡ್ ಫಿನಾಲೆಯಲ್ಲಿ ಜಮಾಯಿಸಿದ್ದ ಲಕ್ಷಾಂತರ ಜನರ ಎದುರು ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಗ್ರಾಂಡ್ ಫಿನಾಲೆ ನೆರವೇರಿತು. ಕಾರ್ಯಕ್ರಮದ ಸೂಪರ್ ಜಡ್ಜ್ ಗಳಾದ ಮುಖ್ಯಮಂತ್ರಿ ಚಂದ್ರು, ಜ್ಯೂಲಿ ಲಕ್ಷ್ಮೀ, ವಿಜಯ್ ರಾಘವೇಂದ್ರ 8 ಜನ ಸ್ಪರ್ಧಿಗಳ ಬಗ್ಗೆ ನಿರ್ಣಾಯಕ ನಿರ್ಧಾರ ಮಾಡಿದ್ರು.
ಮೊದಲು 8 ಜನ ಸ್ಪರ್ಧಿಗಳಲ್ಲಿ ಮೊದಲು ಜೋಡಿಗಳಾಗಿ ನಾಲ್ಕು ಕಾರ್ಯಕ್ರಮಗಳು ನಡೆದ್ವು. ಕೊನೆಗೆ ಎಂಟರಲ್ಲಿ ನಾಲ್ವರನ್ನು ಫೈನಲ್ ರೌಂಡ್ ಗೆ ಕಳುಹಿಸಲಾಯ್ತು. ಆ ಬಳಿಕ ಏಕ ವ್ಯಕ್ತಿ ಪ್ರದರ್ಶನ ನೀಡಿದ ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ಉತ್ತಮ ಪ್ರದರ್ಶನ ನೀಡಿದ್ರು.. ಎಲ್ಲಾ ಸ್ಪರ್ಧಿಗಳು ಉತ್ತಮ ಪ್ರದರ್ಶನ ನೀಡಿದ ಬಳಿಕ ಗೆಲುವಿನ ಲೆಕ್ಕಾಚಾರದ ಕಠಿಣವಾಯ್ತು. ಆ ಬಳಿಕ ಇಬ್ಬರು ಸ್ಪರ್ಧಿಗಳನ್ನು ರನ್ನರಪ್ ಎಂದು ಘೋಷಿಸಿ, ತಲಾ ಒಂದು ಲಕ್ಷ ಹಾಗೂ ಎರಡು ಲಕ್ಷ ರೂಪಾಯಿ ಬಹುಮಾನ ನೀಡಲಾಯ್ತು. ಕೊನೆಗೆ ಅಮಿತ್ ಹಾಗು ವಂಶಿ ಅವರನ್ನು ಜಂಟಿ ವಿನ್ನರ್ ಎಂದು ಘೋಷಣೆ ಮಾಡಿ, ಬರೋಬ್ಬರಿ ನಾಲ್ಕು ಲಕ್ಷ ರೂಪಾಯಿ ಬಹುಮಾನ ನೀಡಲಾಯ್ತು..
ಜ್ಯೋತಿ ಗೌಡ, ನಾಗಮಂಗಲ

ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಹುಡುಗಿ ಹಲ್ಲೆ..!

ಬಿಗ್ ಬಾಸ್ ಮನೆಯಲ್ಲಿ ಒಂದು ರೂಲ್ಸ್ ಇದೆ. ಯಾವುದೇ ಕಾರಣಕ್ಕೂ ಸಹಸ್ಪರ್ಧಿ ಮೇಲೆ ದೈಹಿಕವಾಗಿ ಹಲ್ಲೆ ಮಾಡುವಂತಿಲ್ಲ. ಆದ್ರೆ ಈ ಬಾರಿ ಕಿರಿಕ್ ಪಾರ್ಟಿ ಹೆಣ್ಣು ಸಂಯುಕ್ತ ಹೆಗ್ಡೆ, ಜ್ಯೋತಿಷಿ ಸಮೀರ್ ಆಚಾರ್ಯ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ಬಳಿಕ ಬಿಗ್ ಬಾಸ್ ಕೂಡ ಕ್ರಮ ಕೈಗೊಳ್ಳಲು ಗೊಂದಲಕ್ಕೆ ಈಡಾಗಿದ್ದು ತಾಳ್ಮೆಯಿಂದ ಇಬ್ಬರನ್ನೂ ಕರೆದು ಮಾತನಾಡಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಿದ್ರು..ಆದರೆ ಸಮಸ್ಯೆಯ ತೀವ್ರತೆ ಅರಿತು ಕ್ರಮಕ್ಕೆ ಮುಂದಾಗಬೇಕಾಯ್ತು.

