
ಬಿಗ್ ಬಾಸ್ ಭುವನ್ ಗೆ ಗಾಯ..!

ಕೊನೆಯುಸಿರೆಳೆದ ಸಿರಿಮೊಗದ ಶ್ರೀದೇವಿ
ಬಹುಭಾಷಾ ನಟಿ ಮೋಹಕ ತಾರೆ ಶ್ರೀದೇವಿ ಇನ್ನಿಲ್ಲ.. ದುಬೈನಲ್ಲಿ ಶ್ರೀದೇವಿ ಹೃದಯಾಘಾತದಿಂದ ತಡರಾತ್ರಿ 11.30ರ ವೇಳೆ ಶ್ರೀದೇವಿಗೆ ಹೃದಯಾಘಾತ ಸಂಭವಿಸಿದ್ದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.. ನಟ ಮೋಹಿತ್ ಮಾರ್ವ ಮದುವೆಗಾಗಿ ಶ್ರೀದೇವಿ ಪತಿ ಬೋನಿ ಕಪೂರ್ ಹಾಗೂ ಪುತ್ರಿ ಖುಷಿ ಜೊತೆ ದುಬೈಗೆ ತೆರಳಿದ್ರು.. ಈ ವೇಳೆ ಹೃದಯಾಘಾತವಾಗಿದೆ.. ನಟಿ ಶ್ರೀದೇವಿ ಇಬ್ಬರು ಪುತ್ರಿಯರು ಹಾಗೂ ಪತಿಯನ್ನ ಅಗಲಿದ್ದಾರೆ.
54 ವರ್ಷದ ಶ್ರೀದೇವಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ, ಶ್ರೀದೇವಿ ನಿಧನಕ್ಕೆ ಬಾಲಿವುಡ್ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ.. ಶ್ರೀ ದೇವಿ ಕನ್ನಡ ಸೇರಿದಂತೆ ಹಿಂದಿ, ತೆಲುಗು, ಮಲೆಯಾಳಂ ಚಿತ್ರಗಳಲ್ಲೂ ನಟಿಸಿದ್ದಾರೆ.. ಕನ್ನಡದಲ್ಲಿ ರೆಬೆಲ್ಸ್ಟಾರ್ ಅಂಬರೀಷ್ ಅಭಿನಯದ ಪ್ರಿಯಾ ಚಿತ್ರದಲ್ಲಿ ಬಣ್ಣಹಚ್ಚಿದ್ರು.. 1975ರಲ್ಲಿ ತೆರೆಕಂಡ ಚಾಂದಿನಿ ಚಿತ್ರದಲ್ಲಿ ಬಾಲನಟಿಯಾಗಿ ಶ್ರೀದೇವಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ರು.. ಜೂಲಿ ಚಿತ್ರದಲ್ಲಿ ಶ್ರೀದೇವಿ ಕಮಾಲ್ ಮಾಡಿದ್ರು.. 1997ರಲ್ಲಿ ಬಣ್ಣದ ಲೋಕಕ್ಕೆ ಗುಡ್ಬೈ ಹೇಳಿದ್ದ ಶ್ರೀದೇವಿ, 15 ವರ್ಷಗಳ ಬಳಿಕ 2012ರಲ್ಲಿ ಬಿಡುಗಡೆಯಾದ ಇಂಗ್ಲಿಷ್ ವಿಂಗ್ಲಿಷ್ ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡಿದ್ರು.. 2013ರಲ್ಲಿ ಶ್ರೀದೇವಿಗೆ ಪದ್ಮಶ್ರೀ ಪ್ರಶಸ್ತಿ ಕೂಡ ಲಭಿಸಿತ್ತು.
ಕನ್ನಡದಲ್ಲಿ ಶ್ರೀದೇವಿ
ಭಕ್ತ ಕುಂಬಾರ,ಬಾಲ ಭಾರತದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದರು. ಹೆಣ್ಣು ಸಂಸಾರದ ಕಣ್ಣು, ಸಂಪೂರ್ಣ ರಾಮಾಯಣ ಚಿತ್ರದಲ್ಲು ನಟಿಸಿದ್ದರು .
ದರ್ಶನ್ ಅಭಿನಯದ ಒಡೆಯರ್ ಗೆ ವಿರೋಧ!
ರಂಗೀತರಂಗ ಬಳಗದ ರಾಜರಥ ವಿಶೇಷ..!
