ಚಮಕ್ ಬಿಡುಗಡೆ ಎಲ್ಲೆಲ್ಲಿ ?

 ಸ್ಯಾಂಡಲ್‌ವುಡ್ ಸಿನಿರಸಿಕರಿಗೆ ಚಮಕ್ ಕೊಟ್ಟು ಸೈ ಅನ್ನಿಸಿಕೊಳ್ಳೋ ಸಂಭ್ರಮದಲ್ಲಿದ್ದಾರೆ ನಿರ್ದೇಶಕ ಸಿಂಪಲ್ ಸುನಿ. ಮೊದಲ ಬಾರಿಗೆ ಒಟ್ಟಿಗೆ ಸ್ಕ್ರೀನ್‌ಶೇರ್ ಮಾಡಿರೋ ರಶ್ಮಿಕಾ, ಗಣೇಶ್ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಹೇಗಿರುತ್ತೆ ಅನ್ನೋ ಕುತೂಹಲ ಎಲ್ಲರಲ್ಲಿದೆ. ಈಗಾಗ್ಲೇ ರಿಲೀಸ್ ಆಗಿರೋ ಹಾಡುಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದ್ದು ಫಸ್ಟ್ ನೈಟ್ ಟೀಜ಼ರ್ ಸಖತ್ ಸೌಂಡ್ ಮಾಡಿದೆ.
ಗೋಲ್ಡನ್ ಸ್ಟಾರ್ ಗಣೇಶ್  ಅಭಿನಯದ ಚಮಕ್ ಇಂದು  ಕರ್ನಾಟಕ, ಗೋವಾದಲ್ಲಿ ಏಕಕಾಲದಲ್ಲಿ ತೆರೆಕಾಣ್ತಿದೆ. ಚಂದನವನದಲ್ಲಿ ಸಿಂಗಲ್‌ಸ್ಕ್ರೀನ್ ಮತ್ತು ಮಲ್ಟಿಪ್ಲೇಕ್ಸ್ ಒಟ್ಟಿಗೆ ಸೇರಿ 220 ಸ್ಕ್ರೀನ್‌ಗಳಲ್ಲಿ ಚಮಕ್ ಚಿತ್ತಾರ ಮೂಡಲಿದೆ. ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಈ ಚಿತ್ರತಂಡದ ಸದಸ್ಯರು ಅಭಿಮಾನಿಗಳ ಜೊತೆ ಫಸ್ಟ್ ಡೇ ಫಸ್ಟ್ ಶೋ ನೋಡಲು ಪ್ಲಾನ್ ಮಾಡಿಕೊಂಡಿದ್ದಾರೆ..
ಮುಂದಿನವಾರದಿಂದ ಚೆನ್ನೈ, ಕೊಚ್ಚಿ, ಹೈದರಾಬಾದ್, ಮುಂಬೈ ನಗರಗಳಲ್ಲಿ ಸಿನಿಮಾ ರಿಲೀಸ್ ಮಾಡಲು ಮುಂದಾಗಿದ್ದಾರೆ. ಹೊಸ ವರ್ಷಕ್ಕೆ ವಿದೇಶದಲ್ಲೂ ಚಮಕ್ ಚೆಲ್ಲಾಟ ಶುರುವಾಗಲಿದ್ದು ಯು.ಎಸ್.ಎ, ಯು.ಕೆ, ಆಸ್ಟ್ರೆಲಿಯಾ, ಕೆನಡಾ, ಸಿಂಗಪೂರದಲ್ಲಿ ಜನವರಿ ೨೮ಕ್ಕೆ ಗ್ರಾಂಡ್ ರಿಲೀಸ್ ಆಗಲಿದೆ. ಒಟ್ಟಾರೆ ಹಲವು ದಿನಗಳಿಂದ ಹಾಡು, ಟ್ರೈಲರ್, ಮೇಕಿಂಗ್ ನೋಡಿ ಹುಟ್ಟಿಕೊಂಡಿರೋ ಕುತೂಹಲಕ್ಕೆ ತೆರೆಬೀಳೋ  ಟೈಮ್ ಬಂದಿದೆ.
-Ad-

Leave Your Comments