ಇದೇ ಮೊದಲ ಬಿಗ್ ಬಾಸ್ ನಲ್ಲಿ ಹಲ್ಲೆ ಆಗಿದ್ದು..?

ಇದೇ ಮೊದಲೇನಲ್ಲ. ಕನ್ನಡ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹುಚ್ಚ ವೆಂಕಟ್ ಗಾಯಕ ರವಿ ಮುರೂರು ಮೇಲೆ ಹಲ್ಲೆ ಮಾಡಿದ್ರು, ಅದೇ ಕಾರಣಕ್ಕೆ ಬಿಗ್ ಬಾಸ್ ಮನೆಯಿಂದ ಹೊರದಬ್ಬಲ್ಪಟ್ಟಿದ್ರು. ಇದೀಗ ಮತ್ತೊಂದು ಘಟನೆ ನಡೆದಿದ್ದು, ಕಿರಿಕ್ ರಾಣಿ ಸಂಯುಕ್ತ ಹೆಗ್ಡೆ ಸಮೀರ್ ಆಚಾರ್ಯ ಅವರ ಮೇಲೆ ಹಲ್ಲೆ ಮಾಡುವ ಮೂಲಕ ತಾವು ಏನು ಅನ್ನೋದನ್ನು ತೋರಿಸಿದ್ದಾರೆ. ಟಾಸ್ಕ್ ನಲ್ಲಿ ಆಟವಾಡುವಾಗ ಯಾರೋ ಕಚಗುಳಿ ಕೊಟ್ರು ಅನ್ನೋ ಕಾರಣಕ್ಕೆ ಕೆಂಡಾಮಂಡಲರಾದ ನಟಿಮಣಿ, ಸಮೀರ್ ಮೇಲೆ ಮನಸೋಇಚ್ಛೆ ಬಾರಿಸಿದ್ರು. ಮುಗ್ದನಂತೆ ಆಟವಾಡುವ ಸಮೀರ್ ಆಚಾರ್ಯ, ಇಂಗು ತಿಂದ ಮಂಗನಂತೆ ಏಟು ತಿಂದು ಕಣ್ಣು ಕೆಂಪೇರಿಸಿಕೊಂಡು ನಿಂತಿದ್ರು.

ಕಾಲೇಜು ಕುಮಾರನಿಗೂ ಕಿರಿಕ್ ರಾಣಿ ಕಿರಿಕಿರಿ.. ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾದ ಕಾಲೇಜು ಕುಮಾರ ಚಿತ್ರದಲ್ಲಿ ಇದೇ ಸಂಯುಕ್ತ ಹೆಗ್ಡೆ ಆಕ್ಟ್ ಮಾಡಿದರು. ಆದರೆ ಚಿತ್ರ ಬಿಡುಗಡೆ ವೇಳೆ ನಿರ್ಮಾಪಕರು ಕರೆದಾಗ ಪ್ರಚಾರಕ್ಕೆ ಬಾರದೆ ಕಿರಿಕಿರಿ ಮಾಡಿದ್ದರು. ಅದೇ ವಿಚಾರವನ್ನು ನಿರ್ಮಾಪಕ ಸುದ್ದಿಗೋಷ್ಟಿ ಕರೆದು ಕಿರಿಕ್ ಹುಡುಗಿಯ ರಂಪಾಟದ ಬಗ್ಗೆ ಹೇಳಿಕೊಂಡಿದ್ರು. ಇದೀಗ ಮತ್ತೊಮ್ಮೆ ರಂಪಾಟ ಮಾಡಿರುವ ಕಿರಿಕ್ ಹುಡುಗಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿರದೆ ಅತಿಥಿಯಾಗಿ ಮನೆಯೊಳಕ್ಕೆ ಹೋಗಿದ್ದ ಸಂಯುಕ್ತ ಹೆಗ್ಡೆ, ಕೋಪದ ಕೈಗೆ ಬುದ್ಧಿ ಕೊಟ್ಟು ಮೂರ್ಖಳಾಗಿದ್ದಾಳೆ. ಇನ್ನಾದರೂ ಜೀವನದಲ್ಲಿ ಇದನ್ನು ಪಾಠ ಎಂದುಕೊಂಡು ತಾಳ್ಮೆಯನ್ನು ಮೈಗೂಡಿಸಿಕೊಂಡು ಬದುಕಬೇಕಿದೆ. ಮುಂದಿನವಾರ ಸುದೀಪ್ ಏನ್ಮಾಡ್ತಾರೆ ಅನ್ನೋದು ಕುತೂಹಲಕಾರಿ ಆಗಿದೆ.

