ದರ್ಶನ್, ಶ್ರುತಿ ಹರಿಹರನ್, ದೇವರಾಜ್ ಎಲ್ಲಿದ್ದಾರೆ ಗೊತ್ತಾ?

ಅದೊಂದು ಮಲೇಶಿಯಾದ ಪಬ್ಬು. ಹೆಸರು ಝೋಕ್ ಕ್ಲಬ್. ಮಸುಕು ಮಸುಕು ದೀಪ. ಅಲ್ಲೊಬ್ಬರು ಕೂತಿದ್ದಾರೆ. ಬಿಳಿ ತಲೆ ಗೂದಲು. ಬಿಳಿ  ಗಡ್ಡ. ತಾತನಂತೆ ಕಾಣುತ್ತಿದ್ದಾರೆ. ಆದರೆ ಅವರನ್ನು ಎಲ್ಲೋ ನೋಡಿದಂತಿದೆಯಲ್ಲ ಅಂತನ್ನಿಸಿ ಹತ್ತಿರ  ಹೋದರೆ…ಓಹ್ ಗಾಡ್. ಅವರು ಬೇರೆ ಯಾರೂ ಅಲ್ಲ. ಕನ್ನಡ ಚಿತ್ರರಂಗದ ಡೈನಾಮಿಕ್ ಹೀರೋ ದೇವರಾಜ್.
ಅಲ್ಲಿ ನಡೆಯುತ್ತಿರುವುದು ಚಾಲೆಂಜಿಂಗ್  ಸ್ಟಾರ್ ದರ್ಶನ್ ನಟನೆಯ ಪ್ರಕಾಶ್ ಜಯರಾಮ್ ನಿರ್ದೇಶನದ ಹೊಸ ಚಿತ್ರ ತಾರಕ್ ಶೂಟಿಂಗು.
ಶ್ರೀಮಂತ ಮನೆಯ ಚೆಂದದ ಹುಡುಗನಂತೆ ದರ್ಶನ್ ಕಾಣಿಸುತ್ತಿದ್ದಾರೆ. ಅವರ ಪಕ್ಕ ರಿಚ್ ಲುಕ್ ನಲ್ಲಿ ದೇವರಾಜ್. ಅವರಿಬ್ಬರ ಜೊತೆ ಮಿನುಗುತ್ತಿರುವುದು ಶ್ರುತಿ ಹರಿಹರನ್. ಈಗಾಗಲೇ ಮಲೇಶಿಯಾದಲ್ಲಿ ಹಲವಾರು ದಿನಗಳಂತೆ ಚಿತ್ರೀಕರಣ ನಡೆಯುತ್ತಿದ್ದು ಶಾನ್ವಿ ಶ್ರೀವಾಸ್ತವ್ ತಮ್ಮ ಪಾಲಿನ ಚಿತ್ರೀಕರಣ ಮುಗಿಸಿ ಬಂದಿದ್ದಾರೆ. ಅವರ ಹಿಂದೆಯೇ ಶ್ರುತಿ ಹರಿಹರನ್ ತಮ್ಮ ಭಾಗದ ಚಿತ್ರೀಕರಣಕ್ಕಾಗಿ ಮಲೇಶಿಯಾ ಸೇರಿದ್ದಾರೆ.
ನಿರ್ದೇಶಕ ಪ್ರಕಾಶ್ ವೇಗವಾಗಿ ಚಿತ್ರೀಕರಣ ಮುಗಿಸುತ್ತಿದ್ದು, ಆದಷ್ಟು ಬೇಗ ಸಿನಿಮಾವನ್ನು ಜನರ ಮುಂದಿಡಬೇಕು ಅನ್ನೋ ತರಾತುರಿಯಲ್ಲಿದ್ದಾರೆ. ಅದಕ್ಕೆ ದರ್ಶನ್, ದೇವರಾಜ್ ಮುಂತಾದ ಕಲಾವಿದರು ಉತ್ಸಾಹದಿಂದ ಚಿತ್ರಿಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.  ಶ್ರುತಿ ಹರಿಹರನ್ ಸೆಟ್ ಗೆ ಎಂಟ್ರಿ ಕೊಟ್ಟ ತಕ್ಷಣ ತೆಗೆದ ಸೆಲ್ಫೀ ತೆಗೆದುಕೊಂಡಿದ್ದಾರೆ.
-Ad-

Leave Your Comments