17 C
Bangalore, IN
Wednesday, January 24, 2018
Home ಸಿನಿಮಾ ನ್ಯೂಸ್ ಟಿವಿ ನ್ಯೂಸ್

ಟಿವಿ ನ್ಯೂಸ್

Get Latest Kannada TV News, News On Kannada TV Serials

ಮತ್ತೆ ಕಿರುತೆರೆಯಲ್ಲಿ ರಚಿತಾ ರಾಮ್ -ಸೃಜನ್ ಹವಾ !?

ರಚಿತಾ ರಾಮ್ “ಭರ್ಜರಿ” ಯಶಸ್ಸಿನಲ್ಲಿ ತೇಲುತ್ತಿರುವಾಗಲೇ ಅವಕಾಶಗಳು ಅರಸಿ ಬರುತ್ತಿವೆ .  ಉಪ್ಪಿ ಜೊತೆ ಉಪ್ಪಿರುಪ್ಪಿಯಲ್ಲಿ ಡುಯೆಟ್ , ಜಾನಿ ಜಾನಿ ಎಸ್ ಪಾಪ ಅಂತ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಜೊತೆಗೆ ಕಲರ್ಸ್ ಕನ್ನಡದಲ್ಲಿ ಮುಂದಿನ ನವೆಂಬರ್ 4ರಿಂದ ಬರಲಿರುವ ಕಾಮಿಡಿ ಟಾಕೀಸ್ ನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ .

ರಚಿತಾ ಜೊತೆಯಲ್ಲಿ ಮಜಾ ಟಾಕೀಸ್ ಮೂಲಕ ಮಾತಿನ ಪಟಾಕಿ ಸಿಡಿಸಿದ, ಟೈಮಿಂಗ್ ಅಂದ್ರೆ ಸೃಜನ್ ಅನ್ನಿಸಿಕೊಂಡ ಸೃಜನ್ ಲೋಕೇಶ್ ತೀರ್ಪು ಕೊಡಲಿದ್ದಾರೆ.

ಇದಾಗಲೇ ಕೆಲವು ಸಂಚಿಕೆಗಳ ಚಿತ್ರೀಕರಣ ಮುಕ್ತಾಯವಾಗಿವೆ. ಅಗ್ನಿಸಾಕ್ಷಿ  ಖ್ಯಾತಿಯ ವಿಜಯ್ ಸೂರ್ಯ ಕಾಮಿಡಿ ಟಾಕೀಸ್ ನ ನಿರೂಪಕ.

ಕಾಮಿಡಿ ಷೋನಲ್ಲಿ ರಚಿತ ರಂಗು ಹೇಗಿರಲಿದೆ ? ಸೃಜನ್ ಹೊಸ ಅವತಾರ ಪ್ರೇಕ್ಷರನ್ನ ರಂಜಿಸುತ್ತಾ ? ಸೂರ್ಯ ಬೆಳಗುತ್ತಾರಾ? ಎಲ್ಲ ಗೊತ್ತಾಗಬೇಕಾದ್ರೆ ನವೆಂಬರ್ ನಾಲ್ಕರವರೆಗೂ ಕಾಯಲೇಬೇಕು.

ಕಿಚ್ಚ ಸುದೀಪ್ ಹೊಸ ಅವತಾರ ಏನು ಗೊತ್ತಾ ..?

ಬಿಗ್ ಬಾಸ್ ಅಂದ್ರೆ ನೆನಪಿಗೆ ಬರೋದು ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್. ಬಿಗ್ ಬಾಸ್ ನಲ್ಲಿ ಸುದೀಪನ ನಿರೂಪಣೆಯೇ ಬಲು ಮನೋಹರ. ಪ್ರತಿ ಶುಕ್ರವಾರ ಸ್ಪರ್ಧಿಗಳ ಜೊತೆ ನ್ಯಾಯ ಪಂಚಾಯ್ತಿ ಮಾಡುವ ಕಿಚ್ಚ, ಭಾನುವಾರ ಮನೆಯಿಂದ ಹೊರಬಂದ ಸ್ಪರ್ಧಿ ಜೊತೆ ಮಾತನಾಡ್ತಿದ್ರು. ಈ ಬಾರಿ ಸ್ವಲ್ಪ ಬದಲಾವಣೆ ಮಾಡಿಕೊಂಡಿರುವ ಸುದೀಪ್ ಭಾನುವಾರ ವಿಭಿನ್ನವಾಗಿ ಕಾಣಿಸಿಕೊಳ್ತಿದ್ದಾರೆ.
ಅಡುಗೆ ಭಟ್ಟನಾಗಿ ಕಿಚ್ಚನ ಕೈ ರುಚಿ..!
ಪ್ರತಿ ಭಾನುವಾರ ಕಿಚ್ಚ ಸುದೀಪ್ ಅತಿಥಿಗಳ ಜೊತೆ ಅಡುಗೆ ಮಾಡ್ತಾರೆ. ಅದಕ್ಕಾಗಿಯೇ ಬಿಡದಿ ಬಳಿಯ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಅಡುಗೆ ಮನೆ ನಿರ್ಮಾಣ ಮಾಡಿಸಿದ್ದಾರೆ. ವಾರಕ್ಕೊಮ್ಮೆ ಕನ್ನಡ ಸಿನಿಮಾಗಳ ಪ್ರಮೋಷನ್ ಜೊತೆಗೆ ಬಿಗ್ ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿಗಳ ಜೊತೆ ಮಾತು ಹರಟೆ ನಡೆಯುತ್ತೆ. ಅದಕ್ಕೂ ಮೊದಲು ಸಿನಿಮಾ ಪ್ರಮೋಷನ್ ಪಡೆದುಕೊಳ್ಳುವ ತಂಡದ ಒಬ್ಬ ಸದಸ್ಯರ ಜೊತೆ ಅಡುಗೆ ಮಾಡಲಿದ್ದಾರೆ.
ಕೋಳಿ ಕಟ್ ಮಾಡಿದ ನಟಿ ಸಂಯುಕ್ತ ಹೆಗಡೆ..! 
ನಟಿ ಸಂಯುಕ್ತ ಹೆಗಡೆ ಯಾರಿಗೆ ತಾನೆ ಗೊತ್ತಿಲ್ಲ. ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಉಂಡಾಡಿ ಗುಂಡನ ಹಾಗೆ ಆಡ್ತಿದ್ದ ಸಂಯುಕ್ತ ಹೆಗಡೆ ಭಾನುವಾರ ಕಿಚ್ಚನ ಅಡುಗೆ ಮನೆಗೆ ಬಂದಿದ್ರು. ಅಂದಹಾಗೆ ನವೆಂಬರ್ ತಿಂಗಳಲ್ಲಿ ರಿಲೀಸ್ ಗೆ ರೆಡಿಯಾಗಿರೋ ಕಾಲೇಜು ಕುಮಾರ ಚಿತ್ರದ ಪ್ರಮೋಷನ್ ಗಾಗಿ. ಬಿಗ್ ಬಾಸ್ ಮೊದಲ ವಾರದ ಸಂಡೆ ವಿತ್ ಸುದೀಪ ಕಾರ್ಯಕ್ರಮದಲ್ಲಿ ಮೊದಲಿಗೆ ಕಿಚ್ಚನ ಚಿಕನ್ ರೆಸೆಪಿ ಮಾಡಿದ್ರು. ಕಿಚ್ಚ ಅಡುಗೆಯ ಕಲೆ ಹೇಳಿಕೊಡ್ತಿದ್ರೆ, ಸಂಯುಕ್ತ ಹೆಗಡೆ ಅವರನ್ನೇ ಪಾಲಿಸಿಕೊಂಡು ಹೋದ್ರು. ಕೊನೆಗೆ ಇಬ್ಬರೂ ಅತ್ಯುತ್ತಮ ಚಿಕನ್ ಅಡುಗೆ ಸವಿದು ಬಾಯಿ ಚಪ್ಪರಿಸಿದ್ರು.. ಭಾನುವಾರ ಆಗಿದ್ರಿಂದ ಜನರೂ ಮನೆಯಲ್ಲಿ ಬಾಯಿ ನೀರು ಸುರಿಸುತ್ತ ಭಾನುವಾರದ ಬಾಡೂಟ ಸವಿದ್ರು.. ಒಂದು ಅತ್ಯುತ್ತಮ ಕಲೆ ಕಿಚ್ಷನಿಗೆ ಒಲಿದಿದ್ದು, ಗುಡ್ ಶೆಫ್ ಅನ್ನೋದನ್ನ ತೋರಿಸಿದ್ರು..
ಜ್ಯೋತಿ ಗೌಡ, ನಾಗಮಂಗಲ

