24.5 C
Bangalore, IN
Wednesday, January 23, 2019
Home ಸಿನಿಮಾ ನ್ಯೂಸ್ ಟಿವಿ ನ್ಯೂಸ್

ಟಿವಿ ನ್ಯೂಸ್

Get Latest Kannada TV News, News On Kannada TV Serials

ಪ್ರಥಮ್ ಗೆಲುವು ಹುಟ್ಟ್ಟಿಸಿದ ತಲ್ಲಣ

“ಬಿಗ್ ಬಾಸ್ “
Psychology ವಿದ್ಯಾರ್ಥಿಯಾಗಿ ನಾನು ಮಾನವ-ಭಾವನೆಗಳ, ನಡುವಳಿಕೆಗಳ ಸೂಕ್ಷ್ಮ ಅಧ್ಯಯನಕ್ಕಾಗಿ ಅತ್ಯಂತ ಕುತೂಹಲದಿಂದ ನೋಡಿದ, ನೋಡುವ ಕಾರ್ಯಕ್ರಮ. ಅಲ್ಲಿನ ಅನೇಕ housemateಗಳೇ ಹೇಳಿಕೊಳ್ಳುವಂತೆ ನನ್ನಮಟ್ಟಿಗೂ ಇದೊಂದು “ಬದುಕಿನೊಳಗೊಂದು ಬದುಕು”. ನಿತ್ಯಜೀವನದ ಒಡನಾಟದಲ್ಲಿ ಎದುರಾಗಬಹುದಾದ  ಎಲ್ಲ ಬಗೆಯ ಸಂದರ್ಭಗಳನ್ನು ಆ ಕ್ಷಣಕ್ಕೆ ಒದಗುವ ಅನುಕೂಲಗಳು ಮತ್ತು ಸವಲತ್ತುಗಳನ್ನು ಉಪಯೋಗಿಸಿಕೊಂಡು ಎಷ್ಟರಮಟ್ಟಿಗೆ ನಿಭಾಯಿಸಬಲ್ಲೆವು ಎಂಬುದನ್ನು ನಮಗೆ ನಾವೇ ಸಿಂಧುವಾಗಿಸಿಕೊಳ್ಳಬಲ್ಲ ಒಂದು opportunity!
ಕಾಲಕಾಲಕ್ಕೆ entry ಕೊಟ್ಟು exit ಆಗುವ ಕಾವ್ಯ, ವಾಣಿಶ್ರೀ, ಚೈತ್ರ, ದೊ.ಗಣೇಶನಂಥಾ ನಗಣ್ಯ characters..
ಜೊತೆಗೇ ಇದ್ದಂತಿದ್ದು ನಿಲುವು ತೆಗೆದುಕೊಳ್ಳಲರಿಯದೆ, ಬೆನ್ನಹಿಂದೆ losetalks ಮಾಡುವ ಮೋಹನ್ ಥರದ ಮನಸ್ಸುಗಳು..
ಕತ್ತೆ ಥರ ದುಡಿದೂ footage ತೊಗೋಳಕ್ಕೆ ಬರದ ಶಾಲಿನಿಯಂಥ ಅಪ್ಪಟ ಮನಸಿನ emotional foolಗಳು..
bigboss-shalinibigboss-malavika
ಜನರ ಸೇವೆಯೇ ಜನಾರ್ಧನ ಸೇವೆ, ನಾನಿರೋದೆ ಸಾರ್ವಜನಿಕರಿಗೆ ಜೀವ ಕೊಡೋದಕ್ಕೆ ಅನ್ನೋಥರ ಕೇವಲ pose ಮಾತ್ರ ಕೊಡೋ ಮಾಳವಿಕರಂಥ ಮಳ್ಳಿ ಮನಸುಗಳು..
ಇನ್ನೂ ಹುಚ್ಚುಮನಸಿನ ಹತ್ತಾರು ಗುಣವಿಶೇಷಣಗಳ ಜೊತೆ ನಾನೂ ನೀವೂ ನಿತ್ಯದ ಬದುಕಲ್ಲಿ ಏಗೋದು ಸತ್ಯ. ತಾನೇ??
ಈಗ ಈ ಬಿಗ್’ಬಾಸ್ ಅನ್ನೋ reality show ಕೊನೆಯ ಹಂತ ತಲುಪಿದ 3 characters ನೋಡಿ. ಮೇಲೆ ಹೇಳಿದ, ಹೇಳದ ಎಲ್ಲ ಬಗೆಯ ಅಷ್ಟವಕ್ರಗಳನ್ನು ಚಾಣಾಕ್ಷರಾಗಿ ಎದುರಿಸಬೇಕಾದರೆ, ಗೆದ್ದ ಮೂವರಲ್ಲಿ ಯಾರ ನೀತಿ ಅನುಸರಿಸಬೇಕು?
ಇದಮಿತ್ತಂ ಅಂತ ಎಲ್ಲರನ್ನ ಎಲ್ಲವನ್ನ ರೇಖ ಥರ ಶಾಂತವಾಗಿ ಎದುರಿಸ್ಬೇಕ? ಸೋಲು ಕಟ್ಟಿಟ್ಟ ಬುತ್ತಿ!
ಕರ್ಮಣ್ಯೇವಾಧಿಕಾರಸ್ತೆ….. ಅಂತ ನಿರೀಕ್ಷೆ ಬಿಟ್ಟು ಬಂದದ್ದೆಲ್ಲಾ ಬರಲಿ ಅಂತ ಕೀರ್ತಿ ಥರ ತೊಗೋಬೇಕ? ಅಸಮಾಧಾನ ನಿರಾಸೆ ನಿಮ್ಮದು ಸುಳ್ಳಲ್ಲ!
bigboss-pratham
ಅದೇನಾದ್ರೂ ಆಗ್ಲಿ, ಇನ್ನೊಬ್ಬ ನೋವಿನಿಂದ ಸತ್ಹೋಗ್ಲಿ, ನನಗೆ ಮಾತ್ರ ಕಂಡ ಮತ್ತು ನನಗೆ ಬೇಕಾದ ಸತ್ಯ ತಾನೇ ಹೇಳ್ತಿರೋದು, why should I care?! ಅಂತ ದಾಷ್ಟೀಕವಾಗಿ, hight of immaturity ಹಾವಭಾವಗಳನ್ನ ಪ್ರದರ್ಶಿಸ್ತಾ, ನಾನೇ right ಅಂತ ಬದುಕಿಬಿಡ್ಬೇಕ?
ಗೊತ್ತಿಲ್ಲ ಏನು ಹೇಳ್ಬೇಕಂತ!
ಇದು ಗೆಲುವಾ?! ಇದು ಬದುಕುವ ಪರಿಯಾ?!
ನಂಗ್ಯಾಕೋ ನಾನೇ ಸರಿಯಿಲ್ಲ ಅನ್ನಿಸೋಕೆ ಶುರುವಿಟ್ಟಿದೆ, ಬಹುಜನರ ಒಲವಿನ ದಿಕ್ಕು ನೋಡಿ!
ಯೋಚಿಸಿ…
ಅಯೋಗ್ಯ..
ನಿನ್ನ ಜನ್ಮಕ್ಕಿಷ್ಟ್ ಬೆಂಕಿಹಾಕ..
………..
ಇಂಥ ನಿಯಂತ್ರಣ ತಪ್ಪಿದ ಮಾತುಗಳು ಪದೇಪದೇ ಆಡುವಂಥ ಮನುಷ್ಯ, ತಪ್ ಮಾಡಿದೀನಿ ಕ್ಷಮಿಸಿಬಿಡಿ ಅಂದ್ರೆ ಎಷ್ಟು ಬಾರಿ ಕ್ಷಮಿಸಬಹುದು? ಹೆತ್ತವರನ್ನೇ ಗೌರವಿಸಲು ಗೊತ್ತಿಲ್ಲದವ ಪ್ರಪಂಚವನ್ನ ಗೌರವಿಸಲು ಸಾಧ್ಯವಾ?! ಆಟದ ಮಟ್ಟಿಗೆ ಸೋಲು ಗೆಲುವು ನಿಯಾಮಕವೂ ಹೌದು ನಿರ್ಣಾಯಕವೂ ಹೌದು. ಆದ್ದರ್ರೆ….
ಜೀವನವನ್ನ ಒಂದು ಪಾಠಶಾಲೆ, ನಾವೆಲ್ಲ ನಿತ್ಯ ಕಲಿವವರು ಅಂತ consider ಮಾಡೋದಾದ್ರೆ, ಜೀವನ second chance ಕೊಡೋದು ತುಂಬ ವಿರಳ. ಸಾಂಕೇತಿಕವಾಗಿ ಗೆದ್ದೋರು ಚೇತರಿಸಿಕೊಂಡು ತಿದ್ದಿಕೊಂಡ್ರೆ ಉತ್ತಮ.
ಇಂದಿನ ಬಹುಜನಾದೇಶ ಸಾಗುತ್ತಿರುವ ನಿಟ್ಟು ಮತ್ತು ಕೇವಲ ಮತ್ತು ಕೇವಲ TRPಗಾಗಿ ಮಾತ್ರ ಸಮಾಜವಿಮುಖೀ ಕೆಲಸಕ್ತೂ ಸೈ ಎನ್ನುತ್ತಿರುವ ಮಾಧ್ಯಮದ ನಡೆ ನನ್ನ ಮಟ್ಟಿಗಂತೂ ಆತಂಕಕಾರಿ!
ಏನಂತೀರ?
ನನಗಂತೂ ಇದು ಬದುಕಿನ  ಮತ್ತೊಂದು ಕಲಿಕೆ.
asha vishwanath 1
-ಆಶಾ ಆರ್.ವಿಶ್ವನಾಥ್

ಬಿಗ್ ಬಾಸ್ ಗೆದ್ದ ಬಾಯಿ ಬುಡುಕ ಪ್ರಥಮ್ !?

