“ವಾರಸ್ದಾರ”ನಾಗಿ ಫೆಬ್ರವರಿ 8ಕ್ಕೆ ಬರುತ್ತಿದ್ದಾಳೆ “ಸುದೀಪ್” ಮೆಚ್ಚಿನ ಮಣಿ “ಚಿತ್ರಾಲಿ”

ಕಾಮಿಡಿ ಕಿಲಾಡಿಗಳು, ‘ಸರಿಗಮಪ’ದಂಥ ಕಾರ್ಯಕ್ರಮಗಳು, ಧಾರಾವಾಹಿಗಳ ಮೂಲಕ ಅಪಾರ ವೀಕ್ಷಕರನ್ನು ತಲುಪಿದೆ  ZEE ಕನ್ನಡ ವಾಹಿನಿ. ಕಳೆದ ಡಿಸೆಂಬರ್ ತಿಂಗಳಿನಿಂದ ಪ್ರಾರಂಭವಾದ ಕಿಚ್ಚ ಸುದೀಪ್ ನಿರ್ಮಾಣದ “ವಾರಸ್ದಾರ” ಜನಪ್ರಿಯತೆಯನ್ನು ಬಾಚಿಕೊಳ್ಳುತ್ತಿದೆ. ಇದಕ್ಕೆ ಮತ್ತಷ್ಟು ಮೆರಗು ತುಂಬುವ ಪ್ರಮುಖ ಪಾತ್ರವೊಂದರ ಪ್ರವೇಶವಾಗಲಿದೆ  ಇದೇ ತಿಂಗಳ 8ಕ್ಕೆ.

0d7a0013

ಡ್ರಾಮಾ ಜೂನಿಯರ್ಸ್ ನಲ್ಲಿ ನೋಡುಗರ ಮನಸೆಳೆದಿದ್ದ ಮುದ್ದಿನ ಬೊಂಬೆ ಚಿತ್ರಾಲಿ ಫೆಬ್ರವರಿ ಎಂಟರಂದು “ವಾರಸ್ದಾರ” ಮೂಲಕ ಎಲ್ಲರ ಮನೆಗೆ ಬರುತ್ತಿದ್ದಾಳೆ.ಅಭಿನಯ ಚಕ್ರವರ್ತಿ ಸುದೀಪ್ ಮೆಚ್ಚಿಕೊಂಡ ಚಿನಕುರಳಿ ಐದು ವರ್ಷದ ಚಿತ್ರಾಲಿ ತನ್ನ ಅಭಿನಯದಿಂದ  ಇನ್ನೆಷ್ಟು ಮಂದಿಗೆ ಮೋಡಿಮಾಡಲಿದ್ದಾಳೋ ನೋಡಬೇಕು. 

05

ಅಂದಹಾಗೆ “ವಾರಸ್ದಾರ” ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 7.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. 

ಇದು ಕಿರುತೆರೆ ಧಾರಾವಾಹಿಯೇ ಆದರೂ ಬಹುತೇಕರು ಸಿನಿಮಾ ಕಲಾವಿದರು , ಹಾಗು ಸಿನಿಮಾ  ತಂತ್ರಜ್ಞರು ಸುದೀಪ್ ಮೇಲಿನ ಅಭಿಮಾನದಿಂದ  “ವಾರಸ್ದಾರ” ದಲ್ಲಿ ಭಾಗವಹಿಸಿದ್ದಾರೆ  ಒಂದು ಸಿನಿಮಾ ರೀತಿಯಲ್ಲೇ ನಿರ್ಮಾಣವಾಗುತ್ತಿರುವ “ವಾರಸ್ದಾರ” ಹಲವು ಪ್ರಥಮಗಳಿಗೆ ಕಾರಣವಾಗಿದೆ.

ನಟಿ ಯಜ್ಞಾ ಶೆಟ್ಟಿ ಮೊದಲ ಬಾರಿಗೆ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ನಟ ರವಿಚೇತನ್ , ವೀಣಾ ಪೊನ್ನಪ್ಪ, ರಮೇಶ್ ಪಂಡಿತ್, ವೀಣಾ ವೆಂಕಟೇಶ್, ರಾಮ್ ಸೇರಿದಂತೆ ಹಲವಾರು ಕಲಾವಿದರ ಸಂಗಮವೇ ಇಲ್ಲಿದೆ.

ಮಗಳನ್ನ ಮಗಳೆಂದು ಹೇಳದೆ ಮಗನೆಂದು ಹೇಳುತ್ತಾ ಗಂಡು ಮಗುವಿನಂತೆ ತೋರಿಸುತ್ತಾ ಬೆಳೆಸುವ ಭವಾನಿಯ ಪಾತ್ರದಲ್ಲಿ ಯಜ್ಞಾ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಮಗನಾಗಿ ಕಾಣಿಸಿಕೊಳ್ಳಲಿರುವ  ಚಿತ್ರಾಲಿಯನ್ನು ನೋಡಲಿಕ್ಕೆ ಅಭಿಮಾನಿಗಳು  “ವಾರಸ್ದಾರ”ನ ಕಡೆಗೆ ಕಣ್ಣು ನೆಟ್ಟಿರುವುದು  ಸುಳ್ಳಲ್ಲ.

-Ad-

Leave Your Comments