ಚಕ್ರವರ್ತಿ ವಿಶೇಷ ದಾಖಲೆಗಳ ಬಗ್ಗೆ ” ಡಿ ಕಂಪನಿ ” ಹೇಳೋದೇನು ಗೊತ್ತಾ..?

ಚಕ್ರವರ್ತಿ ಸಿನಿಮಾ ತೆರೆ ಕಂಡಿದೆ. ದರ್ಶನ್ ಸಿನಿಮಾ ನೋಡುವ ಮಂದಿ ನಿನ್ನೆ ಮಧ್ಯರಾತ್ರಿಯಿಂದಲೇ ಥಿಯೇಟರ್ ಮುಂದೆ ಜಮಾಯಿಸಿದ್ರು.. ಇನ್ನೂ ಬೆಳ್ ಬೆಳಗ್ಗೆ ತಿಂಡಿಯನ್ನೂ ತಿನ್ನದೆ ಸಿನಿಮಾ ನೋಡಲು ಹೋದವರು ಅದೆಷ್ಟು ಮಂದಿಯೋ ಲೆಕ್ಕವಿಲ್ಲ..

ಇದು  ಸಿನಿಮಾ ಹೇಗಿದೆ ಅನ್ನೋ ವರದಿಯಲ್ಲ . ಸಿನಿಮಾ ಮಾಡಿರುವ ದಾಖಲೆಗಳು ಏನು ಅನ್ನೋದನ್ನು ಡಿ ಕಂಪನಿ ತನ್ನ ಫೇಸ್ಬುಕ್ ವಾಲ್ ನಲ್ಲಿ ಕೊಟ್ಟಿರೋ ಮಾಹಿತಿಯನ್ನ  ನಿಮ್ಮ ಮುಂದೆ ಇಡುತ್ತಿದ್ದೇವೆ.

ಚಕ್ರವರ್ತಿ ಲಿರಿಕಲ್ ಟೈಟಲ್ ಹಾಡನ್ನು ಕೇವಲ 24 ಗಂಟೆಗಳಲ್ಲಿ 3 ಲಕ್ಷ ನೋಡಿ ಮೆಚ್ಚಿಕೊಂಡ ಕನ್ನಡದ ಮೊದಲ ಚಿತ್ರ ಅನ್ನೋ ಖ್ಯಾತಿ ಗಳಿಸಿದೆ.. ಇನ್ನೂ ಕೇವಲ 25 ಗಂಟೆಗಳಲ್ಲಿ ಯಾವುದೇ ಡೈಲಾಗ್ ಇಲ್ಲದೆ 1 ಮಿಲಿಯನ್ ವೀಕ್ಷಕರನ್ನು ತಲುಪಿದ ಕನ್ನಡದ ಮೊದಲ ಟ್ರೈಲರ್ ಆಗಿದ್ದು, ಚಿತ್ರವೊಂದರ ಎಲ್ಲಾ ಲಿರಿಕಲ್ ಹಾಡುಗಳು ಮತ್ತು ಟ್ರೈಲರ್ ರಿಲೀಸ್‍ಗಿಂತ ಮೊದಲೇ 1 ಮಿಲಿಯನ್ ಜನರಿಂದ ನೋಡಲ್ಪಟ್ಟ ಸಿನಿಮಾ .

ಸಾಮಾನ್ಯವಾಗಿ ಕನ್ನಡ ಸಿನಿಮಾಗಳು ಕರ್ನಾಟಕದಲ್ಲಿ ಮಾತ್ರ ಪ್ರದರ್ಶನಗೊಳ್ಳುತ್ತವೆ.. ಅದರಲ್ಲೂ ಮಂಗಳೂರು ಭಾಗದಲ್ಲಿ ಕನ್ನಡ ಸಿನಿಮಾಗಳಿಗೆ ಮಾರ್ಕೆಟ್ ಇಲ್ಲ ಅನ್ನೋ ಮಾತುಗಳೂ ಇವೆ.. ಅಂತಹದ್ದರಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ದೇಶದ 15 ರಾಜ್ಯಗಳಲ್ಲಿ ತೆರೆಕಾಣುತ್ತಿದೆ.. ಜೊತೆಗೆ ಇದೇ ಮೊದಲ ಬಾರಿಗೆ ಮಲ್ಟಿಫ್ಲೆಕ್ಸ್ ಹಾಗೂ ಬೆಂಗಳೂರಿನ ಥಿಯೇಟರ್‍ನಲ್ಲಿ ಮಧ್ಯರಾತ್ರಿ 12 ಗಂಟೆಯಿಂದಲೇ ಚಿತ್ರ ಪ್ರದರ್ಶನ ಆಗಿದೆ.. ರಾಜ್ಯದ 12 ಜಿಲ್ಲೆಗಳಲ್ಲಿ ಬೆಳಗಿನ ಜಾವಾ ಚಿತ್ರ ಪ್ರದರ್ಶನಗೊಂಡಿದೆ ಅನ್ನೋದು ಕೂಡ ಮತ್ತೊಂದು ದಾಖಲೆ..

