“ಸಾರಥಿ”ಯ ನಡಿಗೆ “ಚಕ್ರವರ್ತಿ”ಯ ಕಡೆಗೆ.. ಮತ್ತೆ ಸಿಗಲಿ ಗೆಲುವಿನ ಕೊಡುಗೆ

ಇವತ್ತು ಸಾರಥಿ, ದಾಸ, ಕರಿಯ, ಧರ್ಮ ಎಂದು ಕರೆಸಿಕೊಳ್ಳುವ ದರ್ಶನ್, ಬಾಕ್ಸ್ ಆಫೀಸರ್ ಉಡೀಸ್ ಮಾಡುತ್ತಾ ಚಾಲೆಂಜಿಂಗ್ ಸ್ಟಾರ್ ಎನ್ನುವ ಬಿರುದು ಪಡೆದ ಸ್ಯಾಂಡಲ್ವುಡ್ನ ಆರು ಅಡಿ ಬುಲೆಟ್ಗೆ 40 ವರ್ಷದ ಸಂಭ್ರಮ..
ನಿನ್ನೆ ಮಧ್ಯ ರಾತ್ರಿಯಿಂದಲೇ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ರು.. ಸಾವಿರಾರು ಜನ ಅಭಿಮಾನಿಗಳು ಬೆಂಗಳೂರು ಮಾತ್ರವಲ್ಲದೆ ದೂರದ ಊರುಗಳಿಂದಲೂ ಅಭಿಮಾನಿಗಳು ಬಂದು ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಂಡ್ರು.. ಮಾಧ್ಯಮಗಳ ಜೊತೆ ಮಾತನಾಡಿದ ಬರ್ತ್ ಡೇ ಬಾಯ್ ದರ್ಶನ್, ನಾನು ಚಿತ್ರೋದ್ಯಮದಲ್ಲಿ ಏನು ಸಂಪಾದನೆ ಮಾಡಿದ್ದೀನಿ ಅಂದ್ರೆ, ಈ ಅಭಿಮಾನಿಗಳ ಪ್ರೀತಿ ಅಷ್ಟೇ ಅಂತ ಹೇಳಿದ್ರು..
Darshan-Thoogudeepa-Srinivas-new-stills tugdeepsrinivas
ಸಾಮಾನ್ಯವಾಗಿ ಸ್ಯಾಂಡಲ್ ವುಡ್ನಲ್ಲಿ  ಹೀರೋ ಮಕ್ಕಳು ಹೀರೋಗಳಾಗುವುದು.. ನಟಿಯರ ಮಕ್ಕಳು ಚಿತ್ರರಂಗಕ್ಕೆ ಬರುವುದು ರೂಡಿ.. ಆದರೆ ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ಅವರು ಖಳನಟ ರಾಗಿದ್ದವರು.. ಅಭಿನಯದಲ್ಲಿ ಭಲೇ ಅನ್ನುವ ಹಾಗೆ ಪಾತ್ರ ಮಾಡಿದ್ರೂ  ಸಿಗುತ್ತಿದ್ದ ಭತ್ಯೆ ಮಾತ್ರ ಸಂಸಾರ ಸಾಗಿಸುವುದಕ್ಕೇ ಕಷ್ಟವಾಗಿತ್ತು. ಹೀಗಾಗಿ ದರ್ಶನ್ ಯಾವುದೇ ಐಭೋಗದ ಜೀವನ ಮಾಡದೆ ಮೈಸೂರಿನಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕು ಕಟ್ಟಿಕೊಂಡಿದ್ರು..ತೂಗುದೀಪ ಶ್ರೀನಿವಾಸ್ ಅಗಲಿದ ಮೇಲಂತೂ ಬದುಕು ದುಸ್ತರವಾಗಿತ್ತು.  ಉದ್ಯೋಗ ಅರಸಿಕೊಂಡು ಬೆಂಗಳೂರಿಗೆ ಬಂದಾಗ ಅನ್ನ ಹುಟ್ಟಿಸಿದ್ದು ಚಿತ್ರರಂಗವೇ ಆದರೂ  ಓರ್ವ ಲೈಟ್ ಬಾಯ್ ಆಗಿ ಅನ್ನೋದನ್ನು ದರ್ಶನ್ ಅವರೇ ಹೇಳಿಕೊಂಡಿದ್ದಾರೆ.. ಈ ವಿಚಾರದ ಬಗ್ಗೆ ದರ್ಶನ್ ಜನ್ಮ ದಿನದಂದು ನಾವು ಹೇಳಲೇ ಬೇಕು.. ಆದಷ್ಟು ಮಾಧ್ಯಮಗಳಿಂದ ದೂರವೇ ಉಳಿಯುವ ನಟ ದರ್ಶನ್ . ಪ್ರಚಾರ ಬೇಡ ನಾನು ಮಾಡುವುದನ್ನು ಹೇಳಿಕೊಂಡು ತಿರುಗಿದರೆ ಅದರಿಂದ ನಾನು ಸಂಪಾದಿಸುವುದು ಏನು ಇಲ್ಲ ಅಂತಾರೆ.. ಅದೇ ರೀತಿ ಯಾರಿಗೆ ಸಹಾಯ ಮಾಡಿದ್ರು ಆ ಬಗ್ಗೆ ದರ್ಶನ್ ಯಾರೊಂದಿಗೂ ಹೇಳಿಕೊಳ್ಳಲ್ಲ..