ರಂಗಿತರಂಗ ಸಿನಿಮಾ ಅಂದ್ರೆ ನೆನಪಾಗೋದು ಭಂಡಾರಿ ಬ್ರದರ್ಸ್.. ಇದೀಗ ಮತ್ತೆ ಭಂಡಾರಿ ಬ್ರದರ್ಸ್ ರಂಗೀತರಂಗ ಬಳಿಕ ಒಟ್ಟಿಗೆ ಬರುತ್ತಿದ್ದಾರೆ.ಅದೂ ಕೂಡ ಸ್ಯಾಂಡಲ್ವುಡ್ಗೆ ರಾಜರಥದಲ್ಲಿ ಬರ್ತಿದ್ದಾರೆ. ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳಿರುವ ಬಹುನಿರೀಕ್ಷಿತ ಚಿತ್ರ ರಾಜರಥದಲ್ಲಿ ನಿರೂಪ್ ಭಂಡಾರಿ, ಆವಂತಿಕಾ ಶೆಟ್ಟಿ, ಆರ್ಯ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ..
ರಾಜರಥ ಚಿತ್ರದ ಫಸ್ಟ್ ಲುಕ್ ಹಾಗೂ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿ ರಂಗೀತರಂಗ ರೀತಿಯಲ್ಲೇ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದೆ. ಮಾರ್ಚ್ 23ರಂದು ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ಬಿಡುಗಡೆಗೂ ಮೊದಲು ಮಾಡಬೇಕಾದ ಕೆಲಸಗಳನ್ನು ಚಿತ್ರತಂಡ ಪೂರ್ಣ ಮಾಡಿಕೊಳ್ತಿದೆ.
ರಂಗಿತರಂಗ ಚಿತ್ರತಂಡದ ಮತ್ತೊಂದು ಮೂವಿ ಎನ್ನುತ್ತಿದ್ದಂತೆ ಸಿನಿ ಪ್ರೇಕ್ಷರಲ್ಲಿ ಕುತೂಹಲ, ಕೌತುಕ ಹೆಚ್ಚಾಗ್ತಿದೆ. ರಂಗೀತರಂಗ ಚಿತ್ರಕ್ಕೆ ಯಾವುದೇ ಅಬ್ಬರದ ಪ್ರಚಾರವಿಲ್ಲದೆ ಗೆಲುವಿನ ನಗೆ ಬೀರಿರುವ ಚಿತ್ರತಂಡ, ರಾಜರಥ ಚಿತ್ರಕ್ಕೆ ಪ್ರಮೋಷನ್ ಮಾಡ್ತಿದೆ. ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಕಲಬುರ್ಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಚಿತ್ರವನ್ನು ಪ್ರಮೋಟ್ ಮಾಡಲು ಭಂಡಾರಿ ಬ್ರೋಸ್ ರೆಡಿಯಾಗಿದ್ದಾರೆ. ರಂಗೀತರಂಗ ರೀತಿಯಲ್ಲೇ ರಾಜರಥ ಗಾಂಧಿನಗರದ ಬೀದಿಗಳಲ್ಲಿ ಉಘೇ ಎಂದುಕೊಂಡು ಸಾಗುತ್ತಾ..? ಅಭಿಮಾನಿಗಳೇ ರಾಜರಥ ಮೆಚ್ಚಿಕೊಂಡು ಪ್ರಮೋಟ್ ಮಾಡ್ತಾರಾ ಅನ್ನೋ ಮಾತುಗಳು ಸಿನಿಲೋಕದಲ್ಲಿ ಕೇಳಲಾರಂಭಿಸಿವೆ..
ಜ್ಯೋತಿ ಗೌಡ, ನಾಗಮಂಡಲ
‘ಟಗರು’ ರೀಲು ಬರಹದಲ್ಲಿ ನಟನೆಯೇ ಹೀರೋ, ಕತೆಯೇ ವಿಲನ್!
