ಇಲ್ಲಿ ದುಡ್ಡು, ಮನೆ ಇರೋವ್ರು ಮಾತ್ರಾನಾ ಬದುಕೋಕೆ ಆಗೋದು ?

ಮನೆಯೂ ಇಲ್ಲ. ಹಣವೂ ಇಲ್ಲ. ಎರಡು ಜೀವಗಳ ಮಧ್ಯೆ ಇರೋದು ಕೇವಲ ಪ್ರೀತಿ.. ಪ್ರೀತಿ. ಪ್ರೀತಿಯ  ಹುಟ್ಟಿಗೆ ಕಾರಣವೂ ಬೇಕಿಲ್ಲ. ಸಿರಿವಂತಿಕೆಯೂ ಬೇಕಿಲ್ಲ. ಮನೆಯಿಲ್ಲದಿದ್ದರೂ ಮನಸಿದ್ದರೆ ಸಾಕು. ಬೀದಿ ಬದಿಯಲ್ಲಿ ಬದುಕುತ್ತಿದ್ದರೂ  ಪ್ರೀತಿಗೆ ಬರವಿಲ್ಲದೆ  ಒಬ್ಬರಿಗಾಗಿ ಮತೊಬ್ಬರು ತುಡಿಯುವ, ಮಿಡಿಯುವ ಕಂಬನಿಯ ಕಥೆ ತಿಕ್ಲ.

ನೋವಿನಲ್ಲೂ ಅರಳಿದ ಪ್ರೀತಿ ! 

ನಾಯಕ ರಾಮು  ನಾಯಕಿ ಗಂಗಾಗೆ ಕೈ ತುತ್ತು  ತಿನ್ನಿಸುವುದನ್ನ ನೋಡಿದ್ರೆ ಎಂಥವರಿಗೂ ನನಗೂ ಇಂಥಾ ಪ್ರೇಮಿಸುವ ಜೀವ ಬೇಕು ಅನ್ನಿಸದೆ ಇರೋಲ್ಲ. ಈ ದೃಶ್ಯ ನೋಡ್ತಿದ್ರೆ ಅಣ್ಣಾವ್ರು -ಭಾರತಿಯವರು ನಟಿಸಿದ ಹಾಡು ಪ್ರೀತಿನೆ ಆ ದ್ಯಾವ್ರು ತಂಡ ಆಸ್ತಿ ನಮ್ಮ ಬಾಳ್ವೆಗೆ.. ಹಸಿವಿನಲ್ಲೂ ಹಬ್ಬಾನೇ ..ನೆನಪಾಗುತ್ತೆ.

ಗಂಗಾ ,ರಾಮುವಿನ ಜೊತೆ ಅಸಹಾಯಕತೆಯಿಂದ ಹೇಳುವ ಇಲ್ಲಿ ದುಡ್ಡು, ಮನೆ ಇರೋವ್ರು ಮಾತ್ರನೇ ಬದುಕೋಕೆ ಆಗೋದು . ನಮ್ಮಂಥ   ಏನೂ ಇಲ್ಲದೆ ಇರೋ ಅನಾಥರಿಗಲ್ಲ ಸಾಲುಗಳು ನಮ್ಮ ಸುತ್ತಲಿನವರ  ಬದುಕು ಎಂಥಾ ಹೀನಾಯ ಸ್ಥಿತಿಯಲ್ಲಿದೆ ಎನ್ನುವುದನ್ನೂ ನೆನಪು ಮಾಡಿಕೊಡುತ್ತದೆ. ಪೂರ್ತಿ ಸಿನಿಮಾ ಹೇಗಿದೆಯೋ ಕಾದು ನೋಡೋಣ.

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ದೆಹಲಿಯ ನಿರ್ಭಯ ಪ್ರಕರಣದ  ಆಕ್ರೋಶದ  ಕಥೆ ತಿಕ್ಲ ಚಿತ್ರದ್ದು ಅನ್ನುತ್ತಿದ್ದಾರೆ ಚಿತ್ರದ ತುಣುಕುಗಳನ್ನು ನೋಡಿದ ಸೆಲೆಬ್ರೆಟಿಗಳು. ಭಿಕ್ಷಾ ಪಾತ್ರೆ -ಗುಜರಿ ಪೇಪರ್ ಲವ್ ಸ್ಟೋರಿಯುಳ್ಳ ತಿಕ್ಲ ಸಿನಿಮಾದ ಬಗ್ಗೆ ಯಾರ್ಯಾರು ಏನೇನು ಹೇಳಿದ್ದಾರೆ ನೋಡಿ.

-Ad-

Leave Your Comments