26.7 C
Bangalore, IN
Wednesday, April 24, 2019
Home ಸಿನಿಮಾ ನ್ಯೂಸ್ ಟಿವಿ ನ್ಯೂಸ್

ಟಿವಿ ನ್ಯೂಸ್

Get Latest Kannada TV News, News On Kannada TV Serials

ರಿಯಲ್ ರಂಜನೆ, ರಿಯಲ್ ಚಿಂತನೆ! ರಿಯಾಲಿಟಿ ಷೋಗೆ ರೆಡಿಯಾಗಿ

ರಂಜನೆ, ಚಿಂತನೆ ಎರಡೂ ಇರುವ ಹೊಸ ರಿಯಾಲಿಟಿ ಷೋ…ಹೊಸ ಬಗೆಯದು ಇಷ್ಟರಲ್ಲೇ.‌‌..

ಇಂಥದೊಂದು ಸುದ್ದಿಯನ್ನ ಮಧ್ಯರಾತ್ರಿಯಲ್ಲಿ ಹರಿಯಬಿಟ್ಟು ರಿಯಾಕ್ಷನ್ ನೋಡ್ತಾ ಇದ್ದಾರೇನೋ ನಮ್ಮ ಮಧ್ಯಮ ವರ್ಗದ ಮಿತ್ರ ಟಿ ಎನ್ ಸೀತಾರಾಮ್ . ಸದ್ಯದಲ್ಲಂತೂ ಟೀವಿಯಲ್ಲಿ  ಬರುತ್ತಿರುವ ಅನೇಕ  ರಿಯಾಲಿಟಿ ಶೋಗಳಿಂದ ಬೇಸತ್ತು ಹೋಗಿದ್ದರೂ ಪರ್ಯಾಯವಿಲ್ಲದೆ ಅಂಥವನ್ನೇ ನೋಡುವ ಮಂದಿಗೆ ಟಿ ಎನ್ ಎಸ್  ಮತ್ತೆ ಟಿವಿಗೆ ಬರ್ತಾರೆ ಅದೂ ರಿಯಾಲಿಟಿ ಶೋ ಮೂಲಕ ಅನ್ನುವುದು ಸಂತಸದ ಸುದ್ದಿ .

ರಿಯಾಲಿಟಿ ಶೋಗೆ ತಮ್ಮ ರಿಯಲ್ ಯೋಜನೆಗಳೇನು ಸಿಎಸ್ಪಿ ಸಾಹೇಬರೇ ಅಂತ ciniadda.com ಕೇಳಿದಾಗ ..

ಅದೂ ನಮ್ಮ ಸಂಸೃತಿಗೆ , ಭಾಷೆಗೆ ಸಂಬಂಧಪಟ್ಟ ಕಾರ್ಯಕ್ರಮ ಆಗಿರುವುದಂತೂ ಗ್ಯಾರಂಟಿ .

ಯಾವ ವಾಹಿನಿಯ ಮೂಲಕ ತಮ್ಮ ಮರುಪ್ರವೇಶ ?

ಅದಿನ್ನೂ ನಿರ್ಧಾರವಾಗಿಲ್ಲ .

ತಂಡದಲ್ಲಿ ಯಾರ್ಯಾರು ಇದ್ದೀರಿ ?

ನಮ್ಮ ಕೂಸು ಈಗ ತಾನೇ ಹುಟ್ಟಿದೆ .ಹಾಲುಣಿಸುವವರು , ನೀರೆರೆಯುವವರು , ಬಟ್ಟೆ ತೊಡಿಸುವವರು, ಹೆಸರಿಡುವವರು  ಹೀಗೆ ಸಿಂಗಾರ ಬಂಗಾರ ಮಾಡೋವ್ರೆಲ್ಲ ಸೇರಿಕೊಳ್ಳಬೇಕಿದೆ . ಕಾನ್ಸೆಪ್ಟ್ ನನ್ನದೇ. ಕಾರ್ಯರೂಪಕ್ಕೆ ಇಳಿಯುತ್ತಿದ್ದೇವೆ ನಮ್ಮ ಭೂಮಿಕಾ ಸಂಸ್ಥೆಯ ಮೂಲಕ.  ಒಂದೀಡೀ ಕುಟುಂಬ ಕೂತು ನೋಡುವ ಕಾರ್ಯಕ್ರಮವಂತೂ ನಮ್ಮದಾಗಿರುತ್ತದೆ. ಉಳಿದ ವಿಷಯಗಳನ್ನ ಸದ್ಯದಲ್ಲೇ ತಿಳಿಸುವೆ .