ಜ್ಯೋತಿ ಗೌಡ, ನಾಗಮಂಗಲ

ಸಿಹಿಕಹಿ ಚಂದ್ರು ಮಾತೃ ಭಾಷೆ ಯಾವುದು..? ಕನ್ನಡ ಅಲ್ವಾ..?

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿರುವ ಸಿಹಿಕಹಿ ಚಂದ್ರು ಹಲವಾರು ಕನ್ನಡ ಸಿನಿಮಾಗಳಲ್ಲಿ ವಿಭಿನ್ನ ಪಾತ್ರ ಮಾಡುವ ಮೂಲಕ ಕನ್ನಡ ಸಿನಿಪ್ರೇಕ್ಷರ ಮನಗೆದ್ದಿದ್ದಾರೆ.. ಆದ್ರೆ ಅವರ ಮಾತೃ ಭಾಷೆ ಬಗ್ಗೆ ಕನ್ನಡಿಗರು ಯಾವತ್ತೂ ಪ್ರಶ್ನೆ ಮಾಡಿರಲಿಲ್ಲ, ಕೇಳಿರಲೂ ಇಲ್ಲ. ಇವತ್ತು ಬಿಗ್ ಬಾಸ್ ನಲ್ಲಿ ಒಂದು ಟಾಸ್ಕ್ ಇತ್ತು. ಅದರಲ್ಲಿ ಒಬ್ಬೊಬ್ಬ ಸ್ಪರ್ಧಿಗೂ ಪ್ರಿಯವಾದ ವಸ್ತುಗಳನ್ನು ಅವರ ಮನೆಯಿಂದಲೇ ತರಿಸಿದ್ದ ಬಿಗ್ ಬಾಸ್ ತಂಡ, ಸ್ಪರ್ಧಿಗಳನ್ನು ಭಾವನಾತ್ಮಕವಾಗಿ ಕಟ್ಟಿಡುವ ಪ್ರಯತ್ನ ಮಾಡಿದ್ರು. ತಮ್ಮ ಉದ್ದೇಶ ಏನು ಹೊಂದಿದ್ದರು ಅದರಲ್ಲಿ ಬಿಗ್ ಬಾಸ್ ಸಂಪೂರ್ಣವಾಗಿ ಯಶಸ್ಸು ಕೂಡ ಸಾಧಿಸಿದ್ರು. ಆ ವೇಳೆ ಸಿಹಿಕಹಿ ಚಂದ್ರು ಯಾವ ಭಾಷೆಯವರು, ಕನ್ನಡ ಅಲ್ವಾ ಅನ್ನೋ ಪ್ರಶ್ನೆ ವೀಕ್ಷಕರಿಗೆ ಎದುರಾಯ್ತು..

ಯಾವ ಸ್ಪರ್ಧಿಗೆ ಏನು ಇಷ್ಟ ಗೊತ್ತಾ..?

