ಒಂದೇ ಓದಿಗೆ ಒಂದಿಷ್ಟು ಸುದ್ದಿ

“ಭೂತಯ್ಯನ ಮೊಮ್ಮಗ  ‘ಅಯ್ಯು’ ” ಚಿತ್ರೀಕರಣ ಮುಕ್ತಾಯ

11 ನಾಗರಾಜ್ ಫಿಲಂಸ್ ಲಾಂಛನದಲ್ಲಿ , ಆರ್ .ವರಪ್ರಸಾದ್ ಶೆಟ್ಟಿ ನಿರ್ಮಿಸಿರುವ ಚಿತ್ರ ಭೂತಯ್ಯನ ಮೊಮ್ಮಗ  ‘ಅಯ್ಯು’. ಮಳವಳ್ಳಿ , ಕನಕಪುರ ,ಸಾತನೂರು, ಕೆಮ್ಮಾಳೆ ,ಮಂಡ್ಯ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಪ್ರಮುಖ ಕಲಾವಿದರು ಪಾಲ್ಗೊಂಡಿದ್ದ ದೃಶ್ಯಗಳೊಂದಿಗೆ ಚಿತ್ರೀಕರಣ ಪೂರ್ಣಗೊಂಡಿದೆ.

ನಾಗರಾಜ್ ಪೀಣ್ಯ (ಪದೇ ಪದೇ , ನಮಕ್ ಖರಾಮ್ ಚಿತ್ರಗಳ ನಿರ್ದೇಶಕರು ) ಚಿತ್ರದ ನಿರ್ದೇಶಕರು . ಛಾಯಾಗ್ರಾಹಕ -ನಂದಕುಮಾರ್ ಸಂಕಲನ -ಶ್ರೀನಿವಾಸ್ ಬಾಬು , ಸಹನಿರ್ದೇಶನ-ಚಂದ್ರು ಮಳವಳ್ಳಿ ಸಹನಿರ್ಮಾಪಕರು -ರವಿಶಂಕರ್ ,ಅನಿಲ್, ಪರಮೇಶ್

ತಾರಾಗಣ -ಚಿಕ್ಕಣ್ಣ ,ಶ್ರುತಿಹರಿಹರನ್ ,ತಬಲಾ ನಾಣಿ ,ಬುಲೆಟ್ ಪ್ರಕಾಶ್ ,ಗಿರಿಜಾ ಲೋಕೇಶ್ ,ರಾಕ್ ಲೈನ್ ಸುಧಾಕರ್, ಹೊನ್ನವಳ್ಳಿ ಕೃಷ್ಣ,ಸಿದ್ದಿ ,ಕೀರ್ತಿ ರಜ್ ,ಮೋಹನ್ ಜುನೇಜಾ ,ಉಮೇಶ್ ,ಮಂದೀಪರಾಯ್ ,ವರ್ಧನ್ ಇತರರು ..