ಕಿರುತೆರೆಯ ಸಂಕಲನದಿಂದ ಮಹಾಪರ್ವದವರೆಗೆ ಬೆಳ್ಳಿತೆರೆಯ ಪಲ್ಲವಿಯಿಂದ ವಾಸ್ತು ಪ್ರಕಾರದವರೆಗೆ ಅಭಿನಯ , ಸಂಭಾಷಣೆ , ನಿರ್ದೇಶನ , ನಿರ್ಮಾಣ ಎಲ್ಲದರಲ್ಲೂ ಪಳಗಿರುವ ಸೀತಾರಾಮ್ ತಮಗೆ ಒಲಿದ ವರ್ಗದ ಜೊತೆಗೆ ಬದಲಾದಂತೆ ಮೇಲ್ನೋಟಕ್ಕೆ ಕಾಣುವ  ಇನ್ನಿತರ ಪ್ರೇಕ್ಷಕರ ನಿರೀಕ್ಷೆಗಳನ್ನು ಮುಟ್ಟುವರೇ ಅನ್ನುವ ಕುತೂಹಲ ಒಂದು ಕಡೆ .  ಮತ್ತೊಂದು ಕಡೆ ನಮ್ಮತನ ಸಾರುವ ರಿಯಾಲಿಟಿ ಶೋ ಸಾಧ್ಯವಾಗಲಿ ,ಶುಭವಾಗಲಿ ಅನ್ನುವ ಹಾರೈಕೆ .

ಮತ್ತಷ್ಟು ಮಾಹಿತಿ ಸದ್ಯದಲ್ಲೆ

ಭಾನುಮತಿ ಬಿ ಸಿ

 

ZEE ದಶಕದ ಸಂಭ್ರಮ

ಮಿರಿ ಮಿರಿ ಮಿಂಚುವ ಬಲ್ಪುಗಳಡಿಯಲ್ಲಿ, Pink Carpetನ ಮೇಲೆ, ಒಬ್ಬೊಬ್ಬರೇ ದಿಗ್ಗಜರನ್ನು ಬರಮಾಡಿಕೊಂಡು ಅವರೊಂದಿಗೆ ಹೆಜ್ಜೆಯಾಕುತ್ತಿದ್ದರೆ ಆಹ್! ಏನೋ ಸಂತೋಷ. ಈ function ಯಾವುದು ಅಂತೀರಾ? ಅದೇ “Zee ದಶಕದ ಸಂಭ್ರಮ”.

ಕಳೆದ ದಶಕದಲ್ಲಿ ಪ್ರತೀ ಕ್ಷೇತ್ರದಲ್ಲೂ ಗಮನಾರ್ಹ ಸಾಧನೆ ಮಾಡಿದ 20 ಜನ ಸಾಧಕರನ್ನು ಗುರುತಿಸಿ ಅವರಿಗೆ ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಅಷ್ಟು ವೈಭವದಿಂದ ಕೂಡಿದ್ದ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ವೇದಿಕೆಯನ್ನೇರಿದ ದಿಗ್ಗಜರು ಕಾರ್ಯಕ್ರಮವನ್ನು ಮತ್ತಷ್ಟೂ ಶ್ರೀಮಂತಗೊಳಿಸಿದರು. ಕಳೆದ ದಶಕದಲ್ಲಿ ಕರ್ನಾಟಕದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ನೆಡೆದ ಏರುಪೇರುಗಳನ್ನೆಲ್ಲಾ ಒಟ್ಟುಮಾಡಿ ರಮೇಶ್ ಅರವಿಂದ್ ಅವರು ನೆಡೆಸಿಕೊಟ್ಟ ಕಾರ್ಯಕ್ರಮ ಅದ್ಭುತವಾಗಿ ಮೂಡಿಬಂತು. ವಿಜಯ್ ಪ್ರಕಾಶ್ ಅವರ ಹಾಡು, ವಿಜಯ್ ರಾಘವೇಂದ್ರ, ಗಣೇಶ್, ಶುಭ್ರಾ ಅಯ್ಯಪ್ಪ, ಹರಿಪ್ರಿಯಾ ಅವರ ಕುಣಿತ, ಅನು ಶ್ರೀ, ಆನಂದ್ ಅವರ ನಿರೂಪಣೆ, ಡ್ರಾಮಾ ಜ್ಯುನಿಯರ್ಸ್  ಮಕ್ಕಳ ಡ್ರಾಮ ಕಾರ್ಯಕ್ರಮಕ್ಕೆ ಬಣ್ಣ ತುಂಬಿದವು.