ಬಿಗ್‍ಬಾಸ್, ಕನ್ನಡದ ಕಲರ್ಸ್ ವಾಹಿನಿಯಲ್ಲಿ ಕಿಚ್ಚ ಸುದೀಪ್ ನೇತೃತ್ವದಲ್ಲಿ ಮೂಡಿ ಬರುತ್ತಿರುವ ಬಿಗ್‍ಬಾಸ್ ಗ್ರಾಂಡ್ ಫಿನಾಲೆ ಇವತ್ತು.. ರಾತ್ರಿ 8 ಗಂಟೆಗೆ ಕಾರ್ಯಕ್ರಮ ಆರಂಭವಾಗ್ತಿದ್ದ ಹಾಗೆ ವಿನ್ನರ್ ಯಾರು ಅನ್ನೋ ಬಗ್ಗೆ ಸಾಕಷ್ಟು ಸಂದೇಶಗಳು ಹರಿದಾಡಿವೆ.. ನಿನ್ನೆಯಿಂದಲೂ ರೇಖಾ ಸುದೀಪ್ ಮೊದಲ ಸಿನಿಮಾದಲ್ಲಿ ಹೀರೋಯಿನ್ ಆಗಿದ್ದವರು ಹಾಗಾಗಿ ಅವರನ್ನೇ ಗೆಲ್ಲಿಸಲು ಮಾತುಕತೆ ನಡೆದಿದೆ ಅನ್ನೋ ಬಗ್ಗೆ ಮಾತುಗಳು ಕೇಳಿ ಬರ್ತಿತ್ತು.. ಆದ್ರೆ ಭಾನುವಾರ ರಾತ್ರಿ 8 ಗಂಟೆಗೆ ಕಾರ್ಯಕ್ರಮ ಆರಂಭವಾಗ್ತಿದ್ದ ಹಾಗೆ ರೇಖಾ ಮೂರನೇ ಸ್ಥಾನ, ಕೀರ್ತಿ ಕುಮಾರ್‍ಗೆ 2ನೇ ಸ್ಥಾನ, ಮನೆಯಲ್ಲಿ ಎಲ್ಲರನ್ನು ಹಿಯ್ಯಾಳಿಸಿ, ಎಲ್ಲರಿಂದಲೂ ಕಡೆಗಣನೆಗೆ ಒಳಗಾಗಿದ್ದ  ಪ್ರಥಮ್‍ಗೆ ಮೊದಲನೇ ಸ್ಥಾನ ಲಭಿಸಿದೆ..

pratham images

ಪ್ರಥಮ್ ಬುದ್ಧಿ ಶಕ್ತಿ, ಜ್ಞಾಪಕಶಕ್ತಿ ಬಗ್ಗೆ ಯಾವುದೇ ಮಾತಿಲ್ಲ.. ಆದ್ರೆ ಪ್ರಥಮ್‍ಗೆ ಯಾವುದನ್ನು ವಿರೋಧಿಸಬೇಕು, ಯಾವುದನ್ನು ಖಂಡಿಸಬೇಕು ಅನ್ನೋ ಬಗ್ಗೆ ಯಾವುದೇ ಸ್ಪಷ್ಟತೆ ಇರಲಿಲ್ಲ.. ಕಡೆಯ 2 ವಾರಗಳಲ್ಲಿ ಸ್ವಲ್ಪ ಸುಧಾರಣೆ ಕಂಡಿದೆ… ಈ ಮಾತನ್ನ  ಸ್ವತಃ ಬಿಗ್ ಬಾಸ್ ವಿನ್ನರ್ ಆಫ್ 2016 ಪ್ರಥಮ್ ಕೂಡ ಹೇಳಿದ್ದಾರೆ.. ಆದರೂ ಕರುನಾಡಿನ ಜನರು ಪ್ರಥಮ್ ಆಯ್ಕೆ ಮಾಡಿದ್ದಾರೆ ಅನ್ನೋ ಮೂಲಕ ಶಾಕ್ ನೀಡಲಾಗಿದೆ.. ಒಂದು ವೇಳೆ ಪ್ರಥಮ್ ಆಯ್ಕೆಯೇ ಅಂತಿಮ ಆಗಿದ್ದರೆ, ಜನ ನಕಾರಾತ್ಮಕ ವಿಚಾರಗಳನ್ನು ಮನರಂಜನೆಗಾಗಿ ಅಪ್ಪಿಕೊಳ್ಳುತ್ತಿದ್ದಾರೆ ಎಂದರ್ಥ..

pratham 2

ಟಿವಿಗಳಲ್ಲಿ ಗಂಡ ಹೆಂಡ್ತಿ ಜಗಳ, ಸೆಕ್ಸ್ ಸುದ್ದಿಗಳು, ಅತ್ಯಾಚಾರದ ವಿಚಾರಗಳು ಹೆಚ್ಚೆಚ್ಚು ಪ್ರಸಾರ ಆಗಲು ಇದೇ ಕಾರಣ.. ಜನರು ನಕಾರಾತ್ಮಕ ವಿಚಾರಗಳಿಗೆ ಕಿವಿ ಕೊಡುವಷ್ಟು ಉತ್ತಮ ಸಕಾರಾತ್ಮಕ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಅನ್ನೋದು ಬಿಗ್‍ಬಾಸ್ ಮೂಲಕವೂ ಮತ್ತೆ ಸಾಬೀತಾಯ್ತು. ಪ್ರಥಮ್ ಬಗ್ಗೆ ನಮಗೆ ಯಾವುದೇ ತಕರಾರು ಇಲ್ಲ.. ಆತನೇ ಹೇಳಿದಂತೆ ಬಿಗ್‍ಬಾಸ್ ಮನೆಯಿಂದ ಬರುವಾಗ ಯಾವುದೇ ಪ್ರತಿಭಟನೆ, ಖಂಡನೆ ಇರುವುದಿಲ್ಲ ಅಂತಾ ಸುದೀಪ್‍ಗೆ ವಾಗ್ದಾನ ಮಾಡಿರುವ ರೀತಿ ನಡೆದುಕೊಂಡರೆ.. (ನಮ್ಮ ವಿರುದ್ಧ ಪ್ರತಿಭಟಿಸಿದರೂ ಅಚ್ಚರಿಯಿಲ್ಲ)

ಬಿಗ್‍ಬಾಸ್ ಫೈನಲ್‍ನಲ್ಲಿ ಸುದೀಪ್ ಭಾವನಾತ್ಮಕ ದೃಶ್ಯಗಳ ಸಂಗ್ರಹ ತೋರಿಸಿ, ಆ ವೀಡಿಯೋ ಬಗ್ಗೆ ಎಲ್ಲಾ ಸ್ಪರ್ಧಿಗಳನ್ನು ಕೇಳುತ್ತಾರೆ.. ಆ ವೇಳೆ ನನಗೂ ಬಿಗ್‍ಬಾಸ್ ಮನೆ ಎಲ್ಲಾ ಭಾವನೆಗಳ ಬಗ್ಗೆ ತಿಳಿಸಿಕೊಟ್ಟಿದೆ ನಾನು ಇನ್ಮುಂದೆ ಹೀಗೆ ಇರಲ್ಲ ಎನ್ನುತ್ತಾರೆ.. ಆದರೆ ಜನ ಗೆಲ್ಲಿಸಿದ್ದು ಹೀಗೇ ಮುಂದುವರಿಯಲಿ ಅನ್ನೋದನ್ನು ಮರೆತುಬಿಟ್ಟರು.. ಏನೇ ಆಗಲಿ, ಜನ ನಕಾರಾತ್ಮಕವಾಗಿ ಇದ್ದಿದ್ದಕ್ಕೆ ವೋಟ್ ಮಾಡಿ ಗೆಲ್ಲಿಸಿದ್ದರೂ ಆತ ಮುಂದಿನ ಜೀವನದಲ್ಲಿ ಸಕಾರಾತ್ಮವಾಗಿ ಬದಲಾಗಲಿ.. ಕಲರ್ಸ್ ಕನ್ನಡದಲ್ಲಿ ವಿನ್ನರ್ ಘೋಷಣೆಯಾಗಲು ಇನ್ನೂ 3 ಗಂಟೆಗಳು ಬೇಕು.. ಆದರೆ ciniadda.com ತನ್ನ  ಸುದ್ದಿಮೂಲಗಳಿಂದ  ವಿನ್ನರ್ ಘೋಷಣೆಯನ್ನು ಪಕ್ಕಾ ಮಾಡಿಕೊಂಡಿದೆ..