5th ಜನರೇಷನ್ ಚಿತ್ರಕ್ಕೆ ಹಿನ್ನೆಲೆ ಸಂಗೀತ

187a5520

ಜೆ.ಜೆ. ಎಂಟರ್‍ಪ್ರೈಸಸ್ ಲಾಂಛನದಲ್ಲಿ ಜಗದೀಶ್ ನಿರ್ಮಾಣದ 5th  ಜನರೇಷನ್ ಚಿತ್ರಕ್ಕೆ ಹಿನ್ನೆಲೆ ಸಂಗೀತ ಕಾರ್ಯ ಪೂರ್ಣಗೊಂಡಿದೆ. ಗುರುವೇಂದ್ರ ಶೆಟ್ಟಿ ನಿರ್ದೇಶನದ ಚಿತ್ರಕ್ಕೆ ಗುರುಪ್ರಶಾಂತ್ ರೈ-ಛಾಯಾಗ್ರಹಣ, ಶ್ರೀಧರ್ ವಿ ಸಂಭ್ರಮ್ – ಸಂಗೀತ, ವಂಕಿ-ಸಂಕಲನ, ಸುಧಾಕರ್ ರೆಡ್ಡಿ – ಕೋ ಡೈರೆಕ್ಟರ್, ಮೂರ್ತಿ ದುರ್ಗ – ಸಹ ನಿರ್ದೇಶನ,  ವಿವೇಕ್-ಪ್ರೊಡಕ್ಷನ್ ಡಿಸೈನರ್, ಈಶ್ವರ್ ರಾವ್ ಪವಾರ್- ನಿರ್ಮಾಣ ನಿರ್ವಹಣೆ ಇರುವ ಈ ಚಿತ್ರದ ಸಹ ನಿರ್ಮಾಪಕರು – ದೀಪು ರಾಘವೇಂದ್ರ,  ತಾರಾಗಣದಲ್ಲಿ – ಪ್ರವೀಣ್, ನಿಧಿ ಸುಬ್ಬಯ್ಯ, ಅನಿವಾಶ್, ಸಾಧುಕೋಕಿಲ, ಎಡಕಲ್ಲು ಗುಡ್ಡ ಚಂದ್ರಶೇಖರ್, ಕೀರ್ತಿಶ್ರೀ, ಎಸ್.ವಿ.ರಾವ್, ಸ್ವಪ್ನ ರಾಜ್, ಕೃಷ್ಣಮೂರ್ತಿ, ರೂಪೇಶ್, ನಿತಿನ್, ಪ್ರೇಮ್ ರಾಜ್, ರಾಘವೇಂದ್ರ ಕೋಡಿ, ಕುಮಾರ್, ದಿನೇಶ್ ಬಾಬು ಮುಂತಾದವರಿದ್ದಾರೆ.

“ಪ್ಲಾನಿಂಗ್” ಚಿತ್ರೀಕರಣ ಮುಕ್ತಾಯ

img_2175

ಗೋವನ್ ಲೈಸಿಟಿ ಫಿಲಂಸ್ ಲಾಂಛನದಲ್ಲಿ ಕಾರವಾರದ ಹಳಗಾವ ಸೇವರಿನೋ ಫರ್ನಾಂಡೀಸ್ ಕಥೆ-ನಿರ್ಮಾಣದ “ಪ್ಲಾನಿಂಗ್” ಕೊಂಕಣಿ ಚಿತ್ರವು ಗೋವಾದಲ್ಲಿ ನಡೆದ ಕೊನೆಯ ಹಂತದೊಂದಿಗೆ ಚಿತ್ರೀಕರಣ ಪೂರ್ಣಗೊಂಡಿದೆ. ಈ ಚಿತ್ರಕ್ಕೆ ರಾಜೇಶ್ ಫರ್ನಾಡೀಸ್ ನಿದೇಶಕರು ಈ ಹಿಂದೆ ಇವರು ಪಾದ್ರಿ (ಕೊಂಕಣಿ) ಹಾಗೂ ಮನ್ಮಥ, ಸಿಐಡಿ. ಈಶ ಚಿತ್ರಗಳನ್ನು ನಿರ್ದೇಶಿಸಿದ್ದರು. ಚಿತ್ರದ ಛಾಯಾಗ್ರಹಣ – ರಮೇಶ್ ಬಾಬು. ಸಂಗೀತ -ವಿನಯ್ ರಾಜ್, ಕಂಬಿರಾಜ್ – ಹೈಟ್ ಮಂಜು – ನೃತ್ಯ, ಸಾಹಸ-ಥ್ರಿಲ್ಲರ್ ಮಂಜು, ತಾರಾಗಣದಲ್ಲಿ ನಾಯಕ ಥಪನ್ ಆಚಾರ್ಯ,ನಾಯಕಿ ಸೆಸಿಲ್, ಮುಂತಾದವರಿದ್ಧರೆ. ಸಮಾಜಮುಖಿಯಾಗಿ ಒಳ್ಳೆಯ ಜನ ಮಾಡುವ ಪ್ಲಾನಿಂಗ್ ಮತ್ತು ಕೆಟ್ಟ ಮನೋಭಾವದ ಜನ ಮಾಡುವ ಪ್ಲಾನಿಂಗ್ ಮಧ್ಯೆ ನಡೆಯುವ ಜಟಾಪಟಿ, ಪ್ರತೀಕಾರ ಮತ್ತು ಅದರಿಂದಾಗುವ ಪರಿಣಾಮಗಳನ್ನೊಳಗೊಂಡ ಚಿತ್ರಕಥಾವಸ್ತುವಾಗಿದೆ.