13987552_1044344772339674_8160019826373725033_oಅಂಬರಿಶ್ ಅವರ ಮಾತುಗಳು ಹಾಗು ಅದರ ನಂತರ ಬಂದು  “ತನ್ನೊಂದಿಗೆ ಚಿತ್ರರಂಗಕ್ಕೆ ಕಾಲಿಟ್ಟು ಸಾಲು ಸಾಲು ಹಿಟ್ಟ್ ಚಿತ್ರಗಳನ್ನು ನೀಡಿದ ಪುನೀತ್ ರಾಜಕುಮಾರ್ , ದರ್ಶನ್ ಅವರ ಪರವಾಗಿ ನಾನು ಈ ಪ್ರಶಸ್ತಿ ಸ್ವಿಕರಿಸುತ್ತಿದ್ದೇನೆ ನಾನು ಬಂದು ಪ್ರಶಸ್ತಿ ಸ್ವೀಕರಿಸುತ್ತಿರುವ ಮೊದಲ ಮತ್ತು ಕೊನೆಯ ಕಾರ್ಯಕ್ರಮ ಇದು” ಎಂದು ಹೇಳಿದ ಸುದಿಪ್ ಅಭಿಮಾನಿಗಳ ಮನಗೆದ್ದರು. ರಾಧಿಕಾ ಪಂಡಿತ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದ ರವಿಚಂದ್ರನ್ ಅವರು “ಇಂಡಸ್ಟ್ರೀಗೆ ಬಂದಾಗ್ಲಿಂದನೂ ಈ ಹುಡ್ಗಿ ಒಂದೂ controversy ಮಾಡ್ಕೊಂಡೊಲ್ಲ, ಯಾರೊಂದಿಗೂ ಜಗಳ ಮಾಡ್ಕೊಂಡಿಲ್ಲ, ಲವ್ವು-ಗಿವ್ವು ಮೊದಲೇ ಇಲ್ಲ ಇದ್ರು ಒಂದೇ ಹುಡ್ಗನೊಂದಿಗೆ ಇವಳ ಹೆಸರು ತಳುಕುಹಾಕಿಕೊಂಡಿರೊದು!, ಎಲ್ಲವುದಕ್ಕೂ ಮೊದಲು ನನ್ನೊಂದಿಗೆ ನಟಿಸಿಯೇ ಇಲ್ಲ ಅದ್ಹೇಗೆ ದಶಕದ ನಾಯಕಿ ಆದಲಳಿವಳು” ಎಂದು ಪ್ರೇಕ್ಷಕರನ್ನು ನಗೆಗಡಲಲ್ಲಿ ಮುಳುಗಿಸಿದರು.

