6 ಜನರ ವಿರುದ್ಧ ಚಾರ್ಜ್ ಶೀಟ್ ! ಮಾಸ್ತಿಗುಡಿ ಕಥೆ ಏನಾಗಬಹುದು ?

ಮಾಸ್ತಿಗುಡಿ ಅಂದ್ರೆ ತಕ್ಷಣ ನೆನಪಾಗುವುದು ತಮ್ಮದಲ್ಲದ ತಪ್ಪಿಗೆ ಪ್ರಾಣ ತೆತ್ತ ಅನಿಲ್ , ಉದಯ್ . ಎಲ್ಲಾ ಗೊತ್ತಿದ್ದೂ ಯಾವ ಮುನ್ನೆಚ್ಚರಿಕೆ ತಗೆದುಕೊಳ್ಳದ ಚಿತ್ರತಂಡದ ಪ್ರಮುಖರು ಈಗ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

ಅಯ್ಯೋ ಇದೆಲ್ಲ ಒಂದಷ್ಟು ದಿನ ಅಷ್ಟೇ .ಇವ್ರಿಗೆಲ್ಲ ಯಾವ ತೊಂದರೇನು ಆಗಲ್ಲ ಅಂದುಕೊಂಡಿದ್ದವರಿಗೆ ಸತ್ತವರಿಗೆ ನ್ಯಾಯ ಸಿಗಬಹುದೇನೋ ಅನ್ನುವಂಥ ಸಣ್ಣ ಭರವಸೆ ಮೂಡಿಸುವ ಸುದ್ದಿ ಬಂದಿದೆ.

ಮಾಗಡಿಯ ಜೆ ಎಂ ಎಫ್ ಸಿ ಕೋರ್ಟ್ ,ಐ ಪಿ ಸಿ 304(ಅಜಾಕರೂಕತೆಯಿಂದ ಉಂಟಾದ ಸಾವು ) ರಲ್ಲಿ ನಿರ್ಮಾಪಕ ನಾಗಶೇಖರ್, ಸುಂದರಗೌಡ, ಸಾಹಸ ನಿರ್ದೇಶಕ ರವಿವರ್ಮ, ಪೈಲಟ್ ಸೇರಿದಂತೆ ಆರು ಜನರ ವಿರುದ್ಧ  450 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. 

ಇದಾಗಲೇ  ಬೇಲ್ ಮೇಲೆ ಬಿಡುಗಡೆಯಾಗಿರುವ ನಿರ್ಮಾಪಕ, ನಿರ್ದೇಶಕರು ಮಾಸ್ತಿಗುಡಿಯ ಬಿಡುಗಡೆಗೆ ತಯಾರಿ ನಡೆಸುತ್ತಿದ್ದಾರೆ. ಅರೋಪ ಪಟ್ಟಿ ಸಲ್ಲಿಕೆ ಸಿನಿಮಾ ಬಿಡುಗಡೆ ಯಾವ ಅಡ್ಡಿಯನ್ನೂ ತಂದೊಡ್ಡುವುದಿಲ್ಲ. ಆದರೆ ಅಮಾಯಕ ಜೀವಗಳನ್ನು ಬಲಿ ತಗೆದುಕೊಂಡವರಿಗೆ ಶಿಕ್ಷೆಯಾಗಲೇಬೇಕು. ಅದರಿಂದ ಮುಂದಿನವರು ಪಾಠ ಕಲಿಯುವಂತಾಗಬೇಕು.

-Ad-

Leave Your Comments