ಬಿಗ್ ಬಾಸ್ ನಲ್ಲಿ ಮೇಘಾ ಬಚಾವ್ ಆಗಿದ್ದು ಹೀಗಾ !?

ಬಿಗ್ ಬಾಸ್ ಸೀಸನ್ ಐದರ ಮೊದಲ ವಾರದ ಎಲಿಮಿನೇಷನ್ ಆಗಿದೆ. ಮೊದಲ ವಾರದ ಫರ್ಫಾಮೆನ್ಸ್ ಆಧಾರದಲ್ಲಿ ನೋಡಿದ್ರೆ ಕಣ್ಣೀರ ಹನಿ ಉದುರಿಸಿ ಕೊಡಗು ಸೇರಬೇಕಾಗಿದ್ದು ಮೇಘಾ. ಯಾಕಂದ್ರೆ ಆಕೆ ಕೆಟ್ಟವಳು ಎಂದಲ್ಲ. ಆದ್ರೆ ಆಕೆ ಮೊದಲ ವಾರದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲಿಲ್ಲ. ಯಾರೊಂದಿಗೂ ಹೆಚ್ಚಾಗಿ ಬೆರೆಯಲಿಲ್ಲ. ಇದು ಮನೆಯವರು ಯಾರನ್ನು ಹೊರಗೆ ಕಳಿಸ್ತೀರಿ ಅಂದಾಗ ಅವರ ಹೇಳಿಕೆಯಿಂದಲೇ ಸ್ಪಷ್ಟವಾಯ್ತು. ಈ ಕಾರಣದಿಂದಲೇ ಬಹುತೇಕ ಮಂದಿ ಮನೆಯಿಂದ ಹೊರ ಕಳಿಸುವ ಹೆಸರಿಗೆ ಮೇಘಾ ಎಂದು ಉಸುರಿಬಿಟ್ಟರು..
ಆದರೆ ಬಿಗ್ ಬಾಸ್ ತೀರ್ಮಾನ ಬೇರೆಯೇ ಆಗಿತ್ತು. ಅದಕ್ಕೆ ಕಾರಣ ಮೇಘಾ ತೋರಿಸಿದ ಸಿಡಿಲು. ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟ ದಿನವೇ ನಾನು ತುಂಬಾ ರೆಬೆಲ್, ನನ್ನ ತಂಟೆಗೆ ಬಂದ್ರೆ ವೈಲೆಂಟ್ ಆಗ್ತೀನಿ ಅಂತ ಕಿಚ್ಚನ ಎದುರಿಗೆ ಹೇಳಿದ್ದ ಆ ಮಾತುಗಳು ಆಕೆಯನ್ನ ರಕ್ಷಣೆ ಮಾಡಿದೆ. ಈ ವಾರ ತುಂಬಾ ಸನಿಹ ಆಗಿದ್ರಿಂದ ವೈಲೆಂಟ್, ರೆಬೆಲ್ ಆಕ್ಷನ್ ಗೆ ಸಮಯ ಸಿಕ್ಕಿಲ್ಲ, ಮುಂದಿನ ವಾರ ಏನಾದರೂ ಆಗಲಿದೆಯಾ ಅನ್ನೋ ಕುತೂಹಲ ಬಿಗ್ ಬಾಸ್ ಅವರದ್ದು. ಆದ್ರೆ ಈ ವಾರ ಕೂಡ ಅದೆ ರೀತಿ ಪೆಚ್ಚು ಮೋರೆ ಹಾಕಿ‌ ಕುಳಿತರ ರಕ್ಷಣೆ ಯಾರೂ ಬರಲ್ಲ.
ಸುಮಾ  ಮನೆಯಿಂದ ಹೊರ ಬರಲು ಯಾವುದೇ ಕಾರಣ ಇರಲಿಲ್ಲ. ಯಾಕಂದ್ರೆ ಮನೆಮಂದಿ ಜೊತೆ ಮಾತನಾಡಿಕೊಂಡು ಕಾಲ ಕಳೆದಿದ್ರು, ಅವರು ತುಂಬಾ ಬೇಗನೇ ಬೇರೆಯವರ ಜೊತೆ ಬೆರೆಯುವ ಗುಣ ಹೊಂದಿ್ರು. ಆದ್ರೆ ಬಿಗ್ ಬಾಸ್ ನ ಅನಿವಾರ್ಯ. ಮೇಘಾ ಮಾತಲ್ಲೇ ತೋರಿಸಿರುವ  ಸಿಡಿಲು ಸುಮಾರನ್ನ ಔಟ್ ಮಾಡಿಸಿದೆ.. ಕನಸಾಗಿ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ದ ಅವರ ಕನಸನ್ನ ಕನಸಾಗಿಯೇ ಇಟ್ಟು ಹೊರ ಬಂದಿದ್ದಾರೆ. ಈ ವಾರ ಮತ್ತಷ್ಟು ರೋಷ, ಸೇಡು, ಪ್ರೇಮ ಎಲ್ಲವೂ ತೆರೆದುಕೊಳ್ಳಲಿದೆ ಅನ್ನೋದು ಪಕ್ಕಾ..
ಜ್ಯೋತಿ ಗೌಡ, ನಾಗಮಂಗಲ

ಬಿಗ್ ಬಾಸ್ ನಲ್ಲಿ ಶಂಕರ್ ನಾಗ್ “ಗೀತಾ” ರಹಸ್ಯ..!