ಇಷ್ಟದ ವಸ್ತುಗಳನ್ನು ಮಾತ್ರನೇ ಬಿಗ್ ಬಾಸ್ ತಂಡ ತರಿಸಿರಲಿಲ್ಲ.. ಆದ್ರೆ ಯಾವ ವಸ್ತುವನ್ನ ನೋಡಿದ್ರೆ ಯಾರು ಭಾವನಾತ್ಮಕವಾಗಿ ಸಿಕ್ಕಿ ಬೀಳ್ತಾರೆ ಅನ್ನುಸುತ್ತೋ ಅಂತ ವಸ್ತುಗಳನ್ನು ತರಿಸಿದ್ರು.. ಅದರಲ್ಲಿ ದಿವಾಕರ್ ಸೇಲ್ಸ್ ಹೋಗಬೇಕಾದ್ರೆ ಕಾಯಂ ಆಗಿ ತೆಗೆದುಕೊಂಡು ಹೋಗುವ ಬ್ಯಾಗ್, ತಮ್ಮ ಶಾಲೆಯಲ್ಲಿ ನಡೆದಿದ್ದ ಕಾಂಪಿಟೇಷನ್ ನಲ್ಲಿ ಅಮ್ಮ ಡಿಸೈನ್ ಮಾಡಿದ್ದ ಡ್ರೆಸ್ ನಿಂದ ಗಳಿಸಿದ್ದ ಪ್ರಶಸ್ತಿ ನೋಡಿ ನಿವೇದಿತ ಗೌಡ ಖುಷಿಯಾದ್ರು.ಕೃಷಿ ತನ್ನ ಪಾರ್ಟ್ನರ್ ಟೆಡ್ಡಿಬೇರ್ ನೋಡಿ ಭಾವುಕರಾದ್ರು, ಆಶಿತಾ ಬಾಲಿಯಿಂದ ತನ್ನ ತಂಗಿಗಾಗಿ ತಂದಿದ್ದ ಗಿಫ್ಟ್ ನೋಡಿ ಕಣ್ಣೀರಿಟ್ರು.. ಇನ್ನೂ ನಟ ಜೆಕೆ ಕ್ರಿಕೆಟ್‌ ಟೂರ್ನಿಮೆಂಟ್ ನಲ್ಲಿ ಗೆದ್ದಿದ್ದ ಶೀಲ್ಡ್ ನೋಡಿ ಖುಷಿಯಾದ್ರು..ರಿಯಾಜ್ ತಮ್ಮ ಪತ್ನಿಗಾಗಿ ಕೊಡಿಸಿದ್ದ ವಸ್ತು ನೋಡಿ ಕಣ್ಣೀರಾದ್ರು.ಇನ್ನೂ ಈಗಾಗಲೇ ತಮ್ಮ ತಂದೆಯ ನೆನಪಿಗಾಗಿ ಪಾಲೀಶ್ ಬ್ರಷ್ ಇಟ್ಟುಕೊಂಡಿದ್ದೇನೆ ಎಂದಿದ್ದ ಜಯಶ್ರೀನಿವಾಸನ್ ಅಪ್ಪನ ನೆನಪಿನಲ್ಲಿ ಕಣ್ಣೀರಿಟ್ರು.ಜಗನ್ ಅಮ್ಮನಿಗೆ ಮಾಡಿಸಿಕೊಟ್ಟ ಓಲೆ, ಉಂಗುರ ನೋಡಿ ನೆನಪಾದ್ರು. ಚಂದನ್ ಬಾಲ್ಯದ ಫ್ಯಾನ್ಸಿ ಡ್ರೆಸ್ ಕಾಂಪಿಟೇಷನ್ ನಲ್ಲಿ ಸ್ವಾಮಿ ವಿವೇಕಾನಂದ ಆಗಿದ್ದನ್ನು ನೆನಪು ಮಾಡ್ಕೊಂಡ್ರು.ಅನು ತನ್ನ ಭಾವನೆಗಳನ್ನು ಹೇಳಿಕೊಳ್ಳಲು ಇರುವ ವಸ್ತು ನೋಡಿ ಕಣ್ಣೀರು ಸುರಿಸಿದ್ರು..ಆ ವೇಳೆ ಚಂದ್ರು ಭಾಷೆ ಬಗ್ಗೆ ಅನುಮಾನ ಮೂಡುವ ಘಟನೆ ನಡೀತು.