470eee2b-0b9a-4284-85ed-c53def328718

ತನ್ನ ಹುಟ್ಟಿನಿಂದಲೂ “ಬದುಕು ಜಟಕಾ ಬಂಡಿ” ಯಂತಹ ಸಮಾಜಮುಖಿ ಕಾರ್ಯಕ್ರಮಗಳನ್ನಲ್ಲದೆ ಆಡು ಆಟ ಆಡು, ಚೋಟಾ ಚಾಂಪಿಯನ್, ಡ್ಯಾಡಿ ನಮಂಬರ್ 1, ಕುಣಿಯೋಣು ಬಾರ, Comedy ಖಿಲಾಡಿಗಳು, Home minister, ಲೈಫು ಇಷ್ಟೇನೆಯಂತಹ ವಿಭಿನ್ನ ಕಾರ್ಯಕ್ರಮಗಳನ್ನು ನೀಡಿ, ಈಗ ಸ ರಿ ಗ ಮ ಪ, ಡ್ರಾಮ ಜ್ಯುನಿಯರ್ಸ್, ಡಾನ್ಸ್ ಕರ್ನಾಟಕ ಡಾನ್ಸ್ ನಂತಹ ಕಾರ್ಯಮುಗಳಿಂದ ಎಷ್ಟೊ ಪ್ರತಿಭೆಗಳನ್ನು ಹೊರತರುತ್ತಿರುವ, ವೀಕೆಂಡ್ ವಿಥ್ ರಮೇಶ್ ನಂಥಹ ಕಾರ್ಯಕ್ರಮದಿಂದ ನಾಡಿನ ದಿಗ್ಗಜರ ಬಗ್ಗೆ ತಿಳಿಸುತ್ತಿರುವುದಲ್ಲದೆ ನಮ್ಮಮ್ಮ ಶಾರದೆ, ಜೊಗುಳ, ರಾಧಾ ಕಲ್ಯಾಣ, ಚಿ.ಸೌ. ಸಾವಿತ್ರಿ, ರಾಜಕುಮಾರಿ, ಅತಿಮಧುರ ಅನುರಾಗ, ಶ್ರೀರಸ್ತು ಶುಭಮಸ್ತು, ದೇವಿ, ಪುನರ್ವಿವಾಹ, ಮಹಾದೇವಿ, ಗೃಹಲಕ್ಷ್ಮಿ, ನಾಗಿಣಿ, ಶ್ರೀ ಮಾನ್ ಶ್ರೀಮತಿ, ಮಹಾನದಿ ಯಂತಹ ಯಶಸ್ವಿ ಧಾರವಾಹಿಗಳನ್ನು ನೀಡಿ ಕರ್ನಾಟಕ ಜನತೆಯ ಗಮನ ಸೆಳೆಯುತ್ತಿರುವ Zee ವಾಹಿನಿ ತನ್ನ 10 ವರ್ಷದ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿಕೊಳ್ಳುತ್ತಿದೆ.

This slideshow requires JavaScript.

ಇದೇ ಶನಿವಾರ ಮತ್ತು ಭಾನುವಾರ 27, 28 ರಂದು ಸಂಜೆ 6:30ತ್ತಕ್ಕೆ ಪ್ರಸಾರವಾಗಲಿರುವ “Zee ದಶಕದ ಸಂಭ್ರಮ”ದ ಅದ್ಧೂರಿ ಕಾರ್ಯಕ್ರಮವನ್ನು ವೀಕ್ಷಿಸಿ ಸಂಭ್ರಮದಲ್ಲಿ ಭಾಗಿಯಾಗಿ.

