ಆಗಸ್ಟ್ 6ರಂದು ದರ್ಶನ್ ದುರ್ಯೋಧನ ಗೆಟಪ್ ಲಾಂಚ್ !

ಸದ್ಯದ ಮಟ್ಟಿಗೆ ದರ್ಶನ್ ಮ್ಯಾಗ್ನಂ ಓಪಸ್ ಎಂದೇ ಕರೆಯಬಹುದಾದ ಸಿನಿಮಾ ಕುರುಕ್ಷೇತ್ರ. ವಸ್ತು, ತಾರಾಗಣ ಮತ್ತು ಬಜೆಟ್ ಹೀಗೆ ಯಾವ ಕಡೆಯಿಂದ ನೋಡಿದರೂ ಬಿಗ್ ಅನ್ನಿಸುವ ಸಿನಿಮಾ ಇದು. ಈ ಸಿನಿಮಾದ ಬಗ್ಗೆ ಈಗಾಗಲೇ ಕುತೂಹಲ ಶುರುವಾಗಿದೆ. ಕುರುಕ್ಷೇತ್ರ ಅಂದರೆ ಯುದ್ಧ. ಈ ಯುದ್ಧ ಹೇಗೆ ಮಾಡುತ್ತಾರೆ ಅನ್ನವುದರಿಂದ ಹಿಡಿದು ನಟ, ನಟಿಯರು ಹೇಗೆ ಕಾಣಿಸುತ್ತಾರೆ ಅನ್ನೋವರೆಗೆ ಪ್ರಶ್ನೆಗಳೋ ಪ್ರಶ್ನೆಗಳು. ಅದರಲ್ಲೂ ಪೌರಾಣಿಕ ಪಾತ್ರಗಳಲ್ಲಿ ಈ ಕಾಲದ ನಟ, ನಟಿಯರು ಹೇಗೆ ಕಾಣಿಸುತ್ತಾರೆ ಅನ್ನುವ ಪ್ರಶ್ನೆ ಹೆಚ್ಚು ಜನರನ್ನು ಕಾಡುತ್ತಿದೆ.
ಈ ಸಿನಿಮಾದಲ್ಲಿ ದರ್ಶನ್ ತೂಗುದೀಪರದು ದುರ್ಯೋಧನನ ಪಾತ್ರ. ಮಹಾಭಾರತದ ಅತಿ ದೊಡ್ಡ ಪಾತ್ರ. ಈ ಪಾತ್ರದಲ್ಲಿ ದರ್ಶನ್ ಹೇಗೆ ಕಾಣಿಸಬಹುದು ಅನ್ನುವ ಕುತೂಹಲವಿದ್ದವರು ಆಗಸ್ಟ್ 6ರಂದು ನಿಮ್ಮ ಕುತೂಹಲವನ್ನು ತಣಿಸಿಕೊಳ್ಳಬಹುದು. ಯಾಕೆಂದರೆ ಅವತ್ತು ಕುರುಕ್ಷೇತ್ರ ಸಿನಿಮಾ ಮುಹೂರ್ತ. ಅದೇ ದಿವಸ ದರ್ಶನ್ ಗೆಟಪ್ ಕೂಡ ಲಾಂಚ್ ಆಗಲಿದೆ.
ದರ್ಶನ್ ಈಗಾಗಲೇ ದುರ್ಯೋಧನ ಪಾತ್ರದ ತಯಾರಿ ಶುರು ಮಾಡಿದ್ದಾರೆ. ಅಣ್ಣಾವ್ರ ಪೌರಾಣಿಕ ಸಿನಿಮಾಗಳನ್ನೆಲ್ಲಾ ನೋಡುತ್ತಿದ್ದಾರಂತೆ. ಅಂದಹಾಗೆ ಈ ಪಾತ್ರದ ಸಿದ್ಧತೆಗೆ ಒಂದೂವರೆಯಿಂದ ಎರಡು ಗಂಟೆ ಬೇಕಂತೆ. ಮುಂದಿನ ವರ್ಷ ಈ ಸಿನಿಮಾ ಬಿಡುಗಡೆ ಆಗಲಿದೆ ಅನ್ನೋದು ಸುದ್ದಿ. ಸದ್ಯ ಆಗಸ್ಟ್ 6ರಂದು ಈ ಸಿನಿಮಾದ ಬಗ್ಗೆ ಹೆಚ್ಚು  ಮಾಹಿತಿ ಸಿಗಲಿದೆ. ಅಲ್ಲಿಯವರೆಗೆ ಕಾಯಬೇಕು.
-Ad-

Leave Your Comments