ಬಿಗ್ ಬಾಸ್ ಮನೆಯಲ್ಲಿ ಹದಿನೇಳು ಸ್ಪರ್ಧಿಗಳು ಇದ್ದು ಹಿರಿಯ ಸದಸ್ಯರಾಗಿ ನಮ್ಮೆಲ್ಲರ ಅಚ್ಚುಮೆಚ್ಚಿನ ಸಿಹಿಕಹಿ ಚಂದ್ರು ಇದ್ದಾರೆ. ಅವರು  ಸ್ವಾರಸ್ಯಕರವಾದ ಗುಟ್ಟೊಂದನ್ನ ಹೇಳಿದ್ರು. ಅದು ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಿರ್ದೇಶಕ ಆಟೋ ರಾಜ ಶಂಕರ್ ನಾಗ್ ಬಗ್ಗೆ. ಆ ವಿಚಾರವನ್ನು ಕೇಳಿದ ಪ್ರತಿಯೊಬ್ಬ ಸ್ಪರ್ಧಿ ಹಾಗೂ ವೀಕ್ಷಕ ಒಂದು ಕ್ಷಣ ಹೌಹಾರಿದ್ರು..
ಶಂಕರ್ ನಾಗ್ ಅಂದ್ರೆ ಗೀತಾ ಸಿನಿಮಾ ನೆನಪಿಗೆ ಬರುತ್ತೆ. ಈ ಸಿನಿಮಾಗೆ ಶಂಕರ್ ನಾಗ್ ಚಿತ್ರಕಥೆ ಬರೆದು ನಿರ್ದೇಶಿಸಿ ನಟಿಸಿದ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರಕ್ಕೆ ಇಳಯರಾಜ ಸಂಗೀತ ನೀಡಿದ್ದು, ಎಲ್ಲಾ ಹಾಡುಗಳು ಒಂದಕ್ಕಿಂತ ಒಂದು ಅತ್ಯದ್ಭುತವಾಗಿವೆ. ಯಾವುದೇ ಆರ್ಕೇಸ್ಟ್ರಾ ಗಳಲ್ಲಿ ಸಂತೋಷಕ್ಕೇ ಹಾಡು ಸಂತೋಷಕ್ಕೆ ..ಜೊತೆ  ಜೊತೆಯಲಿ ..ಕೇಳದೆ ನಿನಗೀಗ.. ಗೀತಾ.. ಸಂಗೀತಾ.., ನನ್ನ ಜೀವ ನೀನು,  ಏನೇ ಕೇಳು ಕೊಡುವೆ ನಿನಗೆ ನಾನೀಗ ಅನ್ನೋ ಹಾಡುಗಳು ಸಾಕಷ್ಟು ಖ್ಯಾತಿ ಗಳಿಸಿವೆ.
ಇಷ್ಟು ಹಾಡುಗಳನ್ನು ಹಾಡಿರೋದು ಕಂಚಿನ ಕಂಠದ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಗು ಗಾನ ಕೋಗಿಲೆ ಪಿ ಜಾನಕಿ. ಇವುಗಳಲ್ಲಿ ರೈಲಿನ ಹಿಂದೆ ಓಡುತ್ತ ಪ್ರಿಯತಮೆಗಾಗಿ ಓಲೈಕೆ ಮಾತುಗಳನ್ನಾಡುವ ನಾಯಕ ನಟ ಹೀಗೆ ಹೇಳುತ್ತಾನೆ. ‘ ಏನೇ ಕೇಳು ಕೊಡುವೆ ನಿನಗೆ ನಾನೀಗ..’ ಅನ್ನೋ ಸಾಂಗ್ ಬರೆದಿರುವುದು ಖ್ಯಾತ ಬರಹಗಾರ ಚಿ ಉದಯ್ ಶಂಕರ್.
 ಈ ಹಾಡಿಗೆ ಟ್ಯೂನ್ ರೆಡಿಯಾದ ಮೇಲೆ ಹಾಡು ಬರೆಸಲು ಶಂಕರ್ ನಾಗ್ ಚಂದ್ರು ಹಾಗು ರಮೇಶ್ ಭಟ್ ಗೆ ಸೂಚಿಸಿದ್ರಂತೆ. ಚಿ ಉದಯ್ ಶಂಕರ್ ಹತ್ತಿರ ಬಂದು ಇವರು ಹೇಳಿದಾಗ ಸಂಭಾವನೆ ಎಷ್ಟು ಕೊಡ್ತಾರೆ ಅಂತ ಕೇಳಿದ್ರಂತೆ ಹಾಗ ಶಂಕರ್ ನಾಗ್ ಗೆ ಕೇಳಿದ್ದಕ್ಕೆ ಅವರು ಏನು ಕೇಳ್ತಾರೆ ಅದು ಕೊಟ್ರೆ ಆಯ್ತು ಅಂದ್ರಂತೆ. ಹಾಗಾದ್ರೆ ಏನೇ ಕೇಳು ಕೊಡುವೆ ನಿನಗೆ ನಾನೀಗ ಇದೇ ಸಾಹಿತ್ಯ ಬರ್ಕೊಳಿ  ಅಂದ್ರಂತೆ ಉದಯ್ ಶಂಕರ್..
ಇಲ್ಲಿ ಗಮನಿಸಬೇಕಾದ ಸಂಗತಿ ಅಂದ್ರೆ ಶಂಕರ್ ನಾಗ್ ಗೆ ಇದ್ದಂತಹ ಧಾರಾಳ ಮನಸ್ಥಿತಿ ಹಾಗೂ ಚಿ ಉದಯ್ ಶಂಕರ್ ಅವರಿಗೆ ಇದ್ದಂತಹ ಕನ್ನಡ  ಪದಗಳ ಶ್ರೀಮಂತಿಕೆ, ನೀವು ಏನ್ ಮಾಡ್ತಿದ್ದೀರೋ ಅದರ ಮೇಲೆ ಸಾಹಿತ್ಯ ಬರೆದು ಜನಮೆಚ್ಚುಗೆ ಗಳಿಸೋದು ಉದಯ್ ಶಂಕರ್ ಗೆ ಉದಯ್ ಶಂಕರ್ ಅಷ್ಟೇ ಸಾಟಿ..
ಜ್ಯೋತಿ ಗೌಡ, ನಾಗಮಂಗಲ

ಬಿಗ್ ಬಾಸ್ ನಲ್ಲಿ ಲವ್ ಗೇಮ್ ..! 