-ಸರ್ವಸಮರ್ಥ, ನಾಗಮಂಗಲ

“ಬಿಗ್ ಬಾಸ್” ನಲ್ಲಿ ಕೊನೆಗೂ ಗೆಲ್ಲಲಿಲ್ಲ ರೇಖಾ ಒಳ್ಳೆತನ

ಬಿಗ್ ಬಾಸ್ ಸೀಸನ್ 4 ಗ್ರಾಂಡ್ ಫೈನಲ್ನಲ್ಲಿ ಕಡೆಯ ಹಂತದವರೆಗೂ ಬಂದ ಉಳಿದ ಮೂವರಲ್ಲಿ ಮನೆಯನ್ನು ಗೆದ್ದ ಮೃದು ಮನಸ್ಸಿನ ಹೆಣ್ಣುಮಗಳು ರೇಖಾ ಮನೆಯಿಂದ ಹೊರಬಂದಿರುವ ಸುದ್ದಿ ಬಂದಿದೆ.

ಎಂಥದ್ದೇ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳದ ರೇಖಾ ಹೊರಬಿದ್ದದ್ದು ವಿಪರ್ಯಾಸವಾಗಿದ್ದರೂ ಬರಿಯ  ಒಳ್ಳೆಯತನ ಇಂಥಾ ಕಡೆ ಕೆಲಸ ಮಾಡುವುದಿಲ್ಲವೆಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ.

ದಾರಿ ಯಾವುದಾದರೇನು ಗೆಲ್ಲುವುದೇ ಗುರಿ ಅಂತ ಭಾವಿಸದೆ ಸಂಯಮದಿಂದ ಆಟವಾಡಿದ್ದು ರೇಖಾ ಮಾತ್ರ. ಒಮ್ಮೆಮ್ಮೆ ಸ್ವಲ್ಪ ಸೋಬರ್ ಅನ್ನಿಸಿದರೂ ಆಕೆಯ ಸ್ಥಿತ ಪ್ರಜ್ಞತೆಯನ್ನು ಮೆಚ್ಚಲೇಬೇಕು.

ಮೋಸದ ಮನಃ ಸ್ಥಿತಿ, ಅತಿ ಲೆಕ್ಕಾಚಾರ, ಕಿರಿಕಿರಿ ಎನ್ನಿಸುವಂತಹ ನಡವಳಿಕೆ  ಇಲ್ಲದೆಯೂ ಗ್ರಾಂಡ್ ಫಿನಾಲೆಯವರೆಗೂ ಬಂದಿದ್ದು ರೇಖಾ ಸಾಧನೆಯೇ ಸರಿ. ಇನ್ನಷ್ಟು ಗೆಲುವಾಗಿ ಆಡಿದ್ದರೆ ಬಹುಷಃ ರೇಖಾ ಬಿಗ್ ಬಾಸ್ ಒಡತಿ ಆಗುತ್ತಿದ್ದರೇನೋ ಅಂತ ಅವರ ಅಭಿಮಾನಿಗಳಿಗೆ  ಅನ್ನಿಸಿದ್ದರೂ ಅಚ್ಚರಿಯಿಲ್ಲ.

 

“ಬಿಗ್ ಬಾಸ್” ಯಾರು ಗೆದ್ದರೆ ಏನೇನು?

ಬಿಗ್ ಬಾಸ್ ನ ಅಂತಿಮ ಆಯ್ಕೆ ಈ ರೀತಿ ಇದ್ದರೆ
1. ರೇಖಾ
2. ಪ್ರಥಮ್
3. ಕೀರ್ತಿ ಕುಮಾರ್
ಅಥವಾ
1. ಪ್ರಥಮ್
2. ರೇಖಾ
3. ಕೀರ್ತಿ ಕುಮಾರ್
ಆಗಿದ್ದರೆ, ಜನ ಹೀಗೆ ಮಾತನಾಡಬಹುದು..

rekha bigboss

ರೇಖಾ ಪಾಸಿಟೀವ್..? ನೆಗೆಟೀವ್..?
1. ರೇಖಾ ಸಿನಿರಂಗದಿಂದ ದೂರವಿದ್ದರೂ ಬಿಗ್ ಬಾಸ್ ಗೆ ಬಂದಿದ್ದು ಸುದೀಪ್ ಕೃಪಾ ಕಟಾಕ್ಷದಿಂದ
2. ರೇಖಾ ಅವರು ಸಭ್ಯ, ನೇರನುಡಿ, ಸುಸಂಸ್ಕೃತ ಹೆಣ್ಣು ಮಗಳು ಅನ್ನೋದು ನಿಜ..
3. ಆದರೆ ಮನರಂಜನೆ, ಟಾಸ್ಕ್ ಗಳಲ್ಲಿ ಅಷ್ಟೇನು ಪರಿಣಾಮಕಾರಿ ಅಲ್ಲದಿದ್ದರೂ ಗೆಲುವು ಸಿಕ್ಕರೆ
ರೇಖಾ ಅವರು ಸುದೀಪ್ ಸ್ನೇಹಿತೆ ಅನ್ನುವ ಕಾರಣಕ್ಕೆ ಗೆಲುವು ಕೊಟ್ಟರು ಎನ್ನುವ ಅಪಖ್ಯಾತಿ ಬಿಗ್ ಬಾಸ್ಗೆ
ಪ್ರಥಮ್ ಪಾಸಿಟೀವ್..? ನೆಗೆಟೀವ್..?
1. ಪ್ರಥಮ್ ಮಾನವೀಯತೆ ಇಲ್ಲದೆ ಮೃಗೀಯ ಸ್ವಭಾವ ತೋರಿಸಿದ ವ್ಯಕ್ತಿ, ಯಾವುದೇ ಹೇಳಿಕೆಯನ್ನು ತನಗೆ ಬೇಕಾದ ಹಾಗೆ ಅರ್ಥ ಮಾಡಿಕೊಳ್ಳುವ ಅವಕಾಶವಾದಿ ಎನಿಸಿದರು..
2. ಮನುಷ್ಯನಿಗೆ ಕೋಪ ಎನ್ನುವುದು ಸಹಜ, ಅದನ್ನೇ ಬಂಡವಾಳ ಮಾಡಿಕೊಂಡು ಬಾಯಿಗೆ ಬಂದಂತೆ ಮಾತನಾಡಿದರೆ..? ನಿಮ್ಮ ಮನೆಯಲ್ಲೇ ಈ ರೀತಿಯೊಬ್ಬ ವ್ಯಕ್ತಿ ಬೈಯುತ್ತಾ, ವಿರೋಧಿಸಿದರೆ ಸಹಿಸುತ್ತೀರಾ..?
3. ಪ್ರೇಕ್ಷಕನಿಗೆ ಪ್ರಥಮ್ ಉತ್ತಮ ಮನರಂಜನೆ ನೀಡಿದ್ದಾರೆ, ಜನರೂ ಇಷ್ಟ ಪಟ್ಟಿದ್ದಾರೆ ಅನ್ನೋದು ಸತ್ಯ..
4. ಕಳೆದ 2 ವಾರದಿಂದ ತನ್ನ ತಪ್ಪನ್ನು ತಿದ್ದಿಕೊಳ್ಳಲು ಮುಂದಾದ ಪ್ರಥಮ್, ಆ ಕೆಲಸವನ್ನು 6 ವಾರದ ಬಳಿಕ ಮಾಡಿದ್ದರೆ ಗೆಲುವಿಗೆ ಅರ್ಹನಾಗುತ್ತಿದ್ದರು..
5. ಪ್ರಥಮ್ ಗೆದ್ದರೆ ಮುಂದಿನ ಸೀಸನ್ ನಲ್ಲಿ ಮನರಂಜನೆಗಾಗಿ ಯಾರು ಯಾರಿಗೆ ಬೇಕಾದರು ಉಗಿಯಬಹುದು ಎನ್ನುವ ಮನೋಭಾವನೆ ಹೆಚ್ಚಾಗುತ್ತೆ.. ವೀಕ್ಷಕರಿಗೆ ಬೀದಿ ಜಗಳದ ಅನುಭವ ಆಗಲಿದೆ..
6. ಪ್ರಥಮ್ ತುಂಬಾ ಬುದ್ಧಿವಂತ, ಅಸಾಮಾನ್ಯ ಜ್ಞಾಪಕ ಹೊಂದಿರುವ ( ಅದೇ ಮುಳುವಾದರೂ ಅಚ್ಚರಿಯಿಲ್ಲ ) ವ್ಯಕ್ತಿ ಅನ್ನೋದು ನೂರಕ್ಕೆ ನೂರರಷ್ಟು ಸತ್ಯ..
ಕೀರ್ತಿ ಕುಮಾರ್ ಪಾಸಿಟೀವ್..? ನೆಗೆಟೀವ್..?
1. ಕೀರ್ತಿಯಲ್ಲೂ ಎಲ್ಲರಂತೆ ಕೋಪ, ಅಸಹನೆ ಎಲ್ಲವೂ ಮೈಗೂಡಿಕೊಂಡಿತ್ತು
2. ಯಾವಾಗ ಜನರನ್ನು ಬದಲಾವಣೆ ಮಾಡಲು ಅಸಾಧ್ಯವೆನಿಸಿತೋ.. ತಾಳ್ಮೆಯ ಮೋರೆ ಹೋಗಿದ್ದಾರೆ..
3. ಟಾಸ್ಕ್ ವಿಚಾರಗಳಲ್ಲಿ ಕೀರ್ತಿ ಕುಮಾರ್ ಅವರನ್ನು ಮೀರಿಸುವ ಮತ್ತೊಬ್ಬ ಸ್ಪರ್ಧಿ ಇನ್ನೊಬ್ಬರಿಲ್ಲ..
4. ಬುದ್ಧಿವಂತಿಕೆಯಲ್ಲೂ ಕೀರ್ತಿ ಕುಮಾರ್ ಮೊದಲ ಟಾಸ್ಕ್ ನಲ್ಲೆ ಅಸಾಮಾನ್ಯ ಎನಿಸಿದ್ದಾರೆ..
5. ಶಾಲಿನಿ, ನಿರಂಜನ್, ಶೀತಲ್ ಜೊತೆ ಮ್ಯಾಚ್ ಫಿಕ್ಸ್ ಮಾಡಿಕೊಂಡಿದ್ದಾರೆ ಅನ್ನೋ ಆರೋಪ ಹಾಗೂ ಅವರ ನಡುವೆ ಇದ್ದ ಸ್ನೇಹ ಕೊಂಚ ಮಟ್ಟಿಗೆ ಮೈನಸ್. ಆದರೆ ಸುದೀಪ್ ಹೇಳಿದ್ದಾರೆ ಅದು ಸುಳ್ಳು ಎಂದು..
6. ಮನರಂಜನೆ, ತಾಳ್ಮೆ, ಟಾಸ್ಕ್ ಎಲ್ಲದರಲ್ಲೂ ಮುಂದಿದ್ದಾರೆ..