`ಪ್ರೀತಿಯ ರಾಕ್ಷಸಿ’

raakshahsi ಶ್ರೀ ಲಕ್ಷ್ಮಿ ವೃಷಾದ್ರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣದ “ರಾಕ್ಷಸಿ” ಚಿತ್ರವು ಈಗ “ಪ್ರೀತಿಯ ರಾಕ್ಷಸಿ”ಯಾಗಿ ಹೊಸ ವರ್ಷದ ಕೊನೆಯ ವಾರದಲ್ಲಿ ಮರುಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಈಗಾಗಲೇ ವಿವಿಧ ದೃಶ್ಯಗಳು, ಹಿನ್ನೆಲೆ ಸಂಗೀತ, ಎಫೆಕ್ಟ್‍ಗಳನ್ನು ಬದಲಾವಣೆ ಮಾಡಿ ಹೊಸ ರೂಪದಲ್ಲಿ ಕಾಣಬಹುದು. ಕಳೆದ ವರ್ಷ “ರಾಕ್ಷಸಿ” ಚಿತ್ರ ಬಿಡುಗಡೆಯಾದಾಗ ನಗರದಲ್ಲಿ ಎಡೆಬಿಡದೆ ಮಳೆ ಸುರಿದು ಚಿತ್ರಮಂದಿರಕ್ಕೆ ಜನ ಬರುವುದು ಕಡಿಮೆಯಾಗಿತ್ತು, ತಾತ್ಕಾಲಿಕವಾಗಿ ಮುಂದುವರೆಯುವ ಚಿತ್ರವನ್ನು ತಡೆದಿದ್ದು, ಈಗ “ಪ್ರೀತಿಯ ರಾಕ್ಷಸಿ” ಹೆಸರಿನಲ್ಲಿ ಬಿಡುಗಡೆಯಾಗುತ್ತಿದೆ. ತಂದೆ ಮತ್ತು ಮಗಳ ಬಾಂಧವ್ಯದ ಕಥಾವಸ್ತು ಹೊಂದಿರುವ ಈ ಚಿತ್ರಕ್ಕೆ ನಿರ್ದೇಶನ ಎ.ಆರ್. ಮುರುಗದಾಸ್ ಅವರ ಶಿಷ್ಯ ಅಶ್ರಫ್ ನಿರ್ದೇಶನ ಮಾಡುತ್ತಿದ್ದಾರೆ. ಛಾಯಾಗ್ರಹಣ-ಮೋಹನ್, ಸಂಕಲನ-ವಿಶಾಲ್, ಕಲೆ-ಸೋಮಶೇಖರ್, ಸಾಹಸ-ಶಿವು, ನಿರ್ವಹಣೆ-ದಾಡಿ ರಮೇಶ್, ತಾರಾಗಣದಲ್ಲಿ, ನವರಸನ್, ಸಿಂಧು ಲೋಕನಾಥ್, ಜಿ.ಕೆ.ರೆಡ್ಡಿ, (ವಿಶಾಲ್ ತಂದೆ) ಅಲ್ಲದೆ ಕುರಿ ಪ್ರತಾಪ್, ಕೆಂಪೇಗೌಡ, ಸುಜಿತ್, ಕೃಷ್ಣಮೂರ್ತಿ ಕೌತಾರ್.
ಗಣಿಧಣಿಗಳ ಸುತ್ತ ಬಳ್ಳಾರಿ ದರ್ಬಾರ್

