ವಿಕಲಚೇತನ ಹುಡುಗನ ಸಾಧನೆಯ ಕತೆ : ಛಲಗಾರ

ಸಾಧನೆ ಮಾಡಲು ಅಂಗವೈಕಲ್ಯ ಅಡ್ಡಿಯಾಗಲಾರದು. ಸಾಧಿಸುವ ಛಲವೊಂದಿದ್ದರೆ ಏನು ಬೇಕಾದರೂ ಮಾಡಿ ತೋರಿಸಬಹುದು ಎಂಬ ಎಳೆ ಇಟ್ಟುಕೊಂಡು ನಿರ್ಮಾಣವಾದ ಚಿತ್ರವೇ ಛಲಗಾರ. ಪೋಲಿಯೋ ಪೀಡಿತ ಹುಡುಗನೊಬ್ಬ ಕೆಸರುಗದ್ದೆ ಓಟದಲ್ಲಿ ಭಾವಹಿಸಿ ಇಡೀ ಊರಿಗೆ ಊರೇ ಹೆಮ್ಮೆ ಪಡುವಂಥ ಸಾಧನೆ ಮಾಡುವಂಥ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ ಛಲಗಾರ. ಈ ಚಿತ್ರವನ್ನು ಎ.ಆರ್. ರವೀಂದ್ರ ನಿರ್ದೇಶನ ಮಾಡಿದ್ದಾರೆ. ಪ್ರಮುಖ ಪಾತ್ರದಲ್ಲಿ ನಟಿಸಿರುವ ಮನು ವಿಕಲಚೇತನ. ಅಲ್ಲದೆ, ಈ ಚಿತ್ರದ ನಿರ್ಮಾಪಕರಾದ ಎಸ್.ಆರ್. ಸನತ್ ಕುಮಾರ್ ಅಂಗ ವೈಫಲ್ಯದಿಂದ ನೊಂದವರು.

ನೈಜವಾಗಿ ಮೂಡಿಬರಲಿ ಎನ್ನುವ ಕಾರಣಕ್ಕೆ ನಿರ್ದೇಶಕ ರವೀಂದ್ರ ವಿಕಲಚೇತನ ಶಾಲೆಯಲ್ಲಿ ಓದುತ್ತಿದ್ದ ಮನು ಎಂಬ ಬಾಲಕನನ್ನು ಕರೆತಂದು, ಆತನಿಗೆ ನಟನೆಯ ಪಾಠ ಹೇಳಿಕೊಟ್ಟು, ಸಿನಿಮಾವನ್ನು ನೈಜವಾಗಿ ಕಟ್ಟಿಕೊಡುವಲ್ಲಿ ಸಫಲರಾಗಿದ್ದಾರೆ. ಇನ್ನೇನು ಈ ಚಿತ್ರ ತೆರೆಗೆ ಬರಲು ಸಜ್ಜಾಗಿದೆ  .

ಸುಕೃತಿ ಚಿತ್ರಾಲಯಯ ಸಂಸ್ಥೆಯಲ್ಲಿ, ಎಸ್.ಆರ್. ಸನತ್ ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಮಂಜುನಾಥ್ ಬಿ. ಛಾಯಾಗ್ರಹಣ, ರವಿನಂದನ್ ಜೈನ್ ಸಂಗೀತ, ಕೇಶವ ಚಂದ್ರ ಕಥೆ, ಸಂಭಾಷಣೆ ಮತ್ತು ಸಾಹಿತ್ಯ, ಎಂ. ಮುನಿರಾಜು ಸಂಕಲನ, ಪೂರ್ಣೇಶ್ ಸಾಗರ್ ಚಿತ್ರಕತೆ, ಎಸ್. ಸುನಿಲ್ ಕುಮಾರ್ ಸಹ ನಿರ್ಮಾಪಕರಾಗಿದ್ದು, ಮಾ| ಮನು, ಬೇಬಿ ಪುಣ್ಯ ಕೆ. ಚಂದ್ರ, ಪದ್ಮಾ ವಾಸಂತಿ, ಗುರುರಾಜ ಹೊಸಕೋಟೆ, ಮಂಜುನಾಥ ಹೆಗಡೆ, ಯಮುನಾ ಶ್ರೀನಿಧಿ ಇನ್ನು ಮುಂತಾದವರ ತಾರಾಬಳಗವಿದೆ.

-Ad-

Leave Your Comments