ಹನುಮನ ಭಕ್ತನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಜ್ಜೆ! ಸರ್ಜಾಗಳ ಜತೆ ಕುಣಿದ ಡಿ ಬಾಸ್

ಸರ್ಜಾ ಕುಟುಂಬದ ಖ್ಯಾತ ನಟರಾದ ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ ಜತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಡೊಂದಕ್ಕೆ ಹೆಜ್ಜೆ ಹಾಕಿದರೆ ಹೇಗಿರತ್ತೆ? ಈ ಪ್ರಶ್ನೆಗೆ ಉತ್ತರ ಪಡೆಯಲು ಹೆಚ್ಚು ದಿನ ಕಾಯಬೇಕಿಲ್ಲ. ಕಾರಣ, ಪ್ರೇಮ ಬರಹ ಚಿತ್ರದ ಹಾಡಿನಲ್ಲಿ ಈ ನಾಲ್ಕೂ ಜನ ನಟರು ಅತಿಥಿಗಳಾಗಿ ಆಗಮಿಸಲಿದ್ದು, ಹನುಮಂತನ ಭಕ್ತರಾಗಿ ಹೆಜ್ಜೆ ಹಾಕಲಿದ್ದಾರೆ.

ಪ್ರೇಮ ಬರಹ ಚಿತ್ರದಲ್ಲಿ ಚಂದನ್ ಹಾಗೂ ಅರ್ಜುನ್ ಸರ್ಜಾ ಪುತ್ರಿ ಅಶ್ವರ್ಯ ಸರ್ಜಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ನಿರ್ದೇಶನ ಹಾಗೂ ನಿರ್ಮಾಣದ ಜವಾಬ್ದಾರಿಯನ್ನು ಅರ್ಜುನ್ ಸರ್ಜಾ ಹೊತ್ತುಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಸರ್ಜಾ ಕುಟುಂಬದ ಮೂವರು ನಟರು ಒಂದೇ ಹಾಡಿಗೆ ನೃತ್ಯ ಮಾಡುತ್ತಿದ್ದು, ಇವರಿಗೆ ದರ್ಷನ್ ಸಾಥ್ ನೀಡಿರುವುದು ಅಬಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಹನುಮಂತನ ಕುರಿತಾದ ಈ ಹಾಡಿಗೆ ಜೆಸ್ಸಿಗಿಫ್ಟ್ ಸಂಗೀತ ನೀಡಿದ್ದು, ಎಸ್ ಪಿ ಬಾಲಸುಬ್ರಮಣ್ಯಂ ಹಾಡಿದ್ದಾರೆ. ನಿನ್ನೆಯಿಂದ ಈ ಹಾಡಿನ ಚಿತ್ರೀಕರಣ ಆರಂಭವಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಇದರ ಫೋಟೋಗಳು ವೈರಲ್ ಆಗಿವೆ. ಆ ಚಿತ್ರಗಳು ಹೀಗಿವೆ…

-Ad-

Leave Your Comments