ಬಿಗ್ ಬಾಸ್ ಅಂದ್ರೆ ನೋವು ನಲಿವು, ಸುಖ ಸಂತೋಷ, ಕಷ್ಟ, ಪ್ರೀತಿ ಪ್ರೇಮ ಪ್ರಣಯ ಎಲ್ಲವೂ ವ್ಯಕ್ತವಾಗಲು ಇರುವ ವೇದಿಕೆ. ಹಾಗಂದ ಮಾತ್ರಕ್ಕೆ ಅಲ್ಲಿಗೆ ಹೋದವರು ಲವ್ ನಲ್ಲಿ ಬೀಳ್ತಾರೆ ಅಂತ ಅರ್ಥ ಅಲ್ಲ.. ಮಾತಿನ ಭರಾಟೆಯಲ್ಲಿ ಡಬಲ್ ಮೀನಿಂಗ್ ಶಬ್ದ ಬಳಸಿ ಇನ್ನೇನೋ ಮಾಡ್ತಾರೆ ಅಂತಾನೂ ಅಲ್ಲ. ಆದ್ರೆ ಕಳೆದ ನಾಲ್ಕು ಸೀಸನ್ ಗಳಲ್ಲಿ ಒಂದೊಂದು ಪ್ರಣಯ ಜೋಡಿಗಳು ಹೊರಹೊಮ್ಮಿವೆ. ಬಿಗ್ ಬಾಸ್ ಗಾಗಿ ಆಗಿದ್ದೋ.. ಅಥವಾ ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಬೇಕಾಗಿಲ್ವೋ ಅದೂ ಗೊತ್ತಿಲ್ಲ, ಆದ್ರೆ ಬಿಗ್ ಬಾಸ್ ಮನೆಯಲ್ಲಿದ್ದಾಗ ಸ್ಕ್ರೀನ್ ನಲ್ಲಿ ಕಾಣಿಸಿದಂತು ಸತ್ಯ.
ಮೊದಲ ವಾರದಲ್ಲೇ ಶುರುವಾಯ್ತ ಲವ್ ಕಿರಿಕ್
ಅದೇನೆ ಅಗಲಿ ಒಂದು ಹುಡುಗ ಹುಡುಗಿ‌ ಲವ್ ನಲ್ಲಿ ಬೀಳೋದಿಕ್ಕೆ ಸ್ವಲ್ಪ‌ ಟೈಮ್ ಬೇಕು. ಆದ್ರೆ ಈ ಬಾರಿ ರಿಯಲ್ ಲವ್ವರ್ ಗಳನ್ನೇ ಹಿಡಿದು ಬಿಗ್ ಬಾ್ ಮನೆಯೊಳಕ್ಕೆ ಬಿಟ್ಟಿದ್ದಾರೆ. ಈಗಾಗಲೇ ಲವ್ ಬ್ರೇಕಪ್ ಮಾಡ್ಕೊಂಡಿರೋ ಈ ಜೋಡಿಗೆ ಬಿಗ್ ಬಾಸ್ ಸಾಕಷ್ಟು ಗೇಮ್ ಆಡಲಿದ್ದು ನೋಡುಗರ ಕಣ್ಣಿಗೆ ರಸದೌತಣ ನೀಡೋದಂತು ಸತ್ಯ..
ಸೀರಿಯಲ್ ಸ್ಟಾರ್.. ಪ್ರೀತಿಯಲ್ಲಿ ವಾರ್..
ಸೀರಿಯಲ್ ಸ್ಟಾರ್ ಗಳಾದ ಬಿಗ್ ಬಾಸ್ ಮನೆಯ ಮೊದಲ ವಾರದ ಕ್ಯಾಪ್ಟನ್ ಅನು ಹಾಗೂ ಬಿಗ್ ಬಾಸ್ ಮನೆಯ ಸದಸ್ಯ ಜಗನ್ ಭೂತಕಾಲದ ಪ್ರೇಮಿಗಳು. ಇವರಿಬ್ಬರೂ ಮುರಿದು ಹೋಗಿರುವ ಪ್ರೇಮ ಸೇತುವೆ ಮೇಲೆ ನಿಂತಿದ್ದು ಆ ಕಡೆ ಹೋಗಲೂ ಆಗಲ್ಲ ಈ ಕಡೆ ಬರಲೂ ಆಗಲ್ಲ ಅನ್ನೋ ಸ್ಟೇಜ್ ನಲ್ಲಿ ನಿಂತಿದ್ದಾರೆ. ಬಿಗ್ ಬಾಸ್ ಇವರಿಬ್ಬರು ಸೇರಿಸ್ತಾರಾ ಇಲ್ಲ ಇದ್ದಷ್ಟು ದಿನ ಜಗಳ ಗುದ್ದಾಟ ಮಾಡಿ ವಾಪಸ್ ಕಳಿಸ್ತಾರಾ ನೋಡ್ಬೇಕು..
ಅನು ಕ್ಯಾಪ್ಟನ್ ಆಗಿರೋ ಕಾರಣದಿಂದ ಆಕೆ ಹೇಳಿದ ಮಾತು ಬಿಗ್ ಬಾಸ್ ಮನೆಯಲ್ಲಿ ನಡೆಯಬೇಕು. ಆದ್ರೆ ಆ ಬಗ್ಗೆ ಚೆನ್ನಾಗಿ ತಿಳಿದಿರೋ ಜಗನ್ ಟಾಂಗ್ ಕೊಡುವ ರೀತಿಯಲ್ಲಿ ಮಾತನಾಡ್ತಿರೋದು ಅನುಗೆ ಸಹಿಸಲು ಆಗ್ತಿಲ್ಲ. ಆಶಿತಾ ಈ ಬಗ್ಗೆ ಜಗನ್ ಬಳಿ ಹೇಳಿದಾಗ ಹಳೇ ವಿಚಾರ ಎಲ್ಲ ಕೆದಕೋದು ಬೇಡ. ಅದು ಕಳೆದು ಹೋದದ್ದು ಎಂದು ನೇರವಾಗಿ ಜಗನ್ ಹೇಳುತ್ತಿದ್ದ ಹಾಗೆ ಟಿವಿ ಮುಂದೆ ಕುಳಿತಿದ್ದ ಜನರ ಕಿವಿಗಳು ಅಗಲವಾಗಿದ್ವು.. ಮುಂದೆ ಇನ್ಯಾವ ರೀತಿಯಲ್ಲಿ ಟ್ವಿಸ್ಟ್ ಪಡೆಯುತ್ತೆ ಲವ್ ಸ್ಟೋರಿ ಸಿನಿಅಡ್ಡಾ ನಿಮಗೆ ತಿಳಿಸುತ್ತೆ.. ವೇಯ್ಟ್ ಅಂಡ್ ರೀಡ್..
ಜ್ಯೋತಿ ಗೌಡ, ನಾಗಮಂಗಲ

ಬಿಗ್ ಬಾಸ್ ನಲ್ಲಿ ಈ ವಾರದ ಎಲಿಮಿನೇಷನ್ ಯಾರು..?

ಬಿಗ್ ಬಾಸ್ ಸೀಸನ್ 5 ಕಳೆದ ಭಾನುವಾರ ಕಿಚ್ಚನ ನೇತೃತ್ವದಲ್ಲಿ ಶುರುವಾಗಿದ್ದು, ಈಗಾಗಲೇ ಮೂರು ದಿನಗಳು ಕಳೆದು ಹೋಗಿದೆ. ಬಿಗ್ ಬಾಸ್ ಮನೆ ಇನ್ನೂ ಜನರನ್ನ ಆಕರ್ಷಣೆ ಮಾಡಿಲ್ಲ. ಆದ್ರೆ ಈ ವಾರ ಒಬ್ಬ ಸ್ಪರ್ಧಿ ಮನೆಯಿಂದ ಹೊರಹೋಗುವ ಕಾಲ ಸನಿಹವಾಗ್ತಿದೆ. ಈಗಾಗಲೇ ಹಲವು ಸ್ಪರ್ಧಿಗಳ ಮನಸ್ಸಲ್ಲಿ ನಾನು ಹೋಗ್ಬಿಡ್ತಿನೇನೋ ಅನ್ನೋ ಭಯ ಮನೆ ಮಾಡಿದೆ..

ಆದ್ರೆ ಈ ವಾರ ಹೆಚ್ಚು ಕಡಿಮೆ ಎಲ್ಲರು ನಾಮಿನೇಟ್ ಆಗಿದ್ದು ಅದರಲ್ಲಿ‌ ಸ್ವಲ್ಪ ಕಡಿಮ ಮನರಂಜನೆ ಕೊಡ್ತಿರೋ ಹುಡುಗಿ ಮನೆಯಿಂದ ಹೊರ ಹೋಗುವುದು ನಿಶ್ಚಿತವಾಗ್ತಿದೆ. ಅದರಲ್ಲಿ ಬಾಬಿಡಾಲ್ ನಿವೇದಿತ ಗೌಡ ಕೂಡ ಇದ್ದಾರೆ. ಕೆಲವು ಸ್ಪರ್ಧಿಗಳ ಮುಂದೆ ಬಾಬಿಡಾಲ್ ತನ್ನ ಭಯವನ್ನು ವ್ಯಕ್ತಪಡಿಸಿದ್ದು, ಜನ ಉಳಿಸ್ತಾರಾ ಅನ್ನೋ ಮಾತುಗಳನ್ನು ಆಡಿದ್ದಾರೆ. ಅದೇ ರೀತಿ ಮುಂಬೈ ಕನ್ನಡತಿ ಶೃತಿ ಕೂಡ ಭೀತಿಯಲ್ಲಿದ್ದಾರೆ. ಇನ್ನುಳಿದಂತೆ ಸೇಲ್ಸ್ ಮೆನ್ ದಿವಾಕರ್, ಕೂರ್ಗಿ ಗರ್ಲ್ ಮೇಘ ಇದೇ ಮೂಡಲ್ಲಿ ಇರೋದು ಸ್ಪಷ್ಟವಾಗಿದೆ.