ಕನ್ನಡ ಮಾತನಾಡುವ ಜನರು ಯಾವುದಾದರೂ ಪ್ರೀತಿಯಿಂದ ಹೇಳುವಾಗ ತಮ್ಮ ಮಾತೃಭಾಷೆಯಲ್ಲಿ ಹೇಳ್ತಾರೆ. ಯಾಕಂದ್ರೆ ನಮ್ಮ ಮಾತೃಭಾಷೆಯಲ್ಲಿ ಅನಿಸಿಕೆ ವ್ಯಕ್ತಪಡಿಸಿದಾಗ ತುಂಬಾ ಪರಿಣಾಮಕಾರಿ ಇರುತ್ತದೆ ಅನ್ನೋದು ಜನಜನಿತ ಸತ್ಯ ಕೂಡ ಹೌದು. ಹಾಗಾಗಿಯೇ ಯಾರಾದರೂ ಕಷ್ಟದಲ್ಲಿದ್ದಾಗ ಅವರು ತಮ್ಮ ಮಾತೃಭಾಷೆಯಲ್ಲೇ ನೋವನ್ನು ವ್ಯಕ್ತಪಡಿಸ್ತಾರೆ ಅನ್ನೊದು. ಆದ್ರೆ ಸಿಹಿಕಹಿ ಚಂದ್ರು ಗೀತಾಗೆ ಬರೆದಿದ್ದ ಪ್ರೇಮ ಕವನ ಬಿಗ್ ಬಾಸ್ ಮ್ಯೂಸಿಯಂ ಗೆ ಬಂದಿತ್ತು. ಅದರ ಬಗ್ಗೆ ಮಾತನಾಡ್ತಿರುವಾಗ ಚಂದ್ರು, ನಾನು ಗೀತಾಗೆ ತುಂಬಾ ಪ್ರೀತಿಯಿಂದ ಬರೆದ ಪ್ರೇಮ ಪತ್ರ, ಹಿಂದಿ ಭಾಷೆಯಲ್ಲಿ ಇದೆ. ಅದನ್ನು ಆಗಿನಿಂದಲೂ ರಕ್ಷಣೆ ಮಾಡಿ ಇಡಲಾಗಿದೆ ಅಂದ್ರು. ಹಾಗಿದ್ರೆ ಚಂದ್ರು ಭಾಷೆ ಯಾವುದು..? ತುಂಬಾ ಚೆನ್ನಾಗಿ ಹಿಂದಿ ಭಾಷೆ ಬಲ್ಲವರಾಗಿ ಹಿಂದಿಯಲ್ಲೇ ಪ್ರೇಮ ಕವನ ಬರೆದ್ರಾ ಅನ್ನೋ ಅನುಮಾನಗಳಿಗೆ ಅವರೇ ಉತ್ತರ ಕೊಡಬೇಕಿದೆ. ಅಥವಾ ಶನಿವಾರ ಈ ಬಗ್ಗೆ ಕಿಚ್ಚ ಸುದೀಪ್ ಪ್ರಸ್ತಾಪ ಮಾಡಿ ಉತ್ತರ ಪಡೆದ್ರೆ ಗೊಂದಲಕ್ಕೆ ತೆರೆ ಬೀಳುತ್ತದೆ.

ಜ್ಯೋತಿ ಗೌಡ, ನಾಗಮಂಗಲ

ಬಿಗ್ ಬಾಸ್ ನಲ್ಲಿ ಈ ವಾರ ಯಾರ ಆಟಕ್ಕೆ ಬ್ರೇಕ್ ?

ತಂದೆಯ ಅನಾರೋಗ್ಯದಿಂದ ಬಿಗ್ ಮನೆಯಿಂದ ಹೊರ ಹೋಗಿದ್ದ ತೇಜಸ್ವಿನಿ ಮರಳಿ ಬಂದಿದ್ದಂತೂ ಆಗಿದೆ. ಹೋಗುವಾಗಲೇ ಮತ್ತೆ ಮನೆ ಸೇರಿ ಆಟ ಮುಂದುವರೆಸುವ ಇರಾದೆ ವ್ಯಕ್ತಪಡಿಸಿದ್ದ ತೇಜಸ್ವಿನಿ ಈ ವಾರ ನಾಮಿನೇಟ್ ಆಗಿದ್ದಾರೆ.

