ಮುಗಿದೀತೆ ಮೆಜೆಸ್ಟಿಕ್ ಗದ್ದಲ ??

ದರ್ಶನ್ -ಸುದೀಪ್ ನಡುವಿನ ಸ್ನೇಹದ ಕೊಂಡಿ ಕಳಚಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣದಲ್ಲಿ  ದರ್ಶನ್  ಮೂಲಕ ಬಂದ ಮೇಲೆ ತರಹೇವಾರಿ ಮಾತುಗಳು ಕೇಳಿಬರುತ್ತಿವೆ. ಆದ್ರೆ ಕಂಡದ್ದನ್ನು ಕಂಡ ಹಾಗೆ  ಹೇಳುವ ಇರಾದೆ ಯಾರಿಗೂ ಇದ್ದ ಹಾಗಿಲ್ಲ.

darshan suddep 1darshan post2

ಈ ಮಧ್ಯೆ ಮೆಜೆಸ್ಟಿಕ್ ಸಿನಿಮಾದ ಪ್ರಾರಂಭದ ದಿನಗಳಿಂದ ಯಶಸ್ಸಿನ ಘಳಿಗೆಯವರೆಗೂ ಜೊತೆಗಿದ್ದ ಗೀತರಚನಾಕಾರ, ಇಬ್ಬರಿಗೂ ಆಪ್ತ ,ಹಿತೈಷಿಯೂ ಆಗಿರುವ , ದರ್ಶನ್  ಗೆ ದಾಸ ಎಂಬ ಹೆಸರು ಸೂಚಿಸಿದ ವಿ ನಾಗೇಂದ್ರಪ್ರಸಾದ್ ಒಂದೇ ಸಾಲಿನಲ್ಲಿ ಮಾರ್ಮಿಕವಾಗಿ ಹೇಳಿಬಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಸತ್ಯಗಳು ಬಿಚ್ಚಿಕೊಳ್ಳುತ್ತವಾ ನೋಡಬೇಕು.

nagendra prasad

ಮೆಜೆಸ್ಟಿಕ್ ಸಿನಿಮಾ ಮಾಡುವಾಗ ಬಹುತೇಕ ಎಲ್ಲರೂ ಹೊಸಬರು…ಅಲ್ಲಿ ಸಾವಿರ ಸತ್ಯಗಳಿವೆ.
ಈಗ ಅದರ ಹಿಂದೆ ಬಿದ್ದು ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಡುವುದು ಯಾಕೋ ಬೇಸರ ತರಿಸುತ್ತದೆ.

ಆ ಸಿನಿಮಾದ ಓಂಕಾರದಿಂದ ಯಶಸ್ವಿ 50ನೇ ದಿನ ಓಡುವವರೆಗೂ ಇದ್ದವನು ನಾನು.
ಆ ಸಿನಿಮಾ ಧ್ವನಿ ಸುರುಳಿ ಬಿಡುಗಡೆಯ ದಿನ ನಾನಾಡಿದ ಮಾತುಗಳು ನೆನಪಾಗುತ್ತಿವೆ.
” ಸದ್ದು ಗದ್ದಲದ ಮೆಜೆಸ್ಟಿಕ್ನಲ್ಲಿ ಕೇಳಿಸುವ ಎರಡು ಹೃದಯಗಳ ಬಡಿತದ ಸದ್ದೇ ಈ ಮೆಜೆಸ್ಟಿಕ್”

ಈಗ ಹೃದಯದ ಬಡಿತಗಳ ಬದಲಾಗಿ ಸದ್ದು ಗದ್ದಲ ಮಾತ್ರ ಕೇಳಿಸುತ್ತಿದೆ.
ವಿ.ನಾಗೇಂದ್ರ ಪ್ರಸಾದ್

-Ad-

Leave Your Comments