ಜನರು ಎಷ್ಟೇ ಸಂದೇಶ ಕಳುಹಿಸಿರಲಿ, ಬಿಡಲಿ ಬಿಗ್ ಬಾಸ್ ವಿವೇಚನೆಯೇ ಅಂತಿಮ ಅನ್ನೋದು ಮುಚ್ಚಿಟ್ಟ ಸತ್ಯ..

-ಸರ್ವಸಮರ್ಥ, ನಾಗಮಂಗಲ

 

ಪ್ರಥಮ್ ಮಾಳವಿಕಾ ‘ಸೀಕ್ರೆಟ್” ರೂಮ್ ಸೀಕ್ರೆಟ್ .

ಕಲರ್ಸ್ ವಾಹಿನಿಯ ಬಿಗ್ ಬಾಸ್ ನಲ್ಲಿ ಪ್ರಥಮ್ , ಮಾಳವಿಕಾ ಒಟ್ಟಿಗೆ ಎಲಿಮಿನೇಟ್ ಆಗಿದ್ದಾರಂತೆ ಅನ್ನುವ ಸುದ್ದಿ ಹರಿದಾಡುತ್ತಿದೆ. ಆದ್ರೆ ಆಗಿರುವುದು ಇಷ್ಟೇ.

ಮಾಳವಿಕಾ, ಪ್ರಥಮ್ ಇಬ್ಬರನ್ನೂ ಮನೆಯಿಂದ ಹೊರಗೆ ಅಂದ್ರೆ ಸೀಕ್ರೆಟ್ ರೂಮಿನಲ್ಲಿ ಇರಿಸಲಾಗಿದೆ. ತಾವಿಲ್ಲದ ಹೊತ್ತಲ್ಲಿ ಇಡೀ ಮನೆಯ ಜನ ಏನು ಮಾತಾಡಿಕೊಳ್ತಾರೆ ಅನ್ನುವಂಥದ್ದು ಇಬ್ಬರಿಗು ತಿಳಿಯಲಿದೆ. ಇತ್ತೀಚಿಗೆ ಮಾಳವಿಕಾ ಸ್ವಲ್ಪ ಬದಲಾದಂತೆ ಕಾಣುತ್ತಿದ್ದಾರೆ. ಅದೂ ಕೂಡ ಗೆಲ್ಲುವ ಗೇಮ್ ಪ್ಲಾನ್ ಅಷ್ಟೇ ಅನ್ನುವುದು ಬಲ್ಲವರ ಅನಾಲಿಸಿಸ್.

bigboss-pratham-malavika

“ಮಾಳವಿಕಾ ಗೆಲುವು ಈಗಾಗಲೇ ನಿರ್ಧಾರವಾಗಿದೆ. ಇದೆಲ್ಲ ಸುಮ್ಮನೆ ಗಿಮಿಕ್ ಅಷ್ಟೇ “ಅನ್ನುವುದು ಹೆಸರು ಹೇಳಲು  ಇಚ್ಚಿಸದ ಬಿಗ್ ಬಾಸ್ ಟೀಮ್  ಸದಸ್ಯರೊಬ್ಬರು ciniadda.com ಗೆ ನೀಡಿದ ಸುಳಿವು. ಇದರ ಸತ್ಯಾಸತ್ಯತೆ ಎಷ್ಟಿದೆಯೋ ಕಾದು ನೋಡಬೇಕು.

ಇನ್ನೇನು ಮುಗಿದೇ ಹೋಯ್ತು ಬಿಗ್ ಬಾಸ್ ಅಂದುಕೊಳ್ಳುವಷ್ಟರಲ್ಲೇ ಇಲ್ಲ ಇಲ್ಲ ಇದೇ ತಿಂಗಳು 29ರ ತನಕ ಮುಂದುವರೆಯಲಿದೆ ಅಂತ ಶೂಟಿಂಗ್ ವೇಳೆ  ಸುದೀಪ್ ಘೋಷಿಸಿದ್ದಾರಂತೆ.

ಒಂದಂತೂ ನಿಜ ಕಳೆದ ಸೀಸನ್ಗಳಿಗೆ ಹೋಲಿಸಿದರೆ  ಈ ಬಾರಿಯ ಬಿಗ್ ಬಾಸ್ ನೋಡುವವರ ಸಂಖ್ಯೆ ಕಡಿಮೆಯಾಗಿ ಟಿಆರ್ಪಿ ಕುಸಿದು ಬಿದ್ದಿರುವುದಂತೂ ಸತ್ಯ. ಕಡೆ ದಿನದವರೆಗೂ ಇನ್ನು ಏನೇನು ಗಿಮಿಕ್ ಗಳು ಸೃಷ್ಟಿಯಾಗುತ್ತವೋ ನೋಡಬೇಕು.

 

 

ಕಿಚ್ಚ ಸುದೀಪ್ ಕಿರುತೆರೆಯ “ವಾರಸ್ದಾರ”?!

ಬೆಳ್ಳಿತೆರೆಯ ಬಾಂಡ್ ಕಿಚ್ಚ ಸುದೀಪ್ ಇದಾಗಲೇ ಕಿರುತೆರೆಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭರ್ಜರಿ ಯಶಸ್ಸು ಗಳಿಸಿದ್ದಾರೆ. ಅಭಿಮಾನಿಗಳ ದಂಡು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಬಿಗ್ ಬಾಸ್ ನಲ್ಲಿ ಸುದೀಪ್ ಬರ್ತಾರೆ ಅನ್ನೋ ಕಾರಣಕ್ಕೇ ಟಿವಿಗೆ ಕಣ್ಣು ನೆಡೋ ಕೋಟ್ಯಂತರ ವೀಕ್ಷಕರಿದ್ದಾರೆ. ಈಗ ಕಿರುತೆರೆಯಲ್ಲಿ ಮತ್ತೊಂದು ದಾಖಲೆ ಬರೆಯಲು ಹೊರಟಿದ್ದಾರೆ ಸೂಪರ್ ಸುದೀಪ್ !! ಅದು ಜೀ  ಕನ್ನಡ ವಾಹಿನಿಯ  “ವಾರಸ್ದಾರ” ಧಾರಾವಾಹಿಯ ನಿರ್ಮಾಣದ ಮೂಲಕ.

0d7a9979

“ವಾರಸ್ದಾರ” ಬರುವುದು ಯಾವಾಗ ?

05

“ವಾರಸ್ದಾರ” ಇದೇ ಡಿಸೆಂಬರ್ 19ರಿಂದ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 7.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ .

“ವಾರಸ್ದಾರ” ವಿಶೇಷ 

ಇದು ಕಿರುತೆರೆ ಧಾರಾವಾಹಿಯೇ ಆದರೂ ಬಹುತೇಕರು ಸಿನಿಮಾ ಕಲಾವಿದರು , ಹಾಗು ಸಿನಿಮಾ  ತಂತ್ರಜ್ಞರು. ಸುದೀಪ್ ಮೇಲಿನ ಅಭಿಮಾನದಿಂದ ಸಿನಿಮಾ ಮಂದಿ “ವಾರಸ್ದಾರ” ದಲ್ಲಿ ಭಾಗವಹಿಸಿದ್ದಾರೆ . ಒಂದು ಸಿನಿಮಾ ರೀತಿಯಲ್ಲೇ ನಿರ್ಮಾಣವಾಗುತ್ತಿರುವ “ವಾರಸ್ದಾರ” ಹಲವು ಪ್ರಥಮಗಳಿಗೆ ಕಾರಣವಾಗಲಿದೆ .