ಈ ವಾರ ನಾಮಿನೇಟ್ ಆಗಿರುವವರು ಸಮೀರ್ ಆಚಾರ್ಯ, ಜಯ ಶ್ರೀನಿವಾಸನ್,ನಿವೇದಿತಾ, ಜಗನ್ ,ಕಾರ್ತಿಕ್, ಅನುಪಮಾ, ಸಿಹಿಕಹಿ ಚಂದ್ರು ,ತೇಜಸ್ವಿನಿ .

ಸಿಹಿಕಹಿ ರುಚಿ ಚೆನ್ನಾಗೆ ಇರೋದ್ರಿಂದ ಔಟ್ ಆಗೋ ಸಾಧ್ಯತೆ ಇಲ್ಲವೇ ಇಲ್ಲ ಅನ್ನಬಹುದು. ಜಗನ್ -ಆಶಿತಾ ಮಧ್ಯೆ ಇರೋ ಕೆಮಿಸ್ಟ್ರಿ ಜಗನ್ ನ ಮನೆಯಲ್ಲಿ ಉಳಿಸೋ ಸಾಧ್ಯತೆ ಹೆಚ್ಚು. ನಿವೇದಿತಾ ಡಾಲ್ ಇಷ್ಟು ಬೇಗ ಛೆ ..ಛೆ..

ತೇಜಸ್ವಿನಿ ತಂದೆಗೆ ಹುಶಾರಿಲ್ಲ ಅಯ್ಯೋ ಪಾಪ ಅಂತ ಮನೆಯವರೆಲ್ಲ ಸಮಾಧಾನ ಮಾಡಿದ್ರೂ ಕೂಡ ಮೊದಲಿಂದಲೂ ಆಟದಲ್ಲಿ ಉತ್ಸಾಹ ತೋರಿರೋದು ಅಷ್ಟಕಷ್ಟೇ.

ಸಮೀರ್ ಈ ವಾರ ಉಗ್ರಾವತಾರ ತೋರಿದ್ದಾರೆ . ಜಯ ಮಾಮುಲಿನಂತೆ ಇದ್ದಾರೆ . ತೇಜು ,ಜಯ ,ಸಮೀರ್ ಇವರಲ್ಲಿ ಮನೆಯಿಂದ ಹೊರಹೋಗಲು ಪೈಪೋಟಿ ಅನ್ನಬಹುದು .

