ಚಕ್ರವರ್ತಿ ಹವಾ ಜೋರು ..ಜೋರು ..

10 ರಾಜ್ಯಗಳು – 450 ಪ್ಲಸ್ ಥಿಯೇಟರ್ ಗಳು- ಚಕ್ರವರ್ತಿ ಬರುತ್ತಿದ್ದಾನೆ. ದರ್ಶನ್  ಅಭಿಮಾನಿಗಳು  ಹುಚ್ಛೆದ್ದು  ಕಾಯ್ತಿರೋ ಸಿನಿಮಾವಿದು.
ಚಕ್ರವರ್ತಿ ಧಮಾಕ ! ಎಲ್ಲೆಲ್ಲಿ ?
– ಇಂದು ರಾತ್ರಿ 12 ಗಂಟೆಯಿಂದಲೇ ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರ ಪ್ರದರ್ಶನ
– ಸಂತೋಷ್ ಥಿಯೇಟರ್ ಮುಂದೆ ತೂಗುದೀಪ ಶ್ರೀನಿವಾಸ್ ಕಟೌಟು
ಪುಣೆ, ಮಹಾರಾಷ್ಟ್ರ, ಗೋವಾ, ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು, ದೆಹಲಿ, ಉತ್ತರ ಪ್ರದೇಶ, ಕೇರಳ ಹೀಗೆ ಒಟ್ಟು ಹತ್ತು ರಾಜ್ಯಗಳಲ್ಲಿ ಏಕಕಾಲಕ್ಕೆ ಚಕ್ರವರ್ತಿ ಸಿನಿಮಾ ಬಿಡುಗಡೆಯಾಗಲಿದೆ. ಬಹುಶಃ ಹೀಗೆ ಗ್ರಾಂಡಾಗಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲಿರಬೇಕು.
ಅಷ್ಟೇ ಅಲ್ಲ ಸುಮಾರು 450ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಚಕ್ರವರ್ತಿ ಸಿನಿಮಾ ಬಿಡುಗಡೆಯಾಗಲಿದೆ. ಇದೂ ಕೂಡ ಒಂದು ದಾಖಲೆಯೇ. ಅದಕ್ಕೆ ಕಾರಣ ಬೇರೇನೂ ಅಲ್ಲ. ದರ್ಶನ್ ಎಬ್ಬಿಸಿರುವ ಹವಾ. ಟ್ರೇಲರ್ ನಲ್ಲಿ ಸೈಲೆಂಟಾಗೇ ಬಾಂಬ್ ಹಾಕಿರುವ ದರ್ಶನ್ ತನ್ನ ವಿಭಿನ್ನ ಗೆಟಪ್ ನಿಂದಲೂ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಸಿದ್ದಾರೆ. ಹಾಗಾಗಿ ಇಷ್ಟೊಂದು ಗ್ರಾಂಡಾಗಿ ಸಿನಿಮಾ ಬಿಡುಗಡೆಯಾಗುತ್ತಿದೆ.
ಅಭಿಮಾನಿಗಳಲ್ಲಿ ಎಷ್ಟೊಂದು ಕ್ರೇಜ್ ಇದೆ ಎಂದರೆ ಇಂದು ರಾತ್ರಿ 12 ಗಂಟೆಯಿಂದಲೇ ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರ ಪ್ರದರ್ಶನ ಆರಂಭವಾಗುವ ಸಾಧ್ಯತೆ ಇದೆ.
ಇನ್ನೊಂದು ವಿಶೇಷವೆಂದರೆ ಸಂತೋಷ್ ಥಿಯೇಟರ್ ನಲ್ಲಿ ವಿಭಿನ್ನ ಕಟೌಟು ಹಾಕಲಾಗಿದೆ. ಅದರಲ್ಲಿ ಆಚೀಚೆ ದರ್ಶನ್ ಮತ್ತು ದಿನಕರ್. ಮಧ್ಯದಲ್ಲಿ ತೂಗುದೀಪ ಶ್ರೀನಿವಾಸ್. ಅದನ್ನು ನೋಡಿದರಂತೂ ದರ್ಶನ್ ಅಭಿಮಾನಿಗಳು ಮಂತ್ರಮುಗ್ಧರಾಗುವುದು ಖಂಡಿತಾ.
-Ad-

Leave Your Comments