*ಗಗನಚುಕ್ಕಿ

“ಅಸ್ತಿತ್ವ” ಮೂಲಕ ತೆಲುಗು ಟಿವಿಸ್ಟಾರ್ ಕನ್ನಡಕ್ಕೆ

ಇತ್ತೀಚಿನ ದಿನಗಳಲ್ಲಿ  ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಚಿತ್ರ ಅಸ್ತಿತ್ವ.
ಮ್ಯಾರೇಜ್ ಸ್ಟೋರಿ ಎಂಬ ಸಿನಿಮಾ ನಿರ್ದೇಶನ ಮಾಡಿದ್ದ ನೂತನ್ ಉಮೇಶ್ ಅವರ ಮತ್ತೊಂದು ಪ್ರಯತ್ನವಾದ ಈ ಸಿನಿಮಾ, ಸಾಕಷ್ಟು ಕಾರಣಗಳಿಗೆ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ.
VishwaCariappa-ಮುಖ್ಯವಾಗಿ, ನಿರ್ಮಾಣ ಸಾರಥ್ಯ ವಹಿಸಿರುವವರು ಬೆಂಗಳೂರಿನ ಸ್ಯಾನ್ಸಿಟಿ ಗ್ರೂಪ್ ಆಫ್ ಕಂಪನೀಸ್ ಅಧ್ಯಕ್ಷರು ಹಾಗು ಸಿಇಓ ವಿಶ್ವಕಾರ್ಯಪ್ಪ, ಇವರ “ವಿ ಸ್ಯಾನ್ ವಿಷನ್” ಎಂಬ ಹೊಸ ಬ್ಯಾನೆರ್ನಡಿ ಚಿತ್ರ ನಿರ್ಮಾಣವಾಗುತ್ತಿದೆ. ಇವರು ನಿರ್ಮಿಸಿದ ಗಣೇಶ್ ಅಭಿನಯದ “ಆಟೋ ರಾಜ”, ಗಣೇಶ್ ಗೆ “ಬ್ಯಾಕ್ ಟು ದಿ ಫಾರಂ” ಚಿತ್ರವಾಗಿತ್ತು.
madhusudan-asthitwaಎರಡನೆಯದಾಗಿ, ಚಿತ್ರದ ಮೂಲಕ ತೆಲುಗು ಸಿರಿಯಲ್‌ಗಳಲ್ಲಿ ಸ್ಟಾರ್ ಆಗಿರುವ ಬೆಂಗಳೂರು ಮೂಲದ ಮಧುಸೂದನ್ ಎಂಬ ಯುವಕ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದಾರೆ. ಮೂಲತಃ ಬೆಂಗಳೂರಿನವರಾದ ಮಧುಸೂದನ್ ವಿಶಾಖಪಟ್ಟಣದಲ್ಲಿ ಅಭಿನಯ ತರಬೇತಿ ಪಡೆದಿದ್ದಾರೆ.
ಅಭಿನಯ ತರಬೇತಿ ಮುಗಿದ ತಕ್ಷಣವೇ ಅವರಿಗೆ ತೆಲುಗು ಸಿನಿಮಾ ಮತ್ತು ಕಿರುತೆರೆ ಕೈಬೀಸಿ ಕರೆಯಿತು. ಸಿಕ್ಕ ಅವಕಾಶವನ್ನು ಬಿಡದ ಮಧುಸೂದನ್ ಮೂರು ತೆಲುಗು ಸಿನಿಮಾಗಳಲ್ಲಿ ಮುಖ್ಯ ಪಾತ್ರದಾರಿಯಾಗಿ ನಟಿಸಿದರು.
ಆದರೆ ಅವರಿಗೆ ನಿಜವಾಗಿಯೂ ಬ್ರೇಕ್ ಕೊಟ್ಟಿದ್ದು ಅಲ್ಲಿನ ಕಿರುತೆರೆ. ತೆಲುಗು ಇಂಡಸ್ಟ್ರಿ ಇಂದು ಮಧುಸೂದನ್ ಅವರನ್ನು ಗುರುತಿಸುವಂತೆ ಮಾಡಿರುವುದೇ ಅವರು ನಟಿಸಿರುವ ಕೆಲ ಸಿರಿಯಲ್‌ಗಳು. ಗೋರಂಥ ದೀಪಂ ಎನ್ನುವ ಸಿರಿಯಲ್‌ನಲ್ಲಿ ಮಧುಸೂದನ್  700 ಎಪಿಸೋಡ್‌ಗಳಲ್ಲಿ ನಟಿಸಿದ್ದಾರೆಂದರೆ ಅವರ ಪಾಪುಲಾರಿಟಿ ಎಷ್ಟಿದೆ ಎಂಬುದನ್ನು ನಾವು ಅರಿಯಬೇಕಿದೆ.
ಈ ಸಿರಿಯಲ್‌ಗಳಲ್ಲಿ ಅಭಿನಯಿಸುತ್ತಿರುವಾಗಲೇ  ವಿಶ್ವ ಕಾರ್ಯಪ್ಪನವರ ಪರಿಚಯವಾಗಿತ್ತು. ಈ ಪರಿಚಯ ಮಧುಸೂದನ್ ಅವರಿಗೆ ಅಸ್ತಿತ್ವ ಸಿನಿಮಾದಲ್ಲಿ ಅವಕಾಶ ಗಿಟ್ಟುವಂತೆ ಮಾಡಿದೆ. ಇದು ಇವರ ಕನ್ನಡದ  ಮೊದಲ ಸಿನಿಮಾ.
ಮಧುಸೂದನ್‌ಗೆ ಮುಂದಿನ ದಿನಗಳಲ್ಲಿ ಕನ್ನಡದ ಮತ್ತಷ್ಟು ಸಿನಿಮಾಗಳಲ್ಲಿ ಅಭಿನಯಿಸ ಬೇಕು ಎನ್ನು ಹಂಬಲ ಇದೆ.  ಆ.೧೯ರಂದು ರಾಜ್ಯಾದ್ಯಂತ  ಅಸ್ತಿತ್ವ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರ ತಂಡ ರಿಲೀಸ್ ಮಾಡಲು ತಯಾರಿ ಮಾಡಿಕೊಂಡಿದೆ. ಚಿತ್ರ ಇನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದ್ದು, ಅದಕ್ಕಾಗಿ ಭರ್ಜರಿ ಸಿದ್ಧತೆಗಳುಡೆದಿವೆ. ಟ್ರೈಲರ್ ಮತ್ತು ಹಾಡುಗಳೂ ಈಗಾಗಲೇ  ಹಿಟ್ ಆಗಿರುವ ಪರಿಣಾಮ ಸಿನಿಮಾ ಗೆಲ್ಲುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ.
  ತಮಿಳಿನ ಹೆಸರಾಂತ ನಟ ಮತ್ತು ಸಂಗೀತ ನಿರ್ದೇಶಕ ವಿಜಯ್ ಆಂಟೋನಿ, ಈ ಸಿನಿಮಾದ ಮೂಲಕ ಕನ್ನಡಕ್ಕೆ ಬಂದಿದ್ದಾರೆ. ಒಟ್ಟಿನಲ್ಲಿ ಅಸ್ತಿತ್ವ ಸಿನಿಮಾ ಮೂಲಕ ತೆಲುಗು ಟಿವಿ ಸ್ಟಾರ್ ಮತ್ತು ತಮಿಳಿನ ಖ್ಯಾತ ನಟರೊಬ್ಬರು ಸ್ಯಾಂಡಲ್‌ವುಡ್ ಪ್ರವೇಶ ಮಾಡುತ್ತಿದ್ದಾರೆ.
ಇವರ ನಿರೀಕ್ಷೆಯಂತೆ ಸಿನಿಮಾವನ್ನು ಪ್ರೇಕ್ಷಕ ಗೆಲ್ಲಿಸುತ್ತಾನ ಕಾದು ನೋಡಬೇಕಿದೆ.