ಬೆಂಗಳೂರಿನ ಒಂದೇ ಮಲ್ಟಿಫ್ಲೆಕ್ಸ್ ನಲ್ಲಿ 18 ಶೋ, ಮೈಸೂರಿನ ಮಲ್ಟಿಫ್ಲೆಕ್ಸ್‍ಗಳಲ್ಲಿ 27 ಪ್ರದರ್ಶನ ಆಗ್ತಿರೋದು ಕೂಡ ಇದೇ ಮೊದಲು, ದೆಹಲಿ ಹಾಗೂ ಗುಜರಾತ್ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ರಿಲೀಸ್ ಆಗುವ ಮೂಲಕ ಇತಿಹಾಸ ಸೃಷ್ಟಿಸಿದೆ.. ಇನ್ನೂ ಸತತ 5 ದಿನಗಳ ಕಾಲ ಯೂಟ್ಯೂಬ್‍ನಲ್ಲಿ ನಂಬರ್ 1 ಟ್ರೆಂಡಿಂಗ್ ಉಳಿಸಿಕೊಂಡ ವಿಶ್ವದ ಮೊದಲ ಚಿತ್ರ ಚಕ್ರವರ್ತಿ. ಇಷ್ಟೇ  ಅಲ್ಲದೆ ಕನ್ನಡದಲ್ಲಿ ಒಬ್ಬ ನಟನ ಚಿತ್ರಕ್ಕೆ ಬರೋಬ್ಬರಿ 150 ಕಟೌಟ್ ನಿರ್ಮಾಣ ಆಗಿದ್ದು ಕೂಡ ದೊಡ್ಡ ದಾಖಲೆಯಾಗಿದೆ..

ಕನ್ನಡ ಚಿತ್ರವೊಂದು ದೇಶದ 500 ಚಿತ್ರ ಮಂದಿರಗಳಲ್ಲಿ ತೆರೆ ಕಾಣುತ್ತಿರುವುದು ಇದೇ ಮೊದಲಾಗಿದ್ದು, ಮುಂಬೈನಲ್ಲಿ ಅತೀ ಹೆಚ್ಚು ಚಿತ್ರ ಮಂದಿರಗಳಲ್ಲಿ ರಿಲೀಸ್ ಆದ ಕನ್ನಡದ ಮೊದಲ ಚಿತ್ರವಾಗಿದೆ.. ಜೊತೆಗೆ ಚಿತ್ರದ ಸ್ಯಾಟಲೈಟ್ ಹಕ್ಕನ್ನು ಅತ್ಯಧಿಕ ಬೆಲೆಯಾದ 7 ಕೋಟಿಗೆ ಉದಯ ಟಿವಿ ಕೊಂಡುಕೊಂಡಿರುವುದು ಕೂಡ ಒಂದು ದಾಖಲೆಯಾಗಿದೆ..

ಇನ್ನುಳಿದಂತೆ ಫೇಸ್ಬುಕ್ ಅಲ್ಲಿ 24 ಗಂಟೆಗಳಲ್ಲಿ 3 ಮಿಲಿಯನ್ ಜನ ನೋಡಿ ದಾಖಲೆ ನಿರ್ಮಾಣ ಮಾಡಿದ್ರೆ, ಬುಕ್ ಮೈ ಷೋ ವೆಬ್‍ಸೈಟ್‍ನಲ್ಲಿ ಬರೋಬ್ಬರಿ 35,000 ಟಿಕೆಟ್ ಮಾರಾಟ ಆಗುವ ಮೂಲಕ ಕಿರಿಕ್ ಪಾರ್ಟಿ ದಾಖಲೆಯನ್ನು ಮುರಿದಿದೆ.. ಈ ಹಿಂದೆ ಕಿರಿಕ್ ಪಾರ್ಟಿಯ 27,000 ಹಾಗೂ ಯಶ್ ಅಭಿನಯದ ಮಾಸ್ಟರ್ ಪೀಸ್ ಸಿನಿಮಾದ 14,000 ಟಿಕೆಟ್ ಮಾರಾಟವಾಗಿದ್ದು ದಾಖಲೆಯಾಗಿತ್ತು..

 

 

ಜೋಮ, ಮಂಡ್ಯ

-Ad-

1 COMMENT

Leave Your Comments