30.2 C
Bangalore, IN
Friday, April 19, 2019

ವಿಡಿಯೋಸ್

On each category you can set a Category template style, a Top post style (grids) and a module type for article listing. Also each top post style (grids) have 5 different look style. You can mix them to create a beautiful and unique category page.

ಕೋಟಿಗೊಬ್ಬ – 2 ಟ್ರೈಲರ್ / ಟೀಸರ್ ರಿಲೀಸ್

ಮುಂಗಾರಿನ ಮಿಂಚು ; ಮತ್ತೊಮ್ಮೆ  ಬ್ಯೂಟಿಫುಲ್ ಗೀತೆಗಳು

 

ಈ ಚಿತ್ರದ ೨ನೇ ಭಾಗ ಸೆಟ್ಟೇರಿದಾಗ ನಿರ್ದೇಶಕ ಸ್ಥಾನದಲ್ಲಿ ‘ಮೊಗ್ಗಿನ ಮನಸು’ ಶಶಾಂಕ್ ಕಾಣಿಸಿಕೊಂಡಿದ್ರೆ ಮ್ಯೂಸಿಕ್ ಮ್ಯಾಜಿಕ್ ಮಾಡಲು ಮನೋಮೂರ್ತಿ ಬದಲು ಅರ್ಜುನ್ ಜನ್ಯ ಬಂದಿದ್ದರು.

ಇಷ್ಟು ಸಾಕಾಗಿತ್ತು ಮುಂಗಾರು ಮಳೆ೨ ಚಿತ್ರದ ಹಾಡುಗಳ ಬಗ್ಗೆ ನಿರೀಕ್ಷೆ ಮೂಡಲು.

ಕೆಲದಿನಗಳ ಹಿಂದೆ ಆಡಿಯೊ ಟೀಸರ್’ನೊಂದಿಗೆ ಇಂಪಿನ ತಂಪು ನೀಡಿದ್ದ ಚಿತ್ರತಂಡ ಶುಕ್ರವಾರ ಆಡಿಯೊ ರಿಲೀಸ್ ಮಾಡಿದೆ.

ಮೊದಲ ಮುಂಗಾರಿನಲ್ಲಿ ಮನಮುಟ್ಟಿದ್ದ ಸೋನು ನಿಗಮ್ ಧ್ವನಿ ಇಲ್ಲೂ ಮುಂದುವರೆದಿದ್ದು ‘ಗಮನಿಸು ಒಮ್ಮೆ ನೀನು’ ಗೀತೆ ಮೂಲಕ ಕಳೆದು ಹೋಗುವಂತೆ ಮಾಡಿದ್ದಾರೆ ಎಂದರೆ ತಪ್ಪಾಗಲಾರದು.

ಅರ್ಜುನ್ ಜನ್ಯರ ಅದ್ಭುತ ಗೀತೆಗಳಿಗೆ ಧ್ವನಿಯಾಗಿರುವ ಬಾಲಿವುಡ್’ನ ಮಧುರ ಕಂಠ ಕೋಗಿಲೆ ಶ್ರೇಯಾ ಘೊಷಾಲ್ ಮ್ಯಾಜಿಕ್ ವಾಯ್ಸ್ ಇಲ್ಲೂ ‘ಕನಸಲೂ ನೂರು ಬಾರಿ’ ಮುಂದುವರೆದಿದೆ.

ಮುಂಗಾರು ಮಳೆಯ ಅನಿಸುತ್ತಿದೆ ಯಾಕೊ ಇಂದು.. ಗೀತೆಯ ಕಮಾಲ್ ಇಲ್ಲಿ ಸಂಗೀತ ನಿರ್ದೇಶಕ ಯುವ ಗಾಯಕ ಅರ್ಮಾನ್ ಮಲ್ಲಿಕ್’ಗೆ ನೀಡಿದ್ದಾರೆ.

ಸರಿಯಾಗಿ ನೆನಪಿದೆ ನನಗೆ…ಎಂಬ ಹಾಡಿನ ಮೋಡಿ ಮೂಲಕ ಹಳೇದೆಲ್ಲವನ್ನು ನೆನಪಾಗುವಂತೆ ಮಾಡುವಲ್ಲಿ ಅರ್ಮಾನ್ ಮಲ್ಲಿಕ್’ರ ಕಂಚಿನ ಕಂಠ ಸಾಥ್ ನೀಡಿದೆ.

ಇಷ್ಟೇ ಅಲ್ಲದೆ ಗಾಯಕಿ ಅನುರಾಧಾ ಭಟ್’ಳೊಂದಿಗೆ ನೀನು ಇರದೆ..ಲವ್ ಟ್ರ್ಯಾಕ್’ನಲ್ಲಿ ಅರ್ಮಾನ್ ಧ್ವನಿಗೂಡಿಸಿದ್ದಾರೆ.

ಅದರಲ್ಲೂ ಸ್ವಲ್ಪ ವಿಭಿನ್ನವಾಗಿ ಮೂಡಿ ಬಂದಿರುವ ಒಂಟೆ ಸಾಂಗ್’ನಲ್ಲಿ ಸ್ವರೂಪ್ ಖಾನ್,ಅರ್ಮಾನ್ ಮತ್ತು ಶ್ರೇಯಾರ ಗಾನ ಬಜಾನ ಸಖತ್ತಾಗಿ ಮೂಡಿ ಬಂದಿದೆ.

ಬೆನ್ನಿ ದಯಾಳ್ ಮತ್ತು ಯುವ ಗಾಯಕ ಡ್ಯಾಡಿ ಮೈ ಹೀರೊ ಗೀತೆಯು ಫುಲ್ ರೇಂಜ್ನಲ್ಲಿ ಕುಣಿಸುದರಲ್ಲಿ ಸಂಶಯವೇ ಇಲ್ಲ.

ಮುಂಗಾರು ಮಳೆ೨ ಚಿತ್ರಗೀತೆಗಳಿಗೆ ಕವಿ ಸಾಹಿತಿ ಜಯಂತ್ ಕಾಯ್ಕಿನಿ, ಕವಿರಾಜ್, ಗೋಪಿ ಅಯ್ಯಂಗಾರ್, ನಿರ್ದೇಶಕ ಶಶಾಂಕ್ ಮತ್ತು ಯುವ ಹಿಪ್ ಹಾಪ್ ಗಾಯಕ ಚಂದನ್ ಶೆಟ್ಟಿ ಸಾಹಿತ್ಯ ಒದಗಿಸಿದ್ದಾರೆ.

ಅಂದಹಾಗೆ ಎಲ್ಲಾ ಹಾಡುಗಳನ್ನು ಕೇಳಿದ್ಮೇಲೆ ನೀವು ಮುಂಗಾರು ಮಳೆ೨ ಮ್ಯಾಶಪ್ ಕೇಳಲು ಮಾತ್ರ ಮರೆಯಬೇಡಿ ಅದೂ ಮತ್ತಷ್ಟು ಮನಸನ್ನು ಸೆಳೆಯುದರಲ್ಲಿ ಡೌಟೇ ಇಲ್ಲ.

 

 

* ಕಪ್ಪು ಮೂಗುತ್ತಿ

ಭೂತದ ಮನೆ – ಫಸ್ಟ್ ಲುಕ್ ವಿಡಿಯೋ ಟ್ರೈಲರ್ !

Like Us, Follow Us !

120,213FansLike
1,826FollowersFollow
1,573FollowersFollow
4,595SubscribersSubscribe

Trending This Week