ಬಾಹುಬಲಿ ಕೊಂದ ಕಟ್ಟಪ್ಪನಿಗೆ ಸೆನ್ಸಾರ್ ಮಂಡಳಿ ಏನಂತು..?

 

ಬಾಹುಬಲಿ ಸಿನಿಮಾ ಮೊದಲ ಭಾಗದ ನೋಡಿದವರು ಇಷ್ಟು ದಿನ ತಲೆಗೆ ಹುಳ ಬಿಟ್ಟುಕೊಂಡಿದ್ದು ಅಂದ್ರೆ ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ ಅಂತಾ..? 2015ರಲ್ಲಿ ಸಿನಿಮಾ ರಿಲೀಸ್ ಆದಾಗ ಎಲ್ಲರ ಬಾಯಲ್ಲೂ ಒಂದೇ ಪ್ರಶ್ನೆ..? ಇದು ಕೆಲವು ದಿನಗಳ ಕಾಲ ಫೇಸ್‍ಬುಕ್, ವಾಟ್ಸಪ್‍ನಲ್ಲಿ ಜೋಕ್ ಆಗಿ ಕೂಡ ಹರಿದಡಿತ್ತು.. ಇದೀಗ ಮತ್ತೆ ಅದೇ ವಿಚಾರ ಚರ್ಚೆ ಆಗ್ತಿದೆ.. ಏಪ್ರಿಲ್ 28ಕ್ಕೆ ರಿಲೀಸ್ ಆಗಲು ರೆಡಿಯಾಗಿರುವ ಬಾಹುಬಲಿ ಪಾರ್ಟ್ ಟು ಸಿನಿಮಾವನ್ನು ಸೆನ್ಸಾರ್ ಬೋರ್ಡ್‍ಗೆ ಕಳುಹಿಸಲಾಗಿತ್ತು.. ಸಿನಿಮಾ ನೋಡಿದ ಸೆನ್ಸಾರ್ ಬೋರ್ಡ್ ಟೀಂ ಸಿನಿಮಾದಲ್ಲಿ ರಕ್ತದೋಕುಳಿ ಇರೋದ್ರಿಂದ ಯು ಸರ್ಟಿಫಿಕೇಟ್ ಕೊಡಲು ಸಾಧ್ಯವಿಲ್ಲ ಎಂದಿದ್ದಾರೆ.

ಇನ್ನೂ ಉಳಿದ ಭಾಷೆಗಳ ಸೆನ್ಸಾರ್ ಮಾಡಿಸುವ ಕಾರ್ಯ ನಡೀತ್ತಿಓದ್ರಿಂದ ಬಾಹುಬಲಿ ಚಿತ್ರತಂಡ ವಿಷಯ ಬಹಿರಂಗ ಮಾಡಿಲ್ಲ ಎನ್ನಲಾಗಿದೆ. ಈ ವಾರದ ಅಂತ್ಯಕ್ಕೆ ಎಲ್ಲಾ ಕೆಲಸಗಳನ್ನು ಮುಗಿಸಿಕೊಳ್ಳಲಿರುವ ನಿರ್ದೇಶಕ ರಾಜಮೌಳಿ, ವಿದೇಶಗಳಿಗೆ ಸಿನಿಮಾ ಪ್ರಿಂಟ್ ರವಾನೆ ಮಾಡಲಿದ್ದಾರೆ. 250 ಕೋಟಿ ವೆಚ್ಚದಲ್ಲಿ ಮೂಡಿ ಬರುತ್ತಿರುವ ಬಾಹುಬಲಿ 2 ಸಿನಿಮಾ ಸಾಕಷ್ಟು ಸಿನಿ ರಸಿಕರ ಕುತೂಹಲಕ್ಕೆ ತೆರೆ ಎಳೆಯಲಿದೆ. ಸದ್ಯ ತೆಲುಗಿನಲ್ಲಿ ಸೆನ್ಸಾರ್ ಮುಗಿಸಿಕೊಂಡಿದ್ದು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ವಿಶ್ಯಾದ್ಯಂತ ಬಿಡುಗಡೆಯಾಗಲಿದೆ..

ಆದ್ರೆ ಕರ್ನಾಟಕಕ್ಕೆ ಕಟ್ಟಪ್ಪ ಅಲಿಯಾಸ್ ಸತ್ಯರಾಜ್ ಅವಮಾನ ಮಾಡಿದ್ದಾರೆ ಅಂತಾ ಕೆಲವು ಕನ್ನಡ ಪರ ಸಂಘಟನೆಗಳು ವಿರೋಧ ಮಾಡಿರುವ ಕಾರಣಕ್ಕೆ ಬೆಂಗಳೂರು ಬಂದ್ ಮಾಡಲು ಮುಂದಾಗಿದ್ದಾರೆ. ಇದನ್ನು ನಿರ್ದೇಶಕ ರಾಜಮೌಳಿ ಯಾವ ರೀತಿ ಪರಿಹಾರ ಮಾಡ್ತಾರೆ ಅನ್ನೋದು ಇದೀಗ ಇರುವ ಕುತೂಹಲ ಅಷ್ಟೆ.

  • ಜೋಮ, ಮಂಡ್ಯ
-Ad-

Leave Your Comments