ನಟಿ ಯಜ್ಞಾ ಶೆಟ್ಟಿ ಮೊದಲ ಬಾರಿಗೆ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ನಟ ರವಿಚೇತನ್ , ವೀಣಾ ಪೊನ್ನಪ್ಪ, ರಮೇಶ್ ಪಂಡಿತ್, ವೀಣಾ ವೆಂಕಟೇಶ್, ರಾಮ್ ಸೇರಿದಂತೆ ಹಲವಾರು ಕಲಾವಿದರ ಸಂಗಮದಲ್ಲಿ ತೆರೆಗೆ ಬರುತ್ತಿದೆ “ವಾರಸ್ದಾರ”. ದ್ಯಾವ್ರೆ ,ಪ್ಲಸ್ ಥರಹದ ವಿಭಿನ್ನ ಚಿತ್ರಗಳನ್ನು ನಿರ್ದೇಶಿಸಿದ ಗಡ್ಡ ವಿಜಿ ಈ ಧಾರಾವಾಹಿಯ ಸಾರಥ್ಯ ವಹಿಸಿಕೊಂಡಿದ್ದಾರೆ. ಡ್ರಾಮಾ ಜೂನಿಯರ್ಸ್ ಮೂಲಕ ನೋಡುಗರ ಮುದ್ದಿನ ಚಿನಕುರಳಿಯಾಗಿದ್ದ 5 ವರ್ಷದ  ಚಿತ್ತಾಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಸ್ವತಃ ಸುದೀಪ್ ಚಿತ್ತಾಲಿಯ ಅಭಿನಯಕ್ಕೆ ಮಾರು ಹೋಗಿ ಲೀಡ್ ರೋಲ್ಗೆ ಕರೆತಂದಿದ್ದಾರೆ . 

0d7a0013

ಕಥೆ 

ಶಿವಪುರ ಎಂಬ ಗ್ರಾಮದಲ್ಲಿ ನಡೆಯುವ ಕಥೆಯಿದು. ಆ ಗ್ರಾಮದ ಆಡಳಿತದ ಚುಕ್ಕಾಣಿಯನ್ನು “ವಾರಸ್ದಾರ” ಕುಟುಂಬ ಹಿಂದಿನಿಂದಲೂ ವಹಿಸಿಕೊಂಡು ಬಂದಿರುತ್ತದೆ . ಕುಟುಂಬದ ಸೊಸೆ ಹೆಣ್ಣು ಮಗುವಿಗೆ ಜನ್ಮ ನೀಡಿರುವುದು  ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿರುತ್ತದೆ. ಅಲ್ಲದೆ ದುರುಳ ವ್ಯಕ್ತಿಯೊಬ್ಬ  “ವಾರಸ್ದಾರ”ಪೀಠ ಅಲಂಕರಿಸುವುದಕ್ಕೆ ಕಾರಣವಾಗಿರುತ್ತದೆ. ಅದನ್ನು ತಪ್ಪಿಸಲು ಅಮ್ಮ ಒಂದು ಸುಳ್ಳು ಹೇಳುತ್ತಾಳೆ. ಆ ಸುಳ್ಳಿನ ಸುತ್ತ ನಡೆಯುವ ಕಥಾ ಹಂದರವೇ   “ವಾರಸ್ದಾರ” ತಿರುಳು.

ಈ ಕಥೆಗೆ ಸೂಕ್ತವಾದ ಲೊಕೇಶನ್ ಹುಡುಕಾಟದಲ್ಲಿದ್ದ ತಂಡಕ್ಕೆ ಚಿಕ್ಕಮಗಳೂರು ಸಮೀಪದ ಬೇಗೂರು ಎಂಬ ಕುಗ್ರಾಮ ಸಿಕ್ಕಿದೆ. ಯಾವುದೇ ಫೋನ್ ಸಂಪರ್ಕ ಕೂಡ ಇಲ್ಲದ ಗ್ರಾಮ ಬೇಗೂರಿನಲ್ಲಿ ತಂಡ ಬೀಡು ಬಿಟ್ಟಿದೆ. ಬಹುತೇಕ ಚಿತ್ರಣ ಇಲ್ಲಿಯೇ  ನಡೆಯುತ್ತಿದೆ.

ಈಗಾಗಲೇ ಡ್ರಾಮಾ ಜೂನಿಯರ್ಸ್ , ಕಾಮಿಡಿ ಕಿಲಾಡಿಗಳಂತ ಕಾರ್ಯಕ್ರಮದ ಮೂಲಕ ವೀಕ್ಷಕರನ್ನು ಮೆಚ್ಚಿಸಿರುವ ಜೀ ಕನ್ನಡ ವಾಹಿನಿಯ ಈ ಹೊಸ  ಧಾರಾವಾಹಿ ಮತ್ತಷ್ಟು ನೋಡುಗರನ್ನು ಸೆಳೆಯುವ ಸಾಧ್ಯತೆ ಹೆಚ್ಚಿದೆ.

0302

ಸುದೀಪ್ ಸಾಮಾನ್ಯವಾಗಿ ಸುಲಭಕ್ಕೆ ಯಾವುದನ್ನೂ ಒಪ್ಪದ ಶ್ರದ್ಧಾವಂತ ,ಬುದ್ಧಿವಂತ  ಕಲಾವಿದ.  ಹಾಲಿವುಡ್ ಅಂಗಳಕ್ಕೆ ಹಾರಿದರೂ ಮಿಂಚುವಂಥಾ ಪ್ರತಿಭೆ ಅವರದ್ದು .ಅವರ  ಹೊಸ ಪ್ರಯತ್ನದ “ವಾರಸ್ದಾರ” ವಿಶಿಷ್ಟವಾಗಿ, ವಿಭಿನ್ನವಾಗಿ ಪ್ರೇಕ್ಷರನ್ನು ತಲುಪಲಿ . ಮನೆ ಮನೆಯ ಮಾತಾಗಲಿ “ವಾರಸ್ದಾರ”.

ಸಿನಿಮಾಗೂ ಬಂತು “ಸುಪ್ರೀಂ” ಆರ್ಡರ್ ! ನೋಡೋಕೆ ಮುನ್ನ ಎದ್ದು ನಿಲ್ಲಬೇಕು ಯಾಕೆ ?

ಸಿನಿಮಾ ನೋಡೋಕೆ ಹೋಗುವವರಲ್ಲಿ ಬಹಳಷ್ಟು ಮಂದಿಗೆ ಬೇಕಿರುವುದು ಮನರಂಜನೆ. ಯಾಕೋ ಬೋರ್ ಹೊಡಿತಾ ಇದೆ ಒಂದು ಸಿನಿಮಾಕ್ಕೆ ಹೋಗೋಣ ಬಾ ಅಂತ ನಾವೇ ಎಷ್ಟೋ ಸಾರಿ ಹೇಳಿರ್ತೀವಿ. ಪ್ರೀತಿ-ಪ್ರೇಮ ಶುರುವಿಟ್ಟ ಹೊತ್ತಲ್ಲಿ ಪಾರ್ಕು , ಹೋಟೆಲ್ಲಿನ ಜೊತೆಗೆ ಸಿನಿಮಾ ಇದ್ದೇ ಇರತ್ತೆ. ಕತ್ತಲ ಹೊತ್ತಲ್ಲಿ ಚೂರು ಪಾರು ಚೇಷ್ಟೆಗೆ ಒಳ್ಳೆ ಅಡ್ಡ ಚಿತ್ರಮಂದಿರ. ಇನ್ನು ಮದುವೆಯಾದ ಹೊಸತರಲ್ಲು ಹೋಗುವುದು ಸಿನಿಮಾಕ್ಕೇನೆ. ಅದೊಂತರ ತೀರದ ಸೆಳೆತ!! ಒಂಥರಾ ಮಜದಮಂದಿರ ಅನ್ನಿಸುವ ಚಿತ್ರಮಂದಿರಗಳಲ್ಲಿ ಇನ್ನು ಮುಂದೆ ಫಿಲಂ ನೋಡಲಿಕ್ಕೆ ಮುನ್ನ ಎಲ್ಲರೂ ಪಾಲಿಸಲೇ ಬೇಕಾದ ನಿಯಮ ಬಂದಿದೆ. ಇದು ಭಾರತದ ಸರ್ವೋಚ್ಛ ನ್ಯಾಯಾಲಯ ನೀಡಿರುವ ಆದೇಶ !!

suprim-court

ಏನಿದು ಆದೇಶ?

-ಇನ್ನು ಮುಂದೆ ಸಿನಿಮಾ ಶುರುವಾಗುವ ಮುನ್ನ ದೇಶದ ಎಲ್ಲಾ ಚಿತ್ರಮಂದಿರಗಳಲ್ಲೂ ರಾಷ್ಟ್ರಗೀತೆ ಮೊಳಗಿಸಬೇಕು.

-ಥಿಯೇಟರ್ ನಲ್ಲಿರುವ ಪ್ರತಿಯೊಬ್ಬರೂ ಎದ್ದು ನಿಂತು “ಜನಗಣ ಮನ”ಕ್ಕೆ ಗೌರವ ಸಲ್ಲಿಸಲೇ ಬೇಕು.

-ರಾಷ್ಟ್ರಗೀತೆಯ ಜೊತೆಗೆ ತೆರೆಯ ಮೇಲೆ ರಾಷ್ಟ್ರ ಧ್ವಜವನ್ನೂ ಪ್ರದರ್ಶಿಸಬೇಕು

-ಮನೋರಂಜನಾ ವಾಹಿನಿಗಳಲ್ಲಿ ವಾಣಿಜ್ಯ ಉದ್ದೇಶಗಳಿಗೆ ರಾಷ್ಟ್ರಗೀತೆ ಬಳಸಿಕೊಳ್ಳುವಂತಿಲ್ಲ. ಹಾಡುವಾಗಲಾಗಲಿ, ನುಡಿಸುವಾಗಲಾಗಲಿ ನಾಟಕೀಯತೆ ಬೆರೆಸುವಂತಿಲ್ಲ.

ಯಾರು ?ಯಾಕಾಗಿ ಕೊಟ್ಟದ್ದು ?

