ಅಂಜನಿಪುತ್ರಕ್ಕೆ ಕಾನೂನು ವಿಘ್ನ! ಜ.2ರವರೆಗೆ ಚಿತ್ರ ಪ್ರದರ್ಶನಕ್ಕೆ ಹೈಕೋರ್ಟ್ ತಡೆ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಖ್ಯಾತ ನಿರ್ದೇಶಕ ಹರ್ಷ ಅವರ ಕಾಂಬೀನೇಷನ್ ನಲ್ಲಿ ಮೂಡಿ ಬಂದಿರುವ ಬಹುನಿರೀಕ್ಷಿತ ಚಿತ್ರ ಅಂಜನೀಪುತ್ರಕ್ಕೆ ಒಂದಾದ ಮೇಲೆ ಒಂದು ವಿಘ್ನ ಎದುರಾಗುತ್ತಲೇ ಇದೆ. ಚಿತ್ರದಲ್ಲಿ ವಕೀಲ ವೃತ್ತಿಗೆ ಅಪಮಾನ ಮಾಡಲಾಗಿದೆ ಎಂಬ ಕಾರಣಕ್ಕೆ ಜ.2ರವರೆಗೂ ಈ ಚಿತ್ರದ ಪ್ರದರ್ಶನ ತಡೆಗೆ ಸಿವಿಲ್ ನ್ಯಾಯಾಲಯ ಆದೇಶ ನೀಡಿದೆ.

ಈ ಚಿತ್ರದಲ್ಲಿ ಪೊಲೀಸ್ ಪಾತ್ರ ಮಾಡಿರುವ ರವಿಶಂಕರ್ ಅವರು ಒಂದು ದೃಶ್ಯದಲ್ಲಿ ವಿಲನ್ ಜತೆಗೆ ಸಂಭಾಷಣೆ ಮಾಡುವಾಗ ವಕೀಲ ಪಾತ್ರಕ್ಕೆ ‘ನಿನ್ನ ಗಂಟೆ ಏನಿದ್ರು ಕೋರ್ಟ್ ಅಲ್ಲಿ ಅಲ್ಲಾಡಿಸು, ಇಲ್ಲಿ ಅಲ್ಲ’ ಎಂದು ಹೇಳಿದ್ದಾರೆ. ಈ ಹೊಂದು ಡೈಲಾಗ್ ವಕೀಲ ಸಮುದಾಯಕ್ಕೆ ಅಪಮಾನವಾಗಿದೆ ಎಂಬ ಕಾರಣದಿಂದ ನಾರಾಯಣ ಸ್ವಾಮಿ, ವಿನೇದ್ ಕುಮಾರ್ ಎಂಬ ವಕೀಲರುಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ವಕೀಲರ ವಿರುದ್ಧ ಇರುವ ಈ ಡೈಲಾಗ್ ಅನ್ನು ಕಿತ್ತು ಹಾಕುವವರೆಗೂ ಚಿತ್ರ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿಕೊಂಡಿದ್ದರು. ಈ ಅರ್ಜಿ ಪುರಸ್ಕರಿಸಿದ ನ್ಯಾಯಾಲಯ ಚಿತ್ರ ಪ್ರದರ್ಶನಕ್ಕೆ ತಡೆ ನೀಡಿದೆ. ಮೊನ್ನೆಯಷ್ಟೇ ಚಿತ್ರಮಂದಿರದಲ್ಲಿದ್ದ ಪ್ರೇಕ್ಷಕ ತನ್ನ ಫೇಸ್ ಬುಕ್ ನಲ್ಲಿ ಇಡೀ ಚಿತ್ರವನ್ನು ಲೈವ್ ಮೂಲಕ ಪ್ರಕಟಿಸಿದ್ದ. ಇದರ ಬೆನ್ನಲ್ಲೇ ಈಗ ಅಂಜನಿಪುತ್ರ ಸಿನಿಮಾಗೆ ಕಾನೂನಿನ ವಿಘ್ನ ಎದುರಾಗಿದೆ.

-Ad-

Leave Your Comments