ಸೆಟ್ಟೇರಿತು ದರ್ಶನ್ 51ನೇ ಚಿತ್ರ !!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 51 ನೇ ಸಿನಿಮಾದ ಮುಹೂರ್ತ ನೆರವೇರಿದೆ. ಸಾಕಷ್ಟು ದಿನಗಳಿಂದ ಕುತೂಹಲ ಮೂಡಿಸಿದ್ದ  ದರ್ಶನ್ ಅವರ 51ನೇ ಚಿತ್ರಕ್ಕೆ ನಾಯಕಿಯರು ಯಾರು..? ಯಾರು ಆಕ್ಷನ್ ಕಟ್ ಹೇಳ್ತಾರೆ ? ಈ ಕುರಿತ ಕಂಪ್ಲೀಟ್ ಡೀಟೈಲ್ಸ್​ ಇಲ್ಲಿದೆ ನೋಡಿ..
ಸದ್ಯ ಸ್ಯಾಂಡಲ್‍ವುಡ್‍ನಲ್ಲಿ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿರೋದು ಚಾಲೆಂಜಿಂಗ್ ಸ್ಟಾರ್ ಜೊತೆಗೆ ದೊಡ್ಡ ಸ್ಟಾರ್ಕಾಸ್ಟ್ ಸೇರಿ ಅಭಿನಯಿಸ್ತಿರೋ ಕುರುಕ್ಷೇತ್ರ ಸಿನಿಮಾ.. ಇದು ದಚ್ಚುವಿನ 50ನೇ ಸಿನಿಮಾ ಅನ್ನೋ ಖುಷಿ ಒಂದೆಡೆ ಆದ್ರೆ. ಇದೀಗ ಸಂಕ್ರಾಂತಿ ಹಬ್ಬದ ವಿಶೇಷವಾಗಿ ತಮ್ಮ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಒಂದನ್ನ ಕೊಟ್ಟಿದ್ದಾರೆ. ದರ್ಶನ್‍ ಅಭಿನಯದ 51ನೇ ಸಿನಿಮಾ ಬಗ್ಗೆ ಇದ್ದ ಕುತೂಹಲಕ್ಕೆ ತೆರೆ  ಬಿದ್ದಿದೆ..
ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ, ದರ್ಶನ್ ಅಭಿನಯದ 51ನೇ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಚಿತ್ರದ ಮುಹೂರ್ತ ನೆರವೇರಿದ್ದು, ಪಿ.ಕುಮಾರನ್ ಆಕ್ಷನ್ ಕಟ್ ಹೇಳ್ತಿದ್ದಾರೆ.. ಬಿ.ಸುರೇಶ್ ಹಾಗೂ ಶೈಲಜಾನಾಗ್ ಪ್ರೊಡ್ಯೂಸ್ ಮಾಡಲಿದ್ದು, ವಿ.ಹರಿಕೃಷ್ಣ ಸಂಗೀತ ಹಾಗೂ ಬಹದ್ದೂರ್ ಚೇತನ್ ಸಂಭಾಷಣೆ ಬರೆಯಲಿದ್ದಾರೆ. ಶ್ರೀಷಾ ಕುಡುವಳ್ಳಿ ಕ್ಯಾಮೆರಾ ಕೈಚಳಕ ದರ್ಶನ್​ರ 51ನೇ ಚಿತ್ರದಲ್ಲಿರಲಿದೆ..
ಒಟ್ನಲ್ಲಿ ದರ್ಶನ್ 51ನೇ ಸಿನಿಮಾ ಸಂಕ್ರಾಂತಿ ದಿನವೇ ಸೆಟ್ಟೇರಿದ್ದು, ಫೆಬ್ರವರಿಯಿಂದ ಸಿನಿಮಾ ಶೂಟಿಂಗ್ ಶುರುವಾಗಲಿದ್ಯಂತೆ.  ಚಿತ್ರತಂಡಕ್ಕೆ ಒನ್ಸ್ ಅಗೈನ್ ಆಲ್ ದಿ ಬೆಸ್ಟ್..
-Ad-

Leave Your Comments