ಸಾಧಕರ ಸೀಟ್ ಗೆ ಬಂದ ಸಿ ಎಂ ಸಿದ್ದರಾಮಯ್ಯ ಜೊತೆ ಬರಲಿದ್ದಾರಾ ಪತ್ನಿ ?

ಜೀ  ಕನ್ನಡ  ವಾಹಿನಿಯ ಸೂಪರ್ ಹಿಟ್ ಕಾರ್ಯಕ್ರಮ ವೀಕ್ ಎಂಡ್ ವಿಥ್ ರಮೇಶ್ . ಕಳೆದ ವಾರವಷ್ಟೇ ಮಾಜಿ ಪ್ರಧಾನಿ ದೇವೇಗೌಡರು ಬಂದಿದ್ರು. ಇನ್ನು ಅವರ ಗರಡಿಯಲ್ಲೇ ಪಳಗಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುವುದೆಂದು ? ನಿಜಕ್ಕೂ ಒಬ್ಬ ಮುಖ್ಯಮಂತ್ರಿಯಾಗಿ ಅಷ್ಟೆಲ್ಲ ಕೆಲಸದ ನಡುವೆ ೫-೬ ಘಂಟೆ ಬಿಡುವು ಮಾಡಿಕೊಂಡು ಬರ್ತಾರಾ? ಸಾಧ್ಯನಾ ಸಿದ್ದರಾಮಯ್ಯನವರನ್ನು ವೀಕ್ ಎಂಡ್ ವಿಥ್ ರಮೇಶ್ ನಲ್ಲಿ ನೋಡುವುದು ಎಂಬೆಲ್ಲ ಕುತೂಹಲ ಭರಿತ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ .

ಕಳೆದ ಒಂದು ಘಂಟೆ ಇಂದ ಸಿದ್ದರಾಮಯ್ಯನವರು ವೀಕ್ ಎಂಡ್ ವಿಥ್ ರಮೇಶ್ ಕಾರ್ಯಕ್ರಮದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಚಿಕ್ಕಲಸಂದ್ರದಲ್ಲಿ ಇರುವ ಅಬ್ಬಯ್ಯನಾಯ್ಡು ಸ್ಟುಡಿಯೋದಲ್ಲಿ ಚಿತ್ರಿಕರಣ ಆರಂಭವಾಗಿದೆ. ಅವರ ಆಪ್ತರು,ಬಂಧುಗಳು ಬರಲಿದ್ದಾರೆ. ಎಲ್ಲಕ್ಕೂ ಮಿಗಿಲಾಗಿ ಸಿದ್ದರಾಮಯ್ಯನವರ ಪತ್ನಿ ಬರಲಿದ್ದಾರಾ ? ಪತಿಯ ಬಗ್ಗೆ ಅವರು ಹೇಳುವ ಮಾತುಗಳೇನು ಎನ್ನುವ ಕುತೂಹಲವಂತೂ ಇದ್ದೇ  ಇದೆ .

ಸಿದ್ದರಾಮಯ್ಯನವರು ವಿನೋದ ಪ್ರಜ್ಞೆಯಲ್ಲಿ ಎತ್ತಿದ ಕೈ. ಆಡುಭಾಷೆಯಲ್ಲಿ ಅವರ ಮಾತಿನ ವೈಖರಿ ಕೇಳುವುದೇ ಒಂಥರಾ ಸುಖ. ಬಂದವರನ್ನೆಲ್ಲ ಭಾವುಕ ಕ್ಷಣಗಳಿಗೆ ಕರೆದೊಯ್ಯುವ ರಮೇಶ್ ಅರವಿಂದ ಸಿದ್ದರಾಮಯ್ಯನವರ ಮನಸ್ಸಿನಾಳಕ್ಕೆ ಹೇಗೆ ಲಗ್ಗೆ ಇಡಲಿದ್ದಾರೆ ನೋಡಬೇಕಿದೆ.

ಅಂದ ಹಾಗೆ ಬರಲಿರುವ ಶನಿವಾರ ಭಾನುವಾರದಂದು ವೀಕೆಂಡ್ ವಿಥ್ ರಮೇಶ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರ್ಯಕ್ರಮ ಪ್ರಸಾರವಾಗಲಿದೆ.

-Ad-

Leave Your Comments