ನ್ಯಾಯಮೂರ್ತಿ ದೀಪಕ್ ಮಿಶ್ರ, ಅಮಿತ್ ರಾಯ್ ಒಳಗೊಂಡ ಸುಪ್ರೀಂ ಪೀಠ ಇಂದು ಅಂದರೆ ಬುಧವಾರ ಆದೇಶ ಹೊರಡಿಸಿದೆ. ಅವ್ರ ಪ್ರಕಾರ ನಾಗರೀಕರು ರಾಷ್ಟ್ರಗೀತೆಯ ಬಗ್ಗೆ ಹೆಮ್ಮೆ ಪಡಬೇಕು. ಇತ್ತೀಚಿನ ನಮ್ಮ ಜನಕ್ಕೆ  ರಾಷ್ಟ್ರಗೀತೆಯನ್ನ ಹೇಗೆ ಹಾಡಬೇಕೆನ್ನುವುದೇ ಗೊತ್ತಿಲ್ಲ . ಆ ಕಾರಣದಿಂದ ಎಲ್ಲರಿಗು ಸರಿಯಾಗಿ ಹಾಡುವುದನ್ನು ಹೇಳಿಕೊಡಬೇಕು. ನಮ್ಮ ರಾಷ್ಟ್ರಗೀತೆಯನ್ನು ನಾವೆಲ್ಲಾ ಗೌರವಿಸಲೇ ಬೇಕು. ಅಂಥಾ ಸಮಯವೀಗ ಬಂದಾಗಿದೆ. ಇದು ಸಾಂವಿಧಾನಿಕವಾದ ರಾಷ್ಟ್ರಭಕ್ತಿಯ ಭಾಗವೂ ಆಗಿದೆ. ಜನರಿಗೆ ಇದು ನಮ್ಮ ದೇಶ ಎಂಬ ಭಾವ,ಬದ್ಧತೆ ಇರಬೇಕು. ಇಲ್ಲಿರುವ ಮಂದಿ ಸ್ವಾತಂತ್ರ್ಯ ಅನುಭವಿಸುತ್ತಿರುವುದು ದೇಶದಿಂದಲೇ ತಾನೇ ?

ಯಾವಾಗಿಂದ ಜಾರಿ ?

ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಆದೇಶ ಜಾರಿಗೊಳಿಸಲು 10 ದಿನಗಳ ಕಾಲಾವಕಾಶ ನೀಡಿದೆ. ಕೇಂದ್ರ “ಸುಪ್ರೀಂ” ಆದೇಶವನ್ನು ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸುವುದಾಗಿ ಹೇಳಿದೆ. ಜೊತೆಗೆ ಪತ್ರಿಕೆ ಹಾಗು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟಿಸುವುದಾಗಿ ತಿಳಿಸಿದೆ.

-ಸರ್ವೋಚ್ಛ ನ್ಯಾಯಾಲಯದ  ಆದೇಶ  ನಿಮಗೆಲ್ಲ ಏನನ್ನಿಸುತ್ತಿದೆ  ಎಂದು ತಿಳಿಯುವ ಕುತೂಹಲ ನಮಗೂ ಇದೆ. ciniadda.com ನಲ್ಲಿ ನಿಮ್ಮ ಅಭಿಪ್ರಾಯ ದಾಖಲಿಸಿ.

-ಭಾನುಮತಿ ಬಿ ಸಿ

ಚಿತ್ರ ಕೃಪೆ -THE HINDU

 

ಬಿಗ್‌ಬಾಸ್ ಮನೆಯಲ್ಲಿ ಈ ವಾರ ಹಿಟ್ಲರ್ ಆಡಳಿತ..!? ಮುಂದೇನು ?

ಬಿಗ್‌ಬಾಸ್ ಮನೆಯಲ್ಲಿ ಪ್ರಪ್ರಥಮ ಬಾರಿಗೆ ಹಿಟ್ಲರ್ ಹುದ್ದೆ ಸೃಷ್ಠಿಯಾಗಿದೆ.. ಬಿಗ್‌ಬಾಸ್ ಆಡಳಿತ ಅಂತ್ಯವಾಗಿ ಎಮೆರ್ಜೆನ್ಸಿ ಘೋಷಣೆ ಮಾಡಲಾಗಿದೆ.. ಈ ಪ್ರಥಮ ಎಮರ್ಜೆನ್ಸಿಯಲ್ಲಿ  ಪ್ರಥಮ್‌ ರನ್ನೇ  ಕಮಾಂಡರ್ ಆಗಿ ನೇಮಕ ಮಾಡಿರುವುದು ಕುತೂಹಲ ಕೆರಳಿಸಿದೆ.

ನ್ಯಾಯಪಾಲಕರು

bigboss-malavika

ನಿಜ ಜೀವನದಲ್ಲೂ ನ್ಯಾಯವಾದಿ ಆಗಿರುವ ಮಾಳವಿಕಾ ಬಿಗ್ ಬಾಸ್ ಮನೆಯಲ್ಲೀಗ ನ್ಯಾಯಪಾಲಕಿ. ಸದ್ಯ ಪ್ರಥಮ್ ಗೆ ಬಕೆಟ್ ಹಿಡಿಯೋದ್ರಲ್ಲಿ ಭಾರೀ ಬ್ಯುಸಿ.

ಕಮಾಂಡೋ ಯಾರು ?

bigbos-rekhabigboss-shalini

ಚಟ್ಪಟ್ ಪಟಾಕಿ ಶಾಲಿನಿ, ಮಾತಾಡಿದ್ರೆ ಎಲ್ಲಿ ಮುತ್ತು ಹುದುರಿ ಹೋಗುತ್ತೋ ಅನ್ನುವ ರೇಖಾ ಕಮಾಂಡೋಗಳು.

ರೂಲ್ಸ್ ಮಜಾ -ಸಜಾ

 ಲಾರ್ಡ್ ಪ್ರಥಮ್ ಸರ್ ಕೆಲವೊಂದು ರೂಲ್ಸ್‌ಗಳನ್ನು ಮನೆಯಲ್ಲಿ ಮಾಡಿದ್ದಾರೆ. ಸಂಜನಾ – ಭುವನ್ ನಡುವಿನ ಪ್ರೇಮಕ್ಕೆ ಅಂಕುಶ ಹಾಕಿದ್ದಾರೆ.. ಸಂಜನಾ  ಅನಾವಶ್ಯಕವಾಗಿ ನಕ್ಕರೆ ಭುವನಣ್ಣ ಎಂದೇ ಕರೆಯಬೇಕಿದೆ..

ಕಿರಿಕ್ ಕೀರ್ತಿ ಹಾಗೂ ನಿರಂಜನ್ ತಪ್ಪು ಮಾಡಿದರೆ ಸಂಜನಾಗೆ ಐ ಲವ್ ಯೂ ಅಂತಾ ನಗುನಗುತ್ತಾ ಹೇಳಬೇಕು ಅನ್ನೋ ಆದೇಶವೂ ಸೇರಿಕೊಂಡಿದೆ..  ನಾನು(ಪ್ರಥಮ್ )ಮನೆಯಲ್ಲಿ ಊಟ ಮಾಡಿದ ಬಳಿಕ ಎಲ್ಲರೂ ಊಟ ಮಾಡಬೇಕು  ಅನ್ನೋ ಸೂಚನೆಯೂ ಹೊರಬಿದ್ದಿದೆ.. ಇನ್ನೂ ಎಲ್ಲರನ್ನೂ ತಲೆಬಗ್ಗಿಸಿ ನಿಲ್ಲಿಸಿ ಮಾತನಾಡುವ ಮೂಲಕ ನಾನು ನಿಜವಾದ ಹಿಟ್ಲರ್ ಅನ್ನೋದನ್ನು ಲಾರ್ಡ್ ಪ್ರಥಮ್ ಸರ್ ತೋರಿಸಿದ್ದಾರೆ..

ಪ್ರಥಮ್ ಫಸ್ಟ್ ಹಿಟ್ ?

bigboss-pratha-2

ಇದುವರೆಗೆ ಯಾರ್ಯಾರ ಮೇಲೆ ಅನುಮಾನ,ಬೇಸರಗಳು ಪ್ರಥಮ್ ಗೆ ಇತ್ತೋ ಅದೆಲ್ಲವನ್ನು ನೇರವಾಗಿ ಕೇಳಿ ಕ್ಲಿಯರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಕಿರಿಕ್ ಕೀರ್ತಿ ಹಾಗೂ ನಟ ಮೋಹನ್ ಅವರಿಗೆ ನಂಬಿಕೆಗೆ ಅರ್ಹ ಅನ್ನೋ ಪಟ್ಟ ನೀಡಿದ್ದಾರೆ.. ಸಂಜನಾ ನೀಡಿದ ಉತ್ತರ ಸಮಂಜಸ ಅಲ್ಲಾ ಅನ್ನೋ ಪಟ್ಟಿ ಕೊಟ್ಟಿದ್ದಾರೆ.. ಆದ್ರೆ ಪ್ರಥಮ್ ಪರ್ಸನಲ್ ಆಗಿ ತೆಗೆದುಕೊಂಡಿದ್ದಾನೆ ಅಂತಾ ಮೋಹನ್ ಹೇಳಿದ್ರೆ, ಶಾಲಿನಿ ಮಾತ್ರ ಪ್ರಥಮ್ ಮಾಡ್ತಿರೋದು ಪಾಸಿಟಿವ್ ಆಗಿದೆ.. ನನಗೆ ಅವರ ನಡಾವಳಿಕೆಗಳು ಇಷ್ಟವಾಗಿದೆ ಎನ್ನುತ್ತಿದ್ದಾರೆ..

