5 ಕೋಟಿ ಬೆಲೆಯ ಲ್ಯಾಂಬೋರ್ಗಿನಿ ಒಡೆಯರಾದ ಕನ್ನಡದ ಮೊದಲ ನಟ ದರ್ಶನ್ !

ಸಂಕ್ರಾಂತಿ ಹಬ್ಬ ದರ್ಶನ್  ಗೆ ಬಹಳ ಖುಷಿ ತಂದಿದೆ . ಲ್ಯಾಂಬೋರ್ಗಿನಿ ಎಂಬ ತಮ್ಮ ಹೊಸ ಕಾರಲ್ಲಿ  ಮೈಸೂರಿಗೆ ಹೋಗಿದ್ದಾರೆ ಚಾಲೆಂಜಿಂಗ್ ಸ್ಟಾರ್ .

ಲ್ಯಾಂಬೋರ್ಗಿನಿ

ವಿಶ್ವದ ಅತಿ ಅದ್ದೂರಿ ಮತ್ತು ಅತಿ ದುಬಾರಿ ಕಾರು. ಈ ಕಾರನ್ನು ಖರೀದಿಸಬೇಕು ಅನ್ನುವುದು ಬಿಡಿ. ಈ ಕಾರನ್ನೊಂದ್ಸಲ ನೋಡಬೇಕು ಅಂತ ಆಸೆ ಇಟ್ಟುಕೊಳ್ಳುವುದೇ ಕಷ್ಟ. ಅಷ್ಟು ದುಬಾರಿ ಕಾರು ಇದು. ಇಂಥಾ ಭಾರಿ ಕಾರನ್ನು ಖರೀದಿಸಿದ್ದಾರೆ ದರ್ಶನ್. ಅಚ್ಚ ಬಿಳಿಯ ಕಾರು ಸಂಕ್ರಾಂತಿಯ ದಿನ ಬೆಳಿಗ್ಗೆ ದರ್ಶನ್ ಮನೆ ಮುಂದೆ ನಿಂತಿತ್ತು.ಅಂದಹಾಗೆ ಈ ಸಂಕ್ರಾಂತಿಯಂದು ದರ್ಶನ್ ಗೆ ಎರಡು ಸಂಭ್ರಮ. ಒಂದು ತನ್ನ 51ನೇ ಚಿತ್ರದ ಮುಹೂರ್ತ. ಇನ್ನೊಂದು ಲ್ಯಾಂಬೋರ್ಗಿನಿ ಆಗಮನ. ಚಿತ್ರದ ಮುಹೂರ್ತ ಮುಗಿಸಿಕೊಂಡು ಬಂದ ದರ್ಶನ್ ಕಾರಿನ ಪೂಜೆ ಮಾಡಿಸಿದರು. ಹೇಳಿಕಳಿ ದರ್ಶನ್ ಮೊದಲೇ ಕಾರು ಪ್ರಿಯ. ಡ್ರೈವಿಂಗ್ ಅನ್ನು ಸಕತ್ ಇಷ್ಟ ಪಡುವ ಚಾಲೆಂಜಿಂಗ್ ಸ್ಟಾರ್ ಪೂಜೆ ಮುಗಿಸಿದ ತಕ್ಷಣ ಲ್ಯಾಂಬೋರ್ಗಿನಿ ಹತ್ತಿಕೊಂಡು ತಮ್ಮ ಇಷ್ಟದ ಮೈಸೂರಿಗೆ ಹೊರಟರು.

ಕನ್ನಡ ಚಿತ್ರರಂಗದಲ್ಲಿ ಇದುವರೆಗೆ ಯಾರೂ ಲ್ಯಾಂಬೋರ್ಗಿನಿ ಖರೀದಿಸಿಲ್ಲ. ಲ್ಯಾಂಬೋರ್ಗಿನಿ ಒಡೆಯರಾದ ಕನ್ನಡ ಕಲಾವಿದರಲ್ಲಿ ದರ್ಶನ್ ಮೊದಲಿಗರು. ಅವರಿಗೆ ಈ ಕಾರು ಕೊಳ್ಳಬೇಕೆಂದು ತುಂಬಾ ಆಸೆ ಇತ್ತಂತೆ. ಆ ಆಸೆ ಈಗ ನೆರವೇರಿದೆ ಎನ್ನುತ್ತದೆ ಮೂಲಗಳು.

-Ad-

Leave Your Comments