ಮಕ್ಕಳ ಸಾಹಸದ ಕಥೆ ಹೊತ್ತು ಬರುತ್ತಿದೆ ಪುಟಾಣಿ ಸಫಾರಿ

  ಸ್ವರ್ಣಗಂಗಾ ಫಿಲಂಸ್ ಲಾಂಛನದಲ್ಲಿ ಬಿ.ಎಸ್. ಚಂದ್ರ ಶೇಖರ್ [ಕೇಬಲ್ ಚಂದ್ರು] ಅವರ ನಿರ್ಮಾಣದ ಮಕ್ಕಳ ಸಾಹಸದ ಕಥೆಯಾಧಾರಿತ ಚಿತ್ರ ಪುಟಾಣಿ ಸಫಾರಿ. ಈಗಾಗಲೇ ಚಿತ್ರದ ಬಹುತೇಕ ಕೆಲಸಗಳು ಮುಗಿದಿದ್ದು, ಸಧ್ಯದಲ್ಲೇ ಬಿಡುಗಡೆಯಾಗಲು ಸಿದ್ದವಾಗಿದೆ. ಈ ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆಗಳನ್ನು ಬರೆದು ನಿರ್ದೇಶನ ಮಾಡಿರುವವರು ರವೀಂದ್ರ ವಂಶಿ.

  ಮಕ್ಕಳ ಮನರಂಜನೆಯನ್ನೇ ಮೂಲ ಉದ್ದೇಶವನ್ನಾಗಿಟ್ಟುಕೊಂಡು ನಿರ್ಮಾಣ ಮಾಡಿರುವ ಚಿತ್ರ ಇದಾಗಿದ್ದು, ದಟ್ಟ ಅರಣ್ಯದಲ್ಲಿ, ವನ್ಯಮೃಗಗಳ ನಡುವೆ ಸಮಾಜದ 2 ಭಿನ್ನ ಸ್ತರದಿಂದ ಬಂದಂತಹ ಮಕ್ಕಳಿಬ್ಬರು ಅನಿವಾರ್ಯವಾಗಿ ಬದುಕಬೇಕಾದ ಸಂದರ್ಭ ಬಂದಾಗ ಅವರು ಹೇಗೆ ಅದನ್ನು ಎದುರಿಸುತ್ತಾರೆ ಎನ್ನುವುದೇ ಪುಟಾಣಿ ಸಫಾರಿ ಚಿತ್ರದ ಕಥಾವಸ್ತು. ಈ ಚಿತ್ರದಲ್ಲಿ ಕಾಡು ಪ್ರಾಣಿಗಳು, ದಟ್ಟ ಕಾನನದ ಜೊತೆ ಹಾಸ್ಯ ಹಾಗೂ ಸೆಂಟಿಮೆಂಟ್ ಕೂಡ ಇದೆ.
  ಸಿರಸಿ, ಸಿದ್ಧಾಪುರ, ಬಂಡೀಪುರ, ಕೆ.ಗುಡಿ ಮುಂತಾದ ರಕ್ಷಿತಾರಣ್ಯದಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಜಂಗಲ್‍ಬುಕ್ ಮಾದರಿಯಲ್ಲಿ ಈ ಚಿತ್ರ ತಯಾರಾಗಿದೆ. ನಿರ್ದೇಶಕ ಯೋಗರಾಜ ಭಟ್ಟರು ಮೊದಲಬಾರಿಗೆ ಮಕ್ಕಳ ಚಿತ್ರಕ್ಕಾಗಿ ಹಾಡನ್ನು ಬರೆದಿರುವುದು ವಿಶೇಷ.

  ಚಿತ್ರಕ್ಕೆ ಸಹ ನಿರ್ಮಾಪಕರಾಗಿ ಜಗದೀಶ್‍ಎಂ.ಕೆ ಹಾಗೂ ಮಂಜುನಾಥ್ ಬಿ[ಕೇಬಲ್‍ಮಂಜಣ್ಣ]
  ಬಂಡವಾಳ ಹೂಡಿದ್ದಾರೆ. ಜೀವನ ಗೌಡ ಚಿತ್ರದ ಛಾಯಾಗ್ರಾಹಕರಾಗಿದ್ದು, ವೀರ ಸಮರ್ಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರದ ಪ್ರಮುಖ ತಾರಾಗಣದಲ್ಲಿ ಮನೀಶ್ ಬಲ್ಲಾಳ್, ಸಹನಶ್ರೀ, ಕೈಲಾಶ್ ಟಿ.ಪಿ, ಜಗದೀಶ್, ವಿಜಯಾ, ಮಾ.ರಾಕಿನ್, ಮಾ.ರಾಜೀವ್ ಪ್ರಥಮ್, ಬೃಂದಾ, ಮಾನಸ ಮುಂತಾದವರು ನಟಿಸಿದ್ದಾರೆ.

  -Ad-

  Leave Your Comments