ಸೆ.29ಕ್ಕೆ ದರ್ಶನ್ ಹೊಸ ವರ್ಷನ್ ?!

ದರ್ಶನ್ ತೂಗುದೀಪ ಅವರಿಗೆ  ಅದ್ಭುತವಾದ ಅಭಿಮಾನಿ ಬಳಗವಿದೆ. ಆ ಬಳಗ ದರ್ಶನ್ ಅವರನ್ನು ಯಾವತ್ತೂ ಬಿಟ್ಟು ಕೊಟ್ಟಿಲ್ಲ . ಆದರೆ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಬೇಕಾದರೆ ಅಭಿಮಾನಿ ಬಳಗವಷ್ಟೇ ಸಾಕಾಗದು. ಒಂದು ಚೆಂದದ ಕತೆ ಬೇಕು. ನೋಡಿಸಿಕೊಂಡು ಹೋಗುವಂತಹ ಚಿತ್ರಕತೆ ಬೇಕು. ಹೊಸತನ ಬೇಕು. ಬಹುಶಃ ದರ್ಶನ್ ಹೊಸ ಸಿನಿಮಾದಲ್ಲಿ ಇವೆಲ್ಲವೂ ಸಿಗುವ ಸೂಚನೆ ಇದೆ.
ದರ್ಶನ್ ಹೊಸ ಸಿನಿಮಾದ ಹೆಸರು ತಾರಕ್. ಒಬ್ಬ ಚಂದದ ಶ್ರೀಮಂತ ಹುಡುಗನ ಕತೆ ಅದು. ಅವನಿಗೊಬ್ಬ ಸ್ಟೆ‘ಲಿಷ್ ತಾತ ದೇವರಾಜ್. ಜೊತೆಗಿಬ್ಬರು ಮುದ್ದಾದ ಹೀರೋಯಿನ್‌ಗಳು ಶಾನ್ವಿ ಶ್ರೀವಾಸ್ತವ್ ಮತ್ತು ಶ್ರುತಿ ಹರಿಹರನ್. ಇವರೆಲ್ಲರ ಕ್ಯಾಪ್ಟನ್ ಪ್ರಕಾಶ್ ಜಯರಾಮ್. ಫ್ಯಾಮಿಲಿ  ಸ್ಟೋರಿಗಳನ್ನು ಕೊಟ್ಟ ನಿರ್ದೇಶಕ ಅವರು. ಹಾಗಾಗಿ ಈ ಸಲ ದರ್ಶನ್‌ಗೂ ಹೊಸ ರೂಪ ಕೊಡುವ ಸಾಧ್ಯತೆ ಹೆಚ್ಚಾಗಿದೆ. ನೀವು ತಾರಕ್ ಸಿನಿಮಾದ ಸ್ಟಿಲ್ ಗಳನ್ನು ನೋಡಿದ್ದರೆ ಈ ಮಾತಿಗೆ ಸಹಮತ ವ್ಯಕ್ತಪಡಿಸುತ್ತೀರಿ.
ಎಲ್ಲಿಗೆ ಬಂತು ಶೂಟಿಂಗ್ ?
ಅಂದಹಾಗೆ ತಾರಕ್ ಸಿನಿಮಾದ ಶೂಟಿಂಗ್ ಈಗಾಗಲೇ ಮುಗಿದಿದೆ. ಸಿನಿಮಾ ಡಬ್ಬಿಂಗ್ ಟೇಬಲ್‌ಗೆ ಬಂದು ಕೂತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಸೆಪ್ಟೆಂಬರ್ ೨೯ಕ್ಕೆ ತಾರಕ್ ಸಿನಿಮಾ ಬಿಡುಗಡೆಯಾಗಲಿದೆ. ಬಹುಶಃ ಅವತ್ತು ಅಭಿಮಾನಿಗಳಿಗೆ ಹೊಸ ದರ್ಶನ್ ಸಿಗುತ್ತಾರೆ. ಅಂದ್ರೆ ದರ್ಶನ್ ತೂಗುದೀಪರ ಹೊಸ ವರ್ಷನ್ !!
ಸದ್ಯ ದರ್ಶನ್‌ಗೆ ಹೊಸ ರೂಪವೊಂದು ಸಿಗಬೇಕಾಗಿರುವುದು  ಅವಶ್ಯ. ಒಂದೇ ಒಂದು ಗೆಲುವು ಸಾಕು ದರ್ಶನ್‌ಗೆ ಮತ್ತೆ ಆಕಾಶಕ್ಕೆ ಏರಲು. ಅದು ತಾರಕ್ ಸಿನಿಮಾ  ಮಾಡುತ್ತದೆ ಎನ್ನುತ್ತಿವೆ ಮೂಲಗಳು. ಅನಂತರ ದರ್ಶನ್ ಕುರುಕ್ಷೇತ್ರಕ್ಕೆ ಕಾಲಿಡಲಿದ್ದಾರೆ.
-Ad-

Leave Your Comments