‘ರೀಲು ಬರಹ’ ಒಂಚೂರು ಚೇಂಜ್ ಆಗಿರೋ ಪ್ರಯುಕ್ತ ಲಾಂಗ್ ಕಲಾಕಾರ್ ಶಿವಣ್ಣ ಮತ್ತು ದುನಿಯಾ ಸೂರಿ ಕಾಂಬಿನೇಷನ್ “ಕಡ್ಡಿಪುಡಿ’ ಸಿನಿಮಾದಲ್ಲಿ ಮಾಡಿದ ಮೋಡಿ ‘ಟಗರು’ ಚಿತ್ರದಲ್ಲಿ ಕಂಡು ಬಂದಿಲ್ಲ. ಹಾಗಂಥ ಸಿನಿಮಾ ಸಾರಸಗಟು ಚನ್ನಾಗಿಲ್ಲ ಅಂತ ಅರ್ಥ ಅಲ್ಲ. ಆದರೆ ಕಥಾಹಂದರ ನೋಡಿದಾಗ ಕೇಸರಿಬಾತ್ಗೆ ಚಟ್ನಿ ಬೆರೆಸಿ ಕೊಟ್ಟಂಗಿದೆ. ಹೀರೋ ಶಿವು ರೌಡಿ ಚಿಟ್ಟೆ ಪಾತ್ರದ ವಶಿಷ್ಠನನ್ನು ಕೊಚ್ಚಿ ಮಚ್ಚಿನ ತುದಿಯಲ್ಲಿ ಕಾಲರ್ ಸಿಕ್ಕಿಸಿಕೊಂಡು ಬಾಡಿ ಎಳೆದುಕೊಂಡು ಹೋದಂತೆ ಸೂರಿಯೇನಾದರೂ ಪ್ರೇಕ್ಷಕರ ಕುತೂಹಲ ಮತ್ತು ಭಾವನೆಯನ್ನು ಆರಂಭದಿಂದ ಅಂತ್ಯದವರೆಗೂ ಕಾಪಿಟ್ಟುಕೊಂಡಿದ್ದರೆ ಚಿತ್ರ ಸೂಪರ್ ಹಿಟ್ ಆಗುತ್ತಿದ್ದುದರಲ್ಲಿ ಯಾವುದೇ ಅನುಮಾನ ಇರಲಿಲ್ಲ.
ಆದರೆ ಆಗಿರುವುದೇ ಬೇರೆ. ಮಧ್ಯಂತರದವರೆಗೆ ಸಿನಿಮಾ ಯಾವ ದಿಕ್ಕಿನಲ್ಲಿ ಓಡುತ್ತಿದೆ ಎಂದೇ ಅರ್ಥವಾಗುವುದಿಲ್ಲ. ನಂತರ ಕತೆಯ ಎಳೆಗಳು ಒಂದಕ್ಕೊಂದು ಬೆರೆತು ಅರ್ಥ ಆಗುವಷ್ಟರಲ್ಲಿ ಸಿನಿಮಾ ಮುಗಿದು ಹೋಗಿರುತ್ತದೆ. ಇಲ್ಲೇನು ಮಿಸ್ ಹೊಡೀತು ಎಂಬ ಭಾವದೊಂದಿಗೆ ಪ್ರೇಕ್ಷಕ ಹೊರಬಂದಿರುತ್ತಾನೆ. ಇದರ ಸಂಪೂರ್ಣ ಹೊಣೆಗಾರರು ಸೂರಿಯೇ!
ಓಂ, ಜೋಗಿ, ಕಡ್ಡಿಪುಡಿಯಂತೆಯೇ ಟಗರುವಿನಲ್ಲೂ ಮಚ್ಚೇ ಹೀರೋ, ಮಚ್ಚೇ ವಿಲನ್. ಶಿವಣ್ಣ ಪೊಲೀಸ್ ಅಧಿಕಾರಿ ಪಾತ್ರದಲ್ಲಿರುವುದರಿಂದ ಪಿಸ್ತೂಲಿಗೂ ಗೌರವವಿದೆ. ಸ್ಟೈಲೀಸ್ ಬಳಕೆಯಲ್ಲಿ ಮಚ್ಚು, ಪಿಸ್ತೂಲು ಎರಡಕ್ಕೂ ನ್ಯಾಯ ಒದಗಿಸಿರುವ ಶಿವಣ್ಣನ ನಟನೆ ಬಗ್ಗೆ ಮಾತಾಡುವಂತಿಲ್ಲ. ಆದರೆ ವಿಲನ್ ಪಾತ್ರದ ಧನಂಜಯ ಮತ್ತು ವಶಿಷ್ಟ ಪೈಪೋಟಿಗೆ ಬಿದ್ದು ಭೇಷ್, ವಾಹ್ ಅಂತೆನ್ನಿಸಿಕೊಳ್ಳುವಂತೆ ನಟಿಸಿದ್ದಾರೆ. ಧನಂಜಯ ಅವರಂತೂ ತೆಲುಗಿನ ರಾಣಾ ದಗ್ಗುಬಾಟಿ ಹಾಗೂ ಹಿಂದಿಯ ರಣವೀರ್ ಸಿಂಗ್ ದಾರಿಯಲ್ಲಿದ್ದಾರೆ ಎಂದರೆ ಅತಿಶಯೋಕ್ತಿ ಆಗಲಾರದು. ಸ್ವೇಚ್ಛೆಯನ್ನೇ ತನ್ನಿಚ್ಚೆ ಮಾಡಿಕೊಂಡ ಫ್ರೀಬರ್ಡ್ ಹುಡುಗಿ ಪಾತ್ರದಲ್ಲಿ ಮಾನ್ವಿತಾ ರೆಕ್ಕೆ ಮುರಿದು ಬಿದ್ದಿದ್ದಾರೆ .ಅದಕ್ಕೆ ತದ್ವಿರುದ್ಧ ಅಕ್ಕನ ಪಾತ್ರದಲ್ಲಿ ಭಾವನಾ ಉತ್ತಮ ನಟನೆ ಕೊಟ್ಟಿದ್ದಾರೆ. ಬೇಸಿಗೆ ಮಳೆಯಂತೆ ಚಿತ್ರದಲ್ಲಿ ಸುಳಿಯುವ ಪ್ರೇಮಕತೆ ರೌಡಿಸಂ ಮುಂದೆ ಸೊರಗಿದ ಹೀರೆಕಾಯಿಯಂತಾಗುತ್ತದೆ.
