ದನ ಕಾಯೋನಿಗೆ ಕಾದು ಕಾದು ಸಿಟ್ಟಿಗೆದ್ದ ಸಿನಿ ರಸಿಕರು. ಏನಂದ್ರು ಭಟ್ಟ್ರು ?

ವೆಂಕಟೇಶ್ವರ ಚಿತ್ರ ಮಂದಿರದಲ್ಲಿ ಮೊದಲ ಶೋ ನೋಡೋದಿಕ್ಕೆ ಬಂದ ಪ್ರೇಕ್ಷಕರು ಕಾದು ಕಾದು ಬೇಸ್ತು ಬಿದ್ದಿದ್ದಾರೆ. ಬೆಳಿಗ್ಗೆ 7.30ರ ಪ್ರದರ್ಶನಕ್ಕೆ 7ಕ್ಕೇ ಬಂದು ಕುಳಿತಿದ್ದವರು 8.೩೦ತ್ತಾದರೂ ಸಿನಿಮಾ ತೆರೆಕಾಣದೆ ಸಿಟ್ಟಿಗೆದ್ದಿದ್ದಾರೆ.

ಮಾಡೋದಿಕ್ಕೆ ಬೇರೆ ಕೆಲಸವಿಲ್ಲದೇ ಬೆಳಿಗ್ಗೆನೇ ಬಂದಿದ್ದೀವಾ ? ನಮ್ ಟಿಕೆಟ್ ಹಣ ವಾಪಾಸ್ ಕೊಡು ಇಲ್ಲ ಈಗಿಂದೀಗಲೇ ಪಿಕ್ಚರ್ ಬಿಡು ಅಂತ ಕೂಗಾಡಿದ್ರು . ಇನ್ನೇನು ಬಂತು ಬಂತು ತಡೀರಿ ಅಂತ ಸಮಾಧಾನ ಮಾಡೋದ್ರಲ್ಲಿ ಟಿಕೆಟ್ ಹಂಚುವವರು ಸುಸ್ತಾಗಿದ್ದಾರೆ.
ದನಕಾಯೋನು ಬರ್ತಾನೋ ಇಲ್ವೋ ಹೇಳಿ ಸ್ವಾಮಿ ಅಂತ ಮ್ಯಾನೇಜರ್ ಬೆನ್ನು ಬಿದ್ದ ಜನ ಕೊನೆಗೂ ನಿರಾಸೆ ಅನುಭವಿಸುವಂತಾಗಿದೆ . i am sorry ನಮಗೆ ಬಾಂಬೆ ಇಂದ ಕೀ ಅಂದ್ರೆ ಪಾಸ್ವರ್ಡ್ ಬರ್ಬೇಕು ಬಂದಿಲ್ಲ. ನಿಮ್ಮ ಹಣ ವಾಪಾಸ್ ಕೊಡ್ತೀವಿ ಹೊರಡಿ ಅಂದ್ರು. ಜೊತೆಗೆ ನಮ ಕನ್ನಡ ಚಿತ್ರಗಳ ಹಣೆಬರಹ ಯಾವಾಗಲೂ ಇದೇನೇ ಅನ್ನೋ ಮಾತನ್ನೂ ಸೇರಿಸಿದ್ರು.
ಯಾಕ್ ಸ್ವಾಮಿ ಹಂಗಂತೀರಾ ಅಂದ್ರೆ ಇನ್ನೇನ್ ಮತ್ತೆ ಈ ಪ್ರೊಡ್ಯೂಸರ್ಗಳು ದುಡ್ಡು ಕೊಟ್ಟಿರಲ್ಲ .ತಕರಾರು ಮಾಡ್ಕೊಂಡಿರ್ತಾರೆ. ಬಾಂಬೆ ಯವರು ಬೀಗದ ಕೀ ಕೊಡಲ್ಲ ಅಷ್ಟೆ . ನಮಗೆ 6 ಗಂಟೆಗೆ ತಾವರೆಕೆರೆ ಲಕ್ಷ್ಮಿ ಥೇಟರ್ನವರು ಕಾಲ್ ಮಾಡಿದ್ರು. ಕೀ ಬಂದಿಲ್ಲ ನೋಡ್ಕೊಳಿ ಅಂತ. ಅವ್ರುಗೂ ಇಲ್ಲ ನಮಗೂ ಇಲ್ಲ. ನಿಮಗೂ ಇಲ್ಲ.11 ಗಂಟೆ ಶೋ ಹೊತ್ತಿಗೆ ಬರುತ್ತಾ ಅದೂ ಗೊತ್ತಿಲ್ಲ ಅಂದ್ರು.
ಥೂ ಥ ರೀ ಕೆ ಈ “ದನಕಾಯೋನು” ನಮ್ಮನ್ನ ಥಿಯೇಟರ್ ಕಾಯೋ ಹಾಗ್ ಮಾಡಿದ್ನಲ್ಲ ಥೂ..ಥೂ ..ಅಂತ ಜನ ಮನೆ ಕಡೆಗೆ ಮುಖ ಮಾಡಿದ್ರು.

20161007_080657

ಹಣ ವಾಪಾಸ್ ಕೊಡ್ತೀರಾ ಸರಿ ನಮ್ಮ ಪ್ರೇಕ್ಷಕ ಪ್ರಭುವಿನ ಸಮಯ ಕೊಡಿ ನೋಡೋಣ. ಕೆಲಸ ಕಾರ್ಯಬಿಟ್ಟು ಕನ್ನಡ ಸಿನಿಮಾ ನೋಡಲಿಕ್ಕೆ ಬಂದವರ ಟೈಮ್ ಖಾಲಿ ಮಾಡಿ ಕಳ್ಸಿದ್ರಲ್ಲ ಅನ್ನುವುದು ಬೇಸರದ ವಿಷಯ.
ನಿಜಕ್ಕೂ ಏನಾಗಿದೆ ಸರ್ ಅಭಿಮಾನಿಗಳಿಗೆ ನಿರಾಶೆ ಆಯಿತಲ್ಲ ಅಂತ ciniadda .com ಯೋಗರಾಜ್ ಭಟ್ಟರನ್ನು ವಿಚಾರಿಸಿದಾಗ,ಅದು ಥಿಯೇಟರ್ ಟೆಕ್ನಿಕಲ್ ಸಮಸ್ಯೆ ಜಾಗ್ವಾರ್ ಗೂ ಸೈನ್ ಮಾಡಿ ನಮಗೂ ಸೈನ್ ಮಾಡಿದ್ದಾರೆ . ಬೇರೆ ಎಲ್ಲಾ ಕಡೆ ಶುರು ಆಗ್ತಾ ಇದೆ. ತೊಂದ್ರೆ ಆಗಿದ್ದಕ್ಕೆ ಕ್ಷಮೆ ಇರಲಿ. ಸಿನಿಮಾ ನೋಡಿ ಅಂತ ಅಭಿಮಾನಿಗಳಿಗೆ ಕೇಳಿಕೊಳ್ತೀನಿ ಅಂದ್ರು .
ಭಟ್ಟರು ಮತ್ತೆ ಜನಮನ ಗೆಲ್ಲಲಿ. ಕನ್ನಡದ ಸಿನಿಮಾಗಳು ಸಮಯಕ್ಕೆ ಸರಿಯಾಗಿ ಸಿನಿರಸಿಕರನ್ನ ತಲುಪಲಿ .

-Ad-

Leave Your Comments