ದರ್ಶನ್ ಗದಾಯುದ್ಧ; ವಿಷ್ಯ ಗೊತ್ತಾ?

ಮಹಾಭಾರತದಲ್ಲಿ ಅತಿ ಮುಖ್ಯವಾದ ಘಟ್ಟ ಗದಾಯುದ್ಧ. ಅತ್ತ ದುರ್ಯೋಧನ, ಇತ್ತ ಭೀಮ ಇಬ್ಬರೂ ಗದೆ ಹಿಡಿದುಕೊಂಡು ನಿಂತಿರುವುದನ್ನು ನೋಡುವುದಕ್ಕೂ ಧೈರ್ಯ ಬೇಕು. ಸದ್ಯ ದರ್ಶನ್ ರ 50ನೇ ಚಿತ್ರ ಮುನಿರತ್ನ  ಅವರ ಕುರುಕ್ಷೇತ್ರ ಅದೇ ಹಂತಕ್ಕೆ ಬಂದು ನಿಂತಿದೆ. ಇದೇ ನವೆಂಬರ್ 24ರಿಂದ ಮುನಿರತ್ನ ಕುರುಕ್ಷೇತ್ರ ಚಿತ್ರದ ಕ್ಲೈಮ್ಯಾಕ್ಸ್ ಗದಾಯುದ್ಧದ ಶೂಟಿಂಗ್ ಶುರುವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಇಂಟರೆಸ್ಟಿಂಗ್ ಅಂದ್ರೆ ಇಲ್ಲಿ ದುರ್ಯೋಧನ ದರ್ಶನ್. ಭೀಮ ಸೈಫಿ ಅಖ್ತರ್ ಅಲಿ. 2ಡಿ ಮತ್ತು3ಡಿಯಲ್ಲಿ ನಿರ್ಮಾಣನಾಗುತ್ತಿರುವ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. 2018ಫೆಬ್ರವರಿಯಲ್ಲಿ ಚಿತ್ರೀಕರಣ ಮುಗಿಸಲು ಶ್ರಮಿಸುತ್ತಿದೆ. ಹಾಗಾಗಿ ಇದೇ ವಾರಾಂತ್ಯ ಕ್ಲೈಮ್ಯಾಕ್ಸ್ ಚಿತ್ರೀಕರಣ. ಭೀಮ ದುರ್ಯೋಧನನ ಊರು ಭಂಗ ಮಾಡಿದರೆ ಅಂತ್ಯ.

ಹೈದರಾಬಾದ್ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ದರ್ಶನ್ ಸೇರಿದಂತೆ ಎಲ್ಲರೂ ಉತ್ಸುಕರಾಗಿ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ನೂರಾರು ಮಂದಿ ವಿಎಫ್ ಎಕ್ಸ್ ಕೆಲಸದಲ್ಲಿ ನಿರತರಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಮುಗಿದರೆ ಫೆಬ್ರವರಿಯಲ್ಲಿ ದರ್ಶನ್ ಅಪರಾವತಾರ ನೋಡಿ ಅಭಿಮಾನಿಗಳು ಪುಳಕಿತರಾಗುವುದು ನಿಶ್ಚಿತ.

 

-Ad-

Leave Your Comments