ಬಾಹುಬಲಿ ನೋಡಲು ಬಂದು ಬಂಧಿಯಾದ ಕುಖ್ಯಾತ ಕಳ್ಳ !

ಗತ್ತಿನಾದ್ಯಂತ  ಬಾಹುಬಲಿ 2 ಸಿನಿಮಾ  ದೊಡ್ಡ ಸುದ್ದಿ ಮಾಡಿದೆ .  ಸಿನಿಮಾ ಎಲ್ಲಾ ದಾಖಲೆಗಳನ್ನು ಮಗುಚಿಹಾಕಿ ತನ್ನ ಹೊಸ ಮುದ್ರೆ ಒತ್ತಿದೆ . ಮತ್ತೊಂದೆಡೆ ಬಾಹುಬಲಿ 2 ಸಿನಿಮಾ ನೋಡಲು ಬಂದು ನಟೋರಿಯಸ್ ಕಳ್ಳನೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ . ಇದು ನಡೆದಿರುವುದು ಒಡಿಶಾದ ಭುವನೇಶ್ವರದಲ್ಲಿ.

ಈತ ಕುಖ್ಯಾತ  ಕಳ್ಳ.  ಸುಮಾರು 50 ಎಟಿಎಂಗಳನ್ನು ದೋಚಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ,  7 ವರ್ಷಗಳಿಂದ ತಲೆಮರೆಸಿಕೊಂಡು ಅಲೆದಾಡುತ್ತಿದ್ದ.

ಅಸಂಭವ ಆಗಿದ್ದ ಸಂಭವ್ !

ಸಂಭವ್ ಆಚಾರ್ಯ  ಎಟಿಎಂ ಕಳ್ಳ.  ಇವನನ್ನ ಬಂಧಿಸಿದ್ದು ಭುವನೇಶ್ವರದ ವಿಶೇಷ ಪೊಲೀಸ್ ತಂಡ.  ಬಾಹುಬಲಿ 2 ಸಿನಿಮಾ ನೋಡುತ್ತಿದ್ದ  ಸಂಭವ್ ಇಂಟರ್ವಲ್ ಬಿಟ್ಟಾಗ ಹೊರಗೆ ಬಂದಿದ್ದಾಗ ಪೊಲೀಸರು ಕೋಳ ತೊಡಿಸಿದ್ದಾರೆ . ಈ ಸಂದರ್ಭದಲ್ಲಿ ಆತನ ಬಳಿ ಇದ್ದ ಕೆಲವು ಎಟಿಎಂ ಕಾರ್ಡ್ ಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ .

ಸಂಭವ್ ಆಚಾರ್ಯ ಸುಮಾರು 50 ಎಟಿಎಂ ಗಳಲ್ಲಿ ದರೋಡೆ ನಡೆಸಿದ್ದ.  ಆತನ ವಿರುದ್ಧ ಭುವನೇಶ್ವರ್ ಹಾಗೂ ಕೆಲವು ಜಿಲ್ಲಾ ಠಾಣೆಗಳಲ್ಲಿ ದೂರುಗಳು ಇದಾಗಲೇ ದಾಖಲಾಗಿವೆ.

ಒಟ್ಟಿನಲ್ಲಿ ಬಾಹುಬಲಿ ನೋಡಲು ಬಂದು ಬಂಧಿಯಾಗಿದ್ದಾನೆ ಭೂಪ .

-Ad-

Leave Your Comments