ಮುಂದೇನಾಗಬಹುದು ?

ಮನೆಯಲ್ಲಿ ಪ್ರಥಮ್ ಉತ್ತಮವಾಗಿ ನಿರ್ಧಾರಗಳನ್ನು ಕೈಗೊಂಡರೆ ಮುಂದಿನವಾರ ಇಮ್ಯೂನಿಟಿ ಪಡೆಯಲಿದ್ದಾರೆ.. ಒಂದು ವೇಳೆ ವಯಕ್ತಿಕವಾಗಿ ನಿರ್ಧಾರಗಳು ಹೊರಬೀಳುತ್ತಾ ಸಾಗಿದರೆ ಟಾಸ್ಕ್ ಕಂಪ್ಲೀಟ್ ಆಗದೆ ನೇರವಾಗಿ ನಾಮಿನೇಟ್ ಆಗುವ ಸಾಧ್ಯತೆಯೇ ಹೆಚ್ಚಿದೆ.. ಈಗಾಗಲೇ ಭುವನ್‌ಗೆ ಅಣ್ಣ ಎಂದೇ ಸಂಭೋಧಿಸಬೇಕು ಅಂತಾ ಹೇಳಿರುವ ಆದೇಶ ಸಣ್ಣ ಪ್ರಮಾಣದಲ್ಲಿ ಅಸಮಾಧಾನ ಉಂಟು ಮಾಡಿದೆ.ನಿರಂಜನ್ ಕೊಕ್ಕರೆ ಹಲ್ಲು ಕಾಣ್ತಾ ಇದೆ. ಕೈ ಅಡ್ಡ ಇಟ್ಟು  ಮಾತಾಡ್ಬೇಕು ಅಂದಿರುವ ಆದೇಶ ಕಿರಿಕಿರಿಯಾಗಿ ಕಿಚ್ಚಿಗೆ ಕಾರಣವೂ ಆಗಬಹುದು.  ಇದೇ ರೀತಿ ಮುಂದುವರಿದರೆ ಈ ವಾರ ಬಿಗ್‌ಬಾಸ್ ಮನೆಯಲ್ಲಿ ಅಲ್ಲೋಲ ಕಲ್ಲೋಲ ಗ್ಯಾರಂಟಿ..

ಸರ್ವಸಮರ್ಥ, ನಾಗಮಂಗಲ

ಸುದೀಪ್ ಸೂಪರ್ ಅಡುಗೆಗೆ ಬಿಗ್ ಮನೆ ಫುಲ್ ಫಿದಾ!!

ಅದು ಬಿಗ್ ಬಾಸ್ ನ 50 ನೇ ಸಂಚಿಕೆ.  ಈ ಬಾರಿ ಬಿಗ್ ಬಾಸ್ ಮನೆ ಸೇರಿದವರಿಗೆ ಅರ್ಧ ಶತಕ ಬಾರಿಸಿದ ಖುಷಿಯ ದಿನ ಅಂದ್ರೆ 50ನೇ ದಿನ. ಅಷ್ಟು ದಿನ ಮನೆಯೊಳಗೆ ಅವ್ರು ಕೊಟ್ಟದ್ದನ್ನು ತಿಂದ್ಕೊಂಡು ,ಹೇಳಿದ ಕೆಲಸ ಮಾಡಿ ಟಾಸ್ಕ್ ಗೆದ್ದು ಉಳಿಯೋದು ಅಂದ್ರೆ ಸುಮ್ನೆ ಅಲ್ಲ . ಅದ್ರಲ್ಲೂ ಹೊರಗಿರುವಾಗ ಬೇಕಾದ್ದು ತಿಂದು ಅಭ್ಯಾಸವಾದ ನಾಲಿಗೆಗೆ ಇಲ್ಲಿ ಹೊಂದಿಕೊಳ್ಳುವುದು ಕಷ್ಟ.. ಕಷ್ಟ..ಕಷ್ಟ ..

20161128_200659

50ರ ಸಂಭ್ರಮದಲ್ಲಿ  ಸುದೀಪ್, ಒಂದಿಷ್ಟೂ ಸುಳಿವು ಕೊಡದೆ ಮನೆಯಲ್ಲಿದ್ದವರಿಗೆಲ್ಲ ಮೆನು ಕೊಟ್ರು. ಅವರೆಲ್ಲ ತಮ್ಮಿಷ್ಟದ ಅಡುಗೆ ಕೇಳಿದ ಮೇಲೆ ತಾನೇ ಇವತ್ತಿನ ಕುಕ್  (ಭಟ್ಟ)ಅಂತ ಹೇಳಿ ಏಪ್ರೊನ್ ತೊಟ್ಟು ಅಡುಗೆಗೆ ನಿಂತಿದ್ದು ಅಲ್ಲಿದ್ದವರಿಗಷ್ಟೇ ಅಲ್ಲ ಟೀವಿ ನೋಡ್ತಿದ್ದವರಿಗೂ ಆಶ್ಚರ್ಯ ವೋ ಆಶ್ಚರ್ಯ !! ಜೊತೆಗೆ ಹೇಗೆ ಮಾಡಬಹುದು? ರುಚಿಯಾಗಿರುತ್ತೋ ಏನೋ ? ಅನ್ನೋ ಆತಂಕ, ಕುತೂಹಲ ಮನೆಯೊಳಿದ್ದವರಿಗೆ.

20161128_20035920161128_201534ಮೊದಲೇ ಸುದೀಪ್ ತಾನು ಎಕ್ಸ್ಪರ್ಟ್ ಅಂತ ಹೇಳಿಕೊಳ್ಳದೆ  ಪ್ರಯತ್ನ ಪಡ್ತಿದೀನಿ ಅಂತಷ್ಟೇ ಹೇಳಿ ಅಡಿಗೆ ಶುರುಮಾಡಿದ್ರು. ಮಾಡುವಾಗ ನೀವು ಗಮನಿಸಿರಬೇಕು ( ನೋಡಿದ್ದವರು ) ಅವ್ರು ಕೈಯಾಡಿಸುತ್ತಿದ್ದ ರೀತಿ ಪಕ್ಕಾ ಪ್ರೊಫ್ಫೆಷನಲ್ ಕುಕ್ ಅನ್ನುವಂತೆ ಇತ್ತು. ಅಷ್ಟೇ ಅಲ್ಲ ಒಬ್ಬ ತಾಯಿ ತನ್ನ ಮಕ್ಕಳಿಗೆ ಅಡುಗೆ ಮಾಡುವಾಗ ಹಸಿವಾಗ್ತಾ ಇದೆಯಾ ಇನ್ನೇನು ಅಡಿಗೆ ಆಗೇ ಬಿಡ್ತು ಸ್ವಲ್ಪ ಆಟ ಆಡ್ತಾಯಿರಿ . ಆಟ ಮುಗಿಯೋ ಹೊತ್ತಿಗೆ ಬಿಸಿ ಬಿಸಿ ಅಡಿಗೆ ರೆಡಿ ಅಂತಾಳಲ್ಲ ಹಾಗೆ ನಾನು ಅಡಿಗೆ ಮಾಡ್ತಿರ್ತೀನಿ ಆ ಗ್ಯಾಪಲ್ಲಿ ನೀವು ಎರಡು ತಂಡ ಮಾಡ್ಕೊಂಡು ಅಂತ್ಯಾಕ್ಷರಿ ಆಡಿ ಅಂತ ಮನೆಯಲ್ಲಿದ್ದವರನ್ನು ಹಸಿವು ಮರೆಸುವ ಹಾಗೆ ಎಂಗೇಜ್ ಮಾಡಿದ್ರು. ಟೀವಿ  ನೋಡ್ತಿದ್ದವರಿಗೂ ಅಯ್ಯೋ ನಮ್ ಸುದೀಪು ಎಂಥ ಒಳ್ಳೆ ಕೆಲಸ ಮಾಡ್ತಿದ್ದಾರಲ್ವಾ ಅನ್ನಿಸಿರೋದ್ರಲ್ಲಿ ಎರಡು ಮಾತಿಲ್ಲ. ಸ್ಪರ್ಧಿಗಳ ತಾಯಂದಿರಂತು  ಅಯ್ಯೋ ಮನೇಲಿದಿದ್ದರೆ ನಾನೇ ಮಾಡ್ಕೊಡ್ತಿದ್ದೆ ಸುದೀಪ್ ಮಾಡ್ಕೊಡ್ತಿದ್ದಾರಲ್ಲ ಅಂತ ಕಣ್ತುಂಬಿಕೊಂಡಿದ್ರು ಆಶ್ಚರ್ಯವಿಲ್ಲ.

