ಚಾಲೆಂಜಿಂಗ್ ಸ್ಟಾರ್ ಈಗ ಛಲದೋಳ್ ದುರ್ಯೋಧನ ?

ಕುರುಕ್ಷೇತ್ರ ಚಿತ್ರಕ್ಕೆ ಅಂತೂ  ಚಾಲನೆ ಸಿಕ್ಕಿದೆ. ದರ್ಶನ್ ದುರ್ಯೋಧನನಾಗಿ  ಬರಲಿದ್ದಾರೆ  ಎನ್ನುವ ಮಾತೀಗ ನಿಜವಾಗಿದೆ. ಮುನಿರತ್ನ ನಿರ್ಮಾಣದ ಈ ಸಿನಿಮಾ ಯಾವಾಗ ಕೆಲಸ ಸೆಟ್ಟೇರಲಿದೆ  ಎನ್ನುವ ಕುತೂಹಲ ಸಿನಿಪ್ರಿಯರನ್ನು ಕಾಡುತ್ತಿತ್ತು. ಮಲ್ಟಿ ಸ್ಟಾರ್ ಸಿನಿಮಾ ನಿಜಕ್ಕೂ ತಯಾರಾಗುತ್ತಾ ಅನ್ನುವ ಪ್ರಶ್ನೆ ಹಲವರಿಗಿತ್ತು .ಆ ಎಲ್ಲಾ ಪ್ರಶ್ನೆಗಳಿಗೂ ಮುನಿರತ್ನ ತಮ್ಮ ಕೆಲಸದ ಮುಖಾಂತರವೇ  ಉತ್ತರ ಕೊಟ್ಟಿದ್ದಾರೆ.

‘ಕುರುಕ್ಷೇತ್ರ’ದ ಕ್ಕೆ ಬಂದ  ‘ಚಕ್ರವರ್ತಿ’ !

ಹೈದ್ರಾಬಾದ್‌ನ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ದರ್ಶನ್‌ ಫೋಟೊ ಶೂಟ್ ಮುಗಿದಿದೆ . ಸ್ಕ್ರೀನ್ ಟೆಸ್ಟ್ ಮತ್ತು ಡ್ರೆಸ್ ಟ್ರಯಲ್ ಕೆಲಸಗಳು ನೆರವೇರಿದೆ . ಎರಡು ದಿನ ದರ್ಶನ್ ಅಲ್ಲಿದ್ದು ಎಲ್ಲಾ ಪಾತ್ರಕ್ಕೆ ಬೇಕಾದ ಕಾಸ್ಟ್ಯೂಮ್‌ಗಳನ್ನು ಹಾಕಿಕೊಂಡು ಲುಕ್ ಹೇಗಿರತ್ತೆ ಅನ್ನೋ ಟೆಸ್ಟ್ ಮಾಡಿದ್ದಾರೆ. ಫೋಟೊ  ಎಡಿಟಿಂಗ್ ಕೆಲಸ ಜೋರಾಗೇ ನಡೀತಿದೆ .

ಬಾಹುಬಲಿಯ ಅಂಗಳದಲ್ಲೇ ಕುರುಕ್ಷೇತ್ರ !

ದರ್ಶನ್ ದುರ್ಯೋಧನನಾಗಿ ಝಗಮಗಿಸಿದ್ದು ಬಾಹುಬಲಿ ಸಿನಿಮಾಕ್ಕೆ ಹಾಕಿದ್ದ ಸೆಟ್ ನಲ್ಲೆ. ಬಾಹುಬಲಿ ಇದಾಗಲೇ ಸಾವಿರ ಕೋಟಿ ಗಳಿಸಿ ಜಯಭೇರಿ ಬಾರಿಸಿರೋದ್ರಿಂದ ಅದೇ ಜಾಗದಲ್ಲಿ ಫೋಟೋಶೂಟ್ ಆರಂಭ ಮಾಡಿರೋ ಕುರುಕ್ಷೇತ್ರ ಗೆದ್ದು ಬರುತ್ತೆ ಅನ್ನೋ ನಂಬಿಕೆ ಚಿತ್ರತಂಡದ್ದು .

ಕಿಚ್ಚ ಸುದೀಪ್ , ಯಶ್ ಕುರುಕ್ಷೇತ್ರಕ್ಕೆ ಕಾಲಿಡೋದು ನಿಜವೇ ?

ಶಿವರಾಜ್ ಕುಮಾರ್ , ಸುದೀಪ್ , ಯಶ್ ಕುರುಕ್ಷೇತ್ರ ದಲ್ಲಿ ಮಿಂಚಲಿದ್ದಾರಾ ಅನ್ನುವ ಪ್ರಶ್ನೆಗೆ ಮಾತ್ರ ಇನ್ನೂ ಉತ್ತರ ಸಿಕ್ಕಿಲ್ಲ. ಮೂಲದ ಪ್ರಕಾರ ದಕ್ಷಿಣ ಭಾರತದ ನಟನಟಿಯರನ್ನು ಕರೆತರುವ ಯೋಜನೆ ಚಾಲ್ತಿಯಲ್ಲಿದೆಯಂತೆ. ಹಾಗೇನಾದರೂ ಆದ್ರೆ ಇಡೀ ದಕ್ಷಿಣ ಭಾರತವೇ ನೋಡುವ ಭರ್ಜರಿ ಸಿನಿಮಾ ಆಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ .

ದರ್ಶನ್ ಅಭಿನಯದ ಸಂಗೊಳ್ಳಿ ರಾಯಣ್ಣನಂಥ ಸೂಪರ್ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ನಾಗಣ್ಣ ಕುರುಕ್ಷೇತ್ರದ ಚುಕ್ಕಾಣಿ ಹಿಡಿದಿದ್ದಾರೆ. ನಿರ್ಮಾಪಕ ಮುನಿರತ್ನ ಅಂದುಕೊಂಡಂತೆ ನಡೆದರೆ ಒಂದೆರಡು ತಿಂಗಳಲ್ಲಿ ಮಹೂರ್ತ ನೆರವೇರಲಿದೆ .

 

 

 

 

 

-Ad-

Leave Your Comments