ಬಾಬಿಡಾಲ್ ನಿವೇದಿತಗೌಡ, ಕಳೆದ ಸೀಸನ್ನು ಸಂಜನಾಳನ್ನು ಮೀರಿಸುವ ಉದ್ದೇಶದಿಂದಲೇ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದುಕೊಂಡಿದ್ದು, ಈಗಾಗಲೇ ಸಾಕಷ್ಟು ಜನರ ಮನಸ್ಸನ್ನು ಕದ್ದಿದ್ದಾರೆ. ಆಕೆಯ ಮಾತು ಕೂಡ ಏನೋ ಒಂದು ರೀತಿ ಇಷ್ಟ ಆಗ್ತಿದೆ. ಇನ್ನು ಮುಂಬೈ ಕನ್ನಡತಿ ಶೃತಿ ಭಾಷೆ ಮುಸ್ಲಿಂ ಕನ್ನಡ ರೀತಿಯಲ್ಲಿ ಇರೋದು ಗಮನಸೆಳೆಯುತ್ತದೆ. ಹೀಗಾಗಿ ಶೃತಿ ಕೂಡ ಸದ್ಯಕ್ಕೆ ಮನೆ ಖಾಲಿ ಮಾಡುವ ಸಾಧ್ಯತೆ ಕಡಿಮೆ. ಇನ್ನು ದಿವಾಕರ್ ಕರೆತಂದಿರೋ ಉದ್ದೇಶವೇ ಲಾಸ್ಟ್ ಸೀಸನ್ ಪ್ರಥಮ್ ಸ್ಥಾನ ಭರ್ತಿ ಮಾಡುವ ಉದ್ದೇಶದಿಂದ, ಅದು ಈಗಾಲೇ ಸೂಕ್ಷ್ಮವಾಗಿ ನೋಡಿದಾಗ ಗೊತ್ತಾಗುತ್ತಿದೆ. ಹಾಗಾಗಿ ದಿವಾಕರ್ ಕೂಡ ಕಾಯಂ. ಇನ್ನೂ ಬರುವಾಗ ತುಂಬಾ ಘಾಟಿ ಹುಡುಗಿ ರೀತಿ ಎಂಟ್ರಿ ತೆಗೆದುಕೊಂಡ ಮೇಘ ಈ ಮೂರು ದಿನ ತುಂಬಾ ಸೈಲೆಂಟ್ ಆಗಿ ಕಾಲ ಕಳೆದಿದ್ದಾರೆ. ಯಾರೊಂದಿಗೂ ಅಷ್ಟೊಂದು ಮಿಂಗಲ್ ಆಗ್ತಿಲ್ಲ. ತಮಾಷೆ, ಹರಟೆ ಯಾವುದೂ ಕಾಣ್ತಿಲ್ಲ. ಇನ್ನು ಉಳಿಯಬೇಕಾದ ಯಾವ ಅಂಶ ಇವರನ್ನು ಪಾರು ಮಾಡಲಿದೆ ಅನ್ನೋ ಕಿಚ್ಚನ್ನ ಕಾದು ನೋಡಬೇಕು.

ಜ್ಯೋತಿ ಗೌಡ, ನಾಗಮಂಗಲ

ಮುಗ್ದತೆಯ ರಸದೌತಣಕ್ಕೆ ಸಜ್ಜಾಗಿದೆ ಬಿಗ್ ಬಾಸ್ !