ಟಗರು ಗುದಿಯುತ್ತಾ? ಮಲಗುತ್ತಾ ನೋಡ್ಬೇಕು!
ಸ್ಯಾಂಡಲ್ವುಡ್ನಲ್ಲಿ ಇವತ್ತು ನಾಲ್ಕು ಸಿನಿಮಾಗಳು ರಿಲೀಸ್ ಹಾಕ್ತಿದ್ದು, ಅವುಗಳಲ್ಲಿ ಸೆಂಚ್ಯೂರಿ ಸ್ಟಾರ್ ಶಿವಣ್ಣ ಅಭಿನಯದ ಟಗರು ಭಾರೀ ಕುತೂಹಲ ಕೆರಳಿಸಿದೆ.. ಹೀಗಾಗಲೇ ಹಾಡು ಹಾಗೂ ಟ್ರೈಲರ್ ಮೂಲಕ ಹವಾ ಕ್ರೊಯೇಟ್ ಮಾಡಿದ್ದು, ಥಿಯೇಟರ್ನಲ್ಲಿ ಜನರ ಮನಸಿಗೆ ಗುದಿಯುತ್ತಾ ಮಲಗುತ್ತಾ ಅನ್ನೋ ಕುತೂಹಲ ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ. ಟಗರನ್ನು ದುನಿಯಾ ಸೂರಿ ಹಿಡಿದುಕೊಂಡು ಬಂದಿರೋದು ಮಾರ್ಕೆಟ್ ನಲ್ಲಿ ಭಾರೀ ಬೆಲೆ ಸಿಗುವ ಮಾತುಗಳು ಕೇಳಿಬಂದಿವೆ. ಇನ್ನೂ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಅಭಿನಯಿಸಿರೋದು ಮತ್ತೊಂದು ಪ್ಲಸ್ ಪಾಯಿಂಟ್.
ಟಗರಿನ ಜೊತೆಯಲ್ಲಿ ರಂಕಲ್ ರಾಟೆ, ಗಂಡ ಊರಿಗೆ ಹೋದಾಗ ಹಾಗೂ ರಂಗ್ಬಿರಂಗಿ ಎನ್ನುವ ಚಿತ್ರಗಳು ಕೂಡ ರಿಲೀಸ್ ಆಗಿವೆ. ಆದ್ರೆ ಟಗರು ಈ ಮೂರು ಚಿತ್ರಗಳನ್ನು ತಿವಿದು ಓಡಿಸುತ್ತಾ ಅನ್ನೋ ಭಯದಲ್ಲಿ ನಿರ್ಮಾಪಕರಿದ್ದಾರೆ. ಸ್ಯಾಂಡಲ್ ವುಡ್ ಜೊತೆಗೆ ಬಾಲಿವುಡ್ನಲ್ಲಿ ನಟಿ ಸೋನಾಕ್ಷಿ ಸಿನ್ಹಾ ಅಭಿನಯ ಮಾಡಿರುವ ವೆಲ್ಕಮ್ ಟು ನ್ಯೂಯಾರ್ಕ್ ಸಿನಿಮಾ ಕೂಡ ಥಿಯೇಟರ್ಗೆ ಲಗ್ಗೆ ಹಾಕಿದ್ದು, ಗಲ್ಲಾ ಬಾಕ್ಸ್ ತುಂಬುವ ಮಾತುಗಳು ಕೇಳಿಬಂದಿವೆ..
ಜ್ಯೋತಿ ಗೌಡ, ನಾಗಮಂಗಲ