ಬಿಗ್ ಬಾಸ್ ಮನೆಯಿಂದ ತೇಜಸ್ವಿನಿ ಔಟ್

ಸೀರಿಯಲ್ ಸ್ಟಾರ್ ತೇಜು ಬಿಗ್ ಬಾಸ್ ಮನೆಯ ಪ್ರಯಾಣ ಮುಗಿಸಿದ್ದಾರೆ. ವಾರದ ಮಧ್ಯದಲ್ಲೇ ಬಿಗ್ ಬಾಸ್ ಮನೆ ತೊರೆದು ಮನೆಯತ್ತ ಹೊರಟಿದ್ದಾರೆ. ಇದಕ್ಕೆ ಕಾರಣ ಬಿಗ್ ಬಾಸ್ ಕೊಟ್ಟ ಶಾಕಿಂಗ್ ನ್ಯೂಸ್.. ಅಸಲಿಗೆ ಹೊರ ಪ್ರಪಂಚದಲ್ಲಿ ನಡೆಯುವ ಯಾವುದೇ ವಿಚಾರಗಳನ್ನು ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ತಿಳಿಸಲಾಗುವುದಿಲ್ಲ. ಆದ್ರೆ ಈ ಬಾರಿ ಆ ನಿಯಮ ಮುರಿದ ಬಿಗ್ ಬಾಸ್ ತೇಜಸ್ವಿನಿ ಮನೆಯಿಂದ ಹೊರ ಹೋಗುವಂತೆ ಮಾಡಿದ್ದಾರೆ.
ತೇಜಸ್ವಿನಿ ಮನೆಯಿಂದ ಹೊರಬಂದಿದ್ದು ಯಾಕೆ..?
ನಟಿ ತೇಜಸ್ವಿನಿ ತಂದೆ  ಆರೋಗ್ಯವಾಗಿಯೇ ಇದ್ರು, ಆದ್ರೆ ಇದ್ದಕ್ಕಿದ್ದಂತೆ ಕಿಡ್ನಿ ಸಮಸ್ಯೆ ಕಾಣಿಸಿಕೊಂಡಿದ್ರಿಂದ ಆದ್ಪತ್ರೆಗೆ ದಾಖಲಾಗಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಆಪರೇಷನ್ ಮಾಡಿದ್ದು ಚೇತರಿಸಿಕೊಳ್ತಿದ್ದಾರೆ ಅಂತ ವೈದ್ಯರು ತಿಳಿಸಿದ್ದಾರೆ. ಆ ವಿಚಾರವನ್ನು ಬಿಗ್ ಬಾಸ್ ನಟಿ ತೇಜಸ್ವಿನಿ ಅವರಿಗೆ ತಿಳಿಸಿದ್ರು, ಜೊತೆಗೆ ಮನೆಯಲ್ಲಿ ಇರುವ ಅಥವಾ ಮನೆಯಿಂದ ಹೊರಹೋಗುವ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರ ನೀಡಿದ್ರು. ಆದ್ರೆ ತೇಜಸ್ವಿನಿ ಮನೆಯಿಂದ ಹೊರಹೋಗುವ ನಿರ್ಧಾರ ಆಯ್ಕೆ ಮಾಡಿಕೊಂಡಿದ್ದಾರೆ.
ತೇಜಸ್ವಿನಿ ನಿರ್ಧಾರಕ್ಕೆ ಕಾರಣ ಇದು..?
ಬಿಗ್ ಬಾಸ್ ಮೊದಲಿಗೆ ಆಯ್ಕೆ ಮಾಡುವ ಸ್ವತಂತ್ರ ನೀಡಿದಾಗ, ಜಾಣ್ಮೆಯ ನಡೆಯಿಟ್ಟ ತೇಜು, ಮನಯವರ ಜೊತೆ ಒಮ್ಮೆ ಮಾತನಾಡುವ ಅವಕಾಶಕ್ಕೆ ಬೇಡಿಕೆ ಇಟ್ಟರು. ಆ ಬೇಡಿಕೆ ಮನ್ನಿಸಿದ ಬಿಗ್ ಬಾಸ್ ತೇಜಸ್ವಿನಿಗೆ ತಾಯಿ ಜೊತೆ ಮಾತನಾಡಲು ಅವಕಾಶ ಮಾಡಿಕೊಟ್ರು, ಆದ್ರೆ ತೇಜಸ್ವಿನಿ ತಾಯಿ ಧೃತಿಗೆಟ್ಟಂತೆ ಮಾತನಾಡಿದರು, ಜೊತೆಗೆ ನಿಮ್ಮ ತಂದೆ ನಿನ್ನನ್ನು ನೋಡಬೇಕು ಅನ್ನುತ್ತಿದ್ದಾರೆ ಅಂತ ಭಾವನಾತ್ಮಕ ಮಾತುಗಳನ್ನಾಡಿದರು. ಇದರಿಂದ ಮನಸ್ಸು ಗಟ್ಟಿ ಮಾಡಿಕೊಳ್ಳಲು ಮಾತನಾಡಿದ ತೇಜು, ಅಮ್ಮನನ್ನು ಸಂತೈಸಿ ಮನೆಯಿಂದ ಹೊರಬರುವುದಾಗಿ ಘೋಷಣೆ ಮಾಡಿದ್ದಾರೆ. ಈ ವಾರ ಎಲಿಮಿನೇಷನ್ ಲಿಸ್ಟ್ ನಲ್ಲಿದ್ದ ತೇಜಸ್ವಿನಿ ವಾರದ ಮಧ್ಯದಲ್ಲಿ ಮನೆಯಿಂದ ಹೊರಬಿದ್ದಿದ್ದಾರೆ.
ಜ್ಯೋತಿ ಗೌಡ, ನಾಗಮಂಗಲ

Like Us, Follow Us !

120,195FansLike
1,826FollowersFollow
1,573FollowersFollow
4,665SubscribersSubscribe

Trending This Week