ಅಕ್ಟೋಬರ್ 15ರಿಂದ ಕನ್ನಡದ ಬಿಗ್‌ ಬಾಸ್‌ 5ನೇ ಆವೃತ್ತಿ ಪ್ರಾರಂಭವಾಗಿದ್ದು, ಈ ಬಾರಿ 11 ಸೆಲೆಬ್ರಿಟಿಗಳು ಹಾಗೂ 6 ಮಂದಿ ಜನಸಾಮಾನ್ಯರು ಸೇರಿ ಒಟ್ಟು 17 ಜನರು ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಪಡೆದಿದ್ದಾರೆ. ಈ ಬಾರಿ ಸೆಲೆಬ್ರೆಟಿಗಳಿಗಿಂದ ಶ್ರೀ ಸಾಮಾನ್ಯರು ಹೆಚ್ಚು ಗಮನಸೆಳೆಯುವ ಲಕ್ಷಣಗಳು ಕಾಣಿಸುತ್ತಿವೆ.
ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಪಡೆದವರು ಯಾರ‌್ಯಾರು ಅಂತಾ ನೋಡೋದಾದ್ರೆ, ಸಂಖ್ಯಾ ಶಾಸ್ತ್ರಜ್ಞ ಜಯ ಶ್ರೀನಿವಾಸನ್‌, ಕಾಮನ್ ಪೀಪಲ್ ಮೇಘಾ, ನಿರ್ದೇಶಕ ದಯಾಳ್ ಪದ್ಮನಾಭ, ಹಿರಿಯ ನಟ ಸಿಹಿ ಕಹಿ ಚಂದ್ರು , ಕಾಮನ್ ಪೀಪಲ್ ಶ್ರುತಿ, ನಟಿ ಅನುಪಮಾ ಗೌಡ, ಕಾಮನ್ ಪೀಪಲ್ ರಿಯಾಜ್‌ ಭಾಷಾ, ಕಾಮನ್ ಪೀಪಲ್ ನಿವೇದಿತಾ ಗೌಡ, ಜ್ಯೋತಿಷಿ ಸಮೀರ್ ಆಚಾರ್ಯ, ನಟ ಕಾರ್ತಿಕ್ ಜಯರಾಮ್‌, ಕಾಮನ್ ಪೀಪಲ್ ಆಶಿತಾ ಚಂದ್ರಪ್ಪ, ಸೆಲ್ಸ್‌ಮನ್‌
ದಿವಾಕರ್, ನಟಿ ತೇಜಸ್ವಿನಿ ಪ್ರಕಾಶ್‌, ಸಿಂಗರ್ ಚಂದನ್‌ ಶೆಟ್ಟಿ,  ಮ್ಯಾಜಿಸಿಯನ್‌  ಸುಮಾ, ನಟ
 ಜಗನ್‌ ಗೃಹ ಪ್ರವೇಶ ಮಾಡಿ ಆಗಿದೆ.. ಬಿಗ್ ಬಾಸ್ ಹೋಸ್ಟರ್ ಕಿಚ್ಚ ಸುದೀಪ್‌ ಎಲ್ಲ ಸ್ಪರ್ಧಿಗಳಿಗೆ ಶುಭ ಕೋರಿ ಬೀಳ್ಕೊಟ್ಟಿದ್ದಾರೆ.
ಕಲರ್ಸ್‌ ಸೂಪರ್‌ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 8 ಗಂಟೆಗೆ ಬಿಗ್‌ ಬಾಸ್‌ ಕಾರ್ಯಕ್ರಮ ಪ್ರಸಾರವಾಗಲಿದೆ. ಒಂದು ದಿನದಲ್ಲಿ ಬಿಗ್ ಬಾಸ್ ಮನೆಯಲ್ಲಿ ನಡೆ ಅತಿ ರಂಜಿತ ಸಂದರ್ಭಗಳನ್ನು ಸೆರೆ ಹಿಡಿದು ಒಂದು ಗಂಟೆಯಲ್ಲಿ ತೋರಿಸಲಾಗುತ್ತೆ. ಆದ್ರೆ ಕಳೆದ ನಾಲ್ಕು ಸೀಸನ್ ಗೆ ಹೋಲಿಸಿ ನೋಡಿದ್ರೆ ಈಗಾಗಲೇ ತುಂಬಾ ಖ್ಯಾತಿ ಪಡೆದಿರುವ ಸ್ಟಾರ್ ಗಳ ಸಂಖ್ಯೆ ಕಡಿಮೆ ಇದೆ. ಅದಕ್ಕೆ ಕಾರಣ ಲಾಸ್ಟ್ ಸೀಸನ್ ಟಿ ಆರ್ ಪಿ, ಹಾಗೂ ಜನಮನ್ನಣೆ.
ಕಳೆದ ಸೀಸನ್ ಬಿಗ್ ಬಾಸ್ ಪ್ರೋಗ್ರಾಂ ಎಫೆಕ್ಟ್ !!
ಕಳೆದ ಸೀಸನ್ ಬಿಗ್ ಬಾಸ್ ನಲ್ಲಿ ಸಾಕಷ್ಟು ಸ್ಟಾರ್ ಕಾಸ್ಟ್ ಇತ್ತು. ಆದ್ರೆ ಜನಮನ್ನಣೆ ಗಳಿಸಿದ್ದು ಓರ್ವ ಅನ್ ನೋನ್  ಪರ್ಸನ್ ಪ್ರಥಮ್, ಬಿಗ್ ಬಾಸ್ ಗೆ ಬರುವ ಮುಂಚೆ ಇದೇ ಪ್ರಥಮ್ ಬೀದಿಯಲ್ಲಿ ಸಿಕ್ಕರೆ ಯಾರೂ   ಪತ್ತೆ   ಮಾಡುತ್ತಿರಲಿಲ್ಲ.ಆದ್ರೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪ್ರಥಮ್ ಇಲ್ಲದಿದ್ರೆ ಊಹಿಸಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಆತ ಜನಪ್ರಿಯತೆ ಸಂಪಾದಿಸಿದ. ಅವನಲ್ಲಿ ಜನರು ಇಷ್ಟಪಟ್ಟಿದ್ದು ನೇರನುಡಿ, ನಿಷ್ಟೂರತೆ, ಮುಗ್ದತೆ.
ಮುಗ್ದತೆಯೇ ಈ ಸೀಸನ್ ನ ಬಂಡವಾಳ..!
ಹೌದು, ಈ ಮಾತನ್ನು ಎಲ್ಲರೂ ಒಪ್ಪಲೇ ಬೇಕು. ಯಾಕಂದ್ರೆ ಕಳೆದ ಬಾರಿ ಓರ್ವ ಅನಾಮಿಕ ಪ್ರಥಮ್ ಜನಮೆಚ್ಚುಗೆ ಗಳಿಸಿದ ಬಳಿಕ, ಸಾಕಷ್ಟು ಅಳೆದು ತೂಗಿ ಕಾಮನ್ ಪೀಪಲ್ ಆಯ್ಕೆ ಮಾಡಿದ್ದಾರೆ. ಸಿನಿಮಾ ಮಂದಿಗಳಿಗೆ ಡ್ರಾಮಾ ಮಾಡಿ ಗೊತ್ತಿರುತ್ತೆ, ಆದ್ರೆ ಸಾಮಾನ್ಯ ಜನರು ಅನ್ನಿಸಿದನ್ನು ನೇರವಾಗಿ  ಕಡ್ಡಿ ಮುರಿದ ಹಾಗೆ ಹೇಳ್ತಾರೆ, ಆ ಮಾತುಗಳು ಜನರನ್ನು ಭಾವನಾತ್ಮಕವಾಗಿ ಸೆಳೆಯುತ್ತದೆ ಅನ್ನೋದು ಸೂಪರ್ ಕಲರ್ಸ್ ಲೆಕ್ಕಾಚಾರ. ಅದು ಸತ್ಯ ಕೂಡ ಹೌದು. ಜನ ಯಾವಾಗಲು ಸಿನಿಮಾ ಸ್ಟಾರ್ ಗಳನ್ನು ಇಷ್ಟ ಪಡೋದಿಲ್ಲ. ರಿಯಾಲಿಟಿ ಶೋ ನಲ್ಲಿ ರಿಯಾಲಿಟಿಯನ್ನೇ ಬಯಸ್ತಾರೆ. ಈ ಬಾರಿ ಕಳೆದ ಬಾರಿಗಿಂತ ಹೆಚ್ಚು ಮನರಂಜನೆ ಸಿಗೋದು ಪಕ್ಕಾ..
-ಜ್ಯೋತಿ ಗೌಡ, ನಾಗಮಂಗಲ

”ಲಕ್ಷ್ಮೀ ಬಾರಮ್ಮ” ಬಿಗ್ ಬಾಸ್ ಗೆ ಹೋಗುತ್ತಿಲ್ಲ ಎಂದಿದ್ದೇಕೆ?

ಬಿಗ್ ಬಾಸ್ ಸೀಸನ್ 5 ನಾಳೆಯಿಂದ ಪ್ರಾರಂಭವಾಗುತ್ತಿದೆ. ಅವರು ಹೋಗ್ತಾರಂತೆ ಇವರು ಹೋಗ್ತಾರಂತೆ ಅನ್ನುವ ಸುದ್ದಿಗಳಿಗೇನು ಬರವಿಲ್ಲ. ಹಿರಿತೆರೆ-ಕಿರುತೆರೆಯೆನ್ನದೆ ಫೇಮಸ್ ಆಗಿರೊ ಹಲವು ಜನರ ಫೋಟೋ ಬಳಸಿ ಬಿಗ್ ಬಾಸ್ ಸ್ಪರ್ಧಿಗಳಲ್ಲಿ ಇವರು ಒಬ್ಬರು ಅಂತ ಬಿಂಬಿಸಲಾಗುತ್ತಿದೆ. ಹಾಗೆ ಸುಖಾಸುಮ್ಮನೆ ಬಿಂಬಿತವಾದವರ ಸಾಲಿಗೆ ಲಕ್ಶ್ಮೀ ಬಾರಮ್ಮ ಖ್ಯಾತಿಯ ಕವಿತ ಕೂಡ ಸೇರಿದ್ದಾರೆ.

ನಾನವಳಲ್ಲ

ಬಿಗ್ ಬಾಸ್ ಗೆ ಕವಿತ ಸುದ್ದಿ ವೈರಲ್ ಆಗಿದ್ದು ನೋಡಿ ಸ್ವತಃ ಕವಿತ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ತಾನು ಈ ಬಾರಿಯ ಬಿಗ್ ಬಾಸ್ ಗೆ ಯಾಕೆ ಹೋಗುತ್ತಿಲ್ಲವೆಂದು ಹೇಳಿಕೊಂಡಿದ್ದಾರೆ.

”ನಾನು ಬಿಗ್ ಬಾಸ್ ಗೆ ಹೋಗುತ್ತಿಲ್ಲ. ಕಾರಣ ಅವರು ನನ್ನನ್ನು ಸ್ಪರ್ಧಿಯಾಗಿ ಬನ್ನಿ ಅನ್ನೋ ಆಹ್ವಾನವೇನು ಕೊಟ್ಟಿಲ್ಲ. ಈಗ ವೈರಲ್ ಆಗಿರುವ ಸುದ್ದಿಯಲ್ಲಿ ಹುರುಳಿಲ್ಲ. ಹಾಗಾಗಿ ಇಲ್ಲಿ ಸ್ಪóಷ್ಟೀಕರಣ ನೀಡುತ್ತಿದ್ದೇನೆ. ನಾನೀಗ ಝೀ ಕನ್ನಡದ ಹೊಸ ಪ್ರಾಜೆಕ್ಟ್ ವಿದ್ಯಾವಿನಾಯಕದಲ್ಲಿ ನಿರತಳಾಗಿದ್ದೇನೆ. ಒಂದು ಕಡೆ ಒಪ್ಪಿಕೊಂಡ ಮೇಲೆ ಮಾತು ಮುರಿದು ಮತ್ತೊಂದು ಕಡೆ ಹೋಗುವುದು ನೈತಿಕವಾಗಿ ಸರಿಯಲ್ಲ”

ಅಂದಹಾಗೆ ಕವಿತ, ಲಕ್ಷ್ಮೀ ಬಾರಮ್ಮ ಖ್ಯಾತಿಯ ಜೊತೆಗೆ ಶ್ರೀನಿವಾಸ ಕಲ್ಯಾಣ ಚಿತ್ರದಲ್ಲೂ ನಟಿಸಿದ್ದರು.