dsc_1213ಸತ್ಯ ಘಟನೆ ಆಧಾರಿತವೆಂಬುದೂ ಸೇರಿದಂತೆ ಹಲವಾರು ಕಾರಣಗಳಿಂದ ಸುದ್ದಿಯಲ್ಲಿರುವ `ಬಳ್ಳಾರಿ ದರ್ಬಾರ್’ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.ಸ್ಮೈಲ್ ಶ್ರೀನು ತಮ್ಮ ಸ್ನೇಹಿತರೊಡಗೂಡಿ ನಿರ್ಮಾಣದ ಹೊಣೆಯನ್ನೂ ಹೊತ್ತುಕೊಂಡು, ನಿರ್ದೇಶನ ಮಾಡಿರುವ ಚಿತ್ರ ಬಳ್ಳಾರಿ ದರ್ಬಾರ್. ಈ ಚಿತ್ರ ಆಂಧ್ರಪ್ರದೇಶದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ. ಇನ್ನುಳಿದಂತೆ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿಯೂ ಹೆಚ್ಚಿನ ಚಿತ್ರ ಮಂದಿರಗಳಲ್ಲಿ ಬಳ್ಳಾರಿ ದರ್ಬಾರ್ ಬಿಡುಗಡೆಯಾಗುತ್ತಿದೆ.
ಬಳ್ಳಾರಿಯಲ್ಲಿ ಈ ಹಿಂದೆ ನಡೆದಿದ್ದ ಅಕ್ರಮ ಗಣಿಗಾರಿಕೆಯ ವಿವರಗಳನ್ನಿಟ್ಟುಕೊಂಡು ಮಾಡಿದ್ದಾರೆಂದು ಹೇಳಲಾಗುತ್ತಿರುವ ಈ ಚಿತ್ರ ಆ ಕಾರಣದಿಂದಲೇ ಸುದ್ದಿ ಮಾಡುತ್ತಿದೆ. ಆದರೆ ನಿರ್ದೇಶಕ ಸ್ಮೈಲ್ ಶ್ರೀನು ಅವರು ಈ ಚಿತ್ರದಲ್ಲಿ ಯಾರನ್ನೂ ಟಾರ್ಗೆಟ್ ಮಾಡಿಲ್ಲ, ಅಂಥಾ ಯಾವ ಉದ್ದೇಶವೂ ಚಿತ್ರ ತಂಡಕ್ಕಿಲ್ಲ ಎಂಬುದನ್ನು ಒತ್ತಿ ಹೇಳಿದ್ದಾರೆ.
ಬಳ್ಳಾರಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ಮತ್ತು ಅದರ ಪರಿಣಾಮಗಳು ಹಾಗೂ ಈ ವ್ಯೂಹದೊಳಗೆ ಸಿಕ್ಕ ಯುವ ಸಮುದಾಯದ ಕಥೆ ಹೇಳುತ್ತಲೇ ಸಮಾಜಕ್ಕೊಂದು ಉತ್ತಮ ಸಂದೇಶ ಕೊಡುವ ಚಿತ್ರ ಮಾಡಿದ್ದೇವೆಂಬುದು ಚಿತ್ರ ತಂಡದ ಮಾತು. ಇದಕ್ಕೂ ಮುಂಚೆ `ತೂಫಾನ್’ ಎಂಬ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಶ್ರೀನು, ಬಳಿಕ ಹೈದರಾಬಾದ್‍ನತ್ತ ಹೊರಳಿದ್ದರು. ಅಲ್ಲಿನ ಕೆಲ ನಿರ್ದೇಶಕರ ಬಳಿ ನಿರ್ದೇಶನದ ಮತ್ತಷ್ಟು ವರಸೆಗಳನ್ನು ಕಲಿತು ಬಂದಿರುವ ಅವರೀಗ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಹಾಗೂ ನಿರ್ಮಾಣವೂ ಶ್ರೀನು ಅವರದ್ದೇ .
ಈಗಾಗಲೇ ತೆಲುಗು ಚಿತ್ರ ರಂಗದಲ್ಲಿ ಒಂದಷ್ಟು ಹೆಸರು ಮಾಡಿರುವ ಚರಣ್ ಅರ್ಜುನ್ ಅವರ ಸಂಗೀತ ನಿರ್ದೇಶನ ಇರುವ ಈ ಚಿತ್ರಕ್ಕೆ ಕಾರ್ತಿಕ್ ಸುಬ್ರಮಣಿ ಛಾಯಾಗ್ರಹಣವಿದೆ. ಪೋಲಾ ಶ್ರೀನಿವಾಸ ಬಾಬು, ಮಮತಾ ರಾವುತ್, ಶುಭ ರಕ್ಷಾ ಮುಂತಾದವರ ತಾರಾಗಣವಿದೆ.

