ಬಾಹುಬಲಿ ನೋಡಿದ ಸಿದ್ದಣ್ಣ . ಈಗ ಆದೇಶ ಜಾರಿಗೆ ಬರುತ್ತಾ ನೋಡ್ರಣ್ಣಾ

\ಬಾಹುಬಲಿ ವಿಚಾರದಲ್ಲಿ ಸಿಎಂ ಕಾನೂನು ಉಲ್ಲಂಘನೆ..!

ಸಿಎಂ ಸಿದ್ದರಾಮಯ್ಯ  ಇತ್ತೀಚಿಗೆ ಸಿನಿಮಾ ನೋಡುತ್ತಾ ರಿಲ್ಯಾಕ್ಸ್ ಮಾಡುವ ಮೂಡ್ ನಲ್ಲಿದ್ದಾರೆ. ಮೊನ್ನೆಯಷ್ಟೆ ಮೈಸೂರಿನಲ್ಲಿ ರಾಜಕುಮಾರ ಸಿನಿಮಾ ನೋಡಿದ್ದ ಸಿಎಂ ಇಂದು ಬಾಹುಬಲಿ ಸಿನಿಮಾಗೆ ಮಕ್ಕಳು ಮೊಮ್ಮಕ್ಕಳು , ಗೆಳೆಯರ  ಸಮೇತ ಹೋಗಿ ನೋಡಿದ್ದಾರೆ.
ಕಾನೂನು ಉಲ್ಲಂಘನೆ ಮಾಡಿದ್ದಾರಾ ಮುಖ್ಯಮಂತ್ರಿ..?
ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಮಲ್ಟಿಫ್ಲೆಕ್ಸ್ ನಲ್ಲಿ ಏಕರೂಪದ ದರವನ್ನು ಕಳೆದ ಏಪ್ರಿಲ್ 27 ರಂದು ಜಾರಿ ಮಾಡಿ ಆದೇಶ ಮಾಡಿದ್ರು. ಯಾವುದೇ ಮಲ್ಟಿಫ್ಲೆಕ್ಸ್ ನಲ್ಲಿ ಗರಿಷ್ಠ 200ಗಿಂತ ಹೆಚ್ಚು ಟಿಕೆಟ್ ದರ ನಿಗದಿ ಮಾಡಬಾರದು ಅನ್ನೋದು ರೂಲ್ಸ್. ಆದರೆ ಇಂದು ಸಿದ್ದರಾಮಯ್ಯನವರೇ ತಾನು ಮಾಡಿದ ಆದೇಶ ಗಾಳಿಗೆ ತೂರಿ 1050 ರೂಪಾಯಿಯಂತೆ ಟಿಕೆಟ್ ಖರೀದಿ ಮಾಡಿ ಸಿನಿಮಾ ನೋಡಿದ್ದಾರೆ. ಅದೇಶ ಮಾಡಿ ನಾಲ್ಕು ದಿನವಾದ್ರು ಆಧಿಕೃತವಾಗಿ ಜಾರಿ‌ಮಾಡದೆ ಇರುವುದು ಆಡಳಿತ ವ್ಯವಸ್ಥೆಯ ವೇಗವನ್ನು,ಸಿದ್ದರಾಮಯ್ಯನವರ ಬದ್ಧತೆಯನ್ನೂ ತೋರಿಸುತ್ತಿದೆ.
48 ಟಿಕೆಟ್ ಗೆ ಬರೋಬ್ಬರಿ ಅರ್ಧ ಲಕ್ಷ ಖರ್ಚು..!
ಸಿಎಂ ಜಾರಿ ಮಾಡಿದ ಆದೇಶದಂತೆ ಏಕರೂಪದ ದರ  ಆಗಿದ್ರೆ 48 ಟಿಕೆಟ್ ಗೆ 9,600 ರೂಪಾಯಿ ಆಗಬೇಕಿತ್ತು.. ಆದ್ರೆ ಆದೇಶ ಜಾರಿಯಾಗದ ಹಿನ್ನೆಲೆಯಲ್ಲಿ  ನಮಗೆ ಬಂದ ಮಾಹಿತಿಯ ಪ್ರಕಾರ ಬರೋಬ್ಬರಿ 50, 400 ರೂಪಾಯಿ ಕೊಟ್ಟಿದ್ದಾರೆ. ಚಿತ್ರಮಂದಿರದ ಆಚೆ ಬಂದಾಗ ಮಾತ್ರ ಇದ್ದದ್ದು ಮೂವರೇ .ಉಳಿದವರು ಏನಾದರು ? ಅನ್ನುವುದನ್ನು ಅವರೇ ಹೇಳಬೇಕು
 ನಮ್ಮ ಕನ್ನಡಿಗರ ಸಿನಿಮಾಗಾದ್ರು ಇಷ್ಟು ಹಣ ತೆತ್ತು ಹೋಗಿದ್ರೆ ಹೋಗ್ಲಿ ಬಿಡು ನಮ್ಮವರು ಬದುಕಲಿ ಅನ್ನಬಹುದಿತ್ತೇನೋ . ಆದ್ರೆ ಪ್ರೇಕ್ಷಕರು ಮುಗಿಬಿದ್ದು ನೋಡುತ್ತಿರೋ ಅದ್ದೂರಿ ಪರಭಾಷೆ ಚಿತ್ರಕ್ಕೆ ಮೊದಲು ಬೆಂಬಲ ಕೊಟ್ಟಿದ್ದು ಎಷ್ಟು ಸರಿ? ರಾಗ ದಂಥ ಕನ್ನಡಿಗರ ಒಳ್ಳೆ ಸಿನಿಮಾ ಕನ್ನಡ ಪ್ರೇಮಿ ಸಿ ಎ೦ ಕಣ್ಣಿಗೇಕೆ ಬೀಳಲಿಲ್ಲ ? ಇದೇನಾ ನೀವು ಕನ್ನಡಿಗರ ಸ್ವಾಭಿಮಾನ ಉಳಿಸುವ ರೀತಿ ? ನೀವು ಬಾಹುಬಲಿ ನೋಡಬಾರದೆಂದಲ್ಲ. ಮೊದಲ ಆದ್ಯತೆ ಕೊಟ್ಟಿದ್ದರ ಬಗ್ಗೆ ಖಂಡಿತವಾಗಿ ಕನ್ನಡಿಗರ ಆಕ್ಷೇಪಣೆ, ಆಕ್ರೋಶ  ತಪ್ಪಿದ್ದಲ್ಲ .
ಬಾಹುಬಲಿಯ ಭಂಡಾರ ತುಂಬಿದ ಮೇಲೆ ಆದೇಶ ಹೊರಬೀಳುತ್ತೋ ಅಥವಾ ಅಧಿಕಾರಿಗಳ ಮೇಲೆ ಗೂಬೆ ಕೂರಿಸದೆ ತತ್ ಕ್ಷಣ  ಜಾರಿಗೆ ಬರುವಂತೆ ಕ್ರಮ ಕೈಗೊಳ್ತಾರೋ ಅನ್ನೋದು ಎಲ್ಲರ ಕುತೂಹಲದ ಪ್ರಶ್ನೆ 
-Ad-

Leave Your Comments