ಬಿಗ್ ಬಾಸ್ ವಿಚಾರ ಹೇಳೋದಾದರೆ ಬಿಗ್ ಮನೆಯ ಬಾಗಿಲು ತೆರೆಯುವ ಸಮಯ ಇದೇ ಅಕ್ಟೋಬರ್ ಸಂಜೆ 6.
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರತೀ ರಾತ್ರಿ ಎಂಟು ಗಂಟೆಗೆ ಸ್ಪರ್ಧಿಗಳ ಅಟ-ಹುಡುಗಾಟ-ಹುಡುಕಾಟಗಳನ್ನ ನೋಡಬಹುದು.

ಬಿಗ್‍ಬಾಸ್ ಸೀಸನ್ ಐದರ ಸ್ಪರ್ಧಿಗಳಿಗೆ ಕಿಚ್ಚನ ಕಿವಿಮಾತು!

”ಯಾರ ಮೇಲೂ ಕೈ ಮಾಡಬೇಡಿ. ಬೇರೆ ಬೇರೆ ಮನ:ಸ್ಥಿತಿಯವರು ಒಂದೇ ಮನೆಯಲ್ಲಿ ಇರಬೇಕಾಗಿರುವುದರಿಂದ ಭಿನ್ನಾಭಿಪ್ರಾಯ ಸಹಜ. ಹಾಗಂತ ಹೊಡೆದಾಟಕ್ಕೆ ಇಳಿದರೆ ಅದರ ಪರಿಣಾಮವನ್ನೂ ಎದುರಿಸಬೇಕಾಗುತ್ತೆ. ಹೊಡೆಸಿಕೊಂಡವರು ಕ್ಸಮಿಸಿ ಸುಮ್ಮನಾದರೆ ಪರವಾಗಿಲ್ಲ.ಇಲ್ಲದಿದ್ದರೆ ಕಾನೂನು ಕ್ರಮವನ್ನೂ ಎದುರಿಸಬೇಕಾಗುತ್ತೆ. ನಿಮ್ಮ ಮನೆಮಂದಿಯೆಲ್ಲಾ ಬಿಗ್ ಬಾಸ್ ನೋಡ್ತಾ ಇರ್ತಾರೆ. ನಿಮ್ಮ ವರ್ತನೆಯಿಂದ ನಿಮ್ಮ ವ್ಯಕ್ತಿತ್ವಕ್ಕೇ ಧಕ್ಕೆ ಅನ್ನೋದನ್ನ ಮರೆಯಬೇಡಿ”.

vedio link https://youtu.be/XtxkaOQ1xB0

ಹೀಗೆ ಬಿಗ್‍ಬಾಸ್ ಸೀಸನ್ ಐದರ ಸ್ಪರ್ಧಿಗಳಿಗೆ ಪತ್ರಿಕಾಗೋಷ್ಟಿಯ ಮುಖಾಂತರ ಕಿವಿಮಾತನ್ನ ಹೇಳಿದ್ದು ಕಾರ್ಯಕ್ರಮದ ಕೇಂದ್ರಬಿಂದು ಕಿಚ್ಚ ಸುದೀಪ್.

ಬಿಗ್ ಬಾಸ್ ಬರೋದು ಎಲ್ಲಿ?
ಈ ಬಾರಿಯ ಬಿಗ್ ಬಾಸ್ ಪ್ರಸಾರವಾಗುತ್ತಿರೋದು ಕಲರ್ಸ್ ಸೂಪರ್ ಚಾನಲ್ ನಲ್ಲಿ. ಇದೇ ತಿಂಗಳ ರಿಂದ ಪ್ರಾರಂಭ.

ಸಮಯ?
ಪ್ರತೀ ರಾತ್ರಿ 8.0

ಬಿಗ್ ಬಾಸ್-5 ಹೈಲೈಟ್ಸ್..
ಒಟ್ಟು ಸ್ಪರ್ಧಿಗಳ ಸಂಖ್ಯೆ ಹದಿನೆಂಟು. ಇದರಲ್ಲಿ ಕನಿಷ್ಟ ಆರು ಮಂದಿ ಜನಸಾಮಾನ್ಯರು. ಇವರಿಗಾಗಿ ಹೊಚ್ಚಹೊಸ ಮನೆಯೊಂದನ್ನು ನಿರ್ಮಿಸಲಾಗಿದೆ. ಸಿನಿಮಾ ತಾರೆಗಳೊಂದಿಗೆ ಕಿಚ್ಚನ ಅಡುಗೆ ಸವಿರುಚಿಯನ್ನೂ ನೋಡಬಹುದು. ಹೊಸ ರೀತಿಯ ಮನರಂಜನೆ ನೀಡುವ ಆಟಗಳು ಇರಲಿವೆ.

 

 

 

 

ಬಿಗ್ ಬಾಸ್ ವೈರಲ್ ವಿಡಿಯೋಗೆ ಸುದೀಪ್ ಕೊಟ್ಟ ಉತ್ತರವೇನು?

ಬಿಗ್ ಬಾಸ್ 5ನೇ ಸೀಸನ್ ಕಾರ್ಯಕ್ರಮ ಇನ್ನೇನು ಶುರುವಾಗಬೇಕು ಅನ್ನುವಷ್ಟರಲ್ಲೇ, ಸಾಮಾಜಿಕ ಜಾಲತಾಣದಲ್ಲಿ ಕಳೆದ ಆವೃತ್ತಿಯ ಬಿಗ್ ಬಾಸ್ ನ ವಿಡಿಯೋ ತುಣುಕೊಂದು ವೈರಲ್ ಆಗಿತ್ತು. ಅದರಲ್ಲಿ ಮಾಳವಿಕ ಹಾಗೂ ಪರಮೇಶ್ವರ್ ಗುಂಡ್ಕಲ್ ಅವರ ನಡುವಣ ಗುಸುಗುಸು ಮಾತು ಅನೇಕ ಅನುಮಾನಗಳಿಗೆ ಗ್ರಾಸವಾಗಿತ್ತು. ಈ ಎಲ್ಲ ಅನುಮಾನಗಳಿಗೆ ಕಾರ್ಯಕ್ರಮದ ನಿರೂಪಕರಾಗಿರುವ ಕಿಚ್ಚ ಸುದೀಪ್ ಇಂದಿನ ಬಿಗ್ ಬಾಸ್ ಪತ್ರಿಕಾಗೋಷ್ಠಿಯಲ್ಲಿ ಕೊಟ್ಟ ಸ್ಪಷ್ಟನೆಯ ಸಾರಂಶವಿದು…

ನನ್ನ ಪ್ರಕಾರ ಜೀವನ ಎಂದರೆ ನಾವು ನೋಡುವ ದೃಷ್ಟಿಕೋನ ಅಷ್ಟೇ. ಜನ ಯಾವತ್ತೂ ನನ್ನನ್ನು ಅನುಮಾನದಿಂದ ನೋಡಿಲ್ಲ, ನೋಡಲಿಕ್ಕೆ ಸಾಧ್ಯನೂ ಇಲ್ಲ. ನನಗೆ ಮಾಳವಿಕಾ ಹಾಗೂ ಪರಮ್ ಇಬ್ಬರೂ ತುಂಬಾ ಚೆನ್ನಾಗಿ ಗೊತ್ತು. ಇಬ್ಬರೂ ಒಳ್ಳೆಯವರೇ.