ಮಜಾ ಟಾಕೀಸ್ .. ಈಗ ಹೊಸ ಟಾಕೀಸ್.

ಯಾವುದೇ ಸೂಪರ್ ಹಿಟ್ ರಿಯಾಲಿಟೀ ಶೋ ಅನ್ನು ಕನ್ನಡಕ್ಕೆ ತಂದು ಗೆಲ್ಲುವುದು ಸುಲಭದ ಮಾತಲ್ಲ. ಕಲರ್ಸ್ ಕನ್ನಡ ವಾಹಿನಿಯಲ್ಲಿ, ಲೋಕೇಶ್ ಪ್ರೋಡಕ್ಷನ್ಸ್ ಮೂಲಕ ಸೃಜನ್ ಲೋಕೇಶ್ “ಮಜಾ ಟಾಕೀಸ್” ಕಾರ್ಯಕ್ರಮವನ್ನು ನೀಡಿ ಗೆದ್ದು ತೋರಿಸಿದ್ದಾರೆ. ಅಪರ್ಣ, ಮನೋಹರ್ ಹಾಗೂ ಇಂದ್ರಜೀತ್ ಅಂತಹ ಗಂಭೀರ ವ್ಯಕ್ತಿಗಳನ್ನು ಹಾಸ್ಯಮಯ ಪಾತ್ರಗಳಲ್ಲಿ ಯಶಸ್ವಿಯಾಗಿ ಬಿಂಬಿಸಿದ್ದಾರೆ. ಶ್ವೇತಾ, ದಯಾನಂದ್, ಪವನ್, ವಂದನ  ಹಾಗೂ ರೇಮೋ ಅವರನ್ನೊಳಗೊಂಡ “ಮಜಾ ಟಾಕೀಸ್” ಒಂದು ಅಪರೂಪದ ತಂಡ. ಮಂಡ್ಯ ರಮೇಶ್ ಮತ್ತು ಕುರಿ ಪ್ರತಾಪ್ ಸೇರಿಕೊಂಡ ಮೇಲಂತೂ ಪ್ರೇಕ್ಷಕರಿಗೆ ಡಬ್ಬಲ್ ಬೋನಸ್. ಇತ್ತೀಚಿನ ಸೇರ್ಪಡೆ ನವೀನ್ ಪಡೀಲ್ ಕೂಡ ಅಸಾಮಾನ್ಯ ಪ್ರತಿಭೆ.

DSC_0486

ಮೊದಮೊದಲು ಮಿಶ್ರ ಪ್ರತಿಕ್ರಿಯೆಗಳನ್ನು ಎದುರಿಸಿದ ಮಜಾಟಾಕೀಸ್, ನಂತರದ ದಿನಗಳಲ್ಲಿ  ನಂಬರ್ ಒನ್ ರಿಯಾಲಿಟಿ ಶೋ ಆಗಿ ನಿಂತದ್ದು ಮಾತ್ರ ಪ್ರಶಂಸನೀಯ.