20161128_20130420161128_201004

ಅಡುಗೆ ಮಧ್ಯೆ ಮಧ್ಯೆ ಸಣ್ಣದಾಗಿ ಕೀಟ್ಲೆ ಮಾಡ್ತಾ , ತೂಕಡಿಸ್ತಾ ಇದ್ದವರನ್ನ ಎಚ್ಚರಿಸುತ್ತಾ , ಕಿಚಾಯಿಸ್ತಾ , ಯಾರ ಕಾಟಕ್ಕೂ-ಆಟಕ್ಕೂ ಸಿಕ್ಕಿಕೊಳ್ಳದೆ ,ಪದೇ ಪದೇ ಪ್ರಶ್ನೆ ಕೇಳ್ತಿದ್ದ ಪ್ರಥಮ್ ಗೆ ಸಮಾಧಾನದಿಂದ ಉತ್ತರ ಕೊಡ್ತಾ ಶಾಲಿನಿಗೆ ಕೌಂಟರ್ ಹೇಳ್ತಾ ಇದ್ದದ್ದು ನೋಡಿದ್ರೆ ಸುದೀಪ್ ಈ ಸೀಸನ್ ನಲ್ಲಿ ತುಂಬಾ ಬದಲಾಗಿದ್ದಾರೆ ಅಂತನ್ನಿಸುತ್ತೆ.  ಅವರ ಹಾವ ಭಾವಗಳು ಬದಲಾಗಿವೆ. ಮಾಗಿದ ಹಿರಿಯಣ್ಣನ ನಡವಳಿಕೆಗಳು ಕಾಣುತ್ತಿವೆ.

sudeep-1

ಕಳೆದ ಸಂಚಿಕೆಗಳಲ್ಲಿ ಹುಚ್ಚ ವೆಂಕಟ್ , ಬಿಗ್ ಬಾಸ್ ಮನೆಗೆ ಬಂದು ಫಳಾರ್ ಪ್ರಥಮ್ ಗೆ ಬಾರಿಸಿದಾಗ  ಸುದೀಪ್ ಬೇಸರ ವ್ಯಕ್ತಪಡಿಸಿದ್ದಷ್ಟೇ ಅಲ್ಲದೆ ನ್ಯಾಯ ಒದಗಿಸಿದರೆ ಮಾತ್ರ ನಾನು ಈ ಶೋ ನಡೆಸುತ್ತೇನೆ ಅಂದಿದ್ದು ಬಹಳಷ್ಟು  ಜನರಿಗೆ ಇಷ್ಟವಾಗಿರುವುದಂತೂ ನಿಜ.

pooja

ಹಾಫ್ ಸೆಂಚುರಿ ಬಾರಿಸಿದ ತಂಡಕ್ಕೆ ಜಿಲೇಬಿ ಹಂಚಿ, ಡಾನ್ಸ್ ಮಾಡಿ , ಹಳೆಯ ನೆನಪುಗಳನ್ನು ಹರಡಿ ತನ್ನ ಸಿನಿಮಾ ಪ್ರಮೋಟ್ ಮಾಡಿದ ಪೂಜಾಗಾಂಧಿ ಜೊತೆಯಲ್ಲಿ “ಜಿಲೆಬಿ ” ವಿಷಯದಲ್ಲಿ ಸುದೀಪ್ ರೇಗಿಸಿದ ರೀತಿಗೆ ಸ್ವತಃ ಪೂಜಾ ನಕ್ಕು ನಕ್ಕು ಸುಸ್ತಾದ್ರು. ಕಾಲೆಳೆಸಿಕೊಂಡವರಿಗೂ ಖುಷಿಯಾಗುವ ರೀತಿ ನಡೆದುಕೊಂಡ ಸುದೀಪ್ ಬಗ್ಗೆ ಒಂದು ಹಿಡಿ ಪ್ರೀತಿ ಹೆಚ್ಚಾಗದಿರಲು ಹೇಗೆ ಸಾಧ್ಯ ಹೇಳಿ .

shalini

ಕಿಚ್ಚನ ಅಡಿಗೆಯನ್ನು ಹಸಿದ ಹೊಟ್ಟೆಗಳು ಆಹಾ ..ಕೇಕ್ !!  ಓಹೋ .. ಬಿರಿಯಾನಿ ಅಂತ ಚಪ್ಪರಿಸಿ  ತಿಂದದ್ದು ಆಯ್ತು. ಕೊನೆಗೆ ಹೇಳದೆ ಇರಲಿ ಹೇಗೆ ಅನ್ನುವಂತೆ ಕ್ಯಾಮರಾ ಮುಂದೆ ಬಂದ ಶಾಲಿನಿ,ಕೀರ್ತಿ ಹೊಟ್ಟೆತುಂಬಿಸಿದ ಕಿಚ್ಚನಿಗೆ ಅಚ್ಚು ಮೆಚ್ಚಿನ ಮಾತನ್ನು ಆಡಿ ಹೋದ್ರು.

ಕೊನೆಯಲ್ಲಿ ಇನ್ನು ಆಟ ಇದೆ . ಚೆನ್ನಾಗಿ, ತಾಳ್ಮೆಯಿಂದ ಆಡಿ ಅಂತ ಪ್ರೋತ್ಸಾಹಿಸಿ, ಹುರಿದುಂಬಿಸಿ ಹೋದ ಸುದೀಪ್ ಒಬ್ಬ ಗೆಳೆಯ,ಹಿತೈಷಿಯಂತೆ  ಕಂಡಿದ್ದರೆ ಅಚ್ಚರಿ ಇಲ್ಲ. ಯಾರು ಏನನ್ನು ನೆನಪಿಟ್ಟುಕೊಳ್ತಾರೋ ಬಿಡ್ತಾರೋ ಆದ್ರೆ ಸುದೀಪ್ ತಾವೇ ತಮ್ಮ ಕೈಯ್ಯಾರೆ ಅಡುಗೆ ಮಾಡಿ ಕಳುಹಿಸಿದ್ದನ್ನು ಮಾತ್ರ ಸ್ಪರ್ಧಿಗಳಷ್ಟೇ ಅಲ್ಲ ಬಿಗ್ ಬಾಸ್  ನೋಡಿದವರು ಮರೆಯಲಾರರು.

sudeeep-soopersudeep-super

 

ಕಾರಣವಿಷ್ಟೇ .ಅನ್ನದ ಋಣ ಎಲ್ಲಕ್ಕಿಂತ  ದೊಡ್ಡದು ನೋಡಿ . ಹಸಿದಾಗ ನಮಗೆ ಬೇಕೆನಿಸಿದ ರುಚಿ ರುಚಿ ಅಡುಗೆ ಮಾಡಿಕೊಟ್ಟವರನ್ನು ಸಾಮಾನ್ಯವಾಗಿ ಯಾರೂ ಮರೆಯುವುದಿಲ್ಲ. ಸುದೀಪ್ ಗೆ ಶುಭವಾಗಲಿ. ಅಭಿನಯ ಚಕ್ರವರ್ತಿಗೆ  ಹಾಲಿವುಡ್ನಲ್ಲು ಅವಕಾಶಗಳು ಬರಲಿ . ಯಾಕಂದ್ರೆ ಸುದೀಪ್ ಅಂದ್ರೆ ಸುಮ್ನೆ ಅಲ್ಲ ನೋಡಿ . ಪಾತ್ರಕ್ಕೆ ಜೀವ ಬೆಸೆಯುವ ಅಪರೂಪದ  ಕಲಾವಿದ . ಬೆಳೆಯಲಿ ಬೆಳಗಲಿ .

-ಭಾನುಮತಿ ಬಿ ಸಿ

 

ನಟ ರಮೇಶ್ ಅರವಿಂದ್ ತಂದೆ ಗೋವಿಂದಾಚಾರಿ ಇನ್ನಿಲ್ಲ

ಸದಭಿರುಚಿಯ ನಟ, ನಿರ್ದೇಶಕ ರಮೇಶ್ ಅರವಿಂದ್ ಪುಷ್ಪಕ ವಿಮಾನವೇರಿ ಬರುವ ಸಿದ್ಧ್ಥೆಯಲ್ಲಿದ್ದಾಗ ತಂದೆಯನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ.

೮೦ ವರ್ಷ ವಯಸ್ಸಾಗಿದ್ದ ಗೋವಿಂದಾಚಾರಿ ಯವರು ಕಿಡ್ನಿ ವೈಫಲ್ಯದಿಂದ  ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ.

ತಾನು ನೀಗಿ ಹೋದರೂ, ತನ್ನ ಅಂಗಾಂಗಗಳು ಇನ್ನೊಂದು ಜೀವಕೆ ಆಧಾರವಾಗಲಿ ಎಂದಿದ್ದ ತಂದೆಯ ಆಸೆಯಂತೆ, ಕಣ್ಣುಗಳು ಹಾಗು ದೇಹವನ್ನು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾನ ಮಾಡಿದ್ದಾರೆ ರಮೇಶ್.

ಸಾವಿನ ನಂತರವೂ ಮತ್ತೊಬ್ಬರ ಬಾಳಿಗೆ ಬೆಳಕಾಗುವುದು ಎಂದರೆ ಹೀಗೆ ಅಲ್ಲವೇ ?

ಪ್ರೀತಿಯ ರಮೇಶ್ ಅರವಿಂದ್,

ದಿವಂಗತರ ಆತ್ಮಕ್ಕೆ ಶಾಂತಿ ಸಿಗಲಿ , ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ, ನಿಮ್ಮನ್ನು ಪ್ರೀತಿಸುವ ನಿಮ್ಮ ಅಭಿಮಾನಿಗಳ ಹಾರೈಕೆ ನಿಮ್ಮೊಂದಿಗಿದೆ.

 

Like Us, Follow Us !

120,682FansLike
1,826FollowersFollow
1,559FollowersFollow
3,978SubscribersSubscribe

Trending This Week