`ಮಂಡ್ಯ ಟು ಮುಂಬೈ’ ಈ ವಾರ ಬಿಡುಗಡೆ

dsc_2285ಶ್ರೀ ನೀಲದುರ್ಗ ಪರಮೇಶ್ವರಿ ಕಂಬೈನ್ಸ್ `ಮಂಡ್ಯ ಟು ಮುಂಬೈ’ ಕನ್ನಡ ಸಿನೆಮಾ ಜ್ಯೋತಿರ್ಲಿಂಗಮ್ ಹಾಗೂ ಪ್ರಕಾಷ್ ಅವರ ನಿರ್ಮಾಣದ ಚಿತ್ರ ಈ ವಾರ ಬಿಡುಗಡೆ ಆಗುತ್ತಿದೆ.
ತಮಿಳಿನ `ರೇಣುಗುಂಟ’ ಸಿನಿಮಾ ಕನ್ನಡ ಅವತರಿಣಿಕೆ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಗೊಳ್ಳುತ್ತಿದೆ. ಈ ಚಿತ್ರಕ್ಕೆ ವಾರ್ಧಿಕ್ ಜೋಸೆಫ್ ಹಾಗೂ ರಾಜಶೇಖರ್ ನಿರ್ದೇಶಕರುಗಳು. ದರ್ಶನ್ ಕನಕ ಛಾಯಾಗ್ರಾಹಕರು. ಚರಣ್ ಅವರು ಸಂಗೀತ ಒದಗಿಸಿದ್ದಾರೆ. ಮಾರಿಶ್ ಅವರ ಸಂಕಲನ ಇದೆ.
ಸಂಜನಾ, ನವೀನ್ ಕೃಷ್ಣ, ರಾಕೇಶ್ ಅಡಿಗ, ಅಮೃತ, ತಿಲಕ್ ಶೇಖರ್, ಪೆಟ್ರೋಲ್ ಪ್ರಸನ್ನ, ಮೈಕೊ ನಾಗರಾಜ್, ಕಡ್ಡಿ ಪುಡಿ ಚಂದ್ರು, ರಾಜಶೇಖರ್, ಚಿರಾಗ್ ರಾಜ್, ಚಂದನ್ ವಿಜಯ್, ತೀಪಟ್ಟಿ ಗಣೇಶ್ ಹಾಗೂ ಇತರರು ಇದ್ದಾರೆ.
ಕಿಚ್ಚ ಸುದೀಪ್ ಒಂದು ಹಾಡನ್ನು ಹಾಡಿದ್ದಾರೆ, ಮಾಧುರಿ ಇಟಗಿ ಒಂದು ಹಾಡಿಗೆ ನೃತ್ಯ ಮಾಡಿದ್ದಾರೆ.

-Ad-

Leave Your Comments