darshan fan
ರಾಮನಗರದಲ್ಲಿ ಅಭಿಮಾನಿಯೊಬ್ಬ ತನ್ನ ಅಂತಿಮ ದಿನಗಳನ್ನು ಎಣಿಸುತ್ತಿದ್ದಾಗ ದರ್ಶನ್ ನೋಡುವುದೇ ತನ್ನ ಕೊನೆ ಆಸೆ ಎಂದಿದ್ದರು.. ಈ ವಿಚಾರ ಮಾಧ್ಯಮಗಳ ಮೂಲಕ ದರ್ಶನ್ಗೆ ಗೊತ್ತಾದ ಕೂಡಲೇ ತಡಮಾಡದೆ ಅವರ ಮನೆಗೆ ಭೇಟಿ ನೀಡಿದ್ರು.. ಹೀಗೆ ಹೇಳುವುದಕ್ಕೆ ಅದೆಷ್ಟೋ ವಿಚಾರಗಳಿವೆ.. ತನ್ನ ಪ್ರೊಡಕ್ಷನ್ ಹೌಸ್ನಲ್ಲಿ ಕೆಲಸ ಮಾಡುವ ಹುಡುಗರು ಹಾಗೂ ತನ್ನ ಪಾರ್ಮ್ ಹೌಸ್ನಲ್ಲಿರುವ ಎಲ್ಲಾ ಹುಡುಗರಿಗೂ ದರ್ಶನ್ ಸಹಾಯ ಹಸ್ತ ಚಾಚಿದ್ದಾರೆ.. ಇನ್ನು  ಸಿನಿಮಾಗಳ ಬಗ್ಗೆ ಮಾತನಾಡುವುದಾದರೆ ಚಂದನವನದ  ಪ್ರೀತಿಯ ಸಾರಥಿ, ಸಿನಿಮಾಗಳ ಮೂಲಕ  ಅರ್ಧ ಶತಕದತ್ತ ಮುನ್ನುಗ್ಗುತ್ತಿದ್ದಾರೆ..
50ನೇ ಚಿತ್ರವನ್ನು ಮತ್ತೋರ್ವ ಖ್ಯಾತ ಖಳನಾಯಕ ಸುಧೀರ್ ಪುತ್ರ ತರುಣ್ ಸುಧೀರ್ ನಿರ್ದೇಶನ ಮಾಡುವುದು ಅಂತಾ ತೀರ್ಮಾನ ಮಾಡಲಾಗಿದೆ.. ಇನ್ನೂ 49ನೇ ಚಿತ್ರಕ್ಕೆ ಮಿಲನ ಪ್ರಕಾಶ್ ಆಕ್ಷನ್ ಕಟ್ ಹೇಳುತ್ತಿದ್ದು, ಚಿತ್ರಕ್ಕೆ ತಾರಕ್ ಅಂತಾ ಶೀರ್ಷಿಕೆ ಇಡಲಾಗಿದೆ. ದುಶ್ಯಂತ್ ಅರ್ಪಿಸಿ, ಶ್ರಿ ಚೌಡೇಶ್ವರಿ ಸಿನಿ ಕ್ರಿಯೆಷನ್ಸ್ ಮತ್ತು ಶ್ರೀ ಜಯಮಾತಾ ಕಂಬೈನ್ಸ್ ಲಾಂಛನದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಲಕ್ಷ್ಮಣ್  ನಿರ್ಮಿಸುತ್ತಿದ್ದಾರೆ.. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡುತ್ತಿದ್ದು, ಕೆ.ಕೃಷ್ಣಕುಮಾರ್ ಛಾಯಾಗ್ರಹಣ ಮಾಡಲಿದ್ದಾರೆ.. ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದು ಕೆಲವೇ ದಿನಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ..
ಇತ್ತೀಚೆಗಷ್ಟೇ ಬಿಡುಗಡೆಯಾದ ಚಕ್ರವರ್ತಿ  ಸಿನಿಮಾದ ಹಾಡಿನಲ್ಲಿ ಭರ್ಜರಿ ಲುಕ್ ನಲ್ಲಿ  ಮಿಂಚಿ ಅಭಿಮಾನಿಗಳನ್ನು ಹುಚ್ಚೆಬ್ಬಿಸಿರೋ ದರ್ಶನ್ ಮತ್ತೆ ಬಾಕ್ಸ್ ಆಫೀಸಿಗೆ ಲಗ್ಗೆ ಇಟ್ಟು  ಸೋಲಿಲ್ಲದ ಸುಲ್ತಾನನಾಗಲಿ ಅನ್ನುವುದು ಅವರ ಅವರೆಲ್ಲರ ಹಾರೈಕೆ.
ಹುಟ್ಟುಹಬ್ಬದ  ಸಂಭ್ರಮದಲ್ಲಿರುವ ದರ್ಶನ್ ಗೆ ಶುಭವಾಗಲಿ . ಪ್ರತಿಭೆಗೆ ಸವಾಲೊಡ್ಡುವ ಪಾತ್ರಗಳಲ್ಲಿ ಅಭಿನಯಿಸಿ ಕನ್ನಡಚಿತ್ರರಂಗವನ್ನು ಮತ್ತಷ್ಟು ಕಳೆಗಟ್ಟಿಸಲಿ ಅನ್ನುವುದು ciniadda.com ಬಳಗದ ಅಭಿಲಾಷೆ .
-ಸರ್ವಸಮರ್ಥ, ನಾಗಮಂಗಲ
-Ad-

Leave Your Comments