ಅದೇನೇ ಇರಲಿ ಈ ವಿಡಿಯೋ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿರುವವರು ಮಾಳವಿಕ ಅವರ ಪತಿ ಅವಿನಾಶ್ ಹಾಗೂ ಪರಮ್ ಹೆಂಡತಿ ಗೀರ್ವಾಣಿ. ಅವರೇ ಏನು ಹೇಳುತ್ತಿಲ್ಲ ಅಂದಮೇಲೆ ಯಾರಿಗೆ ಏನು ತೊಂದರೆ? ಪರಮ್ ತುಂಬಾ ಒಳ್ಳೆಯ ವ್ಯಕ್ತಿ. ಹೀಗಾಗಿ ನಾನು ಅವರ ಬೆನ್ನಿಗೆ ನಿಂತು ಮಾತನಾಡುತ್ತಿದ್ದೇನೆ.

ಪ್ರತಿವಾರ ಯಾರು ಎಲಿಮಿನೇಟ್ ಆಗ್ತಾರೆ ಅನ್ನೋದು ನಮಗೆ ಗೊತ್ತಿರಲ್ಲ. ಅವರಿಗೆ ಭರವಸೆ ಕೊಡಬೇಕಿರೋದು ನಮ್ಮ ಕೆಲಸ ಅಷ್ಟೇ. ಆ ಕೆಲಸವನ್ನು ಪರಮ್ ಮಾಡಿದ್ದಾರೆ. ವಿಡಿಯೋದಲ್ಲಿ ಪಿಸುಮಾತಿನಲ್ಲಿರೋದು ಅಷ್ಟೇ. ಮಾಳವಿಕ ಇಲ್ಲಿಗೆ ಬರುವ ಮುನ್ನ ಸಾಕಷ್ಟು ಹೆಸರು ಗಳಿಸಿದ್ದರು. ಇಲ್ಲಿಗೆ ಬಂದಮೇಲೆ ಹೇಗಿರುತ್ತೇನೋ ಎಂಬ ಭಯ ಅವರಲ್ಲಿತ್ತು. ಸೀಕ್ರೆಟ್ ರೂಮಿಗೆ ಹೋಗುವಾಗ ಹೊರಗಡೆ ನನ್ನ ಬಗ್ಗೆ ಜನ ಏನು ಹೇಳುತ್ತಿದ್ದಾರೆ ಅನ್ನೋದನ್ನು ಪರಮ್ ಬಳಿ ಕೇಳಿದ್ದಾರೆ. ನಾವೆಲ್ಲಾ ಇದ್ದೇವೆ. ನೀವು ನೀವಾಗಿರಿ ಎಂದು ಧೈರ್ಯ ತುಂಬಿದ್ದರು. ಇದರಲ್ಲಿ ಮತ್ತೇನು ಕಾಣಿಸುತ್ತಿಲ್ಲ. ಒಂದುವೇಳೆ ಮಾಳವಿಕಾ ಅವರಿಗೆ ಸಹಾಯ ಮಾಡಿದ್ದೇ ಆಗಿದ್ದರೆ, ಅವರೇ ಗೆಲ್ಲಬೇಕಿತ್ತು.

ಮುತ್ತಿನ ಕಥೆ…

ಇನ್ನು ಮುತ್ತಿನ ವಿಷಯಕ್ಕೆ ಬರೋದಾದ್ರೆ ನನಗೂ ವೇದಿಕೆ ಮೇಲೆ ತುಂಬಾ ಜನ ಚುಂಬಿಸಿದ್ದಾರೆ. ಅಲ್ಲಿ ಸ್ನೇಹದ ಭಾವವಿತ್ತೇ ಹೊರತು ಬೇರೆನು ಇರಲಿಲ್ಲ. ಇಲ್ಲೂ ಕೂಡ ಅಷ್ಟೇ.

ನೀವಂದುಕೊಂಡಂತೆ ಅಲ್ಲಿ ಬೇರೆಯದೇ ಉದ್ದೇಶ ಇದ್ದಿದ್ದರೆ ಕ್ಯಾಮೆರಾ ಮುಂದೆ, ಮೈಕ್ ಆನ್ ಆಗಿರುವಾಗ ಮುತ್ತು ಕೊಡುತ್ತಿರಲಿಲ್ಲ. ಅಲ್ಲದೆ ತಕ್ಷಣವೇ ಕ್ಯಾಮೆರಾ ಆಫ್ ಮಾಡಬಹುದಿತ್ತು ಅಥವಾ ಪರಮ್ ಅವರಿಗಿರುವ ಪವರ್ ನಿಂದ ಆ ವಿಡಿಯೋ ಡಿಲೀಟ್ ಮಾಡಿಸಬಹುದಿತ್ತು. ಇಷ್ಟರಲ್ಲೇ ಅರ್ಥ ಮಾಡಿಕೊಳ್ಳಬೇಕಾಗಿರೋದು ನಾವೇನನ್ನು ನೋಡುತ್ತೀವೆಯೋ ಅದೇ ಕಾಣಿಸುತ್ತದೆ. ಇಲ್ಲಿ ನೋಡುವ ದೃಷ್ಟಿಕೋನವಷ್ಟೇ ಕೆಟ್ಟ ರೀತಿಯಲ್ಲಿ ಬಿಂಬಿಸಿದೆ.

ನನ್ನ ಬಗ್ಗೆ ನಂಬಿಕೆ ಇರೋ ಎಲ್ಲರೂ ಬಿಗ್ ಬಾಸ್ ನೋಡೇ ನೋಡ್ತಾರೆ. ಇನ್ನು ಈ ವಿಡಿಯೋ ಲೀಕ್ ಮಾಡಿದವರು ಹೊರಗಿನವರಲ್ಲ. ತೀರಾ ಒಳಗಿನವರೇ ಆಗಿದ್ದಾರೆ. ಒಂದಲ್ಲ ಒಂದು ದಿನ ಸತ್ಯ ಹೊರಗೆ ಬಂದೇ ಬರುತ್ತದೆ.

ಪರಮ್ ಗೆ ಕರೆ ಮಾಡಿ ವಿಡಿಯೋ ಲೀಕ್ ಮಾಡದಿರಲು ಹಣದ ಬೇಡಿಕೆಯನ್ನೂ ಇಟ್ಟಿದ್ದರು. ಆದರೆ ಪರಮ್ ಇದಕ್ಕೆ ಹೆದರಲಿಲ್ಲ. ಇದೆಲ್ಲದಕ್ಕೂ ಮೀರಿ ಈ ವಿಡಿಯೋ ಲೀಕ್ ಮಾಡಿದವರು ಅವರಿಗೇ ಗೊತ್ತಿಲ್ಲದ ಹಾಗೆ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಒಳ್ಳೆಯ ಪ್ರಚಾರವನ್ನೇ ತಂದುಕೊಟ್ಟಿದ್ದಾರೆ.

Like Us, Follow Us !

122,773FansLike
1,816FollowersFollow
1,379FollowersFollow
2,263SubscribersSubscribe

Trending This Week