ಕಿರುತೆರೆಯಲ್ಲಿ ಎಂದಿಗೂ ಕಾಮಿಡಿ ಮಾಡದ ಚಿತ್ರರಂಗದ ಅತಿರಥ-ಮಹಾರಥರು ಮಜಾಟಾಕೀಸಿಗೆ ಬಂದು ಮಜಾ ಮಾಡಿ ಹೋಗಿದ್ದಾರೆ.

mt ciniadda

25ನೇ ಎಪಿಸೋಡಿನಲ್ಲಿ ಸುದೀಪ್, 50ನೇ ಎಪಿಸೋಡಿನಲ್ಲಿ ದರ್ಶನ್, 75ನೇ ಎಪಿಸೋಡಿನಲ್ಲಿ ಅರ್ಜುನ್ ಸರ್ಜಾ ಹಾಗೂ ಸೆಂಚುರಿ ಎಪಿಸೋಡಿನಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರನ್ನು ಕರೆತಂದು ಪ್ರೇಕ್ಷಕರಿಗೆ ಮನೋರಂಜನೆ ನೀಡಿದ ಹೆಗ್ಗಳಿಕೆ ಸೃಜನ್ ಅವರದು. ಅರಳು ಹುರಿದಂತೆ ಪಟಪಟನೆ ಮಾತನಾಡುವ ಲೋಕೇಶ್, ಎಣ್ಣೆ ಸಿಡಿದಂತೆ ಚಿಟಚಿಟನೆ ನಗುವ ಲಂಕೇಶ್ ಜೋಡಿ ಇಂದು ಕರ್ನಾಟಕದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಖ್ಯಾತಿ ಪಡೆದ ಜೋಡಿಯಾಗಿದೆ. ಪ್ರಪಂಚದ ನಾನಾ ದೇಶದಲ್ಲಿ ಬದುಕು ಕಂಡುಕೊಂಡಿರುವ ಕನ್ನಡಿಗರು ತಮ್ಮ ತವರಿಗೆ ಬಂದಾಗ ಮಜಾಟಾಕೀಸ್ ಕಾರ್ಯಕ್ರಮಕ್ಕೂ ಭೇಟಿ ಕೊಡುವುದು ಅವರ ಪ್ರಮುಖ ಆದ್ಯತೆ ಆಗಿರುತ್ತದೆ ಎನ್ನುವುದು ಕಲರ್ಸ್ ಕನ್ನಡ ವಾಹಿನಿಗೆ ಒಂದು ಹಿರಿಮೆಯೇ ಸರಿ.

Desktop19

ನೂರರ ನಂತರ ನೂರೈವತ್ತು ಎಪಿಸೋಡ್ ಗಳನ್ನು ಮಿಂಚಿಸಿ ಕಿರುತೆರೆಯಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿ ಮುನ್ನಡೆಯುತ್ತಿರುವ ಮಜಾಟಾಕೀಸ್ ಮನೆ ಈಗ ಸಂಪೂರ್ಣ ಹೊಸ ರೂಪ ಪಡೆದು ಹೊಸ ಮನೆಯಲ್ಲಿ ಕನ್ನಡದ ಪ್ರೇಕ್ಷಕರನ್ನು ರಂಜಿಸಲಿದೆ. ಹೊಸ ಮನೆಯ ಗೃಹಪ್ರವೇಶಕ್ಕೆ ಸೃಜನ್ ಲೋಕೇಶ್ ಅವರ ಆತ್ಮಿಯರಾದ ನಿರ್ದೇಶಕ ಯೋಗರಾಜ್ ಭಟ್ ಜೊತೆಯಲ್ಲಿ ನಭಾ ನಟೇಶ್, ಶುಭಾ ಪೂಂಜ, ಇಂದು-ಬಿಂದು ನಾಗರಾಜ್ ಮತ್ತು ಹಲವರು ಬರಲಿದ್ದಾರೆ.

ಎಂದಿನಂತೆ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರೇಕ್ಷಕರಿಗೆ ಅದ್ಧೂರಿಯಾಗಿ ಸೆಟ್ಟೇರಿರುವ ಹೊಸ ಮಜಾಟಾಕೀಸ್ ನ ದರ್ಶನವಾಗಲಿದೆ.

Like Us, Follow Us !

120,188FansLike
1,826FollowersFollow
1,573FollowersFollow
4,668SubscribersSubscribe

Trending This Week