ದರ್ಶನ್ ಕುಟುಂಬದಿಂದ ಚಿತ್ರರಂಗಕ್ಕೆ ಮತ್ತೊಂದು ಎಂಟ್ರಿ

ತೂಗುದೀಪ ಶ್ರೀನಿವಾಸ್ ಕನ್ನಡ ಚಿತ್ರರಂಗ ಕಂಡ ಅಪ್ರತಿಮ ನಟ. ಅವರು ಅಟ್ಟಹಾಸಡಾ ನಗು ಈಗಲೂ ಮೈ ಜುಮ್ ಎನ್ನಿಸಿಬಿಡುತ್ತೆ. ಅವರ ನಂತರ ಬಂದ ಅವರದೇ ಪ್ರೀತಿಯ ಕುಡಿ ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ ಅನ್ನಿಸಿಕೊಂಡು ಕನ್ನಡಿಗರ ಮನ ಗೆದ್ದರು ದರ್ಶನ್. ಅಷ್ಟೇ ಅಲ್ಲ ತೂಗುದೀಪ ಕುಟುಂಬದ  ದಿನಕರ್ ತೂಗುದೀಪ, ವಿನೀಶ್ ಕೂಡ ಕನ್ನಡ ಚಿತ್ರರಂಗದಲ್ಲಿ ನೆಲೆಯಾಗಿದ್ದಾರೆ . ಇದೀಗ ದರ್ಶನ್ ಸೋದರ ಸಂಬಂಧಿ ಮನೋಜ್ ಸಿನಿರಂಗಕ್ಕೆ ಬರಲು ತಯಾರಿ ನಡೆಸಿದ್ದಾರೆ.

ದರ್ಶನ್ ಜೊತೆಗೆ ಅಂಬರೀಷ, ಚಕ್ರವರ್ತಿ ಸಿನಿಮಾಗಳಲ್ಲಿ ನಟಿಸಿರುವ ಮನೋಜ್ ಈಗ ನಾಯಕನಾಗಿ ತೆರೆಗೆ ಬರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ದರ್ಶನ್ ರಂತೆ ಸೂಪರ್ ಉದ್ದ ಇರುವ ಮನೋಜ್ ಇದುವರೆಗೂ ನಟಿಸಿರೋದು ಆಕ್ಷನ್ ಪಾತ್ರಗಳಲ್ಲೇ. ಮುಂದೆ ಬರೋ ಚಿತ್ರ ಕೂಡ ಮಾಸ್ ಗೆ ಇಷ್ಟ ಆಗೋ ಆಕ್ಷನ್ ಶೈಲಿಯಲ್ಲೇ  ಇರುವ ಸಾಧ್ಯತೆಗಳೇ ಹೆಚ್ಚು.

ಅರವಿಂದ್ ಕೌಶಿಕ್ ನಿರ್ದೇಶನದಲ್ಲಿ ಮನೋಜ್ ನಾಯಕನಾಜಿ ಬರಲಿದ್ದಾರೆ  ಎನ್ನುವ ಸುದ್ದಿಯಂತೂ ಗರಿಬಿಚ್ಚಿದೆ.

-Ad-

Leave Your Comments